Tag: Death Warrant

  • ಕೊನೆಗೂ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಫಿಕ್ಸ್ – ಮಾರ್ಚ್ 20ಕ್ಕೆ ಡೆತ್ ವಾರೆಂಟ್ ಜಾರಿ

    ಕೊನೆಗೂ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಫಿಕ್ಸ್ – ಮಾರ್ಚ್ 20ಕ್ಕೆ ಡೆತ್ ವಾರೆಂಟ್ ಜಾರಿ

    ನವದೆಹಲಿ: ಕೊನೆಗೂ ದೆಹಲಿ ಕೋರ್ಟ್ ನಿರ್ಭಯಾ ಅತ್ಯಾಚಾರಿಗಳಿಗೆ ಡೆತ್ ವಾರೆಂಟ್ ಜಾರಿಗೊಳಿಸಿದ್ದು, ಮಾರ್ಚ್ 20ರ ಬೆಳಗ್ಗೆ 5:30ಕ್ಕೆ 4 ಮಂದಿ ದೋಷಿಗಳನ್ನು ಗಲ್ಲಿಗೇರಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.

    ಪ್ರತಿ ಬಾರಿ ಗಲ್ಲಿಗೇರಿಸುವ ದಿನಾಂಕವನ್ನು ನಿಗದಿಗೊಳಿಸಿದಾಗಲೂ ಒಂದಲ್ಲಾ ಒಂದು ಕಾರಣ ಹೇಳಿ ಅತ್ಯಾಚಾರಿಗಳು ನೇಣು ಕುಣಿಕೆಯಿಂದ ಬಚಾವ್ ಆಗುತ್ತಾ ಬಂದಿದ್ದರು. ಗಲ್ಲು ಶಿಕ್ಷೆಯಿಂದ ಪಾರಾಗಲು ದೋಷಿಗಳು ನಡೆಸಿದ್ದಾ ಎಲ್ಲಾ ಪ್ರಯತ್ನವೂ ವಿಫಲವಾಗಿದ್ದು, ಇಂದು ದೆಹಲಿ ಕೋರ್ಟ್ ಹೊಸ ಡೆತ್ ವಾರೆಂಟ್ ಜಾರಿಗೊಳಿಸಿದೆ.

    ಅಪರಾಧಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತಿರಸ್ಕರಿಸಿದ ಬೆನ್ನಲ್ಲೇ ತಿಹಾರ್ ಜೈಲು ಆಡಳಿತ ಹಾಗೂ ದೆಹಲಿ ಸರ್ಕಾರ ಪಟಿಯಾಲ ಕೋರ್ಟ್ ಮೊರೆ ಹೋಗಿತ್ತು.

    ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ವಜಾ ಆಗಿದ್ದು, ನಾಲ್ವರು ದೋಷಿಗಳ ಬಹುತೇಕ ಕಾನೂನು ಹೋರಾಟ ಅಂತ್ಯವಾಗಿದೆ. ಹಾಗಾಗಿ ಹೊಸ ಡೆತ್ ವಾರೆಂಟ್ ಜಾರಿ ಮಾಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

    ಮಾರ್ಚ್ 3ರಂದು ಪಟಿಯಾಲಾ ಕೋರ್ಟ್ ಮೂರನೇ ಬಾರಿ ಡೆತ್ ವಾರೆಂಟ್ ಜಾರಿ ಮಾಡಿತ್ತು. ಆದರೆ ಕಡೆ ಗಳಿಗೆಯಲ್ಲಿ ದೋಷಿ ಪವನ್ ಗುಪ್ತಾ ರಾಷ್ಟ್ರಪತಿಗೆ ತಿರಸ್ಕೃತಗೊಂಡ ಕ್ಷಮದಾನ ಅರ್ಜಿ ಮರುಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದನು. ದಿಢೀರ್ ಬೆಳವಣಿಗೆಯಿಂದ ಮಾರ್ಚ್ 3ರಂದು ನಡೆಬೇಕಿದ್ದ ಗಲ್ಲು ಶಿಕ್ಷೆಗೆ ಪಟಿಯಾಲ ಕೋರ್ಟ್ ತಡೆ ನೀಡಿತ್ತು.

