Tag: death threat

  • ನಟಿ ಸಂಜನಾ ಗಲ್ರಾನಿಗೆ ಕೊಲೆ ಬೆದರಿಕೆ : ಎಫ್ಐಆರ್‌ ದಾಖಲು

    ನಟಿ ಸಂಜನಾ ಗಲ್ರಾನಿಗೆ ಕೊಲೆ ಬೆದರಿಕೆ : ಎಫ್ಐಆರ್‌ ದಾಖಲು

    ಸಿನಿಮಾ ರಂಗದಿಂದ ದೂರವಿದ್ದು, ಸದ್ಯ ಮಗುವಿನ ಪಾಲನೆ ಪೋಷನೆಯಲ್ಲಿ ಬ್ಯುಸಿಯಾಗಿರುವ ನಟಿ ಸಂಜನಾ ಗಲ್ರಾನಿ (Sanjana Galrani) ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸಂಜನಾಗೆ ಕೊಲೆ ಬೆದರಿಕೆ (Death threat) ಹಾಕಲಾಗಿದೆ ಎಂದು ಆರೋಪ ಮಾಡಿರುವ ಅವರು, ಬೆದರಿಕೆ ಹಾಕಿದವರು ವಿರುದ್ಧ ದೂರು ದಾಖಲಿಸಿದ್ದಾರೆ.

    ಪಾರ್ಕಿಂಗ್ ವಿಚಾರವಾಗಿ ಸ್ಥಳೀಯ ನಿವಾಸಿಗಳ ಜೊತೆ ಗಲಾಟೆ ನಡೆದಿದ್ದು, ಕೊಲೆ ಮಾಡ್ತಿನಿ ಅಂತ ಬೆದರಿಕೆ ಹಾಕಿದ್ದಾರೆ ಎಂದು ಸಂಜನಾ ಇಂದಿರಾನಗರ ಠಾಣೆಗೆ ದೂರು ನೀಡಿದ್ದಾರೆ. ಇಂದಿರಾನಗರದ (Indiranagar) ಧೂಪನಹಳ್ಳಿಯಲ್ಲಿ ವಾಸವಾಗಿರುವ ಸಂಜನಾ ಗಲ್ರಾನಿ ಮನೆ ಬಳಿ ಯಶೋಧಮ್ಮ ಹಾಗೂ ರಾಜಣ್ಣ ಎಂಬುವವರ ಮನೆಯೂ ಇದೆ. ಇವರ ಮೇಲೆಯೇ ಸಂಜನಾ ದೂರು ನೀಡಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ನಮ್ಮ ಭಾರತದ ಹೆಮ್ಮೆ ಎಂದು ಹಾಡಿ ಹೊಗಳಿದ ಕಂಗನಾ

    ಯಶೋಧಮ್ಮ ಹಾಗೂ ರಾಜಣ್ಣ ಎನ್ನುವವರು ರಸ್ತೆಗೆ ಅಡ್ಡಲಾಗಿ ಕಾರುಗಳನ್ನ ನಿಲ್ಲಿಸ್ತಾರಂತೆ. ಇದನ್ನ ಪ್ರಶ್ನೆ ಮಾಡಿದ್ರೆ ಕೊಲೆ ಮಾಡ್ತಿನಿ, ನಾವು ನಲವತ್ತು ವರ್ಷದಿಂದ ವಾಸ ಇದ್ದೀವಿ ಅಂತ ಆವಾಜ್ ಹಾಕಿದ್ದಲ್ಲದೆ, ವೇಶ್ಯೆ ಎಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ ಸಂಜನಾ ಗಲ್ರಾನಿ. ಸದ್ಯ ನ್ಯಾಯಲಯದ ಅನುಮತಿ ಮೇರೆಗೆ ಎಫ್ಐಆರ್‌ (FIR) ದಾಖಲಾಗಿದೆ.

  • ಶರದ್ ಪವಾರ್‌ಗೆ ಜೀವ ಬೆದರಿಕೆ – ಕೇಸ್ ದಾಖಲು

    ಶರದ್ ಪವಾರ್‌ಗೆ ಜೀವ ಬೆದರಿಕೆ – ಕೇಸ್ ದಾಖಲು

    ಮುಂಬೈ: ಎನ್‍ಸಿಪಿ (NCP) ನಾಯಕ ಶರಾದ್ ಪವಾರ್‌ಗೆ (Sharad Pawar) ಫೋನ್ ಕರೆ ಮಾಡಿ ಜೀವ ಬೆದರಿಕೆ (Death Threat) ಹಾಕಿರುವ ಬಗ್ಗೆ ಬಿಹಾರದಲ್ಲಿ ಕೇಸ್ ದಾಖಲಾಗಿದೆ.

