Tag: DCM

  • ಹೆಚ್ಚುವರಿ DCM ಹುದ್ದೆ ಸೃಷ್ಟಿಸಿದ್ರೆ ಲೋಕಸಭೆಗೆ ಅನುಕೂಲವಾಗಲಿದೆ ಅಂತ ಸಚಿವರ ಅಭಿಪ್ರಾಯ ಇದೆ: ಪರಮೇಶ್ವರ್

    ಹೆಚ್ಚುವರಿ DCM ಹುದ್ದೆ ಸೃಷ್ಟಿಸಿದ್ರೆ ಲೋಕಸಭೆಗೆ ಅನುಕೂಲವಾಗಲಿದೆ ಅಂತ ಸಚಿವರ ಅಭಿಪ್ರಾಯ ಇದೆ: ಪರಮೇಶ್ವರ್

    ಬೆಂಗಳೂರು: ಹೆಚ್ಚುವರಿ ಡಿಸಿಎಂ (DCM) ಹುದ್ದೆ ಸೃಷ್ಟಿ ಮಾಡಿದ್ರೆ ಲೋಕಸಭಾ ಚುನಾವಣೆಗೆ ಅನುಕೂಲ ಆಗಲಿದೆ ಅಂತ ಸುರ್ಜೇವಾಲ (Randeep Surjewala) ಬಳಿ ಹಲವು ಸಚಿವರು ಮನವಿ ಮಾಡಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ತಿಳಿಸಿದ್ದಾರೆ.

    ಸೋಮವಾರ ಸಚಿವರಿಂದ ಸುರ್ಜೇವಾಲ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ಸಭೆಯಲ್ಲಿ ಹಲವು ಸಚಿವರು ಡಿಸಿಎಂ ಹುದ್ದೆ ಬಗ್ಗೆ ಅಭಿಪ್ರಾಯ ಹೇಳಿದ್ದಾರೆ. ಮಂತ್ರಿಗಳನ್ನು ಸುರ್ಜೇವಾಲ ಕರೆದಿದ್ದರು. ಲೋಕಸಭಾ ಚುನಾವಣೆ ಬರುತ್ತಿದೆ. ನೀವು ಹಿರಿಯರು ಇದ್ದೀರಾ ಸಿರಿಯಸ್ ಆಗಿ ತಗೋಬೇಕು ಅಂತ ಚರ್ಚೆ ಮಾಡೋಕೆ ಕರೆದಿದ್ದರು. ಈ ವೇಳೆ ಕೆಲವರು ಡಿಸಿಎಂ ಮಾಡಿದರೆ ಅನುಕೂಲ ಆಗುತ್ತೆ ಅಂತ ಕೆಲ ಸಚಿವರು ಹೇಳಿದ್ರು. ಆದರೆ ಡಿಸಿಎಂ ಹುದ್ದೆ ವಿಷಯವಾಗಿಯೇ ಸಭೆ ಕರೆದಿರಲಿಲ್ಲ. ಡಿಸಿಎಂ ಮಾಡೋದು ಹೈಕಮಾಂಡ್‍ಗೆ ಬಿಟ್ಟ ವಿಚಾರ. ನಾವು ಸಲಹೆ ಮಾಡಬಹುದು. ಕೆಲವರು ಸಲಹೆ ಮಾಡಿದ್ದಾರೆ. ಸಲಹೆ ತೆಗೆದುಕೊಳ್ಳೋದು ಬಿಡೋದು ಹೈಕಮಾಂಡ್ ಬಿಟ್ಟ ವಿಚಾರ ಹೈಕಮಾಂಡ್ ಸಾಧಕ-ಬಾಧಕ ನೋಡಿ ಡಿಸಿಎಂ ಬಗ್ಗೆ ತೀರ್ಮಾನ ಮಾಡ್ತಾರೆ ಅಂತ ತಿಳಿಸಿದರು.

    ಡಿಸಿಎಂ ಹುದ್ದೆ ವಿಚಾರ ಪಕ್ಷದ ಆಂತರಿಕ ವಿಷಯ. ಹೈಕಮಾಂಡ್ ಇದೆ ಅದನ್ನ ತೀರ್ಮಾನ ಮಾಡುತ್ತದೆ. ನಿನ್ನೆ ನಾವು ಲೋಕಸಭೆ ಬಗ್ಗೆ ಚರ್ಚೆ ಮಾಡಿದ್ವಿ. ಅಭ್ಯರ್ಥಿಗಳು ಹೇಗೆ ಇರಬೇಕು. ಎಲೆಕ್ಷನ್ ತಂತ್ರಗಾರಿಕೆ ಹೇಗೆ ಮಾಡಬೇಕು ಅಂತ ಚರ್ಚೆ ಮಾಡಿದ್ವಿ. ನಮಗೆ ತಿಳಿದ ರೀತಿ ಹೇಳಿದ್ದೇನೆ.ನಾನು ಎರಡು ಬಾರಿ ಅಧ್ಯಕ್ಷನಾಗಿ ಎರಡು ಚುನಾವಣೆ ಎದುರಿಸಿದ್ದೆ. ಆ ವಿಚಾರಗಳನ್ನು ತಿಳಿಸಿದ್ದೇವೆ. ಅದು ಬಿಟ್ಟು ದೊಡ್ಡ ಪ್ರಮಾಣದ ಚರ್ಚೆ ಆಗಿಲ್ಲ ಅಂತ ಸ್ಪಷ್ಟಪಡಿಸಿದರು. ಹೆಚ್ಚು ಡಿಸಿಎಂ ಹುದ್ದೆ ಮಾಡಿದ್ರೆ ಲೋಕಸಭಾ ಚುನಾವಣೆಗೆ (Loksabha Election) ಫ್ಲಸ್ ಆಗುತ್ತದೆ. ಅದನ್ನ ನಿನ್ನೆ ಕೆಲವರು ಹೇಳಿದ್ವು. ಸುರ್ಜೇವಾಲ ಹೈಕಮಾಂಡ್ ಜೊತೆ ಚರ್ಚೆ ಮಾಡೋದಾಗ ಹೇಳಿದ್ರು ಅಂತ ತಿಳಿಸಿದರು. ಇದನ್ನೂ ಓದಿ: ಲೋಕಾ ಚುನಾವಣೆಗೆ ಬಿಜೆಪಿ ತಯಾರಿ – ಸಭೆಯಲ್ಲಿ ಏನಾಯ್ತು? ಇನ್‌ಸೈಡ್‌ ವರದಿ ಇಲ್ಲಿದೆ

  • ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಸಚಿವರ ಡಿನ್ನರ್‌ ಪಾಲಿಟಿಕ್ಸ್‌ – ಒಂದೂವರೆಗೆ ಗಂಟೆ ಏನು ಚರ್ಚೆ ನಡೆದಿದೆ?

    ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಸಚಿವರ ಡಿನ್ನರ್‌ ಪಾಲಿಟಿಕ್ಸ್‌ – ಒಂದೂವರೆಗೆ ಗಂಟೆ ಏನು ಚರ್ಚೆ ನಡೆದಿದೆ?

    ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ನಿವಾಸದಲ್ಲಿ ತಡರಾತ್ರಿ ಸಭೆ ಮಹತ್ವದ ಸಭೆ ನಡೆದಿದ್ದು ರಾಜ್ಯ ಕಾಂಗ್ರೆಸ್‌ನಲ್ಲಿ (Congress) ಮತ್ತೆ ಮುನ್ನಲೆಗೆ ಬರುತ್ತಾ ಹೆಚ್ಚುವರಿ ಡಿಸಿಎಂ (DCM) ಕೂಗು ಎಂಬ ಪ್ರಶ್ನೆ ಬಂದಿದೆ.

    ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್, ಹೆಚ್.ಸಿ ಮಹದೇವಪ್ಪ, ಕೆ.ಎನ್. ರಾಜಣ್ಣ, ದಿನೇಶ್ ಗುಂಡೂರಾವ್, ಕೆ.ಹೆಚ್. ಮುನಿಯಪ್ಪ ಅವರು ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಚರ್ಚೆ ನಡೆಸಿದ್ದಾರೆ.

    ಈ ಆರು ಸಚಿವರ ಸಭೆಯಲ್ಲಿ ಎರಡು ಪ್ರಮುಖ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಚಿವರ ಲೋಕಸಭೆ (Lok Sabha Election) ಸ್ಪರ್ಧೆಮಾಡಿದರೆ ಗೆಲುವು ಅನಿವಾರ್ಯ. ಗೆಲುವು ಅನಿವಾರ್ಯವಾಗಬೇಕಾದರೆ ಸಮುದಾಯಗಳ ವಿಶ್ವಾಸಕ್ಕೆ ಡಿಸಿಎಂ ದಾಳ ಉರುಳಿಸುವ ಬಗ್ಗೆ ಸಭೆಯಲ್ಲಿ ಕೆಲ ಚರ್ಚೆ ನಡೆದಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿ ಹೋರಾಟ – ಉದ್ದೇಶಪೂರ್ವಕವಾಗಿ ಸರ್ಕಾರದಿಂದಲೇ ಕೇಸ್‌ಗೆ ಮರುಜೀವ?

    ದಲಿತ ಡಿಸಿಎಂ ಮಾಡಿದರೆ ಉತ್ತಮ. ಲೋಕಸಭೆಗೆ ಸಚಿವರು ಸ್ಪರ್ಧಿಸುವುದು ಅನಿವಾರ್ಯವೇ?  ಲೋಕಸಭೆ ಸ್ಪರ್ಧೆ ಹಾಗೂ ಹೆಚ್ಚುವರಿ ಜಾತಿವಾರು ಕನಿಷ್ಠ 4 ಡಿಸಿಎಂ ಹುದ್ದೆ ಬೇಡಿಕೆ ಬಗ್ಗೆಯೂ ನಾಯಕರು ಚರ್ಚೆ ಮಾಡಿದ್ದಾರೆ.

    ಜನವರಿ 10 ರ ರಾಜ್ಯ ಕಾಂಗ್ರೆಸ್ ನಾಯಕರ ಲೋಕಸಭೆ ಸಂಬಂಧಿತ ಸಭೆ ನಂತರ ತಮ್ಮ ಬೇಡಿಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಬಗ್ಗೆ ಮಾತುಕತೆ ನಡೆದಿದೆ.

  • ಹಿಂದೂ ವಿರೋಧಿ ನೀತಿಯಿಂದ್ಲೇ ಲಿಂಗಾಯತರ ಕಡೆಗಣನೆ – ಉನ್ನತ ಹುದ್ದೆಯಲ್ಲಿ ಅಲ್ಪಸಂಖ್ಯಾತರೇ ಇದ್ದಾರೆ: ಯತ್ನಾಳ್‌ ಕಿಡಿ

    ಹಿಂದೂ ವಿರೋಧಿ ನೀತಿಯಿಂದ್ಲೇ ಲಿಂಗಾಯತರ ಕಡೆಗಣನೆ – ಉನ್ನತ ಹುದ್ದೆಯಲ್ಲಿ ಅಲ್ಪಸಂಖ್ಯಾತರೇ ಇದ್ದಾರೆ: ಯತ್ನಾಳ್‌ ಕಿಡಿ

    – ಶಾಮನೂರು ಶಿವಶಂಕರಪ್ಪ ಪರ ಬ್ಯಾಟ್ ಬೀಸಿದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್

    ವಿಜಯಪುರ:‌ ಪ್ರಸ್ತುತ ರಾಜ್ಯ ಸರ್ಕಾರದ ಹಿಂದೂ ವಿರೋಧಿ ಹಾಗೂ ಲಿಂಗಾಯತ ವಿರೋಧಿ ನೀತಿಯಿಂದ ಲಿಂಗಾಯತರ ಕಡೆಗಣನೆ ಆಗಿದೆ. ಉನ್ನತ ಹುದ್ದೆಗಳಲ್ಲಿ ಅಲ್ಪಸಂಖ್ಯಾತರನ್ನೇ ಕೂರಿಸಿ ಲಿಂಗಾಯತ ಅಧಿಕಾರಿಗಳಿಗೆ (lingayat Officers) ಅವಮಾನ ಮಾಡಲಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

    ವಿಜಯಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತರು ಸಿಎಂ ಆಗಬೇಕು ಎಂಬ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರ ಹೇಳಿಕೆಯನ್ನ ಸ್ವಾಗತಿಸಿದ್ದಾರೆ. ಈ ಬಾರಿ ಲಿಂಗಾಯತರು ಸಪೋರ್ಟ್‌ ಮಾಡಿದ್ದರಿಂದಲೇ ಕಾಂಗ್ರೆಸ್‌ಗೆ (Congress) 135 ಸ್ಥಾನ ಬಂದಿದೆ. ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಲಿಂಗಾಯತ ಅಧಿಕಾರಿಗಳಿಗೆ ಅವಮಾನ ಆಗಿರೋದು ನಿಜ. ಡಿಸಿ, ಎಸ್ಪಿ ಅಂತಹ ಉನ್ನತ ಹುದ್ದೆಗಳಲ್ಲಿ ಲಿಂಗಾಯತರು ಯಾರೂ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಸರ್ಕಾರದ ಹಿಂದೂ ವಿರೋಧಿ ಹಾಗೂ ಲಿಂಗಾಯತ ವಿರೋಧಿ ನೀತಿಯೇ ಇದಕ್ಕೆ ಕಾರಣ. ಎಲ್ಲ ಉನ್ನತ ಹುದ್ದೆಗಳನ್ನ ಅಲ್ಪಸಂಖ್ಯಾತರಿಗೆ ನೀಡಿ, ಲಿಂಗಾಯತ ಅಧಿಕಾರಿಗಳನ್ನ ಮೂಲೆಗುಂಪು ಮಾಡಿದ್ದಾರೆ. ಹಣಕಾಸು ಕಾರ್ಯದರ್ಶಿಯಿಂದ ಹಿಡಿದು ಸಿದ್ದರಾಮಯ್ಯನವರ ಮುಖ್ಯಮಂತ್ರಿ ಕಚೇರಿಯನ್ನೆಲ್ಲಾ ಅವರಿಗೇ ಕೊಟ್ಟಿದ್ದಾರೆ. ಅಲ್ಪಸಂಖ್ಯಾತರಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎನ್ನವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಲಿಂಗಾಯತ ಶಾಸಕರು ಕಾಂಗ್ರೆಸ್‌ನಲ್ಲಿ ಇದ್ದರೂ ಅವರಿಗೆ ಮಾತನಾಡಲು ಧಮ್‌ ಇಲ್ಲ, ಧೈರ್ಯ ಮಾಡೋದು ಇಲ್ಲ ಎಂದು ಲೇವಡಿ ಮಾಡಿದ್ದಾರೆ.

    ಬಿ.ಆರ್ ಪಾಟೀಲ್‌ ಆಳಂದ, ಬಸವರಾಜ ರಾಯರೆಡ್ಡಿ ಮಾತನಾಡಿ ಸುಮ್ಮನಾದರು. ನಮ್ಮಂತೆ ಮಾತನಾಡಿದ್ರೆ ಯಾಕೆ ಕೊಡೋದಿಲ್ಲ? ಶಾಮನೂರು ಶಿವಶಂಕರಪ್ಪನವರು ಸೋನಿಯಾಗಾಂಧಿ ಅವರ ಬಳಿ ಹೋಗಬೇಕು ಎಂದರಲ್ಲದೇ ಲಿಂಗಾಯತರಿಗೆ ಸ್ಥಾನಮಾನ ಕೊಡದೇ ಇದ್ದರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಿಸಿಎಂ ಆಗು ಎಂದರೇ ಆಗ್ತೀನಿ: ಎಂ.ಬಿ ಪಾಟೀಲ್

    ಡಿಸಿಎಂ ಆಗು ಎಂದರೇ ಆಗ್ತೀನಿ: ಎಂ.ಬಿ ಪಾಟೀಲ್

    ಬೆಂಗಳೂರು: ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡುವ ವಿಚಾರ ಹೈಕಮಾಂಡ್‍ಗೆ ಬಿಟ್ಟಿದ್ದು, ಒಂದು ವೇಳೆ ಹೈಕಮಾಂಡ್ ನನ್ನನ್ನ ಡಿಸಿಎಂ ಆಗು ಎಂದರೆ ಆಗುತ್ತೇನೆ ಎಂದು ಸಚಿವ ಎಂ.ಬಿ ಪಾಟೀಲ್ (M.B Patil) ಡಿಸಿಎಂ (DCM) ಪಟ್ಟದ ಆಸೆ ವ್ಯಕ್ತಪಡಿಸಿದ್ದಾರೆ.

    ಸಚಿವ ರಾಜಣ್ಣ ಅವರ 3 ಡಿಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇದು ರಾಜ್ಯ ಮಟ್ಟದಲ್ಲಿ ಆಗುವುದಿಲ್ಲ. ಹೈಕಮಾಂಡ್ ಮಟ್ಟದಲ್ಲಿ ಆಗಬೇಕು. ಹೈಕಮಾಂಡ್ ಮನಸ್ಸು ಮಾಡಿದರೆ ಮೂರು ಇಲ್ಲವೇ ನಾಲ್ಕು ಡಿಸಿಎಂ ಮಾಡಬಹುದು. ಇಲ್ಲವೇ ಮಾಡದೇಯೂ ಇರಬಹುದು. ಅಂತಿಮವಾಗಿ ಹೈಕಮಾಂಡ್ ಈ ಬಗ್ಗೆ ನಿರ್ಧಾರ ಮಾಡಲಿದೆ ಎಂದಿದ್ದಾರೆ. ಇದನ್ನೂ ಓದಿ: ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು: M.B ಪಾಟೀಲ್

    3 ಡಿಸಿಎಂ ಬೇಕಾ? ಬೇಡವಾ? ಎಂದು ನಾನು ಪಕ್ಷದ ಸಭೆಯಲ್ಲಿ ಹೇಳುತ್ತೇನೆ. ರಾಜಣ್ಣ ಅವರ ಹೇಳಿಕೆಯ ಸಾಧಕ-ಬಾಧಕ ನೋಡಿಕೊಂಡು ಹೈಕಮಾಂಡ್ ತೀರ್ಮಾನ ಮಾಡಲಿದೆ. ಈ ಚುನಾವಣೆಯಲ್ಲಿ ಎಲ್ಲಾ ಸಮುದಾಯ ಕಾಂಗ್ರೆಸ್ ಜೊತೆ ನಿಂತಿದೆ. ಹೀಗಾಗಿ 135 ಸ್ಥಾನ ಬಂದಿದೆ. ರಾಜಣ್ಣ ಅವರು ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಹೇಳಿದ್ದಾರೆ. ಅಂತಿಮವಾಗಿ ಹೈಕಮಾಂಡ್ ಇದರ ಬಗ್ಗೆ ತೀರ್ಮಾನ ಮಾಡುತ್ತದೆ. 135 ಸೀಟು ಜನ ಬಹುಮತ ಕೊಟ್ಟಿದ್ದಾರೆ. ರಾಜ್ಯ ಚುನಾವಣೆ ವಿಷಯ ಬೇರೆ, ಲೋಕಸಭೆ ವಿಷಯ ಬೇರೆ. ಕೇಂದ್ರ, ವಿಧಾನಸಭೆಯಲ್ಲಿ ಬೇರೆ ಬೇರೆ ವಿಷಯದ ಆಧಾರದಲ್ಲಿ ನಡೆಯುತ್ತದೆ. ಈ ವಿಷಯದಲ್ಲಿ ಹಿನ್ನಡೆ ಆಗುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ 15-20 ಕ್ಷೇತ್ರ ಗೆಲ್ಲಲಿದೆ. ಎಷ್ಟೋ ಕಡೆ ಬಿಜೆಪಿಗೆ ಅಭ್ಯರ್ಥಿಗಳೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

