Tag: death threats

  • ನಿರ್ದೇಶಕ ವರ್ಮಾ ಶಿರಚ್ಛೇದನ ವಿಚಾರ: ಟಿಡಿಪಿ ಮುಖಂಡನ ವಿರುದ್ಧ ದೂರು

    ನಿರ್ದೇಶಕ ವರ್ಮಾ ಶಿರಚ್ಛೇದನ ವಿಚಾರ: ಟಿಡಿಪಿ ಮುಖಂಡನ ವಿರುದ್ಧ ದೂರು

    ವ್ಯೂಹಂ ಸಿನಿಮಾ ನಿರ್ದೇಶನ ಮಾಡಿದ್ದಕ್ಕೆ ತಮಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ್ ನಾಯ್ಡು ಎನ್ನುವವರು ಮಾಧ್ಯಮದಲ್ಲಿ ಕೂತು ಬಹಿರಂಗವಾಗಿ ತಮ್ಮನ್ನು ಕೊಲ್ಲಲು ಪ್ರಚೋದನೆ ನೀಡಿದ್ದಾರೆ. ನನ್ನ ತಲೆ ಕತ್ತರಿಸಿದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ತಗೆದುಕೊಳ್ಳಬೇಕು ಎಂದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಆಂಧ್ರ ಪೊಲೀಸ್ ರಿಗೆ ಮೊರೆ ಹೋಗಿದ್ದಾರೆ. ಅಧಿಕಾರಿಗಳನ್ನು ಭೇಟಿ ಮಾಡಿ ದೂರಿನ ಪತ್ರವನ್ನು ಸಲ್ಲಿಸಿದ್ದಾರೆ.

    ರಾಮ್ ಗೋಪಾಲ್ ವರ್ಮಾ ವಿರುದ್ಧ ಟಿಡಿಪಿ ಕಾರ್ಯಕರ್ತರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ವರ್ಮಾ ನಿರ್ದೇಶನ ಮಾಡಿರುವ ವ್ಯೂಹಂ ಸಿನಿಮಾ ರಿಲೀಸ್ ಮಾಡದಂತೆ ಪ್ರತಿಭಟಿಸಲಾಗುತ್ತಿದೆ. ಈ ಕುರಿತಂತೆ ಮಾಧ್ಯಮದೊಂದಿಗಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿರುವ ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ್ ನಾಯ್ಡು (Kolikapudi Srinivas Naidu), ಎಡವಟ್ಟಿನ ಹೇಳಿಕೆಯನ್ನು ನೀಡಿದ್ದರು. ವರ್ಮಾ ತಲೆ ಕಡಿದು ತಂದಿವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದರ ವಿರುದ್ಧ ವರ್ಮಾ ದೂರು ನೀಡಿದ್ದಾರೆ.

    ನಿನ್ನೆಯಷ್ಟೇ ರಾಮ್ ಗೋಪಾಲ್ ವರ್ಮಾ ಕಚೇರಿಗೆ ಟಿಡಿಪಿ ಕಾರ್ಯಕರ್ತರು ಮತ್ತು ಎನ್.ಟಿ.ಆರ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದರು. ಹೈದರಾಬಾದ್ ನಲ್ಲಿರುವ ವರ್ಮಾ ಅವರ ಡೆನ್ ಕಚೇರಿಗೆ ಮುತ್ತಿಗೆ ಹಾಕಿರುವ ಕಾರ್ಯಕರ್ತರು ವ್ಯೂಹಂ ಸಿನಿಮಾದ ಪೋಸ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದ್ದರು.

    ಆಗ ಸಿನಿಮಾಗಳ ಮೂಲಕ ಸಖತ್ ಸುದ್ದಿ ಆಗುತ್ತಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Verma) , ಇದೀಗ ವಿವಾದಗಳಿಂದಾಗಿ ಹೆಚ್ಚು ಪ್ರಚಾರ ಪಡೆಯುತ್ತಿದ್ದಾರೆ. ಸದ್ಯ ವರ್ಮಾ ‘ವ್ಯೂಹಂ’ (Vyuham) ಹೆಸರಿನಲ್ಲಿ ಸಿನಿಮಾ ಮಾಡಿದ್ದು, ಈ ಸಿನಿಮಾಗೆ ಆಂಧ್ರದ ಟಿಡಿಪಿ ನಾಯಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಈ ಸಿನಿಮಾ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಒತ್ತಡ ಹಾಕಿದ್ದಾರೆ.

    ಆಂಧ್ರ ಪ್ರದೇಶ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಹೊತ್ತಿನಲ್ಲಿ ವ್ಯೂಹಂ ಸಿನಿಮಾ ರಿಲೀಸ್ ಆಗುತ್ತಿದೆ. ಇದು ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ (Jagan Mohan Reddy) ಜೀವನವನ್ನು ಆಧರಿಸಿದ ಸಿನಿಮಾವಾಗಿದ್ದು, ಚಂದ್ರಬಾಬು ನಾಯ್ಡು ಅವರನ್ನು ವಿಲನ್ ರೀತಿಯಲ್ಲಿ ಬಿಂಬಿಸಲಾಗಿದೆ ಎನ್ನುವುದು ಟಿಡಿಪಿ ಸದಸ್ಯರ ಆರೋಪ. ಈ ಕಾರಣದಿಂದಾಗಿ ಚಿತ್ರಕ್ಕೆ ವಿರೋಧವನ್ನು ವ್ಯಕ್ತ ಪಡಿಸುತ್ತಿದ್ದಾರೆ.

