Tag: Dear comrade film

  • ವಿಜಯ್ ದೇವರಕೊಂಡ ಜೊತೆಗಿನ ಸೆಲ್ಫಿ ಶೇರ್‌, ಹಳೆಯ ನೆನಪು ಬಿಚ್ಚಿಟ್ಟ ರಶ್ಮಿಕಾ

    ವಿಜಯ್ ದೇವರಕೊಂಡ ಜೊತೆಗಿನ ಸೆಲ್ಫಿ ಶೇರ್‌, ಹಳೆಯ ನೆನಪು ಬಿಚ್ಚಿಟ್ಟ ರಶ್ಮಿಕಾ

    ಟಾಲಿವುಡ್‌ನ ಬೆಸ್ಟ್ ಜೋಡಿ ಅಂದರೆ ವಿಜಯ್ ದೇವರಕೊಂಡ(Vijay Devarakonda)- ರಶ್ಮಿಕಾ ಮಂದಣ್ಣ. ಈ ಗೀತಾ ಗೋವಿಂದಂ ಜೋಡಿ ಮತ್ತೆ ಏನಾದರೂ ಸಿನಿಮಾ ಮಾಡ್ತಾರೆ ಅಂದರೆ ಫ್ಯಾನ್ಸ್ ಸಖತ್ ಥ್ರಿಲ್ ಆಗುತ್ತಾರೆ. ಹೀಗಿರುವಾಗ ವಿಜಯ್ ದೇವರಕೊಂಡ ಜೊತೆಗಿನ ಹಳೆಯ ನೆನಪೊಂದನ್ನ ನಟಿ ಹಂಚಿಕೊಂಡಿದ್ದಾರೆ.

    ವಿಜಯ್- ರಶ್ ಜೋಡಿ ಗೀತಾ ಗೋವಿಂದ ಸಿನಿಮಾ ಮೂಲಕ ಸೂಪರ್ ಡೂಪರ್ ಸಕ್ಸಸ್ ಕಂಡರು. ಇದಾದ ಬಳಿಕ ‘ಡಿಯರ್ ಕಾಮ್ರೇಡ್’ (Dear Comrade) ಸಿನಿಮಾದಲ್ಲೂ ಈ ಜೋಡಿ ಜೊತೆಯಾಗಿ ನಟಿಸಿದ್ದರು. ಇದೇ ಜುಲೈ 26ಕ್ಕೆ ಸಿನಿಮಾ ತೆರೆಗೆ ಬಂದು ಸತತ 4 ವರ್ಷಗಳನ್ನ ಪೂರೈಸಿದೆ. ಇದೇ ಖುಷಿಯಲ್ಲಿ ರಶ್ಮಿಕಾ, ವಿಜಯ್ ದೇವರಕೊಂಡ- ಡೈರೆಕ್ಟರ್ ಭರತ್ ಕಮ್ಮ ಜೊತೆಗಿನ ಸೆಲ್ಫಿ ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಜಿಮ್‌ ವರ್ಕೌಟ್‌ನೇ ಪಾರ್ಟಿ ಎಂದ ನಟಿ- ಸಮಂತಾ ಬಾಲಿ ಡೈರೀಸ್

    ವಿಜಯ್ ದೇವರಕೊಂಡ ಜೊತೆಗಿನ ಫೋಟೋ ಹಂಚಿಕೊಂಡು, ಈ ಸಿನಿಮಾ ಯಾವಾಗಲೂ ನಮಗೆ ಸ್ಪೆಷಲ್ ಡಿಯರ್ ಕಾಮ್ರೇಡ್ ಚಿತ್ರಕ್ಕೆ 4 ವರ್ಷಗಳು ಎಂದು ನಟಿ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ನಟಿ ಫೋಟೋ ಶೇರ್ ಮಾಡ್ತಿದ್ದಂತೆ, ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಎರಡು ಸಿನಿಮಾ ಹಿಟ್ ಕೊಟ್ಟಿರೋ ವಿಜಯ್-ರಶ್ಮಿಕಾ(Rashmika Mandanna) ಮತ್ತೆ ಜೊತೆಯಾದ್ರೆ ಚೆನ್ನಾಗಿರುತ್ತೆ ಎಂದು ನಿರೀಕ್ಷೆ ಅಭಿಮಾನಿಗಳಿಗಿದೆ. ಒಳ್ಳೆಯ ಕಥೆ ಬಂದರೆ ಮತ್ತೆ ಈ ಜೋಡಿ ಜಂಟಿಯಾಗಿ ಕಾಣಿಸಿಕೊಳ್ತಾರಾ ಎಂಬುದನ್ನ ಕಾಯಬೇಕಿದೆ. ಇದನ್ನೂ ಓದಿ:‘ಆರ್‌ಆರ್‌ಆರ್’ ಪಾರ್ಟ್ 2 ಬರುತ್ತಾ? ಸೀಕ್ರೆಟ್ ಬಿಚ್ಚಿಟ್ಟ ರಾಜಮೌಳಿ ತಂದೆ

