Tag: Death case

  • ಶಿವು ಉಪ್ಪಾರ್ ಕೇಸ್ – ನ್ಯಾಯಕ್ಕಾಗಿ `ಬೆಳಗಾವಿ ಚಲೋ’ಗೆ ಕರೆ ನೀಡಿದ ಶ್ರೀರಾಮ ಸೇನೆ

    ಶಿವು ಉಪ್ಪಾರ್ ಕೇಸ್ – ನ್ಯಾಯಕ್ಕಾಗಿ `ಬೆಳಗಾವಿ ಚಲೋ’ಗೆ ಕರೆ ನೀಡಿದ ಶ್ರೀರಾಮ ಸೇನೆ

    ದಾವಣಗೆರೆ: ಗೋ ರಕ್ಷಕ ಶಿವು ಉಪ್ಪಾರ್ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಜುಲೈ 8ರಂದು ಬೆಳಗಾವಿ ಚಲೋ ಕಾರ್ಯಕ್ರಮ ನಡೆಸುತ್ತಿದ್ದೇವೆ. ಆರೋಪಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲವೆಂದರೆ ಹೋರಾಟ ನಡೆಸುತ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎಚ್ಚರಿಗೆ ನೀಡಿದ್ದಾರೆ.

    ದಾವಣಗೆರೆಯಲ್ಲಿ ಮಾತನಾಡಿದ ಅವರು, ಗೋ ರಕ್ಷಕ ಶಿವು ಉಪ್ಪಾರ್ ಸಾವು ಆತ್ಮಹತ್ಯೆಯಿಂದ ಆಗಿದಲ್ಲ, ಅವನನ್ನು ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಬೇಕು. ಈ ಸಂಬಂಧ ಎಲ್ಲಾ ಸಾಕ್ಷಿಗಳಿದ್ದರೂ ಆರೋಪಿಗಳನ್ನು ಯಾಕೆ ಬಂಧಿಸುತ್ತಿಲ್ಲ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

    ಈ ಸಂಬಂಧ ಗೋ ರಕ್ಷಕನ ಸಾವಿಗೆ ನ್ಯಾಯ ನೀಡಲು ಜುಲೈ 8ಕ್ಕೆ ಶ್ರೀರಾಮ ಸೇನೆ ನೇತೃತ್ವದಲ್ಲಿ ಎಲ್ಲಾ ಹಿಂದೂ ಸಂಘಟನೆಗಳು ಸೇರಿ ಬೆಳಗಾವಿ ಚಲೋ ಹಮ್ಮಿಕೊಂಡಿದ್ದು, ಇದರಲ್ಲಿ 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿಂದ ಕೇಂದ್ರ ಸಚಿವ ಸುರೇಶ್ ಅಂಗಡಿಗೆ ಘೇರಾವ್ ಹಾಕಲಾಗುವುದು ಎಂದು ತಿಳಿಸಿದರು.

    ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಂಡು ಸರ್ಕಾರ ಶಿವು ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಸರ್ಕಾರ ಆರೋಪಿಗಳನ್ನು ಬಂಧಿಸದಿದ್ದರೆ ಡಿಸಿ ಕಚೇರಿಗೆ ಘೇರಾವ್ ಹಾಕಲು ನಿರ್ಧಾರಿಸಿದ್ದೇವೆ. ಈ ಕೊಲೆ ಪ್ರಕರಣದ ಸಮಗ್ರ ತನಿಖೆ ನಡೆಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಗೆ ಕೊಟ್ಟರು.

    ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷದವರಿಗೂ ಒಂದು ಹಸುವಿಗೆ ಇಂತಿಷ್ಟು ಹಣ ಎಂದು ಮಾಮೂಲಿ ಹೋಗುತ್ತಿದೆ. ಕಸಾಯಿಖಾನೆಗಳಿಗೆ ಹಸು ಸಾಗಾಟಕ್ಕೆ ತಡೆ ಹಾಕಲೇಬೇಕು. ಇಲ್ಲದಿದ್ದರೆ ಶ್ರೀರಾಮ ಸೇನೆ ನೇತೃತ್ವದಲ್ಲಿ ತಡೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

  • ಎಂಜಿನಿಯರಿಂಗ್ ವಿದ್ಯಾರ್ಥಿನಿ ಜೊತೆಗಿನ ಆರೋಪಿ ಫೋಟೋ ವೈರಲ್

    ಎಂಜಿನಿಯರಿಂಗ್ ವಿದ್ಯಾರ್ಥಿನಿ ಜೊತೆಗಿನ ಆರೋಪಿ ಫೋಟೋ ವೈರಲ್

    ರಾಯಚೂರು: ಇಡೀ ದೇಶಾದ್ಯಂತ ಚರ್ಚೆಗೆ ಒಳಗಾಗಿರುವ ರಾಯಚೂರು ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಪಡೆಯುತ್ತಿದೆ. ಈಗ ಮೃತ ವಿದ್ಯಾರ್ಥಿನಿ ಹಾಗೂ ಆರೋಪಿ ಸುದರ್ಶನ್ ಜೊತೆಗಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

    ಪಿಯುಸಿಯಲ್ಲಿ ಸಹಪಾಠಿಗಳಾಗಿದ್ದ ವಿದ್ಯಾರ್ಥಿನಿ ಹಾಗೂ ಸುದರ್ಶನ್ ಯಾದವ್ ಒಟ್ಟಾಗಿ ತೆಗೆಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈಗಾಗಲೇ ಸಿಐಡಿ ಅಧಿಕಾರಿಗಳ ಮುಂದೆ ಸುದರ್ಶನ್ ಯಾದವ್ ತಮ್ಮಿಬ್ಬರ ಸ್ನೇಹ ಸಂಬಂಧ ಹಾಗೂ ಲವ್ ಬ್ರೇಕ್ ಅಪ್ ಬಗ್ಗೆ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ. ಅಲ್ಲದೇ ನಾಲ್ಕು ತಿಂಗಳ ಹಿಂದೆ ಇಬ್ಬರ ನಡುವೆ ಅಂತರ ಹೆಚ್ಚಾಗಿ ಸ್ವತಃ ವಿದ್ಯಾರ್ಥಿನಿ ತಂದೆಯ ಮುಂದೆಯೇ ರಸ್ತೆಯಲ್ಲೇ ವಿದ್ಯಾರ್ಥಿನಿ ಮೇಲೆ ಕೈಮಾಡಿದ್ದ ಘಟನೆ ಬಗ್ಗೆಯೂ ಆರೋಪಿ ಬಾಯಿಬಿಟ್ಟಿದ್ದಾನೆ.

    ಪ್ರಕರಣದ ತನಿಖೆ ಇನ್ನೂ ಮುಂದುವರಿದಿದ್ದು, ವಿದ್ಯಾರ್ಥಿನಿ ಸಾವಿನ ಬಗ್ಗೆ ಮರಣೋತ್ತರ ಪರೀಕ್ಷೆಯಿಂದ ಉತ್ತರ ಸಿಗಲಿದ್ದು, ರಾಯಚೂರಿನಲ್ಲೇ ಬೀಡು ಬಿಟ್ಟಿರುವ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.