Tag: death

  • ನರ್ಸರಿ ಮೆಶ್‍ನಲ್ಲಿ ಸಿಲುಕಿ ಉಸಿರುಗಟ್ಟಿ ಚಿರತೆ ಸಾವು

    ನರ್ಸರಿ ಮೆಶ್‍ನಲ್ಲಿ ಸಿಲುಕಿ ಉಸಿರುಗಟ್ಟಿ ಚಿರತೆ ಸಾವು

    ದಾವಣಗೆರೆ: ನರ್ಸರಿ ಮೆಶ್‍ಗೆ ಬಿದ್ದು ಚಿರತೆಯೊಂದು ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆ ಹರಪ್ಪನಹಳ್ಳಿ ತಾಲ್ಲೂಕಿನ ಅಳಗಿಂಚಿಕೆರೆ ಗ್ರಾಮದಲ್ಲಿ ನಡೆದಿದೆ.

    ಕಳೆದ ರಾತ್ರಿ ಆಹಾರ ಹುಡುಕಿಕೊಂಡು ಗ್ರಾಮದ ಬಳಿ ಇರುವ ನರ್ಸರಿ ಹೌಸ್‍ಗೆ ಚಿರತೆ ಬಂದಿದ್ದು, ಮೆಶ್‍ನಲ್ಲಿ ಸಿಕ್ಕಿಹಾಕಿಕೊಂಡಿದೆ. ಅಲ್ಲಿದ್ದ ತಂತಿ ಕುತ್ತಿಗೆಗೆ ಸಿಕ್ಕಿಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ. ಇಂದು ಬೆಳಗ್ಗೆ ಹೊಲದ ಮಾಲೀಕ ನರ್ಸರಿ ಹತ್ತಿರ ಹೋಗಿ ನೋಡಿದಾಗ ಚಿರತೆ ಸಾವನ್ನಪ್ಪಿರುವುದು ಗೊತ್ತಾಗಿದೆ. ಕೂಡಲೇ ಸ್ಥಳೀಯ ಹಲವಾಗಲು ಪೊಲೀಸ್ ಠಾಣೆ ಹಾಗೂ ಅರಣ್ಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.

    ಹರಪ್ಪನಹಳ್ಳಿ ತಾಲೂಕಿನ ಸುತ್ತಮುತ್ತ ಅರಣ್ಯ ಪ್ರದೇಶವಿದ್ದು ಇತ್ತೀಚೆಗೆ ಚಿರತೆ ದಾಳಿ ಹೆಚ್ಚಾಗಿದೆ. ಜೊತೆಗೆ ಜಾನುವಾರಗಳನ್ನು ಸಹ ತಿಂದು ಹಾಕುತ್ತಿವೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದರೂ ಸಹ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

    ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಚಿರತೆಯ ಮೃತ ದೇಹವನ್ನು ಅರಣ್ಯ ಅಧಿಕಾರಿಗಳು ಕೊಂಡೊಯ್ದಿದ್ದಾರೆ.

  • ಮದುವೆ ಮಂಟಪದಲ್ಲಿದ್ದ ವಾಟರ್ ಫೌಂಟೇನ್‍ನಲ್ಲಿ ಬಿದ್ದು ಇಬ್ಬರು ಮಕ್ಕಳ ಸಾವು

    ಮದುವೆ ಮಂಟಪದಲ್ಲಿದ್ದ ವಾಟರ್ ಫೌಂಟೇನ್‍ನಲ್ಲಿ ಬಿದ್ದು ಇಬ್ಬರು ಮಕ್ಕಳ ಸಾವು

    ಹೈದರಾಬಾದ್: ಮದುವೆ ಸಮಾರಂಭದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ ದುರ್ಘಟನೆಯೊಂದು ತೆಲಂಗಾಣದ ನಾಗೋಲಿಯಲ್ಲಿ ನಡೆದಿದೆ.

