Tag: DDPI Office

  • ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿಯಿಂದ ಎಣ್ಣೆ ಪಾರ್ಟಿ – ವೀಡಿಯೋ ವೈರಲ್

    ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿಯಿಂದ ಎಣ್ಣೆ ಪಾರ್ಟಿ – ವೀಡಿಯೋ ವೈರಲ್

    ಚಿತ್ರದುರ್ಗ: ಡಿಡಿಪಿಐ ಕಚೇರಿಯಲ್ಲೇ (DDPI Office) ಸಿಬ್ಬಂದಿಯಿಂದ ಎಣ್ಣೆ ಪಾರ್ಟಿ (Party) ನಡೆದಿರುವ ಆರೋಪ ಚಿತ್ರದುರ್ಗದಲ್ಲಿ (Chitradurga) ಕೇಳಿಬಂದಿದೆ. ಕಚೇರಿಯ ಸಿಬ್ಬಂದಿಯೋರ್ವ ಹೊಸ ಕಾರು ಖರೀದಿಸಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ಎಣ್ಣೆ ಪಾರ್ಟಿ ನಡೆಸಿರೊ ವೀಡಿಯೋ ವೈರಲ್ ಆಗಿದೆ.

    20 ಲೀಟರ್‌ನ ವಾಟರ್ ಕ್ಯಾನ್‌ಗೆ ಉಪನಿರ್ದೇಶಕರ ಕಾರಿನ ಚಾಲಕ ಮದ್ಯ ಬೆರೆಸಿದ್ದು, ಇನ್ನಿತರೆ ಸಿಬ್ಬಂದಿ ಅಯ್ಯಪ್ಪ ಸ್ವಾಮಿಗೆ ಬಂಗಾರ ಮೀಸಲು ಹೋಗುತ್ತಲ್ಲ ಹಾಗಾಯ್ತು ಇದು ಅಂತ ಸಂಭಾಷಣೆ ನಡೆಸಿದ್ದಾರೆ. ಹೀಗಾಗಿ ಇಡೀ ಸಮಾಜಕ್ಕೆ ಮಾದರಿಯಾಗಿರಬೇಕಿದ್ದ ಶಿಕ್ಷಣ ಇಲಾಖೆ ಸಿಬ್ಬಂದಿ ಕಚೇರಿಯನ್ನೇ ಎಣ್ಣೆ ಪಾರ್ಟಿಗೆ ದುರ್ಬಳಕೆ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಅ.18ರವರೆಗೆ ಭಾರೀ ಮಳೆ – ಇಂದು ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಹಾಗೆಯೇ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿ ಕುಡಿದು ಮೋಜು ಮಸ್ತಿ ಮಾಡಿರುವ ವೀಡಿಯೋ ವೈರಲ್ ಆದ ಪರಿಣಾಮ ಜಿಲ್ಲೆಯಾದ್ಯಂತ ಭಾರೀ ಜನಾಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: 1 ರೂಪಾಯಿ ಬಡ್ಡಿಗೆ ಲೋನ್‌ ಕೊಡಿಸ್ತೀವಿ ಅಂತ ಬರ್ತಾರೆ ಹುಷಾರ್‌ – ಬೆಂಗಳೂರಲ್ಲೊಂದು ಖತರ್ನಾಕ್ ಲೇಡಿ ಗ್ಯಾಂಗ್

