Tag: dead body

  • ಅನುಮಾನಾಸ್ಪದವಾಗಿ ಕಾರಿನ ಡ್ರೈವಿಂಗ್ ಸೀಟ್ ನಲ್ಲಿ ಯುವಕನ ಶವ ಪತ್ತೆ!

    ಅನುಮಾನಾಸ್ಪದವಾಗಿ ಕಾರಿನ ಡ್ರೈವಿಂಗ್ ಸೀಟ್ ನಲ್ಲಿ ಯುವಕನ ಶವ ಪತ್ತೆ!

    ಚಿಕ್ಕಬಳ್ಳಾಪುರ: ಅನುಮಾನಾಸ್ಪದವಾಗಿ ಯುವಕನೊಬ್ಬನ ಶವ ಕಾರಿನಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕು ಗಡಿಗವಾರಹಳ್ಳಿ ಬಳಿ ನಡೆದಿದೆ.

    ಮೃತ ಯುವಕನನ್ನು 28 ವರ್ಷದ ನಟರಾಜ್ ಎಂದು ಗುರುತಿಸಲಾಗಿದ್ದು, ಇವರು ಮೂಲತಃ ಧರ್ಮವಾರಪಲ್ಲಿ ನಿವಾಸಿ. ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿರುವ ಪ್ರಯತ್ನ ನಡೆಸಿರುವ ಶಂಕೆ ವ್ಯಕ್ತವಾಗಿದೆ.

    ನಟರಾಜ್ ಬೆಂಗಳೂರಿನ ಕೆ.ಆರ್ ಪುರದಲ್ಲಿ ವಾಸವಾಗಿದ್ದು, ಈಗ ಜಿಲ್ಲೆಯ ಗಡಿಗವಾರಪಲ್ಲಿ ಗ್ರಾಮದ ಹೊರವಲಯದ ಪೊದೆ ಬಳಿ ನಿಲ್ಲಿಸಿದ್ದ ಇಂಡಿಕಾ ಕಾರಿನ ಡ್ರೈವಿಂಗ್ ಸೀಟಿನಲ್ಲಿ ಶವವಾಗಿ ಪತ್ತೆಯಾಗಿದೆ.

    ಘಟನೆ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಯುವಕನ ತಲೆ ಮತ್ತು ಕತ್ತಿನ ಭಾಗದಲ್ಲಿ ಗಂಭೀರವಾದ ಗಾಯಗಳಾಗಿದ್ದು, ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲಾಗಿದೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಈ ಘಟನೆ ಸಂಬಂಧ ಕೆಂಚಾರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.

  • ಶ್ರೀದೇವಿ ಸಾವಿನ ಸುತ್ತ ಅನುಮಾನದ ಹುತ್ತ

    ಶ್ರೀದೇವಿ ಸಾವಿನ ಸುತ್ತ ಅನುಮಾನದ ಹುತ್ತ

    ಮುಂಬೈ: ದಶಕಗಳ ಕಾಲ ಭಾರತೀಯ ಸಿನಿರಂಗದಲ್ಲಿ ಮೆರೆದ ನಟಿ ಶ್ರೀದೇವಿಯ ಸಾವು ನಿಗೂಢವಾಗಿದ್ದು, ಮೃತದೇಹ ಭಾರತಕ್ಕೆ ಬರೋದು ಇನ್ನೂ ವಿಳಂಬವಾಗಲಿದೆ.

    ಆಲ್ ರಶೀದ್ ಆಸ್ಪತ್ರೆಯ ಮರಣೋತ್ತರ ವರದಿಯನ್ನ ಬಿಡುಗಡೆ ಮಾಡಿರೋ ದುಬೈ ಪೊಲೀಸರು ಇದು ಹೃದಯಾಘಾತವಲ್ಲ. ಆಕಸ್ಮಿಕವಾಗಿ ಬಾತ್‍ಟಬ್‍ನಲ್ಲಿ ಮುಳುಗಿ ಸತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಜೊತೆಗೆ ಶ್ರೀದೇವಿ ನೀರಿನಲ್ಲಿ ಮುಳುಗುವಾಗ ಆಲ್ಕೋಹಾಲ್ ಸೇವಿಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಎಂದು ಹೇಳಿದ್ದಾರೆ.