    ಡಿಸಿಎಂ ಹುದ್ದೆ ವಿಚಾರವಾಗಿ, ಎಲ್ಲರಿಗೂ ಆಸೆ ಇದ್ದೇ ಇರುತ್ತದೆ. ಆದರೆ ದುರಾಸೆ ಇರಬಾರದು. ಹೈಕಮಾಂಡ್ ಡಿಸಿಎಂ ಆಗಿ ಎಂದರೆ ಆಗುತ್ತೇನೆ. ಆದರೆ ಕೂಸು ಹುಟ್ಟೋಕು ಮುನ್ನ ಕುಲಾವಿ ಹೊಲಿಸೋದು ಬೇಡ. ರಾಜಣ್ಣ ಹೇಳಿದ್ದು ತಪ್ಪಲ್ಲ, ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಅಭಿಪ್ರಾಯ ಹೇಳೋಕೆ ಅವಕಾಶ ಇದೆ. ರಾಜಣ್ಣ ಹೇಳಿಕೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅನೇಕ ಸಮುದಾಯಕ್ಕೆ ರಾಜಕೀಯ ಸ್ಥಾನ ನೀಡಲು ಇನ್ನೂ ಆಗಿಲ್ಲ. ಸವದಿ, ರಾಯರೆಡ್ಡಿ, ದೇಶಪಾಂಡೆ, ಜಯಚಂದ್ರ ಎಲ್ಲರೂ ಮಂತ್ರಿ ಆಗೋಕೆ ಸಮರ್ಥರು. ನಂಬರ್ ಸೀಮಿತ ಆಗಿರುವುದರಿಂದ ಮಂತ್ರಿಗೆ ಸೀಮಿತ ಮಾಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಎರಡು ಸಲ ನೀರು ಬಿಟ್ಟು ಈಗ ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ: ಬೊಮ್ಮಾಯಿ ಆಕ್ರೋಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೋಕಸಭೆ ಗೆಲುವಿಗೆ 3 ಡಿಸಿಎಂ ಹುದ್ದೆ ಸೃಷ್ಟಿ ಅಗತ್ಯ – ಮತ್ತೆ ಸಂಚಲನ ಮೂಡಿಸಿದ ರಾಜಣ್ಣ ಮಾತು

    ಲೋಕಸಭೆ ಗೆಲುವಿಗೆ 3 ಡಿಸಿಎಂ ಹುದ್ದೆ ಸೃಷ್ಟಿ ಅಗತ್ಯ – ಮತ್ತೆ ಸಂಚಲನ ಮೂಡಿಸಿದ ರಾಜಣ್ಣ ಮಾತು

    ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ಸಂಘರ್ಷ ತೀವ್ರಗೊಂಡಿದೆ. ಮೂರು ಡಿಸಿಎಂ ಹುದ್ದೆ (DCM Post) ಸೃಷ್ಟಿಸಬೇಕು ಎಂಬ ಸಿಎಂ ಬಣದ ಪ್ರತಿಪಾದನೆ ಪಕ್ಷದೊಳಗೆ ಕಿಚ್ಚು ಹಚ್ಚಿದೆ. ಆದರೆ ಇದ್ಯಾವುದಕ್ಕೂ ಸಿದ್ದರಾಮಯ್ಯ (Siddaramaiah) ಬಣದ ಸಚಿವರು ಸೊಪ್ಪು ಹಾಕುತ್ತಿಲ್ಲ. ಬದಲಾಗಿ ಈ ವಿವಾದವನ್ನು ಇನ್ನಷ್ಟು ತೀವ್ರಗೊಳಿಸಲು ಯತ್ನಿಸುತ್ತಿದ್ದಾರೆ.

    ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಮತ್ತೊಮ್ಮೆ ಮೂರು ಡಿಸಿಎಂ ಹುದ್ದೆ ಸೃಷ್ಟಿಸಬೇಕು ಎಂದು ಪ್ರತಿಪಾದಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ (Lok Sabaha Election) ಹೆಚ್ಚು ಸ್ಥಾನ ಗೆಲ್ಲಬೇಕು ಅಂದ್ರೆ ಮೂರು ಡಿಸಿಎಂ ಹುದ್ದೆ ಸೃಷ್ಟಿ ಅತ್ಯಗತ್ಯ. ಒಂದೊಮ್ಮೆ ಕಡಿಮೆ ಸೀಟ್ ಗೆದ್ದರೆ ರಾಜ್ಯದಲ್ಲಿ ಸರ್ಕಾರವೇ ವಿಸರ್ಜನೆ ಆಗಬಹುದು ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.  ಇದನ್ನೂ ಓದಿ: ಸಂವಿಧಾನ ಪೀಠಿಕೆಯಲ್ಲಿ ಸಮಾಜವಾದಿ, ಜಾತ್ಯಾತೀತ ಪದಗಳೇ ಮಾಯ – ಕೇಂದ್ರ ಹಂಚಿದ ಪ್ರತಿಗಳು ಸೃಷ್ಟಿಸಿವೆ ಸಂಚಲನ

    ನನ್ನ ಹೇಳಿಕೆ ಹಿಂದೆ ಸಿಎಂ ಸಿದ್ದರಾಮಯ್ಯ ಪಾತ್ರವಿಲ್ಲ. ಮೂರು ಡಿಸಿಎಂ ಸೃಷ್ಟಿಸಿದ್ರೆ ಡಿಕೆ ಶಿವಕುಮಾರ್ (DK Shivakumar) ಪ್ರಾಮುಖ್ಯತೆಯೂ ಕಡಿಮೆ ಆಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಸದುದ್ದೇಶದಿಂದ ಈ ಸೂತ್ರ ಮುಂದಿಟ್ಟಿದ್ದೇನೆ ಅಷ್ಟೇ ಎಂದು ಕೆಎನ್ ರಾಜಣ್ಣ ಸ್ಪಷ್ಟಪಡಿಸಿದ್ದಾರೆ. ಕೆಎನ್ ರಾಜಣ್ಣ ಅವರ ಮಾತುಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ.