    4 ವರ್ಷದ ಜಿತೇಂದ್ರ ಕುಮಾರ್ ಹಾಗೂ 5 ವರ್ಷದ ಮನಸ್ವಿನಿ ಮೃತ ದುರ್ದೈವಿಗಳು. ಬುಧವಾರದಂದು ಇಲ್ಲಿನ ಕೃಷ್ಣ ಜಿಲ್ಲೆಯ ನಂದಿಗಾಮದ ಮುನಗಚೆರ್ಲಾ ಗ್ರಾಮದವಾರದ ಶಿವಾಜಿ ಸಂಬಂಧಿಕರೊಬ್ಬರ ಮದುವೆ ಸಮಾರಂಭಕ್ಕಾಗಿ ನಾಗೋಲಿಯ ಶುಭಂ ಕನ್ವೆಂಷನ್ ಹಾಲ್‍ಗೆ ಬಂದಿದ್ದರು. ಮಗ ಜಿತೇಂದ್ರ ಹಾಗೂ ಅಣ್ಣನ ಮಗಳಾದ ಮನಸ್ವಿನಿಯನ್ನೂ ಜೊತೆಯಲ್ಲಿ ಕರೆದುಕೊಂಡು ಬಂದಿದ್ದರು.

    ಮದುವೆ ಮಂಟಪದಲ್ಲಿ ಆಡವಾಡುವ ವೇಳೆ ಜಿತೇಂದ್ರ ಹಾಗೂ ಮನಸ್ವಿನಿ ಫೌಂಟೇನ್(ನೀರಿನ ಚಿಲುಮೆ)ಯೊಳಗೆ ಬಿದ್ದು ಸಾವನ್ನಪ್ಪಿದ್ದಾರೆ.

    ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

  • ಅರಳೂರು ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ

    ಅರಳೂರು ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ

    ಬೆಂಗಳೂರು: ಬೆಳ್ಳಂದೂರು ಸಮೀಪದ ಅರಳೂರು ಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

    ಶ್ರೀನಿವಾಸ್ ಎಂಬವರು ಗುತ್ತಿಗೆ ಪಡೆದು ಮೀನುಗಳನ್ನ ಸಾಕಾಣಿಕೆ ಮಾಡುತ್ತಿದ್ದರು. ನಗರದಲ್ಲಿ ಕಳೆದ ಹಲವು ದಿನಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿರುವ ಪರಿಣಾಮ ಮಳೆ ನೀರಿನ ಜೊತೆ ಕಾರ್ಖಾನೆಗಳ ಹಾಗೂ ಒಳಚರಂಡಿ ನೀರನ್ನು ಕೆರೆಗೆ ಬಿಟ್ಟಿರುವುದರಿಂದ ಮೀನುಗಳು ಸಾವನ್ನಪ್ಪಿವೆ ಎಂದು ಶ್ರೀನಿವಾಸ್ ಹೇಳಿದ್ದಾರೆ.

    ಮೀನುಗಳ ಸಾವಿನಿಂದ ಗುತ್ತಿಗೆದಾರ ಶ್ರೀನಿವಾಸ್ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಆದರೆ ಸಾವಿರಾರು ಮೀನುಗಳು ಸಾವನ್ನಪ್ಪಿದರೂ ಇನ್ನೂ ಕಾರ್ಖಾನೆಗಳ ಕಲುಷಿತ ನೀರು ಕೆರೆಗಳಿಗೆ ಸೇರುವುದು ನಿಂತಿಲ್ಲ ಎಂಬುದು ವಿಪರ್ಯಾಸವಾಗಿದೆ.