    ಈ ಸಿನಿಮಾದಲ್ಲಿ ಇತ್ತೀಚೆಗಷ್ಟೇ ಚಂದ್ರಬಾಬು ನಾಯ್ಡು (Chandra Babu Naidu) ಜೈಲಿಗೆ ಹೋಗಿ ಬಂದಿದ್ದಾರಲ್ಲ, ಆ ದೃಶ್ಯವನ್ನೂ ಸೇರಿಸಲಾಗಿದೆಯಂತೆ. ಇವೆಲ್ಲವೂ ಚುನಾವಣೆ ಮೇಲೆ ಪರಿಣಾಮ ಬೀರಲಿವೆ ಎನ್ನುವ ಕಾರಣದಿಂದಾಗಿ ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್, ಕೇಂದ್ರ ಸೆನ್ಸಾರ್ ಮಂಡಳಿಗೆ ಪತ್ರ ಬರೆದು, ಈ ಚಿತ್ರವನ್ನು ಸೆನ್ಸಾರ್ ಮಾಡಬಾರದು ಎಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

     

    ಈ ರಾಜಕೀಯ ಕಿತ್ತಾಟಗಳು ಏನೇ ಇದ್ದರೂ, ಈ ಸಿನಿಮಾವನ್ನು ತಾವು ಬಿಡುಗಡೆ ಮಾಡುವುದಾಗಿ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. ಒಬ್ಬ ಸಿನಿಮಾ ಮೇಕರ್ ಆಗಿ ನನ್ನ ಕೆಲಸ ಮಾಡಿದ್ದೇನೆ. ಜನರು ಎಲ್ಲವನ್ನೂ ತೀರ್ಮಾನ ಮಾಡಲಿ ಎಂದಿದ್ದಾರೆ.

  • ಖ್ಯಾತ ನಟಿ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ

    ಖ್ಯಾತ ನಟಿ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ

    ಕ್ಷಿಣ ಭಾರತದ ಖ್ಯಾತನಟಿ, ಮಂಗಳೂರು ಮೂಲದ ಪೂಜಾ ಹೆಗ್ಡೆಗೆ (Pooja Hegde) ಕೊಲೆ ಬೆದರಿಕೆ ಹಾಕಲಾಗಿದೆ ಎ‍ನ್ನುವ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಕ್ಲಬ್ ವೊಂದರ ಉದ್ಘಾಟನೆಗೆ ಪೂಜಾ ದುಬೈಗೆ (Dubai) ಹಾರಿದ್ದರಂತೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಟಿ ಜಗಳ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಹಾಗಾಗಿ ಅಲ್ಲಿಂದಲೇ ಕೊಲೆ ಬೆದರಿಕೆ (Death Threats) ಬಂದಿದೆ ಎನ್ನುವುದು ಸಮಾಚಾರದ ಸಾರ.

    ದುಬೈನಲ್ಲಿ ಗಲಾಟೆಯಾದರೂ, ಅಲ್ಲಿದ್ದಾಗ ಯಾವುದೇ ಬೆದರಿಕೆಯೂ ಬಂದಿರಲಿಲ್ಲವಂತೆ. ದುಂಬೈನಿಂದ ವಾಪಸ್ಸು ಭಾರತಕ್ಕೆ ಬಂದಾಗ ಕರೆ ಮಾಡಿ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ವರದಿ ಆಗಿದೆ. ಈ ಸುದ್ದಿ ಸಾಕಷ್ಟು ವೈರಲ್ ಕೂಡ ಆಗಿದೆ. ಈ ಸುದ್ದಿಗೆ ಸ್ವತಃ ಪೂಜಾ ಅವರೇ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

     

    ದುಬೈಗೆ ಹೋಗಿದ್ದು ನಿಜ. ಕ್ಲಬ್ ಉದ್ಘಾಟನೆಗಾಗಿ ಅಲ್ಲಿಗೆ ಹೋಗಿದ್ದೆ. ಆದರೆ, ಈ ಸಂದರ್ಭದಲ್ಲಿ ಯಾವುದೇ ಗಲಾಟೆ ಆಗಿಲ್ಲ. ಅಲ್ಲದೇ, ನನಗೆ ಕೊಲೆ ಬೆದರಿಕೆ ಕೂಡ ಬಂದಿಲ್ಲ. ಇದು ಯಾರೋ ಸೃಷ್ಟಿಸಿದ ಸುಳ್ಳು ಸುದ್ದಿಯಾಗಿದೆ ಎಂದಿದ್ದಾರೆ ಪೂಜಾ. ಈ ಮೂಲಕ ಗಾಸಿಪ್ ಗೆ ತೆರೆ ಕೂಡ ಎಳೆದಿದ್ದಾರೆ.

  • ಉರ್ಫಿಗೆ ಕೊಲೆ ಬೆದರಿಕೆ: ವ್ಯಕ್ತಿಯ ಹೆಸರು ಬಹಿರಂಗ ಪಡಿಸಿದ ನಟಿ

    ಉರ್ಫಿಗೆ ಕೊಲೆ ಬೆದರಿಕೆ: ವ್ಯಕ್ತಿಯ ಹೆಸರು ಬಹಿರಂಗ ಪಡಿಸಿದ ನಟಿ

    ಬಿಗ್ ಬಾಸ್ ಮಾಜಿ ಸ್ಪರ್ಧಿ, ಮಾಡೆಲ್ ಉರ್ಫಿ ಜಾವೇದ್ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ನಿನ್ನ ಕಾಸ್ಟ್ಯೂಮ್ ಅನ್ನು ಸರಿ ಪಡಿಸಿಕೊಳ್ಳದೇ ಇದ್ದರೆ ಹೊಡೆದುರುಳಿಸುತ್ತೇವೆ ಎಂದು ಪ್ರಮೋದ್ ಸಿಂಗ್ ಎನ್ನುವವರು ಕೊಲೆ ಬೆದರಿಕೆ (Death threats) ಹಾಕಿದ್ದಾನೆ ಎಂದು ಉರ್ಫಿ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ‘ನನ್ನ ಜೀವನದಲ್ಲಿ ಇದು ನಿರಂತರವಾಗಿ ನಡೆಯುತ್ತದೆ, ಹೆದರುವುದಿಲ್ಲ ಎಂದು ಉರ್ಫಿ ಹೇಳಿದ್ದಾರೆ.

    ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಮೂಡಿಸಿದ ನಟಿ ಉರ್ಫಿ ಜಾವೇದ್ (Urfi Javed) ಅವರು ತಾವು ಧರಿಸುವ ಚಿತ್ರ-ವಿಚಿತ್ರ ಬಟ್ಟೆಯಿಂದಲೇ ಗುರುತಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಕೆಟ್ಟ ಕಾಮೆಂಟ್ಸ್‌ಗೆ ಡೊಂಟ್ ಕೇರ್ ಎನುತ್ತಾ ಸದಾ ಮೈ ಕಾಣುವ ಬಟ್ಟೆಗಳನ್ನೇ ಸದಾ ಧರಿಸುವ ಉರ್ಫಿ, ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದುಯಿದೆ. ಇದನ್ನೂ ಓದಿ:ಸಮಂತಾ ಬ್ಯಾಕ್ ಟು ಶೂಟ್- ಹೊಸ ಲುಕ್‌ನಲ್ಲಿ ಕಂಗೊಳಿಸಿದ ನಟಿ

    ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುವ ನಟಿ ಉರ್ಫಿ ಸಿನಿಮಾ ಮಾಡೋದ್ದಕ್ಕಿಂತ, ಟ್ರೋಲ್ ಮತ್ತು ಬಟ್ಟೆಯಿಂದಲೇ ಸಖತ್ ಸೌಂಡ್ ಮಾಡಿದ್ದಾರೆ. ಕೆಲದಿನಗಳ ಹಿಂದೆ ಮುಂಬೈ ಮನೆ ಬಾಡಿಗೆ ಕೊಡ್ತಿಲ್ಲ ನನಗೆ ಎಂದು ಉರ್ಫಿ ಗೋಗರೆದಿದ್ದರು. ಬಳಿಕ ತನಗೆ ಸಿನಿಮಾ ಆಫರ್ಸ್ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಸದಾ ಭಿನ್ನವಾಗಿರುವ ಧರಿಸಿನೊಂದಿಗೆ ಅಭಿಮಾನಿಗಳ ಮುಂದೆ ಬರುವ ಉರ್ಫಿ ಜಾವೇದ್ ಇಷ್ಟೊಂದು ಬೋಲ್ಡ್ ಆಗಿರೋದೇಕೆ ಎಂದು ಸಂದರ್ಶನವೊಂದರಲ್ಲಿ ನಟಿ ಮುಕ್ತವಾಗಿ ಮಾತನಾಡಿದ್ದಾರೆ.

    ಉರ್ಫಿ, ಕೆಲವು ಜನರು ನನ್ನನ್ನು ಗೌರವಿಸುವುದಿಲ್ಲ. ನನ್ನೊಂದಿಗೆ ಕೆಲಸ ಮಾಡಲು ಯಾರೂ ಬಯಸುವುದಿಲ್ಲ. ನಾನು ಎಲ್ಲರ ಗಮನ ಸೆಳೆಯುವ ಸಲುವಾಗಿಯೇ ಈ ರೀತಿಯ ಬಟ್ಟೆಗಳನ್ನು ಧರಿಸುವುದು ಎಂದು ಉರ್ಫಿ ಒಪ್ಪಿಕೊಂಡಿದ್ದಾರೆ. ಆದರೆ ಈ ಕುರಿತು ಕಾಮೆಂಟ್ ಮಾಡಿದರೆ ನನಗೆ ಇಷ್ಟ ಆಗುವುದಿಲ್ಲ ಎಂದು ನಟಿ ಮಾತನಾಡಿದ್ದಾರೆ.

     

    ಬಿಗ್ ಬಾಸ್ ಒಟಿಟಿಯಿಂದ (Bigg Boss Ott) ಉರ್ಫಿ ಜಾವೇದ್ ಜನಪ್ರಿಯತೆ ಗಳಿಸಿದರು. ‘ಹೌಸ್ ಅರೆಸ್ಟ್’ (House Arrest) ಗೇಮ್ ರಿಯಾಲಿಟಿ ಶೋನ ಮೊದಲ ಸೀಸನ್ ನಲ್ಲಿಯೂ ಅವರು ಭಾಗವಹಿಸಿದ್ದರು. ಈ ಹಿಂದೆ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ ಉರ್ಫಿ, ಬಿಗ್ ಬಾಸ್ ಒಟಿಟಿ ಸೀಸನ್ 1 ರಲ್ಲಿ ಟಾಸ್ಕ್ ಗೆಲ್ಲಲು ಕಸದ ಚೀಲಗಳಿಂದ ಮಾಡಿದ ಉಡುಪನ್ನು ಧರಿಸಿ ಖ್ಯಾತಿ ಗಳಿಸಿದರು. ತಮ್ಮ ಸೃಜನಶೀಲತೆಗೆ ಮೆಚ್ಚುಗೆ ಪಡೆದರು. ಅಂದಿನಿದ ಉರ್ಫಿ ಸಾಮಾನ್ಯ ಉಡುಗೆಯನ್ನು ಧರಿಸಲೇ ಇಲ್ಲ. ಹಾಗಾಗಿ ನಟಿ ನಿರಂತರವಾಗಿ ಟ್ರೋಲ್ ಆಗ್ತಿರೋದರ ಬಗ್ಗೆ ಮಾತನಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೈಡನ್‌ಗೆ ಕೊಲೆ ಬೆದರಿಕೆ ಒಡ್ಡಿದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಎಫ್‌ಬಿಐ

    ಬೈಡನ್‌ಗೆ ಕೊಲೆ ಬೆದರಿಕೆ ಒಡ್ಡಿದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಎಫ್‌ಬಿಐ

    ವಾಷಿಂಗ್ಟನ್: ಅಮೆರಿಕ (America) ಅಧ್ಯಕ್ಷ ಜೋ ಬೈಡನ್ (Joe Biden), ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿದಂತೆ ಇತರ ಕೆಲವು ಅಧಿಕಾರಿಗಳಿಗೆ ಆನ್‌ಲೈನ್ ಮೂಲಕ ಕೊಲೆ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿರುವುದಾಗಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ತಿಳಿಸಿದೆ.