    ಬಾತ್‍ಟಬ್ ನಲ್ಲಿದ್ದ 1.5 ಅಡಿ ನೀರಿನಲ್ಲಿ ಶ್ರೀದೇವಿ ಮುಳುಗಿದಾದ್ದರೂ ಹೇಗೆ ಎನ್ನುವುದು ಕಗ್ಗಂಟಾಗಿ ಉಳಿದಿದೆ. ಇನ್ನು, ಪ್ರಕರಣವನ್ನು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್‍ಗೆ ಹಸ್ತಾಂತರಿಸಿದ್ದು, ಪ್ರಾಸಿಕ್ಯೂಷನ್ ಕಾನೂನು ಪ್ರಕ್ರಿಯೆ ಮುಂದುವರಿಸಿದೆ.

    ಈಗಾಗಲೇ ಶ್ರೀದೇವಿ ಮೃತದೇಹ ಪತ್ತೆಯಾಗಿದ್ದ ಎಮಿರೇಟ್ಸ್ ಹೋಟೆಲ್‍ನ 2201 ನಂಬರ್‍ನ ರೂಂಗೆ ಬೀಗ ಜಡಿದಿರುವ ಪೊಲೀಸರು, ಹೋಟೆಲ್ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೆ ಪತಿ ಬೋನಿ ಕಪೂರ್ ರನ್ನೂ ಸತತ 18 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ.

    ಮೃತದೇಹ ಭಾರತಕ್ಕೆ ಮರಳಲು ವಿಳಂಬ ಯಾಕೆ?
    * ಪಾರ್ಥಿವ ಶರೀರದ ಎಲ್ಲಾ ಪರೀಕ್ಷೆಗಳ ಬಳೀಕ ಫೊರೆನ್ಸಿಕ್ ವರದಿ ತಯಾರಿ (ಈಗಾಗಲೇ ಕೊಡಲಾಗಿದೆ)
    * ಮಹೈಸ್ನಾಗೆ ಮೃತದೇಹವನ್ನು ತೆಗೆದುಕೊಂಡು ಹೋಗಲಾಗುತ್ತದೆ. (ಯಾವುದೇ ಕ್ಷಣದಲ್ಲಿ ಆಗಬಹುದು )
    * ವಿಮಾನದಲ್ಲಿ ತೆರಳಿಸಲು ಅನುಕೂಲವಾಗುವ ರೀತಿಯಲ್ಲಿ ಮೃತದೇಹಕ್ಕೆ ಸುಗಂಧದ್ರವ್ಯ.
    * ಶುಭ್ರವಾದ ವಸ್ತ್ರದಿಂದ ಮೃತದೇಹವನ್ನು ಸುತ್ತುತ್ತಾರೆ.
    * ಈ ಎಂಬಾಮಿಂಗ್ ಪ್ರಕ್ರಿಯೆಗೆ ಏನಿಲ್ಲ ಎಂದರೂ 2 ಗಂಟೆ ಹಿಡಿಯುತ್ತದೆ
    * ಈ ಅವಧಿಯಲ್ಲಿ ಸ್ಥಳೀಯ ಪೊಲೀಸರು ಡೆತ್ ಸರ್ಟಿಫಿಕೇಟ್ ನೀಡಬೇಕಾಗುತ್ತದೆ.
    * ಡೆತ್ ಸರ್ಟಿಫಿಕೇಟ್ ನೀಡುವಾಗ ಮೃತರ ಕುಟುಂಬಸ್ಥರು ಅಫಿಡವಿಟ್ ಸಲ್ಲಿಸಬೇಕಾಗುತ್ತದೆ.
    * ಪೊಲೀಸರು ಇದೆಲ್ಲ ಪ್ರಕ್ರಿಯೆ ನಡೆಸುವುದು ಪೊರೆನ್ಸಿಕ್ ರಿಪೋರ್ಟ್ ಸಿಕ್ಕಿದ ಬಳಿಕ.
    * ದುಬೈನ ಭಾರತೀಯ ದೂತವಾಸದ ಅಧಿಕಾರಿಗಳು ಮೃತರ ಪಾಸ್‍ಪೋರ್ಟ್ ರದ್ದು ಮಾಡುತ್ತಾರೆ
    * ಪಬ್ಲಿಕ್ ಪ್ರಾಸಿಕ್ಯೂಟರ್ ಅನುಮತಿ ಮೇರೆಗೆ ಬಂಧುಗಳಿಗೆ ಮೃತದೇಹ ಹಸ್ತಾಂತರ
    * ವಿಮಾನ ನಿಲ್ದಾಣಕ್ಕೆ ಮೃತದೇಹ ರವಾನೆ.. ಕಸ್ಟಮ್ಸ್ ಕ್ಲಿಯರೆನ್ಸ್ ನಂತರ ವಿಮಾನದಲ್ಲಿ ಭಾರತಕ್ಕೆ.

