Tag: dead body

  • ವಿಮಾನ ಪತನಗೊಂಡ 56 ವರ್ಷಗಳ ಬಳಿಕ 4 ಮೃತದೇಹಗಳು ಪತ್ತೆ

    ವಿಮಾನ ಪತನಗೊಂಡ 56 ವರ್ಷಗಳ ಬಳಿಕ 4 ಮೃತದೇಹಗಳು ಪತ್ತೆ

    ನವದೆಹಲಿ: 56 ವರ್ಷಗಳ ಹಿಂದೆ ಸಂಭವಿಸಿದ್ದ ವಿಮಾನ ಅಪಘಾತವೊಂದರಲ್ಲಿ (Plane Crash) ನಾಪತ್ತೆಯಾಗಿದ್ದ ಮೃತದೇಹಗಳಲ್ಲಿ ನಾಲ್ಕು ಮೃತ ದೇಹಗಳು ಪತ್ತೆಯಾಗಿದೆ.

    ಇದೀಗ ಹಿಮಭರಿತ ಭೂಪ್ರದೇಶದಲ್ಲಿ ಹುದುಗಿಹೋಗಿದ್ದ ವಿಮಾನದ ಅವಶೇಷಗಳು ದೊರೆತಿದ್ದು, ಪತ್ತೆಯಾದ ಮೃತ ದೇಹಗಳಲ್ಲಿ ಮೂವರ ಗುರುತನ್ನು ಪತ್ತೆ ಹಚ್ಚಲಾಗಿದ್ದು, ಸೇನೆಯ ವಿವಿಧ ವಲಯದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಸೈನಿಕರು ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಪ್ರಜ್ವಲ್‌ ಪ್ರಕರಣಕ್ಕೆ ಭವಾನಿಯನ್ನು ಎಳೆ ತಂದಾಗ ಸರಿ ಅನ್ನಿಸಿತ್ತಾ: ಕಾಂಗ್ರೆಸ್‌ಗೆ ಟೀಕೆಗೆ ಅಶೋಕ್‌ ಪ್ರಶ್ನೆ

    ನಾಲ್ಕು ಶವಗಳ ಪೈಕಿ ಮೂರು ಮೃತದೇಹಗಳು ಮಲ್ಖಾನ್ ಸಿಂಗ್, ಸಿಪಾಯಿ ನಾರಾಯಣ್ ಸಿಂಗ್ ಮತ್ತು ಕುಶಲಕರ್ಮಿ ಥಾಮಸ್ ಚರಣ್ ಅವರದ್ದಾಗಿದೆ ಹಾಗೂ ಉಳಿದೊಂದು ಮೃತ ದೇಹದಿಂದ ವಶಪಡಿಸಿಕೊಂಡ ದಾಖಲೆಗಳು ವ್ಯಕ್ತಿಯನ್ನು ನಿರ್ಣಾಯಕವಾಗಿ ಗುರುತಿಸಿಲ್ಲ. ಆದರೆ, ಅವರ ಸಂಬಂಧಿಕರ ವಿವರಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಕುರಿತು ಸೇನಾ ಅಧಿಕಾರಿಗಳು ಮಾತನಾಡಿ, ಭಾರತೀಯ ಸೇನೆಯ ಡೋಗ್ರಾ ಸ್ಕೌಟ್ಸ್ ಮತ್ತು ತಿರಂಗಾ ಮೌಂಟೇನ್ ರೆಸ್ಕ್ಯೂ ಸಿಬ್ಬಂದಿಯನ್ನು ಒಳಗೊಂಡ ಜಂಟಿ ತಂಡವು ಕಾರ್ಯಾಚರಣೆಯನ್ನು ನಡೆಸಿದೆ. ಇದರಲ್ಲಿ 4 ಶವಗಳನ್ನು ಪತ್ತೆ ಮಾಡಿದೆ. ಸಿಬ್ಬಂದಿಗಳಿಂದ ನಡೆಸಲಾದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ತಿಳಿಸಿದ್ದಾರೆ.

    ಏನಿದರ ಹಿನ್ನೆಲೆ:
    1968ರಲ್ಲಿ 56 ವರ್ಷಗಳ ಹಿಂದೆ ಭಾರತೀಯ ವಾಯುಪಡೆಯ A-12 ಎಂಬ ವಿಮಾನವು ಹಿಮಾಚಲ ಪ್ರದೇಶದ ರೋಹ್ಟಾಂಗ್ ಪಾಸ್‌ನಲ್ಲಿ (Rohtang Pass) ಅಪಘಾತಕ್ಕೀಡಾಗಿತ್ತು. ಫೆಬ್ರವರಿ 7, 1968 ರಂದು 102 ಜನರನ್ನು ಹೊತ್ತಿದ್ದ ಅವಳಿ-ಎಂಜಿನ್ ಟರ್ಬೊಪ್ರಾಪ್ ಸಾರಿಗೆ ವಿಮಾನವು ಚಂಡೀಗಢದಿಂದ ಲೇಹ್‌ಗೆ ಹಾರುತ್ತಿದ್ದಾಗ ನಾಪತ್ತೆಯಾಗಿತ್ತು.

    ಅಪಘಾತಕ್ಕೀಡಾದ ವಿಮಾನದಲ್ಲಿ ಈ ಹಿಂದೆ 2003ರಲ್ಲಿ ಮೊದಲ ಬಾರಿಗೆ ಅಟಲ್ ಬಿಹಾರಿ ವಾಜಪೇಯಿ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ನ (Atal Bihari Vajpayee Institute of Mountaineering) ಪರ್ವತಾರೋಹಿಗಳು ಅವಶೇಷಗಳನ್ನು ಪತ್ತೆಹಚ್ಚಲಾಗಿತ್ತು. ಅದಾದ ಬಳಿಕ 2005, 2006, 2013, ಮತ್ತು 2019ರಲ್ಲಿ ಡೋಗ್ರಾ ಸ್ಕೌಟ್ಸ್ (Dogra Scouts) ವಿವಿಧ ಕಾರ್ಯಾಚರಣೆಗಳನ್ನು ನಡೆಸಿತ್ತು.

