Tag: DCM

  • ಬಿಎಸ್‍ವೈ ಕೇಳಿ ಡಿಸಿಎಂ ಹುದ್ದೆಗಳ ಭವಿಷ್ಯ ನಿರ್ಧಾರಕ್ಕೆ ಹೈಕಮಾಂಡ್ ಪ್ಲ್ಯಾನ್?

    ಬಿಎಸ್‍ವೈ ಕೇಳಿ ಡಿಸಿಎಂ ಹುದ್ದೆಗಳ ಭವಿಷ್ಯ ನಿರ್ಧಾರಕ್ಕೆ ಹೈಕಮಾಂಡ್ ಪ್ಲ್ಯಾನ್?

    ಬೆಂಗಳೂರು: ಬಿಜೆಪಿಯಲ್ಲೀಗ ಡಿಸಿಎಂ ಪದವಿ ಬಗ್ಗೆಯೇ ಬಿಸಿ ಬಿಸಿ ಚರ್ಚೆ. ಡಿಸಿಎಂ ಬೇಕು ಎಂದು ಒಂದು ಗುಂಪು ಹೇಳುತ್ತಿದ್ದರೆ, ಬೇಡ ಎಂದು ಇನ್ನೊಂದು ಗುಂಪು ಹೇಳ್ತಿದೆ. ಆದರೆ ಸಿಎಂ ಬಿಎಸ್‍ವೈ ಅವರ ನಡೆ ಮಾತ್ರ ಯಾರಿಗೂ ಅರ್ಥವಾಗುತ್ತಿಲ್ಲ. ಹಾಗಾದ್ರೆ ಯಡಿಯೂರಪ್ಪ ಅವರು ಡಿಸಿಎಂ ಪದವಿಯನ್ನು ಹೇಗೆ ನೋಡುತ್ತಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

    ಬಿಜೆಪಿಯಲ್ಲಿ ಡಿಸಿಎಂ ಸ್ಥಾನಗಳು ಸೃಷ್ಟಿಯಾಗಿನಿಂದ ಒಂದಲ್ಲ ಒಂದು ಚರ್ಚೆ ನಡೆಯುತ್ತಿದೆ. ಡಿಸಿಎಂಗಳು ಯಾರೂ ಇರಲ್ಲ ಅಂತಿದೆ ಬಿಜೆಪಿ ಒಂದು ಗುಂಪು. ಇಬ್ಬರು ಡಿಸಿಎಂ ಔಟ್ ಆಗ್ತಾರೆ, ಮೂವರು ಹೊಸಬರು ಬರುತ್ತಾರೆ ಎಂದು ಮತ್ತೊಂದು ಗುಂಪು ಹೇಳುತ್ತಿದೆ. ಹಾಗಾಗಿ ಬಿಜೆಪಿಯಲ್ಲಿ ಡಿಸಿಎಂ ಬೇಕು, ಬೇಡ ಎನ್ನುವ ಬಣಗಳ ಕಾದಾಟ ಜೋರಾಗಿದೆ. ಡಿಸಿಎಂ ಇದ್ದರೆ ಇನ್ನೊಂದು ಹೆಚ್ಚಳ ಮಾಡಿ, ಇಲ್ಲದಿದ್ದರೆ ಡಿಸಿಎಂಗಳೇ ಬೇಡ ಎನ್ನುವ ಕೂಗು ಕೂಡ ಇನ್ನೊಂದೆಡೆ ವ್ಯಕ್ತವಾಗುತ್ತಿದೆ. ಅಲ್ಲದೆ ಹೈಕಮಾಂಡ್‍ನ ಎದುರು ರಾಜ್ಯ ಬಿಜೆಪಿ ನಾಯಕರ ಒಂದು ಗುಂಪು ಪ್ರಸ್ತಾಪ ಕೂಡ ಮಾಡಿದೆ ಎನ್ನಲಾಗಿದೆ.

    ಮುಖ್ಯಮಂತ್ರಿ ಯಡಿಯೂರಪ್ಪ ಕೇಳದೆ ಮುಂದುವರಿಯದಿರಲು ಹೈಕಮಾಂಡ್ ನಿರ್ಧಾರ ಮಾಡಿದೆ ಎಂಬ ಮಾತುಗಳು ಬಿಜೆಪಿ ಪಡಸಾಲೆಯಿಂದ ಕೇಳಿಬಂದಿವೆ. ಯಡಿಯೂರಪ್ಪ ಓಕೆ ಎಂದರೆ ಮತ್ತೊಂದು ಡಿಸಿಎಂ ಹುದ್ದೆ ಸೃಷ್ಟಿ, ಇಲ್ಲ ಅಂದ್ರೆ ಡಿಸಿಎಂ ಹುದ್ದೆಗಳೇ ಖಾಲಿ ಎಂಬುವುದು ಹೈಕಮಾಂಡ್ ವಲಯದ ಪ್ಲ್ಯಾನ್ ಎನ್ನಲಾಗಿದೆ. ಇದರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನಡೆ ಯಾರ ಕಡೆ ಎಂಬ ಕುತೂಹಲ ಮೂಡಿಸಿದೆ. ಹಾಲಿ ಡಿಸಿಎಂಗಳಿಗೆ ಬಿಎಸ್‍ವೈ ವರವಾಗ್ತಾರಾ? ಕಂಟಕವಾಗ್ತಾರಾ ಎಂಬ ಕುತೂಹಲವಿದ್ದು, ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗುವುದರೊಳಗೆ ಡಿಸಿಎಂ ಬಗ್ಗೆ ಸ್ಪಷ್ಟ ನಿರ್ಧಾರ ಮಾಡುತ್ತಾರೆ ಅನ್ನೋದು ಆಪ್ತವಲಯದ ಮಾಹಿತಿ.

