Tag: dead body

  • ಕೈಕಾಲು ಕಟ್ಟಿ, ಗೋಣಿ ಚೀಲದಲ್ಲಿ ಮಹಿಳೆಯ ಶವ ಪತ್ತೆ!

    ಕೈಕಾಲು ಕಟ್ಟಿ, ಗೋಣಿ ಚೀಲದಲ್ಲಿ ಮಹಿಳೆಯ ಶವ ಪತ್ತೆ!

    ಬೆಳಗಾವಿ: ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯೊಬ್ಬರ ಮೃತದೇಹವು ನೆರೆಯ ಮಹಾರಾಷ್ಟ್ರದ ನದಿಯಲ್ಲಿ ಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ತಾಯವ್ವ ಶಿವಾಜಿ ಕದಮ(60) ಮೃತ ದುರ್ದೈವಿ. ಬೆಳಗಾವಿ ಸಮೀಪದ ಕೆ.ಕೆ ಕೊಪ್ಪ ಗ್ರಾಮದಿಂದ ಜನವರಿ 19ರಂದು ತಾಯವ್ವ ನಾಪತ್ತೆಯಾಗಿದ್ದರು. ನಾಪತ್ತೆಯಾಗಿದ್ದ ತಾಯವ್ವ ಮೃತದೇಹ ಮಹಾರಾಷ್ಟ್ರದ ನದಿಯಲ್ಲಿ ಪತ್ತೆಯಾಗಿದೆ.

    ಕೊಲ್ಹಾಪೂರ ಜಿಲ್ಲೆಯ ಮುರಗುಡ ಪ್ರದೇಶದಲ್ಲಿರುವ ವೇದಗಂಗಾ ನದಿಯಲ್ಲಿ ಜ.24 ರಂದು ಗೋಣಿ ಚೀಲದಲ್ಲಿ ಕೈಕಾಲು ಕಟ್ಟಿದ್ದ ಸ್ಥಿತಿಯಲ್ಲಿ ತಾಯವ್ವ ಅವರ ಶವ ಪತ್ತೆಯಾಗಿತ್ತು. ಆದರೆ ಮಹಿಳೆಯ ಗುರುತು ಸ್ಥಳಿಯ ಪೊಲೀಸರಿಗೆ ಸಿಕ್ಕಿರಲಿಲ್ಲ. ಈ ವಿಚಾರವಾಗಿ ತನಿಖೆ ನಡೆಸಿದ ಬಳಿಕ ನೆರೆಯ ರಾಜ್ಯದಲ್ಲಿ ಪತ್ತೆಯಾದ ಮೃತದೇಹ ಕಾಣೆಯಾದ ತಾಯವ್ವ ಅವರದ್ದು ಎಂದು ತಿಳಿದುಬಂದಿದೆ.

    ತಾಯವ್ವ ಜೀವನ ನಡೆಸಲು ತರಕಾರಿ ವ್ಯಾಪಾರ ಮಾಡಿಕೊಂಡು ಇದ್ದರು. ಹೀಗೆ ಜ. 16ರಂದು ಕೆಲಸದ ಹಿನ್ನೆಲೆ ತಾಯವ್ವ ಬೆಳಗಾವಿಗೆ ಹೋದವರು ಮನೆಗೆ ಹಿಂತಿರುಗಿರಲಿಲ್ಲ. ಈ ವಿಚಾರವಾಗಿ ತಾಯವ್ವ ಕಾಣೆಯಾಗಿದ್ದಾರೆ ಎಂದು ಮನೆಯವರು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರಿಂದ ಪೊಲೀಸರು ಮಹಿಳೆಯನ್ನು ಪತ್ತೆ ಮಾಡಲು ಹುಡುಕಾಟ ನಡೆಸಿದ್ದರು. ಈಗ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆ ಬಳಿ ಇದ್ದ ಹಣಕ್ಕಾಗಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೇತುವೆಯ ಕೆಳಗೆ ನಟಿಯ ಮೃತದೇಹ ಪತ್ತೆ

