Tag: Death Rate

  • ಸೋಂಕಿನ ಪ್ರಮಾಣ ಸೊನ್ನೆ ಇದ್ದರೂ, ಡೇತ್ ರೇಟ್‍ನಲ್ಲಿ ಹಾವೇರಿ ಜಿಲ್ಲೆ ನಂಬರ್ 1

    ಸೋಂಕಿನ ಪ್ರಮಾಣ ಸೊನ್ನೆ ಇದ್ದರೂ, ಡೇತ್ ರೇಟ್‍ನಲ್ಲಿ ಹಾವೇರಿ ಜಿಲ್ಲೆ ನಂಬರ್ 1

    ಹಾವೇರಿ: ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ತೀರ ಕಡಿಮೆ ಇದ್ದರೂ, ಕಳೆದ ನಾಲ್ಕು ತಿಂಗಳಿನಿಂದ ಡೇತ್ ರೇಟ್ ಮಾತ್ರ ಕಡಿಮೆಯಾಗಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣದಲ್ಲಿ ನಂಬರ್ 1 ಸ್ಥಾನ ಕಾಯ್ದುಕೊಂಡಿದೆ. ಪ್ರಸ್ತುತ ಡೇತ್ ರೇಟ್ ಶೇ.2.92 ಇದ್ದು, ಸೋಂಕಿನ ಪ್ರಮಾಣ ಕಡಿಮೆ ಆಗಿದೆ.

    ಜಿಲ್ಲೆಯಲ್ಲಿ ಪ್ರತಿದಿನ ಒಂದು, ಎರಡು ಕೇಸ್‍ಗಳು ದಾಖಲಾಗುತ್ತಿದ್ದು, ಒಂದೊಂದು ದಿನ ಯಾವುದೇ ಪಾಸಿಟಿವ್ ಪ್ರಕರಣಗಳು ಬರುವುದಿಲ್ಲ. ಅದ್ರೂ ಸತತ 4 ತಿಂಗಳಿಂದ ಡೆತ್ ರೇಟ್ ಕಡಿಮೆ ಆಗಿಲ್ಲ. ಕೋವಿಡ್ ನಿಂದ ಮೃತ ಪಡುವವರ ಸಂಖ್ಯೆ ಕಡಿಮೆ ಆದರೂ ಶೇಕಡಾವಾರು ಮರಣ ಪ್ರಮಾಣದಲ್ಲಿ ಹಾವೇರಿ ಜಿಲ್ಲೆ ನಂಬರ್ ಒನ್ ಸ್ಥಾನದಲ್ಲಿದೆ. ಹಾವೇರಿಯಲ್ಲಿ ಅತಿ ಹೆಚ್ಚು ಮರಣ ಪ್ರಮಾಣ ಸಂಭವಿಸಿದ ಬಗ್ಗೆ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಇದನ್ನೂ ಓದಿ:ಬಾಲ ಮಂದಿರದಲ್ಲಿದ್ದ 35 ವಿದ್ಯಾರ್ಥಿನಿಯರಿಗೆ ಕೋವಿಡ್ ಪಾಸಿಟಿವ್

    ವೈದ್ಯರು ನಿರಂತರವಾಗಿ ಕೆಲಸ ಮಾಡಿದ್ದು, ಸರಿಯಾದ ಸಮಯಕ್ಕೆ ರೋಗಿಗಳು ಆಸ್ಪತ್ರೆಗೆ ಬಾರದೇ ಇರುವ ಕಾರಣ ಹಾಗೂ ಆಕ್ಸಿಜನ್ ಸಮಸ್ಯೆಯಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ತಜ್ಞರ ಸಮಿತಿ ವರದಿ ಸಲ್ಲಿಸಿದೆ. ಇದನ್ನೂ ಓದಿ:ರೋಹಿಣಿ ಸಿಂಧೂರಿ ವಿರುದ್ಧ ಭ್ರಷ್ಟಾಚಾರ ಆರೋಪ – ಚರ್ಚೆಗೆ ಆಗ್ರಹಿಸಿ ಸಾರಾ ಮಹೇಶ್ ಪ್ರತಿಭಟನೆ