    2019ರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಐದು ಮೃತ ದೇಹಗಳನ್ನು ಹೊರ ತೆಗೆಯಲಾಗಿತ್ತು. ಇದೀಗ ಚಂದ್ರಭಾಗ ಮೌಂಟೇನ್ ಎಕ್ಸ್ಪೆಡಿಶನ್ (Chandra Bhaga Mountain Expedition) ಇನ್ನೂ ನಾಲ್ಕು ದೇಹಗಳನ್ನು ವಶಪಡಿಸಿಕೊಂಡಿದೆ. ಇದು ಭಾರತದ ದೀರ್ಘಾವಧಿಯ ಶೋಧ ಕಾರ್ಯಾಚರಣೆಯಲ್ಲಿ ಗಮನಾರ್ಹ ಯಶಸ್ಸನ್ನು ತಂದಿದೆ.ಇದನ್ನೂ ಓದಿ: ಮುಡಾ ಸೈಟ್ ವಾಪಸ್ ನೀಡಿರುವುದು ಒಳ್ಳೆಯ ನಿರ್ಧಾರ – ಪರಮೇಶ್ವರ್

  • MBA ಓದಲು ಇಟಲಿಗೆ ತೆರಳಿದ್ದ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ

    MBA ಓದಲು ಇಟಲಿಗೆ ತೆರಳಿದ್ದ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ

    ರೋಮ್:‌ ಭಾರತೀಯ ವಿದ್ಯಾರ್ಥಿಯೊಬ್ಬ (Indian Student) ಇಟಲಿಯಲ್ಲಿ (Italy) ನಿಗೂಢವಾಗಿ ಸಾವನ್ನಪ್ಪಿರುವ ಬಗ್ಗೆ ಬೆಳಕಿಗೆ ಬಂದಿದ್ದು, ಇದೀಗ ಆತನ ಕುಟುಂಬದವರು ಸರ್ಕಾರದ ನೆರವು ಬಯಸಿದ್ದಾರೆ.

    ಮೃತನನ್ನು ರಾಮ್‌ ರಾವತ್‌ ಎಂದು ಗುರುತಿಸಲಾಗಿದ್ದು, ಈತ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ನಿವಾಸಿ. ಪೊಲೀಸರ ಪ್ರಕಾರ, ರಾವುತ್ ಎಂಬಿಎ (MBA) ಓದಲು ಇಟಲಿಗೆ ಹೋಗಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಹೊಸ ವರ್ಷದ ಶುಭಾಶಯಗಳನ್ನು ತಿಳಿಸಲು ರಾವುತ್ ಅವರ ಪೋಷಕರು ಕರೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ.

    ಪೋಷಕರು ಮಾಡಿದ ಕರೆಯನ್ನು ರಾವತ್‌ ಸ್ವೀಕರಿಸಲಿಲ್ಲ. ಹೀಗಾಗಿ ಸಂಶಯಗೊಂಡ ಅವರು ವಸತಿಗೃಹದ ಮಾಲೀಕರನ್ನು ಸಂಪರ್ಕಿಸಿದರು. ಈ ವೇಳೆ ಅವರು ಮತ್ತೊಂದು ಮನೆಯ ವಾಶ್ ರೂಂನಲ್ಲಿ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸ್ಪಾ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ- 44 ಯುವತಿಯರ ರಕ್ಷಣೆ

    ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಪೋಷಕರು ಕಂಗಾಲಾಗಿದ್ದಾರೆ. ಅಲ್ಲದೇ ಆತನ ಮೃತದೇಹವನ್ನು ಭಾರತಕ್ಕೆ (India) ಕರೆತರಲು ಜಾರ್ಖಂಡ್‌ನ ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳನ್ನು ಸಂಪರ್ಕಿಸಿ ಮನವಿ ಮಾಡಿಕೊಂಡಿದ್ದಾರೆ.

    ಘಟನೆಯ ಕುರಿತು ಮಾತನಾಡಿದ ಪಶ್ಚಿಮ ಸಿಂಗ್‌ಭೂಮ್‌ನ ಡೆಪ್ಯೂಟಿ ಕಮಿಷನರ್ ಅನನ್ಯ ಮಿತ್ತಲ್, ರಾಮ್ ರಾವತ್ ಸಾವಿನ ಬಗ್ಗೆ ನನಗೆ ಮಾಹಿತಿ ಬಂದಿದೆ. ಅಗತ್ಯ ಕ್ರಮಕ್ಕಾಗಿ ಗೃಹ ಇಲಾಖೆ ಮತ್ತು ಜಾರ್ಖಂಡ್‌ನ ವಲಸೆ ಸೆಲ್‌ಗೆ ತಿಳಿಸಲಾಗಿದೆ ಎಂದು ಹೇಳಿದರು.

    ಪ್ರಕರಣದ ಎಲ್ಲಾ ಬೆಳವಣಿಗೆಗಳ ಮೇಲೆ ನಿಗಾ ಇಡುತ್ತಿದ್ದೇನೆ. ರಾಮ್‌ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಮಿತ್ತಲ್ ಹೇಳಿದ್ದಾರೆ.