    ಬೈಡನ್ ಬುಧವಾರ ಉತಾಹ್‌ಗೆ ಭೇಟಿ ನಿಗದಿಯಾಗಿತ್ತು. ಈ ಭೇಟಿ ಹಿನ್ನೆಲೆ ಕ್ರೇಗ್ ರಾಬರ್ಟ್ಸನ್ ಎಂಬ ವ್ಯಕ್ತಿ ಆನ್‌ಲೈನ್‌ನಲ್ಲಿ ಬೈಡನ್ ಹಾಗೂ ಇತರ ಅಧಿಕಾರಿಗಳಿಗೆ ಕೊಲೆ ಬೆದರಿಕೆ ಹಾಕಿದ್ದ. ಆತನ ಪೋಸ್ಟ್‌ನಲ್ಲಿ ಬೈಡನ್ ಆಗಮಿಸುತ್ತಿರುವ ವಿಚಾರ ತಿಳಿದಿದೆ. ಎಂ24 ಸ್ನೈಪರ್ ರೈಫಲ್ ಅನ್ನು ಸಿದ್ಧಪಡಿಸಿಕೊಳ್ಳುತ್ತಿದ್ದೇನೆ ಎಂದು ಬರೆಯಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ದೂರನ್ನು ದಾಖಲಿಸಲಾಗಿತ್ತು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಭಾರೀ ಮಳೆ – ಮನೆಯೊಳಗೆ ಸಿಲುಕ್ಕಿದ್ದ 50 ಜನರ ರಕ್ಷಣೆ

    ತಕ್ಷಣ ಎಚ್ಚೆತ್ತುಕೊಂಡ ಎಫ್‌ಬಿಐ ತಂಡ ಬುಧವಾರ ಮುಂಜಾನೆ ಸ್ಟಾಲ್ ಲೇಕ್ ಸಿಟಿಯ ದಕ್ಷಿಣದ ಪ್ರೊವೊದಲ್ಲಿನ ರಾಬರ್ಟ್ಸನ್ ಮನೆಗೆ ಬಂಧನದ ವಾರೆಂಟ್ ಜೊತೆ ಬಂದಿದ್ದಾರೆ. ಬಳಿಕ ಆತನ ಮನೆ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಈ ವೇಳೆ ರಾಬರ್ಟ್ಸನ್ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: BJP ಸಂಸದರಿಗೆ ರಾಗಾ ಫ್ಲೈಯಿಂಗ್ ಕಿಸ್ – ಅದು ಪ್ರೀತಿಯ ಸನ್ನೆ ಎಂದು ಶಿವಸೇನೆ ಸಂಸದೆ ಸಮರ್ಥನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಜಯ್ ರಾವತ್, ಸಹೋದರನಿಗೆ ಕೊಲೆ ಬೆದರಿಕೆ- ಇಬ್ಬರ ಬಂಧನ

    ಸಂಜಯ್ ರಾವತ್, ಸಹೋದರನಿಗೆ ಕೊಲೆ ಬೆದರಿಕೆ- ಇಬ್ಬರ ಬಂಧನ

    ಮುಂಬೈ: ಶಿವಸೇನಾ (Shiv Sena UBT)) ಮುಖಂಡ ಸಂಜಯ್ ರಾವತ್ (Sanjay Raut) ಮತ್ತು ಅವರ ಸಹೋದರ ಸುನೀಲ್ ರಾವತ್ ಅವರಿಗೆ ಕೊಲೆ ಬೆದರಿಕೆ (Death Threats) ಹಾಕಿರುವ ಆರೋಪದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

    ಒಬ್ಬ ಆರೋಪಿ ಆಟೋ ಚಾಲಕ ಹಾಗೂ ಮತ್ತೊಬ್ಬ ಇಂಟೀರಿಯರ್ ಡಿಸೈನಿಂಗ್ ಕೆಲಸಗಾರ ಎಂದು ತಿಳಿದು ಬಂದಿದೆ. ಕುಡಿದ ಅಮಲಿನಲ್ಲಿ ರಾವತ್ ಸಹೋದರರಿಗೆ ಬೆದರಿಕೆ ಕರೆಗಳನ್ನು ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣದ ವಿಚಾರವಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ಐತಿಹಾಸಿಕ ಕ್ಷಣಕ್ಕೆ ಕರ್ನಾಟಕ ಸಾಕ್ಷಿ- 4 ಕಿ.ಮೀ ಬಸ್‍ನಲ್ಲಿ ಸಿಎಂ ಸಂಚಾರ

    ಮೊದಲು ಸುನಿಲ್ ರಾವತ್ ಅವರಿಗೆ ಕರೆ ಬಂದಿದ್ದು, ಸಂಜಯ್ ರಾವತ್ ಹಾಗೂ ಅವರ ಸಹೋದರನ ಮೇಲೆ ಗುಂಡಿನ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ. ರಾವತ್ ಸಹೋದರರು ನೀಡಿದ ಫೋನ್ ನಂಬರ್ ಹಾಗೂ ಕರೆಯ ರೆಕಾರ್ಡಿಂಗ್ ಆಧಾರದ ಮೇಲೆ ಫೋನ್‌ಗಳ ಸ್ಥಳವನ್ನು ಪತ್ತೆ ಹಚ್ಚಲಾಗಿದೆ. ಅಲ್ಲದೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನನ್ನ ಸಹೋದರನಿಗೆ ಬಂದಿರುವ ಬೆದರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು, ನನಗೆ ಬಂದಿರುವ ಬೆದರಿಕೆಯನ್ನಲ್ಲ. ಆದರೆ ಸರ್ಕಾರ ಅಂತಹ ಬೆದರಿಕೆಗಳನ್ನು ಬಯಸುತ್ತಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ ಎಂದು ಸಂಜಯ್ ರಾವತ್ ತಿಳಿಸಿದ್ದಾರೆ.

    ಬಂಧಿತ ಆರೋಪಿಗಳ ವಿರುದ್ಧ ಸೆಕ್ಷನ್ 506ರ ಅಡಿ ಕೊಲೆ ಬೆದರಿಕೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಮಸ್ಯೆ ಬಗೆಹರಿದರೆ ಮಾತ್ರ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತೇನೆ: ಪಟ್ಟು ಬಿಡದ ಸಾಕ್ಷಿ ಮಲಿಕ್

