Tag: death

  • ನೀರಿನ ಸಂಪು ಕ್ಲೀನ್ ಮಾಡಲು ಹೋಗಿ ಮೂವರ ದಾರುಣ ಸಾವು

    ನೀರಿನ ಸಂಪು ಕ್ಲೀನ್ ಮಾಡಲು ಹೋಗಿ ಮೂವರ ದಾರುಣ ಸಾವು

    ಚಿಕ್ಕಬಳ್ಳಾಪುರ: ನೀರಿನ ಸಂಪು ಕ್ಲೀನಿಂಗ್ ಮಾಡಲು ಹೋಗಿ ಮೂವರು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ದಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತೇಕಲಹಳ್ಳಿ ಗ್ರಾಮದ ಪೆದ್ದನ್ನ, ನಾರಾಯಣಪ್ಪ ಸ್ವಾಮಿ ಹಾಗೂ ದಿನ್ನೇನಹಳ್ಳಿ ಗ್ರಾಮದ ರೆಡ್ಡಪ್ಪ ಮೃತಪಟ್ಟಿರುವ ದುರ್ದೈವಿಗಳು. ಜನಾರ್ದನ ಎಂಬವರ ಸ್ಥಿತಿ ಗಂಭೀರವಾಗಿದ್ದು, ಗೌರಿಬಿದನೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗ್ರಾಮದ ರೈತ ರಾಮಕೃಷ್ಣಪ್ಪ ಎಂಬುವರ ತೋಟದ ಮನೆಯ ಬಳಿ ಇರುವ ನೀರಿನ ಸಂಪು ಕ್ಲೀನಿಂಗ್ ಮಾಡಲು ಈ ನಾಲ್ವರು ಒಳಗಿಳಿದಿದ್ದಾರೆ. ಆದರೆ ಸಂಪ್‍ನೊಳಗೆ ಮೂವರು ಸಾವನ್ನಪ್ಪಿದ್ದು, ಜನಾರ್ದನ ಎಂಬಾತನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

    ಘಟನೆ ನಡೆದ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಸಂಪ್ ಮೇಲ್ಛಾವಣಿ ಕಿತ್ತು ಹಾಕಿ ಮೃತದೇಹಗಳನ್ನ ಹೊರ ತೆಗೆದಿದ್ದಾರೆ. ಉಸಿರುಗಟ್ಟಿ ಅಥವಾ ವಿದ್ಯುತ್ ಶಾಕ್ ನಿಂದ ದುರಂತ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಖಚಿತವಾಗಿ ತಿಳಿದಿಲ್ಲ. ಮರಣೋತ್ತರ ವರದಿ ಬಂದ ಮೇಲೆ ಖಚಿತವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಇನ್ನೂ ಘಟನೆಗೆ ಸಂಬಂಧಿಸಿದಂತೆ ಮನೆ ಮಾಲೀಕ ರಾಮಕೃಷ್ಣಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

     

  • ಮಂಡ್ಯ: ನವವಿವಾಹಿತೆಯ ಅನುಮಾನಾಸ್ಪದ ಸಾವು

    ಮಂಡ್ಯ: ನವವಿವಾಹಿತೆಯ ಅನುಮಾನಾಸ್ಪದ ಸಾವು

    ಮಂಡ್ಯ: ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕಬ್ಬಾರೆ ಗ್ರಾಮದಲ್ಲಿ ನಡೆದಿದೆ.