  • ಆತ್ಮಹತ್ಯೆ ಮಾಡಿಕೊಂಡನೆಂದು ಮಗನ ಅಂತ್ಯಸಂಸ್ಕಾರ ಮಾಡಿದ ಪೋಷಕರಿಗೆ ಈಗ ಕೊಲೆ ಶಂಕೆ

    ಆತ್ಮಹತ್ಯೆ ಮಾಡಿಕೊಂಡನೆಂದು ಮಗನ ಅಂತ್ಯಸಂಸ್ಕಾರ ಮಾಡಿದ ಪೋಷಕರಿಗೆ ಈಗ ಕೊಲೆ ಶಂಕೆ

    ಯಾದಗಿರಿ: ಹೂತಿಟ್ಟ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿರುವ ಘಟನೆ ವಡಗೇರಾ ಗ್ರಾಮದಲ್ಲಿ ನಡೆದಿದೆ. ಮಗ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಅಂತ್ಯಸಂಸ್ಕಾರ ನೆರವೇರಿಸಿದ್ದ ಪೋಷಕರು ಇದೀಗ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

    ವಡಗೇರಾ ನಿವಾಸಿ ದೇವಪ್ಪ ಮೃತ ವ್ಯಕ್ತಿ. ದೇವಪ್ಪ ಹಾಗೂ ಇದೇ ಗ್ರಾಮದ ನಿವಾಸಿ ಬಸಮ್ಮ ಪರಸ್ಪರ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಪ್ರೇಯಸಿ ಪೋಷಕರು ಮದುವೆ ನಿರಾಕರಿಸಿದಕ್ಕೆ ಡಿಸೆಂಬರ್ 10 ರಂದು ದೇವಪ್ಪ ಗ್ರಾಮದ ಹೊರಭಾಗದಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ್ದಾನೆ ಎಂದು ದೇವಪ್ಪನ ಪೋಷಕರು ಮೃತನ ಅಂತ್ಯಸಂಸ್ಕಾರ ಮಾಡಿದ್ದರು.

    ಆದರೆ ಈ ಪ್ರಕರಣದಲ್ಲಿ ದೇವಪ್ಪ ವಿಷ ಸೇವಿಸಿ ಸಾವನ್ನಪ್ಪಿಲ್ಲ ಎನ್ನುವುದಕ್ಕೆ ಈಗ ಪೋಷಕರಿಗೆ ದೇವಪ್ಪನ ಮೊಬೈಲ್ ನಲ್ಲಿರುವ ಕೆಲವು ಸಾಕ್ಷಿಗಳು ಸಿಕ್ಕಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದೇವಪ್ಪನನ್ನು ಪ್ರೇಯಸಿ ಬಸಮ್ಮಳ ಕಡೆಯವರು ಗ್ರಾಮದ ಹೊರಭಾಗಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ.

    ಕೊಲೆ ದೂರಿನ ಹಿನ್ನಲೆಯಲ್ಲಿ ಮಂಗಳವಾರದಂದು ಸಹಾಯಕ ಆಯುಕ್ತ ಡಾ. ಜಗದೀಶ್, ವಡಗೇರಾ ಪೊಲೀಸರು ಹಾಗೂ ವೈದ್ಯರ ಸಮ್ಮುಖದಲ್ಲಿ ಹೂತಿಟ್ಟ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

    ದೇವಪ್ಪ ವಿಷ ಸೇವಿಸಿ ಸಾವನ್ನಪ್ಪಿದ್ದಾನಾ ಅಥವಾ ಕೊಲೆ ನಡೆದಿದ್ಯಾ ಎನ್ನುವುದು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸ್ಪಷ್ಟವಾಗಬೇಕಿದೆ.

  • ಕುತ್ತಿಗೆಗೆ ಚಾಕುವಿನಿಂದ ಇರಿದು, ದಿಂಬಿನಿಂದ ಉಸಿರುಗಟ್ಟಿಸಿ ಸ್ನೇಹಿತನಿಂದ್ಲೇ ಮಹಿಳೆಯ ಕೊಲೆ!