  • MES ಮುಖಂಡ ಶುಭಂ ಶಳಕೆಯಿಂದ DDPI ಕಚೇರಿಗೆ ನುಗ್ಗಿ ಪುಂಡಾಟಿಕೆ – ವೀಡಿಯೋ ವೈರಲ್

    MES ಮುಖಂಡ ಶುಭಂ ಶಳಕೆಯಿಂದ DDPI ಕಚೇರಿಗೆ ನುಗ್ಗಿ ಪುಂಡಾಟಿಕೆ – ವೀಡಿಯೋ ವೈರಲ್

    ಬೆಳಗಾವಿ: ಗಡಿವಿವಾದ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿದ್ದ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಯುವ ಘಟಕದ ಅಧ್ಯಕ್ಷ ಶುಭಂ ಶೆಳಕೆ ಇದೀಗ ಸರ್ಕಾರಿ ಕಚೇರಿಯಲ್ಲೂ ಪುಂಡಾಟ ಪ್ರದರ್ಶಿಸಿರುವುದು ಬೆಳಕಿಗೆ ಬಂದಿದೆ. ಮೂರು ದಿನಗಳ ಹಿಂದೆ ನಡೆದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಶಿಕ್ಷಣ ಇಲಾಖೆ ಸಿಆರ್‍ಪಿ ಕೌನ್ಸೆಲಿಂಗ್ ವೇಳೆ ಮರಾಠಿ ಶಾಲೆಗೆ ಕನ್ನಡಿಗ ಸಿಆರ್‍ಪಿ ನಿಯೋಜನೆ ಮಾಡಲಾಗಿದೆ. ಮರಾಠಿ ಶಿಕ್ಷಕರ ಮೇಲೆ ಕನ್ನಡ ಹೇರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಬೆಳಗಾವಿ ಡಿಡಿಪಿಐ ಕಚೇರಿಗೆ ನುಗ್ಗಿ ಶುಭಂ ಪುಂಡಾಟಿಕೆ ಪ್ರದರ್ಶಿಸಿದ್ದಾನೆ. ಶೈಕ್ಷಣಿಕ ಕ್ಷೇತ್ರದಲ್ಲಿ ಭಾಷಾ ವೈಷಮ್ಯದ ವಿಷಬೀಜ ಬಿತ್ತಲು ಎಂಇಎಸ್ ಯತ್ನಿಸುತ್ತಿದೆ. ಕನ್ನಡ ಅಥವಾ ಇಂಗ್ಲಿಷ್‍ನಲ್ಲಿ ಅಧಿಕಾರಿ ಮನವಿ ಪತ್ರ ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರಾಠಿ ಶಿಕ್ಷಕರೆಲ್ಲರನ್ನೂ ಸೇರಿಸಿ ಪ್ರತಿಭಟನೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

    ಬೆಳಗಾವಿಯಲ್ಲಿ ನಡೆದಿದ್ದ ಚಳಿಗಾಲ ಅಧಿವೇಶನ ವೇಳೆ ಎಂಇಎಸ್ ಕಾರ್ಯಕರ್ತರು ಪುಂಡಾಟಿಕೆ ಮೆರೆದಿದ್ದರು. ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದರೂ ಹಳೆಯ ಚಾಳಿ ನಿಲ್ಲಸಿಲ್ಲ. ದೇಶದ್ರೋಹ ಪ್ರಕರಣ ದಾಖಲಿಸಿ ಚಾರ್ಜ್‍ಶೀಟ್ ಸಲ್ಲಿಕೆ ವೇಳೆ ದೇಶದ್ರೋಹದ ಸೆಕ್ಷನ್ ಕೈ ಬಿಡಲಾಗಿತ್ತು. ನಿನ್ನೆಯಷ್ಟೇ ಶುಭಂ ಶೆಳಕೆ ವಿವಾದಿತ ನಕ್ಷೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನೂ ಓದಿ:  ಗುಜರಾತ್‌, ಉತ್ತರಾಖಂಡ್‌, ಉತ್ತರ ಪ್ರದೇಶ: ಕರ್ನಾಟಕದಲ್ಲಿ ಯಾವ ಮಾಡೆಲ್‌?

    ಪೋಸ್ಟ್ ಡಿಲೀಟ್ ಮಾಡುವಂತೆ ಶುಭಂ ಶೆಳಕೆಗೆ ಪೊಲೀಸರು ವಾರ್ನಿಂಗ್ ಮಾಡಿದ್ದಾರೆ. ಪೊಲೀಸರು ಎಚ್ಚರಿಕೆ ನೀಡಿದರೂ ಪೋಸ್ಟ್ ಡಿಲೀಟ್ ಮಾಡಿಲ್ಲ. ಈ ಹಿಂದೆ ಕೋವಿಡ್ ವೇಳೆ ಜಿಲ್ಲಾಸ್ಪತ್ರೆಗೆ ನುಗ್ಗಿ ದಬ್ಬಾಳಿಕೆ ಪ್ರದರ್ಶಿಸಿದ್ದ. ಹೀಗಾಗಿ ಕಠಿಣ ಕ್ರಮಕ್ಕೆ ಕನ್ನಡಿಗರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನೈಟ್‌ಕ್ಲಬ್ ಪಾರ್ಟಿಯಲ್ಲಿ ರಾಹುಲ್ – ವೀಡಿಯೋ ಫುಲ್ ವೈರಲ್