Tag: death certificate

  • ಕಾಲ್ತುಳಿತ ಪ್ರಕರಣ – ಮರಣೋತ್ತರ ಪರೀಕ್ಷೆ ನಡೆಸದೇ ಯುಪಿ ಸರ್ಕಾರದಿಂದ ಡೆತ್ ಸರ್ಟಿಫಿಕೇಟ್

    ಕಾಲ್ತುಳಿತ ಪ್ರಕರಣ – ಮರಣೋತ್ತರ ಪರೀಕ್ಷೆ ನಡೆಸದೇ ಯುಪಿ ಸರ್ಕಾರದಿಂದ ಡೆತ್ ಸರ್ಟಿಫಿಕೇಟ್

    ಬೆಳಗಾವಿ: ಪ್ರಯಾಗ್‌ರಾಜ್ ಕಾಲ್ತುಳಿತದಲ್ಲಿ (Prayagraj Stampede) ಬೆಳಗಾವಿ ಮೂಲದ ನಾಲ್ವರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ನಡೆಸದೇ ಡೆತ್ ಸರ್ಟಿಫಿಕೇಟ್ (Death Certificate) ನೀಡಿದ ಯುಪಿ ಸರ್ಕಾರ ಎನ್ನುವ ಪ್ರಶ್ನೆ ಮೂಡಿದೆ.

    ಬೆಳಗಾವಿಯ ಮೃತ ನಾಲ್ವರ ಡೆತ್ ಸರ್ಟಿಫಿಕೇಟ್ ಲಭ್ಯವಾಗಿದೆ. ಬೆಳಗಾವಿಯ ಅರುಣ್ ಕೋಪರ್ಡೆ, ಮಹಾದೇವಿ, ಜ್ಯೋತಿ, ಮೇಘಾ ಮೃತಪಟ್ಟಿದ್ದರು.ಮೃತರ ಸಂಬಂಧಿಗಳ ವಾಟ್ಸಪ್ ಗೆ ಡೆತ್ ಸರ್ಟಿಫಿಕೇಟ್ ಬಂದಿದೆ.

    ಸೆಂಟ್ರಲ್ ಹಾಸ್ಪಿಟಲ್ ಪ್ರಯಾಗ್‌ರಾಜ್ ಮಹಾಕುಂಭ ಹೆಸರಿನಲ್ಲಿ ಸರ್ಟಿಫಿಕೇಟ್ ಬಂದಿದೆ. ಮರಣೋತ್ತರ ಪರೀಕ್ಷೆ ನಡೆಸದೇ ಡೆತ್ ಸರ್ಟಿಫಿಕೇಟ್ ನೀಡಿತಾ ಯುಪಿ ಸರ್ಕಾರ ಎನ್ನುವ ಪ್ರಶ್ನೆ ಮೂಡಿದೆ.

    ಬೆಳಗಾವಿಯಲ್ಲಿ ಜಿಲ್ಲಾಡಳಿತದಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. 4 ಜನರ ಮರಣೋತ್ತರ ಪರೀಕ್ಷೆ ನಡೆಸಿ ಬಳಿಮ ಶವ ಹಸ್ತಾಂತರವನ್ನ ಬೆಳಗಾವಿ ಜಿಲ್ಲಾಡಳಿತ ಮಾಡಿತ್ತು.

  • ಬದುಕಿರುವಾಗಲೇ ರೈತನಿಗೆ ಮರಣ ಪ್ರಮಾಣ ಪತ್ರ – ಗ್ರಾಮ ಲೆಕ್ಕಿಗ ಅಮಾನತು

    ಬದುಕಿರುವಾಗಲೇ ರೈತನಿಗೆ ಮರಣ ಪ್ರಮಾಣ ಪತ್ರ – ಗ್ರಾಮ ಲೆಕ್ಕಿಗ ಅಮಾನತು

    ಕೋಲಾರ: ಬದುಕಿರುವಾಗಲೇ ರೈತನ ಮರಣ ಪ್ರಮಾಣ ಪತ್ರ ನೀಡಿದ್ದ ಗ್ರಾಮ ಲೆಕ್ಕಿಗನನ್ನು ಅಮಾನತು ಮಾಡುವಂತೆ ಕೋಲಾರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.

    ಮುಳಬಾಗಿಲು ತಾಲೂಕಿನ ರೈತನೊರ್ವನಿಗೆ ಗ್ರಾಮ ಲೆಕ್ಕಿಗ ಬದುಕಿರುವಾಗಲೇ ಮರಣ ಪ್ರಮಾಣ ಪತ್ರ ನೀಡಿದ್ದ. ಈ ಸಂಬಂಧ ಕೋಲಾರ ಸಹಾಯಕ ಕಮೀಷನರ್ ಪ್ರಕಾಶ್ ಮೀನಾ ತನಿಖೆ ನಡೆಸಿದ್ದರು. ಇದನ್ನು ಆಧಾರಿಸಿ ಮುಳಬಾಗಿಲು ತಾಲೂಕಿನ ಕಸಬಾ ಹೋಬಳಿ ಮಾರಾಂಡಹಳ್ಳಿ ಗ್ರಾಮದಲ್ಲಿ ಗ್ರಾಮ ಲೆಕ್ಕಿಗನಾಗಿದ್ದ ಹಾಗೂ ಪ್ರಸ್ತುತ ಮುಳಬಾಗಿಲು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಅರವಿಂದ್‌ನನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕಿಂಗ್‍ಪಿನ್ ಅರೆಸ್ಟ್ 

    ನಡೆದಿದ್ದೇನು?
    ಅರವಿಂದ್ 2021ರ ಜೂನ್ 2 ರಂದು ರೈತ ಶಿವರಾಜ್‍ ಅವರಿಗೆ ಮರಣ ಪ್ರಮಾಣ ಪತ್ರ ನೀಡಿದ್ದ. ಅಷ್ಟೇ ಅಲ್ಲದೆ ಅರವಿಂದ್‌, ಶಿವರಾಜ್‌ ಅವರ ಮರಣ ಪ್ರಮಾಣ ಪತ್ರವನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿ ಅವಮಾನ ಮಾಡಿದ್ದ. ಈ ಹಿನ್ನೆಲೆ ಶಿವರಾಜ್ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಅರವಿಂದ್ ವಿರುದ್ಧ ದೂರು ಕೊಟ್ಟಿದ್ದರು.

