Tag: DCM

  • ಕಚೇರಿ ಬದಲು ಖಾಸಗಿ ರೆಸಾರ್ಟ್‌ನಲ್ಲಿ ಅಧಿಕಾರಿಗಳೊಂದಿಗೆ ಡಿಸಿಎಂ ಸಭೆ

    ಕಚೇರಿ ಬದಲು ಖಾಸಗಿ ರೆಸಾರ್ಟ್‌ನಲ್ಲಿ ಅಧಿಕಾರಿಗಳೊಂದಿಗೆ ಡಿಸಿಎಂ ಸಭೆ

    ಚಿಕ್ಕಬಳ್ಳಾಪುರ: ಡಿಸಿಎಂ ಅಶ್ವಥ್ ನಾರಾಯಣ್ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಜೊತೆ ಮಾಡಬೇಕಾದ ಸಭೆಯನ್ನು ಡಿಸ್ಕವರಿ ವಿಲೇಜ್ ರೆಸಾರ್ಟ್‌ನಲ್ಲಿ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಅಶ್ವಥ್ ನಾರಾಯಣ್ ಜಿಲ್ಲೆಗೆ ಆಗಮಿಸಿದ್ದಾರೆ. ಡಿಸ್ಕವರಿ ವಿಲೇಜ್ ರೆಸಾರ್ಟ್‌ನಲ್ಲಿ ಅಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಸಭೆ ನಡೆಸಿದರು. ಸಭೆ ನಂತರ ಮಾತನಾಡಿದ ಡಿಸಿಎಂ, ನಂದಿಗಿರಿಧಾಮದ ಸಮಗ್ರ ಅಭಿವೃದ್ಧಿ ಹಾಗೂ ಬೋಗನಂಧಿಶ್ವರ ದೇವಾಲಯದಲ್ಲಿ ಮೂಲಭೂತ ಸೌಲಭ್ಯಗಳು ಸೇರಿದಂತೆ ಜಿಲ್ಲೆಯಲ್ಲಿನ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.

    ಖಾಸಗಿ ರೆಸಾರ್ಟ್‌ನಲ್ಲಿ ಸಭೆ ಬಗ್ಗೆ ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ್, ಕೇವಲ ನಂದಿಗಿರಿಧಾಮ ಮಾತ್ರವಲ್ಲ ಜಿಲ್ಲೆಯ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಜಾಗ ಸೂಕ್ತವಾಗಿತ್ತು. ಹೀಗಾಗಿ ಇಲ್ಲಿ ಸಭೆ ನಡೆಸಲಾಗಿದೆ ಹೊರತು ಬೇರೆನೂ ಉದ್ದೇಶ ಇಲ್ಲ ಎಂದು ಸಭೆ ಬಗ್ಗೆ ಸಮರ್ಥನೆ ಮಾಡಿಕೊಂಡರು.

    ಸರ್ಕಾರಿ ಕಚೇರಿಗಳಲ್ಲಿ ಅಥವಾ ನಂದಿಬೆಟ್ಟದಲ್ಲಿ ಮಾಡಬೇಕಾದ ಸಭೆಯನ್ನು ಖಾಸಗಿ ರೆಸಾರ್ಟ್‍ನಲ್ಲಿಆಯೋಜಿಸಿದ್ದು ಯಾಕೆ? ಸರ್ಕಾರದ ದುಡ್ಡಲ್ಲಿ ಖಾಸಗಿ ರೆಸಾರ್ಟ್‍ನಲ್ಲಿ ಸಭೆ ನಡೆಸಿದ್ದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

    ಸದ್ಯ ಸಭೆ ನಂತರ ಡಿಸಿಎಂ ವಿಶ್ವವಿಖ್ಯಾತ ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟೂರು ಮುದ್ದೇನಹಳ್ಳಿಗೆ ಆಗಮಿಸಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ವಿಶ್ವೇಶ್ವರಯ್ಯನವರು ವಾಸವಿದ್ದ ಮನೆ ಹಾಗೂ ಮ್ಯೂಸಿಯಂಗೆ ಭೇಟಿ ನೀಡಿದರು.

  • ಒಂದ್ಸಾರಿ ಸೋತಿದ್ದಕ್ಕೆ ಡಿಸಿಎಂ, ಇನ್ನೊಂದು ಬಾರಿ ಸೋತ್ರೆ ಸಿಎಂ ಆಗಲಿದ್ದೀರಿ- ತಂಗಡಗಿ

    ಒಂದ್ಸಾರಿ ಸೋತಿದ್ದಕ್ಕೆ ಡಿಸಿಎಂ, ಇನ್ನೊಂದು ಬಾರಿ ಸೋತ್ರೆ ಸಿಎಂ ಆಗಲಿದ್ದೀರಿ- ತಂಗಡಗಿ

    ಕೊಪ್ಪಳ: ಜಿಲ್ಲಾ ಉಸ್ತುವಾರಿ ಮಂತ್ರಿ, ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿರುದ್ಧ ಮಾಜಿ ಸಚಿವ ಶಿವರಾಜ್ ತಂಗಡಗಿ ಹರಿಹಾಯ್ದಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮಣ ಸವದಿ ಅವರು ಒಂದು ಸಾರಿ ಸೋತಿದ್ದಕ್ಕೆ ಉಪಮುಖ್ಯಮಂತ್ರಿ ಆಗಿದ್ದಾರೆ ಇನ್ನೊಂದು ಬಾರಿ ಸೋತ್ರೆ ಈ ರಾಜ್ಯದ ಮುಖ್ಯಮಂತ್ರಿ ಆಗಬಹುದು ಎಂದು ವ್ಯಂಗ್ಯವಾಡಿದರು.

    ಇತ್ತೀಚೆಗಷ್ಟೇ ಕೊಪ್ಪಳಕ್ಕೆ ಆಗಮಿಸಿದ್ದ ಲಕ್ಷ್ಮಣ ಸವದಿ, ತಂಗಡಗಿ ವಿರುದ್ಧ ಹೇಳಿಕೆಯೊಂದನ್ನು ನೀಡಿದ್ದರು. ತಂಗಡಗಿ ಚುನಾವಣೆಯಲ್ಲಿ ಸೋತ ನಂತರ ತನ್ನ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಏನೇನೋ ಮಾತಾಡುತ್ತಿದ್ದಾರೆ ಅವರಿಗೆ ಮೋದಿಯನ್ನು ಬೈದರೆ ಪ್ರಚಾರ ಸಿಗುತ್ತದೆ. ಹೀಗಾಗಿ ಮೋದಿಯನ್ನು ಅವರು ಬೈದು ಪ್ರಚಾರ ಗಿಟ್ಟಿಸಿ ಕೊಳ್ಳುತ್ತಾರೆ ಎಂದು ವ್ಯಂಗ್ಯ ಮಾಡಿದ್ರು.