    20 ವರ್ಷದ ಶೋಭಾ ಮೃತ ದುರ್ದೈವಿ. ಕೂಳಗೆರೆ ಗ್ರಾಮದ ಶೋಭಾ ಅವರನ್ನು ಆರು ತಿಂಗಳ ಹಿಂದೆ ಕಬ್ಬಾರೆ ಗ್ರಾಮದ ಸಿದ್ದರಾಜು ಜೊತೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ನಂತರ ಹಣ ಮತ್ತು ಜಮೀನಿಗಾಗಿ ಶೋಭಾಗೆ ನಿತ್ಯ ಕಿರುಕುಳ ಕೊಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಇದೀಗ ಶೋಭ ಮೃತದೇಹ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಶೋಭಾ ದೇಹದ ಹಲವೆಡೆ ರಕ್ತ ಕಂಡು ಬಂದಿದ್ದು, ಗಂಡನ ಮನೆಯವರೇ ಹೊಡೆದು ಕೊಲೆ ಮಾಡಿ ನಂತರ ನೇಣು ಹಾಕಿದ್ದಾರೆ ಎಂದು ಸಂಬಂಧಿಕರು ಆರೋಪ ಮಾಡುತ್ತಿದ್ದಾರೆ. ಶೋಭ ಸಾವಿನ ನಂತರ ಗಂಡನ ಮನೆಯವರು ನಾಪತ್ತೆಯಾಗಿದ್ದಾರೆ. ಘಟನೆ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗಳೂರಿನ ಶಾಲೆಯೊಂದರಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು

    ಬೆಂಗಳೂರಿನ ಶಾಲೆಯೊಂದರಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು

    ಬೆಂಗಳೂರು: ಬೆಂಗಳೂರಿನ ಶಾಲೆಯೊಂದರಲ್ಲಿ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳ್ಳಂದೂರಿನ ಚೈತನ್ಯ ಟೆಕ್ನಾಲಾಜಿ ಸ್ಕೂಲ್ ನಲ್ಲಿ ನಡೆದಿದೆ.

    ಧಾರವಾಡ ಮೂಲದ ಸಾರ್ಥಕ್ ಪುರಾಣಿಕ್ (17) ಸಾವನ್ನಪ್ಪಿದ್ದ ವಿದ್ಯಾರ್ಥಿ. ಕಾಲೇಜಿನ ಟಾಯ್ಲೆಟ್ ನಲ್ಲಿ ಸಾರ್ಥಕ ಶವ ಪತ್ತೆಯಾಗಿದ್ದು, ಇದೇ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು.

    ಸಾರ್ಥಕ್, ಶ್ರೀಕಾಂತ್ ಪುರಾಣಿಕ್ ಮತ್ತು ಸುಚೇತ್ರ ಅವರ ಪುತ್ರ. ಕಳೆದ 2 ವರ್ಷಗಳಿಂದ ಕಾಲೇಜಿನ ಹಾಸ್ಟೆಲ್‍ನಲ್ಲಿ ಉಳಿದುಕೊಂಡಿದ್ದ. ಶೌಚಾಲಯಕ್ಕೆ ತೆರಳಿದ್ದಾಗ ಸಾವನ್ನಪ್ಪಿದ್ದಾನೆ. ಶೌಚಾಲಯಕ್ಕೆ ತೆರಳಿ ಸಾಕಷ್ಟು ಸಮಯ ಕಳೆದರು ಹೊರ ಸಾರ್ಥಕ್ ಹೊರ ಬರಲಿಲ್ಲ. ಅನುಮಾನಗೊಂಡು ಕಾಲೇಜಿನ ವಿದ್ಯಾರ್ಥಿಗಳು ಟಾಯ್ಲೆಟ್ ಬಳಿ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.

    ಕಾಲೇಜು ಸಿಬ್ಬಂದಿ ಕೂಡಲೇ ಸಾರ್ಥಕ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಕೆಲವು ಗಂಟೆಗಳ ಮೊದಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಘಟನೆಯ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

  • ಬೆಂಗಳೂರಿನ ರಸ್ತೆ ಹೊಂಡಕ್ಕೆ ಮತ್ತೊಂದು ಬಲಿ – ಲಾರಿ ಹರಿದು ಸವಾರೆ ದಾರುಣ ಸಾವು

    ಬೆಂಗಳೂರಿನ ರಸ್ತೆ ಹೊಂಡಕ್ಕೆ ಮತ್ತೊಂದು ಬಲಿ – ಲಾರಿ ಹರಿದು ಸವಾರೆ ದಾರುಣ ಸಾವು

    ಬೆಂಗಳೂರು: ನಗರದ ರಸ್ತೆ ಗುಂಡಿಗೆ ಮತ್ತೊಂದು ಬಲಿಯಾಗಿದೆ. ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಗುಂಡಿಗೆ ಬಿದ್ದ ಪರಿಣಾಮ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