    ಇದರ ಜೊತೆಗೆ ಇತ್ತೀಚಿಗೆ ನಟಿ ರಶ್ಮಿಕಾ ಏರ್‌ಪೋರ್ಟ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಸರಿಯಾಗಿಯೇ ತಗ್ಲಾಕೊಂಡಿದ್ದಾರೆ. ಅದು ವಿಜಯ್ ದೇವರಕೊಂಡ ಜೊತೆಗಲ್ಲ ಬದಲಿಗೆ ವಿಜಯ್ ದೇವರಕೊಂಡ ಧರಿಸಿದ್ದ ಶರ್ಟ್ ಅನ್ನು ತಾನು ಧರಿಸೋ ಮೂಲಕ ಭಾರೀ ಸುದ್ದಿಯಾಗಿದ್ದಾರೆ. ವಿಜಯ್ ದೇವರಕೊಂಡ ಈ ಹಿಂದೆ ಪರ್ಪಲ್ ಕಲರ್ ಶರ್ಟ್ ಅನ್ನು ಏರ್‌ಪೋರ್ಟ್‌ನಿಂದ ಬರುವಾಗ ತೊಟ್ಟಿದ್ರು, ಈಗ ನೋಡಿದ್ರೆ ರಶ್ಮಿಕಾ, ವಿಜಯ್ ಹಾಕಿದ್ದ ಅಂಗಿಯನ್ನೇ ಹಾಕೋ ಮೂಲಕ ನಮ್ಮಿಬ್ಬರ ದೇಹ ಬೇರೆಯಾದ್ರೂ ಮನಸ್ಸು ಒಂದೇ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಶರ್ಟ್ ಕೂಡ ಒಂದೇ ಧರಿಸಿದ್ದಾರೆ. ಮತ್ತೆ ಮತ್ತೆ ವಿಜಯ್- ರಶ್ಮಿಕಾ ನಾವು ಲವ್ ಬರ್ಡ್ಸ್ ಅನ್ನೋದನ್ನ ಸೈಲೆಂಟ್ ಆಗಿ ತೋರಿಸಿ ಕೊಟ್ಟಿದ್ದಾರೆ. ಮುಂದೆ ಈ ಜೋಡಿ ತಮ್ಮ ಪ್ರೀತಿ ಒಪ್ಪಿಕೊಂಡು ಗುಡ್ ನ್ಯೂಸ್ ಕೊಡ್ತಾರಾ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲಿಪ್‍ಲಾಕ್ ಅಂದ್ರೆ ಏನು? ಈ ಪದವೇ ನನಗೆ ಇಷ್ಟವಾಗಲಿಲ್ಲ: ವಿಜಯ್ ದೇವರಕೊಂಡ

    ಲಿಪ್‍ಲಾಕ್ ಅಂದ್ರೆ ಏನು? ಈ ಪದವೇ ನನಗೆ ಇಷ್ಟವಾಗಲಿಲ್ಲ: ವಿಜಯ್ ದೇವರಕೊಂಡ

    ಬೆಂಗಳೂರು: ಲಿಪ್‍ಲಾಕ್ ಅಂದರೆ ಏನು? ಈ ಪದವೇ ನನಗಿಷ್ಟವಾಗಲಿಲ್ಲ ಎಂದು ಟಾಲಿವುಡ್ ನಟ ವಿಜಯ್ ದೇವರಕೊಂಡ ಹೇಳಿದ್ದಾರೆ.