     

  • ಬಾವಿಯಲ್ಲಿ ಈಜಲು ಹೋಗಿ ಮೊಮ್ಮಕ್ಕಳ ಜೊತೆ ಅಜ್ಜನೂ ನೀರುಪಾಲು

    ಬಾವಿಯಲ್ಲಿ ಈಜಲು ಹೋಗಿ ಮೊಮ್ಮಕ್ಕಳ ಜೊತೆ ಅಜ್ಜನೂ ನೀರುಪಾಲು

    ಬೆಳಗಾವಿ: ತೆರೆದ ಬಾವಿಯಲ್ಲಿ ಇಬ್ಬರು ಮೊಮ್ಮಕ್ಕಳ ಜೊತೆ ಈಜಲೂ ಹೋಗಿ ಅಜ್ಜನೂ ನೀರು ಪಾಲಾಗಿರುವ ದಾರುಣ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ.

    ಅಜ್ಜ ಶ್ರೀಶೈಲ ಚರಂತಿಮಠ (67) ಮೊಮ್ಮಕ್ಕಳಾದ ಸಮರ್ಥ(12) ಹಾಗೂ ಸೋಮಯ್ಯ (11) ಮೃತ ದುರ್ದೈವಿಗಳು.

    ಶಾಲೆಗೆ ರಜೆ ಇದ್ದ ಕಾರಣ ಮೊಮ್ಮಕ್ಕಳು ಸೀಗೆ ಹುಣ್ಣಿಮೆಯಲ್ಲಿರುವ ಅಜ್ಜನ ಮನೆಗೆ ಬಂದಿದ್ದಾರೆ. ಅಜ್ಜನ ಜೊತೆ ಇಬ್ಬರು ಮೊಮ್ಮಕ್ಕಳು ತೋಟಕ್ಕೆ ಹೋಗಿದ್ದಾರೆ. ಅಲ್ಲಿ ಬಾವಿಯನ್ನು ನೋಡಿ ಹಠ ಹಿಡಿದು ಬಾವಿಯಲ್ಲಿ ಈಜಲು ಅಜ್ಜನನ್ನು ಕರೆದುಕೊಂಡು ಹೋಗಿದ್ದಾರೆ. ಯಾರಿಗೂ ಈಜಲು ಬಾರದ ಕಾರಣ ಎಲ್ಲರೂ ನೀರು ಪಾಲಾಗಿದ್ದಾರೆ.

    ಅಜ್ಜ ಮತ್ತು ಓರ್ವ ಮೊಮ್ಮಗನ ಶವ ಪತ್ತೆಯಾಗಿದೆ. ಸ್ಥಳಕ್ಕೆ ನೇಸರ್ಗಿ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳ ಭೇಟಿ ನೀಡಿ ಶೋಧಕಾರ್ಯ ನಡೆಸುತ್ತಿದ್ದಾರೆ.

  • 159 ಗಂಟೆ ಓವರ್‍ಟೈಮ್ ಕೆಲಸ ಮಾಡಿ ಮಹಿಳೆ ಸಾವು!

    159 ಗಂಟೆ ಓವರ್‍ಟೈಮ್ ಕೆಲಸ ಮಾಡಿ ಮಹಿಳೆ ಸಾವು!

    ಟೋಕಿಯೋ: ಓವರ್ ಟೈಮ್ ಕೆಲಸ ಮಾಡಿ ಜಪಾನ್‍ನ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.

    ಇಲ್ಲಿನ ಎನ್‍ಹೆಚ್‍ಕೆ ಮಾಧ್ಯಮದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದ 31 ವರ್ಷದ ಮಹಿಳೆ ಮಿವಾ ಸಾದೋ ಓವರ್‍ಟೈಮ್ ಕೆಲಸ ಮಾಡಿ ಸಾವನ್ನಪ್ಪಿದರೆಂದು ಗುರುವಾರದಂದು ಜಪಾನ್‍ನ ಲೇಬರ್ ಇನ್ಸ್ ಪೆಕ್ಟರ್‍ಗಳು ಹೇಳಿದ್ದಾರೆ.