    ಈ ಘಟನೆ ನಾಯಂಡನಹಳ್ಳಿ ಸಿಗ್ನಲ್ ಬಳಿ ನಡೆದಿದೆ. ಮೃತ ದುರ್ದೈವಿ ಮಹಿಳೆಯನ್ನು 52 ವರ್ಷದ ರಾಧಾ ಎಂಬುವುದಾಗಿ ಗುರುತಿಸಲಾಗಿದೆ.

    ಬೈಕ್ ನಲ್ಲಿ ತನ್ನ ಅಳಿಯ ರವಿಕುಮಾರ್ ಜೊತೆ ಜೊತೆ ರಾಧಾ ಕಾಡುಗೋಡಿಯಿಂದ ರಾಮನಗರಕ್ಕೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸಿಗ್ನಲ್ ಬಳಿ ಚಿಕ್ಕ-ಚಿಕ್ಕ ಜಲ್ಲಿಯಿಂದಾಗಿ ಬೈಕ್ ಸ್ಕಿಡ್ ಆಗಿ ರಸ್ತೆಯಲ್ಲೇ ನಿರ್ಮಾಣವಾದ ಗುಂಡಿಗೆ ಬಿದ್ದಿದೆ. ಈ ವೇಳೆ ಅಳಿಯ ಎಡಭಾಗಕ್ಕೆ ಬಿದ್ದ ಪರಿಣಾಮ ಸಾವಿನಿಂದ ಪಾರಾಗಿದ್ದಾರೆ. ಆದ್ರೆ ಹಿಂಬದಿಯಲ್ಲಿ ಕುಳಿತಿದ್ದ ಅತ್ತೆ ಬಲ ಬದಿಗೆ ಬಿದ್ದಿದ್ದು, ಕೂಡಲೇ ಹಿಂದಿನಿಂದ ಬರುತ್ತಿದ್ದ ಇಟ್ಟಿಗೆ ಸಾಗಿಸುತ್ತಿದ್ದ ಲಾರಿ ಅವರ ಮೇಲೆ ಹರಿದಿದೆ.

    ಘಟನೆಯಿಂದ ಬೈಕ್ ಸವಾರ ರಾಧಾ ಅಳಿಯ ರವಿಕುಮಾರ್‍ಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ರಾಧಾ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಬಳಿಕ ಸ್ಥಳೀಯರು ಜಮಾಯಿಸಿ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಪ್ರತಿಭಟನೆ ನಡೆಸಿದ್ದಾರೆ.

    ಸಿಟಿ ಮಾರ್ಕೆಟ್ ಮೇಲ್ಸೇತುವೆಯ ರಸ್ತೆ ಗುಂಡಿಯು ಅಕ್ಟೋಬರ್ 2ರಂದು ರಾತ್ರಿ ಎರಡು ಜೀವಗಳನ್ನು ಬಲಿ ಪಡೆದಿತ್ತು. ಮರುದಿನ ಬೆಳಿಗ್ಗೆ ಅದೇ ಪ್ರದೇಶದಲ್ಲಿ ಬೈಕ್‍ನಿಂದ ಬಿದ್ದು ಮತ್ತಿಬ್ಬರು ಗಾಯಗೊಂಡಿದ್ದರು. ಜಗಜೀವನ್ ರಾಮನಗರದ ಅಂಥೋಣಿ ಜೋಸೆಫ್ (55) ಹಾಗೂ ಪತ್ನಿ ಸಗಾಯ್ ಮೇರಿ (52) ಮೃತಪಟ್ಟಿದ್ದು, ಅವರ ಆರು ವರ್ಷದ ಮೊಮ್ಮಗಳು ಅಕ್ಯೂಲಾ ಶೆರಿನ್ ಪ್ರಾಣಾಪಾಯದಿಂದ ಪಾರಾಗಿದ್ದಳು.

