Tag: DCP Sharanappa

  • ಗಲಭೆ ಪ್ರದೇಶದಲ್ಲಿ ಇನ್ನೆರಡು ದಿನ ಕರ್ಫ್ಯೂ – ರಸ್ತೆಗಿಳಿದವರಿಗೆ ಪೊಲೀಸರು ಕ್ಲಾಸ್

    ಗಲಭೆ ಪ್ರದೇಶದಲ್ಲಿ ಇನ್ನೆರಡು ದಿನ ಕರ್ಫ್ಯೂ – ರಸ್ತೆಗಿಳಿದವರಿಗೆ ಪೊಲೀಸರು ಕ್ಲಾಸ್

    ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆ ನಡೆದ ಪ್ರದೇಶದಲ್ಲಿ ಇನ್ನೂ ಎರಡು ದಿನ ನಿಷೇಧಾಜ್ಞೆಯನ್ನು ಮುಂದುವರಿಕೆ ಮಾಡಲಾಗಿದೆ.

    ಡಿಜೆ ಹಳ್ಳಿ, ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿಷೇಧಾಜ್ಞೆ ಮುಂದುವರಿಕೆ ಮಾಡಲಾಗಿದೆ. ಆಗಸ್ಟ್ 18ರ ಬೆಳಗ್ಗೆ 6 ಗಂಟೆಯವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಕಾವಲ್ ಭೈರಸಂದ್ರದಲ್ಲಿ ಕರ್ಫ್ಯೂ ಮತ್ತೆ ಜಾರಿಯಾದ ಹಿನ್ನೆಲೆಯಲ್ಲಿ ಪೊಲೀಸರು ಅಂಗಡಿಯನ್ನು ಮುಚ್ಚಿಸುತ್ತಿದ್ದಾರೆ. ಅಲ್ಲದೇ ಅನಗತ್ಯವಾಗಿ ಓಡಾಡುವವರಿಗೆ ಲಾಠಿ ಏಟು ಕೊಟ್ಟು ಮನೆಗೆ ಕಳುಹಿಸುತ್ತಿದ್ದಾರೆ.

    ಡಿಸಿಪಿ ಶರಣಪ್ಪ ಅವರು ನಿಷೇಧಾಜ್ಞೆ ಜಾರಿಯಾದ ಏರಿಯಾಗಳಲ್ಲಿ ರೌಂಡ್ಸ್ ಹಾಕುತ್ತಿದ್ದು, ಗುಂಪು ಸೇರಿರುವವರನ್ನ ಮನೆಗೆ ಕಳುಹಿಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಡಿಸಿಪಿ ಶರಣಪ್ಪ ಅವರು, ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ 52 ಪ್ರಕರಣ ದಾಖಲು ಮಾಡಲಾಗಿದೆ. ಸಿಸಿಟಿವಿ, ಮೊಬೈಲ್ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಇದುವರೆಗೂ ಸುಮಾರು 264 ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ಆರೋಪಿಗಳನ್ನು ವಿಚಾರಣೆ ಮಾಡಲಾಗುತ್ತಿದೆ. ಇನ್ನೂ ಆರೋಪಿಗಳ ಸಂಖ್ಯೆ ಹೆಚ್ಚಾಗಬಹುದು ಎಂದು ತಿಳಿಸಿದರು.

    ಘಟನೆ ನಡೆದ ಸ್ಥಳದಲ್ಲಿ ಇನ್ನೂ ಎರಡು ದಿನಗಳ ಕಾಲ ಕರ್ಫ್ಯೂ ಮುಂದುವರಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಸಾಕ್ಷಿ ಸಂಗ್ರಹಣೆ ನಡೆಸಲಾಗುತ್ತಿದೆ. ಆರೋಪಿ ನವೀನ್ ಮೊಬೈಲ್ ಪತ್ತೆ ವಿಚಾರಕ್ಕೆ ಸಂಬಂಧಿಸದಂತೆ ಫೋರೆನ್ಸಿಕ್ಸ್ ಕೆಲಸ ನಡೆಯುತ್ತಿದೆ. ಇನ್ನೂ ಆಸ್ತಿ ನಷ್ಟದ ಬಗ್ಗೆ ಎಕ್ಸ್ ಪರ್ಟ್ ತಂಡ ಜೊತೆ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಮಾಹಿತಿ ನೀಡಿದರು.