    ಇದುವರೆಗೂ ವರದಿ ಕುರಿತು ನಿರ್ಲಕ್ಷ್ಯ ತೋರಿದವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸದ್ಯ ಡೇತ್ ರೇಟ್ ಶೇ.2.92 ಇದೆ. ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಸದ್ಯ ಸಾವಿನ ಪ್ರಮಾಣ ಕಡಿಮೆ ಇದೆ. ಹಿಂದೆ ಅವಧಿಯಲ್ಲಿ ಹೆಚ್ಚು ಸಾವಿನ ಪ್ರಮಾಣವಾಗಿತ್ತು. ಸದ್ಯ ಹಾವೇರಿ ಜಿಲ್ಲೆ ಸಂಖ್ಯೆ ಲೆಕ್ಕಾಚಾರ ಪ್ರಕಾರ ನಂಬರ್ 1 ಇದೆ. ಮೂರನೇ ಅಲೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಆಕ್ಸಿಜನ್ ಘಟಕ ಹಾಗೂ ವೈದ್ಯರ ನೇಮಕ ಮಾಡಿಕೊಂಡಿದ್ದೇವೆ. ಈಗ ಯಾವುದೇ ಸಾವಿನ ಪ್ರಮಾಣ ಹೆಚ್ಚಿಲ್ಲ. ಸೋಂಕಿನ ಪ್ರಮಾಣದ ಸಹ ಕಡಿಮೆ ಆಗಿದೆ ಎಂದು ತಿಳಿಸಿದ್ದಾರೆ.

  • ಮೈಸೂರಲ್ಲಿ ಕೊರೊನಾ ಡೆತ್ ರೇಟ್ ಹೆಚ್ಚಾಗೋಕೆ ಕಾರಣ ತಿಳಿಸಿದ ಡಿಸಿ ಬಗಾದಿ ಗೌತಮ್

    ಮೈಸೂರಲ್ಲಿ ಕೊರೊನಾ ಡೆತ್ ರೇಟ್ ಹೆಚ್ಚಾಗೋಕೆ ಕಾರಣ ತಿಳಿಸಿದ ಡಿಸಿ ಬಗಾದಿ ಗೌತಮ್

    ಮೈಸೂರು: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸಾವು ಹೆಚ್ಚಳದ ವಿಚಾರದ ಬಗ್ಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ವಿವರವಾದ ಸ್ಪಷ್ಟನೆ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ಡೆತ್ ಜಾಸ್ತಿಯಾಗಿರುವುದರ ಕಾರಣ ತಿಳಿಸಿದ್ದಾರೆ.

    ಈ ಕುರಿತು ವಿವರಿಸಿದರುವ ಅವರು, ಸಿಟಿ ಸ್ಕ್ಯಾನ್‍ನಲ್ಲಿ ಕೋವಿಡ್ ಪಾಸಿಟಿವ್ ಲಕ್ಷಣವಿದ್ದರೆ ರಿಪೋರ್ಟ್ ಮಾಡುವುದನ್ನು ಈಗ ಸ್ಟಾಪ್ ಮಾಡಿದ್ದೇವೆ. ಅಲ್ಲದೆ ಆರ್‍ಟಿಪಿಸಿಆರ್ ಟೆಸ್ಟ್ ಜಾಸ್ತಿ ಮಾಡುತ್ತಿದ್ದೇವೆ. ಹೀಗಾಗಿ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲ ಕೊರೊನಾ ಡೆತ್ ಗಳ ಸಂಖ್ಯೆ ಸಿಗಬೇಕು ಎಂಬ ಉದ್ದೇಶದಿಂದ ಡಿಸ್‍ಚಾರ್ಜ್ ಆದ ನಂತರ ಕೆಲವರು ಡೆತ್ ಆಗುತ್ತಿದ್ದಾರೆ. ಇದರ ಸಂಖ್ಯೆಯನ್ನು ಸಹ ಕೊಡಲಾಗುತ್ತಿದೆ ಎಂದು ವಿವರಿಸಿದರು.