    ಸೇತುವೆಯ ಕೆಳಗೆ ನಟಿಯ ಮೃತದೇಹ ಪತ್ತೆ

    ಸಂಬಲ್ಪುರ: ಹಲವು ಆಲ್ಬಂ ನಟಿಯ ಮೃತ ದೇಹ ನದಿ ಸೇತುವೆಯೊಂದರ ಕೆಳಗಡೆ ಪತ್ತೆಯಾಗಿರುವ ಘಟನೆ ಒಡಿಶಾದ ಸಂಬಲ್ಪುರ ಜಿಲ್ಲೆಯಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಸ್ಥಳೀಯರು ಯುವತಿಯ ಮೃತ ದೇಹವನ್ನು ಮಹಾನದಿ ಬ್ರಿಡ್ಜ್ ಬಳಿ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ವೇಳೆ ಆಕೆ ಆಲ್ಬಂ ನಟಿ ಸಿಮ್ರಾನ್ ಸಿಂಗ್ ಎಂದು ತಿಳಿದು ಬಂದಿದೆ. ನಟಿ ಮುಖದ ಮೇಲೆ ಕೆಲ ಗಾಯದ ಗುರುತುಗಳು ಕೂಡ ಪತ್ತೆಯಾಗಿದ್ದು, ಆಕೆ ಬಳಕೆ ಮಾಡುತ್ತಿದ್ದ ಬ್ಯಾಗ್ ಕೂಡ ಪಕ್ಕದಲ್ಲೇ ಸಿಕ್ಕಿದೆ.

    ನಟಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿರುವ ಸ್ಥಳೀಯ ಬುರ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ನಟಿಯನ್ನು ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಿರಚ್ಛೇದವಾಗಿದ್ದ ಮಹಿಳೆ, ಮಕ್ಕಳಿಬ್ಬರ ಮೃತದೇಹ ಡ್ರಮ್‌ನಲ್ಲಿ ಪತ್ತೆ..!

    ಶಿರಚ್ಛೇದವಾಗಿದ್ದ ಮಹಿಳೆ, ಮಕ್ಕಳಿಬ್ಬರ ಮೃತದೇಹ ಡ್ರಮ್‌ನಲ್ಲಿ ಪತ್ತೆ..!

    ಚಂಡೀಗಡ: ಹರಿಯಾಣದ ಭಿವಾನಿ ಜಿಲ್ಲೆಯ ರಸ್ತೆಯಲ್ಲಿ ಬಿದ್ದಿದ್ದ ಡ್ರಮ್‍ನೊಳಗೆ ತಲೆ ಇಲ್ಲದ ಮೂರು ಮೃತ ದೇಹಗಳು ಕಂಡುಬಂದಿವೆ.

    ಖಾರಕ್ ಗ್ರಾಮದ ರೋಹ್ಟಕ್-ಭಿವಾನಿ ರಸ್ತೆಯಲ್ಲಿ ಶುಕ್ರವಾರ ಒಂದು ಡ್ರಮ್ ಪತ್ತೆಯಾಗಿದೆ. ಆದರೆ ಅದರೊಳಗೆ ಮಹಿಳೆ ಮತ್ತು ಇಬ್ಬರು ಮಕ್ಕಳ ಮೃತದೇಹ ಕಂಡು ಬಂದಿದ್ದು, ಮೃತಪಟ್ಟಿದ್ದ ಮೂವರ ತಲೆಯೂ ಕಟ್ ಆಗಿತ್ತು.

    32 ವರ್ಷ ವಯಸ್ಸಿನ ಮಹಿಳೆ, 12 ವರ್ಷ ವಯಸ್ಸಿನ ಬಾಲಕಿ ಮತ್ತು ಎರಡು ವರ್ಷದ ಬಾಲಕ ಎಂದು ತಿಳಿದು ಬಂದಿದೆ. ಮೃತರಿಗೆ ತಲೆ ಇಲ್ಲದ ಕಾರಣ ಅವರ ಗುರುತುಗಳನ್ನು ಪತ್ತೆ ಮಾಡಲು ತುಂಬಾ ಕಷ್ಟಕರವಾಗಿದೆ ಎಂದು ಎಸ್‍ಪಿ ಗಂಗಾ ರಾಮ್ ಪುನಿಯಾ ಹೇಳಿದ್ದಾರೆ.