    ಕೆಜಿ ಹಳ್ಳಿಯಲ್ಲಿ ಕರ್ಫ್ಯೂ ಇದ್ದರೂ ಅನಗತ್ಯವಾಗಿ ಜನರು ರಸ್ತೆಗೆ ಬರುತ್ತಿದ್ದಾರೆ. ಹೀಗಾಗಿ ರಸ್ತೆಗೆ ಬಂದು ಅನಗತ್ಯವಾಗಿ ಅಡ್ಡಾಡುತ್ತಿದ್ದ ಮಹಿಳೆಯರಿಗೆ ಲಾಠಿ ಏಟು ಕೊಟ್ಟು ಮಹಿಳಾ ಪೊಲೀಸರು ಮನೆಗೆ ಕಳುಹಿಸುತ್ತಿದ್ದಾರೆ. ಅಲ್ಲದೇ ಮಹಿಳಾ ಪೊಲೀಸರು ಪ್ರತಿಯೊಂದು ವಾಹನಗಳನ್ನ ತಡೆದು ವಿಚಾರಿಸುತ್ತಿದ್ದಾರೆ. ಕೆಜಿ ಹಳ್ಳಿಯ ಟ್ಯಾನರಿ ರಸ್ತೆಯಲ್ಲಿ ನಾಲ್ಕು ಮಹಿಳಾ ಪೊಲೀಸರು ಸಖತ್ ಸೆಕ್ಯೂರಿಟಿ ಕೊಡುತ್ತಿದ್ದಾರೆ.

  • ಡಿಜೆ, ಕೆಜಿ ಹಳ್ಳಿಯಲ್ಲಿ ಇಂದು ನಮಾಜ್‍ಗೆ ನಿಷೇಧ – ಡಿಸಿಪಿ ಶರಣಪ್ಪ ಖಡಕ್ ಸೂಚನೆ

    ಡಿಜೆ, ಕೆಜಿ ಹಳ್ಳಿಯಲ್ಲಿ ಇಂದು ನಮಾಜ್‍ಗೆ ನಿಷೇಧ – ಡಿಸಿಪಿ ಶರಣಪ್ಪ ಖಡಕ್ ಸೂಚನೆ

    ಬೆಂಗಳೂರು: ನಿಷೇದಾಜ್ಞೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಇಂದು ನಮಾಜ್‍ಗೆ ನಿಷೇಧ ಮಾಡಲಾಗಿದೆ.

    ಇಂದು ಶುಕ್ರವಾರ ಆಗಿರುವುದರಿಂದ ಸಾಮೂಹಿಕವಾಗಿ ನಮಾಜ್ ಮಾಡುತ್ತಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಹೀಗಾಗಿ ಸಾಮೂಹಿಕ ಪ್ರಾರ್ಥನೆಗಾಗಿ ಅವಕಾಶ ನಿಷೇಧಿಸಲಾಗಿದೆ. ಕೇವಲ ಮೌಲ್ವಿ ಒಬ್ಬರು ಮಾತ್ರ ಹೋಗಿ ನಮಾಜ್ ಮಾಡಲು ಅವಕಾಶ ನೀಡಲಾಗಿದೆ. ಇಂದು ನಿಷೇದಾಜ್ಞೆ ಪ್ರದೇಶದಲ್ಲಿ ನಮಾಜ್ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ. ಕೆಎಸ್‌ಆರ್‌ಪಿ, ಸಿಎಆರ್ ತುಕಡಿ ಸೇರಿ ಸುಮಾರು 1,500 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

    ಅಲ್ಲದೇ ಭದ್ರತೆಯಲ್ಲಿರುವ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಮಾಜ್ ಇದೇ ಎಂದು ಯಾರೂ ಕೂಡ ಅಡ್ಡಾಡದಂತೆ ನೋಡಿಕೊಳ್ಳಿ. ಯಾರೂ ಕೂಡ ಮೈಮರೆತು ಇರಬೇಡಿ, ಅನವಶ್ಯಕವಾಗಿ ಓಡಾಡದಂತೆ ನಿಗಾ ವಹಿಸಿ ಎಂದು ಡಿಸಿಪಿ ಶರಣಪ್ಪ ಖಡಕ್ ಸೂಚನೆ ನೀಡಿದ್ದಾರೆ.

    ಸೂಕ್ಷ್ಮ ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳಬೇಕು, ಯಾವುದೇ ರೀತಿ ನಿರ್ಲಕ್ಷಕ್ಕೆ ಅವಕಾಶ ಇಲ್ಲ. ನಮ್ಮ ಡ್ಯೂಟಿಯಲ್ಲಿ ಶಿಸ್ತಿನಿಂದ, ಪರಿಸ್ಥಿತಿಯನ್ನ ಗಣನೆಗೆ ತೆಗೆದುಕೊಂಡು ಕಾರ್ಯ ನಿರ್ವಹಿಸಿ. ನಾವು ದೊಡ್ಡ ಕುಟುಂಬ ಇದ್ದೇವೆ, ಒಂದಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಇದು ನಿಮ್ಮ ವ್ಯಾಪ್ತಿಯಲ್ಲಿ ಇಲ್ಲದೆ ಹೋದರು ತಾರತಮ್ಯ ಮಾಡಬಾರದು. ಖಾಕಿಯ ಹೆಮ್ಮೆಯನ್ನ ಉಳಿಸಿಕೊಳ್ಳಬೇಕು ಎಂದು ಡಿಸಿಪಿ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

