Tag: DCW

  • ಆ್ಯಸಿಡ್ ತರಕಾರಿಯಂತೆ ಮಾರಾಟವಾಗುತ್ತಿದೆ: ಡಿಸಿಡಬ್ಲ್ಯು ಮುಖ್ಯಸ್ಥೆ ಕಿಡಿ

    ಆ್ಯಸಿಡ್ ತರಕಾರಿಯಂತೆ ಮಾರಾಟವಾಗುತ್ತಿದೆ: ಡಿಸಿಡಬ್ಲ್ಯು ಮುಖ್ಯಸ್ಥೆ ಕಿಡಿ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಇಂದು ಶಾಲಾ ಬಾಲಕಿ ಮೇಲೆ ನಡೆದ ಆ್ಯಸಿಡ್ ದಾಳಿ (Acid Attack) ಜನರನ್ನು ಭಯಭೀತಗೊಳಿಸಿದೆ. ಈ ಭೀಕರ ಘಟನೆ ನಡೆದ ಬಳಿಕ ದೆಹಲಿ ಮಹಿಳಾ ಆಯೋಗದ (DCW) ಮುಖ್ಯಸ್ಥೆ ಸ್ವಾತಿ ಮಲಿವಾಲ್ (Swati Maliwal) ಮಾರುಕಟ್ಟೆಗಳಲ್ಲಿ ಆ್ಯಸಿಡ್ ತರಕಾರಿಯಂತೆ ಮಾರಾಟವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

    ಪಶ್ಚಿಮ ದೆಹಲಿಯ ಉತ್ತಮ್ ನಗರದ ಬಳಿಕ ಇಂದು ಬೆಳಗ್ಗೆ 7:30ರ ಹೊತ್ತಿಗೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 17 ವರ್ಷದ ಬಾಲಕಿ ಮೇಲೆ ಆ್ಯಸಿಡ್ ಎರಚಿದ್ದಾರೆ. ಘಟನೆಯಿಂದ ಬಾಲಕಿಯ ಮುಖ ಹಾಗೂ ಕಣ್ಣುಗಳಿಗೆ ಸುಟ್ಟ ಗಾಯಗಳಾಗಿವೆ. ಬಾಲಕಿಯನ್ನು ನಗರದ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಆರೋಪಿಗಳ ಹೆಸರನ್ನು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಆರೋಪಿಗಳಲ್ಲಿ ಈಗಾಗಲೇ ಒಬ್ಬನನ್ನು ಬಂಧಿಸಲಾಗಿದೆ.

    ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಸ್ವಾತಿ ಮಲಿವಾಲ್, ಆ್ಯಸಿಡ್ ಮಾರಾಟದ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಾವು ನ್ಯಾಯಾಲಯವನ್ನು ಒತ್ತಾಯಿಸುತ್ತೇವೆ. ಘಟನೆಯ ಕುರಿತು ನಾವು ನಗರದ ಪೊಲೀಸರಿಗೆ ನೋಟಿಸ್ ನೀಡಿದ್ದೇವೆ. ದಾಳಿ ನಡೆಸಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ತಿಳಿಸಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಶಾಲಾ ಬಾಲಕಿಯ ಮೇಲೆ ಆ್ಯಸಿಡ್ ದಾಳಿ – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಡಿಸಿಡಬ್ಲ್ಯು ಈ ಹಿಂದೆಯೇ ಹಲವಾರು ಸೂಚನೆಗಳನ್ನು ನೀಡಿದೆ. ಹಲವಾರು ಶಿಫಾರಸುಗಳನ್ನು ಮಾಡಿದೆ. ಆದರೆ ಆ್ಯಸಿಡ್ ಮಾರಾಟ ಇನ್ನೂ ಕೂಡಾ ಮುಂದುವರಿದಿದೆ. ಮಾರುಕಟ್ಟೆಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡಿದಂತೆ ಆ್ಯಸಿಡ್ ಮಾರಾಟವಾಗುತ್ತಿದೆ. ಯಾರು ಬೇಕಾದರೂ ಆ್ಯಸಿಡ್ ಖರೀದಿಸಿ ಇಂತಹ ಕೃತ್ಯಗಳನ್ನು ಮಾಡಬಹುದು. ಇಂತಹ ಸಂದರ್ಭದಲ್ಲಿ ಸರ್ಕಾರ ಏಕೆ ನಿದ್ರಿಸುತ್ತಿದೆ? ಹುಡುಗಿಯರ ಮೇಲೆ ಆ್ಯಸಿಡ್ ದಾಳಿಯಾದಾಗ ಅವರು ಬಾಹ್ಯವಾಗಿ ಮಾತ್ರವಲ್ಲದೇ ಆಂತರಿಕವಾಗಿಯೂ ಗಾಯಗೊಳ್ಳುತ್ತಾರೆ. ಅವರ ಜೀವನವೇ ನಾಶವಾಗಿ ಹೋಗುತ್ತದೆ ಎಂದು ಹೇಳಿದರು.