    ದೆಹಲಿ, ರಾಜಸ್ಥಾನ್ ಮತ್ತು ಪಂಜಾಬ್ ಪೊಲೀಸರು ಕಾಣೆಯಾದ ವ್ಯಕ್ತಿಗಳ ಬಗ್ಗೆ ಯಾರಾದರೂ ದೂರು ಸಲ್ಲಿಸಿದ್ದಾರೆಯೇ ಎಂದು ವಿಚಾರಣೆ ನಡೆಸಲಾಗುತ್ತಿದೆ. ಹಾಗೆಯೇ ನಾಪತ್ತೆಯಾದವರು ಹಾಗೂ ನಮಗೆ ಸಿಕ್ಕಿರುವ ಮೃತ ದೇಹಗಳು ಮ್ಯಾಚ್ ಆಗುತ್ತವೆಯಾ ಎಂದು ತನಿಖೆ ಮಾಡುತ್ತಿದ್ದೇವೆ ಎಂದು ಎಸ್‍ಪಿ ತಿಳಿಸಿದ್ದಾರೆ.

    ಸದ್ಯಕ್ಕೆ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಗುರುತು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಯಾರೋ ಮೂವರ ಶಿರಚ್ಛೇದನ ಮಾಡಿ, ಬಳಿಕ ಮೃತ ದೇಹಗಳನ್ನು ಡ್ರಮ್ ನಲ್ಲಿ ತುಂಬಿ ರಸ್ತೆಯಲ್ಲಿ ಬಿಸಾಡಿದ್ದಾರೆ ಎಂದು ಹೇಳಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂತ್ಯಕ್ರಿಯೆ ಮುಗಿದ 4 ದಿನಗಳ ನಂತ್ರ ಮನೆಗೆ ಬಂದ ಮೃತ ಮಹಿಳೆ!

    ಅಂತ್ಯಕ್ರಿಯೆ ಮುಗಿದ 4 ದಿನಗಳ ನಂತ್ರ ಮನೆಗೆ ಬಂದ ಮೃತ ಮಹಿಳೆ!

    ಛತ್ತೀಸ್‍ಗಢ್: ಕಾಣೆಯಾಗಿದ್ದ ಮಹಿಳೆಯ ಮೃತ ದೇಹ ಪತ್ತೆಯಾಗಿ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದ 4 ದಿನಗಳ ಬಳಿಕ ಆಕೆ ಮನೆಗೆ ಬಂದಿರುವ ಘಟನೆ ಪಂಜಾಬ್‍ನ ಪಟಿಯಾಲಾದಲ್ಲಿ ನಡೆದಿದೆ.

    ಮಗಳ ಸಾವಿನಿಂದ ನೊಂದು ದುಃಖದಲ್ಲಿದ್ದ ಕುಟುಂಬಸ್ಥರು ಮಹಿಳೆಯನ್ನು ನೋಡಿದ ಕೂಡಲೇ ಅಚ್ಚರಿ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ನಡೆದಿದ್ದೇನು?
    26 ವರ್ಷದ ನೈನಾ ಚಮಕೌರ್ ಸಾಹೀಬ್ ಎಂಬಾತನನ್ನು ವಿವಾಹವಾಗಿದ್ದಳು. ಆದರೆ ಡಿಸೆಂಬರ್ 8ರಂದು ಮನೆಯಿಂದ ಬೇರೊಬ್ಬ ಪುರುಷನೊಂದಿಗೆ ನಾಪತ್ತೆಯಾಗಿದ್ದ ನೈನಾ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಡಿಸೆಂಬರ್ 11ರಂದು ಮಹಿಳೆಯೊಬ್ಬಳ ಶವ ಗ್ರಾಮದ ಪಕ್ಕ ಪತ್ತೆಯಾಗಿತ್ತು. ಡಿಸೆಂಬರ್ 14ರಂದು ಇದು ಮಗಳ ಶವ ಎಂದು ತಿಳಿದ ನೈನಾ ಕುಟುಂಬಸ್ಥರು ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಆದರೆ ನಾಲ್ಕು ದಿನಗಳ ಬಳಿಕ ನೈನಾ ತಾನು ಪರಾರಿಯಾಗಿದ್ದ ವ್ಯಕ್ತಿಯೊಂದಿಗೆ ಮನೆಗೆ ವಾಪಸ್ ಆಗಮಿಸಿದ್ದಾಳೆ.