    ಸವದಿ ಅವರ ಈ ಹೇಳಿಕೆಗೆ ಮಾಜಿ ಸಚಿವ ಶಿವರಾಜ್ ತಂಗಡಗಿ ಇದೀಗ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಲಕ್ಷ್ಮಣ ಸವದಿ ಸ್ಥಿತಿ ಅಲ್ಪನಿಗೆ ಐಶ್ವರ್ಯ ಬಂದಂತಾಗಿದೆ: ರೇಣುಕಾಚಾರ್ಯ ಕಿಡಿ

  • ಲಕ್ಷ್ಮಣ ಸವದಿ ಸ್ಥಿತಿ ಅಲ್ಪನಿಗೆ ಐಶ್ವರ್ಯ ಬಂದಂತಾಗಿದೆ: ರೇಣುಕಾಚಾರ್ಯ ಕಿಡಿ

    ಲಕ್ಷ್ಮಣ ಸವದಿ ಸ್ಥಿತಿ ಅಲ್ಪನಿಗೆ ಐಶ್ವರ್ಯ ಬಂದಂತಾಗಿದೆ: ರೇಣುಕಾಚಾರ್ಯ ಕಿಡಿ

    ದಾವಣಗೆರೆ: ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಸ್ವಪಕ್ಷದ ಮುಖಂಡ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾತನಾಡಿದ ಶಾಸಕರು, ಅಲ್ಪನಿಗೆ ಐಶ್ವರ್ಯ ಬಂದರೆ ಏನ್ ಮಾಡುತ್ತಾರೋ ಅದೇ ರೀತಿ ಡಿಸಿಎಂ ಲಕ್ಷ್ಮಣ ಸವದಿ ಸ್ಥಿತಿಯಾಗಿದೆ. ನಿಜಕ್ಕೂ ಲಕ್ಷ್ಮಣ ಸವದಿ ವರ್ತನೆ ಸರಿಯಲ್ಲ. ಅತೃಪ್ತ ಶಾಸಕರ ಬಗ್ಗೆ ವಿನಾಕಾರಣ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುತ್ತದೆ. ಈ ವಿಚಾರದ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ಗುಡುಗಿದರು. ಇದನ್ನೂ ಓದಿ: ಸವದಿ ಬೇಜವಾಬ್ದಾರಿ ಹೇಳಿಕೆಯಿಂದ ಹಾಳಾದ್ರು, ಇನ್ನೂ ಹಾಳಾಗ್ತಾರೆ: ರಮೇಶ್ ಜಾರಕಿಹೊಳಿ

    ಸೋತವರು ಉಪಮುಖ್ಯಮಂತ್ರಿ ಆಗಿದ್ದು ಇತಿಹಾಸದಲ್ಲಿಯೇ ಇಲ್ಲ. ಆದರೆ ಇತಿಹಾಸ ಸೃಷ್ಟಿಸಿ ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಪದವಿ ನೀಡಲಾಗಿದೆ. ಅದು ಅನರ್ಹ ಶಾಸಕರಿಂದ ತ್ಯಾಗದಿಂದ ಅಧಿಕಾರಕ್ಕೆ ಬಂದಿದ್ದು. ಅವರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುವುದು ಎಷ್ಟು ಸೂಕ್ತ. ಅಷ್ಟೇ ಅಲ್ಲದೆ ಈಗ ಉಪಚುನಾವಣೆ ಬಂದಿದೆ. ಹತಾಶಯ ಮನೋಭಾವದಿಂದ ಹೀಗೆ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ:  ಈಶ್ವರಪ್ಪ, ಯಡಿಯೂರಪ್ಪ ಲವ ಕುಶ ಇದ್ದಂತೆ: ರೇಣುಕಾಚಾರ್ಯ

    ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ಸುಭದ್ರವಾಗಿದೆ. ಯಾವುದೇ ಕಾರಣಕ್ಕೂ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ. ಉಪ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಪಕ್ಷ ವರಿಷ್ಠರು ಸಭೆ ನಡೆಸಲಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಜಾತ್ಯತೀತ ನಾಯಕರು. ಅವರನ್ನ ಒಂದೇ ಜಾತಿಗೆ ಸೇರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

  • ಮತ್ತೆ ವಿವಾದದ ಕಿಡಿ ಹಚ್ಚಿಸಿದ ಅಶ್ವಥ್ ನಾರಾಯಣ್

    ಮತ್ತೆ ವಿವಾದದ ಕಿಡಿ ಹಚ್ಚಿಸಿದ ಅಶ್ವಥ್ ನಾರಾಯಣ್

    ಬೆಂಗಳೂರು: ಟಿಪ್ಪು ಸುಲ್ತಾನ್ ಒಬ್ಬ ಮತಾಂಧ ಎಂದು ಬಿಜೆಪಿ ನಾಯಕರು ಹೇಳುತ್ತೇ ಬಂದಿದ್ದಾರೆ. ಈ ಮಧ್ಯೆ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್, 260 ವರ್ಷಗಳ ಘಟನೆ ನೆನೆದು ಮತ್ತೆ ವಿವಾದದ ಕಿಡಿ ಹಚ್ಚಿದ್ದಾರೆ.

    ಅಶ್ವಥ್ ನಾರಾಯಣ್ ಅವರು ಟ್ವೀಟ್ ಮಾಡಿ, ಎರಡು ಶತಮಾನಗಳ ಹಿಂದೆ ಇದೇ ನರಕ ಚತುರ್ದಶಿಯ ದಿನ, ಮತಾಂಧ ಟಿಪ್ಪು ಸುಲ್ತಾನನ ಕ್ರೌರ್ಯ, ಅಟ್ಟಹಾಸಕ್ಕೆ ಅಸಹಾಯಕ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 800 ಮುಗ್ಧ ಜನರು ಬಲಿಯಾದರು. ದೇಶದೆಲ್ಲೆಡೆ ಈ ಬೆಳಕಿನ ಹಬ್ಬವನ್ನು ಆಚರಿಸುತ್ತಿದ್ದರೆ, ನಮ್ಮ ರಾಜ್ಯದ ಮೇಲುಕೋಟೆಯಲ್ಲಿ ದೀಪಾವಳಿಯ ಸಂಭ್ರಮವಿಲ್ಲದೇ ಕತ್ತಲು ಆವರಿಸುತ್ತಿರುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಮಾಡ್ತೀವಿ: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ

    ಮತ್ತೊಂದು ಟ್ವೀಟ್‍ನಲ್ಲಿ, ಈ ಹೃದಯವಿದ್ರಾವಕ ಘಟನೆಯು ಇತಿಹಾಸದ ಪುಟಗಳಿಗೆ ಮಾತ್ರ ಸೀಮಿತವಾಗಬಾರದು. ನಮ್ಮ ಸಾಮೂಹಿಕ ನೆನಪಿನಿಂದ ಮಾಸಬಾರದು. ಮೇಲುಕೋಟೆ ಹತ್ಯಾಕಾಂಡದ ಹುತಾತ್ಮರನ್ನು ಇಂದು ನಾವೆಲ್ಲರೂ ನೆನೆಯೋಣ ಎಂದು ಅಶ್ವಥ್ ನಾರಾಯಣ್ ತಿಳಿಸಿದ್ದಾರೆ. ಇದನ್ನೂ ಓದಿ: ಟಿಪ್ಪು ಜಯಂತಿ ರದ್ದಿಗೆ ಬಿಜೆಪಿಯಲ್ಲೇ ಅಪಸ್ವರ

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಡಳಿತಾವಧಿಯಲ್ಲಿ ಟಿಪ್ಪು ಜಯಂತಿಯನ್ನು ಜಾರಿಗೆ ತಂದಿದ್ದರು. ಆದರೆ ಇದಕ್ಕೆ ಬಿಜೆಪಿ ಸೇರಿದಂತೆ ಕೆಲ ಹಿಂದೂ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಕಳೆದ ಕೆಲವು ವರ್ಷಗಳಿಂದ ಬಿಗಿ ಭದ್ರತೆಯಲ್ಲಿಯೇ ಟಿಪ್ಪು ಜಯಂತಿ ಆಚರಿಸಲಾಗಿತ್ತು. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಟಿಪ್ಪು ಜಯಂತಿ ಆಚರಣೆಯನ್ನು ಸರ್ಕಾರಿ ಕಚೇರಿಯಲ್ಲಿ ಆಚರಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.

  • ನಮ್ಮ ಪಕ್ಷದಲ್ಲಿ ಇಲ್ಲದವರು ಟಿಪ್ಪು ಜಯಂತಿ ಆಚರಿಸುತ್ತಾರೆ- ಬಚ್ಚೇಗೌಡ ಪುತ್ರನಿಗೆ ಡಿಸಿಎಂ ತಿರುಗೇಟು

    ನಮ್ಮ ಪಕ್ಷದಲ್ಲಿ ಇಲ್ಲದವರು ಟಿಪ್ಪು ಜಯಂತಿ ಆಚರಿಸುತ್ತಾರೆ- ಬಚ್ಚೇಗೌಡ ಪುತ್ರನಿಗೆ ಡಿಸಿಎಂ ತಿರುಗೇಟು

    – ಬಿಜೆಪಿಯಲ್ಲಿದ್ದು ಶರತ್ ಟಿಪ್ಪು ಜಯಂತಿ ಆಚರಿಸಲ್ಲ
    – ಸರ್ಕಾರವನ್ನೇ ಉಳಿಸಿಕೊಳ್ಳದವರು ಉಪಚುನಾವಣೆ ಗೆಲ್ತಾರಾ?

    ಉಡುಪಿ: ನಮ್ಮ ಪಕ್ಷದ ಯಾವುದೇ ನಾಯಕರು, ಕಾರ್ಯಕರ್ತರು ನಾವು ಟಿಪ್ಪು ಜಯಂತಿಯನ್ನು ಆಚರಿಸುವುದಿಲ್ಲ. ನಮ್ಮ ಪಕ್ಷದವರಲ್ಲದವರು ಮಾತ್ರ ಟಿಪ್ಪು ಜಯಂತಿ ಆಚರಿಸಲು ಸಾಧ್ಯ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಅವರಿಗೆ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ತಿರುಗೇಟು ನೀಡಿದ್ದಾರೆ.

    ತುಮಕೂರು ಬಿಜೆಪಿ ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಅವರ ಟಿಪ್ಪು ಜಯಂತಿ ಆಚರಿಸುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ಟಿಪ್ಪು ಜಯಂತಿ ಆಚರಿಸಲ್ಲ. ನಮ್ಮ ಪಕ್ಷದಲ್ಲಿ ಇಲ್ಲದವರು ಟಿಪ್ಪು ಜಯಂತಿ ಆಚರಿಸ್ತಾರೆ. ಈ ಬಗ್ಗೆ ಬಿಜೆಪಿಗೆ ಸ್ಪಷ್ಟತೆ ಇದೆ. ನಮ್ಮ ಪಕ್ಷದ ಯಾವುದೇ ನಾಯಕರು, ಕಾರ್ಯಕರ್ತರು ನಾವು ಟಿಪ್ಪು ಜಯಂತಿಯನ್ನು ಆಚರಿಸಲ್ಲ. ನಮ್ಮ ಪಕ್ಷದವರಲ್ಲದವರು ಮಾತ್ರ ಟಿಪ್ಪು ಜಯಂತಿ ಆಚರಿಸಲು ಸಾಧ್ಯ ಎಂದರು.

    ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜಾಮೀನಿನ ಮೇಲೆ ಹೊರಗಡೆ ಬಂದಿರುವುದಕ್ಕೂ ಉಪಚುನಾವಣೆಗೂ ಹೆಚ್ಚು ಮಹತ್ವ ಕೊಡಬೇಕಾಗಿಲ್ಲ. ಅವರು ಇದ್ದ ಸರ್ಕಾರವನ್ನೇ ಉಳಿಸಿಕೊಂಡಿಲ್ಲ. ಈಗ ಉಪಚುನಾವಣೆಯಲ್ಲಿ ಗೆಲ್ಲಲು ಕಾರಣರಾಗುತ್ತಾರಾ ಎಂದು ಅಶ್ವಥ್ ನಾರಾಯಣ ಟಾಂಗ್ ಕೊಟ್ಟರು.

    ಇಲಿ ಬಂದರೆ ಹುಲಿ ಬಂತು ಅನ್ನಲಾಗುತ್ತಿದೆ. ಅವರ ಬಿಡುಗಡೆಗೆ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲ. ಎಲ್ಲೂ ಸಲ್ಲದವರು ಈಗ ಉಪಚುನಾವಣೆಯಲ್ಲಿ ಸಲ್ಲುತ್ತಾರಾ? ಎಂದು ಕುಟುಕಿದರು. ಒಕ್ಕಲಿಗ ಸಮಾಜಕ್ಕೆ ಭ್ರಷ್ಟಾಚಾರ ರಹಿತ ಆಡಳಿತ ಬೇಕು. ಭ್ರಷ್ಟಾಚಾರ ಪೂರಕ ಸಮಾಜ ಕಟ್ಟವುದು ಅಸಾಧ್ಯ. ಜಾತಿಯ ಹಿನ್ನೆಲೆಯಲ್ಲಿ ರಕ್ಷಣೆ ಪಡೆಯುವುದು ಸರಿಯಲ್ಲ. ವ್ಯಕ್ತಿಗತ ರಾಜಕೀಯಕ್ಕೆ ನಾವು ಒತ್ತು ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಒಂದು ಕಡೆ ಡಿಸಿಎಂ ಲಕ್ಷ್ಮಣ ಸವದಿ ಅನರ್ಹ ಶಾಸಕರಿಗೂ-ಬಿಜೆಪಿಗೂ ಸಂಬಂಧವೇ ಇಲ್ಲ ಎಂದು ಹೇಳಿದರೆ ಇನ್ನೊಂದೆಡೆ ಡಿಸಿಎಂ ಅಶ್ವತ್ಥ ನಾರಾಯಣ ಕೆಟ್ಟ ಸಮ್ಮಿಶ್ರ ಸರಕಾರ ಪತನಗೊಂಡಿದ್ದು ಅನರ್ಹ ಶಾಸಕರ ಕೃಪೆಯಿಂದ ಆ ಶಾಸಕರಿಗೆ ಮಾನ್ಯತೆ ಸಿಗದೆ ಮತ್ಯಾರಿಗೆ ಸಿಗಬೇಕು ಎಂದು ಹೇಳಿದರು.

