Tag: deadly assault

  • ಪತಿಯಿಂದಲೇ ಪತ್ನಿ ಕುತ್ತಿಗೆಗೆ ಚಾಕು ಇರಿತ!

    ಪತಿಯಿಂದಲೇ ಪತ್ನಿ ಕುತ್ತಿಗೆಗೆ ಚಾಕು ಇರಿತ!

    ದಾವಣಗೆರೆ: ಪತ್ನಿಯ ಮೇಲೆ ಪತಿ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಓಂಕಾರೇಶ್ವರಿ ಬಡಾವಣೆಯಲ್ಲಿ ನಡೆದಿದೆ.

    ದೇವಮ್ಮ(35) ಪತಿ ತಿಪ್ಪೇಸ್ವಾಮಿಯಿಂದಲೇ ಚಾಕುವಿನಿಂದ ಹಲ್ಲೆಗೊಳಗಾದ ಮಹಿಳೆ. 10 ವರ್ಷದ ಹಿಂದೆ ಇಬ್ಬರಿಗೂ ಮದುವೆಯಾಗಿದ್ದು, ಮೂರು ಜನ ಮಕ್ಕಳಿದ್ದಾರೆ.

    ಹಲ್ಲೆಗೊಳಗಾದ ಮಹಿಳೆ ಸಂಬಂಧಿಕರ ಮನೆಗೆ ಹೋಗಿ ಬಂದ ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದದೆ. ಪತ್ನಿಯ ಮಾತುಗಳಿಂದ ಸಿಟ್ಟುಗೊಂಡ ಪತಿ, ದೇವಮ್ಮ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ದೇವಮ್ಮ ಅವರನ್ನು ಕೂಡಲೇ ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅರೆಬೆತ್ತಲೆಗೊಳಿಸಿ, ಮರಕ್ಕೆ ಕಟ್ಟಿ ಹಾಕಿ ಮಾರಕಾಸ್ತ್ರಗಳಿಂದ ಹಲ್ಲೆಗೈದು ವ್ಯಕ್ತಿಯ ಕೊಲೆ

    ಅರೆಬೆತ್ತಲೆಗೊಳಿಸಿ, ಮರಕ್ಕೆ ಕಟ್ಟಿ ಹಾಕಿ ಮಾರಕಾಸ್ತ್ರಗಳಿಂದ ಹಲ್ಲೆಗೈದು ವ್ಯಕ್ತಿಯ ಕೊಲೆ

    ಯಾದಗಿರಿ: ವ್ಯಕ್ತಿಯೊಬ್ಬರನ್ನು ಅರೆಬೆತ್ತಲೆಗೊಳಿಸಿ, ಮರಕ್ಕೆ ಕಟ್ಟಿ ಹಾಕಿ ಹಲ್ಲೆಗೈದು ಕೊಲೆ ಮಾಡಿರುವ ಅಮಾನವೀಯ ಘಟನೆ ಯಾದಗಿರಿ ತಾಲೂಕಿನ ಕೆ ಹೋಸಳ್ಳಿ ಗ್ರಾಮದಲ್ಲಿ ನಡೆದಿದೆ.

    ಇಸಾಕ್(36) ಎಂಬವರನ್ನು ಅಮಾನವೀಯವಾಗಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಮೃತ ಇಸಾಕ್ ನಿರ್ಮಲಾ ಎಂಬ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಶಂಕಿಸಿ ನಿರ್ಮಲಾಳ ಗಂಡ ಯಶುಮೀತ್ರ ಹಾಗೂ ಇನ್ನಿತರ ದುಷ್ಕರ್ಮಿಗಳು ಸೇರಿ ಈ ಕೊಲೆ ಮಾಡಿದ್ದಾರೆಂದು ತಿಳಿದುಬಂದಿದೆ.

    ನಿರ್ಮಲಾಗೂ ಪತಿ ಥಳಿಸಿದ್ದಾರೆ ಎನ್ನಲಾಗಿದ್ದು, ಸದ್ಯ ಮಹಿಳೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

    ಸ್ಥಳಕ್ಕೆ ಗುರುಮಠಕಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕೆರೆ ಒತ್ತುವರಿ ಬಗ್ಗೆ ದೂರು ನೀಡಿದ್ದಕ್ಕೆ ಮನೆಗೆ ನುಗ್ಗಿ ಮೂವರ ಮೇಲೆ ಹಲ್ಲೆ

    ಕೆರೆ ಒತ್ತುವರಿ ಬಗ್ಗೆ ದೂರು ನೀಡಿದ್ದಕ್ಕೆ ಮನೆಗೆ ನುಗ್ಗಿ ಮೂವರ ಮೇಲೆ ಹಲ್ಲೆ

    ತುಮಕೂರು: ಮನೆಗೆ ನುಗ್ಗಿದ ಕಿಡಿಗೇಡಿಗಳು ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ತುಂಗಾನಹಳ್ಳಿಯಲ್ಲಿ ನಡೆದಿದೆ.

    ಬಸವರಾಜು (70) ಪುಟ್ಟ ವೀರಮ್ಮ (60) ಹಾಗೂ ಮಗ ಜಗದೀಶ್ ಹಲ್ಲೆಗೊಳಗಾದವರು. ಪ್ರಸನ್ನ ಹಾಗೂ ನರಸಿಂಹರಾಜು ಸಹಚರರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

    ಗ್ರಾಮದ ಕೆರೆಯನ್ನು ನರಸಿಂಹರಾಜು ಕಡೆಯವರು ಒತ್ತುವರಿ ಮಾಡಿದ್ದರು. ಇದನ್ನ ಜಗದೀಶ್ ಸರ್ಕಾರಕ್ಕೆ ತಿಳಿಸಿ ತೆರವುಗೊಳ್ಳಿಸಿದ್ದರು. ಇದರ ದ್ವೇಷಕ್ಕೆ ಮನೆಗೆ ನುಗ್ಗಿದ ಕಿಡಿಗೇಡಿಗಳು ಮನೆಯ ಬಾಗಿಲು, ಪಿಠೋಪಕರಣಗಳನ್ನ ಧ್ವಂಸಗೊಳಿಸಿದ್ದಾರೆ. ಅಲ್ಲದೇ ಮನೆಯವರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ಜಗದೀಶ್ ಮತ್ತು ತಂದೆ ತಾಯಿಗೆ ಗಂಭೀರ ಗಾಯಗಳಾಗಿವೆ.

    ಸದ್ಯ ಗಾಯಾಳುಗಳನ್ನು ಕೊರಟಗೆರೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.