    ಈಗ ಅಂತ್ಯ ಸಂಸ್ಕಾರ ನಡೆಸಿದ ಮಹಿಳೆಯ ಮೃತದೇಹ ಯಾರದ್ದು ಎನ್ನುವ ಪ್ರಶ್ನೆ ಎದ್ದಿದೆ. ನೈನಾ ಪತಿಯೂ ಕೂಡ ಪತ್ನಿ ಕಾಣೆಯಾದ ದಿನದಿಂದ ನಾಪತ್ತೆ ಆಗಿದ್ದ ಕಾರಣ ಪೊಲೀಸರು ಆತನೇ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೇ ಕುಟುಂಬಸ್ಥರು ಕೂಡ ಮೃತ ದೇಹ ನಮ್ಮದೇ ಎಂದು ತಿಳಿಸಿದ ಕಾರಣದಿಂದ ಪೊಲೀಸರು ಮೃತದೇಹವನ್ನು ನೀಡಿದ್ದರು.

    ಸದ್ಯ ಅನಾಮದೇಯ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿರುವ ಕಾರಣ ಡಿಎನ್‍ಎ ಮಾದರಿ ಲಭ್ಯವಿದ್ದು, ಈ ಮೂಲಕ ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಒಂದೊಮ್ಮೆ ಕುಟುಂಬಸ್ಥರು ಮೃತ ದೇಹ ನಮ್ಮದಲ್ಲ ಎಂದು ಹೇಳಿದ್ದರೂ ನಿಯಮದ ಅನ್ವಯ ನಾವೇ ಅಂತ್ಯ ಸಂಸ್ಕಾರ ನಡೆಸುತ್ತಿದ್ದೇವು. ಮರಣೋತ್ತರ ಪರೀಕ್ಷೆ ಹಾಗೂ ಡಿಎನ್‍ಎ ವರದಿ ಹಾಗೂ ಮಹಿಳೆಯ ಬೆರಳಚ್ಚು ಮಾದರಿ ಲಭ್ಯವಿದ್ದು, ಈ ಮೂಲಕ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಮಶಾನಕ್ಕೆ ಮೃತದೇಹ ಕೊಂಡ್ಯೊಯಲು ರಸ್ತೆ ಇಲ್ದೇ ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ರು

    ಸ್ಮಶಾನಕ್ಕೆ ಮೃತದೇಹ ಕೊಂಡ್ಯೊಯಲು ರಸ್ತೆ ಇಲ್ದೇ ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ರು

    ಚಿಕ್ಕಬಳ್ಳಾಪುರ: ಮಹಿಳೆಯ ಮೃತದೇಹವನ್ನ ಸ್ಮಶಾನಕ್ಕೆ ಕೊಂಡ್ಯೊಯಲು ರಸ್ತೆಯಿಲ್ಲದೆ ಮೃತರ ಸಂಬಂಧಿಕರು ನಡು ರಸ್ತೆಯಲ್ಲೇ ಶವವನ್ನಿಟ್ಟು ಪ್ರತಿಭಟನೆ ನಡೆಸಿದ ಮನಕಲಕುವ ಘಟನೆ ಜಿಲ್ಲೆಯ ಗುಡಿಬಂಡೆ ತಾಲೂಕಿನ ರೊಪ್ಪಾರ್ಲಹಳ್ಳಿಯಲ್ಲಿ ನಡೆದಿದೆ.

    ಗ್ರಾಮದ 35 ವರ್ಷದ ಉಮಾ ಎಂಬ ಮಹಿಳೆ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದರು. ಹೀಗಾಗಿ ಸಂಬಂಧಿಕರು ಅಂತಿಮ ಕಾರ್ಯ ನಡೆಸಲು ಗ್ರಾಮದ ಹೊರವಲಯದಲ್ಲಿರುವ ಸ್ಮಶಾನಕ್ಕೆ ಮೃತದೇಹ ಕೊಂಡ್ಯೊಯಲು ತೆರಳಿದ್ದರು. ಆದರೆ ಸ್ಮಶಾನಕ್ಕೆ ತೆರಳುವ ದಾರಿಯನ್ನೇ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಮಾಲೀಕ ರಘುನಾಥ್ ಒತ್ತುವರಿ ಮಾಡಿಕೊಂಡು ವರ್ಷಗಳಿಂದ ಇದ್ದ ರಸ್ತೆಗೆ ಮುಳ್ಳಿನ ತಂತಿಬೇಲಿ ನಿರ್ಮಿಸಿದ್ದ.