    ಮೂರು ಡಿಸಿಎಂ ಹುದ್ದೆ ಸೃಷ್ಟಿಸಬೇಕು ಎಂಬ ಕೆಎನ್ ರಾಜಣ್ಣ ಬೇಡಿಕೆ ಬಗ್ಗೆ ಕಾಂಗ್ರೆಸ್ ನಾಯಕರು ಎಚ್ಚರಿಕೆಯ ಪ್ರತಿಕ್ರಿಯೆ ನೀಡತೊಡಗಿದ್ದಾರೆ. ಈ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಸಚಿವರಾದ ಕೆಹೆಚ್ ಮುನಿಯಪ್ಪ, ಸಂತೋಷ್ ಲಾಡ್ ಜಾರಿಕೊಂಡಿದ್ದಾರೆ.

     

    ರಾಜಣ್ಣ ಹೇಳಿಕೆಯನ್ನು ಬಿಜೆಪಿ (BJP) ಅಸ್ತ್ರ ಮಾಡಿಕೊಳ್ಳಲು ನೋಡಿದೆ. ರಾಜಣ್ಣ ಮೂಲಕ ಈ ಅಸ್ತ್ರವನ್ನು ಅತೀಂದ್ರ ಶಕ್ತಿಗಳು ಪ್ರಯೋಗಿಸಿವೆ. ಇದರ ಹಿಂದಿನ ಉದ್ದೇಶ ಡಿ.ಕೆ. ಶಿವಕುಮಾರ್ ಹಾವಳಿ ಕಡಿಮೆ ಮಾಡುವುದಾಗಿದೆ. ಮೂರು ಡಿಸಿಎಂ ಅಗತ್ಯವಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೂ ಈ ಮನವಿಗೆ ಹೈಕಮಾಂಡ್ ಸ್ಪಂದಿಸಿದ್ರೆ ಏನು ಗತಿ ಎಂಬ ಭಯ ಹಾಲಿ ಡಿಸಿಎಂಗೆ ಇದೆ. ಇದನ್ನು ತಪ್ಪಿಸಲು ತಮ್ಮ ಸಹೋದರನನ್ನು ದೆಹಲಿಗೆ ಕಳಿಸಿದ್ದಾರೆ ಎಂದು ಬಿಜೆಪಿ ಟ್ವೀಟಿಸಿದೆ.

    ಡಿಕೆ ಶಿವಕುಮಾರ್‌ಗೆ ಅವಮಾನ ಮಾಡಲೆಂದೇ ಸಿದ್ದರಾಮಯ್ಯ ಬೆಂಬಲಿಗರು ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎಂದು ಮಾಜಿ ಮಂತ್ರಿ ಕೆಎಸ್ ಈಶ್ವರಪ್ಪ ಆರೋಪ ಮಾಡಿದ್ದಾರೆ. ಈ ಬಗ್ಗೆ ಟೀಕೆ ಮಾಡಿದ್ದ ಸಿಟಿ ರವಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ. ಸೋತುಸುಣ್ಣವಾಗಿರೋ ಸಿಟಿ ರವಿ ಸುಮ್ಮನಿದ್ದರೆ ಒಳ್ಳೆಯದು ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಲ್ಲಾ ವಿಘ್ನಕ್ಕೆ ನಾಯಕ ವಿನಾಯಕ, ಎಲ್ಲರಿಗೂ ಸಮಾಧಾನ ತರಲಿ – 3 ಡಿಸಿಎಂ ಹುದ್ದೆ ಹೇಳಿಕೆಗೆ ಡಿಕೆಶಿ ಅಸಮಾಧಾನ

    ಎಲ್ಲಾ ವಿಘ್ನಕ್ಕೆ ನಾಯಕ ವಿನಾಯಕ, ಎಲ್ಲರಿಗೂ ಸಮಾಧಾನ ತರಲಿ – 3 ಡಿಸಿಎಂ ಹುದ್ದೆ ಹೇಳಿಕೆಗೆ ಡಿಕೆಶಿ ಅಸಮಾಧಾನ

    ಬೆಂಗಳೂರು: ಸಚಿವ ರಾಜಣ್ಣ ಅವರ 3 ಡಿಸಿಎಂ ಹುದ್ದೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಅವರೇ ಉತ್ತರ ಕೊಡ್ತಾರೆ ಅಂತ ಡಿಕೆ ಶಿವಕುಮಾರ್ (DK Shivakumar), ರಾಜಣ್ಣ ಹೇಳಿಕೆಗೆ ಆಕ್ರೋಶ ಹೊರ ಹಾಕಿದ್ದಾರೆ.

    ಸಚಿವ ರಾಜಣ್ಣ (KN Rajanna) ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಚಿವ ರಾಜಣ್ಣ ಹೇಳಿಕೆ ಹಾಗೂ ಪರಮೇಶ್ವರ್ (G Parameshwar) ಸ್ವಾಗತ ಮಾಡಿರೋದು ಬಹಳ ಸಂತೋಷ. ಎಲ್ಲಾ ವಿಘ್ನಕ್ಕೆ ನಾಯಕ ವಿನಾಯಕ. ಎಲ್ಲರ ಮನಸ್ಸಿಗೆ ಸಮಾಧಾನವಾಗಲಿ ಅಂತ ಅಸಮಾಧಾನ ಹೊರಹಾಕಿದ್ರು. ಇದನ್ನೂ ಓದಿ: ಗೋವಿಂದ ಬಾಬು ಪೂಜಾರಿಗೆ ಬೈದಿದ್ದೇನೆ: ಸೂಲಿಬೆಲೆ ಫಸ್ಟ್ ರಿಯಾಕ್ಷನ್