  • ಸಲ್ಮಾನ್ ಕೊಲೆ ಬೆದರಿಕೆ ಪ್ರಕರಣ : ಭೂಗತ ಪಾತಕಿಯೊಬ್ಬನ ಬಂಧನ

    ಸಲ್ಮಾನ್ ಕೊಲೆ ಬೆದರಿಕೆ ಪ್ರಕರಣ : ಭೂಗತ ಪಾತಕಿಯೊಬ್ಬನ ಬಂಧನ

    ಬಾಲಿವುಡ್ ನಟ ಸಲ್ಮಾನ್ ಖಾನ್ ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನ ಬಂಧನವಾಗಿದೆ. ಇ-ಮೇಲ್ ಮೂಲಕ ಬೆದರಿಕೆ ಕಳುಹಿಸಿದ್ದ ರಾಜಸ್ಥಾನ (Rajasthan) ಭೂಗತ ಪಾತಕಿ ಎನ್ನಲಾದ ವ್ಯಕ್ತಿಯನ್ನು ಮುಂಬೈ ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. 21ರ ವಯಸ್ಸಿನ ಧಕದ್ ರಾಮ್ ಬಿಷ್ಣೋಯಿ (Dhakad Ram Bishnoi) ಎಂಬಾತನೇ ಬಂಧಿದನಾದ ವ್ಯಕ್ತಿ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಈತ ರಾಜಸ್ಥಾನದ ಜೋದ್ ಪುರ್ ಬಳಿಯ ಸಿಯೋಗಿ ಕಿ ಧಾನಿ ನಿವಾಸಿ ಎಂದು ಹೇಳಲಾಗುತ್ತಿದೆ.

    ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ (gangster) ಲಾರೆನ್ಸ್ ಬಿಷ್ಣೋಯ್ (Lawrence Bishnoi) ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ನಡುವಿನ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಸಲ್ಮಾನ್ ಖಾನ್ ಕೊಲ್ಲಲು (Death Threats) ಬಿಷ್ಣೋಯ್ ಮತ್ತು ಟೀಮ್  ಹಲವು ರೀತಿಯಲ್ಲಿ ಪ್ರಯತ್ನ ಮಾಡಿ ವಿಫಲವಾಗಿದೆ. ಈ ಸಂಬಂಧವಾಗಿ ಅನೇಕರು ಬಂಧನ ಕೂಡ ಆಗಿದ್ದಾರೆ. ಸ್ವತಃ ಬಿಷ್ಣೋಯ್ ಜೈಲಿನಲ್ಲೇ ಇದ್ದಾನೆ. ಜೈಲಿನಿಂದಲೇ ಮತ್ತೆ ಸಲ್ಮಾನ್ ಬಗ್ಗೆ ಮಾತನಾಡಿದ್ದಾನೆ. ಇದನ್ನೂ ಓದಿ: ʻಅಮೃತಧಾರೆʼ ಶೂಟಿಂಗ್‌ನಲ್ಲಿ ಯೋಧರಿಂದ ಜೀವದಾನ ಸಿಕ್ಕಿದನ್ನ ಸ್ಮರಿಸಿದ ರಮ್ಯಾ

    ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಲಾರೆನ್ಸ್ ಬಿಷ್ಣೋಯ್ ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಮಾತನಾಡಿದ್ದಾನೆ. ಅವನ ಈ ಮಾತು ಬಾಲಿವುಡ್ ನಲ್ಲಿ ಭಾರೀ ಆತಂಕ ಸೃಷ್ಟಿ ಮಾಡಿದೆ.

    salman

    ಸಲ್ಮಾನ್ ಖಾನ್ ಜೀವ ಉಳಿಯಬೇಕು ಎಂದರೆ, ತನ್ನ ಮಾತನ್ನು ಕೇಳಲೇಬೇಕು ಎಂದು ಲಾರೆನ್ಸ್ ಹೇಳಿಕೊಂಡಿದ್ದಾನೆ. ಯಾವುದೋ ಜಾಗದಲ್ಲಿ ನಿಂತು ಕ್ಷಮೆ ಕೇಳಿದರೆ ನಾವು ಒಪ್ಪುವುದಿಲ್ಲ. ಬಿಕಾನೇರ್ ನಲ್ಲಿರುವ ಅವರ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು ಎಂದು ಲಾರೆನ್ಸ್ ಮಾತನಾಡಿದ್ದಾನೆ. ಸಲ್ಮಾನ್ ಖಾನ್ ಗೆ ತುಂಬಾ ಅಹಂ ಇದೆ. ಆ ನಟನಿಗೆ ಅಂಗರಕ್ಷಕರು ಇಲ್ಲದಿದ್ದರೆ ಇಷ್ಟೊತ್ತಿಗೆ ಪ್ರಾಣ ಹೋಗಿರುತ್ತಿತ್ತು ಎಂದಿದ್ದಾನೆ.

    ಸಲ್ಮಾನ್ ಖಾನ್ ವಿರುದ್ಧ ಪ್ರಕರಣ ದಾಖಲಾದರೂ, ಅವರು ಕ್ಷಮೆ ಕೇಳಿಲ್ಲ. ಅವರು ಕ್ಷಮೆ ಕೇಳುವತನಕ ಈ ಯುದ್ಧ ನಿಲ್ಲುವುದಿಲ್ಲ. ಮುಂದಿನ ಎಲ್ಲ ಪರಿಣಾಮಗಳಿಗೆ ಸಲ್ಮಾನ್ ಸಿದ್ಧವಾಗಿರಬೇಕು ಎಂದು ಲಾರೆನ್ಸ್ ಗುಡುಗಿದ್ದಾನೆ. ಹಾಗಾಗಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿದ್ದು,  ಲಾರೆನ್ಸ್ ಅಂಡ್ ಗ್ಯಾಂಗ್ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ. ಈಗಾಗಲೇ ಶೋಧ ಕಾರ್ಯವನ್ನೂ ಶುರು ಮಾಡಿದ್ದಾರೆ.

  • ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ : ನಟನ ನಿವಾಸಕ್ಕೆ ಫುಲ್ ಸೆಕ್ಯೂರಿಟಿ

    ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ : ನಟನ ನಿವಾಸಕ್ಕೆ ಫುಲ್ ಸೆಕ್ಯೂರಿಟಿ

    ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಅವರ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಮುಂಬೈ ಪೊಲೀಸರು ಟೈಟ್ ಸೆಕ್ಯೂರಿಟಿ ನೀಡಿದ್ದಾರೆ. ರವಿವಾರದಿಂದ ಮನೆ ಸುತ್ತಮುತ್ತ ತಪಾಸಣೆ ಕಾರ್ಯವನ್ನೂ ಪೊಲೀಸರು ಆರಂಭಿಸಿದ್ದು, ಯಾವುದೇ ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೊಲ್ಲುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕ್ರಮಗಳನ್ನು ತಗೆದುಕೊಳ್ಳಲು ಮುಂದಾಗಿದ್ದಾರೆ.

    ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ (gangster) ಲಾರೆನ್ಸ್ ಬಿಷ್ಣೋಯ್ (Lawrence Bishnoi) ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ನಡುವಿನ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಸಲ್ಮಾನ್ ಖಾನ್ ಕೊಲ್ಲಲು (Death Threats) ಬಿಷ್ಣೋಯ್ ಮತ್ತು ಟೀಮ್  ಹಲವು ರೀತಿಯಲ್ಲಿ ಪ್ರಯತ್ನ ಮಾಡಿ ವಿಫಲವಾಗಿದೆ. ಈ ಸಂಬಂಧವಾಗಿ ಅನೇಕರು ಬಂಧನ ಕೂಡ ಆಗಿದ್ದಾರೆ. ಸ್ವತಃ ಬಿಷ್ಣೋಯ್ ಜೈಲಿನಲ್ಲೇ ಇದ್ದಾರೆ. ಜೈಲಿನಿಂದಲೇ ಮತ್ತೆ ಸಲ್ಮಾನ್ ಬಗ್ಗೆ ಮಾತನಾಡಿದ್ದಾನೆ. ಇದನ್ನೂ ಓದಿ: ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡ ಕ್ರೇಜಿಸ್ಟಾರ್ ರವಿಚಂದ್ರನ್

    salman

    ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಲಾರೆನ್ಸ್ ಬಿಷ್ಣೋಯ್ ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಮಾತನಾಡಿದ್ದಾನೆ. ಅವನ ಈ ಮಾತು ಬಾಲಿವುಡ್ ನಲ್ಲಿ ಭಾರೀ ಆತಂಕ ಸೃಷ್ಟಿ ಮಾಡಿದೆ.

    ಸಲ್ಮಾನ್ ಖಾನ್ ಜೀವ ಉಳಿಯಬೇಕು ಎಂದರೆ, ತನ್ನ ಮಾತನ್ನು ಕೇಳಲೇಬೇಕು ಎಂದು ಲಾರೆನ್ಸ್ ಹೇಳಿಕೊಂಡಿದ್ದಾನೆ. ಯಾವುದೋ ಜಾಗದಲ್ಲಿ ನಿಂತು ಕ್ಷಮೆ ಕೇಳಿದರೆ ನಾವು ಒಪ್ಪುವುದಿಲ್ಲ. ಬಿಕಾನೇರ್ ನಲ್ಲಿರುವ ಅವರ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು ಎಂದು ಲಾರೆನ್ಸ್ ಮಾತನಾಡಿದ್ದಾನೆ. ಸಲ್ಮಾನ್ ಖಾನ್ ಗೆ ತುಂಬಾ ಅಹಂ ಇದೆ. ಆ ನಟನಿಗೆ ಅಂಗರಕ್ಷಕರು ಇಲ್ಲದಿದ್ದರೆ ಇಷ್ಟೊತ್ತಿಗೆ ಪ್ರಾಣ ಹೋಗಿರುತ್ತಿತ್ತು ಎಂದಿದ್ದಾನೆ.

    ಸಲ್ಮಾನ್ ಖಾನ್ ವಿರುದ್ಧ ಪ್ರಕರಣ ದಾಖಲಾದರೂ, ಅವರು ಕ್ಷಮೆ ಕೇಳಿಲ್ಲ. ಅವರು ಕ್ಷಮೆ ಕೇಳುವತನಕ ಈ ಯುದ್ಧ ನಿಲ್ಲುವುದಿಲ್ಲ. ಮುಂದಿನ ಎಲ್ಲ ಪರಿಣಾಮಗಳಿಗೆ ಸಲ್ಮಾನ್ ಸಿದ್ಧವಾಗಿರಬೇಕು ಎಂದು ಲಾರೆನ್ಸ್ ಗುಡುಗಿದ್ದಾನೆ. ಈತನ ಮಾತಿಗೆ ಪೊಲೀಸ್ ಇಲಾಖೆ ಯಾವ ರೀತಿಯಲ್ಲಿ ಕ್ರಮ ತಗೆದುಕೊಳ್ಳತ್ತೋ ಕಾದು ನೋಡಬೇಕಿದೆ.

  • ಸಲ್ಮಾನ್ ಖಾನ್ ಸಾಯಿಸೋದೇ ನನ್ನ ಅಂತಿಮ ಗುರಿ: ಗ್ಯಾಂಗ್ ಸ್ಟರ್ ಸ್ಫೋಟಕ ಮಾತು

    ಸಲ್ಮಾನ್ ಖಾನ್ ಸಾಯಿಸೋದೇ ನನ್ನ ಅಂತಿಮ ಗುರಿ: ಗ್ಯಾಂಗ್ ಸ್ಟರ್ ಸ್ಫೋಟಕ ಮಾತು

    ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ (gangster) ಲಾರೆನ್ಸ್ ಬಿಷ್ಣೋಯ್ (Lawrence Bishnoi) ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ನಡುವಿನ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಸಲ್ಮಾನ್ ಖಾನ್ ಕೊಲ್ಲಲು (Death Threats) ಬಿಷ್ಣೋಯ್ ಮತ್ತು ಟೀಮ್  ಹಲವು ರೀತಿಯಲ್ಲಿ ಪ್ರಯತ್ನ ಮಾಡಿ ವಿಫಲವಾಗಿದೆ. ಈ ಸಂಬಂಧವಾಗಿ ಅನೇಕರು ಬಂಧನ ಕೂಡ ಆಗಿದ್ದಾರೆ. ಸ್ವತಃ ಬಿಷ್ಣೋಯ್ ಜೈಲಿನಲ್ಲೇ ಇದ್ದಾರೆ. ಜೈಲಿನಿಂದಲೇ ಮತ್ತೆ ಸಲ್ಮಾನ್ ಬಗ್ಗೆ ಮಾತನಾಡಿದ್ದಾನೆ.

    ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಲಾರೆನ್ಸ್ ಬಿಷ್ಣೋಯ್ ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಮಾತನಾಡಿದ್ದಾನೆ. ಅವನ ಈ ಮಾತು ಬಾಲಿವುಡ್ ನಲ್ಲಿ ಭಾರೀ ಆತಂಕ ಸೃಷ್ಟಿ ಮಾಡಿದೆ. ಇದನ್ನೂ ಓದಿ: `ನಾಟು ನಾಟು’ ಹಾಡಿಗೆ ಸ್ಟೆಪ್ ಹಾಕಿದ ಕಿಂಗ್ ಕೊಹ್ಲಿ – ವಿರಾಟ್ ಡಾನ್ಸ್‌ಗೆ ಅಭಿಮಾನಿಗಳು ಫಿದಾ

    salman

    ಸಲ್ಮಾನ್ ಖಾನ್ ಜೀವ ಉಳಿಯಬೇಕು ಎಂದರೆ, ತನ್ನ ಮಾತನ್ನು ಕೇಳಲೇಬೇಕು ಎಂದು ಲಾರೆನ್ಸ್ ಹೇಳಿಕೊಂಡಿದ್ದಾನೆ. ಯಾವುದೋ ಜಾಗದಲ್ಲಿ ನಿಂತು ಕ್ಷಮೆ ಕೇಳಿದರೆ ನಾವು ಒಪ್ಪುವುದಿಲ್ಲ. ಬಿಕಾನೇರ್ ನಲ್ಲಿರುವ ಅವರ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು ಎಂದು ಲಾರೆನ್ಸ್ ಮಾತನಾಡಿದ್ದಾನೆ. ಸಲ್ಮಾನ್ ಖಾನ್ ಗೆ ತುಂಬಾ ಅಹಂ ಇದೆ. ಆ ನಟನಿಗೆ ಅಂಗರಕ್ಷಕರು ಇಲ್ಲದಿದ್ದರೆ ಇಷ್ಟೊತ್ತಿಗೆ ಪ್ರಾಣ ಹೋಗಿರುತ್ತಿತ್ತು ಎಂದಿದ್ದಾನೆ.

    ಸಲ್ಮಾನ್ ಖಾನ್ ವಿರುದ್ಧ ಪ್ರಕರಣ ದಾಖಲಾದರೂ, ಅವರು ಕ್ಷಮೆ ಕೇಳಿಲ್ಲ. ಅವರು ಕ್ಷಮೆ ಕೇಳುವತನಕ ಈ ಯುದ್ಧ ನಿಲ್ಲುವುದಿಲ್ಲ. ಮುಂದಿನ ಎಲ್ಲ ಪರಿಣಾಮಗಳಿಗೆ ಸಲ್ಮಾನ್ ಸಿದ್ಧವಾಗಿರಬೇಕು ಎಂದು ಲಾರೆನ್ಸ್ ಗುಡುಗಿದ್ದಾನೆ. ಈತನ ಮಾತಿಗೆ ಪೊಲೀಸ್ ಇಲಾಖೆ ಯಾವ ರೀತಿಯಲ್ಲಿ ಕ್ರಮ ತಗೆದುಕೊಳ್ಳತ್ತೋ ಕಾದು ನೋಡಬೇಕಿದೆ.

  • ಕತ್ರಿನಾ ಕೈಫ್ ತನಗೆ ಸಿಗಲಿಲ್ಲವೆಂದು ಕೊಲೆ ಬೆದರಿಕೆ ಹಾಕಿದ ಭೂಪ ಅರೆಸ್ಟ್

    ಕತ್ರಿನಾ ಕೈಫ್ ತನಗೆ ಸಿಗಲಿಲ್ಲವೆಂದು ಕೊಲೆ ಬೆದರಿಕೆ ಹಾಕಿದ ಭೂಪ ಅರೆಸ್ಟ್

    ಬಾಲಿವುಡ್ ಖ್ಯಾತ ಸ್ಟಾರ್ ದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿಕೌಶಲ್ ಅವರಿಗೆ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ ಘಟನೆ ಬಾಲಿವುಡ್ ನಲ್ಲಿ ಆತಂಕ ಮೂಡಿಸಿತ್ತು. ಈ ಕುರಿತು ಅವರು ಮುಂಬೈ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದರು. ದೂರು ನೀಡಿದ ಕೆಲವೇ ಗಂಟೆಗಳಲ್ಲೇ ಪೊಲೀಸರು ಮನ್ವಿಂದರ್ ಹೆಸರಿನ ವ್ಯಕ್ತಿಯನ್ನು ಬಂಧಿಸಿದ್ದು, ಆತನನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಆತ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

    ಮನ್ವಿಂದರ್ ಕೂಡ ಬಾಲಿವುಡ್ ಕಲಾವಿದ. ಸಹ ನಟನಾಗಿ ಹಲವಾರು ಸಿನಿಮಾಗಳನ್ನು ಮಾಡಿದ್ದಾನಂತೆ. ಜೊತೆಗೆ ಕತ್ರಿಕಾ ಕೈಫ್ ಅವರ ಅಪ್ಪಟ ಅಭಿಮಾನಿ. ಅಲ್ಲದೇ, ಕತ್ರಿನಾ ಕೈಫ್ ಅವರನ್ನು ಮದುವೆ ಆಗಬೇಕು ಎಂದು ಕನಸು ಕೂಡ ಕಂಡಿದ್ದನಂತೆ. ಅಷ್ಟರಲ್ಲಿ ವಿಕ್ಕಿ ಜೊತೆ ಕತ್ರಿನಾ ಹೊಸ ಜೀವನಕ್ಕೆ ಕಾಲಿಟ್ಟರು. ಈ ನೋವನ್ನು ತಡೆದುಕೊಳ್ಳಲು ಆಗದೇ ಮನ್ವಿಂದರ್ ಕೊಲೆ ಬೆದರಿಕೆ ಹಾಕಿದ್ದಾನಂತೆ. ಹಾಗಂತ ಪೊಲೀಸರ ಮುಂದೆ ಸ್ವತಃ ಆತನೇ ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ:10 ಪರ್ಸೆಂಟ್ ಕೂಡ ನೆಮ್ಮದಿ ಇಲ್ಲಾ ಎಂದ ತಲೈವಾ: ಮಗಳ ಡಿವೋರ್ಸ್‌ ವಿಚಾರದಲ್ಲಿ ಕುಗ್ಗಿದ್ರಾ ರಜನಿಕಾಂತ್