    ಅನರ್ಹ ಶಾಸಕರು ಸಮಾಜದ ರಕ್ಷಣೆಗೆ ಬಂದವರು. ಅವರು ಸತ್ಕಾರ್ಯ ಮಾಡಿದವರು. ಈವರೆಗೆ ಬಿಜೆಪಿ ಪಕ್ಷ ಸೇರಿಲ್ಲ, ಸೇರ್ಪಡೆ ನಂತರ ಯಾರಿಗೆ ಟಿಕೆಟ್ ಕೊಡಬೇಕು ಅಂತ ಪಕ್ಷ ನಿರ್ಧರಿಸಲಾಗುವುದು. ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಸಂಪೂರ್ಣ ಅಸ್ಥಿತ್ವ ಕಳೆದುಕೊಂಡಿವೆ. ಇವರ ಒಳಜಗಳ, ಸಮಾಜ ಒಡೆಯುವ ಕಾರ್ಯಕ್ಕೆ ಜನ ಬೇಸತ್ತಿದ್ದಾರೆ. ಬಲಿಷ್ಠ ವಿಪಕ್ಷವಾಗಿ ಕೆಲಸ ಮಾಡುತ್ತಿಲ್ಲ ಹೀಗಾಗಿ ಉಪಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಉಡುಪಿ ಪ್ರವಾಸದಲ್ಲಿದ್ದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಕೃಷ್ಣಮಠಕ್ಕೆ ಭೇಟಿ ನೀಡಿದರು. ಈ ವೇಳೆ ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆದರು. ಕೆಲ ಹೊತ್ತು ಮಠದಲ್ಲೇ ಕಳೆದ ಅವರು ಗರ್ಭಗುಡಿಯ ಚಿನ್ನದ ಹೊದಿಕೆಯನ್ನು ವೀಕ್ಷಿಸಿದರು. ನಂತರ ಪರ್ಯಾಯ ಪಲಿಮಾರು ವಿದ್ಯಾಧೀಶತೀರ್ಥ ಸ್ವಾಮೀಜಿಯನ್ನು ಭೇಟಿ ಮಾಡಿದರು. ಇದೇ ಸಂದರ್ಭದಲ್ಲಿ ಡಿಸಿಎಂ ಬಳಿ ಪರ್ಯಾಯ ಪಲಿಮಾರು ಶ್ರೀಗಳು ಸಂಸ್ಕೃತ ಕಾಲೇಜಿನ ಬೇಡಿಕೆಯಿಟ್ಟರು. ಈ ವೇಳೆ ಕಾಪು ಶಾಸಕ ಲಾಲಾಜೀ ಮೆಂಡನ್, ಉಡುಪಿ ಶಾಸಕ ರಘುಪತಿ ಭಟ್ ಇದ್ದರು.

  • ರಾಮುಲುರನ್ನು ಡಿಸಿಎಂ ಎಂದು ಶಾ ಘೋಷಿಸಿದ್ರು, ಯಾಕೆ ತಡೆಹಿಡಿದ್ರೋ ಗೊತ್ತಿಲ್ಲ: ಬಿಜೆಪಿ ಶಾಸಕ

    ರಾಮುಲುರನ್ನು ಡಿಸಿಎಂ ಎಂದು ಶಾ ಘೋಷಿಸಿದ್ರು, ಯಾಕೆ ತಡೆಹಿಡಿದ್ರೋ ಗೊತ್ತಿಲ್ಲ: ಬಿಜೆಪಿ ಶಾಸಕ

    ಬಳ್ಳಾರಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದರು. ಆದರೆ ಯಾಕೆ ತಡೆಹಿಡಿಯಲಾಯ್ತು ಎಂಬುದು ಗೊತ್ತಿಲ್ಲ ಎನ್ನುವ ಮೂಲಕ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ.

    ಬಳ್ಳಾರಿಯಲ್ಲಿ ವಾಲ್ಮೀಕಿ ಜಯಂತಿ ಬಳಿಕ ಮಾತನಾಡಿದ ಅವರು, ಶ್ರೀರಾಮುಲು ಅವರಿಗೆ ಡಿಸಿಎಂ ಪಟ್ಟ ಕೈತಪ್ಪಿರುವುದು ನಮಗೆ ತುಂಬಾ ಬೇಸರವಾಗಿದೆ. ಆದರೆ ಈ ಬಗ್ಗೆ ಜಿಲ್ಲೆಯ ಎಲ್ಲ ಶಾಸಕರು ಹೋಗಿ ಸಿಎಂ ಬಳಿ ಮನವಿ ಮಾಡುತ್ತೇವೆ. ಶ್ರೀರಾಮುಲು ಡಿಸಿಎಂ ಆಗಬೇಕು, ಅಲ್ಲದೆ ಜಿಲ್ಲೆಯ ಅಭಿವೃದ್ಧಿಯಾಗಲು ಶ್ರೀರಾಮುಲುಗೆ ಬಳ್ಳಾರಿ ಉಸ್ತುವಾರಿ ನೀಡಬೇಕು ಎಂದು ಒತ್ತಾಯಿಸಿದರು.

    ದೂರದ ಬೆಳಗಾವಿಯ ಲಕ್ಷ್ಮಣ ಸವದಿ ಅವರಿಗೆ ಜಿಲ್ಲಾ ಉಸ್ತುವಾರಿ ಕೊಟ್ಟಿರುವುದು ಸರಿಯಲ್ಲ, ಹಾಗಂತ ನಮ್ಮ ವಿರೋಧವೂ ಇಲ್ಲ. ಆದರೆ ನಮ್ಮ ಜಿಲ್ಲೆಯವರಿಗೆ ಕೊಟ್ಟರೆ ಜಿಲ್ಲೆ ಹೆಚ್ಚಿನ ಅಭಿವೃದ್ಧಿ ಆಗಲಿದೆ. ಶ್ರೀರಾಮುಲು ಶ್ರಮದಿಂದ ವಾಲ್ಮೀಕಿ ಜನಾಂಗಕ್ಕೆ ಶೇ.7.5 ಮೀಸಲಾತಿ ಘೋಷಣೆ ಆಗುತ್ತದೆ. ನಾಗಮೋಹನದಾಸ್ ವರದಿ ಜಾರಿಯಾಗುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.