  • ಸಮಾಜಘಾತುಕ ಶಕ್ತಿಗಳ ಬಲ ಹೆಚ್ಚಾಗಲು ಹಿಂದಿನ ಸರ್ಕಾರ ಕಾರಣ: ಡಿಸಿಎಂ ಅಶ್ವಥ್

    ಸಮಾಜಘಾತುಕ ಶಕ್ತಿಗಳ ಬಲ ಹೆಚ್ಚಾಗಲು ಹಿಂದಿನ ಸರ್ಕಾರ ಕಾರಣ: ಡಿಸಿಎಂ ಅಶ್ವಥ್

    – ಕನಕಪುರಕ್ಕೆ ಸದ್ಯಕ್ಕೆ ಮೆಡಿಕಲ್ ಕಾಲೇಜಿಲ್ಲ

    ಮೈಸೂರು: ರಾಜ್ಯದಲ್ಲಿ ಬಾಂಬ್ ಪತ್ತೆಯಂತಹ ಪ್ರಕರಣಗಳಿಗೆ ಹಿಂದಿನ ಸರ್ಕಾರಗಳೇ ಕಾರಣ. ಸಮಾಜಘಾತುಕ ಶಕ್ತಿಗೆ ಕಡಿವಾಣ ಹಾಕೋದು ಬಿಟ್ಟು ಪ್ರೋತ್ಸಾಹ ಕೊಟ್ಟ ಪರಿಣಾಮ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಆರೋಪಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಡಿಸಿಎಂ, ಹಿಂದಿನ ಸರ್ಕಾರ ಸಮಾಜಘಾತುಕ ಕೆಲಸ ಮಾಡುತ್ತಿದ್ದವರ ಮೇಲಿನ ಕೇಸ್‍ಗಳನ್ನ ವಾಪಸ್ ತೆಗೆದುಕೊಂಡಿದ್ದಾರೆ. ಅದಕ್ಕೆ ಅವರೆಲ್ಲಾ ಕಾನೂನು ಮೀರಿ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಇಂದು ಈ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದರು.

    ನಮ್ಮ ಸರ್ಕಾರ ಎಲ್ಲವನ್ನು ನಿಯಂತ್ರಣ ಮಾಡುವ ಪ್ರಯತ್ನ ಮಾಡಿದೆ. ಆದಷ್ಟು ಘಟನೆಗಳು ನಡೆಯುವ ಮುನ್ನವೇ ತಡೆಹಿಡಿಯಲಾಗಿದೆ. ಬಾಂಬ್ ತಯಾರಿಕೆಯ ಕೆಲ ವಸ್ತುಗಳು ಕಾರ್ಖಾನೆ ಉಪಯೋಗಕ್ಕೆ ಸಿಗುತ್ತೆ. ಅವುಗಳನ್ನ ಬಳಸಿಕೊಂಡು ಈ ಕೃತ್ಯ ಎಸಗುತ್ತಿದ್ದಾರೆ. ಇಂತಹ ವಸ್ತುಗಳನ್ನು ಅವರ ಕೈಗೆ ಸಿಗದಂತೆ ನೋಡಿಕೊಳ್ಳುತ್ತೇವೆ ಎಂದರು.

    ಸದ್ಯಕ್ಕೆ ಕನಕಪುರಕ್ಕೆ ಮೆಡಿಕಲ್ ಕಾಲೇಜಿಲ್ಲ ಎಂದು ಅಶ್ವಥ್ ನಾರಾಯಣ್ ಪರೋಕ್ಷವಾಗಿ ಹೇಳಿದ್ದಾರೆ. ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಮಾಡುತ್ತಿದ್ದೇವೆ. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಜೊತೆ ಹೆಲ್ತಿ ಸಿಟಿ ಮಾಡಲಾಗುತ್ತೆ. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಮಾಡುತ್ತಿರುವುದರಿಂದ ತಾಲೂಕು ಕೇಂದ್ರದಲ್ಲಿ ಮೆಡಿಕಲ್ ಕಾಲೇಜಿನ ಅಗತ್ಯ ಇರಲ್ಲ ಎಂದರು. ರಾಜ್ಯದಲ್ಲಿ ಮಂಜೂರಾಗಿರುವ ನಾಲ್ಕು ಮೆಡಿಕಲ್ ಕಾಲೇಜಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

  • ಕನ್ನಡ ಕಲಿತು, ಹಾಡು ಹಾಡಿ ಮೆಚ್ಚುಗೆಗೆ ಪಾತ್ರರಾದ ಲೇಡಿ ಸಿಂಗಂ!

    ಕನ್ನಡ ಕಲಿತು, ಹಾಡು ಹಾಡಿ ಮೆಚ್ಚುಗೆಗೆ ಪಾತ್ರರಾದ ಲೇಡಿ ಸಿಂಗಂ!