  • ಮೋರಿಯಲ್ಲಿ ಮಗುವಿನ ಮೃತದೇಹ ಪತ್ತೆ ಪ್ರಕರಣ – ಅಂತ್ಯಸಂಸ್ಕಾರಕ್ಕೆ ದಿಕ್ಕು ತೋಚದೇ ಬಿಟ್ಟುಹೋಗಿದ್ದ ಪೋಷಕರು

    ಮೋರಿಯಲ್ಲಿ ಮಗುವಿನ ಮೃತದೇಹ ಪತ್ತೆ ಪ್ರಕರಣ – ಅಂತ್ಯಸಂಸ್ಕಾರಕ್ಕೆ ದಿಕ್ಕು ತೋಚದೇ ಬಿಟ್ಟುಹೋಗಿದ್ದ ಪೋಷಕರು

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಬಾಶೆಟ್ಟಿಹಳ್ಳಿ ಗ್ರಾಮದ ಮೋರಿಯ ಅಂಚಿನಲ್ಲಿ ಪತ್ತೆಯಾದ ಮೃತ ಹೆಣ್ಣು ಮಗುವಿನ (Child Dead Body) ಪೋಷಕರನ್ನು ಪತ್ತೆ ಮಾಡುವಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಮೃತ ಮಗು ರುಚಿಕುಮಾರಿಯ (1) ತಂದೆ-ತಾಯಿಯನ್ನು ಪ್ರವೇಶ್ ಕುಮಾರ್, ವಿಭಾಕುಮಾರಿ ಎಂದು ಗುರುತಿಸಲಾಗಿದೆ. ಇವರು ಬಿಹಾರ ಮೂಲದವರಾಗಿದ್ದು, ವೀರಾಪುರದಲ್ಲಿ ಕಳೆದ 1 ವಾರದಿಂದ ವಾಸವಿದ್ದರು. ಮಗುವಿಗೆ ಹೃದ್ರೋಗ ಸಮಸ್ಯೆ ಇದ್ದು, ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಬಳಿಯ ಸತ್ಯಸಾಯಿಬಾಬಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ಪ್ರಯತ್ನಿಸಿದ್ದಾರೆ. ಆದರೆ ಅಲ್ಲಿ ಚಿಕಿತ್ಸೆ ಸಾಧ್ಯವಿಲ್ಲದಾಗ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದರು. ಆಗ ಮರಳಿ ವೀರಾಪುರಕ್ಕೆ ಬರುವ ವೇಳೆ ಮಗು ಸಾವಿಗೀಡಾಗಿದೆ.

    ಈ ವೇಳೆ ಮಗುವಿನ ಅಂತ್ಯಕ್ರಿಯೆ ಮಾಡುವುದರ ಬಗ್ಗೆ ದಿಕ್ಕು ತೋಚದ ತಂದೆ ಮೋರಿ ಕೆಳಗೆ ಮಗುವಿನ ಮೃತದೇಹವನ್ನು ಬಿಟ್ಟು ಹೋಗಿದ್ದರು. ಮೃತ ಮಗುವಿನ ಫೋಟೋ ಬಳಸಿ ಕೈಗಾರಿಕಾ ಪ್ರದೇಶ, ಬಾಶೆಟ್ಟಿಹಳ್ಳಿ ವ್ಯಾಪ್ತಿಯಲ್ಲಿ ಮಗುವಿನ ಪೋಷಕರನ್ನು ಪತ್ತೆಗೆ ಪೊಲೀಸರು ತೀವ್ರ ತಲಾಶ್ ನಡೆಸಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಮಗುವಿನ ಬಗ್ಗೆ ಮಾಹಿತಿ ದೊರೆತಿದ್ದು, ಸಿಸಿಟಿವಿ ಕ್ಯಾಮೆರಾ ದೃಶ್ಯವನ್ನು ಆಧರಿಸಿ ಪೊಲೀಸರು ಪೋಷಕರನ್ನು ಪತ್ತೆ ಮಾಡಿದ್ದಾರೆ.

    ಬೆಂಗಳೂರು-ಹಿಂದೂಪುರ ರಾಜ್ಯ ಹೆದ್ದಾರಿಯ ಬಾಶೆಟ್ಟಿಹಳ್ಳಿ ಗ್ರಾಮದ ಅಂಚಿನಲ್ಲೇ ಇರುವ ಮೋರಿಯ ತಳದಲ್ಲಿ ಶಾಲು ಹೊದಿಸಿ ಮಲಗಿಸಿರುವ ಸ್ಥಿತಿಯಲ್ಲಿ ಒಂದೂವರೆ ವರ್ಷ ಹೆಣ್ಣು ಮಗುವಿನ ಮೃತದೇಹ ಸೋಮವಾರ ಪತ್ತೆಯಾಗಿತ್ತು. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿ ಪೋಷಕರ ಪತ್ತೆಗೆ ಮುಂದಾಗಿದ್ದರು. ಇದನ್ನೂ ಓದಿ: ಪ್ಯಾಕಿಂಗ್ ಆಹಾರ ಉತ್ಪನ್ನಗಳಿಂದ ಜೀರ್ಣಾಂಗಕ್ಕೆ ಹಾನಿ- ಏಮ್ಸ್ ವೈದ್ಯರಿಂದ ಹೊಸ ವರದಿ

    ಕೊನೆಗೆ ಮೃತ ಮಗುವಿನ ಪೋಷಕರನ್ನು ಪತ್ತೆ ಮಾಡುವುದು ಪೊಲೀಸರಿಗೂ ದೊಡ್ಡ ಸವಾಲಾಗಿತ್ತು. ಅಲ್ಲದೆ ಮಗುವಿನ ಮೃತದೇಹ ಮಲಗಿಸಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಮಗು ಮೃತಪಟ್ಟ ನಂತರವೇ ಇಲ್ಲಿ ತಂದು ಇಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದರು.

    ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಬಿಹಾರ ಮೂಲದ ದಂಪತಿ ಮೃತ ಮಗುವಿನ ಅಂತ್ಯಸಂಸ್ಕಾರ ನಡೆಸಲು ಪ್ರಯತ್ನ ನಡೆಸಿದ್ದಾರೆ. ಅದರೆ ಒಂದು ವಾರದ ಹಿಂದಷ್ಟೇ ವೀರಾಪುರಕ್ಕೆ ಬಂದಿದ್ದ ಕಾರಣ ದಿಕ್ಕು ತೋಚದೆ ಯಾರದೋ ಮಾತು ಕೇಳಿ ಮೋರಿ ಕೆಳಗೆ ಮಗುವನ್ನು ಬಿಟ್ಟು ಹೋಗಿದ್ದರು. ಈಗ ಅವರ ಸಂಬಂಧಿಕರನ್ನೆಲ್ಲಾ ಕರೆಸಿದ್ದು, ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಮಗುವಿನ ಅಂತ್ಯಕ್ರಿಯೆ ನಡೆಸಲು ವ್ಯವಸ್ಥೆ ನಾವೇ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಮೀನು ವಿವಾವದವೇ ಕರ್ಣಿ ಸೇನಾ ಮುಖ್ಯಸ್ಥನ ಕೊಲೆಗೆ ಕಾರಣವಾಯ್ತಾ?