    ಶರಾದ್ ಪವಾರ್ ಅವರ ಸಿಲ್ವರ್ ಓಕ್ ರೆಸಿಡೆನ್ಸಿಗೆ ಕರೆ ಮಾಡಿ ಅಪರಿಚಿತ ವ್ಯಕ್ತಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಮುಂಬೈನಲ್ಲಿ (Mumbai) ನಿಮ್ಮನ್ನು ಗನ್‍ನಿಂದ ಸುಟ್ಟು ಕೊಲ್ಲುತ್ತೇನೆ ಎಂದು ಫೋನ್ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ಶರದ್ ಪವಾರ್ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಝಿಕಾ ವೈರಸ್ ಪತ್ತೆ – ದಂಪತಿಗೆ ಕಾಂಡೋಮ್ ನೀಡಿ ಜಾಗೃತಿ

    ಈ ಸಂಬಂಧ ಐಪಿಸಿ ಸೆಕ್ಷನ್ 294 (ಅಶ್ಲೀಲ ಪದಗಳ ಬಳಕೆ), 506 (2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ಹಿಂದೆ ಕೂಡ ಶರಾದ್ ಪವಾರ್‌ಗೆ ಜೀವ ಬೆದರಿಕೆ ಹಾಕಲಾಗಿತ್ತು. ಈ ಹಿಂದೆ ಕೂಡ ಅವರ ಸಿಲ್ವರ್ ಓಕ್ ನಿವಾಸಕ್ಕೆ ಫೋನ್ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಇದೀಗ ಎರಡನೇ ಬಾರಿ ಜೀವ ಬೆದರಿಕೆ ಕರೆ ಬಂದಿದೆ. ಹಾಗಾಗಿ ಪೊಲೀಸರು ಸೂಕ್ತ ತನಿಖೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಭಾರತ-ಚೀನಾ ಗಡಿ ಸಂಘರ್ಷ – ಅರುಣಾಚಲ ಪ್ರದೇಶದಲ್ಲಿ ವಾಯು ಗಸ್ತು ಆರಂಭಿಸಿದ ಭಾರತೀಯ ಸೇನೆ

    ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರಿಗೆ ನೀಡಿರುವ ದೂರಿನಲ್ಲಿ 20 ರಿಂದ 25 ಬಾರಿ ಇಂತಹ ಕರೆಗಳು ಬಂದಿವೆ. ಈ ತೊಂದರೆಯಿಂದ ಮುಕ್ತಿ ನೀಡುವಂತೆ ಕೋರಿದ್ದಾರೆ. ಎನ್‍ಸಿಪಿ ನಾಯಕರ ಕಚೇರಿ ಮತ್ತು ಭದ್ರತಾ ವಿವರಗಳು ಈ ಹಿಂದೆ ಕರೆ ಮಾಡಿದವರ ಬಗ್ಗೆ ಗಾಮ್‍ದೇವಿ ಪೊಲೀಸ್ ಠಾಣೆ ಮತ್ತು ಜಂಟಿ ಪೊಲೀಸ್ ಕಮಿಷನರ್ (ಅಪರಾಧ) ಕಚೇರಿಗೆ ದೂರು ನೀಡಲಾಗಿದೆ. ಕರೆ ಮಾಡಿದವರು ಮಾನಸಿಕವಾಗಿ ಅಸ್ವಸ್ಥನಂತೆ ಕಂಡು ಬರುತ್ತಿದೆ. ಶರದ್ ಪವಾರ್ ನಿವಾಸಕ್ಕೆ ಕರೆ ಮಾಡಿ ಬೆದರಿಕೆ ಒಡ್ಡುತ್ತಿದ್ದಾನೆ ಎಂದು ಎನ್‍ಸಿಪಿ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೋದಿ ಹತ್ಯೆ ಸಂಚು ಪ್ರಕರಣದ ಬೆನ್ನತ್ತಿದ NIA

    ಮೋದಿ ಹತ್ಯೆ ಸಂಚು ಪ್ರಕರಣದ ಬೆನ್ನತ್ತಿದ NIA

    ನವದೆಹಲಿ: ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದ ತನಿಖೆ ಮಂಗಳೂರಿಗೂ ವಿಸ್ತರಿಸಿದೆ. ಎಸ್‌ಡಿಪಿಐ (SDPI) ಪಕ್ಷದ ರಾಷ್ಟ್ರೀಯ ನಾಯಕ ರಿಯಾಜ್ ಫರಂಗಿಪೇಟೆಗೆ ಸೇರಿದ ಪರ್ಲಿಯಾ ನಿವಾಸದ ಮೇಲೆ ಎನ್‌ಐಎ (NIA) ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ರಿಯಾಜ್ ಮತ್ತು ಅವರ ಕುಟುಂಬಸ್ಥರನ್ನು 8 ಗಂಟೆ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತರ ಜೊತೆ ರಿಯಾಜ್ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಸಮಗ್ರ ವಿಚಾರಣೆ ನಡೆಸಿದ್ದಾರೆ. ರಿಯಾಜ್ ಮತ್ತು ಅವರ ಪತ್ನಿಯ ಮೊಬೈಲ್ ಸೇರಿ ಹಲವು ದಾಖಲೆ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಇಂಡಿಯಾ ಗೇಟ್‌ನಲ್ಲಿ ಸುಭಾಷ್‌ ಚಂದ್ರ ಬೋಸ್ ಪ್ರತಿಮೆ ಅನಾವರಣ; ಕರ್ತವ್ಯ ಪಥ ಉದ್ಘಾಟಿಸಿದ ಪ್ರಧಾನಿ ಮೋದಿ

    ಎನ್‌ಐಎ ರೇಡ್ ಸುದ್ದಿ ತಿಳಿಯುತ್ತಲೇ ರಿಯಾಜ್ ಮನೆ ಮುಂದೆ ಜಮಾಯಿಸಿದ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಎನ್‌ಐಎ ಅಧಿಕಾರಿಗಳು ನಿರ್ಗಮಿಸಿದ ಬಳಿಕ ಮಾತನಾಡಿದ ರಿಯಾಜ್ ಫರಂಗಿಪೇಟೆ, ಇದು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದ್ದಾರೆ.