  • ನಿಮ್ಮ ಕೊನೆಯ ಆಸೆ ಏನು? ನಿರ್ಭಯಾ ದೋಷಿಗಳ ಗಲ್ಲು ಶಿಕ್ಷೆಗೆ ಶುರುವಾಯ್ತು ದಿನಗಣನೆ

    ನಿಮ್ಮ ಕೊನೆಯ ಆಸೆ ಏನು? ನಿರ್ಭಯಾ ದೋಷಿಗಳ ಗಲ್ಲು ಶಿಕ್ಷೆಗೆ ಶುರುವಾಯ್ತು ದಿನಗಣನೆ

    ನವದೆಹಲಿ : ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ದೋಷಿಗಳ ಗಲ್ಲು ಶಿಕ್ಷೆಗೆ ದಿನಗಣನೆ ಶುರುವಾಗಿದೆ. ಫೆಬ್ರವರಿ 1 ರಂದು ಬೆಳಗ್ಗೆ ಆರು ಗಂಟೆಗೆ ಗಲ್ಲು ಶಿಕ್ಷೆ ವಿಧಿಸಲಿದ್ದು ಈ ನಿಟ್ಟಿನಲ್ಲಿ ಸಿದ್ಧತೆಗಳು ಆರಂಭವಾಗಿದೆ.

    ನಾಲ್ವರು ದೋಷಿಗಳಿಗೆ ತಮ್ಮ ಕೊನೆಯ ಆಸೆ ತಿಳಿಸುವಂತೆ ತಿಹಾರ್ ಜೈಲು ಅಧಿಕಾರಿಗಳು ಲಿಖಿತ ರೂಪದಲ್ಲಿ ಪತ್ರವೊಂದನ್ನ ನೀಡಿದ್ದಾರೆ. ಕಳೆದ ವಾರ ಈ ಮಾಹಿತಿ ಕೇಳಿರುವ ಹೆಚ್ಚುವರಿ ಇನ್ಸ್‍ಪೆಕ್ಟರ್ ಜನರಲ್ ರಾಜ್‍ಕುಮಾರ್, ಈಡೇರಿಸಬಹುದಾದ ಆಸೆಗಳನ್ನು ಪಟ್ಟಿ ಮಾಡುವಂತೆ ಸೂಚಿಸಿದ್ದಾರೆ.

    ಈ ಮಾಹಿತಿ ಧೃಡಪಡಿಸಿರುವ ಎಐಜಿ ರಾಜಕುಮಾರ್, ಗಲ್ಲಿಗೇರಿಸುವ ಮೊದಲು ನಾಲ್ಕು ಜನರನ್ನು ತಮ್ಮ ಕೊನೆಯ ಆಶಯವನ್ನು ಪಟ್ಟಿ ಮಾಡಲು ಲಿಖಿತವಾಗಿ ಕೇಳಿಕೊಂಡಿದೆ. ಅವರಲ್ಲಿ ಯಾರೂ ಇಲ್ಲಿಯವರೆಗೆ ಪ್ರತಿಕ್ರಿಯಿಸಿಲ್ಲ ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ, ನಾಲ್ವರು ದೋಷಿಗಳ ಕೊನೆಯ ಆಸೆ ಏನೆಂದು ಒಮ್ಮೆ ನಮಗೆ ತಿಳಿಸಿದರೆ, ಆಸೆ ಈಡೇರಲು ಸಾಧ್ಯವಾದರೆ ತಿಹಾರ್ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಪ್ರತಿ ಆಸೆ ಪೂರ್ಣಗೊಳ್ಳಲು ಸಾಧ್ಯವಿಲ್ಲ. ಅವರು ಲಿಖಿತವಾಗಿ ನಮಗೆ ಪಟ್ಟಿ ನೀಡಿದಲ್ಲಿ ಜೈಲು ಆಡಳಿತವು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

    ನಾಲ್ಕು ಅಪರಾಧಿಗಳು ತಾವು ಕೊನೆಯ ಬಾರಿಗೆ ಯಾರನ್ನಾದರೂ ಭೇಟಿಯಾಗಲು ಬಯಸಿದರೆ ಅವರು ಹೆಸರಗಳು ಮತ್ತು ಅಪರಾಧಿಗಳು ಹೊಂದಿರುವ ಯಾವುದೇ ಆಸ್ತಿ ಅಥವಾ ವಸ್ತುಗಳನ್ನು ಅವರು ಬಯಸುವ ಯಾರಿಗಾದರೂ ವರ್ಗಾಯಿಸಲು ಕೇಳಿಕೊಳ್ಳಲಾಗಿದೆ ಎಂದು ಜೈಲು ಅಧಿಕಾರಿಗಳು ಹೇಳಿದರು.

    ಫೆಬ್ರವರಿ 1 ರಂದು ಬೆಳಗ್ಗೆ 6 ಗಂಟೆಗೆ ವಿನಯ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31), ಮುಖೇಶ್ ಕುಮಾರ್ ಸಿಂಗ್ (32) ಮತ್ತು ಪವನ್ (26) ಅವರನ್ನು ಗಲ್ಲಿಗೇರಿಸಿಸಲು ದೆಹಲಿ ನ್ಯಾಯಾಲಯವು ಜನವರಿ 17 ರಂದು ಹೊಸ ಡೆತ್ ವಾರಂಟ್ ಹೊರಡಿಸಿದೆ.