    ಕುತ್ತಿಗೆಗೆ ಚಾಕುವಿನಿಂದ ಇರಿದು, ದಿಂಬಿನಿಂದ ಉಸಿರುಗಟ್ಟಿಸಿ ಸ್ನೇಹಿತನಿಂದ್ಲೇ ಮಹಿಳೆಯ ಕೊಲೆ!

    ಬೆಂಗಳೂರು: ಕೊಟ್ಟ ಸಾಲವನ್ನು ವಾಪಾಸ್ ಕೇಳಿದ್ದಕ್ಕೆ ಮಹಿಳೆಯನ್ನು ಆಕೆಯ ಸ್ನೇಹಿತನೇ ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ

    ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಈ ಘಟನೆ ನಡೆದಿದ್ದು, ಎರಡು ದಿನಗಳ ಹಿಂದೆ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸದ್ಯ ಪ್ರಕರಣ ಸಂಬಂಧ ಆರೋಪಿ ಗೋಪಿನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಮಹಿಳೆಯನ್ನು ತಾರಾ ಎಂದು ಗುರುತಿಸಲಾಗಿದೆ.

    ಎಚ್‍ಎಎಲ್ ನಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿರೋ ಆರೋಪಿ ಗೋಪಿನಾಧ್ ಬೆಂಗಳೂರಿನ ಹೊರಮಾವು ನಿವಾಸಿಯಾಗಿದ್ದು, ತಾರಾ ಕುಟುಂಬಕ್ಕೆ ಆತ್ಮೀಯ ಸ್ನೇಹಿತನಾಗಿದ್ದ.

    ಇತ್ತೀಚೆಗೆ ಗೋಪಿನಾಥ್ ತಾರಾ ಬಳಿ 11 ಲಕ್ಷ ಸಾಲ ಪಡೆದಿದ್ದ. ಹೀಗಾಗಿ ತಾರಾ ಆ ಹಣವನ್ನು ವಾಪಸ್ ಕೊಡುವಂತೆ ಪದೇ ಪದೇ ಕೇಳುತ್ತಿದ್ದರು. ಈ ವಿಚಾರದಲ್ಲಿ ಇವರಿಬ್ಬರ ಮಧ್ಯೆ ನಡೆದ ಜಗಳ ತಾರಕಕ್ಕೇರಿದ್ದು, ತಾರಾ ತನ್ನ ತಾಯಿ ಮನೆಗೆ ಬಂದಿದ್ದ ವೇಳೆ ಗೋಪಿನಾಥ್ ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿದು, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಮನೆಗೆ ಬೀಗ ಹಾಕಿದ್ದಾನೆ. ಅಲ್ಲದೇ ಮನೆ ಕೀ ಹಾಗೂ ಚಾಕುವನ್ನು ಪಕ್ಕದ ಚರಂಡಿಗೆ ಬಿಸಾಡಿ ಅಲ್ಲಿಂದ ಪರಾರಿಯಾಗಿದ್ದಾನೆ.

    ಇತ್ತ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಗೋಪಿನಾಥ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಕಮರ್ಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯ ಸಂಗಮ್ ರಸ್ತೆಯ ತಾಯಿ ಮನೆಯಲ್ಲಿ ಈ ಕೊಲೆ ನಡೆದಿದ್ದು, ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

     