    ಮಿವಾ ಸಾದೋ ಟೋಕಿಯೋದಲ್ಲಿನ ಮುಖ್ಯಕಚೇರಿಯಲ್ಲಿ ಕೆಲಸ ಮಾಡ್ತಿದ್ರು. 159 ಗಂಟೆಗಳ ಕಾಲ ಅತಿಯಾದ ಕೆಲಸ ಮಾಡಿದ್ದು, ತಿಂಗಳಿನಲ್ಲಿ ಕೇವಲ ಎರಡು ದಿನ ರಜೆ ತೆಗೆದುಕೊಂಡಿದ್ದರು. ಇದರಿಂದಾಗಿ ಹೃದಯ ವೈಫಲ್ಯವಾಗಿ 2013ರ ಜುಲೈನಲ್ಲಿ ಸಾವನ್ನಪ್ಪಿದ್ರು ಎಂದು ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ಆಕೆಗೆ ಉದ್ಯೋಗ ನೀಡಿದ ವಕ್ತಿ ಈ ವಾರ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಸಾವಿಗೆ ಮೂರು ದಿನಗಳ ಮುನ್ನ ಮಿವಾ ಸಾದೋ ಇಲ್ಲಿನ ಸ್ಥಳೀಯ ಚುನಾವಣೆ ಬಗ್ಗೆ ವರದಿ ಮಾಡಿದ್ದರು ಎಂದು ತಿಳಿಸಿದ್ದಾರೆ.

    ಟೋಕಿಯೋದ ಲೇಬರ್ ಸ್ಟಾಂಡರ್ಡ್ಸ್ ಕಚೇರಿ ಆಕೆ ‘ಕರೋಶಿ’ ಯಿಂದ ಮೃತಪಟ್ಟಿದ್ದಾಳೆ ಎಂದು ಹೇಳಿದೆ.

    ಕರೋಶಿ ಅಂದ್ರೇನು?: ಅತಿಯಾದ ಕೆಲಸದಿಂದ ಸಾವನ್ನಪ್ಪೋದಕ್ಕೆ ಕರೋಶಿ ಅಂತಾರೆ. ಹೃದಯಾಘಾತ, ಸ್ಟ್ರೋಕ್, ಹಸಿವು- ಹೀಗೆ ಹಲವಾರು ವೈದ್ಯಕೀಯ ಕಾರಣಗಳಿಂದ ಕರೋಶಿ ಸಾವು ಸಂಭವಿಸಬಹುದು.

    2015ರಲ್ಲಿ ಜಾಹಿರಾತು ಸಂಸ್ಥೆಯೊಂದರಲ್ಲಿ ತಿಂಗಳಿಗೆ 100 ಗಂಟೆಗಳ ಕಾಲ ಓವರ್‍ಟೈಮ್ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಾದ ದೇಶದಾದ್ಯಂತ ಈ ಬಗ್ಗೆ ಚರ್ಚೆಯಾಗಿತ್ತು. ಜಪಾನ್‍ನ ಉದ್ಯೋಗ ಸಂಸ್ಕೃತಿ ಬದಲಾಗಬೇಕು ಎಂಬ ಕೂಗು ಕೇಳಿಬಂದಿತ್ತು.

    ರಾಷ್ಟ್ರೀಯ ಸರ್ವೆಯೊಂದರ ಪ್ರಕಾರ, ಜಪಾನ್‍ನ ಐದರಲ್ಲಿ ಒಂದು ಭಾಗದಷ್ಟು ಉದ್ಯೋಗಿಗಳು ಕರೋಶಿ ಭೀತಿಯಲ್ಲಿದ್ದಾರೆ. ಯಾಕಂದ್ರೆ ಅವರೆಲ್ಲಾ ಪ್ರತಿ ತಿಂಗಳು 80 ಗಂಟೆಗಳಿಗೂ ಹೆಚ್ಚು ಓವರ್‍ಟೈಮ್ ಕೆಲಸ ಮಾಡ್ತಿದ್ದಾರೆ ಎಂದು ವರದಿಯಾಗಿದೆ.

