Tag: death publictv

  • 15 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಆನೆ ದಾಳಿಗೆ ಬಲಿ

    15 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಆನೆ ದಾಳಿಗೆ ಬಲಿ

    ಮಂಡ್ಯ: ಆನೆ ದಾಳಿಗೆ ಕರ್ತವ್ಯ ನಿರತ ಅರಣ್ಯ ಇಲಾಖೆಯ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಸೋಲಬ ಗ್ರಾಮದಲ್ಲಿ ನಡೆದಿದೆ.

    35 ವರ್ಷದ ಮಹದೇವು ಸಾವನ್ನಪ್ಪಿದ ಅರಣ್ಯ ಇಲಾಖೆಯ ಸಿಬ್ಬಂದಿ. ಮಹದೇವು ಅವರು ಕಳೆದ 15 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ವಾಚ್‍ಮನ್ ಆಗಿ ಕೆಲಸ ಮಾಡಿಕೊಂಡಿದ್ದರು. ಇಂದು ಬೆಳಗಿನ ಜಾವ ಸುಮಾರು 4 ಗಂಟೆಗೆ ಕಾಡಿನಿಂದ ಗ್ರಾಮದತ್ತ ಆನೆಗಳು ಬರುತ್ತಿದ್ದವು.

    ವಿಷಯ ತಿಳಿದು ಗ್ರಾಮದತ್ತ ಬರುತ್ತಿದ್ದ ಆನೆಗಳನ್ನು ಕಾಡಿಗಟ್ಟಲು ಸ್ಥಳಕ್ಕೆ ನಾಲ್ವರು ಅರಣ್ಯ ಸಿಬ್ಬಂದಿ ತೆರಳಿದ್ದರು. ಕತ್ತಲೆಯಲ್ಲಿ ಮಹದೇವು ಆನೆಯ ಬಳಿಯೇ ಹೋಗಿದ್ದಾರೆ. ಈ ವೇಳೆ ಆನೆ ಸೊಂಡಿಲಿನಿಂದ ಬಡಿದು ಮಹದೇವು ಅವರನ್ನು ಸಾಯಿಸಿದೆ.

    ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಅಕ್ರಮವಾಗಿ ಮರಳು ತುಂಬುವಾಗ ದಿಬ್ಬ ಕುಸಿದು ಮೂವರು ಸಾವು

    ಅಕ್ರಮವಾಗಿ ಮರಳು ತುಂಬುವಾಗ ದಿಬ್ಬ ಕುಸಿದು ಮೂವರು ಸಾವು

    ಚಿಕ್ಕಮಗಳೂರು: ಮಧ್ಯರಾತ್ರಿ ಅಕ್ರಮವಾಗಿ ಮರಳು ತುಂಬುವಾಗ ದಿಬ್ಬ ಕುಸಿದು ಮೂವರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ರಂಗಾಪುರದಲ್ಲಿ ನಡೆದಿದೆ.

    ಮೃತರನ್ನ ತಾಲೂಕಿನ ಗೇರಮರಡಿ ನಿವಾಸಿಗಳಾದ 23-24ರ ಹರೆಯದ ಮಂಜುನಾಥ್, ನವೀನ್ ಹಾಗೂ ಅರುಣ್ ಎಂದು ಗುರುತಿಸಲಾಗಿದೆ. ಮೃತರು ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿದ್ದು ತರೀಕೆರೆಗೆ ಬಂದು ವಾಸವಿದ್ದರು.

    ಬುಧವಾರ ಮಧ್ಯರಾತ್ರಿ ರಂಗಾಪರುದ ಬಳಿ ಒಣಗಿದ ಕೆರೆಯೊಂದರಲ್ಲಿ ಎಂಟು ಜನರ ತಂಡ ಬಂದಿದ್ದು, ಟ್ರ್ಯಾಕ್ಟರ್ ನಲ್ಲಿ ಮರಳು ತೆಗೆಯುವಾಗ ಈ ಅವಘಡ ನಡೆದಿದೆ. ಎಲ್ಲರ ಮೇಲೂ ದಿಬ್ಬ ಕುಸಿದಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಇಬ್ಬರ ಸ್ಥಿತಿ ಗಂಭೀರಗೊಂಡಿದ್ದು ತರೀಕೆರೆ ಸರ್ಕಾರ ಆಸ್ಪತ್ರೆಗೆ ದಾಖಲಿದ್ದಾರೆ.

    ಪ್ರಕರಣ ದಾಖಲಿಸಿಕೊಂಡು ಟ್ರ್ಯಾಕ್ಟರ್ ವಶಪಡಿಸಿಕೊಂಡಿರೋ ಪೊಲೀಸರು ತಲೆಮರೆಸಿಕೊಂಡಿರೋ ಟ್ರ್ಯಾಕ್ಟರ್ ಮಾಲೀಕ ರವಿ ಹಾಗೂ ಅಕ್ರಮ ಮರಳುಗಾರಿಕೆ ನಡೆಸ್ತಿದ್ದ ಆನಂದ್ ಎಂಬುವರಿಗೆ ಹುಡುಕಾಟ ನಡೆಸ್ತಿದ್ದಾರೆ.

    https://www.youtube.com/watch?v=EKT3RKZSloM