     

     

  • ತಾಯಿ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಪ್ರಾಣಬಿಟ್ಟ ಮಗ

    ತಾಯಿ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಪ್ರಾಣಬಿಟ್ಟ ಮಗ

    ಕೊಲ್ಕತ್ತಾ: ತಾಯಿ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ನೊಂದ ಮಗ ಆತ್ಯಹತ್ಯೆಗೆ ಶರಣಾಗಿರುವ ಮನಕಲಕುವಂತಹ ಘಟನೆ ಪಶ್ಚಿಮ ಬಂಗಾಳದ ರಾನಘಾಟ್‍ನಲ್ಲಿ ನಡೆದಿದೆ.

    9ನೇ ತರಗತಿ ಓದುತ್ತಿದ್ದ ರಿಕು ಬಿಸ್ವಾಸ್ ಎಂಬಾತನೇ ತಾಯಿ ಸಾವಿನಿಂದ ನೊಂದು ಆತ್ಯಹತ್ಯೆಗೆ ಶರಣಾದ ಮೃತ ದುರ್ದೈವಿ.

    ಬಿಸ್ವಾಸ್‍ನ ತಾಯಿ ಅನಾರೋಗ್ಯದ ಕಾರಣದಿಂದ ಶನಿವಾರ ಬೆಳಿಗ್ಗೆ ನಾಡಿಯಾ ಜಿಲ್ಲೆಯ ಕಲ್ಯಾಣಿ ನಗರದಲ್ಲಿರುವ ಜಿಎನ್‍ಎಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಂತರ ತಾಯಿಯ ಸಾವಿನಿಂದ ನೊಂದ ಬಿಸ್ವಾಸ್ ಸಮೀಪದ ರಾನಘಾಟ್ ರೈಲ್ವೇ ನಿಲ್ದಾಣಕ್ಕೆ ಹೋಗಿ ಬರುತ್ತಿರುವ ರೈಲಿಗೆ ಓಡಿ ಹೋಗಿ ಜಿಗಿದು ಆತ್ಯಹತ್ಯೆಗೆ ಯತ್ನಿಸಿದ್ದಾನೆ.

    ಘಟನೆಯಲ್ಲಿ ಗಾಯಗೊಂಡ ಬಿಸ್ವಾಸ್ ಅನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತಾಯಿ ಮೃತಪಟ್ಟ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ತೀವ್ರವಾಗಿ ಗಾಯಗೊಂಡಿದ್ದ ಬಿಸ್ವಾಸ್ ಮಧ್ಯಾಹ್ನ ಸಾವನ್ನಪ್ಪಿದ ಎಂದು ಪೊಲೀಸರು ತಿಳಿಸಿದ್ದಾರೆ.

  • ಎದೆಗೆ ಕ್ರಿಕೆಟ್ ಬಾಲ್ ತಾಗಿ 17ರ ಬಾಲಕ ಸಾವು!

    ಎದೆಗೆ ಕ್ರಿಕೆಟ್ ಬಾಲ್ ತಾಗಿ 17ರ ಬಾಲಕ ಸಾವು!

    ಢಾಕಾ: ಆಟವಾಡುತ್ತಿದ್ದ ಸಂದರ್ಭದಲ್ಲಿ ಕ್ರಿಕೆಟ್ ಬಾಲ್ ತಾಗಿ 17 ವರ್ಷದ ಬಾಲಕನೊಬ್ಬ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಶನಿವಾರ ಬಾಂಗ್ಲಾದೇಶದಲ್ಲಿ ನಡೆದಿದೆ.

    ರಫಿಕುಲ್ ಇಸ್ಲಾಂ ಮೃತ ದುರ್ದೈವಿ ಬಾಲಕ. ಆಟವಾಡುತ್ತಿದ್ದ ವೇಳೆ ಎದೆಗೆ ಬಾಲ್ ಬಡಿದು ರಫಿಕುಲ್ ಮೃತಪಟ್ಟಿದ್ದಾನೆ ಎಂದು ಸ್ಥಳಿಯ ಪೊಲೀಸ್ ಅಧಿಕಾರಿ ಎನಾಮುಲ್ ಹಕ್ ತಿಳಿಸಿದ್ದಾರೆ.