  • ಆತ್ಮಹತ್ಯೆಗೆ ಶರಣಾದ ತಾಯಿ-ಮಗುವಿನ ಶವ ಸ್ಮಶಾನದಿಂದಲೇ ಕಳ್ಳತನ!

    ಆತ್ಮಹತ್ಯೆಗೆ ಶರಣಾದ ತಾಯಿ-ಮಗುವಿನ ಶವ ಸ್ಮಶಾನದಿಂದಲೇ ಕಳ್ಳತನ!

    ಕೋಲಾರ: ವಾಮಾಚಾರಕ್ಕಾಗಿ ಮೃತದೇಹವನ್ನು ಸ್ಮಶಾನದಿಂದ ಹೊರತೆಗೆದು ಕೂದಲು ಹಾಗೂ ಬಟ್ಟೆಯನ್ನು ತೆಗೆದುಕೊಂಡಿರುವ ಆರೋಪ ಕೋಲಾರದಲ್ಲಿ (Kolar) ಕೇಳಿ ಬಂದಿದೆ.

    ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೆಬ್ಬಟ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ. ಕಳೆದ 20 ದಿನಗಳ ಹಿಂದೆ ಮೂರುವರೆ ವರ್ಷದ ಮಗುವಿನೊಂದಿಗೆ ಮಹಿಳೆ ಹಮಿದ ಆತ್ಮಹತ್ಯೆಗೆ ಶರಣಾಗಿದ್ದಳು. ನಂತರ ಇಬ್ಬರ ಶವವನ್ನು ಹೆಬ್ಬಟ ಕ್ರಾಸ್‌ನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ನವೆಂಬರ್ 19 ರಂದು ಶವಗಳನ್ನು ಹೊರತೆಗೆದು ಕೂದಲು ಹಾಗೂ ಮಗು ಧರಿಸಿದ್ದ ಬಟ್ಟೆ ತೆಗೆದುಕೊಂಡಿದ್ದಾರೆ ಎಂದು ಮೃತ ಹಮಿದ ಪೋಷಕರು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.

    ಹಮಿದ ಪತಿ ಶೊಯಬ್ ಸೂಚನೆಯಂತೆ ಮಗುವಿನ ಶವ ಹೊರತೆಗೆದು ಕೃತ್ಯವೆಸಗಿರುವುದಾಗಿ ಆರೋಪಿಸಲಾಗಿದೆ. ತಾಯಿ ಹಾಗೂ ಮಗಳ ಶವವನ್ನು ಸ್ಮಶಾನಕ್ಕೆ ತೆರಳಿ ಹೊರತೆಗೆದಿದ್ದಾರೆಂದು ಶ್ರೀರಾಮ್ ಹಾಗೂ ನಾರಾಯಣಸ್ವಾಮಿ ಎನ್ನುವವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ನವೆಂಬರ್ 19 ರಂದು ಬೆಳ್ಳಂಬೆಳಗ್ಗೆ ಇಬ್ಬರು ಸ್ಮಶಾನಕ್ಕೆ ತೆರಳಿ, ತಡವಾಗಿ ವಾಪಸ್ ಆಗಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ವೀಡಿಯೋ ಆಧರಿಸಿ ವಾಮಾಚಾರ ಮಾಡಲೆಂದು ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ಪೋಷಕರು ದೂರು ನೀಡಿದ್ದಾರೆ. ಇದನ್ನೂ ಓದಿ: ಧರೆಗುರುಳಿದ್ದ 2,000 ವರ್ಷದ ಹುಣಸೆ ಮರ – ಚಿಕಿತ್ಸೆ ಬಳಿಕ ಮರುಜೀವ

    ಪತಿ ಶೊಯಬ್ ನೀಡುತ್ತಿದ್ದ ವರದಕ್ಷಿಣೆ ಕಿರುಕುಳ ತಾಳಲಾರದೆ ತಾಯಿ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವುದೆಂದು ಪೋಷಕರು ಆರೋಪಿಸಿದ್ದರು. ಅದರಂತೆ ಆತ್ಮಹತ್ಯೆ ಬಳಿಕವೂ ಪತಿ ಹೀಗೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಅಂತ್ಯಸಂಸ್ಕಾರದ ವೇಳೆ ಶವಗಳಿಗೆ ಹಾಕಿದ್ದ ಬಟ್ಟೆಗಳು ಸಮಾಧಿಯ ಪಕ್ಕದಲ್ಲೇ ಪತ್ತೆಯಾಗಿದೆ. ಇಬ್ಬರ ಶವಗಳು ಇದೆಯೋ, ಇಲ್ಲವೋ ಎಂಬುದು ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಗೂಡ್ಸ್ ರೈಲು ಡಿಕ್ಕಿ ಹೊಡೆದು 3 ಆನೆಗಳ ದುರ್ಮರಣ

