Tag: Deadliest Shipping Disasters

  • Greece Boat Tragedyː 300 ಪಾಕ್‌ ಪ್ರಜೆಗಳ ದುರಂತ ಸಾವು – ಬದುಕುಳಿದವರು 12 ಮಂದಿ ಮಾತ್ರ

    Greece Boat Tragedyː 300 ಪಾಕ್‌ ಪ್ರಜೆಗಳ ದುರಂತ ಸಾವು – ಬದುಕುಳಿದವರು 12 ಮಂದಿ ಮಾತ್ರ

    ಇಸ್ಲಾಮಾಬಾದ್‌: ಜೂನ್‌ 14ರಂದು ಗ್ರೀಸ್‌ನ ಕರಾವಳಿ ಪ್ರದೇಶದಲ್ಲಿ ನಡೆದ ಬೋಟ್‌ ದುರಂತದಲ್ಲಿ (Deadliest Shipping Disasters) 300 ಮಂದಿ ಪಾಕ್‌ ಪ್ರಜೆಗಳು (Pakistanis) ದುರಂತ ಸಾವಿಗೀಡಾಗಿದ್ದು, ಕೇವಲ 12 ಮಂದಿ ಮಾತ್ರವೇ ಘಟನೆಯಲ್ಲಿ ಬದುಕುಳಿದಿದ್ದಾರೆ ಎಂದು ಪಾಕಿಸ್ತಾನ ಸಚಿವಾಲಯ ಹೇಳಿದೆ.

    ಹೌದು. ಪ್ರತಿ ವರ್ಷ ಪಾಕಿಸ್ತಾನದ ಸಾವಿರಾರು ಸಂಖ್ಯೆಯ ಯುವ ಸಮೂಹ ಉತ್ತಮ ಜೀವನ ಕಂಡುಕೊಳ್ಳುವ ಸಲುವಾಗಿ ಯೂರೋಪ್‌ಗೆ ವಲಸೆ ಹೋಗುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಾಗೆಯೇ ಕಳೆದ ವಾರ ವಲಸೆ ಹೋಗುತ್ತಿದ್ದ ವೇಳೆ ಗ್ರೀಸ್‌ ಕರಾವಳಿ ಪ್ರದೇಶದಲ್ಲಿ ನೂರಾರು ಜನರಿದ್ದ ಬೋಟ್‌ ಮುಳುಗಿ 300 ಮಂದಿ ಪಾಕ್‌ ಪ್ರಜೆಗಳು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ 12 ಮಂದಿ ಪಾಕ್‌ ಪ್ರಜೆಗಳು ಮಾತ್ರ ಬದುಕುಳಿದಿರುವುದಾಗಿ ಪಾಕ್‌ ಸಚಿವಾಲಯ ಹೇಳಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಕಳ್ಳಸಾಗಣೆ ಮಾಡುತ್ತಿದ್ದ 10 ಮಂದಿಯನ್ನ ಬಂಧಿಸಲಾಗಿದೆ. ಪಾಕ್‌ ಆಡಳಿತ ಕಾಶ್ಮೀರದ 9 ಜನರನ್ನು ಬಂಧಿಸಲಾಗಿದೆ. ಮತ್ತೊಬ್ಬನನ್ನ ಗುಜರಾತ್‌ನಲ್ಲಿ ಬಂಧಿಸಲಾಗಿದೆ.