    ಶುಕ್ರವಾರ ಬಾಲಕರ ಗುಂಪೊಂದು ಬಾಂಗ್ಲಾ ರಾಜಧಾನಿಯ ಬಲುರ್ ಮತ್ ಮೈದಾನದಲ್ಲಿ ಕ್ರಿಕೆಟ್ ಆಟವಾಡುತ್ತಿತ್ತು. ಈ ಆಟದಲ್ಲಿ ರಫಿಕುಲ್ ಅಂಪೈರ್ ಆಗಿದ್ದನು. ಅಂತೆಯೇ ಗುಂಪು ಆಟವಾಡುತ್ತಿದ್ದ ಸಂದರ್ಭದಲ್ಲಿ ಬಾಲೊಂದು ನೇರವಾಗಿ ರಫಿಕುಲ್ ಎದೆಗೆ ಬಂದು ಬಡಿದಿದೆ. ಪರಿಣಾಮ ರಫಿಕುಲ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಬಾಲಕರ ಗುಂಪು ಆತನನ್ನು ಢಾಕಾದ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಕಡು ಬಡತನದ ಕುಟುಂಬದಲ್ಲಿ ಹುಟ್ಟಿದ ರಫಿಕುಲ್ ತಂದೆ-ತಾಯಿ ಕೂಲಿ ಕೆಸಕ್ಕೆ ಹೋಗಿ ಜೀವನ ನಡೆಸುತ್ತಿದ್ದಾರೆ. ಇದೀಗ ಮಗನನ್ನು ಕಳೆದುಕೊಂಡ ಬಡ ಕುಟುಂಬ ದುಃಖದಲ್ಲಿ ಮುಳುಗಿದೆ.

  • ಭಾರೀ ಮಳೆಗೆ ದೇವನಹಳ್ಳಿಯಲ್ಲಿ ಗೋಡೆ ಕುಸಿದು ಯುವತಿ ಸಾವು- ಕಿನೋ ರಸ್ತೆಯಲ್ಲಿ ಕುಸಿದ ರೈಲ್ವೇ ಛಾವಣಿ

    ಭಾರೀ ಮಳೆಗೆ ದೇವನಹಳ್ಳಿಯಲ್ಲಿ ಗೋಡೆ ಕುಸಿದು ಯುವತಿ ಸಾವು- ಕಿನೋ ರಸ್ತೆಯಲ್ಲಿ ಕುಸಿದ ರೈಲ್ವೇ ಛಾವಣಿ

    ಬೆಂಗಳೂರು: ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪ್ರಾಣ ಹಾನಿ ಸಂಭವಿಸಿದೆ.

    ನಗರದ ದೊಡ್ಡಬಳ್ಳಾಪುರದ ದೇವನಹಳ್ಳಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಮನೆಯ ಗೋಡೆ ಕುಸಿದು 20 ವರ್ಷದ ಯುವತಿ ಮುನಿರತ್ನಮ್ಮ ಸಾವನ್ನಪ್ಪಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಎಸ್ ಪಾಲಯ್ಯ ಹಾಗೂ ಶಾಸಕ ವೆಂಕಟರಮಣಯ್ಯ ಭೇಟಿ ನೀಡಿ ಮೃತಳ ಕುಟುಂಬದವರಿಗೆ ಸಾಂತ್ವನ ಹೇಳಿದರು.