    ಸುಮಾರು 2 ಸಾವಿರ ಮಂದಿ ಉದ್ಯೋಗ ಸಂಬಂಧಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಜಪಾನ್ ಸರ್ಕಾರ ಇತ್ತೀಚೆಗೆ ಈ ಬಗ್ಗೆ ಕ್ರಮಗಳನ್ನ ಕೈಗೊಂಡಿದೆ. ಪ್ರತಿ ತಿಂಗಳ ಕೊನೆ ಶುಕ್ರವಾರದಂದು ಮಧ್ಯಾಹ್ನ 3 ಗಂಟೆಗೆ ಕೆಲಸದಿಂದ ಹೊರಡುವಂತೆ ಹೇಳಿದೆ. ಅಲ್ಲದೆ ಮೇ ತಿಂಗಳಲ್ಲಿ ಕಾರ್ಮಿಕ ನೀತಿಯನ್ನು ಉಲ್ಲಂಘಿಸಿದ 300 ಸಂಸ್ಥೆಗಳಿಗೆ ಛೀಮಾರಿ ಹಾಕಿತ್ತು.

  • ಇಂಡಿಕಾ ಕಾರು-KSRTC ಬಸ್ ಡಿಕ್ಕಿ: ಸ್ಥಳದಲ್ಲಿಯೇ ಓರ್ವ ಸಾವು

    ಇಂಡಿಕಾ ಕಾರು-KSRTC ಬಸ್ ಡಿಕ್ಕಿ: ಸ್ಥಳದಲ್ಲಿಯೇ ಓರ್ವ ಸಾವು

    ಮಂಡ್ಯ: ಇಂಡಿಕಾ ಕಾರು ಮತ್ತು ಕೆಎಸ್‍ಆರ್‍ಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನೊಳಗಿದ್ದ ಓರ್ವ ಮೃತಪಟ್ಟ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಮಳವಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 209ರ ಬೂಸೇಗೌಡನದೊಡ್ಡಿ ಬಳಿ ತಡರಾತ್ರಿ ಈ ಘಟನೆ ಸಂಭವಿಸಿದೆ. ಮದ್ದೂರು ತಾಲೂಕಿನ ಅಂಗರಲಿಂಗನದೊಡ್ಡಿಯ 31 ವರ್ಷದ ಸೋಮೇಶ್ ಎಂಬವರು ಅಪಘಾತದಲ್ಲಿ ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಂಭೀರವಾಗಿ ಗಾಯವಾಗಿದೆ.

    ಗುರುವಾರ ತಡರಾತ್ರಿ ವೇಗವಾಗಿ ಬಂದ ಕಾರು ಹಾಗೂ ಬಸ್ ಬೂಸೇಗೌಡನದೊಡ್ಡಿ ಬಳಿ ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿವೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನೊಳಗಿದ್ದ ಸೋಮೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಮತ್ತೊರ್ವ ಮನೋಹರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.

    ಘಟನೆಗೆ ಸಂಬಂಧಿಸಿದಂತೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮನೆ ಗೋಡೆ ಕುಸಿತ-ಒಂದೇ ಕುಟುಂಬದ ಐವರ ಸಾವು

    ಮನೆ ಗೋಡೆ ಕುಸಿತ-ಒಂದೇ ಕುಟುಂಬದ ಐವರ ಸಾವು

    ಬೆಂಗಳೂರು: ತಮಿಳುನಾಡಿನ ಕೃಷ್ಣಗಿರಿಯಲ್ಲಿ ಭಾರೀ ಮಳೆಯಿಂದಾಗಿ ಮನೆ ಗೋಡೆ ಕುಸಿದ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.