    ಅತ್ತ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು ಮುಂಬೈ ಭೇಟಿ ವೇಳೆ ಭದ್ರತಾ ಲೋಪವಾಗಿದೆ. ಗೃಹ ಸಚಿವಾಲಯದ ಅಧಿಕಾರಿ ಸೋಗಿನಲ್ಲಿದ್ದ ಹೇಮಂತ್ ಎಂಬಾತನನ್ನು ಅರೆಸ್ಟ್ ಮಾಡಿ, 5 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಬಂಧಿತ ಆಂಧ್ರಪ್ರದೇಶದ ಸಂಸದರೊಬ್ಬರ ಖಾಸಗಿ ಭದ್ರತಾ ಸಿಬ್ಬಂದಿ ಅಂತಲೂ ಹೇಳಿಕೊಂಡಿದ್ದ. ಇದನ್ನೂ ಓದಿ: ಮೋದಿ ಉತ್ತಮ ವ್ಯಕ್ತಿ; ಅದ್ಭುತ ಕೆಲಸಗಳನ್ನು ಮಾಡುತ್ತಿದ್ದಾರೆ – ಟ್ರಂಪ್‌ ಬಣ್ಣನೆ

    Live Tv
    [brid partner=56869869 player=32851 video=960834 autoplay=true]

  • ತಂದೆಗೆ ಹಿಂದೂ ಸಂಘಟನೆಗಳಿಂದ ಜೀವ ಬೆದರಿಕೆಯಿದೆ: ಯತೀಂದ್ರ ಸಿದ್ದರಾಮಯ್ಯ

    ತಂದೆಗೆ ಹಿಂದೂ ಸಂಘಟನೆಗಳಿಂದ ಜೀವ ಬೆದರಿಕೆಯಿದೆ: ಯತೀಂದ್ರ ಸಿದ್ದರಾಮಯ್ಯ

    ಮೈಸೂರು: ಗುರುವಾರ ಮಡಿಕೇರಿ ಪ್ರವಾಸ ಕೈಗೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿಗೆ ಹಿಂದೂ ಸಂಘಟನೆಯವರು ಮೊಟ್ಟೆ ಒಡೆದು ಅಗೌರವ ತೋರಿದ್ದರು. ಈ ಘಟನೆಗೆ ಕಾಂಗ್ರೆಸ್ ಮಾತ್ರವಲ್ಲದೇ ಬಿಜೆಪಿ, ಜೆಡಿಎಸ್ ಕೂಡಾ ಅಸಮಾಧಾನ ವ್ಯಕ್ತಪಡಿಸಿತ್ತು. ಇದರ ಹಿನ್ನೆಲೆ ಶುಕ್ರವಾರ ಮಾತನಾಡಿದ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸ್ಫೋಟಕ ಹೇಳಿಯೊಂದನ್ನು ನೀಡಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಯತೀಂದ್ರ, ಸಾವರ್ಕರ್ ಬಗ್ಗೆ ಮಾತನಾಡಿದ್ದಕ್ಕೆ ನಮ್ಮ ತಂದೆ ಸಿದ್ದರಾಮಯ್ಯ ಅವರಿಗೆ ಜೀವಬೆದರಿಕೆಯಿದೆ. ಹಿಂದೂ ಸಂಘಟನೆಗಳಿಂದಲೇ ಬೆದರಿಕೆಗಳು ಬಂದಿವೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ವಿರೋಧ ಪಕ್ಷದ ನಾಯಕರುಗಳಿಗೆ ಭದ್ರತೆ ಕೊಡಲು ವಿಫಲವಾಗಿದೆ. ಇನ್ನು ಜನರಿಗೆ ಹೇಗೆ ಭದ್ರತೆ ಕೊಡುತ್ತಾರೋ ಗೊತ್ತಿಲ್ಲ. ಜೊತೆಗೆ ಮೊಟ್ಟೆ ಒಡೆಸಿ ಹೇಡಿ ಕೃತ್ಯ ಮಾಡಿದೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದ `ಸಿಎಂ ಬದಲಾವಣೆ’ ವರದಿ

    ಬಿಜೆಪಿ ಸರ್ಕಾರ ಮೊದಲು ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆ ಬಗ್ಗೆ ಗಮನ ಹರಿಸಬೇಕು. ಅದು ಬಿಟ್ಟು ವಿರೋಧ ಪಕ್ಷಗಳು ನೀಡುವ ಸಣ್ಣ ಪುಟ್ಟ ಹೇಳಿಕೆಗಳನ್ನು ಹಿಡಿದುಕೊಂಡು, ಅನಗತ್ಯ ಗೊಂದಲ ಸೃಷ್ಟಿಸಿ ಅಪಪ್ರಚಾರ ಮಾಡುತ್ತಿದೆ ಎಂದರು.