    ಸಿಲಿಕಾನ್ ಸಿಟಿಯಲ್ಲಿ ವರುಣನ ಅವಾಂತರದಿಂದ ಕಿನೋ ಥಿಯೇಟರ್ ಬಳಿ ರೈಲ್ವೆ ಬ್ರಿಡ್ಜ್ ಕೆಳಗೆ ಅಳವಡಿಸಲಾದ ಛಾವಣಿ ಕುಸಿದಿದೆ. ಪರಿಣಾಮ ಬ್ರಿಡ್ಜ್ ಕೆಳಗೆ ತೆರಳುತ್ತಿದ್ದ ಅನೇಕ ಬಸ್ ಗಳು ಅಂಡರ್ ಪಾಸ್ ದಾಟಲಾಗದೆ ಪರದಾಡುಇತ್ತಿವೆ. ಕೆಲವು ಬಸ್ ಗಳು ಯೂಟರ್ನ್ ಪಡೆದು ಮಾರ್ಗ ಬದಲಾವಣೆ ಮಾಡಿವೆ. ರೈಲ್ವೆ ಮೇಲೂ ಸೇತುವೆ ಕೆಳಗೆ ಚಾವಣಿ ಕುಸಿದ ಜಾಗಕ್ಕೆ ಆರ್ ಜೆ ಲತಾ ಹಾಗೂ ವಾರ್ಡ್ ನಂ 94 ಸದಸ್ಯರು ಭೇಟಿ ಘಟನೆ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.

    ದಾವಣಗೆರೆಯಲ್ಲಿ ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ನೀರಿನಲ್ಲಿ ಮುಳುಗಿದೆ. ಅಲ್ಲದೇ ಜಿಲ್ಲಾ ಆಸ್ಪತ್ರೆಯಲ್ಲಿ ನೀರು ನುಗ್ಗಿ ರೋಗಿಗಳು ಪರದಾಡುವಂತಾಗಿದೆ.

    ರಾಯಚೂರಲ್ಲಿ ಬಿಟ್ಟು ಬಿಟ್ಟು ಸುರಿದ ಮಳೆಯಿಂದ ಜಹಿರಾಬಾದ್, ಅಂಬೇಡ್ಕರ್ ನಗರ, ಮ್ಯಾದರ್ ಓಣಿ, ಆಕಾಶವಾಣಿ ಕೇಂದ್ರದ ಬಳಿಯ ಪ್ರದೇಶಗಳೆಲ್ಲಾ ಜಲಾವೃತವಾಗಿವೆ. ದವಸ ಧಾನ್ಯಗಳು ನೀರು ಪಾಲಾಗಿವೆ.

    ಚಾಮರಾಜನಗರ ಜಿಲ್ಲೆ, ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಕೆಲ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ನೆನ್ನೆ ಸಂಜೆ ಹಾಗೂ ರಾತ್ರಿ ಸುರಿದ ಮಳೆಯಿಂದಾಗಿ ಗ್ರಾಮದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ನೀರು ನುಗ್ಗಿದ ಹಿನ್ನೆಲೆಯಲ್ಲಿ ರಾತ್ರೆಯೆಲ್ಲ ಮನೆಯವರು ನೀರನ್ನು ಮನೆಯಿಂದ ಹೊರಹಾಕುವಂತಾಯಿತು. ಮನೆಗಳಿಗೆ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ವಸ್ತುಗಳು ಕೂಡ ಹಾಳಾಗಿವೆ.

    ಚಿತ್ರದುರ್ಗದಲ್ಲಿ ವರುಣನ ಆರ್ಭಟಕ್ಕೆ ಎರಡು ಮನೆಗಳು ಮೇಲ್ಚಾವಣೆ ಕುಸಿದಿದೆ. ರಾಮನಗರದ ಶೇಷಗಿರಿ ಹಳ್ಳಿಯ ಕೆರೆ ಹಾಗೂ ರಂಗರಾಯರ ದೊಡ್ಡಿ ಕೆರೆ ಕೋಡಿ ಒಡೆದಿವೆ. ಚಾಮರಾಜನಗರ, ಕೊಪ್ಪಳದಲ್ಲಿ ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ರಾಜ್ಯದಲ್ಲಿ ಇಂದು ಕೂಡ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂಬುವುದಾಗಿ ತಿಳಿದುಬಂದಿದೆ.