    ಇದರಿಂದ ಹಲವು ಗಂಟೆಗಟ್ಟಲೇ ನಡುರಸ್ತೆಯಲ್ಲೇ ಶವವಿಟ್ಟು ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಸ್ಥಳೀಯ ಕಂದಾಯ ಇಲಾಖಾಧಿಕಾರಿಗಳಿಗೆ ಸಂಪರ್ಕ ಮಾಡಿದರು ಪ್ರಯೋಜನವಾಗಿಲ್ಲ. ಹೀಗಾಗಿ ಕೊನೆಗೆ ಮೃತಳ ಸಂಬಂಧಿಕರೇ ಮುಳ್ಳು ತಂತಿ ಬೇಲಿಯನ್ನು ಕಿತ್ತು ಹಾಕಿ ಸ್ಮಶಾನಕ್ಕೆ ಮೃತದೇಹ ಕೊಂಡೊಯ್ದಿದ್ದಾರೆ. ಸ್ಮಶಾನಕ್ಕೆ ಉತ್ತಮವಾದ ರಸ್ತೆಯಿಲ್ಲದ ಪರಿಣಾಮ, ಕಲ್ಲುಮುಳ್ಳು-ಹಳ್ಳಗಳ ಹಾದಿಯಲ್ಲೇ ಹರಸಾಹಸ ಪಟ್ಟ ಸಂಬಂಧಿಕರು ಸ್ಮಶಾನಕ್ಕೆ ತೆರಳಿ ಅಂತ್ಯಕ್ರಿಯೆ ನೇರವೇರಿಸಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ವರದಿಗಾರರು ತಾಲೂಕು ಅಧಿಕಾರಿಗಳನ್ನು ಸಂಪರ್ಕಿಸಿದ ವೇಳೆ ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಬರೆಹರಿಸುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೀರಯೋಧನ ಪಾರ್ಥಿವ ಶರೀರ ಇಂದು ಸ್ವಗ್ರಾಮಕ್ಕೆ

    ವೀರಯೋಧನ ಪಾರ್ಥಿವ ಶರೀರ ಇಂದು ಸ್ವಗ್ರಾಮಕ್ಕೆ

    ಬೆಳಗಾವಿ: ಜಮ್ಮುವಿನಲ್ಲಿ ಸೋಮವಾರ ವೀರಮರಣ ಹೊಂದಿದ್ದ ಯೋಧ ಪ್ರಕಾಶ್ ಜಾಧವ್ ಅವರ ಪಾರ್ಥಿವ ಶರೀರ ಇಂದು ಅವರ ಸ್ವಗ್ರಾಮ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೂಧಿಹಾಳ ಗ್ರಾಮಕ್ಕೆ ತಲುಪಲಿದೆ.

    ಯೋಧ ಪ್ರಕಾಶ್ ಜಾಧವ್ ಜಮ್ಮುವಿನಲ್ಲಿ ಉಗ್ರರ ಜತೆ ಸೆಣಸಾಡಿ ವೀರಮರಣ ಹೊಂದಿದ್ದರು. ಇಂದು ಪ್ರಕಾಶ್ ಪಾರ್ಥಿವ ಶರೀರ ದೆಹಲಿ, ಪುಣೆ, ಬೆಳಗಾವಿ ಮಾರ್ಗವಾಗಿ ಸ್ವಗ್ರಾಮ ಬೂಧಿಹಾಳಕ್ಕೆ ಸೇನಾ ಸಿಬ್ಬಂದಿ ತರಲಿದ್ದಾರೆ. ವೀರ ಮರಣ ಹೊಂದಿರುವ ಪ್ರಕಾಶ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಇಂದು ನಡೆಯಲಿದೆ.

    ಪ್ರಕಾಶ್ ಅವರಿಗೆ ಕಳೆದ ವರ್ಷ ಮದುವೆಯಾಗಿತ್ತು. ಮೂರು ತಿಂಗಳ ಮಗು ಕೂಡ ಇತ್ತು. ಇದೀಗ ಯೋಧ ತನ್ನ ಮಡದಿ, ಮಗು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ವೀರಯೋಧನ ಸಾವಿನಿಂದ ಅವರ ಸ್ವಗ್ರಾಮದಲ್ಲಿ ನೀರವ ಮೌನ ಮಡುಗಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶವವನ್ನು ಕುಕ್ಕಿ ಕುಕ್ಕಿ ತಿಂದ ನರಭಕ್ಷಕ ಕಾಗೆ

    ಶವವನ್ನು ಕುಕ್ಕಿ ಕುಕ್ಕಿ ತಿಂದ ನರಭಕ್ಷಕ ಕಾಗೆ

    ರಾಂಚಿ: ಜಾರ್ಖಂಡ್‍ನ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಒಂದಾದ ರಿಮ್ಸ್ ಆಸ್ಪತ್ರೆಯಲ್ಲಿ ಶವಗಾರದ ಮುಂದೆ ಇರಿಸಿದ್ದ ಶವವನ್ನು ಕಾಗೆಯೊಂದು ಕುಕ್ಕಿ ಕುಕ್ಕಿ ತಿಂದಿದೆ.