    ಬೆಂಗಳೂರು: ನಗರದಲ್ಲಿ ಐಪಿಎಸ್ ಅಧಿಕಾರಿಯ ಕನ್ನಡ ಅಭಿಮಾನವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಲೇಡಿ ಸಿಂಗಂ ಖ್ಯಾತಿಯ ಡಿಸಿಪಿ, ಐಪಿಎಸ್ ಅಧಿಕಾರಿ ಇಷಾ ಪಂತ್ ಅವರು ಕನ್ನಡ ಹಾಡು ಹಾಡುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

    ಸದ್ಯ ಬೆಂಗಳೂರಿನ ಆಗ್ನೇಯ ವಿಭಾಗದ ಡಿಸಿಪಿಯಾಗಿ ಇವರು ಕೆಲಸ ನಿರ್ವಹಿಸುತ್ತಿದ್ದಾರೆ. ಕನ್ನಡ ಬರದಿದ್ದರೂ, ಕನ್ನಡ ಭಾಷೆ ಕಲಿತು ಹಾಡು ಹಾಡಿದ್ದಾರೆ. ‘ಜೊತೆಯಲಿ ಜೊತೆಯಲಿ ಇರುವೆನು ಹೀಗೆ ಎಂದೂ’… ಸಾಂಗ್ ಹಾಡಿರೋ ಇವರು 2011ರ ಬ್ಯಾಚ್ ನ ಐಪಿಎಸ್ ಅಧಿಕಾರಿ.

    2012ರಲ್ಲಿ ಎಲ್ಲಾ ಪ್ರೊಬೇಷನರ್ ಗಳನ್ನ ಹಿಂದಿಕ್ಕಿ ಬೆಸ್ಟ್ ಪ್ರೊಬೇಷನರ್ ಅನ್ನೋ ಪ್ರಶಸ್ತಿ ಪಡೆದಿದ್ದರು. ಮೂಲತಃ ಮಧ್ಯಪ್ರದೇಶದವರಾಗಿರುವ ಇವರು ಜಬ್ಬಲ್ ಪುರದಲ್ಲಿ ಎಎಸ್‍ಪಿಯಾಗಿದ್ದಾಗ ಡ್ರಗ್ ಮಾಫಿಯಾ, ಅಕ್ರಮ ಸಾರಾಯಿ ಮಾರಾಟದ ಅಡ್ಡೆಗಳನ್ನ ಮಟ್ಟ ಹಾಕಿದ್ದರು.

    2019ರಿಂದ ಆಗ್ನೇಯ ವಿಭಾಗದ ಡಿಸಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಬರದಿದ್ರೂ ಕಲಿತು, ಸ್ವಷ್ಟವಾಗಿ ಹಾಗೂ ಇಂಪಾಗಿ ಹಾಡು ಹೇಳುವ ಮೂಲಕ ಇದೀಗ ಎಲ್ಲರ ಮನಗೆದ್ದಿದ್ದಾರೆ. ಸದ್ಯ ಇಶಾ ಪಂತ್ ಹಾಡು ಹಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

  • ಪ್ರತಿನಿತ್ಯ ಮೀಡಿಯಾದಲ್ಲಿ ಕಾಣಿಸಿಕೊಳ್ಬೇಕು ಅಂತ ಸಿದ್ದು ಏನೇನೋ ಹೇಳ್ತಾರೆ: ಕಾರಜೋಳ

    ಪ್ರತಿನಿತ್ಯ ಮೀಡಿಯಾದಲ್ಲಿ ಕಾಣಿಸಿಕೊಳ್ಬೇಕು ಅಂತ ಸಿದ್ದು ಏನೇನೋ ಹೇಳ್ತಾರೆ: ಕಾರಜೋಳ

    ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಖಾಲಿ ಕೂತಿದ್ದಾರೆ. ಜನ ತಮ್ಮನ್ನು ಮರೆಯಬಾರದು ಅನ್ನೋ ಸಲುವಾಗಿ ಪ್ರತಿ ದಿನ ಮಾಧ್ಯಮದಲ್ಲಿ ಬರಬೇಕು ಅಂತ ಏನೇನೊ ಹೇಳುತ್ತಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಕಾಲೆಳೆದಿದ್ದಾರೆ.

    ಕೇಂದ್ರ ಸರ್ಕಾರ ರಾಜ್ಯಕ್ಕೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಪರಿಹಾರ ಕೊಟ್ಟಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಡಿಸಿಎಂ, ಸರ್ಕಾರದ ಆದೇಶಗಳು ಬಾಯಿಂದ ಇರೋದಿಲ್ಲ. ಬ್ಲ್ಯಾಕ್ ಆ್ಯಂಡ್ ವೈಟ್ ನಲ್ಲಿರುತ್ತವೆ, ಓದಬಹುದಲ್ಲ. ಪ್ರೊಸಿಡಿಂಗ್ಸ್ ಕಾಪಿ ಓದಬಹುದಲ್ಲ. ಒಮದು ಬಾರಿ ಸಿದ್ದರಾಮಯ್ಯ ಅದನ್ನು ಓದಲಿ ಎಂದು ತಿರುಗೇಟು ನೀಡಿದರು.

    ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್ ಪರಿಹಾರದ ಬಗ್ಗೆ ಸಮಿತಿಗಳಿರುತ್ತವೆ. ಆ ಪ್ರಕಾರ ಪರಿಹಾರ ಮಂಜೂರಾಗುತ್ತದೆ. ಸ್ವಾತಂತ್ರ್ಯ ಬಂದ ಮೇಲೆ ಇಂತಹ ಅನೇಕ ಸಂದರ್ಭಗಳು ಬಂದಿವೆ. ಎಲ್ಲ ಸಂದರ್ಭ ನೋಡಿದರೆ ಅತಿ ಹೆಚ್ಚು ಪರಿಹಾರ ಧನ ಕೊಟ್ಟಿದ್ದು ಮೋದಿ ಸರ್ಕಾರ ಎಂದರು.

    ಈ ಹಿಂದಿನ ಸರ್ಕಾರ ಎಷ್ಟು ಕೊಟ್ಟಿದೆ ಎಂದು ಜನರ ಮುಂದಿಡಲಿ. ಭಾವನಾತ್ಮಕ ಸಮಸ್ಯೆ ಕೆರಳಿಸಲು ಮನಬಂದಂಗೆ ಹೇಳಬಾರದು. ತುಮಕೂರಲ್ಲಿ ಯಡಿಯೂರಪ್ಪ ಮೋದಿ ಮುಂದೆ ಪ್ರವಾಹ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ. ಅದರಲ್ಲಿ ತಪ್ಪೇನಿಲ್ಲ ಆ ವಿಚಾರವನ್ನು ಟ್ವಿಸ್ಟ್ ಮಾಡಲಾಗಿದೆ ಎಂದು ಸಿಎಂ ಮನವಿಯನ್ನ ಸಮರ್ಥಿಸಿಕೊಂಡರು.

  • ಶೆಟ್ಟರ್ ಕುಟುಂಬಕ್ಕೆ ಕಾರಜೋಳ ಸಾಂತ್ವನ

    ಶೆಟ್ಟರ್ ಕುಟುಂಬಕ್ಕೆ ಕಾರಜೋಳ ಸಾಂತ್ವನ

    ಹುಬ್ಬಳ್ಳಿ: ಬೃಹತ್, ಮಧ್ಯಮ ಕೈಗಾರಿಕಾ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಮನೆಗೆ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಭೇಟಿ ನೀಡಿದ್ದಾರೆ.

    ಇದೇ ಶೆಟ್ಟರ್ ಕುಡುಂಬಕ್ಕೆ ಡಿಸಿಎಂ ಅವರು ಸಾಂತ್ವನ ಹೇಳಿದ್ದಾರೆ. ಶೆಟ್ಟರ್ ಅವರ ತಾಯಿ ಬಸವಣ್ಣೆವ್ವ ಶೆಟ್ಟರ್ ಜ.10ರಂದು ನಿಧನರಾಗಿದ್ದರು.

    ಮೃತರ ಆತ್ಮಕ್ಕೆ ಪರಮಾತ್ಮನು ಶಾಂತಿಯನ್ನು ನೀಡಲಿ. ಜಗದೀಶ್ ಶೆಟ್ಟರ್, ಅವರ ಕುಟುಂಬದ ಪರಿವಾರದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಭರಿಸಲಿ ಎಂದು ಅವರು ತಿಳಿಸಿದರು.

    ಬಸವಣೆವ್ವ ಶಿವಪ್ಪ ಶೆಟ್ಟರ್‍ಗೆ ಮಾಜಿ ಸಿಎಂ ಹಾಲಿ ಸಚಿವ ಜಗದೀಶ್ ಶೆಟ್ಟರ್ ಹಾಗೂ ಎಂಎಲ್‍ಸಿ ಪ್ರದೀಪ್ ಶೆಟ್ಟರ್ ಇಬ್ಬರು ಪುತ್ರರಿದ್ದು, ಅಪಾರ ಕುಟುಂಬಸ್ಥನ್ನು ಅಗಲಿರುವ ಬಸವಣೆವ್ವ ಶೆಟ್ಟರ್ ನಿಧನಕ್ಕೆ ಗಣ್ಯರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದರು.

  • ಡಿಸಿಎಂ ಹುದ್ದೆ ತೆಗೆದ್ರೆ ಸಂತೋಷ: ವಾಲ್ಮೀಕಿ ಶ್ರೀ

    ಡಿಸಿಎಂ ಹುದ್ದೆ ತೆಗೆದ್ರೆ ಸಂತೋಷ: ವಾಲ್ಮೀಕಿ ಶ್ರೀ

    ದಾವಣಗೆರೆ: ವಾಲ್ಮೀಕಿ ಸಮಾಜಕ್ಕೆ ಒಂದು ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದ ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಈಗ ಡಿಸಿಎಂ ಹುದ್ದೆ ತೆಗೆದರೆ ಸಂತೋಷ. ಇದರಿಂದ ಸರ್ಕಾರದಲ್ಲಿರುವ ಗೊಂದಲವಾದರೂ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.

    ನಗರದಲ್ಲಿ ವಾಲ್ಮೀಕಿ ಜಾತ್ರೆಯ ಪ್ರಯುಕ್ತ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜನಹಳ್ಳಿ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಡಿಸಿಎಂ ಹುದ್ದೆ ತೆಗೆಯಲು ನಮ್ಮದೇನೂ ವಿರೋಧವಿಲ್ಲ ಎಂದರು.