    ಶೋಕಾಚರಣೆ:
    ಬೋಟ್‌ ದುರಂತದಲ್ಲಿ ಸುಮಾರು 300 ಪಾಕಿಸ್ತಾನದ ಪ್ರಜೆಗಳ ದುರಂತ ಸಾವಿನ ಸ್ಮರಣಾರ್ಥವಾಗಿ ಸೋಮವಾರ (ಜೂನ್‌ 19) ರಾಷ್ಟ್ರೀಯ ಶೋಕಾಚರಣೆ ಆಚರಿಸಲಾಗುತ್ತಿದೆ. ಇದೇ ವೇಳೆ ಪ್ರಧಾನಿ ಶೆಹಬಾಜ್ ಷರೀಫ್ ಅವರು ಕಳ್ಳಸಾಗಣೆಯಲ್ಲಿ ತೊಡಗಿರುವ ಏಜೆಂಟ್‌ಗಳ ವಿರುದ್ಧ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: Boat Disaster: ಅಗತ್ಯಕ್ಕಿಂತ ಹೆಚ್ಚು ವಲಸಿಗರಿದ್ದ ಹಡಗು ಮುಳುಗಡೆ – 79 ಮಂದಿ ಜಲಸಮಾಧಿ

    ಏನಿದು ಬೋಟ್‌ ದುರಂತ? 
    ಇದೇ ತಿಂಗಳ ಜೂನ್‌ 14ರಂದು ರಾತ್ರಿ ಗ್ರೀಸ್‌ ಕರಾವಳಿಯಿಂದ ಯುರೋಪ್‌ನತ್ತ ಹೊರಟಿದ್ದ ಹಡಗಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಜನರು ತುಂಬಿದ್ದರಿಂದ ಬೋಟ್‌ ಮುಳುಗಿ 79 ಮಂದಿ ಜಲಸಮಾಧಿಯಾಗಿದ್ದರು. ನೂರಾರು ಮಂದಿಯನ್ನು ರಕ್ಷಣೆ ಮಾಡಲಾಗಿತ್ತು. ಸುಮಾರು 400 ರಿಂದ 750 ಮಂದಿ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು. ಹಡಗಿನಲ್ಲಿದ್ದ ಹೆಚ್ಚಿನ ಸಂಖ್ಯೆಯ ವಲಸಿಗರು ಈಜಿಪ್ಟ್, ಸಿರಿಯಾ ಮತ್ತು ಪಾಕಿಸ್ತಾನದಿಂದ ಬಂದವರು ಎಂದು ಹೇಳಲಾಗಿತ್ತು. ಗ್ರೀಸ್‌ನಲ್ಲಿ ನಡೆದ ಈ ಹಡಗು ದುರಂತವನ್ನು ಪ್ರಸಕ್ತ ವರ್ಷದ ಮಹಾ ದುರಂತ ಎಂದೇ ಹೇಳಲಾಗುತ್ತಿದೆ. ಇದನ್ನೂ ಓದಿ: ಬಿಕ್ಕಟ್ಟಿನ ನಡುವೆ 5 ವರ್ಷಗಳ ಬಳಿಕ ಅಮೆರಿಕ ರಾಜ್ಯ ಕಾರ್ಯದರ್ಶಿ ಚೀನಾಗೆ ಮೊದಲ ಭೇಟಿ

  • Boat Disaster: ಅಗತ್ಯಕ್ಕಿಂತ ಹೆಚ್ಚು ವಲಸಿಗರಿದ್ದ ಹಡಗು ಮುಳುಗಡೆ – 79 ಮಂದಿ ಜಲಸಮಾಧಿ

    Boat Disaster: ಅಗತ್ಯಕ್ಕಿಂತ ಹೆಚ್ಚು ವಲಸಿಗರಿದ್ದ ಹಡಗು ಮುಳುಗಡೆ – 79 ಮಂದಿ ಜಲಸಮಾಧಿ

    ಅಥೆನ್ಸ್‌: ಅಗತ್ಯಕ್ಕಿಂತ ಹೆಚ್ಚು ವಲಸಿಗರು (Migrants) ಪ್ರಯಾಣಿಸುತ್ತಿದ್ದ ಹಡಗು ಮುಳುಗಿ 79 ಮಂದಿ ಜಲಸಮಾಧಿಯಾಗಿದ್ದು, ನೂರಾರು ಮಂದಿ ನಾಪತ್ತೆಯಾಗಿರುವ ಘಟನೆ ಗ್ರೀಸ್‌ನ (Greece) ಕರಾವಳಿ ಭಾಗದಲ್ಲಿ ನಡೆದಿದೆ.