    ಟೆರರಿಸ್ಟ್‌ಗಳು ಕೂಡಾ ದೇಶ ಪ್ರೇಮಿಗಳೇ ಆಗಿರುತ್ತಾರೆ. ಆದರೆ ಅವರು ಹಿಡಿಯುವ ದಾರಿ ತಪ್ಪಲ್ವಾ? ಅದರಂತೆಯೇ ಸಾವರ್ಕರ್ ಕೂಡಾ ದೇಶ ಪ್ರೇಮಿಯೇ ಆಗಿರಬಹುದು. ಆದರೆ ಆ ದೇಶ ಪ್ರೇಮವನ್ನು ವ್ಯಕ್ತಪಡಿಸುವುದಕ್ಕೋಸ್ಕರ ಹಿಂದೂಯೇತರ ಪ್ರಜೆಗಳನ್ನು ದೇಶದ ಭಾಗವಾಗಿರಬಾರದು, ಅವರು 2ನೇ ದರ್ಜೆಯ ಪ್ರಜೆಗಳಾಗಿರಬೇಕು ಹಾಗೂ ಅವರನ್ನು ದ್ವೇಷಿಸುವುದು ಈ ದೇಶಕ್ಕೆ ಮಾರಕ ಎಂದು ತಿಳಿಸಿದರು. ಇದನ್ನೂ ಓದಿ: ದೆಹಲಿ ಡಿಸಿಎಂ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ – 20 ಕಡೆಗಳಲ್ಲಿ ಶೋಧ

    Live Tv
    [brid partner=56869869 player=32851 video=960834 autoplay=true]

  • ನೂಪುರ್ ಶರ್ಮಾ ಫೋಟೋ ಅಪ್ಲೋಡ್ ಮಾಡಿದ್ದ ಉದ್ಯಮಿಗೆ ಕೊಲೆ ಬೆದರಿಕೆ – ಮೂವರ ಬಂಧನ

    ನೂಪುರ್ ಶರ್ಮಾ ಫೋಟೋ ಅಪ್ಲೋಡ್ ಮಾಡಿದ್ದ ಉದ್ಯಮಿಗೆ ಕೊಲೆ ಬೆದರಿಕೆ – ಮೂವರ ಬಂಧನ

    ಗಾಂಧೀನಗರ: ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಕ್ಕಾಗಿ ಸೂರತ್ ಮೂಲದ ಉದ್ಯಮಿಗೆ ಶುಕ್ರವಾರ ಕೆಲವು ಅಪರಿಚಿತ ವ್ಯಕ್ತಿಗಳಿಂದ ಕೊಲೆ ಬೆದರಿಕೆ ಬಂದಿದೆ. ಉದ್ಯಮಿಗೆ ಬೆದರಿಕೆ ಹಾಕಿದ್ದ ಮೂವರನ್ನು ಸೂರತ್ ಪೊಲೀಸರು ಬಂಧಿಸಿದ್ದಾರೆ.

    ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನ ಮಾಡಿದ್ದ ನೂಪುರ್ ಶರ್ಮಾ ಅವರ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದರಿಂದ ಉದ್ಯಮಿಗೆ 7 ವ್ಯಕ್ತಿಗಳಿಂದ ಕೊಲೆ ಬೆದರಿಕೆಗಳು ಬಂದಿವೆ ಎಂದು ಸೂರತ್ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ವಿವಾದ – ಹಿಂದೂಗಳಿಗೆ ಪೂಜೆ ಮಾಡಲು ಅನುಮತಿ ನೀಡುವಂತೆ ಕೋರಿ ಸುಪ್ರೀಂಗೆ ಅರ್ಜಿ

    ಸೂರತ್ ಪೊಲೀಸರು ಬಂಧಿಸಿರುವ ಮೂವರು ಆರೋಪಿಗಳು ಮೊಹಮ್ಮದ್ ಅಯಾನ್ ಅತಶ್ಬಾಜಿವಾಲಾ, ರಶೀದ್ ಭುರಾ ಹಾಗೂ ಮಹಿಳಾ ಆರೋಪಿ ಆಲಿಯಾ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಬಂಧಿತ ಎಲ್ಲಾ ಆರೋಪಿಗಳು ಸೂರತ್ ಮೂಲದವರಾಗಿದ್ದು, ಇನ್ನುಳಿದ ನಾಲ್ವರು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭಗತ್‌ ಸಿಂಗ್‌ ಒಬ್ಬ ಭಯೋತ್ಪಾದಕ: ಶಿರೋಮಣಿ ಅಕಾಲಿ ದಳ ಸಂಸದ ವಿವಾದಾತ್ಮಕ ಹೇಳಿಕೆ

    ಬಿಜೆಪಿಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಗದ್ದಲಕ್ಕೆ ಕಾರಣರಾದರು. ನೂಪುರ್ ಅವರನ್ನು ಬೆಂಬಲಿಸಿದ್ದಕ್ಕೆ ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಅವರ ಹತ್ಯೆಯೂ ನಡೆಯಿತು. ಅಂದಿನಿಂದ ನೂಪುರ್ ಅವರನ್ನು ಬೆಂಬಲಿಸಿದ ಹಲವರಿಗೆ ಬೆದರಿಕೆ ಕರೆಗಳು ಬಂದಿರುವುದಾಗಿ ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ‘ವೀರ ಸಾವರ್ಕರ್’ ಸಿನಿಮಾ ಮಾಡಿದರೆ ಕೊಲ್ಲುವುದಾಗಿ ನಿರ್ಮಾಪಕನಿಗೆ ಬೆದರಿಕೆ