  • ಆರ್.ಅಶೋಕ್‍ಗೆ ಹಿಂಬಡ್ತಿ ಭಾಗ್ಯ: ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ

    ಆರ್.ಅಶೋಕ್‍ಗೆ ಹಿಂಬಡ್ತಿ ಭಾಗ್ಯ: ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ

    – ಐವತ್ತಾರು ಇಂಚಿನ ಪಿಎಂ ಮೋದಿ ಎದೆಗೆ ತಾಯಿ ಹೃದಯ ಬೇಕಿದೆ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಆರ್.ಅಶೋಕ್ ಅವರಿಗೆ ಹಿಂಬಡ್ತಿ ಭಾಗ್ಯ ಸಿಕ್ಕಿದೆ ಎಂದು ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಲೆಳೆದಿದ್ದಾರೆ.

    ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಚಿವ ಆರ್. ಅಶೋಕ್ ಅವರು ಡೆಪ್ಯೂಟಿ ಸಿಎಂ ಆಗಲಿಲ್ಲ. ನೀವು ಡಿಸಿಎಂ ಆಗಬೇಕಿತ್ತು ಎಂದು ಕಾಲೆಳೆದರು. ತಕ್ಷಣವೇ ಎದ್ದು ನಿಂತ ಆರ್.ಅಶೋಕ್, ನಾನೇ ಬೇಡ ಅಂದೆ ಬಿಡಿ ಸಾರ್ ಎಂದರು. ಆಗ ಸಿದ್ದರಾಮಯ್ಯ ಅವರು, ನೋಡಿ ನಿಮಗೆ ಪಕ್ಷ ಹಿಂಬಡ್ತಿ ಭಾಗ್ಯ ಕೊಟ್ಟಿಗೆ ಎಂದಾಗ ಕಲಾಪ ನಗೆಗಡಲಲ್ಲಿ ತೇಲಿತು. ಇದನ್ನೂ ಓದಿ: ಯತ್ನಾಳ್ ಸತ್ಯ ಹೇಳ್ತಾರೆ, ಅವ್ರು ನನಗೆ ಒಳ್ಳೆ ಸ್ನೇಹಿತ: ಸಿದ್ದರಾಮಯ್ಯ

    ಪಾಪ ಅಶೋಕ್‍ಗೆ ಡಿಸಿಎಂ ಸ್ಥಾನ ಇಲ್ಲ. ಕೆ.ಎಸ್. ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರಿಗೂ ಉಪಮುಖ್ಯಮಂತ್ರಿ ಸ್ಥಾನ ಇಲ್ಲ. ಈಗ ಮಂತ್ರಿ ಆದವರಿಗೆ ಹಾಗೂ ಶಾಸಕರಲ್ಲದವರಿಗೆ ಡಿಸಿಎಂ ಸ್ಥಾನ ಕೊಟ್ಟಿದ್ದಾರೆ ಎಂದು ಉಪ ಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ ಹಾಗೂ ಲಕ್ಷ್ಮಣ ಸವದಿ ಅವರನ್ನು ಕುಟುಕಿದರು.

    ಪ್ರಧಾನಿ ನರೇಂದ್ರ ಮೋದಿ ಬಳಿ ಐವತ್ತಾರು ಇಂಚು ಎದೆ ಇದೆ. ಆದರೆ ಅವರಿಗೆ ತಾಯಿ ಹೃದಯ ಬೇಕಲ್ಲ? ರಾಜ್ಯಕ್ಕೆ ಬರುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡುತ್ತೇನೆ ಹಾಗೂ ನೆರೆ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸರ್ವೆ ಮಾಡಿ ಹಾನಿ ವೀಕ್ಷಣೆ ಮಾಡಲಿ ಎಂದು ಒತ್ತಾಯಿಸಿದರು.

    ರಾಜ್ಯದಲ್ಲಿ ಎಂದೆಂದು ಕೇಳರಿಯದ ಪ್ರವಾಹ ಎದುರಾಗಿದೆ. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಕೂಡಲೇ 5000 ಕೋಟಿ ರೂ. ಬಿಡುಗಡೆ ಮಾಡಬೇಕು. ಮಹಾ ಮಳೆ ಹಾಗೂ ಪ್ರವಾಹದಿಂದಾಗಿ ಎಂಟು ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಎರಡು ಲಕ್ಷಕ್ಕೂ ಹೆಚ್ಚು ಸಂತ್ರಸ್ತರು ಮನೆ ಕಳೆದುಕೊಂಡಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಶೀಲಹಳ್ಳಿಯಲ್ಲಿ ಪ್ರವಾಹದಿಂದ ದೊಡ್ಡ ಹಾನಿಯಾಗಿದೆ. ಪ್ರವಾಹ ಉಂಟಾಗಿ 60 ದಿನ ಕಳೆದಿದೆ. ಅಲ್ಲಿನ ಸೇತುವೆಯನ್ನು ಪುನರ್ ನಿರ್ಮಾಣವಾಗಿಲ್ಲ. ಇದು ಸರ್ಕಾರದ ವೈಫಲ್ಯವನ್ನು ತೋರುತ್ತದೆ ಎಂದು ವಾಗ್ದಾಳಿ ನಡೆಸಿದರು.

    ಪ್ರಧಾನಿ ಮೋದಿ ಅವರಿಗೆ ಕರ್ನಾಟಕದ ಪ್ರವಾಹ ಪರಿಸ್ಥಿತಿ ಕಾಣಿಸಿಲ್ಲ ಎನ್ನುವುದೇ ನನಗೆ ನೋವು ತಂದಿದೆ. ಇಲ್ಲಿ ಲಕ್ಷಾಂತರ ಜೀವನ ಬೀದಿ ಪಾಲಾಗಿದೆ, ಅದಕ್ಕೆ ಮೊದಲ ಆದ್ಯತೆ ನೀಡಬೇಕು. ಅವರು ವಿದೇಶಕ್ಕೆ ಹೋಗದೆ ಇದ್ದರೆ ಪ್ರಳಯ ಆಗುತ್ತಿತ್ತಾ? ಮನೆ ಕಳಕೊಂಡ ನೆರೆ ಸಂತ್ರಸ್ತರಿಗೆ ಶೆಡ್ ಹಾಕಿ ಕೊಟ್ಟಿಲ್ಲ. ನೆರೆ ಪ್ರದೇಶಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಿಲ್ಲ. ಚಂದ್ರಯಾನ-2 ಸಂಬಂಧ ಬೆಂಗಳೂರಿಗೆ ಬಂದಿದ್ದ ಪ್ರಧಾನಿ ಮೋದಿ ಅವರಿಗೆ ಕರ್ನಾಟಕದ ಸಮಸ್ಯೆ ಬಗ್ಗೆ ಹೇಳಬಹುದಿತ್ತು. ನನ್ನ ಮಾಹಿತಿ ಪ್ರಕಾರ ಭೇಟಿಯಾಗಲು ರಾಜ್ಯ ಬಿಜೆಪಿಯವರಿಗೆ ಅಪಾಯಿಂಟ್‍ಮೆಂಟ್ ಕೊಟ್ಟಿಲ್ಲ ಎಂದು ಕುಟುಕಿದರು.