  • ಬದುಕಿರುವಾಗಲೇ ರೈತನಿಗೆ ಕೊಟ್ರು ಮರಣ ಪ್ರಮಾಣ ಪತ್ರ – ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

    ಬದುಕಿರುವಾಗಲೇ ರೈತನಿಗೆ ಕೊಟ್ರು ಮರಣ ಪ್ರಮಾಣ ಪತ್ರ – ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

    ಕೋಲಾರ: ವ್ಯಕ್ತಿ ಮೃತಪಟ್ಟು ಎಷ್ಟೋ ತಿಂಗಳ ನಂತರ ಅವರು ಕೋವಿಡ್‌ ಲಸಿಕೆ ಪಡೆದುಕೊಂಡಿದ್ದಾರೆ ಎಂಬ ಸಂದೇಶ, ಪ್ರಮಾಣ ಪತ್ರಗಳು ಬಂದಿರುವ ಸುದ್ದಿಗಳನ್ನು ಓದಿದ್ದೇವೆ. ಅದರೆ ಬದುಕಿರುವ ವ್ಯಕ್ತಿಗೇ ಮರಣ ಪ್ರಮಾಣ ಪತ್ರ ನೀಡಿರುವ ಅಚ್ಚರಿದಾಯಕ ಪ್ರಸಂಗ ಕೋಲಾರದಲ್ಲಿ ನಡೆದಿದೆ.

    ಹೌದು, ಜೀವಂತವಾಗಿರುವ ರೈತನೊಬ್ಬನಿಗೆ ಮರಣ ಪ್ರಮಾಣ ಪತ್ರ ನೀಡುವ ಮೂಲಕ ಕೋಲಾರ ಕಂದಾಯ ಇಲಾಖೆ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ. ತಾನು ಬದುಕಿದ್ದಾಗಲೇ ಮರಣ ಪ್ರಮಾಣ ಪತ್ರ ಬಂದಿರುವುದನ್ನು ಕಂಡು ರೈತ ಅಚ್ಚರಿಗೆ ಒಳಗಾಗಿದ್ದಾರೆ. ಇದನ್ನೂ ಓದಿ: ಸಂಪೂರ್ಣವಾಗಿ ನೋವು ಹೇಳಿಕೊಳ್ಳೋ ಸ್ಥಿತಿಯಲ್ಲಿಲ್ಲ, ಅದರೊಂದಿಗೆ ಬದುಕ್ತಿದ್ದೇವೆ: ಅಪ್ಪು ನೆನೆದ ಶಿವಣ್ಣ

    ಜಿಲ್ಲೆಯ ಮುಳಬಾಗಿಲು ತಾಲೂಕಿನ ಎಂ.ಹೊಸಹಳ್ಳಿ ಗ್ರಾಮದ ರೈತ ಶಿವರಾಜ್‌ (40) ಅವರಿಗೆ ಬದುಕಿರುವಾಗಲೇ ಅಧಿಕಾರಿಗಳು ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಇದರಿಂದ ಶಾಕ್‌ ಆದ ರೈತ, ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ಲದೇ ಹಿಂದಿನ ತಹಶಿಲ್ದಾರ್‌ ಆಗಿದ್ದ ಜಿ.ರಾಜಶೇಖರ್ ಹಾಗೂ ಗ್ರಾಮ ಲೆಕ್ಕಿಗ ಅರವಿಂದ, ಕಂದಾಯ ನಿರೀಕ್ಷಿಕ ಸಾದತ್ ವುಲ್ಲಾ ಖಾನ್, ನಾಡಕಚೇರಿ ಶಿರೇಸ್ತೆದಾರ್ ಜಯರಾಂ ವಿರುದ್ಧ ಮುಳಬಾಗಿಲು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಪಡಿತರ ಚೀಟಿಯಲಿ ಹೆಸರು ತೆಗೆದು ಹಾಕಲಾಗಿತ್ತು. ಈ ವೇಳೆ ಸಂಬಂಧಿಕರು ಪರಿಶೀಲನೆ ನಡೆಸಿದಾಗ ಮರಣ ಪ್ರಮಾಣ ಪತ್ರ ನೀಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಮರಣ ಪ್ರಮಾಣ ಪತ್ರವನ್ನು ಅಂಗನವಾಡಿ ಕಟ್ಟಡ, ಲೋಕೋಪಯೋಗಿ ಇಲಾಖೆ ಕಟ್ಟಡ, ತಹಶಿಲ್ದಾರ್ ಕಚೇರಿ ಸೇರಿದಂತೆ ಹಲವೆಡೆ ಅಂಟಿಸಿ ಪಡಿತರ ಚೀಟಿಯಲ್ಲೂ ಹೆಸರನ್ನೂ ತೆಗೆದು ಹಾಕಲಾಗಿದೆ. ಪಡಿತರಕ್ಕೆ ತೆರಳಿದ ಶಿವರಾಜ್‌ಗೆ, ನೀನು ಮರಣ ಹೊಂದಿರುವುದಾಗಿ ಇಲ್ಲಿ ಉಲ್ಲೇಖ ಆಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಶಾಕ್‌ ಆದ ರೈತ ಬಳಿಕ ತಾಲೂಕು ಕಚೇರಿಯಲ್ಲಿ ವಿಚಾರಣೆ ಮಾಡಲಾಗಿ ಮರಣ ಪ್ರಮಾಣ ಪತ್ರದ ಗೋಲ್ ಮಾಲ್ ಬೆಳಕಿಗೆ ಬಂದಿದೆ. ಇದನ್ನೂ ಓದಿ: ವಿಕಲಚೇತನ ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ASI ಅಮಾನತು

    ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗಿದೆ. ಜಮೀನು ಲಪಾಟಿಯಿಸುವ ಉದ್ದೇಶ ಇರಬಹುದು ಎಂದು ರೈತ ಶಿವರಾಜ್‌ ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಸರ್ಕಾರ, ಲೋಕಾಯುಕ್ತಕ್ಕೆ ಹೋದರೂ ಪ್ರಯೋಜನವಾಗಿಲ್ಲ. ಆದ್ದರಿಂದ ನ್ಯಾಯಾಲಯದ ಮೋರೆ ಹೋಗಿದ್ದರು.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕಾಸು ಕೊಟ್ರೆ ಡೆತ್ ಸರ್ಟಿಫಿಕೇಟ್ ಡೀಲ್ ತನಿಖೆಗೆ ಅಶೋಕ್ ಆರ್ಡರ್!

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕಾಸು ಕೊಟ್ರೆ ಡೆತ್ ಸರ್ಟಿಫಿಕೇಟ್ ಡೀಲ್ ತನಿಖೆಗೆ ಅಶೋಕ್ ಆರ್ಡರ್!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿದ್ದ ಡೆತ್ ಸರ್ಟಿಫಿಕೆಟ್ ದಂಧೆಯನ್ನು ಪಬ್ಲಿಕ್ ಟಿವಿ ಸಾಕ್ಷಿ ಸಮೇತ ಬಯಲಿಗೆಳೆದಿದೆ. ಈ ವರದಿ ಬಿಗ್ ಇಂಪ್ಯಾಕ್ಟ್ ಆಗಿದ್ದು, ಪ್ರಕರಣದ ತನಿಖೆ ನಡೆಸುವಂತೆ ಸಚಿವ ಅಶೋಕ್ ಆದೇಶ ನೀಡಿದ್ದಾರೆ.

     ಪಬ್ಲಿಕ್ ಟಿವಿ ಮಂಗಳವಾರ ಬೆಳಗ್ಗೆಯಿಂದ ಪ್ರಸಾರ ಮಾಡಿದ್ದ ಡೆತ್ ಸರ್ಟಿಫಿಕೇಟ್ ಡೀಲ್ ಪ್ರಕರಣ ಬಿಗ್ ಇಂಪ್ಯಾಕ್ಟ್ ಆಗಿದೆ. ಪಬ್ಲಿಕ್ ಟಿವಿ ವರದಿ ನೋಡಿದ ಸಚಿವ ಆರ್.ಅಶೋಕ್ ದಂಧೆಕೋರರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಕೆಲವು ಅಂಬುಲೆನ್ಸ್ ಚಾಲಕರು ಈ ದಂಧೆಯಲ್ಲಿ ಪಾಲ್ಗೊಂಡಿದ್ದಾರೆ. ಕೆಲವು ವೈದ್ಯರು ಶಾಮೀಲಾಗಿದ್ದಾರೆ. ಇವರ ಮೇಲೆ ಕಟ್ಟುನಿಟ್ಟಿನ ಕ್ರಮ ತಗೊಳ್ತಿದ್ದೀವಿ. ಈಗಾಗಲೇ ಕೆಲವರ ವಿರುದ್ಧ ಕ್ರಮ ತಗೊಂಡಿದ್ದೇವೆ. ಸಾರ್ವಜನಿಕರು ಇಂಥ ವಿಚಾರಗಳನ್ನು ಸರ್ಕಾರದ ಗಮನಕ್ಕೆ ತರಬೇಕು. ದಂಧೆಕೋರ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಳ್ಳುವಂತೆ ಸಚಿವ ಆರ್ ಅಶೋಕ್ ಆದೇಶ ನೀಡಿದ್ದಾರೆ.