    ಆಕಸ್ಮಾತ್ ಡಿಸಿಎಂ ಹುದ್ದೆ ಮುಂದುವರಿಸಿದರೆ, ನಮ್ಮ ಸಮುದಾಯಕ್ಕೊಂದು ಅವಕಾಶ ನೀಡಬೇಕು. ಯಾಕಂದರೆ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ವಾಲ್ಮೀಕಿ ಸಮಾಜದ ಶಾಸಕರನ್ನು ಡಿಸಿಎಂ ಮಾಡುವುದಾಗಿ ಹೇಳಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಅದರಲ್ಲೂ ವಾಲ್ಮೀಕಿ ಸಮಾಜ ರಾಜ್ಯದ ನಾಲ್ಕನೇ ಅತಿ ದೊಡ್ಡ ಸಮಾಜವಾಗಿದ್ದು, ನಮ್ಮ ಸಮುದಾಯದಿಂದ ಇಬ್ಬರು ಡಿಸಿಎಂ ಹುದ್ದೆಗೆ ಪ್ರಭಲ ಆಕಾಂಕ್ಷಿಗಳಿದ್ದಾರೆ. ರಮೇಶ್ ಜಾರಕಿಹೊಳಿ, ಶ್ರೀರಾಮುಲು ಈ ಇಬ್ಬರಲ್ಲಿ ಇಬ್ಬರಲ್ಲಿ ಒಬ್ಬರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂದು ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ತಿಳಿಸಿದರು.

  • ಗದಗದಲ್ಲಿ ವಿವಿಧ ಕಾಮಗಾರಿಗೆ ಡಿಸಿಎಂ ಕಾರಜೋಳ ಚಾಲನೆ

    ಗದಗದಲ್ಲಿ ವಿವಿಧ ಕಾಮಗಾರಿಗೆ ಡಿಸಿಎಂ ಕಾರಜೋಳ ಚಾಲನೆ

    ಬಾಗಲಕೋಟೆ/ಗದಗ: ಗದಗ ಜಿಲ್ಲೆಯಲ್ಲಿ 25 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಚಾಲನೆ ನೀಡಿದ್ದಾರೆ.

    ಗದಗ ಜಿಲ್ಲಾ ಕೇಂದ್ರದಲ್ಲಿ 3.39 ಕೋಟಿ ರೂ.ವೆಚ್ಚದ ಡಾ.ಬಾಬು ಜಗಜೀವನರಾಂ ಭವನ, 42 ಬಾಬು ಜಗಜೀವನರಾಂ ಭವನಗಳು, ಗದಗ ಬೆಟಗೇರಿ ನಗರದ ಹತ್ತಿರ 2.32 ಕೋಟಿ ರೂ. ಪರಿಶಿಷ್ಠ ವರ್ಗಗಳ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ, ಗದಗ ಬೆಟಗೇರಿ ನಗರದ ಹುಯೀಲಗೋಳ ರಸ್ತೆಯಲ್ಲಿ 3 ಕೋಟಿ 38 ಲಕ್ಷ ರೂ.ಗಳ ಅನುದಾನದಲ್ಲಿ ಪರಿಶಿಷ್ಠ ಜಾತಿ ಮೆಟ್ರಿಕ್ ನಂತರ ವೃತ್ತಿಪರ ಬಾಲಕಿಯರ ವಸತಿ ನಿಲಯ, ಗದಗ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜನ್ನು 1046.00 ಲಕ್ಷ ಅನುದಾನದಲ್ಲಿ ನಿರ್ಮಿಸಲಾಗಿದೆ. ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮ ಯೋಜನೆಗಳಡಿ ಗದಗ-ಬೆಟಗೇರಿ ಅವಳಿ ನಗರದಲ್ಲಿ 5 ಎಕರೆ 10 ಗುಂಟೆ ಜಾಗದಲ್ಲಿ ವಸತಿ ರಹಿತ ಹರಣಶಿಕಾರಿ ಸಮುದಾಯದವರಿಗೆ 109 ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ಅವುಗಳಲ್ಲಿ 220.00 ಲಕ್ಷ ರೂ.ಗಳ ಅನುದಾನದಲ್ಲಿ 40 ಮನೆಗಳು ಪೂರ್ಣಗೊಂಡಿರುತ್ತವೆ.

    ಗದಗ ತಾಲೂಕಿನ ವಸತಿ ನಿಲಯಗಳಲ್ಲಿರುವ ಕಂಪ್ಯೂಟರ್ ಲ್ಯಾಬ್ ಗಳು, ಅಭ್ಯಾಸ ಕೊಠಡಿಗಳು ಮತ್ತು ನಿಲಯಗಳ ನವೀಕರಣ, ದುರಸ್ತಿ ಮತ್ತು ನೂತನ ಕೊಠಡಿಗಳ ನಿರ್ಮಾಣ ಮುಂತಾದ ಕಾಮಗಾರಿಗಳನ್ನು 349.00 ಲಕ್ಷ ರೂ.ಗಳ ಅನುದಾನದಲ್ಲಿ ನಿರ್ಮಿಸಲಾಗಿದ್ದು, ಈ ಕಾಮಗಾರಿಗಳನ್ನು ಡಿಸಿಎಂ ಕಾರಜೋಳ ಉದ್ಘಾಟಿಸಿದರು.