  • ಮನೆ ಬಾಗಿಲಿಗೆ ಬಿಎಂಟಿಸಿ ಬಸ್ ಕರೆಸಿಕೊಂಡು 1 ಗಂಟೆ ಕಾಯಿಸಿದ ಸಾರಿಗೆ ಸಚಿವ

    ಮನೆ ಬಾಗಿಲಿಗೆ ಬಿಎಂಟಿಸಿ ಬಸ್ ಕರೆಸಿಕೊಂಡು 1 ಗಂಟೆ ಕಾಯಿಸಿದ ಸಾರಿಗೆ ಸಚಿವ

    – ವೋಲ್ವೋ ಬಸ್ಸಿನಲ್ಲಿ ಸಾರಿಗೆ ಸಚಿವ ಸುತ್ತಾಟ
    – ಶೀಘ್ರವೇ ನೆರೆಪರಿಹಾರ ಬಿಡುಗಡೆ

    ಬೆಂಗಳೂರು: ಬಿಎಂಟಿಸಿ ಬಸ್ಸನ್ನು ತನ್ನ ಮನೆ ಬಾಗಿಲಿಗೇ ಕರೆಸಿಕೊಂಡು ಸರಿ ಸುಮಾರು 1 ಗಂಟೆಗಳ ಕಾಲ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಕಾಯಿಸಿದ ಪ್ರಸಂಗ ಇಂದು ನಡೆಯಿತು.

    ಬಸ್ ಪ್ರಿಯಾರಿಟಿ ಲೇನ್ ಯೋಜನೆ ಜಾರಿ ಕುರಿತಾದ ಪರಿಶೀಲನೆಗೆ ಸಾರಿಗೆ ಸಚಿವರು ನಗರ ಪ್ರದಕ್ಷಿಣೆ ಹಾಕುವ ಹಿನ್ನೆಲೆಯಲ್ಲಿ ಬಸ್ಸನ್ನು ತಮ್ಮ ಮನಗೆ ಕರೆಸಿಕೊಂಡಿದ್ದಾರೆ. ಹೀಗಾಗಿ ಡಿಸಿಎಂ ಅವರ ಒಂದೇ ಒಂದು ಮಾತಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವೋಲ್ವೋ ಬಸ್ ಮನೆ ಮುಂದೆ ಬಂದು ನಿಂತಿತ್ತು.

    ಬೆಳಗ್ಗೆ 8 ಗಂಟೆಗೆ ಜಹಮಹಾಲ್ ನ ತಮ್ಮ ಮನೆಯಿಂದ ಡಿಸಿಎಂ ಹೊರಟಿದ್ದಾರೆ. ತಾವು ಮನೆಯಿಂದ ಹೊರ ಬರುತ್ತಿದ್ದಂತೆಯೇ ಬಸ್ ರೆಡಿ ಇರಬೇಕು ಎಂದು ಡಿಸಿಎಂ ಸೂಚಿಸಿದ್ದರು. ಹೀಗಾಗಿ ವೋಲ್ವೋ ಬಸ್ 7 ಗಂಟೆಗೆನೇ ಮನೆ ಮುಂದೆ ಬಂದು ನಿಂತಿತ್ತು. ಬಸ್ ಬಂದ 1 ಗಂಟೆ ಬಳಿಕ ತಮ್ಮ ನಿವಾಸಕ್ಕೆ ಬಂದು ಸಚಿವರು ಬಸ್ ಹತ್ತಿದ್ದಾರೆ. ಬಸ್ ನಿಂತಿದ್ದ ರೋಡಲ್ಲಿ ವಾಕ್ ಮಾಡುವವರಿಗೂ ಸ್ವಲ್ಪ ಓಡಾಡೋಕೆ ಅಡಚಣೆ ಉಂಟಾಯಿತು.

    ಸಾರಿಗೆ ಸಚಿವರಾದ ಬಳಿಕ ಲಕ್ಷ್ಮಣ್ ಸವದಿ ಮೊದಲ ಬಾರಿಗೆ ಬಿಎಂಟಿಸಿ ವೋಲ್ವೋ ಬಸ್‍ನಲ್ಲಿ ನಗರ ಸಂಚಾರ ಮಾಡಿದರು. ಪ್ರಯಾಣಿಕರಿಗೆ ಅಗತ್ಯವಾದ ರಸ್ತೆ ಸುಧಾರಿತ ಪ್ರಯಾಣ, ಕಡಿಮೆ ಅವಧಿಯಲ್ಲಿ ಹೆಚ್ಚಿನ ದೂರವನ್ನು ಕ್ರಮಿಸುವುದು, ಹೆಚ್ಚಿನ ಜನರನ್ನು ಬಸ್ಸಿನಲ್ಲಿ ಪ್ರಯಾಣಿಸಲು ಆಕರ್ಷಿಸುವ ನಿಟ್ಟಿನಲ್ಲಿ, ಬಸ್ ಕಾರಿಡಾರ್ ಗಳನ್ನು ರಚಿಸಲು ಯೋಜನೆ ಹಾಗೂ ಮೊದಲನೇ ಹಂತವಾಗಿ ಟಿನ್ ಫ್ಯಾಕ್ಟರಿಯಿಂದ ಸೆಂಟ್ರಲ್‍ನ ಸಿಲ್ಕ್ ಬೋರ್ಡ್ ರಸ್ತೆ ಮಾರ್ಗ ಬಳಕೆ ಮಾಡುವುದರ ಕುರಿತು ಪರಿಶೀಲನೆ ನಡೆಸಿದ್ದಾರೆ.

    ಸಿಬ್ಬಂದಿಗೆ 5,000 ನೀಡಿದ ಸಚಿವ:
    ಇಂದು ಗಾಂಧಿ ಜಯಂತಿಯ ದಿನವಾಗಿದ್ದರಿಂದ ಸ್ವೀಟ್ ತಿನ್ನಿ ಎಂದು ಡಿಪೋ ತಾಂತ್ರಿಕ ಸಿಬ್ಬಂದಿಗೆ ಸಚಿವರು 5 ಸಾವಿರವನ್ನು ನೀಡಿದರು. ಹೆಚ್ ಎಸ್ ಆರ್ ಲೇಔಟ್ ನ ವೋಲ್ವೋ ಡಿಪೋ 25 ಕ್ಕೆ ಭೇಟಿ ನೀಡಿದ್ದ ಲಕ್ಷ್ಮಣ ಸವದಿ, ಡಿಪೋಗೆ ಭೇಟಿ ನೀಡಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ್ದಾರೆ.