    ಜೂನ್‌ 14ರಂದು ರಾತ್ರಿ ಗ್ರೀಸ್‌ ಕರಾವಳಿಯಿಂದ ಯುರೋಪ್‌ನತ್ತ (Europe) ಹೊರಟಿದ್ದ ಹಡಗಿನಲ್ಲಿ ನೂರಾರು ಮಂದಿ ಪ್ರಯಾಣಿಸುತ್ತಿದ್ದರು. ಮೀನುಗಾರಿಕೆ ಹಡಗಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರನ್ನ ಕೂರಿಸಿದ್ದರಿಂದ ಹಡಗು ಮುಳುಗಡೆಯಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬೋಟ್ ಮುಳುಗಿ ಮದುವೆಯಿಂದ ಹಿಂದಿರುಗುತ್ತಿದ್ದ 103 ಮಂದಿ ದುರ್ಮರಣ- ಹಲವರು ನಾಪತ್ತೆ

    ಯುರೋಪಿಯನ್ ರಕ್ಷಣಾ ತಂಡದ ಪ್ರಕಾರ ಸುಮಾರು 750 ಮಂದಿ ಹಡಗಿನಲ್ಲಿದ್ದರು ಎನ್ನಲಾಗಿದೆ. ಆದ್ರೆ ಯುಎನ್‌ ವಲಸಿಗ ಏಜೆನ್ಸಿ 400 ಮಂದಿ ಹಡಗಿನಲ್ಲಿದ್ದರು ಎಂದು ಹೇಳಿದೆ. ಹಡಗಿನಲ್ಲಿದ್ದ ಹೆಚ್ಚಿನ ಸಂಖ್ಯೆಯ ವಲಸಿಗರು ಈಜಿಪ್ಟ್, ಸಿರಿಯಾ ಮತ್ತು ಪಾಕಿಸ್ತಾನದಿಂದ ಬಂದವರು ಎಂದು ಹೇಳಲಾಗಿದೆ.

    ಗ್ರೀಸ್‌ನಲ್ಲಿ ನಡೆದ ಈ ಹಡಗು ದುರಂತವನ್ನು ಪ್ರಸಕ್ತ ವರ್ಷದ ಮಹಾ ದುರಂತ ಎಂದೇ ಹೇಳಲಾಗುತ್ತಿದೆ. ಸಮುದ್ರದಲ್ಲಿ ಮುಳುಗಿದ್ದ 104ಕ್ಕೂ ಹೆಚ್ಚು ಜನರನ್ನ ರಕ್ಷಿಸಲಾಗಿದೆ. ಇನ್ನೂ ಸಾಕಷ್ಟು ಮಂದಿ ನೀರಿನಲ್ಲಿ ಮುಳುಗಿದ್ದು ಅವರು ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಶವಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.

    ಬುಧವಾರ ತಡರಾತ್ರಿ ದುರಂತ ಸಂಭವಿಸಿದ್ದು, ಕೂಡಲೇ ಕರಾವಳಿ ಪಡೆ, ನೌಕಾಪಡೆ ಅಧಿಕಾರಿಗಳು ದುರಂತ ನಡೆದ ಸ್ಥಳಕ್ಕೆ ಧಾವಿಸಿ, ಸಾಧ್ಯವಾದಷ್ಟು ಜನರನ್ನ ರಕ್ಷಿಸಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನೆದರ್ಲೆಂಡ್‌ನಲ್ಲಿ ಮಹಿಳೆಯರು, ಮಕ್ಕಳು, ವಯಸ್ಕರಿಗೂ ಸನ್ ಕ್ರೀಮ್ ಉಚಿತ, ಎಲ್ಲರಿಗೂ ಖಚಿತ – ಏಕೆ ಗೊತ್ತೇ?