    ‘ವೀರ ಸಾವರ್ಕರ್’ ಸಿನಿಮಾ ಮಾಡಿದರೆ ಕೊಲ್ಲುವುದಾಗಿ ನಿರ್ಮಾಪಕನಿಗೆ ಬೆದರಿಕೆ

    ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಕುರಿತಾಗಿ ಬಾಲಿವುಡ್ ನಲ್ಲಿ ಸಿನಿಮಾವೊಂದು ಮೂಡಿ ಬರುತ್ತಿದ್ದು, ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಈ ಸಿನಿಮಾವನ್ನು ಸಂದೀಪ್ ಸಿಂಗ್ ನಿರ್ಮಾಣ ಮಾಡುತ್ತಿದ್ದು, ಅದ್ಧೂರಿಯಾಗಿಯೇ ತಯಾರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಈ ನಡುವೆ ವೀರ ಸಾವರ್ಕರ್ ಸಿನಿಮಾ ಮಾಡಿದರೆ, ಕೊಲ್ಲುವುದಾಗಿ ನಿರ್ಮಾಪಕರಿಗೆ ಬೆದರಿಕೆ ಹಾಕಿದ್ದಾರಂತೆ. ಈ ಕುರಿತು ಅವರು ಅಂಬೋಲಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

    ಈಗಾಗಲೇ ಸಿನಿಮಾದ ಸಿದ್ಧತೆ ನಡೆಸಿದ್ದೇವೆ. ನಾಯಕರ ಆಯ್ಕೆಯಾಗಿದೆ. ವೀರ ಸಾವರ್ಕರ್ ಹುಟ್ಟು ಹಬ್ಬದ ದಿನದಂದು ಫಸ್ಟ್ ಲುಕ್ ಕೂಡ ರಿಲೀಸ್ ಮಾಡಲಾಗಿದೆ. ಇನ್ನೇನು ಶೂಟಿಂಗ್ ಗೆ ಹೊರಡುವ ಸಂದರ್ಭದಲ್ಲಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. ಹಾಗಾಗಿ ತಮಗೆ ರಕ್ಷಣೆ ಬೇಕೆಂದು ಸಂದೀಪ್ ಸಿಂಗ್ ದೂರಿನಲ್ಲಿ ದಾಖಲಿಸಿದ್ದಾರೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತಗೆದುಕೊಂಡಿದ್ದಾರಂತೆ.  ಇದನ್ನೂ ಓದಿ:ಹೆರಿಗೆಯ ವಿಡಿಯೋ ಹಂಚಿಕೊಂಡ ಸಂಜನಾ ಗಲ್ರಾನಿ

    ಸಂದೀಪ್ ಸಿಂಗ್ ಅವರ ಫೇಸ್ ಬುಕ್ ನಲ್ಲಿ ಸಿಧು ಮೂಸೆ ವಾಲ ಹತ್ಯೆಯನ್ನು ನೆನಪಿಸಿಕೊಳ್ಳಿ. ಅದೇ ರೀತಿಯಲ್ಲೇ ನಿನ್ನನ್ನೂ ಕೊಲೆ ಮಾಡಲಾಗುವುದು. ಸ್ವಲ್ಪ ದಿನ ಕಾಯಿರಿ ಎಂದು ಸಂದೇಶವನ್ನು ಪೋಸ್ಟ್ ಮಾಡಿದ್ದಾರಂತೆ. ಇದು ಫೇಸ್ ಬುಕ್ ಮಸೇಜ್ ಮೂಲಕ ಬಂದ ಕೊಲೆ ಬೆದರಿಕೆ ಎಂದು ಸಿಂಗ್ ತಿಳಿಸಿದ್ದಾರೆ. ಈ ಪ್ರಕರಣವನ್ನೂ ಗಂಭೀರವಾಗಿ ಪೊಲೀಸ್ ಇಲಾಖೆ ತಗೆದುಕೊಂಡಿದ್ದು, ಈ ಸಂದೇಶವನ್ನು ಕಳುಹಿಸಿದ ವ್ಯಕ್ತಿಗಾಗಿ ಬಲೆ ಬೀಸಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಹಿಜಬ್‌ ತೀರ್ಪು ಪ್ರಕಟಿಸಿದ ಜಡ್ಜ್‌ಗಳಿಗೆ ಕೊಲೆ ಬೆದರಿಕೆ – ಕೇಸ್‌ ದಾಖಲು

    ಹಿಜಬ್‌ ತೀರ್ಪು ಪ್ರಕಟಿಸಿದ ಜಡ್ಜ್‌ಗಳಿಗೆ ಕೊಲೆ ಬೆದರಿಕೆ – ಕೇಸ್‌ ದಾಖಲು

    ಬೆಂಗಳೂರು: ಹಿಜಬ್‌ ತೀರ್ಪು ಪ್ರಕಟಿಸಿದ ಹೈಕೋರ್ಟ್‌ ನ್ಯಾಯಾಧೀಶರಿಗೆ ತಮಿಳುನಾಡು ಮೂಲದ ಮತೀಯ ಸಂಘಟನೆಯೊಂದು ಕೊಲೆ ಬೆದರಿಕೆ ಹಾಕಿದೆ.