    ಮಂಗಳವಾರ ಬೆಳಗ್ಗೆ ರಾಂಚಿಯ ಮಾರ್ಕೆಟ್ ಬಳಿಯ ಛಾಂದ್ರಿ ಕೆರೆಯಲ್ಲಿ ಅನಾಥ ಶವವೊಂದು ಪತ್ತೆಯಾಗಿತ್ತು. ಪೊಲೀಸರು ಆ ಶವವನ್ನು ರಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ತಂದಿದ್ದರು. ಆಸ್ಪತ್ರೆಯ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಗಳನ್ನು ಮುಗಿಸಿ ಬರಲು ಪೊಲೀಸರು ಶವವನ್ನು ಶವಗಾರದ ಮುಂದೆ ಇರಿಸಿ ತೆರಳಿದ್ದಾರೆ. ಈ ವೇಳೆ ಕಾಗೆಯೊಂದು ಶವದ ಮೇಲೆ ಕೂತು ಮೃತನ ತಲೆ ಭಾಗದ ಮಾಂಸವನ್ನು ಕುಕ್ಕಿ ಕುಕ್ಕಿ ತಿಂದಿದೆ.

    ಘಟನೆ ಕುರಿತು ಪ್ರತಿಕ್ರಿಯಿಸಿದ ರಿಮ್ಸ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ, ಈ ತರಹದ ಘಟನೆಗಳು ಮುಂದೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಆಸ್ಪತ್ರೆಯಲ್ಲಿ ಕಾಗೆ ಶವವನ್ನು ತಿನ್ನುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಾಗೆ ವಿಡಿಯೋ ವೈರಲ್ ಆಗಿದ್ದು, ಇದನ್ನು ನೋಡಿ ಜನ ಎಂಥಾ ಕಾಲ ಬಂತಪ್ಪಾ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿ ಪಾರ್ಥಿವ ಶರೀರ ರವಾನೆಗೆ ಮತ್ತೊಮ್ಮೆ ಕಾಲದ ಮೊರೆ ಹೋದ ಸಮ್ಮಿಶ್ರ ಸರ್ಕಾರ!

    ಅಂಬಿ ಪಾರ್ಥಿವ ಶರೀರ ರವಾನೆಗೆ ಮತ್ತೊಮ್ಮೆ ಕಾಲದ ಮೊರೆ ಹೋದ ಸಮ್ಮಿಶ್ರ ಸರ್ಕಾರ!

    ಮಂಡ್ಯ: ರೆಬಲ್ ಸ್ಟಾರ್ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮಂಡ್ಯದಿಂದ ಬೆಂಗಳೂರಿಗೆ ರವಾನಿಸಲು ಸಮ್ಮಿಶ್ರ ಸರ್ಕಾರ ಮತ್ತೊಮ್ಮೆ ಕಾಲದ ಮೊರೆ ಹೋಗಿದೆ.

    ಅಂಬಿ ಪಾರ್ಥಿವ ಶರೀರ ಬೆಂಗಳೂರಿಗೆ ರವಾನಿಸಲು ರಾಹುಕಾಲ ತಟ್ಟಿದೆ. ರಾಹುಕಾಲದ ಹಿನ್ನಲೆಯಲ್ಲಿ 9 ಗಂಟೆ ನಂತರ ವಿಶ್ವೇಶ್ವರಯ್ಯ ಸ್ಟೇಡಿಯಂನಿಂದ ಪಾರ್ಥಿವ ಶರೀರ ಬೆಂಗಳೂರಿಗೆ ಹೊರಡಲಿದೆ. ಇದನ್ನೂ ಓದಿ:ಬೆಂಗ್ಳೂರಿಗರೇ ಗಮನಿಸಿ, ಅಂಬಿ ಅಂತಿಮ ಯಾನ – ಯಾವ ಸಮಯಕ್ಕೆ ಏನು ನಿಗದಿಯಾಗಿದೆ?