    ಬಿಬಿಎಂಪಿ ಕಮಿಷನರ್ ಶ್ಲಾಘನೆ!
    ಬೆಂಗಳೂರಿನಲ್ಲಿ ನಡೀತಿದ್ದ ಡೆತ್ ಸರ್ಟಿಫಿಕೇಟ್ ದಂಧೆಯನ್ನು ಬಯಲಿಗೆಳೆದ ಪಬ್ಲಿಕ್ ಟಿವಿ ಕಾರ್ಯಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಶ್ಲಾಘಿಸಿದ್ದಾರೆ. ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ. ವರದಿ ತರಿಸಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    ಸುಬ್ರಮಣ್ಯ ಠಾಣೆಗೆ ದೂರು ನೀಡಿ ಮಾಜಿ ಕಾರ್ಪೊರೇಟರ್!
    ಬದುಕಿರುವಾಗಲೇ ಡೆತ್ ಸರ್ಟಿಫಿಕೇಟ್ ಕೊಟ್ಟಿದ್ದಕ್ಕೆ ಅರಕೆರೆ ವಾರ್ಡ್‍ನ ಮಾಜಿ ಕಾರ್ಪೊರೇಟರ್ ಭಾಗ್ಯಲಕ್ಷ್ಮೀ ಆಘಾತಕ್ಕೊಳಗಾಗಿದ್ದಾರೆ. ನನ್ನ ಹೆಸರಿನ ಮೇಲೆಯೇ ಡೆತ್ ಸರ್ಟಿಫಿಕೆಟ್ ಕೊಟ್ಟಿರೋದು ಅಘಾತ ತಂದಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಅಂತ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಡೆತ್ ಸರ್ಟಿಫಿಕೇಟ್ ದಂಧೆ ವಿಚಾರವಾಗಿ ಸ್ಮಶಾನ ಸಿಬ್ಬಂದಿಯೇ ಅಸಲಿ ಸತ್ಯ ಬಾಯ್ಬಿಟ್ಟಿದ್ದಾರೆ. ನಕಲಿ ವೈದ್ಯನೊಬ್ಬನಿಂದ ಈ ದಂಧೆ ನಡೆಯುತಿತ್ತು. ಹಾಸ್ಪಿಟಲ್ ಕೇರ್ ಹೆಸರು, ಡಾಕ್ಟರ್ ಕಿರಣ್ ಹೆಸರನ್ನು ಬಳಸಿಕೊಂಡು ಡೆತ್ ಸರ್ಟಿಫಿಕೇಟ್ ಕೊಡುತ್ತಿದ್ರು. ಅಂಬುಲೆನ್ಸ್ ಡ್ರೈವರ್‍ಗಳು ತಂದ ಡೆತ್ ಸರ್ಟಿಫಿಕೇಟ್ ಪಡೆಯದಿದ್ದರೆ ಹಲ್ಲೆ ಮಾಡುತ್ತಿದ್ದರು ಎಂದು ಸ್ಮಶಾನದ ಉಸ್ತುವಾರಿ ನಾಗರಾಜ್ ಸತ್ಯ ಬಯಲು ಮಾಡಿದ್ದಾರೆ. ಅಲ್ಲದೇ ಅಂಬುಲೆನ್ಸ್ ಡ್ರೈವರ್‍ಗಳ ದೊಡ್ಡ ಗ್ಯಾಂಗೇ ಈ ದಂಧೆಯಲ್ಲಿ ಶಾಮೀಲಾಗಿದೆ ಎಂದು ಆರೋಪಿಸಿದ್ದಾರೆ.

    ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಂಧೆಕೋರರಿಗೆ ಬಲೆ ಬೀಸಿದ್ದಾರೆ.

  • ಬದುಕಿದ್ದವರ ಹೆಸರಲ್ಲೇ ರೆಡಿಯಾಗುತ್ತೆ ಡೆತ್ ಸರ್ಟಿಫಿಕೇಟ್- ಕೋವಿಡ್ ಬೇಕಾ, ನಾನ್ ಕೋವಿಡ್ ಬೇಕಾ?

    ಬದುಕಿದ್ದವರ ಹೆಸರಲ್ಲೇ ರೆಡಿಯಾಗುತ್ತೆ ಡೆತ್ ಸರ್ಟಿಫಿಕೇಟ್- ಕೋವಿಡ್ ಬೇಕಾ, ನಾನ್ ಕೋವಿಡ್ ಬೇಕಾ?

    – ಬಿಕರಿಗೆ ಇದೆ ಡೆತ್ ಸರ್ಟಿಫಿಕೇಟ್
    – ಆನ್‍ಲೈನ್‍ನಲ್ಲಿ ಆಪಾಯಿನ್‍ಮೆಂಟ್ ಫಿಕ್ಸ್, ಶವ ಸಂಸ್ಕಾರಕ್ಕೆ ಟೈಮೂ ಫಿಕ್ಸ್

    ಬೆಂಗಳೂರು: ಬೆಡ್ ಬ್ಲಾಕಿಂಗ್, ರೆಮ್‍ಡಿಸಿವಿರ್, ಅಂಬುಲೆನ್ಸ್ ದಂಧೆ ಬಳಿಕ ಇದೀಗ ಅಂತ್ಯಸಂಸ್ಕಾರ ಹಾಗೂ ಡೆತ್ ಸರ್ಟಿಫಿಕೇಟ್ ಡೀಲ್ ಬೆಳಕಿಗೆ ಬಂದ್ದಿದ್ದು, ಒಂದು ಡೆತ್ ಸರ್ಟಿಫಿಕೇಟ್ ನೀಡಲು ಬರೋಬ್ಬರಿ 20-30 ಸಾವಿರ ರೂ.ಗಳನ್ನು ಖದೀಮರು ಪೀಕುತ್ತಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್‍ನಲ್ಲಿ ಬಹಿರಂಗವಾಗಿದ್ದು, ನಗರದ ಶ್ರೀರಾಂಪುರದ ಹರಿಶ್ಚಂದ್ರ ಘಾಟ್‍ನಲ್ಲಿ ಹೆಣಗಳ ಮೇಲೆ ಡೀಲಿಂಗ್ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕೋವಿಡ್ ಆಗ್ಲಿ, ನಾನ್ ಕೋವಿಡ್ ಆಗ್ಲಿ ಕಾಸು ಕೊಟ್ರೆ ಶವಕ್ಕೆ ಸಂಸ್ಕಾರ ಮಾಡುತ್ತರೆ. ಹರಿಶ್ಚಂದ್ರ ಘಾಟ್ ಚಿತಾಗಾರದ ಉಸ್ತುವಾರಿ ನಾಗರಾಜ್ ಈ ದಂಧೆ ನಡೆಸುತ್ತಿದ್ದು, ಅಂಬುಲೆನ್ಸ್ ಡ್ರೈವರ್ ಜೊತೆ ಮಾತನಾಡಿಸಿ, ಡೀಲ್ ಕುದುರಿಸುತ್ತಾನೆ. 1 ಶವ ಸಂಸ್ಕಾರಕ್ಕೆ ಖದೀಮರು ಬರೋಬ್ಬರಿ 20-30 ಸಾವಿರ ಹಣ ಪೀಕುತ್ತಾರೆ. ಡೆತ್ ಸರ್ಟಿಫಿಕೆಟ್, ಅಂಬುಲೆನ್ಸ್ ಹಾಗೂ ಶವ ಸಂಸ್ಕಾರ ಜಾಗಕ್ಕೆ ಸೇರಿ ಸಾವಿರಾರು ರೂ. ವಸೂಲಿ ಮಾಡುತ್ತಿದ್ದಾರೆ.