    ಟೆಸ್ಟ್ ಗೆ ಕೊಟ್ಟು ವರದಿಗೆ ಮುನ್ನ ಸತ್ತವರ ಸಂಖ್ಯೆ ಕೂಡ ಕಯಾಜ್ ಮೂಲಕ ಸೇರಿಸುತ್ತಿದ್ದೇವೆ. ಗ್ರಾಮೀಣ ಭಾಗದ ಆಸ್ಪತ್ರೆಯಲ್ಲಿ ತಡವಾಗಿ ಬೆಳಕಿಗೆ ಬರುವ ಡೆತ್ ಪ್ರಕರಣಗಳನ್ನೂ ಲೀಸ್ಟ್‍ಗೆ ಸೇರಿಸುತ್ತಿದ್ದೇವೆ. ಈ ಎಲ್ಲ ಕಾರಣಗಳಿಂದ ಡೆತ್ ರೇಟ್ ಜಾಸ್ತಿ ಆಗಿದೆ.

    ಅಲ್ಲದೆ ಮೈಸೂರಿನಲ್ಲಿ ಡೆತ್‍ರೇಟ್ ಹೆಚ್ಚದೆಯೇ ಹೊರತು ಡೆತ್ ಹೆಚ್ಚಾಗಿಲ್ಲ. ಸಂಖ್ಯೆ ನೋಡಿ ಜನರು ಗಾಬರಿ ಆಗುವುದು ಬೇಡ. ಈ ವರೆಗೆ ಡೆತ್ ಡಾಟಾವನ್ನು ಸಂಪೂರ್ಣವಾಗಿ ಮಾಡಿಲ್ಲ. ಒಂದು ತಿಂಗಳಿನಿಂದ ಮಾಡುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದರು. ಡಿಸಿ ಸ್ಪಷ್ಟನೆ ವೇಳೆ ಮಧ್ಯೆ ಪ್ರವೇಶ ಮಾಡಿದ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಾವಿನ ಸಂಖ್ಯೆಯನ್ನು ಜಿಲ್ಲಾಡಳಿತ ಮುಚ್ಚಿಡುವುದಿಲ್ಲ. ಇದರಲ್ಲಿ ಬ್ಲಾಕ್ ಅಂಡ್ ವೈಟ್ ಯಾವುದೂ ಇಲ್ಲ, ಎಲ್ಲ ವೈಟ್ ಎಂದು ತಿಳಿಸಿದರು.

  • ಕೊರೊನಾ ಆರ್ಭಟದ ನಡುವೆಯೂ ಕರುನಾಡಿಗೆ ಗುಡ್ ನ್ಯೂಸ್

    ಕೊರೊನಾ ಆರ್ಭಟದ ನಡುವೆಯೂ ಕರುನಾಡಿಗೆ ಗುಡ್ ನ್ಯೂಸ್

    – ಸೋಂಕು ಹೆಚ್ಚುತ್ತಿದ್ರೂ, ಮರಣ ಪ್ರಮಾಣ ದರ ಕುಸಿತ

    ಬೆಂಗಳೂರು: ಕರ್ನಾಟಕದಲ್ಲಿ ಆರ್ಭಟ ಮುಂದುವರಿದಿದೆ. ಆದರೆ ಕೊರೊನಾ ಆರ್ಭಟದ ನಡುವೆಯೂ ರಾಜ್ಯದಲ್ಲಿ ಮರಣ ಪ್ರಮಾಣ ದರ ಶೇಕಡಾ 4 ಪಟ್ಟು ಕುಸಿತಗೊಂಡಿದೆ.