    ಭೇಟಿ ಮುಗಿದ ಹೋಗುವ ಸಮಯದಲ್ಲಿ ತಾಂತ್ರಿಕ ನೌಕರರಿಗೆ ಐದು ಸಾವಿರ ಹಣ ನೀಡಿದರು. ಅಲ್ಲದೆ ಯಾವುದೇ ತಪ್ಪು ಮಾಡದಂತೆ, ಚೆನ್ನಾಗಿ ಕೆಲಸ ಮಾಡಿ ಎಂದು ಸಲಹೆ ಕೂಡ ನೀಡಿದರು. ಸಾರಿಗೆ ಸಚಿವರ ಭೇಟಿಯಿಂದ ಡಿಪೋ ನೌಕರರು ಖುಷಿಯಾದರು.

    ಏಕಕಾಲದಲ್ಲಿ 5 ರಾಜ್ಯಗಳಿಗೆ ಪರಿಹಾರ:
    ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ನೆರೆ ಪರಿಹಾರ ಕುರಿತು ಮಾತನಾಡಿದ ಸಚಿವರು, ಪ್ರವಾಹ ವಿಚಾರ ಕೇಂದ್ರ ಸರ್ಕಾರದ ಗಮನದಲ್ಲಿದೆ. 5 ರಾಜ್ಯದಲ್ಲಿ ನೆರೆ ಪ್ರವಾಹ ಉಂಟಾಗಿದೆ. ಎಲ್ಲಾ 5 ರಾಜ್ಯಗಳಿಗೆ ಏಕಕಾಲಕ್ಕೆ ಬಿಡುಗಡೆ ಮಾಡುತ್ತಾರೆ. ಕೇಂದ್ರ ಗೃಹಸಚಿವರು ಈ ಭರವಸೆ ನೀಡಿದ್ದಾರೆ. ಕೇಂದ್ರದ ನೆರವಿಗೆ ಕಾಯದೆ 2 ಸಾವಿರ ಕೋಟಿ ಈಗಾಗಲೇ ವಿತರಣೆ ಆರಂಭಿಸಿದ್ದೇವೆ. ನಾಳೆ ಸಚಿವ ಸಂಪುಟ ಸಭೆ ಬಳಿಕ ಮನೆ ಕಳೆದುಕೊಂಡವರಿಗೆ 5 ಲಕ್ಷದಲ್ಲಿ ಆರಂಭಿಕವಾಗಿ ನಾಳೆ 1 ಲಕ್ಷ ವಿತರಣೆ ಮಾಡುತ್ತೇವೆ. ಸಾಂತ್ವನ ಹೇಳೋದರಲ್ಲಿ ತಪ್ಪಿಲ್ಲ. ನಮಗೆ ಕೇಂದ್ರದ ಮೇಲೆ ವಿಶ್ವಾಸ ಇದೆ. ನೆರೆ ಪರಿಹಾರ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ಭರವಸೆ ನೀಡಿದರು.

  • ಅದು ಬೇರೆ ಕುಮಟಳ್ಳಿ, ಅನರ್ಹ ಕುಮಟಳ್ಳಿ ಅಲ್ಲ: ಲಕ್ಷ್ಮಣ ಸವದಿ

    ಅದು ಬೇರೆ ಕುಮಟಳ್ಳಿ, ಅನರ್ಹ ಕುಮಟಳ್ಳಿ ಅಲ್ಲ: ಲಕ್ಷ್ಮಣ ಸವದಿ

    – ಕುಮಟಳ್ಳಿ, ನನ್ನ ಮಧ್ಯೆ ಭಿನ್ನಾಭಿಪ್ರಾಯಕ್ಕೆ ಯತ್ನ

    ಚಿಕ್ಕೋಡಿ (ಬೆಳಗಾವಿ): ವೈರಲ್ ಆಗಿರುವ ವಿಡಿಯೋದಲ್ಲಿ ನಾನು ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಬಗ್ಗೆ ಮಾತನಾಡಿಲ್ಲ. ಅದು ಬೇರೆ ಕುಮಟಳ್ಳಿ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

    ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಡಿಸಿಎಂ ಲಕ್ಷ್ಮಣ ಸವದಿ, ಮಹಾ ಮಳೆಗೆ ಕೃಷ್ಣಾ ನದಿ ಪ್ರವಾಹ ಮಟ್ಟ ಮೀರಿ ಹರಿಯುತ್ತಿತ್ತು. ಈ ವೇಳೆ ಅಥಣಿ ಕ್ಷೇತ್ರದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದಾಗ ಕೆಲ ಮಾಧ್ಯಮಗಳು ನಾನು ಫೋನ್‍ನಲ್ಲಿ ಮಾತನಾಡಿದ ದೃಶ್ಯವನ್ನು ಸೆರೆ ಹಿಡಿದಿದ್ದವು. ಆ ವಿಡಿಯೋವನ್ನು ಈಗ ಪ್ರಸಾರ ಮಾಡಿ ಮಹೇಶ್ ಕುಮಟಳ್ಳಿ ಅವರ ಬಗ್ಗೆ ಮಾತನಾಡಿದ್ದೇನೆ ಎಂಬಂತೆ ಬಿಂಬಿಸಲಾಗುತ್ತಿದೆ. ನಾನು ಅನರ್ಹ ಶಾಸಕರ ಬಗ್ಗೆ ತಪ್ಪಾಗಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನು ಓದಿ: ಮಹೇಶ್ ಕುಮಟಳ್ಳಿ ಬಗ್ಗೆ ಡಿಸಿಎಂ ಮಾತನಾಡಿದ್ದು ದುರ್ದೈವ: ರಮೇಶ್ ಜಾರಕಿಹೊಳಿ

    ನಾನು ಮಾತಾಡಿರುವ ವಿಡಿಯೋ ಬೇರೆ ಕುಮಟಳ್ಳಿ ಅವರಿಗೆ ಸಂಬಂಧಿಸಿದ್ದು. ಅವರು ನಮ್ಮ ಸ್ನೇಹಿತರು. ಯಾವುದೋ ವಿಚಾರಕ್ಕೆ ಫೋನ್ ಮಾಡಿದ್ದರು. ಆಗ ನಾನು ಕುಮಟಳ್ಳಿ ಬಗ್ಗೆ ಯಾಕ ತಲೆ ಕೆಡಿಸಿಕೊಳ್ಳುತ್ತಿಯಾ, ಓಡಿ ಹೋಗತಾನೆ ಬಿಡು ಎಂದು ಹೇಳಿದ್ದೆ. ಆದರೆ ಈಗ ನಾನು ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಅವರ ಬಗ್ಗೆ ಮಾತನಾಡಿದ್ದೇನೆ ಎಂಬಂತೆ ತೋರಿಸಲಾಗುತ್ತಿದೆ ಎಂದು ಮಾಧ್ಯಮಗಳ ವಿರುದ್ಧವೇ ಆರೋಪ ಮಾಡಿದ್ದಾರೆ.