    ಆ್ಯಸಿಡ್ ದಾಳಿಗೊಳಗಾದ ಬಾಲಕಿಯ ಮುಖ ಹಾಗೂ ಕಣ್ಣುಗಳಿಗೆ ಗಾಯಗಳಾಗಿವೆ. ಆಕೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಐಸಿಯುನಲ್ಲಿ ಇರಿಸಲಾಗಿದೆ. ಆಕೆಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ವೈದ್ಯನಿಂದ ಪತ್ನಿಯ ಬರ್ಬರ ಹತ್ಯೆ – ಸೂಟ್‍ಕೇಸ್‍ನಲ್ಲಿ ತುಂಬಿ 400 ಕಿ.ಮೀ ದೂರದಲ್ಲಿ ಸುಟ್ಟು ಹಾಕಿದ

    Live Tv
    [brid partner=56869869 player=32851 video=960834 autoplay=true]

  • 12 ವರ್ಷದ ಬಾಲಕನ ಮೇಲೆ ನಾಲ್ವರಿಂದ ಅತ್ಯಾಚಾರ – ದೆಹಲಿಯಲ್ಲಿ ಗಂಡುಮಕ್ಕಳು ಸುರಕ್ಷಿತರಲ್ಲ: DCW

    12 ವರ್ಷದ ಬಾಲಕನ ಮೇಲೆ ನಾಲ್ವರಿಂದ ಅತ್ಯಾಚಾರ – ದೆಹಲಿಯಲ್ಲಿ ಗಂಡುಮಕ್ಕಳು ಸುರಕ್ಷಿತರಲ್ಲ: DCW

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) 12 ವರ್ಷದ ಬಾಲಕನ (Boy) ಮೇಲೆ ನಾಲ್ವರು ಅತ್ಯಾಚಾರ (Rape) ಎಸಗಿರುವ ಭಯಾನಕ ಘಟನೆ ನಡೆದಿದೆ. ದುರುಳರು ಬಾಲಕನ ಮೇಲೆ ಅತ್ಯಾಚಾರವೆಸಗಿರುವುದು ಮಾತ್ರವಲ್ಲದೇ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.

    ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿರುವ ದೆಹಲಿ ಮಹಿಳಾ ಆಯೋಗದ (DCW) ಮುಖ್ಯಸ್ಥೆ ಸ್ವಾತಿ ಮಲಿವಾಲಿ ಟ್ವೀಟ್ ಮಾಡಿ, ದೆಹಲಿಯಲ್ಲಿ ಪುರುಷರು ಕೂಡಾ ಸುರಕ್ಷಿತರಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ದೆಹಲಿಯಲ್ಲಿ ಹುಡುಗಿಯರು ಬಿಡಿ, ಗಂಡುಮಕ್ಕಳೂ ಸುರಕ್ಷಿತವಾಗಿಲ್ಲ. 12 ವರ್ಷದ ಬಾಲಕನ ಮೇಲೆ ನಾಲ್ವರು ಅಮಾನುಷವಾಗಿ ಅತ್ಯಾಚಾರವೆಸಗಿ, ದೊಣ್ಣೆಯಿಂದ ಹೊಡೆದು ಆತನನ್ನು ಗಂಭೀರ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಸ್ವಾತಿ ಮಲಿವಾಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕೊಳೆಯಾಗಿದೆ ಅಂತಾ ಮಕ್ಕಳ ಎದುರೇ ಆದಿವಾಸಿ ವಿದ್ಯಾರ್ಥಿನಿ ಬಟ್ಟೆ ಬಿಚ್ಚಿಸಿದ ಶಿಕ್ಷಕ ಸಸ್ಪೆಂಡ್‌

    ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಿರ್ಪಾನ್‌ ಹೊಂದಿದ್ದಕ್ಕೆ ಅಮೆರಿಕ ಪೊಲೀಸರಿಂದ ಸಿಖ್‌ ವಿದ್ಯಾರ್ಥಿ ಬಂಧನ

    Live Tv
    [brid partner=56869869 player=32851 video=960834 autoplay=true]