  • ಹೆಂಡ್ತಿಯನ್ನ ಕೊಂದು ಆಸ್ಪತ್ರೆಗೆ ತಂದ – ಸ್ಟ್ರೆಚ್ಚರ್ ಮೇಲೆ ಹಾಕಿ ಎಸ್ಕೇಪ್ ಆದ ಕಿರಾತಕ

    ಹೆಂಡ್ತಿಯನ್ನ ಕೊಂದು ಆಸ್ಪತ್ರೆಗೆ ತಂದ – ಸ್ಟ್ರೆಚ್ಚರ್ ಮೇಲೆ ಹಾಕಿ ಎಸ್ಕೇಪ್ ಆದ ಕಿರಾತಕ

    ಯಾದಗಿರಿ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ಶವ ತೆಗೆದುಕೊಂಡು ಹೋಗಿ ಜಿಲ್ಲಾಸ್ಪತ್ರೆಯಲ್ಲಿ ಬಿಟ್ಟು ಪರಾರಿಯಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಶಹಾಪುರ ತಾಲೂಕಿನ ಖಾನಾಪುರ ಗ್ರಾಮದವನಾದ ವೆಂಕಟೇಶ ಕೊಲೆ ಮಾಡಿ ಪರಾರಿಯಾಗಿರುವ ವ್ಯಕ್ತಿ. ಬೆಂಗಳೂರಿನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವಾಗ ಯಾದಗಿರಿಯ ಸುರಪುರ ತಾಲೂಕಿನ ರುಕ್ಮಾಪುರ ಗ್ರಾಮದರಾದ ಶಾಂತಮ್ಮ ಹಾಗೂ ವೆಂಕಟೇಶ್ ಮಧ್ಯೆ ಪ್ರೇಮವಾಗಿತ್ತು. ವೆಂಕಟೇಶನಿಗೆ ಮೊದಲೇ ವಿವಾಹವಾಗಿ ಮೂರು ಮಕ್ಕಳಿದ್ದರು. ಮೇ ತಿಂಗಳಲ್ಲಿ ಶಾಂತಮ್ಮ ಜೊತೆ ಪ್ರೇಮ ವಿವಾಹವಾಗಿದ್ದನು.

    ಇಬ್ಬರ ನಡುವೆ ಕೌಟುಂಬಿಕ ಕಲಹವಿತ್ತು ಹಾಗೂ ಸೋಮವಾರ ರಾತ್ರಿ ಮನೆಯಲ್ಲಿ ಪರಸ್ಪರ ಜಗಳ ಮಾಡಿಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಪಾಪಿ ಪತಿ ಶಾಂತಮ್ಮರನ್ನ ಕೊಲೆ ಮಾಡಿ ಬೈಕ್ ಮೇಲೆ ಶವ ಹೊತ್ತು ತಂದು ಜಿಲ್ಲಾಸ್ಪೆಯಲ್ಲಿ ಬಿಸಾಕಿ ಹೋಗಿದ್ದಾನೆ. ಶವ ಹೊತ್ತು ತರುವ ದೃಶ್ಯ ಜಿಲ್ಲಾಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಆರೋಪಿ ವೆಂಕಟೇಶ ಹಣದಾಸೆಗಾಗಿ ಮಗಳನ್ನು ಕೊಲೆ ಮಾಡಿದ್ದಾನೆಂದು ಶಾಂತಮ್ಮ ಪೋಷಕರು ಆರೋಪಿಸಿದ್ದಾರೆ. ಸ್ಥಳಕ್ಕೆ ವಡಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ನಾಪತ್ತೆಯಾಗಿದ್ದ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಸ್ಮಶಾನದಲ್ಲಿ ಶವವಾಗಿ ಪತ್ತೆ

    ನಾಪತ್ತೆಯಾಗಿದ್ದ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಸ್ಮಶಾನದಲ್ಲಿ ಶವವಾಗಿ ಪತ್ತೆ

    ರಾಮನಗರ: ನಾಪತ್ತೆಯಾಗಿದ್ದ ಬೆಂಗಳೂರಿನ ಎಂ.ಜಿ ರಸ್ತೆಯ ಕೋಟಕ್ ಮಹಿಂದ್ರಾ ಬ್ಯಾಂಕ್‍ನ ಡೆಪ್ಯೂಟಿ ಮ್ಯಾನೇಜರ್ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಿ ಗ್ರಾಮದಲ್ಲಿ ನಡೆದಿದೆ.

    ಕೋಟಕ್ ಮಹಿಂದ್ರ ಬ್ಯಾಂಕ್ ನ ಡೆಪ್ಯೂಟಿ ಮ್ಯಾನೇಜರ್ ಅನಿಲ್(29) ಕೊಲೆಯಾಗಿರುವ ವ್ಯಕ್ತಿ. ದುಷ್ಕರ್ಮಿಗಳು ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಬೆಂಗಳೂರಿನ ಬನಶಂಕರಿ ಸಮೀಪದ ಭುವನೇಶ್ವರಿನಗರದ ನಿವಾಸಿಯಾಗಿದ್ದ ಅನಿಲ್ ಅವರ ಶವ ಉತ್ತರಿ ಗ್ರಾಮದ ಸ್ಮಶಾನದಲ್ಲಿ ಪತ್ತೆಯಾಗಿದೆ. ಬೇರೆಡೆ ಹತ್ಯೆ ಮಾಡಿ ಶವವನ್ನು ತಂದು ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.