    ನನ್ನನ್ನ ನೇಮಕ ಮಾಡಿರೋದು ಸಿಎಂ, ರಾಜ್ಯಪಾಲರ ಅಡ್ವೈಸ್ ಮೇಲೆ ಮಾಡಿದ್ದಾರೆ. ಮುಖ್ಯಮಂತ್ರಿಗಳೇ ಇದಕ್ಕೆಲ್ಲ ಉತ್ತರ ಕೊಡ್ತಾರೆ. ಲೋಕಸಭೆ ಚುನಾವಣೆ (Lok Sabha Election) ಹೊತ್ತಲ್ಲಿ ಡಿಸಿಎಂ ಹೇಳಿಕೆ ಯಾಕೆ ಅಂತ ನಮಗೆ ಗೊತ್ತಿಲ್ಲ. ಯಾಕೆ ಅಂತ ನೀವು ರಾಜಣ್ಣ ಅವರನ್ನ ಕೇಳಬೇಕು. ಇಲ್ಲವೇ ಸಿಎಂ ಅವರನ್ನ ಕೇಳಬೇಕು. ನಾವೆಲ್ಲ ಸಿಎಂ ಕೆಳಗಡೆ ಕೆಲಸ ಮಾಡ್ತಿದ್ದೇವೆ ಅವರೇ ಉತ್ತರ ಕೊಡ್ತಾರೆ ಎಂದರು. ಇದನ್ನೂ ಓದಿ: ದೇಶದ ಶ್ರೀಮಂತ ಗಣೇಶನಿಗೆ ಬರೋಬ್ಬರಿ 360 ಕೋಟಿ ಇನ್ಶುರೆನ್ಸ್‌; 69 ಕೆಜಿ ಚಿನ್ನ, 336 ಕೆಜಿ ಬೆಳ್ಳಿ ಅಲಂಕಾರ’

    ಇನ್ನೂ ಸಿದ್ದರಾಮಯ್ಯ ಬಣದ ಆಪ್ತರಿಂದ ಡಿಕೆ ವಿರುದ್ಧ ಡಿಸಿಎಂ ಕಾರ್ಡ್ ಪ್ಲೇ ಮಾಡ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನ ರಾಜಕೀಯ ಜೀವನದಲ್ಲಿ ನಾನು ಯಾವತ್ತಿಗೂ ಬಣ ರಾಜಕೀಯ ಮಾಡಿಲ್ಲ. ನಾನು ಬಣ ರಾಜಕೀಯಕ್ಕೆ ಬೆಂಬಲ ಕೊಟ್ಟಿಲ್ಲ. ನನಗೆ ಬಣದ ಅವಶ್ಯಕತೆ ಇಲ್ಲ. ಬಣ ಮಾಡಬೇಕಿದ್ದರೆ ಎಸ್.ಎಂ ಕೃಷ್ಣ ಕಾಲದಲ್ಲಿ, ಬಂಗಾರಪ್ಪ ಕಾಲದಲ್ಲಿ ಮಾಡ್ತಿದ್ದೆ. ನನ್ನದು ಒಂದೇ ಒಂದು ಬಣ ಕಾಂಗ್ರೆಸ್ ಬಣ ಎಂದು ಸ್ಪಷ್ಟಪಡಿಸಿದ್ದಾರೆ.

    ಸಚಿವ ರಾಜಣ್ಣ ಮಾತಾಡಿರೋ ಬಗ್ಗೆ ಉತ್ತರ ಕೊಡಿ ಅಂತ ಕೇಳಬೇಕಿರೋದು ಸಿಎಂ ಹಾಗೂ ಹೈಕಮಾಂಡ್, ಹರಿಪ್ರಸಾದ್ ಏನೋ ಮಾತಾಡಿದ್ರು ಅವರು ವರ್ಕಿಂಗ್ ಕಮಿಟಿ ಸದಸ್ಯರು. ಅವರಿಗೆ ಹೈಕಮಾಂಡ್ ಇದೆ. ನನ್ನ ಲೆವಲ್ ನಲ್ಲಿ ಯಾರ್ ಮಾತಾಡಬೇಕೋ ಅವರಿಗೆ ಮಾತಾಡುತ್ತೇನೆ. ಯಾರಿಗೆ ಕೇಳಬೇಕೋ ವರಿಗೆ ಮುಲಾಜಿಲ್ಲದೆ ಕೇಳ್ತೀನಿ ಎಂದು ಗುಡುಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • DCM ಹುದ್ದೆಗೆ ಹೆಚ್ಚು ಮಹತ್ವ ಕೊಡಬಾರದು, ಅದು ಸಾಂವಿಧಾನಿಕ ಹುದ್ದೆಯಲ್ಲ: ಟಿ.ಬಿ ಜಯಚಂದ್ರ

    DCM ಹುದ್ದೆಗೆ ಹೆಚ್ಚು ಮಹತ್ವ ಕೊಡಬಾರದು, ಅದು ಸಾಂವಿಧಾನಿಕ ಹುದ್ದೆಯಲ್ಲ: ಟಿ.ಬಿ ಜಯಚಂದ್ರ

    ಬೆಂಗಳೂರು: ಉಪ ಮುಖ್ಯಮಂತ್ರಿ (DCM) ಹುದ್ದೆಯು ಸಾಂವಿಧಾನಿಕ ಹುದ್ದೆ ಅಲ್ಲ. ಅದಕ್ಕೆ ಹೆಚ್ಚು ಮಹತ್ವ ಕೊಡಬಾರದು ಎಂದು ಮಾಜಿ ಸಚಿವರೂ ಆಗಿರುವ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ (TB Jayachandra) ತಿಳಿಸಿದ್ದಾರೆ.