    ಇನ್ನೂ ಅಚ್ಚರಿ ಸಂಗತಿ ಎಂದರೆ ಬದುಕಿದ್ದವರ ಹೆಸರಲ್ಲೇ ಸಾವಿನ ಸರ್ಟಿಫಿಕೇಟ್ ರೆಡಿಯಾಗುತ್ತಿದೆ. ಜೀವಂತವಾಗಿರುವ ಮಾಜಿ ಕಾರ್ಪೊರೇಟರ್ ಹೆಸರಲ್ಲಿ ಇದೀಗ ಡೆತ್ ಸರ್ಟಿಫಿಕೇಟ್ ನೀಡಿದ್ದು, ಬಿಜೆಪಿ ಮಾಜಿ ಮಹಿಳಾ ಕಾರ್ಪೊರೇಟರ್ ಮೇಲೆ ಡೆತ್ ಸರ್ಟಿಫಿಕೇಟ್ ತಯಾರಿಸಲಾಗಿದೆ. ಚಿತಗಾರದ ಸಿಬ್ಬಂದಿ, ಅಂಬುಲೆನ್ಸ್ ಡ್ರೈವರ್ಸ್ ಸೇರಿ ಈ ಮೆಗಾ ಡೀಲಿಂಗ್ ನಡೆಸಿದ್ದಾರೆ. ಆಧಾರ್ ಕಾರ್ಡ್ ತೋರಿಸಿದರೆ ಸಾಕು ಐದೇ ನಿಮಿಷದಲ್ಲಿ ಡೆತ್ ಸರ್ಟಿಫಿಕೇಟ್ ರೆಡಿಯಾಗುತ್ತದೆ. ಖಾಸಗಿ ಆಸ್ಪತ್ರೆ ಜೊತೆ ಸ್ಮಶಾನದ ಸಿಬ್ಬಂದಿ ಡೀಲ್ ಮಾಡಿಕೊಂಡಿದ್ದು, ಖಾಸಗಿ ಆಸ್ಪತ್ರೆಯಿಂದ ನೇರವಾಗಿ ಸ್ಮಶಾನದ ಸಿಬ್ಬಂದಿಗೆ ಡೆತ್ ಸರ್ಟಿಫಿಕೇಟ್ ಸಿಗುತ್ತದೆ. ಅಂಬುಲೆನ್ಸ್ ಡ್ರೈವರೇ ಸಾವಿನ ಸರ್ಟಿಫಿಕೇಟ್ ಕೊಡಿಸುತ್ತಾನೆ.

    ಡೆತ್ ಸರ್ಟಿಫಿಕೇಟ್ ಡೀಲ್ ರೋಚಕವಾಗಿದ್ದು, ಈ ಡಾಕ್ಟರ್ ಡೆಡ್ ಬಾಡಿ ನೋಡದೆ, ಮನೆಗೂ ವಿಸಿಟ್ ಮಾಡದೆ, ಆಧಾರ್ ಕಾರ್ಡ್, ಫೋನ್ ನಂಬರ್ ಕೊಟ್ಟರೆ ಸಾಕು ಬದುಕಿದ್ದವರಿಗೂ ಸುಲಭವಾಗೇ ಡೆತ್ ಸರ್ಟಿಫಿಕೇಟ್ ಕೊಡ್ತಾರೆ. ಸ್ಟಿಂಗ್ ಟೀಮ್ ಜೊತೆ 10 ನಿಮಿಷ ಡೀಲ್ ಟಾಕ್ ನಡೆದಿದ್ದು, ಡೆತ್ ಸರ್ಟಿಫಿಕೇಟ್ ರೆಡಿ, ಎಲ್ಲಿದ್ದೀರಿ? ಬನ್ನಿ ಸರ್ ಬೇಗ ಎಂದು ಹರಿಶ್ಚಂದ್ರ ಘಾಟ್ ಒಳಗೆ ಅಂಬುಲೆನ್ಸ್ ಡ್ರೈವರ್‍ನನ್ನು ಡಾಕ್ಟರ್ ಕರೆಸಿಕೊಂಡಿದ್ದು, ಘೋರಿಗಳ ಮಧ್ಯೆಕ್ಕೆ ಡೆತ್ ಸರ್ಟಿಫಿಕೇಟ್ ನೀಡಿದ್ದಾರೆ.