    ಮಹೇಶ್ ಕುಮಟಳ್ಳಿ ಹಾಗೂ ನನ್ನ ಮಧ್ಯೆ ಭಿನ್ನಾಭಿಪ್ರಾಯ ತಂದಿಡಲು ಯಾರೋ ಸ್ಥಳೀಯ ನಾಯಕರು ಹೀಗೆ ಮಾಡಿದ್ದಾರೆ. ಉಪ ಚುನಾವಣೆಯ ಲಾಭ ಪಡೆಯಲು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅನರ್ಹ ಶಾಸಕ ಹಾಗೂ ನನ್ನ ಮಧ್ಯೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ನಾವು ಸ್ನೇಹಿತರಾಗಿಯೇ ಇರುತ್ತೇವೆ. ಹೀಗಾಗಿ ವಿಡಿಯೋ ಬಗ್ಗೆ ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.

    ಸವದಿ ಹೇಳಿದ್ದೇನು?
    ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಕ್ಕೆ ಲಕ್ಷ್ಮಣ ಸವದಿ ಭೇಟಿ ನೀಡಿದ್ದರು. ಈ ವೇಳೆ ಅಥಣಿ ಮತ ಕ್ಷೇತ್ರದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಕುರಿತು ಅಪನಿಂದನೆ ಮಾಡಿದ್ದಾರೆ. ಸವದಿ ತಮ್ಮ ಬೆಂಬಲಿಗನ ಜೊತೆ ಮೊಬೈಲ್ ಮಾತನಾಡುತ್ತಾ ಕುಮುಟಳ್ಳಿ ವಿರುದ್ಧ ಆಕ್ಷೇಪಾರ್ಹ ಮಾತಾಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪ್ರವಾಹ ಪೀಡಿತ ಗ್ರಾಮಗಳಿಗೆ ಸಂತ್ರಸ್ತರ ಅಳಲು ಕೇಳಲು ಹೋಗುತ್ತಿದ್ದಾಗ ಮೊಬೈಲ್‍ನಲ್ಲಿ ಮಾತನಾಡುತ್ತಾ ಮುಂಜಾನೆ ಕುಮಟಳ್ಳಿ ಅಂತಹ ದರಿದ್ರ ಮಕ್ಕಳ ಹೆಸರು ನೆನಪಿಸಬೆಡಿ. ಅವನ ಸುದ್ದಿ ತಗೊಂಡ್ ನಾನೇನು ಮಾಡಲಿ. ನನ್ನ ಮೂಡ್ ಹಾಳು ಮಾಡಬೇಡಿ ಎಂದಿದ್ದರು.

    ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿ ಬಿಜೆಪಿ ಸರ್ಕಾರದ ಆಸ್ತಿತ್ವಕ್ಕೆ ಮಹೇಶ್ ಕುಮುಟಳ್ಳಿ ಬಲ ತುಂಬಿದ್ದರು. ಆದರೆ ಇದೀಗ ಅವರ ವಿರುದ್ಧವೇ ಡಿಸಿಎಂ ಗರಂ ಆಗಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

  • ದರಿದ್ರ ಕುಮಟಳ್ಳಿ ಸುದ್ದಿ ತಗೊಂಡು ನಾನೇನ್ ಮಾಡ್ಲಿ- ಲಕ್ಷ್ಮಣ ಸವದಿ ಆಕ್ಷೇಪಾರ್ಹ ಮಾತು

    ದರಿದ್ರ ಕುಮಟಳ್ಳಿ ಸುದ್ದಿ ತಗೊಂಡು ನಾನೇನ್ ಮಾಡ್ಲಿ- ಲಕ್ಷ್ಮಣ ಸವದಿ ಆಕ್ಷೇಪಾರ್ಹ ಮಾತು

    – ನನ್ ಮೂಡ್ ಹಾಳ್ ಮಾಡಬ್ಯಾಡ್ರಿ

    ಚಿಕ್ಕೋಡಿ(ಬೆಳಗಾವಿ): ಸರ್ಕಾರ ರಚನೆಗೆ ಕಾರಣರಾದವರನ್ನೇ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನಿಂದಿಸಿದ ಘಟನೆಯೊಂದು ನಡೆದಿದೆ.

    ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಕ್ಕೆ ಲಕ್ಷ್ಮಣ ಸವದಿ ಭೇಟಿ ನೀಡಿದ್ದರು. ಈ ವೇಳೆ ಅಥಣಿ ಮತ ಕ್ಷೇತ್ರದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಕುರಿತು ಅಪನಿಂದನೆ ಮಾಡಿದ್ದಾರೆ. ಸವದಿ ತಮ್ಮ ಬೆಂಬಲಿಗನ ಜೊತೆ ಮೊಬೈಲ್ ಮಾತನಾಡುತ್ತಾ ಕುಮುಟಳ್ಳಿ ವಿರುದ್ಧ ಆಕ್ಷೇಪಾರ್ಹ ಮಾತಾಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಸವದಿ ಹೇಳಿದ್ದೇನು?
    ಪ್ರವಾಹ ಪೀಡಿತ ಗ್ರಾಮಗಳಿಗೆ ಸಂತ್ರಸ್ತರ ಅಳಲು ಕೇಳಲು ಹೋಗುತ್ತಿದ್ದಾಗ ಮೊಬೈಲ್‍ನಲ್ಲಿ ಮಾತನಾಡುತ್ತಾ ಮುಂಜಾನೆ ಕುಮಟಳ್ಳಿ ಅಂತಹ ದರಿದ್ರ ಮಕ್ಕಳ ಹೆಸರು ನೆನಪಿಸಬೆಡಿ. ಅವನ ಸುದ್ದಿ ತಗೊಂಡ್ ನಾನೇನು ಮಾಡಲಿ. ನನ್ನ ಮೂಡ್ ಹಾಳು ಮಾಡಬೇಡಿ ಎಂದಿದ್ದಾರೆ.

    ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿ ಬಿಜೆಪಿ ಸರ್ಕಾರದ ಆಸ್ತಿತ್ವಕ್ಕೆ ಮಹೇಶ್ ಕುಮುಟಳ್ಳಿ ಬಲ ತುಂಬಿದ್ದರು. ಆದರೆ ಇದೀಗ ಅವರ ವಿರುದ್ಧವೇ ಡಿಸಿಎಂ ಗರಂ ಆಗಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.