    ರಾಧಾ (65), ಮಗಳು ಪುಷ್ಪ (35), ಮೊಮ್ಮಕಳಾದ ವಸಂತ ಕುಮಾರ್ (15), ಭಗವತಿ (13), ಮುಲ್ಲಾ (8) ಸಾವನ್ನಪ್ಪಿದ ದುರ್ದೈವಿಗಳು. ಕುಟೀರ (ಗುಡಿಸಲು) ಸಮೀಪದ ಮನೆಯ ಗೋಡೆ ಕುಸಿದಿದ್ದು, ಕುಟೀರದಲ್ಲಿ ಮಲಗಿದ್ದ ಐವರು ಸಾವನ್ನಪ್ಪಿದ್ದಾರೆ. ಕಟ್ಟಿಯಾರ್ ಅರುಣ್ ಮತ್ತು ವಟ್ಟಚರೈ ಕನ್ನಿಯಪ್ಪನ್ ಎಂಬವರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಅವಶೇಷಗಳಡಿ ಸಿಲುಕಿದ್ದ ಶವಗಳನ್ನು ಹೊರತೆಗೆದು ವೈದ್ಯಕೀಯ ಪರೀಕ್ಷೆಗಾಗಿ ಕೃಷ್ಣಗಿರಿ ಆಸ್ಪತ್ರೆಗೆ ರವಾನಿಸಿದ್ದಾರೆ.

     

  • ಇಟ್ಟಿಗೆ ಕಾರ್ಖಾನೆ ಚಿಮಿಣಿ ಬಿದ್ದು ಒಂದೇ ಕುಟುಂಬದ ಮೂವರ ಸಾವು

    ಇಟ್ಟಿಗೆ ಕಾರ್ಖಾನೆ ಚಿಮಿಣಿ ಬಿದ್ದು ಒಂದೇ ಕುಟುಂಬದ ಮೂವರ ಸಾವು

    ಕೋಲಾರ: ಇಟ್ಟಿಗೆ ಕಾರ್ಖಾನೆಯ ಚಿಮಿಣಿ ಬಿದ್ದು ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ರಾಜ್‍ಪೇಟೆ ಸಮೀಪದಲ್ಲಿ ಇಂದು ಮುಂಜಾನೆ ನಡೆದಿದೆ.

    ಜೋಡಿಕೃಷ್ಣ ಪುರಂನ ನಿವಾಸಿಗಳಾದ ಬಾಷಾ(60), ಫಾತಿಮಾ (50) ಮತ್ತು ಐದು ವರ್ಷದ ಅವರ ಮೊಮ್ಮಗ ನಯಾಜ್ ಮೃತ ದುರ್ದೈವಿಗಳು. ಜೈರಾಜ್ ಎಂಬವರಿಗೆ ಸೇರಿದ ಹಳೆಯ ಇಟ್ಟಿಗೆ ಕಾರ್ಖಾನೆ ಇದಾಗಿದ್ದು, ಇತ್ತೀಚಿಗೆ ಮಳೆ ಬೀಳುತ್ತಿರುವ ಪರಿಣಾಮವಾಗಿ ಚಿಮಿಣಿ ಕುಸಿದು ಬಿದ್ದಿದ್ದೆ.

    ಚಿಮಣಿಯ ಪಕ್ಕದ ಶೆಡ್ ನಲ್ಲಿ ಮಲಗಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಾಷಾ ಮತ್ತು ಫಾತಿಮಾ ಇದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದಾರೆ. ಈ ಸಂಬಂಧ ಅಂಡ್ರಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸೆಲ್ಫಿಗೆ ಹುಚ್ಚಿಗೆ ರೈಲು ಹಳಿ ಮೇಲೆ ಬಿತ್ತು ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಹೆಣ

    ಸೆಲ್ಫಿಗೆ ಹುಚ್ಚಿಗೆ ರೈಲು ಹಳಿ ಮೇಲೆ ಬಿತ್ತು ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಹೆಣ

    ರಾಮನಗರ: ಹಳಿ ಮೇಲೆ ಸೆಲ್ಫಿ ತೆಗೆಯಲು ಹೋಗಿ ಮೂವರು ಕಾಲೇಜು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ರಾಮನಗರದ ವಂಡರ್ ಲಾ ಬಳಿ ನಡೆದಿದೆ.