    ತೌಹೀದ್‌ ಜಮಾತ್‌ ಸಂಘಟನೆ ಬೆದರಿಕೆ ಹಾಕಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋ ವೈರಲ್‌ ಬೆನ್ನಲೇ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಸಂಘಟನೆ ವಿರುದ್ಧ ಪ್ರಕರಣ ದಾಖಲಾಗಿದೆ.

    ಜಡ್ಜ್‌ಗೆ ಬೆದರಿಕೆ ಹಾಕಿದ ಸಂಬಂಧ ತನಿಖೆ ನಡೆಸುವಂತೆ ಒತ್ತಾಯಿಸಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಿಗೆ ಸಾಮಾಜಿಕ ಕಾರ್ಯಕರ್ತ ಗಿರೀಶ್‌ ಭಾರದ್ವಾಜ್‌ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಳೆಯ ಘಟನೆ ರಿವೀಲ್ – ಬೆಂಗಳೂರಿನಲ್ಲಿ ಕಾಶ್ಮೀರ ಭವನಕ್ಕೆ ಬೆಂಕಿ ಹಚ್ಚಿ ಅಡ್ಡಿ

    ತೌಹೀದ್‌ ಜಮಾತ್‌ ಸಂಘಟನೆಯ ಮುಖಂಡ ಆರ್‌.ರೆಹ್ಮತ್‌ವುಲ್ಲಾ ಮಧುರೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹಿಜಬ್‌ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿ ಪರೋಕ್ಷವಾಗಿ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಈ ವಿಡಿಯೋ ಆಧಾರಿಸಿ ವಕೀಲ, ಸುಧಾ ಕಟ್ವ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್‌ 506(ಬೆದರಿಕೆ), 501(1)(ಮಾನಹಾನಿ), 503(ಕ್ರಿಮಿನಲ್‌ ಬೆದರಿಕೆ), 109(ಪ್ರಚೋದನೆ), 504(ಶಾಂತಿ ಭಂಗ), 505(ಸಾರ್ವಜನಿಕ ಕಿಡಿಗೇಡಿತನ) ಸೇರಿದಂತೆ ವಿವಿಧ ಸೆಕ್ಷನ್‌ಗಳಲ್ಲಿ ಎಫ್‌ಐಆರ್‌ ದಾಖಲಾಗಿದೆ. ಈ ಪ್ರಕರಣ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಜಪಾನ್ 3.2 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ: ಮೋದಿ

    ಗಿರೀಶ್‌ ಪತ್ರದಲ್ಲಿ ಏನಿದೆ:
    ತೌಹೀದ್‌ ಜಮಾತ್‌ ಸಂಘಟನೆಯ ಮುಖಂಡ ಆರ್‌.ರಹ್ಮತ್‌ವುಲ್ಲಾ ಅವರು, ಸಾರ್ವಜನಿಕ ಭಾಷಣದಲ್ಲಿ ಹಿಜಬ್‌ ಕುರಿತು ತೀರ್ಪು ನೀಡಿರುವ ‘ ಅವರೇ ನೇರ ಹೊಣೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆ ನಾಯಕರು ತೀರ್ಪು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.

    ಹೊಸಪೇಟೆಯಲ್ಲಿ ಹಿಜಬ್‌ ಧರಿಸುವುದನ್ನು ಸಮರ್ಥಿಸಿ ಗೋಡೆಗಳ ಮೇಲೆ ಬರಹಗಳನ್ನು ಬರೆಯಲಾಗಿದೆ. ಅಮೀರ್‌- ಇ-ಶರಿತ್‌ ಎಂಬ ಸಂಘಟನೆ ತೀರ್ಪು ಖಂಡಿಸಿ ಬಂದ್‌ಗೆ ಕರೆ ನೀಡಿದೆ. ಈ ಎಲ್ಲ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

  • ಹಿಜಬ್ ವಿಚಾರದಲ್ಲಿ ಗಲಾಟೆ- ವಿದ್ಯಾರ್ಥಿಗೆ ಕೊಲೆ ಬೆದರಿಕೆ

    ಹಿಜಬ್ ವಿಚಾರದಲ್ಲಿ ಗಲಾಟೆ- ವಿದ್ಯಾರ್ಥಿಗೆ ಕೊಲೆ ಬೆದರಿಕೆ

    ಮಂಗಳೂರು: ಹಿಜಬ್ ವಿಚಾರಕ್ಕೆ ಸಂಬಂಧಿಸಿ ನಡೆದ ಗಲಾಟೆಯಲ್ಲಿ ಎಬಿವಿಪಿ ವಿದ್ಯಾರ್ಥಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮಂಗಳೂರಿನ ರಥಬೀದಿ ದಯಾನಂದ ಪೈ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ ಸಾಯಿ ಸಂದೇಶ್‍ಗೆ ಬೆದರಿಕೆ ಹಾಕಿದ್ದಾರೆ. ಹಿಜಬ್ ವಿಚಾರವಾಗಿ ಶುಕ್ರವಾರ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಪರೀಕ್ಷೆಗೆ ಹಾಜರಾಗಲು ಹಿಜಬ್ ಧರಿಸಿ ಬಂದ ವೇಳೆ ಸಾಯಿ ಸಂದೇಶ್ ಮತ್ತು ಕೆಲ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.