    ಒಟ್ಟಿನಲ್ಲಿ ಮಳೆ ಆರ್ಭಟ ರಾಜ್ಯಾದ್ಯಂತ ಜನಜೀವನ ಅಸ್ತವ್ಯಸ್ಥಗೊಳಿಸಿದ್ರೂ, ರೈತವರ್ಗದ ಮೊಗದಲ್ಲಿ ಖುಷಿ ತಂದಿದೆ.

    https://www.youtube.com/watch?v=0PDs07dlO6s

  • ದೋಣಿ ದುರಂತ- ಮಕ್ಕಳು ಸೇರಿ 6 ಜನ ನೀರುಪಾಲು

    ದೋಣಿ ದುರಂತ- ಮಕ್ಕಳು ಸೇರಿ 6 ಜನ ನೀರುಪಾಲು

    ಲಕ್ನೋ: ದೋಣಿ ಮುಗುಚಿ ಮಕ್ಕಳು ಸೇರಿದಂತೆ ಆರು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಹ್ರಾಯ್ಚ್‍ನಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಬಹ್ರಾಯ್ಚ್ ಸಮೀಪವಿರುವ ಸರಯು ನದಿಯಲ್ಲಿ ಇಂದು ಬೆಳಗ್ಗೆ ಈ ದುರಂತ ಸಂಭವಿಸಿದೆ. ಮೃತರನ್ನು ರಾಜೇಶ್ (25), ಬ್ರಿಜೇಶ್ (20), ಮಗನ್ (17), ವಿಜಯ್ (16), ತಿರಿತ್ (12) ಮತ್ತು ಶಕಿಲ್(12) ಎಂದು ಗುರುತಿಸಲಾಗಿದೆ.

    ಮೃತ ದುರ್ದೈವಿಗಳು ಬಹ್ರಾಯ್ಚ್ ಹತ್ತಿರದ ಗೋಪಾಲ್‍ಪುರ್ ಮತ್ತು ಬೆಹ್ತಾ ಗ್ರಾಮದವರೆಂದು ತಿಳಿದುಬಂದಿದೆ. ಪಕ್ಕದ ರಾಮ್ಗೊನ್ ಹಳ್ಳಿಯಲ್ಲಿ ಜಾತ್ರೆ ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದರು.

    ದೋಣಿಯಲ್ಲಿ ಒಟ್ಟು ಒಂಬತ್ತು ಜನರಿದ್ದರು. ಅದರಲ್ಲಿ ಮೂವರು ಈಜಿಕೊಂಡು ದಡ ಸೇರಿದ್ದಾರೆ. ಮೃತದೇಹಗಳನ್ನ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಬಹ್ರಾಯ್ಚ್ ಪೊಲೀಸ್ ಅಧಿಕಾರಿ ಅಜಯ್ ದೀಪ್ ಸಿಂಗ್ ಹೇಳಿದ್ದಾರೆ.

  • ಚಲಿಸುತ್ತಿದ್ದ ಅಟೋ ಮೇಲೆ ಮರ ಬಿದ್ದು ಚಾಲಕ ಸಾವು, ಇಬ್ಬರಿಗೆ ಗಂಭೀರ ಗಾಯ

    ಚಲಿಸುತ್ತಿದ್ದ ಅಟೋ ಮೇಲೆ ಮರ ಬಿದ್ದು ಚಾಲಕ ಸಾವು, ಇಬ್ಬರಿಗೆ ಗಂಭೀರ ಗಾಯ

    ಕೋಲಾರ: ಚಲಿಸುತ್ತಿದ್ದ ಅಟೋ ಮೇಲೆ ಮರ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಪ್ರಯಾಣಿಕರಿಬ್ಬರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಸೀತನಾಯಕನಹಳ್ಳಿ ಬಳಿ ನಡೆದಿದೆ.