    ರಾಜ್ಯದಲ್ಲಿ ಪ್ರತಿದಿನ 20, 30, 40 ಇರುತ್ತಿದ್ದ ಕೊರೊನಾ ಸಾವು ದಿಢೀರ್ ಇಳಿಮುಖವಾಗಿದೆ. ನಿನ್ನೆ ಕೊರೊನಾ ಸೋಂಕಿನಿಂದ 68 ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ನಿನ್ನೆ ಬೆಂಗಳೂರಿನಲ್ಲಿ ಕೋವಿಡ್‍ಗೆ ಬಲಿಯಾದವರು ಕೇವಲ ಐವರು ಬಲಿಯಾಗಿದ್ದಾರೆ. ಕೋವಿಡ್ ಸೋಂಕು ಹೆಚ್ಚುತ್ತಿದ್ದರು ಸಾವಿನ ಪ್ರಮಾಣ ಇಳಿಕೆಯಾಗಿದೆ. ರಾಜ್ಯದಲ್ಲಿ ಇದುವರೆಗೂ 4,683 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ಸಾವಿನ ಪ್ರಮಾಣ ಇಳಿಮುಖವಾಗಲು ಪ್ರಮುಖ ಕಾರಣಗಳಿದ್ದು, ಫೀವರ್ ಕ್ಲಿನಿಕ್‍ಗಳಲ್ಲಿ ರ್ಯಾಪಿಡ್ ಟೆಸ್ಟ್ ಹೆಚ್ಚಳ ಮಾಡಲಾಗಿದೆ. ಆರ್‍ಟಿಪಿಸಿ, ಆಂಟಿಜೆನ್ ಟೆಸ್ಟಿಂಗ್ ಹೆಚ್ಚಳವಾಗಿದೆ. ಪ್ರಥಮ, ದ್ವಿತೀಯ ಹಂತದ ಸೋಂಕಿತರು ಹಾಗೂ ಐಎಲ್‍ಐ, ಸಾರಿ ಪ್ರಕರಣ ಮೊದಲೇ ಪತ್ತೆ ಹಚ್ಚಿ ಮುಂಜಾಗ್ರತೆ ವಹಿಸಲಾಗುತ್ತಿದೆ. ಆಂಬುಲೆನ್ಸ್, ಆಸ್ಪತ್ರೆ ಬೆಡ್ ಸಮಸ್ಯೆ ಸ್ವಲ್ಪಮಟ್ಟಿಗೆ ಕಡಿಮೆ ಆಗಿದ್ದು, ಜನರಲ್ಲಿ ಕೊರೊನಾ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಿದೆ. ಈ ಕಾರಣಗಳಿಂದ ರಾಜ್ಯದಲ್ಲಿ ಸಾವಿನ ಪ್ರಮಾಣ ಇಳಿಕೆ ಮುಖವಾಗಿದೆ ಎಂದು ಕೊರೊನಾ ಟಾಸ್ಕ್ ಪೋರ್ಸ್ ಸದಸ್ಯರಾದ ಡಾ.ಗಿರಿಧರ್ ಬಾಬು ಅವರು ಅಭಿಪ್ರಾಯಪಟ್ಟಿದ್ದಾರೆ.

    ಉಳಿದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.67.7 ರಷ್ಟಿದ್ದು, ಕಳೆದ 15 ದಿನಗಳಿಂದ ಪಾಸಿಟಿವ್ ಪ್ರಮಾಣ 14.4 ರಷ್ಟು ಹೆಚ್ಚಾಗಿದ್ದರೆ, ಕಳೆದ ಮೂರು ದಿನಗಳಲ್ಲಿ 13.8 ರಷ್ಟಿದೆ. ಆದರೆ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ 21 ದಿನಗಳ ಸರಾಸರಿ ಅವಧಿಯಲ್ಲಿ ಡಬಲ್ ಆಗುತ್ತಿದ್ದು, ದೇಶದಲ್ಲಿ 26 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.