    ಈ ವೇಳೆ ಸಾಯಿ ಸಂದೇಶ್‍ಗೆ ವಿದ್ಯಾರ್ಥಿನಿಯೊಬ್ಬರು ಕಾಲೇಜ್ ನಿನ್ನ ಅಪ್ಪಂದಾ ಎಂದು ಪ್ರಶ್ನಿಸಿದ್ದರು. ಈ ವೀಡಿಯೋ ಸಾಮಾಜಿಕ  ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ಬೆನ್ನಲ್ಲೇ ಎಬಿವಿಪಿ ವಿದ್ಯಾರ್ಥಿ ಸಾಯಿ ಸಂದೇಶ್‍ಗೆ ಕೊಲೆ ಬೆದರಿಕೆಗಳು ಬಂದಿವೆ. ಇದನ್ನೂ ಓದಿ: ಮೇಕೆದಾಟು ಮುಂದಿಟ್ಟುಕೊಂಡು ರಾಷ್ಟ್ರೀಯ ಪಕ್ಷಗಳಿಂದ ಚುನಾವಣಾ ಆಟ: ಹೆಚ್‍ಡಿಕೆ ಕಿಡಿ

    ವಿದೇಶಿ ಕಾಲ್, ಇನ್‍ಸ್ಟಾಗ್ರಾಮ್, ವಾಟ್ಸ್‌ಆಪ್ ಮೂಲಕ ಹತ್ತಾರು ಬೆದರಿಕೆ ಕರೆಗಳು ಬಂದಿವೆ. ನಿನ್ನ ಫುಲ್ ವಿವರ ಸಿಕ್ಕಿದೆ, ಎಲ್ಲಿಂದ ಬರ್ತೀಯಾ, ಎಲ್ಲಿಂದ ಹೋಗ್ತೀಯಾ ಎಂದು ನಮಗೆ ತಿಳಿದಿದೆ. ಒಂದು ವಾರದೊಳಗೆ ನಿನ್ನ ಗೇಮ್ ಫಿನಿಶ್ ಮಾಡುತ್ತೇವೆ. ನೀನು ಜಾಸ್ತಿ ದಿನ ಇರಲ್ಲ, ಜೀವದ ಮೇಲೆ ಆಸೆ ಬಿಟ್ಟು ಬಿಡು ಎಂದು ಸಾಲು ಸಾಲು ಮೆಸೇಜ್ ಮಾಡಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದ ಆಫರ್ ಮುಗಿಯಲಿದೆ, ಬೇಗ ಪೆಟ್ರೋಲ್ ಟ್ಯಾಂಕ್ ಭರ್ತಿ ಮಾಡಿಕೊಳ್ಳಿ: ರಾಹುಲ್ ಗಾಂಧಿ

  • ವಾರದಲ್ಲಿ ಮೂರನೇ ಬಾರಿ ಗೌತಮ್‌ ಗಂಭೀರ್‌ಗೆ ಐಸಿಸ್‌ನಿಂದ ಕೊಲೆ ಬೆದರಿಕೆ

    ವಾರದಲ್ಲಿ ಮೂರನೇ ಬಾರಿ ಗೌತಮ್‌ ಗಂಭೀರ್‌ಗೆ ಐಸಿಸ್‌ನಿಂದ ಕೊಲೆ ಬೆದರಿಕೆ

    ನವದೆಹಲಿ: ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್‌ ಗಂಭೀರ್‌ ಅವರಿಗೆ ಕಳೆದ ಒಂದು ವಾರದಿಂದ ಐಸಿಸ್‌ ಕಾಶ್ಮೀರದಿಂದ ಜೀವ ಬೆದರಿಕೆ ಕರೆಗಳು ಬಂದಿವೆ. ಇಂದು ಕೂಡ ನನಗೆ ಕೊಲೆ ಬೆದರಿಕೆ ಇದೆ ಎಂದು ಪೊಲೀಸ್‌ ಠಾಣೆಗೆ ಗಂಭೀರ್‌ ದೂರು ನೀಡಿದ್ದಾರೆ.

    ನಿಮ್ಮ ದೆಹಲಿ ಪೊಲೀಸರು ಹಾಗೂ ಐಪಿಎಸ್‌ ಅಧಿಕಾರಿ ಶ್ವೇತಾ ಅವರು ನಮ್ಮನ್ನು ಏನೂ ಮಾಡಲು ಆಗುವುದಿಲ್ಲ. ನಿಮ್ಮ ಪೊಲೀಸರ ನಡುವೆಯೇ ನಮ್ಮ ಗೂಢಾಚಾರಿಗಳಿದ್ದಾರೆ. ನಿಮ್ಮ ಬಗ್ಗೆ ಎಲ್ಲಾ ಮಾಹಿತಿಗಳನ್ನು ಕಲೆಹಾಕುತ್ತಿದ್ದೇವೆ ಎಂದು ಗಂಭೀರ್‌ ಅವರ ಇ-ಮೇಲ್‌ಗೆ ಐಸಿಸ್‌ ಕಾಶ್ಮೀರ ಹೆಸರಿನಿಂದ ಬೆದರಿಕೆಯ ಸಂದೇಶ ರವಾನೆಯಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಎಟಿಎಂ ಸೆಕ್ಯೂರಿಟಿ ಹಂತಕರ ಬಂಧನ