  • ಸ್ಪಂದನಾ ಮೃತದೇಹ ನಾಳೆ ಬೆಂಗಳೂರಿಗೆ, ಬುಧವಾರ ಅಂತ್ಯಕ್ರಿಯೆ

    ಸ್ಪಂದನಾ ಮೃತದೇಹ ನಾಳೆ ಬೆಂಗಳೂರಿಗೆ, ಬುಧವಾರ ಅಂತ್ಯಕ್ರಿಯೆ

    ಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ (Spandana) ಅವರ ಮರಣೋತ್ತರ ಪರೀಕ್ಷೆ ಬ್ಯಾಂಕಾಕ್ ನಲ್ಲಿ ಮುಗಿದಿದ್ದು, ಮೃತ ದೇಹವನ್ನು (Dead Body) ನಾಳೆ ಸಾಯಂಕಾಲ ಬೆಂಗಳೂರಿಗೆ ತರಲಾಗುವುದು ಎಂದಿದ್ದಾರೆ ಸ್ಪಂದನಾ ಚಿಕ್ಕಪ್ಪ ಬಿ.ಕೆ. ಹರಿಪ್ರಸಾದ್. ಇಂದು ಮರಣೋತ್ತರ (Postmortem) ಪರೀಕ್ಷೆ ಮುಗಿದಿದ್ದರೂ, ಇನ್ನೂ ಹಲವು ವಿದೇಶಿ ಪ್ರಕ್ರಿಯೆಗಳು ನಡೆಯಬೇಕಿವೆ. ಅವು ನಾಳೆ ಮಧ್ಯಾಹ್ನ ಪೂರ್ಣಗೊಳ್ಳಲಿವೆಯಂತೆ.

    ‘ಸ್ಪಂದನಾ ಸಾವಿನ ಕುರಿತಂತೆ ಬ್ಯಾಂಕಾಕ್ ಪ್ರಕ್ರಿಯೆಗಳು ಮುಗಿಯಲು ನಾಳೆ ಮಧ್ಯಾಹ್ನ ಆಗುತ್ತದೆ. ಆದ್ದರಿಂದ ಪ್ರಕ್ರಿಯೆಗಳು ಮುಗಿಸಿ ಮೃತದೇಹ ಸಂಜೆ ಹೊರಡಲಾಗುತ್ತದೆ. ರಾತ್ರಿಯ ಒಳಗೆ ಮೃತ ದೇಹ ಬೆಂಗಳೂರಿಗೆ ಬರಲಿದೆ. ಬೆಂಗಳೂರಿನಿಂದ (Bangalore) ಕೆಲವರು ಅಲ್ಲಿಗೆ ಹೋಗೋಣ ಎಂದುಕೊಂಡಿದ್ದೆವು. ಆದ್ರೆ ನಾವು ಹೋಗೋ ಅಷ್ಟರಲ್ಲಿ ಸಮಯ ಆಗುತ್ತೆ. ಆದ್ರಿಂದ ನಾವ್ಯಾರೂ ಇಲ್ಲಿಂದ ಹೋಗ್ತಾ ಇಲ್ಲ. ನಾಳೆ ರಾತ್ರಿ 11:30ರ ಹೊತ್ತಿಗೆ ಮೃತ ದೇಹ ಬರಬಹುದು. ಬುಧವಾರ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ’ ಎಂದಿದ್ದಾರೆ ಹರಿಪ್ರಸಾದ್.

    ಅಂತ್ಯಸಂಸ್ಕಾರ (Funeral) ಎಲ್ಲಿ ನಡೆಯಬೇಕು ಎನ್ನುವ ಕುರಿತು ಯಾವುದೇ ನಿರ್ಧಾರ ಈವರೆಗೂ ತೆಗೆದುಕೊಂಡಿಲ್ಲ ಎಂದಿರುವ ಹರಿಪ್ರಸಾದ್, ಯಾವ ಸ್ಥಳದಲ್ಲಿ ಮತ್ತು ಸಮಯದಲ್ಲಿ ಅಂತ್ಯ ಸಂಸ್ಕಾರ ಮಾಡಬೇಕು ಎನ್ನುವುದನ್ನು ಚರ್ಚಿಸಿ ತಿಳಿಸುತ್ತೇವೆ ಎಂದಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಅದನ್ನು ಮಾಧ್ಯಮಗಳಿಗೆ ನೀಡುವ ಕುರಿತು ಮಾತನಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೆಹಲಿ ಮೆಟ್ರೋ ಸೈಟ್ ಬಳಿ ಚೀಲದಲ್ಲಿತ್ತು ಮಹಿಳೆಯ ತಲೆ, ದೇಹದ ಇತರ ಭಾಗಗಳು

    ದೆಹಲಿ ಮೆಟ್ರೋ ಸೈಟ್ ಬಳಿ ಚೀಲದಲ್ಲಿತ್ತು ಮಹಿಳೆಯ ತಲೆ, ದೇಹದ ಇತರ ಭಾಗಗಳು

    ನವದೆಹಲಿ: ಆಗ್ನೇಯ ದೆಹಲಿಯ (Delhi) ಸರಾಯ್ ಕಾಲೇ ಖಾನ್‌ನಲ್ಲಿ ರ‍್ಯಾಪಿಡ್ ಮೆಟ್ರೋ (Metro) ನಿರ್ಮಾಣದ ಸ್ಥಳದ ಬಳಿ ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯೊಬ್ಬರ (Woman) ತಲೆ ಸೇರಿದಂತೆ ದೇಹದ ಇತರ ಭಾಗಗಳು (Dead Body) ಪತ್ತೆಯಾಗಿದೆ.

    ರ‍್ಯಾಪಿಡ್ ಮೆಟ್ರೋ ನಿರ್ಮಾಣವಾಗುತ್ತಿದ್ದ ಮೇಲ್ಸೇತುವೆಯ ಪಕ್ಕದಲ್ಲಿರುವ ಸರೈ ಕಾಲೇ ಖಾನ್ ಐಎಸ್‌ನಿಟಿ ಬಳಿ ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿವೆ. ಈ ಬಗ್ಗೆ ಪೊಲೀಸರಿಗೆ ಶನಿವಾರ ಮಾಹಿತಿ ದೊರೆತಿದ್ದು, ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಡಿಸಿ ಕಚೇರಿ ಮೇಲೆ ನಿಂತು ಆಜಾನ್ ಕೂಗಿದ ಯುವಕ