  • ಸ್ಪಾ ಮ್ಯಾನೇಜರ್, ಗ್ರಾಹಕರು ಸೇರಿ ಯುವತಿ ಮೇಲೆ ಅತ್ಯಾಚಾರ – ಪೊಲೀಸರಿಗೆ ನೋಟಿಸ್

    ಸ್ಪಾ ಮ್ಯಾನೇಜರ್, ಗ್ರಾಹಕರು ಸೇರಿ ಯುವತಿ ಮೇಲೆ ಅತ್ಯಾಚಾರ – ಪೊಲೀಸರಿಗೆ ನೋಟಿಸ್

    ನವದೆಹಲಿ: ಪಿತಾಂಪುರದಲ್ಲಿರುವ ಸ್ಪಾವೊಂದರ ಮ್ಯಾನೇಜರ್ ಮತ್ತು ಗ್ರಾಹಕರು 22 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

    ದೆಹಲಿ ಮಹಿಳಾ ಆಯೋಗದ(ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್ ಘಟನೆಯ ಕುರಿತು ದೆಹಲಿ ಪೊಲೀಸರು ಮತ್ತು ದೆಹಲಿ ಮುನ್ಸಿಪಲ್ ಕಾಪೋರೇಷನ್(ಎಂಸಿಡಿ)ಗೆ ನೋಟಿಸ್ ನೀಡಿದ್ದಾರೆ. ಈ ಕುರಿತು ಸಂತ್ರಸ್ತೆ ಮಾತನಾಡಿದ್ದು, ನಾನು ಕೆಲಸ ಮಾಡುತ್ತಿದ್ದ ಪಿತಾಂಪುರದ ದಿ ಓಷನ್ ಸ್ಪಾದಲ್ಲಿ ಈ ಘಟನೆ ನಡೆದಿದೆ. ಸ್ಪಾ ಮ್ಯಾನೇಜರ್ ನನ್ನನ್ನು ಕ್ಲೈಂಟ್‍ಗೆ ಪರಿಚಯಿಸಿದನು. ನಂತರ ನನಗೆ ಅಮಲು ಬೆರೆಸಿದ ಪಾನೀಯವನ್ನು ಕೊಟ್ಟು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ವಿವರಿಸಿದಳು. ಇದನ್ನೂ ಓದಿ: ಐವರ ಪ್ರಾಣ ಉಳಿಸಿದೆ ಅಂಗಾಂಗ ದಾನ – ಮಗನ ಸಾವಿನಲ್ಲಿ ಸಾರ್ಥಕತೆ ಕಂಡ ಕುಟುಂಬ 

    ಘಟನೆಯ ಕುರಿತು ಪೊಲೀಸರಿಗೆ ನಾನು ತಿಳಿಸುತ್ತೇನೆ ಎಂದು ನಾನು ಪ್ರಯತ್ನಿಸಿದಾಗ ಸ್ಪಾ ಮಾಲೀಕರು ನಾನು ಮೌನವಾಗಿರಲು ಲಂಚ ನೀಡಲು ಪ್ರಯತ್ನಿಸಿದರು. ಆದರೆ ನಾನು ಮಹಿಳಾ ಆಯೋಗಕ್ಕೆ ದೂರು ಕೊಟ್ಟೆ. ಆಯೋಗವು ಈ ವಿಷಯವನ್ನು ತಕ್ಷಣವೇ ಗಮನಕ್ಕೆ ತೆಗೆದುಕೊಂಡಿತು. ಎಂಸಿಡಿ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿತು. ಅವರಿಂದ ಕ್ರಮ-ತೆಗೆದುಕೊಂಡು ವರದಿ ಕೇಳಿದೆ. ದೆಹಲಿ ಪೊಲೀಸರಿಗೆ ಕಳುಹಿಸಿದ ನೋಟಿಸ್‍ನಲ್ಲಿ, ಸ್ವಾತಿ ಮಲಿವಾಲ್ ಅವರು ಎಫ್‍ಐಆರ್‍ನ ಪ್ರತಿಯನ್ನು ಮತ್ತು ಈ ವಿಷಯದಲ್ಲಿ ಬಂಧಿತ ಆರೋಪಿಗಳ ವಿವರಗಳನ್ನು ಕೋರಿದ್ದಾರೆ.