    ನಗರದಲ್ಲಿ ‘ಡಿಯರ್ ಕಾಮ್ರೆಡ್’ ಚಿತ್ರತಂಡ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಸ್ಸಿಂಗ್ ಒಂದು ಭಾವಾತ್ಮಕ ಅಂಶ. ಅದಕ್ಕೆ ಬೆಲೆ ಕೊಡಬೇಕು. ಅಳುವುದು, ಕೋಪ ವ್ಯಕ್ತಪಡಿಸುವುದು, ಪ್ರೀತಿಯಿಂದ ಚುಂಬಿಸುವುದು ಇದೆಲ್ಲಾ ಭಾವನೆಗಳು. ಇದು ಲಿಪ್ಸ್ ಲಾಕಿಂಗ್ ಅಲ್ಲ. ಈ ಪದ ಕೇಳಿದಾಗ ನನಗೆ ಬೇಜಾರಾಗುತ್ತದೆ. ಈಗಲೂ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಿಸ್ಸಿಂಗ್ ಎಂದೇ ಭಾವಿಸುತ್ತಾರೆ. ಅದು ಆ ಪಾತ್ರಗಳು ಎಂದುಕೊಳ್ಳುವುದಿಲ್ಲ. ಪಾತ್ರಗಳನ್ನು ಪಾತ್ರಗಳ ರೀತಿ ನೋಡಿ. ನಿಜ ಜೀವನಕ್ಕೆ ಹೋಲಿಸಬೇಡಿ ಎಂದು ಮನವಿ ಮಾಡಿಕೊಂಡರು.

    ಅರ್ಜುನ್ ರೆಡ್ಡಿ ಸಿನಿಮಾದ ಬಳಿಕ ಜನರು ನನ್ನನ್ನು ನೋಡಿ ಭಯಬಿದ್ದರು. ಆ ಸಿನಿಮಾದಲ್ಲಿ ನನ್ನ ಪಾತ್ರ ಹಾಗಿತ್ತು. ನಿಜ ಜೀವನದಲ್ಲಿ ನಾನು ಸಿಗರೇಟ್ ಕೂಡ ಸೇದುವುದಿಲ್ಲ. ಪಾತ್ರಕ್ಕೆ ತಕ್ಕಂತೆ ನಾನು ನಟಿಸಿದ್ದೇನೆ. ಹೀಗಾಗಿ ಕಿಸ್ಸಿಂಗ್ ಸೀನ್ ಬಗ್ಗೆ ವಿವರಣೆ ನೀಡಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.

    ಈ ವೇಳೆ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ, ಇದೊಂದು ಭಿನ್ನವಾದ ವಿಷಯಾಧಾರಿತ ಸಿನಿಮಾ. ಎಲ್ಲಾ ರೀತಿಯ ಭಾವನೆಗಳು ಡಿಯರ್ ಕಾಮ್ರೆಡ್ ಸಿನಿಮಾದಲ್ಲಿವೆ. ಆದರೂ ಕಿಸ್ಸಿಂಗ್ ಸೀನ್ ಬಗ್ಗೆಯೇ ಹೆಚ್ಚಾಗಿ ಚರ್ಚೆ ನಡೆಯುತ್ತಿದೆ. ಸಿನಿಮಾದಲ್ಲಿರುವ ಭಾವನಾತ್ಮಕ ಅಂಶಗಳಲ್ಲಿ ಕಿಸ್ಸಿಂಗ್ ಸೀನ್ ಕೂಡ ಒಂದು ಎಂದು ಹೇಳಿದರು.

    ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಜೋಡಿಯ ‘ಡಿಯರ್ ಕಾಮ್ರೆಡ್’ ಸಿನಿಮಾ ಇದೇ ಜುಲೈ 26ರಂದು ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಡಿಯರ್ ಕಾಮ್ರೆಡ್ ದಕ್ಷಿಣ ಭಾರತದಲ್ಲಿ ಭಾರೀ ಸದ್ದು ಮಾಡಿದ್ದು, ಚಿತ್ರತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ.