Tag: DCM

  • ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದ ಡಿಸಿಎಂ

    ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದ ಡಿಸಿಎಂ

    ತುಮಕೂರು: ಹುಟ್ಟುಹಬ್ಬದ ಪ್ರಯುಕ್ತ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದರು.

    ಬಳಿಕ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಅನಿಲ್ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದೇವೆ ಅಂತ ಪ್ರಕಟಣೆ ಹೊರಡಿಸಿದ್ದಾರೆ. ಅಲ್ಲದೆ ಪೋನ್ ಮಾಡಿ ನಿಮಗೆ ಒಳ್ಳೆಯದಾಗ್ಲಿ ಅಂತ ಶುಭ ಹಾರೈಸಿದ್ದಾರೆ. ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ನನ್ನ ಸಂಪರ್ಕ ಕೂಡ ಮಡಿದರು ಎಂದರು.

    ಆಗ ಅನಿಲ್ ಅವರು, ನೀವು ರಾಜ್ಯದ ಉಪಮುಖ್ಯಮಂತ್ರಿಯಿದ್ದೀರಿ ಹಾಗೂ ನಿಮಗೆ ಶಾಸಕರ ಸಂಖ್ಯಾಬಲ ಹೆಚ್ಚಿದೆ. ಅಲ್ಲದೆ ನಮ್ಮ ಎರಡೂ ಪಕ್ಷಗಳಲ್ಲಿ ಸಮನ್ವಯತೆ ಕೊರತೆಯಿದೆ. ಹೀಗಾಗಿ ನಾನು ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ, ನಿಮಗೆ ಒಳ್ಳೆಯದಾಗ್ಲಿ. ಒಟ್ಟಿಗೆ ಸೇರಿ ಕೆಲಸ ಕಾರ್ಯಗಳನ್ನು ಮಾಡೋಣ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

    ಕಾಂಗ್ರೆಸ್ಸಿಗರಲ್ಲಿ ಸಂಖ್ಯಾ ಬಲದ ಕೊರತೆಯಿದೆ. ಹೀಗಾಗಿ ನಾವು ಯಾಕೆ ಸ್ಪರ್ಧೆ ಮಾಡಬೇಕೆಂದು ಆಲೋಚಿಸಿ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಡಿಸಿಎಂ ತಿಳಿಸಿದರು. ಇದೇ ವೇಳೆ ದೇಶದ್ರೋಹದ ಮಾತನಾಡುವವರಿಗೆ ತಕ್ಕಶಾಸ್ತಿಯಾಗಲಿದೆ ಎಂದು ಸಿದ್ದಗಂಗಾ ಮಠದಲ್ಲಿ ಹೇಳಿದ್ದಾರೆ.

  • ಅರಣ್ಯ ಸಚಿವರ ಮೇಲೆ ಆರೋಪ ಇವೆ, ಕೇಸ್ ಇಲ್ಲ: ಲಕ್ಷ್ಮಣ ಸವದಿ

    ಅರಣ್ಯ ಸಚಿವರ ಮೇಲೆ ಆರೋಪ ಇವೆ, ಕೇಸ್ ಇಲ್ಲ: ಲಕ್ಷ್ಮಣ ಸವದಿ

    ಧಾರವಾಡ/ಹುಬ್ಬಳ್ಳಿ: ಅರಣ್ಯ ಸಚಿವ ಆನಂದ್ ಸಿಂಗ್ ಮೇಲೆ ಕೇಸ್ ಇರುವ ಆರೋಪ ಇವೆ, ಆದರೆ ಅರಣ್ಯಕ್ಕೆ ಸಂಬಂಧಿಸಿ ಕೇಸ್ ಇಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

    ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾನು ಕೂಡ ಅವರ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು.

    ಸಚಿವ ಆರ್ ಅಶೋಕ ಮಗನ ಕಾರು ಅಪಘಾತ ಪ್ರಕರಣ ನಂಗೆ ಗೊತ್ತಿಲ್ಲ. ಪೊಲೀಸ್ ಅಧಿಕಾರಿಗಳು ಆ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಆರ್ ಅಶೋಕ್ ಅವರು ಹೇಳಿಕೆ ನೀಡಿದ್ದಾರೆ. ಅವರು ಮಾಹಿತಿ ಇಲ್ಲದೆ ನಾನು ಮಾತನಾಡಲ್ಲ. ಕಾನೂನು ಎಲ್ಲರಿಗೂ ಒಂದೇ, ಯಾರು ತಪ್ಪು ಮಾಡಿರುತ್ತಾರೆ ಅವರ ಮೇಲೆ ಕ್ರಮ ಕೈಗೊಳ್ತಾರೆ ಎಂದರು. ಇದನ್ನೂ ಓದಿ: ಖಾತೆ ವಾಪಸ್ ಪಡೆಯೋ ಭೀತಿ- ಸಿಎಂ ಭೇಟಿ ಮಾಡಿದ ಅನಂದ್ ಸಿಂಗ್

    ಉಮೇಶ್ ಕತ್ತಿ ಕೆಲವೇ ದಿನಗಳಲ್ಲಿ ಸಚಿವರಾಗುತ್ತಾರೆ. ಉನ್ನತ ಖಾತೆ ಪಡೆಯುತ್ತಾರೆ. ನಾವು ಎಲ್ಲರೂ ಸೇರಿ ಉತ್ತರ ಕರ್ನಾಟಕದ ಬಗ್ಗೆ ಚಿಂತನೆ ಮಾಡುತ್ತೇವೆ ಎಂದ ಸವದಿ, ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ನಾನು ಚರ್ಚೆ ಮಾಡಲ್ಲ ಎಂದರು. ಇದನ್ನೂ ಓದಿ: ಆನಂದ್ ಸಿಂಗ್‍ಗೆ ಅರಣ್ಯ ಖಾತೆ ನೀಡಿದ್ದು ಕಳ್ಳನ ಕೈಗೆ ಕೀ ಕೊಟ್ಟಂತಾಗಿದೆ: ಹೆಚ್.ಎಂ ರೇವಣ್ಣ

    ಅರಣ್ಯ ಕಾಯ್ದೆಯಡಿ ಹಲವು ಕೇಸ್ ಎದುರಿಸುತ್ತಿರುವ ಆನಂದ್ ಸಿಂಗ್‍ರನ್ನು ಅದೇ ಇಲಾಖೆಯ ಸಚಿವರನ್ನಾಗಿ ಮಾಡಿರುವ ಸಂಬಂಧ ಆಕ್ರೋಶ ಮುಂದುವರಿದಿದೆ. ತೀವ್ರ ಟೀಕೆಗಳ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಕೂಡ ವರದಿ ಕೇಳಿದೆ. ಆನಂದ್ ಸಿಂಗ್‍ರನ್ನು ಸಚಿವರನ್ನಾಗಿ ಮಾಡಿರೋದು ಸರಿಯಲ್ಲ. ಇದರ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಹೋರಾಟ ಮಾಡಲಿದೆ ಎಂದು ಕಾಂಗ್ರೆಸ್ ಮುಖಂಡ ಕೆಸಿ ಕೊಂಡಯ್ಯ ಹೇಳಿದ್ದಾರೆ. ಇತ್ತ ಆನಂದ್ ಸಿಂಗ್ ಮಾತ್ರ, ನಾನು ಯಾವುದನ್ನು ಕತ್ತಲಲ್ಲಿ ಇಡೋಕೆ ಹೋಗಿಲ್ಲ. ಒಂದು ವೇಳೆ ಸಿಎಂ ಖಾತೆ ಬದಲಿಸಿದ್ರೂ ಅದನ್ನು ಒಪ್ಪಿಕೊಳ್ಳುತ್ತೇನೆ. ಒಬ್ಬರ ವಿರುದ್ಧ ಆರೋಪ ಕೇಳಿ ಬಂದ್ರೆ ಅವರು ಹಾಗೇ ಇರ್ಬೇಕಾ..? ತಪ್ಪು ತಿದ್ದಿಕೊಳ್ಳಲು ಅವಕಾಶನೇ ಇಲ್ವಾ..? ಕೊನೆಯವರೆಗೂ ಆರೋಪಿಯಾಗೇ ಇರಬೇಕಾ ಎನ್ನುತ್ತಾ ವಾಲ್ಮೀಕಿ ಮಹರ್ಷಿಯ ಉದಾರಣೆ ನೀಡಿದ್ದಾರೆ.

  • ಜನಪ್ರಿಯ ಯೋಜನೆಗಳೇ ಆಪ್ ಗೆಲುವಿಗೆ ಕಾರಣ: ಗೋವಿಂದ ಕಾರಜೋಳ

    ಜನಪ್ರಿಯ ಯೋಜನೆಗಳೇ ಆಪ್ ಗೆಲುವಿಗೆ ಕಾರಣ: ಗೋವಿಂದ ಕಾರಜೋಳ

    ಬಾಗಲಕೋಟೆ: ಜನಪ್ರಿಯ ಯೋಜನೆಗಳ ಘೋಷಣೆ ಆಮ್ ಆದ್ಮಿ ಪಕ್ಷ ಗೆಲುವಿಗೆ ಕಾರಣ ಎಂದು ಉಪಮುಖ್ಯಂತ್ರಿ ಗೋವಿಂದ ಕಾರಜೋಳ ಹೇಳಿದರು.

    ದೆಹಲಿ ವಿಧಾನಸಭೆ ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ವಿಶ್ಲೇಷಿಸುತ್ತಾ ಎಪಿಪಿ ನೀಡಿರುವ ಜನಪ್ರಿಯ ಯೋಜನೆಗಳು ಆ ಪಕ್ಷದ ಗೆಲುವಿಗೆ ಕಾರಣವಾಗಿದೆ. ಜನಪ್ರೀಯ ಯೋಜನೆಗಳು ಜನರ ಮನಸ್ಸು ಸೆಳೆದಿವೆ ಎಂದರು.

    ದೇಶದ ವಿಷಯ ಬಂದಾಗ ದೇಶದ ಅಖಂಡತೆ, ರಾಷ್ಟ್ರೀಯತೆ ವಿಷಯ ಬಂದಾಗ ದೆಹಲಿಯ ಜನ ಬಿಜೆಪಿ ಬೆಂಬಲಿಸಿದ್ದಾರೆ. ಪ್ರಾದೇಶಿಕ ಪಕ್ಷಗಳು ಜನಪ್ರಿಯ ಯೋಜನೆಗಳು ಘೋಷಣೆ ಮಾಡಿರುವ ಪರಿಣಾಮ ಅವುಗಳ ಅಧಿಕಾರಕ್ಕೆ ಬರಲು ಸಹಾಯವಾಗುತ್ತಿದೆ ಎಂದು ಹೇಳಿದರು.

    ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಆರ್ಥಿಕ ತೊಂದರೆ ಇರುವುದು ನಿಜವಾಗಿದ್ದರೂ ಸಿದ್ದರಾಮಯ್ಯ ಹೇಳಿರುವ ಹೇಳಿಕೆಯಿಂದ ತೊಂದರೆ ಇಲ್ಲ. ದರಿದ್ರತನ ಆರಂಭಗೊಂಡಿದ್ದೇ ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಎಂದು ಆರೋಪಿಸಿದ ಅವರು, ಹೊಸ ಸಾಲ ತೆಗೆಯಲು ಬಾರದಷ್ಟು (ಬಾರೋಯಿಂಗ್ ಕೆಪ್ಯಾಸಿಟಿ ಮೀರಿ)ಸಾಲ ತೆಗೆದಿದ್ದಾರೆ. ಪ್ರಕೃತಿ ವಿಕೋಪ ಉಂಟಾಗಿ ಜನ ಮನೆಗಳು ಕಳೆದುಕೊಂಡಿದ್ದಾರೆ. ಬೆಳೆ ಹಾನಿ ಉಂಟಾಗಿದೆ. ಹಾಗಾಗಿ ಆರ್ಥಿಕ ತೊಂದರೆ ಆಗಿದೆ. ಸುಮಾರು 38 ಸಾವಿರ ಕೋಟಿ ರೂ. ನೆರೆ ಪರಿಹಾರಕ್ಕೆ ಖರ್ಚು ಮಾಡಲಾಗುತ್ತಿದೆ. ಪರಿಹಾರ ಹಂಚಿಕೆ, ರಸ್ತೆ, ಮನೆಗಳ ನಿರ್ಮಾಣಕ್ಕೆ ವೆಚ್ಚ ಮಾಡಲಾಗಿದೆ. ಹಾಗಾಗಿ ತೊಂದರೆ ಕಾಣಿಸಿಕೊಂಡಿದೆ ಎಂದರು.

    ಅಕ್ರಮ ಮರಳು ಗಣಿಗಾರಿಕೆ ಯಾರು ಮಾಡುತ್ತಿದ್ದಾರೆ ಎನ್ನುವುದರ ಮೇಲೆ ನಿಗಾ ಇಡಲಾಗಿದೆ. ಜನತೆಗೆ ಮರಳು ಸುಲಭವಾಗಿ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ ಅಕ್ರಮ ಮರಳು ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದರು.

  • ನನಗೂ ಡಿಸಿಎಂ ಆಗುವ ಆಸೆ ಇತ್ತು: ಸಚಿವ ಶ್ರೀರಾಮುಲು

    ನನಗೂ ಡಿಸಿಎಂ ಆಗುವ ಆಸೆ ಇತ್ತು: ಸಚಿವ ಶ್ರೀರಾಮುಲು

    ದಾವಣಗೆರೆ: ನನಗೂ ಡಿಸಿಎಂ ಆಗುವ ಆಸೆ ಇತ್ತು. ಆದರೆ ಮುಖ್ಯಮಂತ್ರಿ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಮುಜುಗರ ತರುವ ಕೆಲಸ ಮಾಡೋಲ್ಲ ಎಂದು ನನಗೂ ಡಿಸಿಎಂ ಸ್ಥಾನದ ಮೇಲೆ ಆಸೆ ಇದೆ ಎನ್ನುವುದನ್ನು ಆರೋಗ್ಯ ಸಚಿವ ಶ್ರೀರಾಮುಲು ಹೊರಹಾಕಿದ್ದಾರೆ.

    ದಾವಣಗೆರೆಯ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಗೆ ಸಚಿವ ಶ್ರೀರಾಮುಲು ಅಧ್ಯಕ್ಷರಾಗಿದ್ದಾರೆ. ಮಠಕ್ಕೆ ಹೊರಡುವ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಮಾತನಾಡಿದ ಅವರು, ಡಿಸಿಎಂ ಆಗುವ ಅವಕಾಶ ಮುಂದೆ ಬರುತ್ತದೆ. ಯಡಿಯೂರಪ್ಪ ನವರು ವಾಲ್ಮೀಕಿ ಸಮಾಜಕ್ಕೆ ಅವಕಾಶ ಕೊಡುತ್ತಾರೆ. ಅಲ್ಲದೆ ಕೊಟ್ಟ ಮಾತನ್ನು ಯಡಿಯೂರಪ್ಪ ಯಾವತ್ತು ತಪ್ಪುವುದಿಲ್ಲ. ಈಗ ಸಿಎಂ ಸಾಕಷ್ಟು ಒತ್ತಡದಲ್ಲಿದ್ದಾರೆ. ಈಗ ಹೋಗಿ ಒತ್ತಡ ಹಾಕಿದ್ರೆ ಅವರಿಗೆ ಮುಜುಗರ ನೀಡಿದಂತಾಗುತ್ತದೆ.

    ನಾಳೆ, ನಾಡಿದ್ದು ಬಜೆಟ್ ಪೂರ್ವ ಸಭೆ ಇದ್ದು, ನಮ್ಮ ಸಲಹಗೆಳನ್ನು ನಾವು ಸಿಎಂಗೆ ಕೊಡುತ್ತೇವೆ ಎಂದು ಶ್ರೀರಾಮುಲು ಹೇಳಿದರು. ಇದೇ ವೇಳೆ ಅವರಿಗೆ ಬಳ್ಳಾರಿ ಉಸ್ತುವಾರಿ ಸಚಿವ ಸ್ಥಾನದ ಬಗ್ಗೆ ಕೇಳಿದಾಗ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾದರು.

    ಶನಿವಾರವಾದ್ದರಿಂದ ದಾವಣಗೆರೆಯ ಹೊರವಲಯದಲ್ಲಿರುವ ಶಾಮನೂರು ಗ್ರಾಮದ ಆಂಜನೇಯನ ದೇವಸ್ಥಾನಕ್ಕೆ ಶ್ರೀರಾಮುಲು ಭೇಟಿ ನೀಡಿದ್ದು, ಆಂಜನೇಯನಿಗೆ ಪೂಜೆ ಸಲ್ಲಿಸಿದರು. ಅಲ್ಲದೆ ಆಂಜನೇಯ ಹಾಗೂ ಈಶ್ವರನಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಪಕ್ಕದಲ್ಲೇ ಇದ್ದ ಹೋಟೆಲೊಂದರಲ್ಲಿ ಒಗ್ಗರಣೆ ಮಂಡಕ್ಕಿ ಹಾಗೂ ಮೆಣಸಿನಕಾಯಿ ತಿಂದು ಅಲ್ಲಿಂದ ವಾಲ್ಮೀಕಿ ಮಠಕ್ಕೆ ಪ್ರಯಾಣ ಬೆಳಸಿದರು. ಇನ್ನು ಸಚಿವ ಶ್ರೀರಾಮುಲು ಅವರನ್ನು ನೋಡುತ್ತಿದ್ದಂತೆ ಸಾಕಷ್ಟು ಜನರು ಅವರನ್ನು ನೋಡಲು ಮುಗಿಬಿದ್ದಿದ್ದರು.

  • ಐಐಟಿ ಮಾದರಿಯಲ್ಲಿ ಯುವಿಸಿಇ ಅಭಿವೃದ್ಧಿ: ಅಶ್ವಥ್ ನಾರಾಯಣ್

    ಐಐಟಿ ಮಾದರಿಯಲ್ಲಿ ಯುವಿಸಿಇ ಅಭಿವೃದ್ಧಿ: ಅಶ್ವಥ್ ನಾರಾಯಣ್

    ಬೆಂಗಳೂರು: 107 ವರ್ಷದ ಪುರಾತನ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜನ್ನ ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಐಐಟಿ ಮಾದರಿಯ ಕ್ಯಾಂಪಸ್, ಶೈಕ್ಷಣಿಕ ಚಟುವಟಿಕೆ, ಕೋರ್ಸ್ ಗಳನ್ನ ಮೇಲ್ದರ್ಜೆಗೇರಿಸಲು ಉನ್ನತ ಶಿಕ್ಷಣ ಇಲಾಖೆ ಹೊಸ ಕಾರ್ಯಕ್ರಮ ರೂಪಿಸಿಕೊಂಡಿದೆ.

    ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್(ಯುವಿಸಿಇ) ಆಡಳಿತ ಮಂಡಳಿಯ ಸಭೆಯಲ್ಲಿ ಸಚಿವ ಡಾ.ಅಶ್ವಥ್ ನಾರಾಯಣ ಐಐಟಿ ಮಾದರಿ ಬಗ್ಗೆ ಪ್ರಸ್ತಾಪ ಮಾಡಿದ್ರು. 107 ವರ್ಷದ ಇತಿಹಾಸವುಳ್ಳ ಯುವಿಸಿಇ ಅಭಿವೃದ್ಧಿ ಸರ್ಕಾರದ ಉದ್ದೇಶ ಇದಕ್ಕೆ ಅಗತ್ಯವಾದ ಕ್ರಮ ಸರ್ಕಾರ ತೆಗೆದುಕೊಳ್ಳುತ್ತೆ ಅಂತ ಭರವಸೆ ನೀಡಿದರು.

    ಯುವಿಸಿಇಯ ಪುನಾರಚನೆಗೆ ಸರ್ಕಾರ 25 ಕೋಟಿ ರೂ. ಹಂಚಿಕೆ ಮಾಡಿದ್ದು ಮೊದಲ ಹಂತವಾಗಿ 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಉಳಿದ 10 ಕೋಟಿ ರೂ.ಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು. ಹೊಸದಾಗಿ ಏರೋನಾಟಿಕಲ್ ಹಾಗೂ ಸ್ಪೇಸ್ ಎಂಜಿನಿಯರಿಂಗ್ ಪ್ರಾರಂಭ ಮಾಡಲು ಯುವಿಸಿಇ ಮುಂದಾಗಿದೆ. ಇದಕ್ಕೂ ಅಗತ್ಯ ಸಹಕಾರ ಕೊಡುತ್ತೇವೆ ಅಂದರು.

    ಯುವಿಸಿಇಯನ್ನು ಬೆಂಗಳೂರು ಮತ್ತು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ನಡುವೆ ವಿಭಜಿಸಿದ ನಂತರ ಉದ್ಭವವಾಗಿದ್ದ ಸಮಸ್ಯೆಗೆ ರಂಗನಾಥ ಸಮಿತಿಯ ವರದಿ ಪರಿಹಾರ ಸೂಚಿಸಿದೆ. ಈ ಸಮಿತಿಯ ಶಿಫಾರಸು ಹಾಗೂ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಲಹೆಯನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ತಾಂತ್ರಿಕ ವಿಶ್ವವಿದ್ಯಾಲಯಗಳ ಹಲವು ಮಾದರಿಗಳು ನಮ್ಮ ಮುಂದಿವೆ. ಎಲ್ಲ ಮಾದರಿಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲೂ ತಪ್ಪಾಗದಂತೆ ಸರಿಯಾದ ನಿರ್ಧಾರ ಕೈಗೊಂಡು ಯುವಿಸಿಇಯನ್ನು ಮೇಲ್ದರ್ಜೆಗೆ ಏರಿಸಲಾಗುವುದು ಅಂತ ಸ್ಪಷ್ಟಪಡಿಸಿದರು.

  • ದೋಸ್ತಿ ಅಭ್ಯರ್ಥಿ ಕಣಕ್ಕೆ- ಲಕ್ಷ್ಮಣ ಸವದಿ ಫುಲ್ ಟೆನ್ಶನ್

    ದೋಸ್ತಿ ಅಭ್ಯರ್ಥಿ ಕಣಕ್ಕೆ- ಲಕ್ಷ್ಮಣ ಸವದಿ ಫುಲ್ ಟೆನ್ಶನ್

    ಬೆಂಗಳೂರು: ತೆರವಾಗಿರೋ ಒಂದು ವಿಧಾನ ಪರಿಷತ್ ಸ್ಥಾನಕ್ಕೆ ನಡೆಯೋ ಚುನಾವಣೆ ಕಣ ರಂಗೇರತೊಡಗಿದೆ. ಅವಿರೋಧವಾಗಿ ಆಯ್ಕೆ ಆಗೋ ಕನಸು ಕಂಡಿದ್ದ ಡಿಸಿಎಂ ಲಕ್ಷ್ಮಣ ಸವದಿಗೆ ಹೊಸ ತಲೆನೋವು ಶುರುವಾಗಿದೆ. ಕಾಂಗ್ರೆಸ್- ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಕಣಕ್ಕಿಳಿದಿರೋದು ಸವದಿಗೆ ಫುಲ್ ಟೆನ್ಶನ್ ತರಿಸಿದೆ. ಹೀಗಾಗಿ ಗೆಲ್ಲೋಕೆ ಅಗತ್ಯವಾದ ಕಾರ್ಯ ಚಟುವಟಿಕೆಗಳನ್ನು ಮಾಡೋದಕ್ಕೆ ಸವದಿ ಮುಂದಾಗಿದ್ದಾರೆ.

    ಫೆಬ್ರವರಿ 17ರಂದು ಚುನಾವಣೆ ನಡೆಯಲಿದೆ. ಬಿಜೆಪಿ ಹೈಕಮಾಂಡ್ ಸವದಿ ಹೆಸರು ಫೈನಲ್ ಮಾಡಿ, ನಾಮಪತ್ರ ಸಲ್ಲಿಕೆಯೂ ಆಗಿತ್ತು. ಗುರುವಾರ ಕೊನೆಯ ಘಳಿಗೆಯಲ್ಲಿ ಅನಿಲ್ ಕುಮಾರ್ ರನ್ನ ದೋಸ್ತಿ ಪಕ್ಷಗಳು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿವೆ. ಹೀಗಾಗಿ ಚುನಾವಣೆ ಅನಿವಾರ್ಯವಾಗಿದೆ. ಸಂಖ್ಯಾಬಲದ ಪ್ರಕಾರ ಬಿಜೆಪಿಗೆ ಗೆಲುವು ನಿರಾಯಾಸವಾಗಿ ಸಿಗಲಿದೆ. ಆದರೆ ಗುಪ್ತ ಮತದಾನ ಆಗಿರೋದ್ರಿಂದ 7-8 ಶಾಸಕರು ಕ್ರಾಸ್ ವೋಟ್ ಮಾಡಿದ್ರೆ ಸವದಿಗೆ ಸೋಲು ಖಚಿತವಾಗಲಿದೆ. ಈ ಇದೇ ಕ್ರಾಸ್ ವೋಟ್ ಭೀತಿ ಸವದಿಗೆ ಕಾಡ್ತಿದೆ.

    ಸೋತ ಲಕ್ಷ್ಮಣ ಸವದಿಯನ್ನ ಡಿಸಿಎಂ ಮಾಡಿರೋದು ಪಕ್ಷದ ಬಹುತೇಕ ಶಾಸಕರಿಗೆ ಇಷ್ಟ ಇಲ್ಲ. ಹೀಗಾಗಿ ಅಸಮಾಧಾನಿತ ಶಾಸಕರನ್ನ ಮನವೊಲಿಸಿ ಕ್ರಾಸ್ ವೋಟ್ ಮಾಡಿಸೋ ಪ್ಲಾನ್ ದೋಸ್ತಿ ನಾಯಕರದ್ದು. ಒಂದು ವೇಳೆ ಕ್ರಾಸ್ ವೋಟಿಂಗ್ ಆದರೆ ಸವದಿಗೆ ಗೆಲವು ಕಷ್ಟ ಆಗಲಿದೆ. ನಿನ್ನೆ ದೋಸ್ತಿಗಳು ಅಭ್ಯರ್ಥಿ ಹಾಕಿದ್ದೆ ತಡ, ಡಿಸಿಎಂ ಸವದಿಗೆ ಫುಲ್ ಭಯ ಶುರುವಾಗಿದೆ. ಹೀಗಾಗಿ ಇಂದು ಸಿಎಂ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ರು. ಖಾಸಗಿ ಕಾರಿನಲ್ಲಿ ಬಂದು ಸಿಎಂ ಜೊತೆ ಪರಿಷತ್ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದಾರೆ.

    ವಿಪ್ ಜಾರಿ ಮಾಡೋದ್ರಿಂದ ಕ್ರಾಸ್ ವೋಟ್ ಆಗೊಲ್ಲ ಎನ್ನಲಾಗ್ತಿದೆ. ಆದರೆ ಗುಪ್ತ ಮತದಾನ ವ್ಯವಸ್ಥೆ ಆಗಿರೋದ್ರಿಂದ್ರ ಯಾರು ಕ್ರಾಸ್ ವೋಟ್ ಹಾಕಿದ್ದಾರೆ ಅಂತ ಗೊತ್ತಾಗೊಲ್ಲ. ಹೀಗಾಗಿ ಸವದಿ ಮೇಲೆ ಅಸಮಾಧಾನ ಇರೋ ಶಾಸಕರ ಗುಂಪು ಕ್ರಾಸ್ ವೋಟ್ ಮಾಡಬಹುದು ಅನ್ನೋ ಅನುಮಾನಗಳನ್ನು ತಳ್ಳಿ ಹಾಕುವಂತಿಲ್ಲ. ಒಟ್ಟಿನಲ್ಲಿ ಬಹುಮತ ಇದ್ದರು ಸವದಿಗೆ ಈಗ ಭೀತಿ ಶುರುವಾಗಿದ್ದು, ಬಿಜೆಪಿ ಶಾಸಕರು ಸವದಿ ಕೈ ಹಿಡಿಯುತ್ತಾರಾ ಅಥವಾ ಕೈ ಬಿಡ್ತಾರಾ ಅಂತ ಫೆಬ್ರವರಿ 17 ಕ್ಕೆ ಗೊತ್ತಾಗಲಿದೆ.

  • ಉಪಮುಖ್ಯಮಂತ್ರಿ ಸ್ಥಾನ ಸಿಗದಿರುವುದಕ್ಕೆ ಯಾವುದೇ ಅಸಮಾಧಾನವಿಲ್ಲ: ಶ್ರೀರಾಮುಲು

    ಉಪಮುಖ್ಯಮಂತ್ರಿ ಸ್ಥಾನ ಸಿಗದಿರುವುದಕ್ಕೆ ಯಾವುದೇ ಅಸಮಾಧಾನವಿಲ್ಲ: ಶ್ರೀರಾಮುಲು

    ಮಡಿಕೇರಿ: ಸಚಿವ ಸಂಪುಟ ವಿಸ್ತರಣೆ ಸಂದರ್ಭ ಉಪಮುಖ್ಯಮಂತ್ರಿ ಸ್ಥಾನ ಸಿಗದಿರುವುದಕ್ಕೆ ಯಾವುದೇ ಅಸಮಾಧಾನವಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

    ಮಡಿಕೇರಿಯಲ್ಲಿ ಮಾತನಾಡಿದ ಅವರು, ಬೇರೆ ಪಕ್ಷಗಳಿಂದ ಶಾಸಕರು ಬರುವಾಗ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಅದರಂತೆ ಅವರಿಗೆ ಸಚಿವ ಸ್ಥಾನ ಕೊಡಲಾಗುತ್ತಿದೆ. ನಾನು ಕಾರ್ಯಕ್ರಮದಿಂದ ಹೊರಗುಳಿದಿರುವುದಕ್ಕೆ ಬೇರೆ ಅರ್ಥ ಬೇಡ. ಮನೆಯಲ್ಲಿ ನನ್ನ ಮಗಳ ಲಗ್ನವಿರುವುದರಿಂದ ಅದರ ತಯಾರಿಯಲ್ಲಿ ನಾನಿದ್ದೇನೆ ಎಂದರು.

    ಇನ್ನು ಇದರಲ್ಲಿ ಮೂಲ ಬಿಜೆಪಿಗರು, ವಲಸಿಗ ಬಿಜೆಪಿಗರು ಎನ್ನುವ ಪ್ರಶ್ನೆಯೇ ಇಲ್ಲ. ಅವರೆಲ್ಲರೂ ಪಕ್ಷದ ಸದಸ್ಯತ್ವ ಪಡೆದು ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಅವರಿಗೆ ಸಚಿವ ಸ್ಥಾನ ಕೊಡಲಾಗುತ್ತಿದೆ. ನಮ್ಮ ನಾಯಕರಾದ ಯಡಿಯೂರಪ್ಪನವರು ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು.

    ನೀವು ಉಪಮುಖ್ಯಮಂತ್ರಿ ಸ್ಥಾನದ ಅಕ್ಷಾಂಕ್ಷಿಯಾಗಿದ್ದವರು ಎಂಬ ಪ್ರಶ್ನೆಗೆ ಪಕ್ಷ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಪ್ರತಿಕ್ರಿಯಿಸಿದರು.

  • ನಾಯಕ ಸಮಾಜಕ್ಕೆ ಡಿಸಿಎಂ ಹುದ್ದೆ ನೀಡ್ಬೇಕು ಆದ್ರೆ ಸಿಎಂ ಒತ್ತಡದಲ್ಲಿದ್ದಾರೆ: ಪ್ರತಾಪ್ ಗೌಡ ಪಾಟೀಲ್

    ನಾಯಕ ಸಮಾಜಕ್ಕೆ ಡಿಸಿಎಂ ಹುದ್ದೆ ನೀಡ್ಬೇಕು ಆದ್ರೆ ಸಿಎಂ ಒತ್ತಡದಲ್ಲಿದ್ದಾರೆ: ಪ್ರತಾಪ್ ಗೌಡ ಪಾಟೀಲ್

    ರಾಯಚೂರು: ಸಮಾಜ ಅಂತ ಬಂದಾಗ ನಾಯಕ ಸಮಾಜಕ್ಕೆ ಡಿಸಿಎಂ ಹುದ್ದೆ ನೀಡಬೇಕು. ಆದರೆ ಈಗ ಸಿಎಂ ಒತ್ತಡದಲ್ಲಿದ್ದಾರೆ. ಮೂರು ಜನರನ್ನ ಡಿಸಿಎಂ ಮಾಡಿದ್ದೆ ತಪ್ಪು, ನಾಲ್ಕನೆಯ ಡಿಸಿಎಂ ಮಾಡಿದರೆ ನಾಯಕ ಸಮಾಜಕ್ಕೆ ನೀಡಬೇಕು ಅಂತ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.

    ಮಸ್ಕಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರ ಮುಂದಿನ ಮೂರು ವರ್ಷ ಪೂರ್ಣಗೊಳಿಸುತ್ತದೆ. ಸಚಿವ ಸಂಪುಟದ ವಿಸ್ತರಣೆ 2-3 ದಿನಗಳಲ್ಲಿ ಆಗುತ್ತದೆ. ಸೋತವರಿಗೂ ಸಚಿವ ಸ್ಥಾನ ನೀಡಬೇಕು. ಆದರೆ ವಿಶ್ವನಾಥ್ ರಿಗೆ ಚುನಾವಣೆ ಸ್ಪರ್ಧಿಸಬಾರದೆಂದು ಹೇಳಿದ್ದರು. ಮುಂದಿನ ದಿನಗಳಲ್ಲಿ ವಿಧಾನಪರಿಷತ್ ಸ್ಥಾನ ಖಾಲಿಯಾದಾಗ ಅವರಿಗೆ ಸಚಿವ ಸ್ಥಾನ ನೀಡಬಹುದು ಅಂತ ತಿಳಿಸಿದರು.

    ನಾವು 17 ಜನರು ಒಟ್ಟಾಗಿದ್ದೇವೆ, ನಮ್ಮಲ್ಲಿ ಒಡಕಿಲ್ಲ. ಯಡಿಯೂರಪ್ಪ ಮೂರು ಸ್ಥಾನಗಳನ್ನು ಬಿಟ್ಟು ಸಚಿವ ಸಂಪುಟ ವಿಸ್ತರಿಸಲಿದ್ದಾರೆ. 17 ಜನರನ್ನು ಕರೆದು ಮಾತನಾಡುತ್ತೇನೆ ಎಂದಿದ್ದಾರೆ. ಆದರೆ ಇಲ್ಲಿಯವರೆಗೂ ನಮ್ಮನ್ನು ಕರೆದಿಲ್ಲ. ಇಂದು ನಾನು ಬೆಂಗಳೂರಿಗೆ ಹೋಗಲಿದ್ದೇನೆ. ನಂತರದಲ್ಲಿ ನಮಗೂ ಸಚಿವ ಸ್ಥಾನ ಸಿಗಲಿದೆ. ನ್ಯಾಯಾಲಯದಲ್ಲಿನ ಪ್ರಕರಣದಿಂದ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವಿಳಂಬವಾಗಿದೆ ಅಂತ ಪ್ರತಾಪ್ ಗೌಡ ಪಾಟೀಲ್ ಹೇಳಿದರು.

  • ಚಿಕ್ಕಮಗ್ಳೂರಲ್ಲೇ ಕಾರು ಬಿಟ್ಟು ಬೆಂಗ್ಳೂರಿಗೆ ಬಸ್ಸಲ್ಲಿ ಹೋಗ್ತೀನಿ: ಕಾರಜೋಳ

    ಚಿಕ್ಕಮಗ್ಳೂರಲ್ಲೇ ಕಾರು ಬಿಟ್ಟು ಬೆಂಗ್ಳೂರಿಗೆ ಬಸ್ಸಲ್ಲಿ ಹೋಗ್ತೀನಿ: ಕಾರಜೋಳ

    ಚಿಕ್ಕಮಗಳೂರು: ಪಕ್ಷ ಸೂಚಿಸಿದ್ರೆ ಸರ್ಕಾರಿ ಕಾರನ್ನು ಇಲ್ಲೇ ಬಿಟ್ಟು ಬಸ್ಸಿನಲ್ಲಿ ವಾಪಸ್ ಹೋಗ್ತೀನಿ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಪಕ್ಷ ಸೂಚಿಸಿದರೆ ಇಲ್ಲಿಂದಲೇ ಬಸ್ಸಿನಲ್ಲಿ ಹೋಗ್ತೀನಿ. ಜಾತಿ ಆಧಾರದ ಮೇಲೆ ಒತ್ತಡ ತರುವುದು ಸರಿಯಲ್ಲ ಎಂದ ಅವರು, ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲಿ ಆಗಲಿದೆ ಎಂದಿದ್ದಾರೆ.

    ಕೆಲ ವಿಷಯಗಳು ಪಕ್ಷದ ಆಂತರಿಕ ವಿಷಯ. ಸರ್ಕಾರ ಹಾಗೂ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕಾದಂತ ವಿಷಯ. ಪ್ರಧಾನಿ, ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಸೇರಿ ನಿರ್ಣಯ ಮಾಡುತ್ತಾರೆ. ಪಕ್ಷದ ನಿರ್ಣಯ ಹಾಗೂ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.  ಇದನ್ನೂ ಓದಿ:  ಸಿ.ಟಿ ರವಿ ನೋಡಿ ನನಗೆ ಹೊಟ್ಟೆ ಕಿಚ್ಚು: ಗೋವಿಂದ ಕಾರಜೋಳ

    ಯಾವುದೇ ರಾಜಕಾರಣಿಗೆ ಪಕ್ಷ ಅಂದ್ರೆ ತಾಯಿ ಇದ್ದಂತೆ. ಪಕ್ಷವು ಸದೃಢವಾಗಿರಲು ನಾವು ಪಕ್ಷದ ನಿರ್ಣಯಗಳನ್ನ ಗೌರವಿಸದಿದ್ರೆ ಬೆಳೆಯಲು ಸಾಧ್ಯವಿಲ್ಲ. ನಾವು ಪಕ್ಷದ ನಿಲುವಿಗೆ ಬದ್ಧರಾಗಿರ್ತೀವಿ. ಯಾವುದೇ ವ್ಯತ್ಯಾಸ ಮಾಡಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪಕ್ಷ ಒಪ್ಪಿದರೆ ರಾಜೀನಾಮೆ ನೀಡಲು ಸಿದ್ಧ: ಡಿಸಿಎಂ ಕಾರಜೋಳ 

    ಕೆಲವರು ಮುಖ್ಯ ಮಂತ್ರಿಯಾಗ್ತೀನಿ ಎಂದಿದ್ದಾರೆ. ಕೆಲವರು ಆಗಬೇಕು ನನಗೆ ಕೊಡಿ ಎಂದಿದ್ದಾರೆ. ಕೆಲವರು ನನಗೆ ಸಚಿವ ಸ್ಥಾನ ಬೇಕು ಎಂದಿದ್ದಾರೆ. ಅವು ಸಾಮಾನ್ಯವಾದ ಬೇಡಿಕೆಗಳು. ಅವುಗಳನ್ನ ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ ಎಂದಿದ್ದಾರೆ.

  • ಪಕ್ಷ ಒಪ್ಪಿದರೆ ರಾಜೀನಾಮೆ ನೀಡಲು ಸಿದ್ಧ: ಡಿಸಿಎಂ ಕಾರಜೋಳ

    ಪಕ್ಷ ಒಪ್ಪಿದರೆ ರಾಜೀನಾಮೆ ನೀಡಲು ಸಿದ್ಧ: ಡಿಸಿಎಂ ಕಾರಜೋಳ

    ವಿಜಯಪುರ: ಪಕ್ಷ ನಿರ್ಣಯ ಕೈಗೊಂಡರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿ, ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿದ ಅವರು, ಪಕ್ಷ ನಿರ್ಣಯ ಕೈಗೊಂಡರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದರು. ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿಗಳು ಮಾತನಾಡುತ್ತಾರೆ. ನಾನು ಪ್ರವಾಸದಲ್ಲಿ ಇರುವ ಕಾರಣ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಬಿಜೆಪಿ ಪಕ್ಷದ ನಿಷ್ಟಾವಂತ ಕಾರ್ಯಕರ್ತ. ನಾವು ಬೆಳೆದಿರುವುದೇ ಪಕ್ಷದಿಂದ. ಪಕ್ಷ ಯಾವುದೇ ನಿರ್ಣಯ ಕೈಗೊಂಡರೂ ಅದಕ್ಕೆ ನಾನು ಬದ್ಧ ಎಂದು ಹೇಳಿದರು.

    ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಹಾಗೂ ಸಿಎಂ ಯಡಿಯೂರಪ್ಪನವರು ಏನು ನಿರ್ಣಯ ಕೈಗೊಳ್ಳುತ್ತಾರೋ ಅದಕ್ಕೆ ನಾನು ಬದ್ಧ. ನನಗೆ ಸಚಿವ ಸ್ಥಾನ ಬಿಡು ಎಂದರೆ ಅತ್ಯಂತ ಖುಷಿಯಿಂದ ಬಿಟ್ಟುಕೊಡುತ್ತೇನೆ. ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ, ನಾನು ಸಚಿವ ಸ್ಥಾನ ಬಿಡಲು ಸಿದ್ಧ ಎಂದ ಡಿಸಿಎಂ ತಿಳಿಸಿದರು.

    ಡಿಸಿಎಂ ಸ್ಥಾನ ಹೆಚ್ಚಳ ಕುರಿತು ಪ್ರತಿಕ್ರಿಯಿಸಿ, ಡಿಸಿಎಂ ಸ್ಥಾನ ಹೆಚ್ಚಾಗಿರುವ ಪರಿಣಾಮ ಜನರಿಗೆ ಯಾವುದೇ ತೊಂದರೆ ಆಗಿಲ್ಲ. ಸಾರ್ವಜನಿಕರ ಜೊತೆ ನಾವೂ ಸಾರ್ವಜನಿಕರು. ಸಾಮಾನ್ಯ ಜನರಿಗೆ ಕೊಡುವ ವ್ಯವಸ್ಥೆ ನಮಗೆ ಕೊಡಿ ಎಂದು ನಾನು ಮೊದಲೇ ಹೇಳಿದ್ದೇನೆ ಎಂದರು. ಬಳಿಕ ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಜಯಪುರ ಜಿಲ್ಲೆಗೂ ಸ್ಥಾನ ಮಾನ ಸಿಗಬೇಕು ಎಂದ ಡಿಸಿಎಂ ಆಗ್ರಹಿಸಿದರು.