    ಈ ಹಿಂದೆ ಬೆಳಗ್ಗೆ 6 ಗಂಟೆಗೆ ಪಾರ್ಥಿವ ಶರೀರ ಕರೆದೊಯ್ಯಲು ನಿರ್ಧರಿಸಲಾಗಿತ್ತು. ಆದರೆ ಇಂದು ಬೆಳಗ್ಗೆ 7.30 ರಿಂದ 9 ಗಂಟೆ ವರೆಗೂ ರಾಹುಕಾಲ ಇರುವುದರಿಂದ 9 ಗಂಟೆ ನಂತರ ಪಾರ್ಥಿವ ಶರೀರ ಬೆಂಗಳೂರಿಗೆ ರವಾನೆಯಾಗಲಿದೆ. ಇದನ್ನೂ ಓದಿ: ಕರ್ಮಭೂಮಿಯಲ್ಲಿ ಕರ್ಣನಿಗೆ ನಮನ – ಅಭಿಮಾನಿಗಳನ್ನು ನಿಯಂತ್ರಿಸಲು ವೇದಿಕೆ ಏರಿದ ಯಶ್

    ಕಳೆದ ಕೆಲವು ದಿನಗಳಿಂದ ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಶನಿವಾರ ರಾತ್ರಿ ಮೃತಪಟ್ಟಿದ್ದರು. ಮಂಡ್ಯ ಬಸ್ ದುರಂತ ಘಟನೆಯ ಬಳಿಕ ಸುಸ್ತಾಗಿದ್ದ ಅಂಬರೀಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂಬರೀಶ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯ ಶವ ಪತ್ತೆ

    ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯ ಶವ ಪತ್ತೆ

    ಹಾವೇರಿ: ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯ ಮೃತದೇಹವೊಂದು ಜಿಲ್ಲೆಯ ರಾಣೇಬೆನ್ನೂರು ನಗರದ ರೈಲು ಹಳಿ ಬಳಿ ಪತ್ತೆಯಾಗಿದೆ.

    ಸಾವಿತ್ರಾ ಬೆನ್ನೂರ (35) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಮೃತ ಸಾವಿತ್ರಾ ರಾಣೇಬೆನ್ನೂರು ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಶಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

    ಮಹಿಳೆ ಶವ ಪತ್ತೆಯಾಗುತ್ತಿದ್ದಂತೆ ಹುಬ್ಬಳ್ಳಿ ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಹುಬ್ಬಳ್ಳಿಯ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಹಣಕ್ಕಾಗಿ ಮೃತ ದೇಹಕ್ಕೆ ಚಿಕಿತ್ಸೆ – ಕುಟುಂಬ ಸದಸ್ಯರ ಆಕ್ರೋಶಕ್ಕೆ ಮಣಿದು ಚಾರ್ಜ್ ಮಾಡದೇ ಶವ ನೀಡಿದ್ರು!

    ಹಣಕ್ಕಾಗಿ ಮೃತ ದೇಹಕ್ಕೆ ಚಿಕಿತ್ಸೆ – ಕುಟುಂಬ ಸದಸ್ಯರ ಆಕ್ರೋಶಕ್ಕೆ ಮಣಿದು ಚಾರ್ಜ್ ಮಾಡದೇ ಶವ ನೀಡಿದ್ರು!

    ಬೆಂಗಳೂರು: ಹಣಕ್ಕಾಗಿ ಮೃತದೇಹಕ್ಕೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎನ್ನುವ ಆರೋಪ ನಗರದ ಖಾಸಗಿ ಆಸ್ಪತ್ರೆಯ ಮೇಲೆ ಬಂದಿದೆ.

    ಚಿಕಿತ್ಸೆಯ ನೆಪವೊಡ್ಡಿ, ಬರೋಬ್ಬರಿ 17 ದಿನಗಳ ಕಾಲ ದಾಖಲಿಸಿಕೊಂಡು ಚಾಮರಾಜಪೇಟೆಯ ಬೃಂದಾವನ್ ಏರಿಯಾನ್ ಆಸ್ಪತ್ರೆ ಹಣ ದೋಚಲು ಮುಂದಾಗಿದೆ ಎಂದು ಮೃತ ವ್ಯಕ್ತಿಯ ಸಂಬಂಧಿಕರು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಆಡಳಿತ ಮಂಡಳಿ ಚಿಕಿತ್ಸೆಯ ವೆಚ್ಚವನ್ನು ಪಡೆಯದೇ ಮೃತ ದೇಹವನ್ನು ನೀಡಿ ರಾಜಿ ಮಾಡಿಕೊಂಡಿದೆ. ಇದನ್ನು ಓದಿ: ಹಣ ನೀಡಿಲ್ಲವೆಂದು ರೋಗಿಯನ್ನು ಆಸ್ಪತ್ರೆಯಲ್ಲಿ ಇಟ್ಟುಕೊಂಡ್ರೆ ಅಪರಾಧ!