    3 ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕು ಎಂಬ ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಚಿವ ರಾಜಣ್ಣ (Rajanna) ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಪತ್ರ ಬರೆಯುತ್ತೇನೆ ಅಂತ ಹೇಳಿದ್ದಾರೆ. ಅದು ಸಲಹೆ ರೂಪದಲ್ಲಿ ಕೊಟ್ಟಿರಬಹುದು ಎಂದಿದ್ದಾರೆ. ಇದನ್ನೂ ಓದಿ: ಜನ್ಮದಿನದಂದು ದೆಹಲಿಯಲ್ಲಿ ಮೋದಿ ಮೆಟ್ರೋ ರೈಡ್ – ಪ್ರಯಾಣಿಕರೊಂದಿಗೆ ಸೆಲ್ಫಿ

    ಡಿಸಿಎಂ ಹುದ್ದೆಗೆ ಹೆಚ್ಚು ಮಹತ್ವ ಕೊಡಬಾರದು. ಏಕೆಂದರೆ ಅದು ಸಾಂವಿಧಾನಿಕ ಹುದ್ದೆ ಅಲ್ಲ. ಸರ್ಕಾರ ಆಗಿ ನಾವು ನೋಡಬೇಕಾದ ಕೆಲಸ ತುಂಬಾ ಇದೆ. ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಬೇಕು. ಹೀಗಾಗಿ ಅದಕ್ಕೆ ಹೇಗೆ ಹಣ ಸಂಗ್ರಹ ಮಾಡಬೇಕು ಅನ್ನೋದರ ಬಗ್ಗೆ ಗಮನಹರಿಸಬೇಕು. ಗ್ಯಾರಂಟಿ ಯೋಜನೆ ಜೊತೆಗೆ ಬೇರೆ ಬೇರೆ ಅಭಿವೃದ್ಧಿ ಕೆಲ‌ಸ ಮಾಡುವ ಬಗ್ಗೆಯೂ ಗಮನ ಕೊಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಗೀತಾ ಬಿಜಲಾನಿ ಜೊತೆ ಸಲ್ಮಾನ್ ಮದುವೆ ಕ್ಯಾನ್ಸಲ್ ಆಗಿದ್ಯಾಕೆ- ಅಷ್ಟಕ್ಕೂ ಆಗಿದ್ದೇನು?

    ಲೋಕಸಭೆ ಚುನಾವಣೆ ಸಮಯದಲ್ಲಿ ಇದಕ್ಕೆ ಪ್ರಾಮುಖ್ಯತೆ ಕೊಡಬಾರದು. ಅವರ ಹೇಳಿಕೆ ರಾಜಕೀಯವಾಗಿ ಪ್ರಸ್ತುತ ಇರುತ್ತದೆ. ಅಂತಿಮವಾಗಿ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತದೆ. ರಾಜಣ್ಣ ಹೇಳಿಕೆಗೆ ಸಹಮತ ಅಂತ ಹೇಳುವುದಿಲ್ಲ. ಡಿಸಿಎಂ ಹುದ್ದೆಗೆ ಸಾಂವಿಧಾನಿಕ ಮಾನ್ಯತೆ ಇಲ್ಲ. ರಾಜಕೀಯವಾಗಿ ಡಿಸಿಎಂ ಹುದ್ದೆ ಸ್ಕೋಪ್ ಇರುತ್ತದೆ. ಅಂತಿಮವಾಗಿ ಹೈಕಮಾಂಡ್ ಎಲ್ಲವನ್ನ ತೀರ್ಮಾನ ಮಾಡುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇನ್ನೂ 3 ಡಿಸಿಎಂ ಬೇಕು ಅಂತ ರಾಜಣ್ಣ ಕೇಳೋದ್ರಲ್ಲಿ ಏನು ತಪ್ಪಿದೆ: ಜಿ.ಪರಮೇಶ್ವರ್ ಪ್ರಶ್ನೆ

    ಇನ್ನೂ 3 ಡಿಸಿಎಂ ಬೇಕು ಅಂತ ರಾಜಣ್ಣ ಕೇಳೋದ್ರಲ್ಲಿ ಏನು ತಪ್ಪಿದೆ: ಜಿ.ಪರಮೇಶ್ವರ್ ಪ್ರಶ್ನೆ

    ಬೆಂಗಳೂರು: ಮೂರು ಡಿಸಿಎಂ ಸ್ಥಾನ ನೀಡಬೇಕು ಎಂಬ ಸಚಿವ ರಾಜಣ್ಣ ಮಾತನ್ನ ಗೃಹ ಸಚಿವ ಡಾ. ಜಿ.ಪರಮೇಶ್ವರ್ (G.Parameshwar) ಸಹ ಸಮರ್ಥಿಸಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ರಾಜಣ್ಣ ಕೇಳೋದ್ರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.

    ಸಿಎಂಗೂ ಹೈಕಮಾಂಡ್‌ಗೂ ಅವರೇ ತಿಳಿಸಬೇಕು. ಅವರ ವೈಯಕ್ತಿಕ ಅಭಿಪ್ರಾಯ, ಅವರ ಅನಿಸಿಕೆ ಬಗ್ಗೆ ಅವರೇ ಹೇಳಬೇಕು. ಡಿಸಿಎಂ ಮಾಡಬೇಕು ಎಂಬ ಅವರ ಉದ್ದೇಶ ಒಳ್ಳೆಯದೆ. ಲೋಕಸಭೆ ಚುನಾವಣೆ ಮುಂಚೆ ಸಮುದಾಯಗಳಿಗೆ ಡಿಸಿಎಂ ಮಾಡಬೇಕು ಅಂತ ರಾಜಣ್ಣ ಹೇಳಿದ್ದಾರೆ. ತೀರ್ಮಾನ ಮಾಡುವವರು ಬಿಡುವವರು ಎಐಸಿಸಿ ನಾಯಕರು. ಡಿಸಿಎಂ ಸ್ಥಾನ ಮಾಡುವ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿರುವುದು ಎಂದಿದ್ದಾರೆ. ಇದನ್ನೂ ಓದಿ: 42 ನಕಲಿ ಕಾಮಗಾರಿ ಬಿಲ್‌ – ED, ಲೋಕಾಯುಕ್ತಕ್ಕೆ ಮಾಜಿ ಸಚಿವ ಮುನಿರತ್ನ ದೂರು

    ಚೈತ್ರಾ ಕುಂದಾಪುರ ಪ್ರಕರಣ ಕುರಿತು ಮಾತನಾಡಿ, ನಿನ್ನೆ ಸ್ವಲ್ಪ ಡ್ರಾಮಾ ಎಲ್ಲ ನಡೆದಿತ್ತಲ್ಲ. ಇಲಾಖೆಯವರು ಹ್ಯಾಂಡಲ್ ಮಾಡ್ತಾ ಇದ್ದಾರೆ. ಸಂಪೂರ್ಣ ತನಿಖೆ ಆದ ಮೇಲೆ ಎಲ್ಲ ವಿಚಾರ ನಿಮಗೆ ತಿಳಿಸುತ್ತೇವೆ. ತನಿಖೆ ಎಲ್ಲ ಹೊರಬರಲಿ ಯಾರ ಯಾರದು ಲಿಂಕ್ ಇದೆ? ಅವರೇ ಹಣ ತೆಗೆದುಕೊಂಡಿದ್ರಾ? ಬೇರೆಯವರಿಗೆ ಕೊಟ್ಟಿದ್ರಾ? ಎಲ್ಲ ತನಿಖೆ ಬಳಿಕ ಹೊರ ಬರುತ್ತದೆ. ಸ್ವಾಮೀಜಿಯನ್ನು ಹುಡುಕುತ್ತಿದ್ದಾರೆ, ಇನ್ನೂ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