    ಹರಪನಹಳ್ಳಿ ನಿವಾಸಿ 26 ವರ್ಷದ ಆಟೋ ಚಾಲಕ ರಘು ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳಿಬ್ಬರನ್ನು ಸಮೀಪದ ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಆಟೋ ಸೀತನಾಯಕನ ಹಳ್ಳಿ ಮಾರ್ಗದಲ್ಲಿ ಬರುತ್ತಿದ್ದ ವೇಳೆ ಮರವೊಂದು ಕೆಳಗೆ ಬಿದ್ದಿದೆ. ಆಟೋದ ಮುಂಭಾಗಕ್ಕೆ ಮರ ಬಿದ್ದಿದ್ದರಿಂದ ಚಾಲಕನ ತಲೆಗೆ ಗಂಭೀರವಾಗಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಟೋ ಹಿಂದೆ ಕೂತು ಪ್ರಯಾಣ ಮಾಡುತ್ತಿದ್ದವರಿಗೆ ಗಂಭೀರವಾಗಿ ಗಾಯವಾಗಿದೆ.

    ಈ ಘಟನೆ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • 80ರ ಮಹಿಳೆ, ಮೂವರು ಪುತ್ರಿಯರು, ಓರ್ವ ಗಾರ್ಡ್ ಚಾಕು ಇರಿತದಿಂದ ಮನೆಯಲ್ಲೇ ಸಾವು

    80ರ ಮಹಿಳೆ, ಮೂವರು ಪುತ್ರಿಯರು, ಓರ್ವ ಗಾರ್ಡ್ ಚಾಕು ಇರಿತದಿಂದ ಮನೆಯಲ್ಲೇ ಸಾವು

    ನವದೆಹಲಿ: ನಗರದ ಮನೆಯೊಂದರಲ್ಲಿ 82 ವಯಸ್ಸಿನ ವೃದ್ಧ ಮಹಿಳೆ, ಆಕೆಯ 3 ಹೆಣ್ಣುಮಕ್ಕಳು ಮತ್ತು ಸೆಕ್ಯೂರಿಟಿ ಗಾರ್ಡ್‍ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.

    ನಗರದ ಶಹ್ದಾರಾದ ಮಾನ್‍ಸರೋವರ್ ಪಾರ್ಕ್ ಪ್ರದೇಶದ ಮನೆಯೊಂದರಲ್ಲಿ ಮೃತ ದೇಹಗಳು ಪತ್ತೆಯಾಗಿವೆ. ಮೃತರನ್ನು ಊರ್ಮಿಳಾ(82), ಆಕೆಯ ಮಕ್ಕಳಾದ ಸಂಗೀತ ಗುಪ್ತಾ(56), ನೂಪುರ್ ಜಿಂದಾಲ್(48) ಮತ್ತು ಅಂಜಲಿ ಜಿಂದಾಲ್(38) ಹಾಗೂ ಸೆಕ್ಯೂರಿಟಿ ಗಾರ್ಡ್ ರಾಕೇಶ್(42) ಎಂದು ಗುರುತಿಸಲಾಗಿದೆ.

    ಇಂದು ಮುಂಜಾನೆ 7 ಗಂಟೆ ಸಮಯದಲ್ಲಿ ದೆಹಲಿ ಪೊಲೀಸ್ ಕಾಂಟ್ರೋಲ್ ರೂಮ್‍ಗೆ ಈ ಬಗ್ಗೆ ಕರೆ ಬಂದಿತ್ತು. ಮಾಹಿತಿ ಆಧಾರಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ.

    ಮನೆಯನ್ನು ಬಲವಂತವಾಗಿ ಪ್ರವೇಶ ಮಾಡಲು ಯಾರೂ ಪ್ರಯತ್ನಿಸಿಲ್ಲ ಹಾಗೂ ಮನೆಯಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳು ಕಳ್ಳತನವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬ ಸದಸ್ಯರಿಗೆ ಗೊತ್ತಿರುವವರಿಂದಲೇ ಹತ್ಯೆ ನಡೆದಿದೆ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆಸ್ತಿ ಕಲಹದಿಂದ ಕೊಲೆ ನಡೆದಿರಬಹುದು ಎಂದು ಶಂಕಿಸಿದ್ದಾರೆ. ಘಟನಾ ಸ್ಥಳದಲ್ಲಿ ಸಿಕ್ಕ ಚಾಕುವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಘಟನೆಯ ಕುರಿತು ಎಫ್‍ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.