    ಮೃತಪಟಟ್ಟವರು ಕೋರಮಂಗಲ ನಿವಾಸಿಗಳಾದ ಪ್ರಭು, ಹುಳಿಮಾವು ನಿವಾಸಿ ರೋಹಿತ್ ಮತ್ತು ಆನಂದ್ ಎಂದು ಗುರುತಿಸಲಾಗಿದೆ. ಇವರು ಜಯನಗರ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.

    ಮೂವರೂ ಸ್ನೇಹಿತರು ಬೆಳಗ್ಗೆ ವಂಡರ್ ಲಾಗೆ ಎಂದು ಬಂದಿದ್ದಾರೆ. ಮೈಸೂರು ರಸ್ತೆಯಿಂದ ವಂಡರ್ ಲಾ ಗೆ ಹೋಗುವ ಹಾದಿಯಲ್ಲಿ ಮಂಚನಾಯಕನಹಳ್ಳಿಯ ರೈಲ್ವೆ ಸೇತುವೆ ಬಳಿ ಬೈಕ್‍ಗಳನ್ನು ನಿಲ್ಲಿಸಿ ಹಳಿ ಮೇಲೆ ನಿಂತುಕೊಂಡು ರೈಲಿಗೆ ಕಾದಿದ್ದಾರೆ.

    ಈ ಸಂದರ್ಭದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಗೋಲ್ ಗುಂಬಜ್ ಎಕ್ಸ್ ಪ್ರೆಸ್ ರೈಲಿನ ಮುಂದೆ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ವೇಗವಾಗಿ ಬರುತ್ತಿದ್ದ ರೈಲು ಮೂವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮೂವರ ದೇಹವನ್ನು ಕೆಲ ದೂರದವರೆಗೆ ಎಳೆದುಕೊಂಡು ಹೋಗಿದೆ.

    ಸ್ಥಳಕ್ಕೆ ಭೇಟಿ ನೀಡಿರುವ ಬಿಡದಿ ಮತ್ತು ಚನ್ನಪಟ್ಟಣ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಚನ್ನಪಟ್ಟಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಸಮುದ್ರದಲ್ಲಿ ಆಟವಾಡಲು ಹೋಗಿ ಇಬ್ಬರು ಬಾಲಕರು ನೀರುಪಾಲು

    ಸಮುದ್ರದಲ್ಲಿ ಆಟವಾಡಲು ಹೋಗಿ ಇಬ್ಬರು ಬಾಲಕರು ನೀರುಪಾಲು

    ಕಾರವಾರ: ಆಟವಾಡಲು ಸಮುದ್ರಕ್ಕೆ ತೆರಳಿದ್ದ ಬಾಲಕರು ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ಸಣ್ಣಬಾವಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

    ಗಣೇಶ ನಾಯ್ಕ(10) ಮತ್ತು ವಿನಾಯಕ ನಾಯ್ಕ(09) ಮೃತ ದುರ್ದೈವಿಗಳು. ಸೋಮವಾರ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಅಲೆಗಳಿಗೆ ಸಿಕ್ಕು ಕೊಚ್ಚಿ ಹೋಗಿದ್ದರು. ತಡರಾತ್ರಿ ಹುಡುಕಾಟ ನಡೆಸಿದರೂ ಇಬ್ಬರ ಸುಳಿವು ಸಿಕ್ಕಿರಲಿಲ್ಲ.

    ಇಂದು ಬೆಳಿಗ್ಗೆ ಗ್ರಾಮದ ಕಡಲತೀರದಲ್ಲಿ ಬಾಲಕರ ಶವ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.