    ಎರಡು ದಿನಗಳಿಂದ ಅನಿಲ್ ನಾಪತ್ತೆಯಾಗಿದ್ದರು. ಈ ಸಂಬಂಧ ಚನ್ನಮ್ಮನ ಅಚ್ಚುಕಟ್ಟು ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಇನ್ನೆರಡು ತಿಂಗಳಲ್ಲಿ ಅನಿಲ್ ಮದುವೆ ಸಹ ನಿಶ್ಚಯವಾಗಿತ್ತು. ಆದರೆ ಇದೀಗ ಅನಿಲ್ ಶವ ಸ್ಮಶಾನದಲ್ಲಿ ಸಿಕ್ಕಿದೆ.

    ಘಟನೆ ಸಂಬಂಧ ಕಗ್ಗಲಿಪುರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮಗಳು ಸಾವನ್ನಪ್ಪಿದ್ದಕ್ಕೆ ವೈದ್ಯರ ಮೇಲೆ ತಾಯಿಯಿಂದ ಹಲ್ಲೆಗೆ ಯತ್ನ

    ಮಗಳು ಸಾವನ್ನಪ್ಪಿದ್ದಕ್ಕೆ ವೈದ್ಯರ ಮೇಲೆ ತಾಯಿಯಿಂದ ಹಲ್ಲೆಗೆ ಯತ್ನ

    ಬೆಳಗಾವಿ: ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಕ್ಕೆ ಆಕ್ರೋಶಗೊಂಡ ಪೋಷಕರು ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ನಡೆದಿದೆ.

    ಕಳೆದ ಎರಡು ದಿನಗಳ ಹಿಂದೆ ತಾಯವ್ವಾ ಕಾಮಶೆಟ್ಟಿ ಎಂಬ ಬಾಲಕಿ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಹಾಗೂ ಅವರ ನಿರ್ಲಕ್ಷ್ಯಕ್ಕೆ ನಮ್ಮ ಮಗಳು ಸಾವನ್ನಪಿದ್ದಾಳೆ ಎಂದು ತಾಯಿ ಹಾಗೂ ಸಂಬಂಧಿಕರು ಆಕ್ರೋಶಗೊಂಡು ವೈದ್ಯರಾದ ಡಾ. ಅಂಬಲಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

    ಘಟನೆ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಹಿರಿಯ ವೈದ್ಯರು ಹಲ್ಲೆ ನಡೆಸುವುದನ್ನು ತಡೆದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಸದ್ಯ ನ್ಯಾಯ ಒದಗಿಸಿಕೊಡುವವರಿಗೆ ಶವವನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದು ಕುಳಿತಿದ್ದಾರೆ.

  • ಮಲೆ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಅಪರಿಚಿತ ಶವ ಪತ್ತೆ

    ಮಲೆ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಅಪರಿಚಿತ ಶವ ಪತ್ತೆ

    ಚಾಮರಾಜನಗರ: ದೇವಸ್ಥಾನದ ಆವರಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಚಾಮರಾಜನಗರದ ಕೊಳ್ಳೆಗಾಲ ತಾಲೂಕಿನ ಮಲೆ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಪತ್ತೆಯಾಗಿದೆ.

    ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮಲೆ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ರಾತ್ರಿಯಿಂದಲೂ ಅಪರಿಚಿತ ಶವ ಬಿದ್ದಿದರೂ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

    ದೇವಸ್ಥಾನದ ಆವರಣದಲ್ಲಿ ಶವವನ್ನು ನೋಡುತ್ತಿರುವ ಭಕ್ತರು ಇದೀಗ ಗಾಬರಿಯಾಗುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗೆ ತಿಳಿಸಿದರೂ ಸಹ ಶವವನ್ನು ಸ್ಥಳಾಂತರ ಮಾಡುವ ಕೆಲಸಕ್ಕೆ ಮಾತ್ರ ಮುಂದಾಗುತ್ತಿಲ್ಲ. ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಮುಂದೆಯೇ ಈ ಘಟನೆ ಜರುಗಿದ್ದರೂ ಸಹ ಅಧಿಕಾರಿಗಳು ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ.