    ಏನಿದು ಪ್ರಕರಣ?:
    ಚನ್ನಪಟ್ಟಣ ಮೂಲದ ಬುಕ್ಕಸಾಗರ ನಿವಾಸಿ ಮಹದೇವಪ್ಪ (46) ಎಚ್1 ಎನ್1 ಗೆ ತುತ್ತಾಗಿ ಇದೇ ತಿಂಗಳು 1ರಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದರು. ಚಿಕಿತ್ಸೆ ಪಡೆದ ಅವರು 5 ದಿನಕ್ಕೆ ಚೇತರಿಕೆಗೊಂಡಿದ್ದರೂ, ಆಸ್ಪತ್ರೆಯ ಸಿಬ್ಬಂದಿ ಕುಂಟು ನೆಪ ಹೇಳಿ ಚಿಕಿತ್ಸೆ ಮುಂದುವರಿಸಿದ್ದರು. ಬೆಡ್ ಮೇಲೆ ಕಟ್ಟಿ ಅನಸ್ತೇಶಿಯಾ ನೀಡಿ ಚಿಕಿತ್ಸೆ ನೀಡುವುದಾಗಿ ಹೇಳಿದ್ದರು.

    ಈ ಸಂದರ್ಭದಲ್ಲಿ ರೋಗಿಯನ್ನು ಮಾತನಾಡಿಸಲು ಬಿಡದೇ ಬರೋಬ್ಬರಿ 17 ದಿನಗಳ ಕಾಲ ಚಿಕಿತ್ಸೆ ನೀಡಿದ್ದಾರೆ. ರೋಗಿಯನ್ನು ಮಾತನಾಡಿಸಲು ಮುಂದಾಗುತ್ತಿದ್ದಂತೆ ತಡೆಯುತ್ತಿದ್ದ ವೈದ್ಯರು, ನಿಮ್ಮವರು ಚೆನ್ನಾಗಿದ್ದಾರೆ. ತೊಂದರೆ ಕೊಡಬೇಡಿ ಅಂತಾ ಸೂಚನೆ ನೀಡಿದ್ದಾರೆ. ವೈದ್ಯರ ಮಾತಿಗೆ ಬೆಲೆ ನೀಡಿ ಸಂಬಂಧಿಕರು ಮಹದೇವಪ್ಪ ಹುಷಾರಾಗುತ್ತಿದ್ದಾರೆ ಎಂದೇ ನಂಬಿದ್ದರು. ಆದರೆ ಇಂದು ಬೆಳಗ್ಗೆ ನಾಲ್ಕು ಗಂಟೆಗೆ ಫೋನ್ ಮಾಡಿ, ಮಹದೇವಪ್ಪ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಸಂಬಂಧಿ ರಘುಸ್ವಾಮಿ ದೂರಿದ್ದಾರೆ.

    ಮೃತಪಟ್ಟ ವಿಚಾರ ತಿಳಿದ ಕುಟುಂಬಸ್ಥರು ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಇದನ್ನು ಅರಿತ ಆಸ್ಪತ್ರೆಯ ಸಿಬ್ಬಂದಿ, ಮಹದೇವಪ್ಪ ಚೆನ್ನಾಗಿದ್ದಾರೆ. ನೀವು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿ ಮನವೊಲಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಮಹಾದೇವಪ್ಪ ಸಹೋದರಿ ಆಸ್ಪತ್ರೆ ಸಿಬ್ಬಂದಿಗೆ ಫುಲ್ ಜಾರ್ಜ್ ತೆಗೆದುಕೊಂಡಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಆಸ್ಪತ್ರೆ ಸಿಬ್ಬಂದಿ ಪರೋಕ್ಷವಾಗಿ ತಪ್ಪೊಪ್ಪಿಕೊಂಡು, ರಾಜಿ ಮಾಡಿಕೊಂಡು ಚಿಕಿತ್ಸೆ ಚಾರ್ಜ್ ಪಡೆಯದೇ ಶವ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/SA2swgIImVw