    ಇದಲ್ಲದೆ, ಸ್ಪಾಗೆ ಮಾನ್ಯವಾದ ಪರವಾನಗಿ ಇದೆಯೇ ಎಂದು ಆಯೋಗವು ಅಧಿಕಾರಿಗಳಿಂದ ವಿಚಾರಣೆ ನಡೆಸಿತು. ಎಲ್ಲ ವಿವರಗಳನ್ನು ಮಹಿಳಾ ಸಮಿತಿಯು ಆಗಸ್ಟ್ 8 ರೊಳಗೆ ನೀಡುವಂತೆ ಕೇಳಿದೆ. ಸ್ವಾತಿ ಮಲಿವಾಲ್ ಮಾತನಾಡಿದ ಅವರು, ದೆಹಲಿಯಾದ್ಯಂತ ಸ್ಪಾಗಳ ನೆಪದಲ್ಲಿ ಸೆಕ್ಸ್ ರಾಕೆಟ್ ನಡೆಸಲಾಗುತ್ತಿದೆ. ಆರೋಪಿಗಳು ಹುಡುಗಿಯರ ಬಾಯಿ ಮುಚ್ಚಿಸಲು ಬೆದರಿಕೆ ಮತ್ತು ಬ್ಲ್ಯಾಕ್‍ಮೇಲ್ ಮಾಡುವುದರಿಂದ ಈ ಹೆಚ್ಚಿನ ಪ್ರಕರಣಗಳು ವರದಿಯಾಗಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಸುಖವಾಗಿರಬಹುದೆಂದು ಪತಿ ಜೊತೆಗೆ ವಿದೇಶಕ್ಕೆ ಹೋದ್ಲು – ಕಿರುಕುಳ ತಡೆಯದೆ ಮಸಣ ಸೇರಿದ್ಲು

    ಅಕ್ರಮ ಸ್ಪಾಗಳನ್ನು ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಲು ಏಕೆ ವಿಫಲರಾಗಿದ್ದಾರೆ ಎಂದು ಪ್ರಶ್ನಿಸಿದರು.

    Live Tv
    [brid partner=56869869 player=32851 video=960834 autoplay=true]

  • ರೇಪ್‌ಗೆ ಉತ್ತೇಜನ ನೀಡುವ ಪರ್ಫ್ಯೂಮ್ ಜಾಹೀರಾತು ತೆಗೆಯುವಂತೆ ಕೇಂದ್ರ ಸೂಚನೆ

    ರೇಪ್‌ಗೆ ಉತ್ತೇಜನ ನೀಡುವ ಪರ್ಫ್ಯೂಮ್ ಜಾಹೀರಾತು ತೆಗೆಯುವಂತೆ ಕೇಂದ್ರ ಸೂಚನೆ

    ನವದೆಹಲಿ: ಅತ್ಯಾಚಾರ ಸಂಸ್ಕೃತಿಯನ್ನು ಉತ್ತೇಜಿಸುವ ಸುಗಂಧ ದ್ರವ್ಯ (ಪರ್ಫ್ಯೂಮ್) ಬ್ರಾಂಡ್ ಜಾಹೀರಾತುಗಳನ್ನು ತೆಗೆದುಹಾಕುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಟ್ವಿಟ್ಟರ್, ಯುಟ್ಯೂಬ್ ಹಾಗೂ ಟಿವಿ ಚಾನೆಲ್‌ಗಳಿಗೆ ಹೇಳಿದೆ.

    ಸುಗಂಧ ದ್ರವ್ಯದ ಬ್ರಾಂಡ್ (ಪರ್ಫ್ಯೂಮ್) ಜಾಹಿರಾತುಗಳು ಉದ್ದೇಶಪೂರ್ವಕವಾಗಿ ಗ್ಯಾಂಗ್ ರೇಪ್ ಸಂಸ್ಕೃತಿಗೆ ಉತ್ತೇಜನ ನೀಡುತ್ತಿವೆ. ಇದರ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಪತ್ರ ಬರೆದಿದ್ದರು. ಅಲ್ಲದೆ ಅನೇಕ ಜಾಹೀರಾತಿನ ನಿದರ್ಶನಗಳನ್ನೂ ಉಲ್ಲೇಖಿಸಿದ್ದರು. ಇದಕ್ಕೆ ಶೀಘ್ರವೇ ಸ್ಪಂದಿಸಿರುವ ಸಚಿವರು ಮಧ್ಯಾಹ್ನದ ವೇಳೆಗೆ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಐವರು ಟಾಪ್ ನಾಯಕರು ಕಾಂಗ್ರೆಸ್‌ಗೆ ಗುಡ್‌ಬೈ – ಕಮಲಕ್ಕೆ ಹಾಯ್

    ಆಯುಕ್ತರ ಪತ್ರವನ್ನಾಧರಿಸಿ ಸ್ವಯಂಪ್ರೇರಿತವಾಗಿ ಕ್ರಮ ತೆಗೆದುಕೊಂಡಿರುವ ಸಚಿವಾಲಯ ತನಿಖೆ ನಡೆಸಿ FIR ದಾಖಲಿಸಲು ಮತ್ತು ಸಮೂಹ ಮಾಧ್ಯಮದಿಂದ ಜಾಹೀರಾತನ್ನು ತೆಗೆದುಹಾಕಲು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದೆ. ತನಿಖೆ ಸಂಬಂಧಿತ ವರದಿಯನ್ನು ಜೂನ್ 9ರ ಒಳಗೆ ನೀಡುವಂತೆ ಹೇಳಿದೆ.