    ಗಾಯಕ ಸಿಧು ಮೂಸೆವಾಲಾ ಸಾವಿನ ನಂತರ ಬಾಲಿವುಡ್ ನ ಅನೇಕ ಕಲಾವಿದರಿಗೆ ಬೆದರಿಕೆ ಕರೆಗಳು ಬರುತ್ತಿವೆ. ನಾನಾ ಕಾರಣಗಳಿಂದಾಗಿ ಅನೇಕರು ಈ ರೀತಿಯ ಕೊಲೆ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ, ರಕ್ಷಣೆಗಾಗಿ ಪೊಲೀಸರ ಮೊರೆ ಕೂಡ ಹೋಗಿದ್ದಾರೆ. ಸಲ್ಮಾನ್ ಖಾನ್, ವಿವೇಕ ಅಗ್ನಿಹೋತ್ರಿ, ಕಂಗನಾ ರಣಾವತ್ ಸೇರಿದಂತೆ ಹಲವು ಕಲಾವಿದರಿಗೆ ಈಗಾಗಲೇ ಜೀವ ಬೆದರಿಕೆ ಹಾಕಲಾಗಿದೆ. ಅವರು ಕೂಡ ದೂರು ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಂಗನಾ ರಣಾವತ್‌ಗೆ ಕೊಲೆ ಬೆದರಿಕೆ- ಯಾವ ಬೆದರಿಕೆಗಳಿಗೂ ಅಂಜುವುದಿಲ್ಲ ಎಂದ ನಟಿ

    ಕಂಗನಾ ರಣಾವತ್‌ಗೆ ಕೊಲೆ ಬೆದರಿಕೆ- ಯಾವ ಬೆದರಿಕೆಗಳಿಗೂ ಅಂಜುವುದಿಲ್ಲ ಎಂದ ನಟಿ

    ಮುಂಬೈ: ತನಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಕೊಲೆ ಬೆದರಿಕೆ ಸಂಬಂಧ ದಾಖಲಿಸಿರುವ ದೂರಿಗೆ ಸಂಬಂಧಿಸಿದ ಎಫ್‌ಐಆರ್‌ ಪ್ರತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕಂಗನಾ, ಮುಂಬೈನಲ್ಲಿ ನಡೆದ ಉಗ್ರರ ದಾಳಿಯಿಂದ ಹುತಾತ್ಮರಾದವರನ್ನು ಸ್ಮರಿಸಿದ್ದಾರೆ. ಇದನ್ನೂ ಓದಿ: #MeToo ಪ್ರಕರಣ – ಧರ್ಮೋ ರಕ್ಷತಿ ರಕ್ಷಿತಃ ಎಂದ ಧ್ರುವ, ಜಂಟಲ್ ಮ್ಯಾನ್ ಅಂದ ಮೇಘನಾ

    ಹಿಂದಿಯಲ್ಲಿ ಬರೆದುಕೊಂಡಿರುವ ಅವರು, ದೇಶದ್ರೋಹಿಗಳನ್ನು ಮೆರೆಯಬಾರದು ಮತ್ತು ಕ್ಷಮಿಸಲೂಬಾರದು. ಹಣ, ಅಧಿಕಾರ ಗಳಿಸುವ ಹಾಗೂ ಭಾರತಕ್ಕೆ ಕಳಂಕ ತರಲು ಸಿಗುವ ಒಂದು ಅವಕಾಶವನ್ನೂ ದೇಶದ್ರೋಹಿಗಳು ಕಳೆದುಕೊಳ್ಳುವುದಿಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಶುಭಾ ಪೂಂಜಾ ನ್ಯೂ ಹೇರ್ ಸ್ಟೈಲ್‍ಗೆ ದಿವ್ಯಾ ಕಾಮೆಂಟ್

    ನನಗೆ ಕೆಲವರಿಂದ ಕೊಲೆ ಬೆದರಿಕೆ ಕರೆಗಳು ಬಂದಿವೆ. ಬಟಿಂಡಾದ ಸಹೋದರನೊಬ್ಬ ನನ್ನನ್ನು ಕೊಲ್ಲುವುದಾಗಿ ಬಹಿರಂಗವಾಗಿ ಹೇಳಿದ್ದಾರೆ. ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ದೇಶದ ವಿರುದ್ಧ ಪಿತೂರಿ ನಡೆಸುವ ಹಾಗೂ ಉಗ್ರರ ಪಡೆಗಳ ವಿರುದ್ಧ ನಾನು ಸದಾ ಮಾತನಾಡುತ್ತೇನೆ. 80 ರ ದಶಕದಲ್ಲಿ ಪಂಜಾಬ್‌ನಲ್ಲಿ ಗುರುಗಳ ಪುಣ್ಯಭೂಮಿಯನ್ನು ನಾಶಗೊಳಿಸಿ ಖಲಿಸ್ತಾನ ಮಾಡುವ ಕನಸು ಕಾಣುತ್ತಿರುವ ನಕ್ಸಲರಿರಲಿ, ತುಕ್ಡೆ ತುಕ್ಡೆ ಗ್ಯಾಂಗ್‌ಗಳಿರಲಿ, ವಿದೇಶದಲ್ಲಿ ಕುಳಿತಿರುವ ಉಗ್ರರಿರಲಿ. ಅವರ ವಿರುದ್ಧ ನಾನು ದನಿಯೆತ್ತುತ್ತೇನೆ ಎಂದು ಕಂಗನಾ ಹೇಳಿದ್ದಾರೆ.

     

    View this post on Instagram

     

    A post shared by Kangana Thalaivii (@kanganaranaut)

    ಪ್ರಜಾಪ್ರಭುತ್ವವೇ ನಮ್ಮ ದೇಶದ ಬಹುದೊಡ್ಡ ಶಕ್ತಿ. ಸರ್ಕಾರ ಯಾವುದೇ ಪಕ್ಷದ್ದಾಗಿರಲಿ. ಆದರೆ ನಾಗರಿಕರ ಸಮಗ್ರತೆ, ಏಕತೆ, ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ವಿಚಾರಗಳನ್ನು ಅಭಿವ್ಯಕ್ತಿಸುವ ಹಕ್ಕನ್ನು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಸಂವಿಧಾನ ನಮಗೆ ನೀಡಿದೆ ಎಂದು ತಿಳಿಸಿದ್ದಾರೆ.