Tag: dealth

  • ಅಣ್ಣನ ರಕ್ಷಣೆಗೆ ತೆರಳಿದ ತಮ್ಮ- ಇಬ್ಬರೂ ದುರ್ಮರಣ

    ಅಣ್ಣನ ರಕ್ಷಣೆಗೆ ತೆರಳಿದ ತಮ್ಮ- ಇಬ್ಬರೂ ದುರ್ಮರಣ

    ರಾಯಚೂರು: ವಿದ್ಯುತ್ ಸ್ಪರ್ಶಿಸಿ ಸಹೋದರರಿಬ್ಬರು ಮೃತಪಟ್ಟ ಘಟನೆ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ನಡೆದಿದೆ.

    ಸಾಲಗುಂದ ಗ್ರಾಮದ ಹುಸೇನ್ ಬಾಷಾ (36) ಹಾಗೂ ಹಸನ್ ಬಾಷಾ (34) ಮೃತ ದುರ್ದೈವಿಗಳು. ಗ್ರಾಮದಲ್ಲಿ ಭಾನುವಾರ ಸಂಜೆ ಭಾರೀ ಗಾಳಿ ಬೀಸಿದ್ದು, ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿದ್ದವು.

    ಅದನ್ನು ಸರಿಪಡಿಸಲು ಹೋಗಿದ್ದ ಹುಸೇನ್‍ಗೆ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣವೇ ಅಣ್ಣನ ರಕ್ಷಣೆಗೆ ಮಾಡಲು ಹಸನ್ ಹೋಗಿದ್ದಾರೆ. ಪರಿಣಾಮ ಇಬ್ಬರೂ ಮೃತಪಟ್ಟಿದ್ದಾರೆ.

    ಸಿಂಧನೂರು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಚಿಕಿತ್ಸೆ ಫಲಕಾರಿಯಾಗದೆ ಯೋಧ ನಿಧನ

    ಚಿಕಿತ್ಸೆ ಫಲಕಾರಿಯಾಗದೆ ಯೋಧ ನಿಧನ

    ಬಾಗಲಕೋಟೆ: ಅಪಘಾತಕ್ಕೀಡಾಗಿದ್ದ ಯೋಧ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಅರಕೇರಿಯಲ್ಲಿ ನಡೆದಿದೆ.

    ಅರಕೇರಿ ಗ್ರಾಮದ ನಿವಾಸಿ ವೆಂಕಟೇಶ್ ಬೆನಕಟ್ಟಿ (31) ಮೃತ ಯೋಧ. ವೆಂಕಟೇಶ್ ಬೆನಕಟ್ಟಿ ಅವರು ಆರು ತಿಂಗಳ ಹಿಂದೆ ತಮ್ಮ ಗ್ರಾಮಕ್ಕೆ ಬಂದಿದ್ದಾಗ ಬೈಕಿನಿಂದ ಬಿದ್ದು ತಲೆ ಮತ್ತು ಬೆನ್ನಿಗೆ ಗಂಭೀರವಾಗಿ ಗಾಯಗಳಾಗಿತ್ತು. ತಕ್ಷಣ ಅವರನ್ನು ಸೋಲಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

    ಮೃತ ವೆಂಕಟೇಶ್ ಸಿಐಎಸ್‍ಎಫ್ ಯೋಧರಾಗಿದ್ದು, ತೆಲಂಗಾಣದ ಸಿಂಗ್ರೋಣಿ ಎಂಬಲ್ಲಿ ಸೇವೆ ಸಲ್ಲಿಸುತ್ತಿದ್ದರು. 2009ರಲ್ಲಿ ವೆಂಕಟೇಶ್ ಸೇನೆಗೆ ನೇಮಕಗೊಂಡಿದ್ದರು. ಇಂದು ತಮ್ಮ ಪತ್ನಿ, ಮಗು ಮತ್ತು ಪೋಷಕರನ್ನು ಅಗಲಿದ್ದಾರೆ.