    ಬಳಿಕ ಬಿಜೆಪಿಯ ಜೀವಂತ ಮಹಿಳಾ ಮಾಜಿ ಕಾರ್ಪೋರೆಟರ್ ಭಾಗ್ಯಲಕ್ಷ್ಮಿ ಅವರ ಡೆತ್ ಸರ್ಟಿಫಿಕೇಟ್ ನ್ನು ಅಂಬುಲೆನ್ಸ್ ಚಾಲಕ ಪಡೆದಿದ್ದಾರೆ. ಸರ್ಟಿಫಿಕೇಟ್ ನಲ್ಲಿ ರಾಜಾಜಿನಗರದ ಹಾಸ್ಪಿಟಲ್ ಕೇರ್ ಎಂಬ ಆಸ್ಪತ್ರೆಯ ಸೀಲ್, ಸಿಗ್ನೆಚರ್ ಇತ್ತು. ಹೀಗಾಗಿ ಡೆತ್ ಸರ್ಟಿಫಿಕೇಟ್ ಕೊಡುವ ಹಾಸ್ಪಿಟಲ್ ಕೇರ್ ಎಂಬ ಖಾಸಗಿ ಆಸ್ಪತ್ರೆಯೂ ಕೂಡ ಈ ಅಕ್ರಮ ದಂಧೆಯಲ್ಲಿ ಭಾಗಿಯಾಗಿದೆಯಾ ಎಂಬ ಅನುಮಾನಗಳು ಕಾಡುತ್ತಿವೆ.

    ಡೆತ್ ಸರ್ಟಿಫಿಕೇಟ್‍ಗೆ ನಿಯಮ ಏನು?
    – ಫಾರ್ಮ್ 4ಎ ಮೂಲಕ ಡೆತ್ ಸರ್ಟಿಫಿಕೇಟ್ ಕೊಡಲು ಹೆಲ್ತ್ ಆಫೀರ್ಸ್‍ಗಳಿಗೆ ಅಧಿಕಾರ (ಮೆಡಿಕಲ್ ಆಫಿಸರ್ ಕೊಡುವ ಪತ್ರ)
    – ಡೆತ್ ಸರ್ಟಿಫಿಕೇಟ್ ಕೊಡುವಾಗ, ಸಾವಿನ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು
    – ಮೃತ ವ್ಯಕ್ತಿಯ ಹಾರ್ಟ್‍ಬೀಟ್, ಪಲ್ಸ್ ರೇಟ್, ಇಸಿಜಿ ಟೆಸ್ಟ್ ಮಾಡ್ಬೇಕು
    – ವ್ಯಕ್ತಿ ಸಾವನ್ನಪ್ಪಿದ್ದರೆ ಕಣ್ಣುಗುಡ್ಡೆ ಅಗಲ ಆಗಿರುತ್ತೆ, ಹಾರ್ಟ್ ಪಲ್ಸ್ ಶೂನ್ಯ ವಾಗಿರುತ್ತೆ, ಇಸಿಜಿ ಟೆಸ್ಟ್‍ನಲ್ಲಿ ಖಾಲಿ (ಫ್ಲಾಟ್ ಲೈನ್ಸ್ ಬಂದಿರುತ್ತೆ) ಖಾತರಿ ಪಡಿಸಿಕೊಳ್ಳಬೇಕು
    – ಈ ಎಲ್ಲಾ ಟೆಸ್ಟ್ ಬಳಿಕವಷ್ಟೇ ಡೆತ್ ಕನ್ಫರ್ಮ್ ಆಗಬೇಕು
    – ಮೃತ ವ್ಯಕ್ತಿಯ ಕುಟುಂಬ, ಆಸ್ಪತ್ರೆಗೆ ಒಂದೊಂದು ಸರ್ಟಿಫಿಕೇಟ್ ರವಾನೆ

  • ‘ನಿನಗೆ ಉಜ್ವಲ ಭವಿಷ್ಯವಿರಲಿ’ – ಮರಣ ಪ್ರಮಾಣ ಪತ್ರದಲ್ಲಿ ವಿಶ್ ಮಾಡಿದ ಊರಿನ ಮುಖ್ಯಸ್ಥ

    ‘ನಿನಗೆ ಉಜ್ವಲ ಭವಿಷ್ಯವಿರಲಿ’ – ಮರಣ ಪ್ರಮಾಣ ಪತ್ರದಲ್ಲಿ ವಿಶ್ ಮಾಡಿದ ಊರಿನ ಮುಖ್ಯಸ್ಥ

    ಲಕ್ನೋ: ಮರಣ ಪ್ರಮಾಣ ಪತ್ರದಲ್ಲಿ ನಿನಗೆ ಉಜ್ವಲ ಭವಿಷ್ಯವಿರಲಿ ಎಂದು ಊರಿನ ಮುಖ್ಯಸ್ಥನೋರ್ವ ಬರೆದಿರುವ ಡೆತ್ ಸರ್ಟಿಫಿಕೇಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಈ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಸಿರ್ವರಿಯಾ ಎಂಬ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದ ವೃದ್ಧ ಲಕ್ಷ್ಮಿ ಶಂಕರ್ ಕಳೆದ ತಿಂಗಳ ಜನವರಿ 22 ರಂದು ದೀರ್ಘಕಾಲದ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದ್ದರು. ಇವರ ಡೆತ್ ಸರ್ಟಿಫಿಕೇಟ್ ನೀಡಿದ ಗ್ರಾಮದ ಮುಖ್ಯಸ್ಥ ನಿನಗೆ ಉಜ್ವಲ ಭವಿಷ್ಯವಿರಲಿ ಎಂದು ಬರೆದ್ದಾನೆ.

    ಲಕ್ಷ್ಮಿ ಶಂಕರ್ ಸಾವಿನ ನಂತರ ಅವರ ಮಗ ಯಾವುದೋ ಅರ್ಥಿಕ ವಹಿವಾಟಿಗೆ ಬೇಕೆಂದು ಮರಣ ಪ್ರಮಾಣ ಪತ್ರ ಪಡೆಯಲು ಗ್ರಾಮದ ಮುಖ್ಯಸ್ಥ ಬಾಬುಲಾಲ್ ಬಳಿ ಹೋಗಿದ್ದಾರೆ. ಈ ವೇಳೆ ಮರಣ ಪ್ರಮಾಣ ಪತ್ರವನ್ನು ಬರೆದುಕೊಟ್ಟಿರುವ ಬಾಬುಲಾಲ್, ಕೊನೆಯುಲ್ಲಿ ನಾನು ಸಾವನ್ನಪ್ಪಿದ ವ್ಯಕ್ತಿಗೆ ಉಜ್ವಲ ಭವಿಷ್ಯವಿರಲಿ ಎಂದು ಬಯಸುತ್ತೇನೆ ಎಂದು ಹಿಂದಿಯಲ್ಲಿ ಬರೆದುಕೊಟ್ಟಿದ್ದಾನೆ.

    ಬಾಬುಲಾಲ್ ಬರೆದುಕೊಟ್ಟಿರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಚಾರವನ್ನು ತಿಳಿದ ಬಾಬುಲಾಲ್ ಮತ್ತೆ ಲಕ್ಷ್ಮಿ ಶಂಕರ್ ಪುತ್ರನನ್ನು ವಾಪಸ್ ಕರೆಸಿ ಕ್ಷೆಮೆ ಕೇಳಿ ಹೊಸ ಮರಣ ಪ್ರಮಾಣ ಪತ್ರವನ್ನು ಬರೆದು ಕೊಟ್ಟುಕಳುಹಿಸಿದ್ದಾನೆ.

  • ಬದುಕಿದ್ದೇನೆಂದು ತಿಳಿಸಲು 3 ವರ್ಷಗಳಿಂದ ಹೋರಾಡುತ್ತಿದ್ದಾನೆ ರೈತ!

    ಬದುಕಿದ್ದೇನೆಂದು ತಿಳಿಸಲು 3 ವರ್ಷಗಳಿಂದ ಹೋರಾಡುತ್ತಿದ್ದಾನೆ ರೈತ!

    ಮಂಡ್ಯ: ತಾನು ಬದುಕಿದ್ದೇನೆ ಎನ್ನುವುದನ್ನು ಸಾಬೀತು ಪಡಿಸಲು ರೈತರೊಬ್ಬರು ಕಳೆದ ಮೂರು ವರ್ಷಗಳಿಂದ ಹರಸಾಹಸ ಪಡುತ್ತಿರುವ ಶೋಚನಿಯ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕಹಾರೋಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಚಿಕ್ಕಹಾರೋಹಳ್ಳಿ ಗ್ರಾಮದ ರಾಮೇಗೌಡ ದಾಖಲೆಗಳಲ್ಲಿ ಮೃತಪಟ್ಟು ನಿಜ ಜೀವನದಲ್ಲಿ ಬದುಕಿರುವ ರೈತನಾಗಿದ್ದಾರೆ. ಸರ್ಕಾರಿ ಅಧಿಕಾರಿಯ ಬೇಜವಾಬ್ದಾರಿತನದಿಂದ ಬದುಕಿರುವಾಗಲೇ ರೈತನಿಗೆ ಮರಣ ಪತ್ರ ನೀಡಿ, ರೈತನ ಬದುಕಿಗೆ  ಕೊಳ್ಳಿ ಇಟ್ಟಿದ್ದಾರೆ. ಹೀಗಾಗಿ ರಾಮೇಗೌಡರವರು ನಿಜವಾಗಿಯೂ ಸತ್ತೇ ಹೋಗಿದ್ದಾರೆ ಎಂದು ಸರ್ಕಾರಿ ದಾಖಲೆಗಳಲ್ಲಿ ನಮೂದಿಸಿ, ಮತದಾರರ ಪಟ್ಟಿಯಿಂದಲೂ ಹೆಸರನ್ನು ತೆಗೆದುಹಾಕಿದ್ದಾರೆ. ಇದರಿಂದಾಗಿ ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಮತ್ತು ಅಧಿಕೃತವಾಗಿ ವ್ಯವಹಾರ ನಡೆಸಲು ಸಾಧ್ಯವಾಗದೇ ರೈತ ಕಂಗಾಲಾಗಿ ಹೋಗಿದ್ದಾರೆ.

    ತನಗಾಗುತ್ತಿರುವ ಕಷ್ಟವನ್ನು ಪರಿಹರಿಸಿಕೊಡಿ ಎಂದು ಸತತ ಮೂರು ವರ್ಷಗಳಿಂದಲೂ ರಾಮೇಗೌಡ ಹೋರಾಟ ನಡೆಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ನೀನು ಈಗಾಗಲೇ ಸತ್ತು ಹೋಗಿದ್ದೀಯ, ಇನ್ನೇನು ಸರಿಪಡಿಸೋದು ಎಂದು ಅಪಹಾಸ್ಯ ಮಾಡುತ್ತಿದ್ದಾರೆ. ಅಧಿಕಾರಿಗಳ ಹೇಳಿಕೆಯಿಂದ ತೀವ್ರವಾಗಿ ಮನನೊಂದ ಅವರು ದಾಖಲೆಗಳಲ್ಲಿ ಮಾತ್ರ ಸತ್ತಿರುವ ನಾನು ನಿಜವಾಗಿಯೂ ಸತ್ತೇ ಹೋಗುತ್ತೇನೆ ಎಂದು ಆತ್ಮಹತ್ಯೆಗೂ ಪ್ರಯತ್ನಿಸಿದ್ದರು.