    ಒಂದು ವಾರದಲ್ಲಿ ಗೌತಮ್‌ ಗಂಭೀರ್‌ಗೆ ಕೇಳಿಬಂದಿರುವ 3ನೇ ಜೀವ ಬೆದರಿಕೆ ಕರೆ ಇದಾಗಿದೆ. ಇ-ಮೇಲ್‌ಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕಲೆಹಾಕಲಾಗಿದೆ. ಈ ಸಂಬಂಧ ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರು ಗ್ಯಾಂಗ್‌ ರೇಪ್: ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

    ನಿಮ್ಮ ಮತ್ತು ನಿಮ್ಮ ಕುಟುಂಬದವರನ್ನು ಕೊಲ್ಲುತ್ತೇವೆ ಎಂದು ಐಸಿಎಸ್‌ ಕಾಶ್ಮೀರ ಹೆಸರಿನಿಂದ ಗೌತಮ್‌ ಗಂಭೀರ್‌ ಅವರ ಇ-ಮೇಲ್‌ಗೆ ಮಂಗಳವಾರ ಬೆದರಿಕೆ ಸಂದೇಶ ಬಂದಿದೆ ಎಂದು ಗಂಭೀರ್‌ ಅವರ ಕಾರ್ಯದರ್ಶಿ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು, ರಾಜೀಂದರ್‌ ನಗರದಲ್ಲಿರುವ ಗಂಭೀರ್‌ ಮನೆಗೆ ಹೆಚ್ಚಿನ ಭದ್ರತೆಯನ್ನು ಕಲ್ಪಿಸಿದ್ದರು. ಮತ್ತೊಂದು ಬೆದರಿಕೆ ಕರೆಯಲ್ಲಿ, ಗೌತಮ್‌ ಗಂಭೀರ್‌ ಅವರ ನಿವಾಸದ ವೀಡಿಯೋವನ್ನು ಹಾಕಲಾಗಿತ್ತು.

    ಸಂಬಂಧಪಟ್ಟ ಇ-ಮೇಲ್‌ ಖಾತೆ ನಿರ್ವಾಹಕರು ಮತ್ತು ಅವರಿಂದ ಬಂದಿರುವ ಬೆದರಿಕೆ ಸಂದೇಶಗಳನ್ನು ಗೂಗಲ್‌ಗೆ ಕಳುಹಿಸಿರುವ ಇಂಟೆಲಿಜೆನ್ಸ್‌ ಫ್ಯೂಷನ್‌ ಮತ್ತು ಸ್ಟ್ರ್ಯಾಟಜಿ ಆಪರೇಷನ್ಸ್‌ ಯೂನಿಟ್‌ನ ವಿಶೇಷ ಕೋಶವು ಹೆಚ್ಚಿನ ಮಾಹಿತಿ ಕಲೆಹಾಕುವಂತೆ ತಿಳಿಸಿದೆ.

  • ಕೆ.ಎಸ್ ಈಶ್ವರಪ್ಪಗೆ ಜೀವ ಬೆದರಿಕೆ!

    ಕೆ.ಎಸ್ ಈಶ್ವರಪ್ಪಗೆ ಜೀವ ಬೆದರಿಕೆ!

    ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ.

    ಮುಸಲ್ಮಾನರಿಗೆ ಬಿಜೆಪಿ ಟಿಕೆಟ್ ಕೊಡುವುದಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಜೀವ ಬೆದರಿಕೆ ಕರೆ ಬಂದಿದೆ ಎನ್ನಲಾಗುತ್ತಿದೆ. ಕರೆ ಮಾಡಿದ ವ್ಯಕ್ತಿ ಉರ್ದು ಮಿಶ್ರಿತ ಕನ್ನಡದಲ್ಲಿ ಮಾತನಾಡಿದ್ದಾನೆ. ಈ ಸಂಬಂಧ ಈಶ್ವರಪ್ಪ ಅವರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಭಾನುವಾರ ದೂರು ನೀಡಲಿದ್ದಾರೆ.

    ಈಶ್ವರಪ್ಪ ಹೇಳಿದ್ದೇನು?:
    ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಮಾತನಾಡಿದ್ದ ಕೆ.ಎಸ್.ಈಶ್ವರಪ್ಪ ಅವರು, ಮುಸ್ಲಿಮರು ಪಕ್ಷದ ವಿಶ್ವಾಸವನ್ನು ಸಾಧಿಸಬೇಕು. ಆದರೆ ಈ ಬಾರಿ ಅವರಲ್ಲಿ ಅಂತಹ ನಡತೆ ಕಂಡುಬಂದಿಲ್ಲ. ಹೀಗಾಗಿ ಯಾರಿಗೂ ಟಿಕೆಟ್ ನೀಡಿಲ್ಲ. ದೇಶವನ್ನು ಪ್ರೀತಿಸುವ ಮುಸ್ಲಿಮರು ನಮಗೆ ವೋಟ್ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ನಂತರ ಮುಸ್ಲಿಮರು ಹೆಚ್ಚಾಗಿ ಕಾಂಗ್ರೆಸ್ ನಂಬಿಕೊಂಡು ಬಂದಿದ್ದಾರೆ ಎಂದು ಹೇಳಿದ್ದರು.