    144 ಸೆಕ್ಷನ್ ಜಾರಿಯಾಗಿದೆ. ಹೀಗಾಗಿ ನಮಾಜ್‍ಗೆ ಅನುಮತಿ ಇಲ್ಲ. ಯಾರ ಮೇಲೂ ಅನವಶ್ಯಕ ಲಾಠಿ ಬಿಸುವಂತಿಲ್ಲ. ಬೆಂಗಳೂರು, ಕರ್ನಾಟಕ ಪೊಲೀಸರು ಅಂದರೆ ಎಲ್ಲರೂ ಹೆಮ್ಮೆಪಡಬೇಕು. ಆ ರೀತಿ ಕೆಲಸ ಮಾಡಬೇಕು. ನಾನು ವ್ಯಾಪ್ತಿಯಲ್ಲಿ ರೌಂಡ್ಸ್‌ನಲ್ಲಿ ಇರುತ್ತೀನಿ ಎಂದು ಶರಣಪ್ಪ ತಿಳಿಸಿದರು.

  • ಪುಡಾರಿಗಳಿಗೆ ಡಿಸಿಪಿ ಶರಣಪ್ಪ ಖಡಕ್ ಎಚ್ಚರಿಕೆ

    ಪುಡಾರಿಗಳಿಗೆ ಡಿಸಿಪಿ ಶರಣಪ್ಪ ಖಡಕ್ ಎಚ್ಚರಿಕೆ

    ಬೆಂಗಳೂರು: ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಆ ವಿಭಾಗದ ಪುಡಾರಿಗಳನ್ನು ಕರೆಸಿ ಪರೇಡ್ ಮಾಡಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಪೂರ್ವ ವಿಭಾಗದ ಬಾಣಸವಾಡಿ, ಹಲಸೂರು, ರಾಮೂರ್ತಿ ನಗರ, ಬೈಯ್ಯಪ್ಪನ ಹಳ್ಳಿ, ಇಂದಿರಾ ನಗರ, ಜೀವನ್ ಭೀಮಾನಗರ ಸೇರಿದಂತೆ ಪೂರ್ವ ವಿಭಾಗದ ಎಲ್ಲಾ ಪೊಲೀಸ್ ರೌಡಿ ಶೀಟರ್ ಗಳನ್ನು ಕರೆದು ಪರೇಡ್ ಮಾಡಲಾಯ್ತು. ಪರೇಡ್‍ನಲ್ಲಿ ಸುಮಾರು 150 ಕ್ಕೂ ಹೆಚ್ಚು ಪುಡಿ ರೌಡಿಗಳಿಗೆ ಲೆಫ್ಟ್ ರೈಟ್ ಮಾಡಿ ಖಡಕ್ ವಾರ್ನ್ ಮಾಡಿದ್ರು. ಅಷ್ಟೇ ಅಲ್ಲದೇ ನಿರಂತರವಾಗಿ ಅಪರಾಧ ಚಟುವಟಿಕೆಯಲ್ಲಿ ನಿರತರಾದರೆ ಗೂಂಡ ಆಕ್ಟ್ ಆಗಿ ಜೈಲಿಗೆ ಕಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ನಗರದಲ್ಲಿ ಅದರಲ್ಲೂ ಕೆಲ ದಿನಗಳಿಂದ ಪೂರ್ವ ವಿಭಾಗದ ರಾಮಮೂರ್ತಿ ನಗರ, ಬೈಯ್ಯಪ್ಪನಹಳ್ಳಿ ಅಸುಪಾಸಿನಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೌಡಿ ಪರೇಡ್ ಮಾಡಿ ಡಿಸಿಪಿ ವಾರ್ನ್ ಮಾಡಿದ್ದಾರೆ. ಪರೇಡ್ ವೇಳೆ ಆಕ್ಟಿವ್ ಆಗಿರುವ ಅಪಾಯಕಾರಿ ಕ್ರಿಮಿನಲ್‍ಗಳ ಮೇಲೆ ಹದ್ದಿನ ಕಣ್ಣಿಡುವಂತೆ ಆಯಾ ಠಾಣಾ ಇನ್ಸ್ ಪೆಕ್ಟರ್ ಹಾಗೂ ಕ್ರೈಂ ಸಿಬ್ಬಂದಿಗೆ ಡಿಸಿಪಿ ಶರಣಪ್ಪ ತಾಕೀತು ಮಾಡಿದರು. ಅಪರಾಧ ಚಟುವಟಿಕೆಯಲ್ಲಿ ಭಾಗಿರುತ್ತಿರುವುದು ಗಮನಕ್ಕೆ ಬಂದರೆ ಮುಲಾಜಿಲ್ಲದೇ ಬಂಧಿಸಿ ಜೈಲಿಗೆ ಕಳಿಸುವಂತೆ ಸೂಚಿಸಿದರು.