    ಪೊಲೀಸರು ದೇಹದ ಭಾಗಗಳನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ಕಳುಹಿಸಿದ್ದು, ಮಹಿಳೆಯ ಗುರುತು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ವಿಧಿವಿಜ್ಞಾನ ತಂಡಗಳು ಮೃತದೇಹ ಪತ್ತೆಯಾದ ಸ್ಥಳದಲ್ಲಿ ತನಿಖೆ ನಡೆಸುತ್ತಿವೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇತ್ತೀಚೆಗೆ ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೇ ನಿಲ್ದಾಣದ ಬಳಿ ಡ್ರಮ್‌ನಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇಯಲ್ಲಿ ಕೆಎಸ್‌ಆರ್‌ಟಿಸಿ ಚಾಲಕನ ಹುಚ್ಚಾಟಕ್ಕೆ ಬೈಕ್ ಸವಾರ ಬಲಿ

  • 6 ತಿಂಗಳ ಹಿಂದೆ ನೇಣಿಗೆ ಶರಣಾದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

    6 ತಿಂಗಳ ಹಿಂದೆ ನೇಣಿಗೆ ಶರಣಾದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಹುಳಿಮಾವು ಅಕ್ಷಯ ನಗರದ ಚಿಕನ್ ಕೌಂಟಿ ಹಿಂಭಾಗದಲ್ಲಿ 6 ತಿಂಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹವೊಂದು (Dead Body) ಪತ್ತೆಯಾಗಿದೆ.

    ವ್ಯಕ್ತಿಯೊಬ್ಬರು ಕೊಟ್ಟ ಮಾಹಿತಿ ಆಧಾರದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರೇ ಆ ದೃಶ್ಯವನ್ನು ನೋಡಿ ಆಘಾತಕ್ಕೊಳಗಾಗಿದ್ದರು. ಏಕೆಂದರೆ ಬೆಂಗಳೂರಿನಂತಹ ಜನನಿಬಿಡ ಮಹಾನಗರದಲ್ಲಿ ಈ ರೀತಿ ಮೃತದೇಹವೊಂದು ಅಸ್ತಿಪಂಜರದ ರೂಪದಲ್ಲಿ ನೇಣಿಗೆ ಶರಣಾದ ಸ್ಥಿತಿಯಲ್ಲಿ ಇಷ್ಟೊಂದು ತಡವಾಗಿ ಪತ್ತೆಯಾಗಿದ್ದರಿಂದ ಪೊಲೀಸರಿಗೂ ಎದೆಬಡಿತ ಹೆಚ್ಚಾಗುವಂತೆ ಮಾಡಿತ್ತು.

    ಘಟನೆ ಜಾಡು ಹಿಡಿದ ಪೊಲೀಸರು:
    ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು ಇದು ಸುಮಾರು 6-7 ತಿಂಗಳುಗಳ ಹಿಂದೆ ನಡೆದಿರುವ ಘಟನೆ ಎಂದು ಅಂದಾಜಿಸಿದ್ದಾರೆ. ಸ್ಥಳದಲ್ಲಿರುವ ಕೆಲ ಸಾಕ್ಷ್ಯಗಳ ಅಧಾರದ ಮೇಲೆ ತನಿಖೆ ಪ್ರಾರಂಭಿಸಿರುವ ಪೊಲೀಸರಿಗೆ ಇದು ಮಹಿಳೆಯಾ? ಯುವತಿಯಾ? ಇದು ಆತ್ಮಹತ್ಯೆನಾ? ಅಥವಾ ಕೊಲೆಯಾ? ಎನ್ನುವುದರ ಬೆನ್ನು ಬಿದ್ದಿದ್ದಾರೆ.

    ಬಳಿಕ ನಗರದಲ್ಲಿ ಕಳೆದ 6 ತಿಂಗಳಲ್ಲಿ ಕಾಣೆಯಾದವರ ದೂರಿನ ಪಟ್ಟಿಯನ್ನು ಜಾಲಾಡಿದ್ದಾರೆ. ಮರದಲ್ಲಿ ನೇತಾಡುತ್ತಿದ್ದ ಅಸ್ಥಿಪಂಜರದ ಮೂಳೆಯ ಡಿಎನ್‌ಎ ಸ್ಯಾಂಪಲ್ ಅನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ.

    ಒಂದೇ ದಿನದಲ್ಲಿ ರಹಸ್ಯ ಬಯಲು:
    ನಾಪತ್ತೆ ದೂರುಗಳ ಪಟ್ಟಿಯನ್ನು ಪೊಲೀಸರು ಹೊರ ತೆಗೆದಾಗ ಕಳೆದ ವರ್ಷ ಜುಲೈನಲ್ಲಿ ಹುಳಿಮಾವು ಠಾಣೆಯಲ್ಲಿ ನೇಪಾಳಿ ಮಹಿಳೆ (Woman) ನಾಪತ್ತೆ ಕೇಸ್ ದಾಖಲಾಗಿರುವುದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಸಿಕ್ಕ ವಸ್ತುಗಳನ್ನೆಲ್ಲಾ ಹೋಲಿಕೆ ಮಾಡಿ ನೋಡಿದಾಗ ಇದು ಅದೇ ಮಹಿಳೆಯ ಶವ ಎಂಬುದು ತಿಳಿದುಬಂದಿದೆ.

    ನೇಪಾಳ ಮೂಲದ ಮಹಿಳೆ ಪುಷ್ಪದಾಮಿ ನೇಣಿಗೆ ಶರಣಾಗಿರುವ ಮಹಿಳೆ ಎಂಬುದು ತಿಳಿದುಬಂದಿದೆ. ಕುಟುಂಬ ಕಲಹದ ಹಿನ್ನೆಲೆ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಮೂಡಿದೆ. ಆಕೆಯ ಮೃತದೇಹ ಪತ್ತೆಯಾಗಿರುವ ಸ್ಥಳದಲ್ಲಿ ಚಪ್ಪಲಿ, ನೆಕ್ಲೆಸ್ ಹಾಗೂ ಇತರ ಕೆಲವು ವಸ್ತುಗಳೂ ಪತ್ತೆಯಾಗಿದೆ ಎಂದು ಅಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ ಹೇಳಿದ್ದಾರೆ. ಇದನ್ನೂ ಓದಿ: ಸಾಲಗಾರರ ಕಾಟಕ್ಕೆ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನ

    6 ತಿಂಗಳ ಹಿಂದೆ ಮಹಿಳೆ ನೇಣಿಗೆ ಶರಣಾಗಿದ್ದರೂ ಇದು ಯಾರ ಕಣ್ಣಿಗೂ ಕಾಣಿಸಲಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ಈ ಪ್ರದೇಶದಲ್ಲಿ ದನ-ಕರು ಮೇಯಿಸಲು, ಕ್ರಿಕೆಟ್ ಆಡಲು ಜನರು ಬರುತ್ತಿರುತ್ತಾರೆ. ಜನನಿಬಿಡ ಜಾಗವಾಗಿದ್ದರೂ ಇಷ್ಟು ದಿನ ಏಕೆ ಯಾರ ಕಣ್ಣಿಗೂ ಬಿದ್ದಿರಲಿಲ್ಲ ಎಂದು ಪೊಲೀಸರು ಅಚ್ಚರಿಪಟ್ಟಿದ್ದಾರೆ. ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‌ನಲ್ಲಿ ನೀರಿನ ಸಮಸ್ಯೆ ಆಯ್ತು – ಈಗ ಆಹಾರ ಸಮಸ್ಯೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚೀನಾದಲ್ಲಿ ಭಾರತೀಯ ವಿದ್ಯಾರ್ಥಿ ಸಾವು – ಶವ ತರಿಸಿಕೊಳ್ಳಲು ಸಹಾಯ ಕೋರಿದ ಕುಟುಂಬಸ್ಥರು

    ಚೀನಾದಲ್ಲಿ ಭಾರತೀಯ ವಿದ್ಯಾರ್ಥಿ ಸಾವು – ಶವ ತರಿಸಿಕೊಳ್ಳಲು ಸಹಾಯ ಕೋರಿದ ಕುಟುಂಬಸ್ಥರು

    ಚೆನ್ನೈ: ಚೀನಾದಲ್ಲಿ (China) ಅನಾರೋಗ್ಯದಿಂದ ಭಾರತದ ವಿದ್ಯಾರ್ಥಿ (Indian Student) ಸಾವನ್ನಪ್ಪಿರುವ ಘಟನೆ ನಡೆದಿದ್ದು, ಯುವಕನ ಮೃತದೇಹ (Dead Body) ತರಿಸಿಕೊಳ್ಳಲು ಆತನ ಕುಟುಂಬಸ್ಥರು ವಿದೇಶಾಂಗ ಸಚಿವಾಲಯದ (Foreign Ministry) ಮೊರೆ ಹೋಗಿದ್ದಾರೆ.

    ತಮಿಳುನಾಡು (Tamil Nadu) ಮೂಲದ ವಿದ್ಯಾರ್ಥಿ ಅಬ್ದುಲ್ ಶೇಖ್ (22) ಕಳೆದ 5 ವರ್ಷಗಳಿಂದ ಚೀನಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದರು. ಇತ್ತೀಚೆಗೆ ಅವರು ಭಾರತಕ್ಕೆ ಮರಳಿದ್ದರು. ಆದರೆ ಡಿಸೆಂಬರ್ 11 ರಂದು ಕಿಕಿಹಾರ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಇಂಟರ್ನ್‌ಶಿಪ್‌ಗಾಗಿ ಚೀನಾಗೆ ಮತ್ತೆ ತೆರಳಬೇಕಾಯಿತು. ಇದನ್ನೂ ಓದಿ: ಭೂತ ಬಿಡಿಸುವ ನೆಪದಲ್ಲಿ 14ರ ಬಾಲಕಿಯ ಮೇಲೆ ಅತ್ಯಾಚಾರ

    ಚೀನಾಗೆ ತೆರಳಿದ ಬಳಿಕ ಅವರು 8 ದಿನಗಳ ಕ್ವಾರಂಟೈನ್ ಅನ್ನು ಪೂರ್ಣಗೊಳಿಸಿದರು. ಬಳಿಕ ಅವರು ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆಯುತ್ತಿದ್ದ ಸಂದರ್ಭ ಅನಾರೋಗ್ಯಕ್ಕೀಡಾದರು. ಬಳಿಕ ಅವರನ್ನು ತೀವ್ರ ನಿಗಾ ಘಟಕಕ್ಕೆ ಸೇರಿಸಲಾಯಿತು. ಆದರೆ ಅವರು ಅಲ್ಲಿ ಸಾವನ್ನಪ್ಪಿದ್ದಾರೆ.

    ಇದೀಗ ಯುವಕನ ಮೃತದೇಹವನ್ನು ಭಾರತಕ್ಕೆ ಮರಳಿ ತರಿಸಿಕೊಳ್ಳಲು ಆತಕ ಕುಟುಂಬಸ್ಥರು ಪರದಾಡುತ್ತಿದ್ದಾರೆ. ಮೃತದೇಹವನ್ನು ಸ್ವದೇಶಕ್ಕೆ ತರಲು ಸಹಾಯ ಮಾಡುವಂತೆ ಅಬ್ದುಲ್ ಶೇಖ್ ಅವರ ಸಂಬಂಧಿಕರು ವಿದೇಶಾಂಗ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹಳಿ ತಪ್ಪಿದ ಸೂರ್ಯನಗರಿ ಎಕ್ಸ್‌ಪ್ರೆಸ್ ರೈಲಿನ 8 ಬೋಗಿಗಳು!

    Live Tv
    [brid partner=56869869 player=32851 video=960834 autoplay=true]

  • ನಿವಾಸದಲ್ಲಿ ಬಿಜೆಪಿ ಮುಖಂಡನ ಮೃತದೇಹ ಪತ್ತೆ

    ನಿವಾಸದಲ್ಲಿ ಬಿಜೆಪಿ ಮುಖಂಡನ ಮೃತದೇಹ ಪತ್ತೆ

    ಹೈದರಾಬಾದ್: ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಜ್ಞಾನೇಂದ್ರ ಪ್ರಸಾದ್ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ‌

    ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೋಡಿದಾಗ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಸಾದ್‌ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಸಿಬಲ್‌ ವಿರುದ್ದ ನ್ಯಾಯಾಂಗ ನಿಂದನೆ ಕೇಸ್‌: ಅಟಾರ್ನಿ ಜನರಲ್‌ಗೆ ಮನವಿ

    ಮಿಯಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸೋಮವಾರ ಬೆಳಗ್ಗೆ ಮಿಯಾಪುರ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ನಂತರ ಘಟನೆ ಬೆಳಕಿಗೆ ಬಂದಿದೆ.