    ಆತ್ಮಹತ್ಯೆಗೆ ಯತ್ನಸಿದ ರಾಮೇಗೌಡರವರನ್ನು ಕುಟುಂಬಸ್ಥರು ಕಾಪಾಡಿಕೊಳ್ಳುವಲ್ಲಿ ಸಫಲರಾಗಿದರು. ಆದರೆ ಇನ್ನಾದರೂ ಸರ್ಕಾರಿ ಅಧಿಕಾರಿಗಳು ಬೇಜವಾಬ್ದಾರಿತನದಿಂದ ಮಾತನಾಡದೇ, ಆಗಿರುವ ತಪ್ಪನ್ನು ಸರಿಪಡಿಸಕೊಡಬೇಕೆಂದು ಕುಟುಂಬಸ್ಥರು ಮನವಿಮಾಡಿಕೊಂಡಿದ್ದಾರೆ.

    ಏನದು ಘಟನೆ?
    2015ರಲ್ಲಿ ರಾಮೇಗೌಡರ ತಂದೆ ತಿಮ್ಮೇಗೌಡರು ಮೃತಪಟ್ಟ ಹಿನ್ನೆಲೆಯಲ್ಲಿ ಅರಕೆರೆ ಗ್ರಾಮದ ನಾಡಕಚೇರಿಯಲ್ಲಿ ಅವರು ಮರಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ವಿಲೇಜ್ ಅಕೌಂಟೆಂಟ್ ಲಿಂಗಪ್ಪಾಜಿ ಎಂಬವರ ಬೇಜವಾಬ್ದಾರಿತನದಿಂದಾಗಿ ಇಬ್ಬರ ಹೆಸರಲ್ಲೂ ಮರಣಪತ್ರ ನೋಂದಣಿಯಾಗಿದೆ. ಖುದ್ದು ತಲಶೀಲ್ದಾರರೇ ಸಹಿ ಹಾಕಿದ ಮರಣಪತ್ರಗಳನ್ನು ನಾಡಕಚೇರಿಯಿಂದ ರೈತ ಪಡೆದುಕೊಂಡು, ಆಘಾತಕ್ಕೆ ಒಳಗಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಸ್ತಿಗಾಗಿ ತಮ್ಮನ ನಕಲಿ ಮರಣ ಪ್ರಮಾಣಪತ್ರ ತೆಗೆಸಿದ ಅಣ್ಣ!

    ಆಸ್ತಿಗಾಗಿ ತಮ್ಮನ ನಕಲಿ ಮರಣ ಪ್ರಮಾಣಪತ್ರ ತೆಗೆಸಿದ ಅಣ್ಣ!

    ಧಾರವಾಡ: ಕಿರಿಯ ಸಹೋದರನ ನಕಲಿ ಮರಣ ಪ್ರಮಾಣ ಪತ್ರ ತೆಗೆಸಿ ಆಸ್ತಿ ಲಪಟಾಯಿಸಲು ಅಣ್ಣನೊಬ್ಬನು ಹೊಂಚು ಹಾಕಿರೋ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ.

    ಧಾರವಾಡ ತಾಲೂಕಿನ ಮಾಳಮಡ್ಡಿಯ ನಿವಾಸಿಯಾದ ನಾನಾಸಾಹೇಬ್ ದೇಶಪಾಂಡೆ ಅವರು 2012 ರಲ್ಲಿ ಉತ್ತರಾಖಂಡ ಪ್ರವಾಸಕ್ಕೆ ಹೋದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆದರೆ ನಾನಾಸಾಹೇಬ ಸಹೋದರ ರಂಗಾರಾವ್ ದೇಶಪಾಂಡೆ 2000ರಲ್ಲಿಯೇ ತಮ್ಮನ ಮರಣ ಪ್ರಮಾಣಪತ್ರ ತೆಗೆಸಿದ್ದಾನೆ.

    ಅಮ್ಮಿನಬಾವಿ ಗ್ರಾಮದ ಬಳಿಯಿರುವ 8 ಎಕರೆ ಜಮೀನು ಲಪಟಾಯಿಸಲು ರಂಗರಾವ್ ಹೊಂಚು ಹಾಕಿದ್ದನು. ಆದರೆ ಇದು ನಾನಾಸಾಹೇಬ ಕುಟುಂಬಸ್ಥರಿಗೆ 2014ರಲ್ಲಿ ಆಸ್ತಿಯನ್ನು ವಿಭಜಿಸುವಾಗ ತಿಳಿದಿದೆ. ಆದ್ರೆ ಇದೂವರೆಗೂ ನಾನಾಸಾಹೇಬ ಪತ್ನಿ ಲಕ್ಷ್ಮೀಬಾಯಿ ಮತ್ತು ಪುತ್ರ ವೆಂಕಟೇಶ್ ಅವರಿಗೆ ಆಸ್ತಿಯನ್ನು ನೀಡಿಲ್ಲ. ಇದೀಗ ರಂಗಾರಾವ್‍ಗೆ ಪಾಲಿಕೆ ಮತ್ತು ತಹಶೀಲ್ದಾರ ಕಚೇರಿಯ ಅಧಿಕಾರಿಗಳು ಹೇಗೆ ನಕಲಿ ಪ್ರಮಾಣ ಪತ್ರ ನೀಡಿದರು ಎಂದು ನಾನಾಸಾಹೇಬ್ ಪುತ್ರ ವೆಂಕಟೇಶ್ ಪ್ರಶ್ನಿಸುತ್ತಾರೆ.

    ಈ ಸಂಬಂಧ ನಾನಾಸಾಹೇಬ ಪುತ್ರ ವೆಂಕಟೇಶ್ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.