    ಶಾಸಕರಾದ ಶ್ರೀ ಹೆಚ್.ಕೆ.ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಪೆದ್ದಪ್ಪಯ್ಯ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಂ ಮಾದರ್, ಜಿಲ್ಲಾಧಿಕಾರಿ ಹಿಮೇಮಠ ಮತ್ತಿತರರು ಉಪಸ್ಥಿತರಿದ್ದರು.

  • ‘ಜನಾಂಗಕ್ಕೆ ಮುಜುಗರವಾದರೂ, ಪಕ್ಷಕ್ಕೆ ನಿಷ್ಠನಾಗಿರುತ್ತೇನೆ’- ಶ್ರೀರಾಮುಲು

    ‘ಜನಾಂಗಕ್ಕೆ ಮುಜುಗರವಾದರೂ, ಪಕ್ಷಕ್ಕೆ ನಿಷ್ಠನಾಗಿರುತ್ತೇನೆ’- ಶ್ರೀರಾಮುಲು

    ನವದೆಹಲಿ: ಡಿಸಿಎಂ ಸ್ಥಾನದ ನಿರೀಕ್ಷೆಯಲ್ಲಿದ್ದ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ತೀವ್ರ ನಿರಾಸೆಯಾಗಿದೆ. ಪಕ್ಷದಲ್ಲಿನ ಆಂತರಿಕ ಬೆಳವಣಿಗಳ ಬಳಿಕ ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡುವುದು ಅನುಮಾನ ಎನ್ನಲಾಗುತ್ತಿದೆ.

    ಈಗಾಗಲೇ ಮೂವರು ಡಿಸಿಎಂಗಳಿದ್ದು ಮತ್ತೆ ಡಿಸಿಎಂ ಸ್ಥಾನ ಸೃಷ್ಟಿ ಅನುಮಾನ ಎನ್ನಲಾಗುತ್ತಿದೆ. ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡಿದಲ್ಲಿ ಶಾಸಕ ರಮೇಶ್ ಜಾರಕಿಹೋಳಿ ಕಡೆಯಿಂದಲೂ ಡಿಸಿಎಂ ಸ್ಥಾನದ ಬೇಡಿಕೆ ಹೆಚ್ಚಾಗಲಿದೆ. ಒಂದೇ ಸಮುದಾಯದ ಇಬ್ಬರಿಗೆ ಡಿಸಿಎಂ ನೀಡಲು ಸಾಧ್ಯವಿಲ್ಲ. ಇದು ಅಸಮಾಧಾನಕ್ಕೆ ಕಾರಣವಾಗಲಿದೆ ಎಂಬುದು ಹೈಕಮಾಂಡ್ ಲೆಕ್ಕಾಚಾರ. ಹೀಗಾಗಿ ಡಿಸಿಎಂ ಸ್ಥಾನ ಸದ್ಯ ನೀಡಲು ಸಾಧ್ಯವಿಲ್ಲ ಎಂದು ಶ್ರೀರಾಮುಲುಗೆ ಸಂದೇಶ ರವಾನಿಸಲಾಗಿದೆ.

    ಈ ಕುರಿತು ದೆಹಲಿಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಸಚಿವ ಶ್ರೀರಾಮುಲು, ನನ್ನ ಸಮುದಾಯಕ್ಕೆ ಮುಜಗರವಾದರೂ ಪರವಾಗಿಲ್ಲ ಡಿಸಿಎಂ ಹುದ್ದೆಯನ್ನು ಬಹಿರಂಗವಾಗಿ ಕೇಳಿ ಪಕ್ಷಕ್ಕೆ ಮುಜುಗರ ಮಾಡಲ್ಲ. ನಾನು ಪಕ್ಷಕ್ಕೆ ನಿಷ್ಠನಾಗಿರುತ್ತೇನೆ ಎಂದರು.

    ನಮ್ಮ ಸಮುದಾಯದ ಜನರು ನನ್ನ ಮೇಲಿನ ಪ್ರೀತಿಯಿಂದ ಹೋರಾಟ ಮಾಡುತ್ತಿದ್ದಾರೆ. ಹೋರಾಟ ಮಾಡಬೇಡಿ ಎಂದು ನಾನು ಹೇಳಲ್ಲ. ನಾನು ಎಷ್ಟೇ ಹೇಳಿದರೂ ಅವರು ನನ್ನ ಮಾತು ಕೇಳಲ್ಲ. ನನಗೆ ಡಿಸಿಎಂ ನೀಡದಿದ್ದರೆ ಸಮುದಾಯಕ್ಕೆ ಮುಜುಗರ ಆಗುತ್ತೆ ಎಂಬ ವಿಚಾರ ಸತ್ಯ. ನನಗೆ ಡಿಸಿಎಂ ಹುದ್ದೆ ಸಿಗದಿದ್ದರೆ ಸಮುದಾಯ ತ್ಯಾಗ ಮಾಡಬೇಕು. ಪಕ್ಷದಲ್ಲಿ ನಿಷ್ಠಾವಂತನಾಗಿ ಕೆಲಸ ಮಾಡುತ್ತೇನೆ. ರಮೇಶ್ ಜಾರಕಿಹೊಳಿ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ರಮೇಶ್ ನನ್ನ ಸೋದರನಿದ್ದಂತೆ. ನಮ್ಮ ಸಮುದಾಯದ ನಡುವೆ ಸ್ಪರ್ಧೆ ಮಾಡಲ್ಲ ಹಾಗೂ ಅವರಿಗೆ ಡಿಸಿಎಂ ಸ್ಥಾನ ನೀಡಬೇಡಿ ಎಂದೂ ನಾನು ಹೇಳಲ್ಲ ಎಂದು ಸ್ಪಷ್ಟಪಡಿಸಿದರು.

    ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೆ ಅವಕಾಶ ಕೇಳಿದ್ದೇನೆ. ಅವಕಾಶ ಸಿಕ್ಕರೆ ರಾಜ್ಯದ ಕೆಲವು ಯೋಜನೆಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಡಿಸಿಎಂ ಸಂಬಂಧ ನಾನು ಚರ್ಚೆ ಮಾಡಲ್ಲ ಎಂದರು.

  • ಬೆಳಗಾವಿ ಇಂದೂ ನಮ್ಮದೇ, ನಾಳೆಯೂ ನಮ್ಮದೇ: ಸಚಿವ ಸಿ.ಸಿ. ಪಾಟೀಲ್

    ಬೆಳಗಾವಿ ಇಂದೂ ನಮ್ಮದೇ, ನಾಳೆಯೂ ನಮ್ಮದೇ: ಸಚಿವ ಸಿ.ಸಿ. ಪಾಟೀಲ್

    – 100 ಕೋಟಿ ವೆಚ್ಚದಲ್ಲಿ ಆನೆ ತಡೆಗೋಡೆ ನಿರ್ಮಾಣ

    ಮೈಸೂರು: ಮಹಾರಾಷ್ಟ್ರ ಸರ್ಕಾರ ಬೆಳಗಾವಿ ವಿಚಾರದಲ್ಲಿ ಗಡಿ ಕ್ಯಾತೆ ಆರಂಭಿಸಿರುವ ಬಗ್ಗೆ ಅರಣ್ಯ ಸಚಿವ ಸಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಬೆಳಗಾವಿ ಇಂದು ಮತ್ತು ನಾಳೆಯೂ ನಮ್ಮದೇ ಎಂದು ಹೇಳಿದ್ದಾರೆ.

    ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉದ್ಧವ್ ಠಾಕ್ರೆ ನೂತನವಾಗಿ ಮುಖ್ಯಮಂತ್ರಿಗಳಾಗಿದ್ದಾರೆ. ಅವರು ಅಲ್ಲಿಯ ಜನರನ್ನು ಓಲೈಕೆ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಕರ್ನಾಟಕ ಯಾವುದೇ ರಾಜಿಗೂ ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದರು.

    ಕಳೆದ ವರ್ಷ ಬಂಡೀಪುರದಲ್ಲಿ ಉಂಟಾದ ಭಾರೀ ಪ್ರಮಾಣದ ಬೆಂಕಿ ಅವಘಡ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯ ಸರಕಾರ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಮುಂಜಾಗ್ರತವಾಗಿ ವಿಶೇಷ ಸೇನಾ ಹೆಲಿಕಾಪ್ಟರ್ ಬಳಸಲು ಚಿಂತಿಸಲಾಗಿದೆ. ಇದಕ್ಕೆ ಹೆಚ್ಚು ಹಣ ಖರ್ಚಾಗಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಕಳೆದ ಬಾರಿ ಬೆಂಕಿ ರೇಖೆ ನಿರ್ಮಾಣವಾಗದೆ ಅವಘಡ ಸಂಭವಿಸಿತ್ತು. ಆದರೆ ಈ ಬಾರಿ ಸಂಪೂರ್ಣ ಬೆಂಕಿ ರೇಖೆ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

    ಅರಣ್ಯ ಸಿಬ್ಬಂದಿಗಳಿಗೆ ಮುಖ್ಯಮಂತ್ರಿಗಳ ಮೆಡಲ್ ನೀಡದ ವಿಚಾರದ ಬಗ್ಗೆಯೂ ಸಚಿವರು ಪ್ರತಿಕ್ರಿಯಿಸಿ, ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ಬಗ್ಗೆ ಗಮನಿಸಲು ಸಾಧ್ಯವಾಗಿರಲಿಲ್ಲ. ಆದಷ್ಟು ಬೇಗ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ದಿನಾಂಕ ನಿಗದಿ ಪಡಿಸುತ್ತೇನೆ ಎಂದರು.

    ಮಾನವ ಮತ್ತು ವನ್ಯಜೀವಿ ಸಂಘರ್ಷವನ್ನು ತಪ್ಪಿಸಲು 100 ಕೋಟಿ ರೂ. ವೆಚ್ಚದಲ್ಲಿ ಆನೆ ತಡೆಗೋಡೆ ನಿರ್ಮಾಣ ಮಾಡಲಾಗುತ್ತೆ. ಕಾಡಂಚಿನ ಪ್ರದೇಶಲ್ಲಿ ಆನೆ ತಡೆಗೋಡೆ ನಿರ್ಮಾಣ ಮಾಡಲಾಗುವುದು. ರೈಲ್ವೇ ಕಂಬಿಗಳು, ಸೋಲಾರ್ ಫೆನ್ಸ್ ಹಾಗೂ ಕಂದಕಗಳ ಮೂಲಕ ತಡೆಗೋಡೆ ನಿರ್ಮಾಣ ಮಾಡಲು ರೂಪು ರೇಷೆ ಸಿದ್ಧಪಡಿಸುತ್ತಿದ್ದೇವೆ. ಮೊದಲ ಹಂತದಲ್ಲಿ ಸಂಘರ್ಷ ಇರುವ ಕಡೆ ಮಾಡಲಾಗುತ್ತೆ. ನಂತರ ಉಳಿದಂತ ಸ್ಥಳಗಳಲ್ಲಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

    ಇದೇ ವೇಳೆ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ಇದು ಸಿಎಂಗೆ ಬಿಟ್ಟ ವಿಚಾರ. ನಾನು ಇದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದ್ರು. ಡಿಸಿಎಂ ಹುದ್ದೆ ಬೇಕು, ಬೇಡ ಎನ್ನುವ ವಿಚಾರಕ್ಕೂ ಪ್ರತಿಕ್ರಿಯೆ ನೀಡಲಿಲ್ಲ. ಕೆಲವು ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದರು.