    ಕಳೆದ 3 ತಿಂಗಳ ಹಿಂದೆಯೂ ಶವ ಪತ್ತೆಯಾಗಿತ್ತು. ಆ ಸಂದರ್ಭದಲ್ಲೂ ಅಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ.

  • ಪ್ಲಾಸ್ಟಿಕ್ ಕವರ್ ನಲ್ಲಿ ನವಜಾತ ಹೆಣ್ಣು ಶಿಶುವಿನ ಮೃತ ದೇಹ ಪತ್ತೆ

    ಪ್ಲಾಸ್ಟಿಕ್ ಕವರ್ ನಲ್ಲಿ ನವಜಾತ ಹೆಣ್ಣು ಶಿಶುವಿನ ಮೃತ ದೇಹ ಪತ್ತೆ

    ರಾಯಚೂರು: ನಗರದ ಮಂಗಳವಾರ ಪೇಟೆಯ ರಾಜಭಕ್ಷ ದರ್ಗಾ ಬಳಿ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿರುವ ನವಜಾತ ಹೆಣ್ಣು ಶಿಶುವಿನ ಮೃತ ದೇಹ ಪತ್ತೆಯಾಗಿದೆ.

    ನಾಯಿಗಳು ಶಿಶುವನ್ನು ಎಳೆದು ಚರಂಡಿಗೆ ಹಾಕಿದಾಗ ಸಾರ್ವಜನಿಕರ ಗಮನಕ್ಕೆ ಬಂದಿದೆ. ಶಿಶು ಜನಿಸಿ ಒಂದೆರಡು ದಿನಗಳು ಮಾತ್ರ ಆಗಿರಬಹುದು ಎನ್ನಲಾಗಿದೆ. ಹೆಣ್ಣು ಶಿಶು ಕಾರಣಕ್ಕೆ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿರುವ ಗುರುತುಗಳಿವೆ.

    ಶಿಶು ಜನಿಸುವಾಗಲೇ ಸಾವನ್ನಪ್ಪಿತ್ತಾ ಅಥವಾ ದರ್ಗಾ ಬಳಿ ಬಿಟ್ಟು ಹೋದಾಗ ಸಾವನ್ನಪ್ಪಿದೆಯಾ ಎಂದು ತಿಳಿದು ಬಂದಿಲ್ಲ. ಸದರಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಾರ್ವಜನಿಕರು ಮಗುವಿನ ಶವವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

  • ಹೂತಿಟ್ಟ ಶವವನ್ನು ಹೊರ ತೆಗೆದು ಚಿನ್ನಾಭರಣ ಕಳ್ಳತನ

    ಹೂತಿಟ್ಟ ಶವವನ್ನು ಹೊರ ತೆಗೆದು ಚಿನ್ನಾಭರಣ ಕಳ್ಳತನ

    ಕಲಬುರಗಿ: ಹೂತ ಶವವನ್ನು ಹೊರ ತೆಗೆದು ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ನಡೆದಿದೆ.

    ಪ್ರೇಮಾಬಾಯಿ ಡಗೆ ಎಂಬ 75 ವರ್ಷದ ಅಜ್ಜಿ ಐದು ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮಕ್ಕಳಿರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕೆಯ ಮೈಮೇಲಿನ ಚಿನ್ನದ ಒಡವೆ ಸಮೇತ ಅಂತ್ಯಕ್ರಿಯೆ ನೆರವೇರಿಸಿದ್ದರು.

    ಈ ಮಾಹಿತಿ ತಿಳಿದ ಪರಿಚಿತ ವ್ಯಕ್ತಿಯಿಂದಲೇ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಕಳೆದ ರಾತ್ರಿ ಸಮಾಧಿಯಿಂದ ಶವ ಹೊರ ತೆಗೆದು ಶವದ ಮೈಮೇಲಿನ 50ಗ್ರಾಂ ಗೂ ಹೆಚ್ಚು ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಖದೀಮರು ಚಿನ್ನಾಭರಣ ದೋಚಿ ಶವ ಹೊರಗೆ ಬಿಟ್ಟು ಪರಾರಿಯಾಗಿದ್ದಾರೆ.

    ಮಂಗಳವಾರ ಬೆಳಗ್ಗೆ ಸಮಾಧಿ ಮೇಲೆ ಬಿದ್ದಿರುವ ಶವ ಕಂಡು ಕುಟುಂಬಸ್ಥರು ಕಂಗಾಲಾಗಿದ್ದು, ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.