    ತಕ್ಷಣವೇ ಒಂದು ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಸಾದ್‌ ಮೃತದೇಹ ಕಂಡುಬಂದಿದೆ. ಇದನ್ನೂ ಓದಿ: ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ಆ್ಯಸಿಡ್ ದಾಳಿ

    ಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಸಾದ್ ಕಳೆದ ಕೆಲವು ದಿನಗಳಿಂದ ತಮ್ಮ ಪೆಂಟ್‌ಹೌಸ್‌ನಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಸಿಆರ್‌ಪಿಸಿ ಸೆಕ್ಷನ್ 174ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗ್ಳೂರಲ್ಲೊಂದು ವಿಚಿತ್ರ ಘಟನೆ- ಹೆಣದ ಒಡವೆ ಕಿತ್ತುಕೊಂಡ್ರಾ ಆಸ್ಪತ್ರೆ ಸಿಬ್ಬಂದಿ..?

    ಬೆಂಗ್ಳೂರಲ್ಲೊಂದು ವಿಚಿತ್ರ ಘಟನೆ- ಹೆಣದ ಒಡವೆ ಕಿತ್ತುಕೊಂಡ್ರಾ ಆಸ್ಪತ್ರೆ ಸಿಬ್ಬಂದಿ..?

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಹೆಣದ ಕಿವಿಯೋಲೆ ಮಾಯವಾಗಿದ್ದು, ಸತ್ತವರನ್ನೂ ಆಸ್ಪತ್ರೆ ಸಿಬ್ಬಂದಿ ಬಿಡಲ್ವಾ ಅನ್ನೋ ಪ್ರಶ್ನೆ ಎದ್ದಿದೆ.

    ಹೌದು. ತ್ರಿವೇಣಿ ರೋಡ್ ನಲ್ಲಿ ವಾಸವಿರುವ ರುಕ್ಮಿಣಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಅಲ್ಲಿ ಹೋದಾಗ ರುಕ್ಮಿಣಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ದಂತ ವೈದ್ಯರ ಎಡವಟ್ಟು – ಚಿಕಿತ್ಸೆ ಪಡೆದ ನಟಿಯ ಮುಖ ಸಂಪೂರ್ಣ ಚೇಂಚ್

    ಅದಾದ ಬಳಿಕ ರುಕ್ಮಿಣಿಯನ್ನು ಎಮರ್ಜೆನ್ಸಿಗೆ ವೈದ್ಯರು ಕರೆದುಕೊಂಡು ಹೋದರು. ನಂತರ ಅಂಬುಲೆನ್ಸ್ ಗೆ ಶಿಫ್ಟ್ ಮಾಡಲು ಹೇಳಿದರು. ಅಂತೆಯೇ ಶಿಫ್ಟ್ ವೇಳೆ ಕಿವಿ ಹರಿದಂತೆ ಕಂಡಿದ್ದು, ರಕ್ತ ಸುರಿಯುತ್ತಿತ್ತು. ಅಲ್ಲದೆ ಕಿವಿಯೋಲೆ ಇಲ್ಲವಾಗಿತ್ತು. ಕೂಡಲೇ ಅನುಮಾನಗೊಂಡ ಕುಟುಂಬಸ್ಥರು ಆಸ್ಪತ್ರೆಗೆ ತೆರಳಿ ಗಲಾಟೆ ಮಾಡಿದ್ದಾರೆ. ಕೆಲಕಾಲ ವಾಗ್ವಾದ ನಡೆದ ಬಳಿಕ ಸೆಕ್ಯೂರಿಟಿ ಸಿಬ್ಬಂದಿ ಕಿವಿಯೋಲೆ ತಂದು ಕೊಟ್ಟ ಪ್ರಸಂಗ ನಡೆದಿದೆ.

    ರುಕ್ಮಿಣಿ ಮಗಳು ಕವಿತಾ ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿ, ಕಿವಿಯೋಲೆಯಲ್ಲೂ ಪೂರ್ತಿ ಕೊಟ್ಟಿಲ್ಲ. ಅಲ್ಲದೆ ನಾಲ್ಕು ತಾಳಿಯ ಮಾಂಗಲ್ಯ ಸರ ಕೂಡ ನಾಪತ್ತೆಯಾಗಿದೆ. ಸತ್ತ ಹೆಣನಾ ಹೀಗೆ ಕುಯ್ದು ಚಿನ್ನ ಎತ್ತಿಕೊಳ್ತಾರೆ ಅಂದ್ರೆ ಆಸ್ಪತ್ರೆಯವರನ್ನು ಹೇಳೋರು ಕೇಳೋರು ಯಾರು ಇಲ್ವಾ..?, ನಾವು ಕಳೆದುಕೊಂಡ ನೋವಲ್ಲಿ ಇರುತ್ತೇವೆ. ಅಂಥದ್ದರಲ್ಲಿ ಈ ರೀತಿಯ ವರ್ತನೆ ನಿಜಕ್ಕೂ ಕಣ್ಣೀರು ಬಂತು. ಕಿವಿಯನ್ನು ರಕ್ತ ಬರೋ ತರ ಎಳೆದು ಓಲೆ ಕಿತ್ತುಕೊಂಡಿದ್ದಾರೆ. ನಾವು ಸ್ಟೇಷನ್ ಗೆ ದೂರು ಕೊಡ್ತೀವಿ ಎಂದು ಕಣ್ಣೀರಾಕಿದ್ದಾರೆ.

    Live Tv