  • ಡಿಸಿಎಂ ಬೇಡ ಎಂಬ ಕೂಗಿಗೆ ಗೋವಿಂದ ಕಾರಜೋಳ ಕಿಡಿ

    ಡಿಸಿಎಂ ಬೇಡ ಎಂಬ ಕೂಗಿಗೆ ಗೋವಿಂದ ಕಾರಜೋಳ ಕಿಡಿ

    ಬೆಂಗಳೂರು: ಡಿಸಿಎಂ ಬೇಡ ಎಂಬ ಸಹಿ ಸಂಗ್ರಹಕ್ಕೆ ಪರ – ವಿರೋಧ ಚರ್ಚೆಯಾಗುತ್ತಿದೆ. ಡಿಸಿಎಂ ಬೇಡ ಎಂಬ ಕೂಗಿಗೆ ಡಿಸಿಎಂ ಗೋವಿಂದ ಕಾರಜೋಳ ಕೆಂಡಾಮಂಡಲವಾಗಿದ್ದಾರೆ. ಶಾಸಕ ರೇಣುಕಾಚಾರ್ಯ ಸಹಿತ ಡಿಸಿಎಂ ಹುದ್ದೆ ವಿರೋಧಿಗಳಿಗೆ ನಯವಾಗಿಯೇ ಟಾಂಗ್ ಕೊಟ್ಟಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಡಿಸಿಎಂ ಹುದ್ದೆ ರದ್ದು ಮಾಡುವ ಬಗ್ಗೆ ರಸ್ತೆಯಲ್ಲಿ ಚರ್ಚೆ ಆಗುತ್ತಿದೆ ಅಷ್ಟೇ. ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಪಕ್ಷದ ವೇದಿಕೆಯಲ್ಲಿ ಇಂಥ ವಿಚಾರಗಳು ಚರ್ಚೆ ಆದರೆ ಅದಕ್ಕೊಂದು ಗೌರವ ಅಂತಾ ಕಿಡಿಕಾರಿದರು. ಇದನ್ನೂ ಓದಿ: ಒಂದು ಎಂಎಲ್‍ಸಿ ಸ್ಥಾನಕ್ಕೆ ಇಬ್ಬರ ಮಧ್ಯೆ ಪೈಪೋಟಿ 

    ಯಾರೋ ಎಲ್ಲೋ ಮಾತನಾಡಿದರೆ ಅದಕ್ಕೆ ವಿಶೇಷ ಮಾನ್ಯತೆ ನೀಡಬೇಕಾಗಿಲ್ಲ. ಉಪಮುಖ್ಯಮಂತ್ರಿ ಹುದ್ದೆ ರದ್ದು ಮಾಡುವುದಾಗಲಿ ಅಥವಾ ಸಂಖ್ಯೆ ಹೆಚ್ಚಿಸುವುದಾಗಲಿ ಪಕ್ಷದ ವೇದಿಕೆಯಲ್ಲಿ ಯಾವುದೂ ಚರ್ಚೆಯಾಗಿಲ್ಲ ಎಂದು ಟಾಂಗ್ ಕೊಟ್ಟರು.

    ಪಕ್ಷ ನೀಡಿದ ಯಾವುದೇ ಸೂಚನೆ ಪಾಲಿಸುತ್ತೇನೆ ಎಂದು ಕಾರಜೋಳ ಮುನ್ಸೂಚನೆ ನೀಡಿದ್ರು. ನಾನಂತೂ ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ಸೂಚಿಸಿದ ಯಾವುದೇ ನಿರ್ದೇಶನ ಪಾಲಿಸುವುದು ನನ್ನ ಕರ್ತವ್ಯ. ಸಿಎಂ ಯಡಿಯೂರಪ್ಪ, ಪಕ್ಷಾಧ್ಯಕ್ಷರು, ಬಿಎಲ್ ಸಂತೋಷ್, ಪ್ರಧಾನಿ, ಕೇಂದ್ರದ ಪ್ರಮುಖರು ಸೇರಿ ನನ್ನ ಉಪಮುಖ್ಯಮಂತ್ರಿ ಮಾಡಿದ್ದಾರೆ. ನಾನು ಎಂದೂ ಅಧಿಕಾರಕ್ಕೆ ಜೋತು ಬೀಳುವವನಲ್ಲ ಎಂದು ಡಿಸಿಎಂ ಹುದ್ದೆ ವಿರೋಧಿಸುವ ಪಕ್ಷದೊಳಗಿನ ಬಣಕ್ಕೆ ಟಾಂಗ್ ಕೊಟ್ಟರು.