    ಕಾವೇರಿ ನೀರಿನ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ, ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿ, ತಿಳಿದೂ ತಿಳಿದೂ ಹೋರಾಟ ಮಾಡ್ತೀವಿ ಅನ್ನೋದು ರಾಜಕೀಯ. ಕಾವೇರಿ ನೀರನ್ನು ಯಾರ ಅದೇಶದ ಮೇಲೆ ‌ಬಿಡುತ್ತಿದ್ದಾರೆ ಎನ್ನುವುದು ಯಡಿಯೂರಪ್ಪಗೆ ಚೆನ್ನಾಗಿ ಗೊತ್ತಿರಬೇಕಲ್ಲ. ಎಲ್ಲ ಗೊತ್ತಿದ್ದೂ ಯಡಿಯೂರಪ್ಪ ಮಾಜಿ ಸಿಎಂ ಆಗಿ, ಅಷ್ಟು ಸೀನಿಯರ್ ಆಗಿ ಹೋರಾಟ ಮಾಡ್ತೀವಿ ಎನ್ನುವುದು ಸರಿಯಾ? ಒಳಗಡೆ ನಾವು ರಾಜಕೀಯ ಮಾಡಲ್ಲ ಅಂತ ಹೇಳ್ತಾರೆ. ಹೊರಗಡೆ ಬಂದು ಹೋರಾಟ ಮಾಡ್ತೀವಿ ಅಂತಾರೆ ಬಿಜೆಪಿಯವರು. ಇದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪ್ರಣವಾನಂದ ಶ್ರೀಗಳ ಕ್ಷಮೆ ಕೋರುವಂತೆ ಸಚಿವ ಮಧು ಬಂಗಾರಪ್ಪಗೆ ಈಡಿಗ ಮಹಾಮಂಡಳಿ ಆಗ್ರಹ

    ನಮ್ಮಲ್ಲಿ ಮರಳು ದಂಧೆ ನಡೆಯುತ್ತಿಲ್ಲ. ಮರಳು ದಂಧೆಗೆ ವಿರುದ್ಧವಾಗಿರುವವನು ನಾನು. ಒಂದೇ ಒಂದು ಲಾರಿಯೂ ತಾಲೂಕಿಂದ ಹೊರಗಡೆ ತೆಗೆದುಕೊಂಡು ಹೋಗುವುದಕ್ಕೆ ಬಿಡುವುದಿಲ್ಲ. ಯಾರಾದರು ಒಂದು ವೇಳೆ ಅಟ್ಯಾಕ್ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ಹಿಂದೆ ಕಲಬುರಗಿಯಲ್ಲಿ ಆದ ವಿಚಾರಕ್ಕೆ ಕ್ರಮ ತೆಗೆದುಕೊಂಡಿದ್ದೇವೆ. ಪೊಲೀಸ್ ರೆವೆನ್ಯು ಎಲ್ಲ ಇಲಾಖೆಯವರು ಸೇರಿ ಮರಳು ದಂಧೆ ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಪುಟ ಸಭೆಗೂ ಮುನ್ನ ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಸಿಎಂ ಡಿಕೆಶಿ ದಂಪತಿ

    ಸಂಪುಟ ಸಭೆಗೂ ಮುನ್ನ ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಸಿಎಂ ಡಿಕೆಶಿ ದಂಪತಿ

    – ದೇವಾಲಯದ ಕುಂಭಾಭಿಷೇಕದಲ್ಲಿ ಡಿಕೆ ಶಿವಕುಮಾರ್‌ ದಂಪತಿ ಭಾಗಿ, ಹೋಮ-ಹವನ ನೆರವೇರಿಕೆ

    ರಾಮನಗರ: ಕನಕಪುರ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಯ್ಯಪ್ಪಸ್ವಾಮಿ ದೇವಾಲಯದ (AyyappaSwamy Temple) ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ದಂಪತಿ ಭಾಗಿಯಾಗಿದ್ದಾರೆ.

    ಗುರುವಾರ ರಾತ್ರಿ ಸ್ವಕ್ಷೇತ್ರ ಕನಕಪುರಕ್ಕೆ (Kanakapura) ಭೇಟಿ ನೀಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ತಮ್ಮ ಆಪ್ತನ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಬಳಿಕ ಅಯ್ಯಪ್ಪಸ್ವಾಮಿ ದೇವಾಲಯದ ಕುಂಭಾಭಿಷೇಕ ಮಹೋತ್ಸವಕ್ಕೆ ಆಗಮಿಸಿ ಹೋಮ-ಹವನ ನೆರವೇರಿಸಿದ್ದಾರೆ. ಇದನ್ನೂ ಓದಿ: ಐದರ ಪೈಕಿ 3 ಗ್ಯಾರಂಟಿ ಆರಂಭದಲ್ಲಿ ಜಾರಿ – ಷರತ್ತುಗಳು ಏನಿರಬಹುದು?

    ನಂತರ ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ ದೇವಾಲಯದಲ್ಲೇ ಪ್ರಸಾದ ಸೇವಿಸಿದ್ದಾರೆ. ಶುಕ್ರವಾರ (ಜೂ.2) ಸಚಿವ ಸಂಪುಟ ಸಭೆ (Cabinet Meeting) ಹಿನ್ನೆಲೆ ತಡರಾತ್ರಿಯೇ ಬೆಂಗಳೂರಿಗೆ ವಾಪಸ್ಸ್ ಆಗಿದ್ದಾರೆ. ಜೂ.3ರಂದು ಕನಕಪುರ ಕ್ಷೇತ್ರದ ಮತದಾರರಿಗೆ ಅಭಿನಂದನೆ ತಿಳಿಸಲು ವಿಶೇಷ ಸಭೆಗಳನ್ನ ಹಮ್ಮಿಕೊಂಡಿದ್ದು ಇಡೀ ದಿನ ಕ್ಷೇತ್ರದೆಲ್ಲೆಡೆ ಡಿಸಿಎಂ ಪ್ರವಾಸ ಕೈಗೊಳ್ಳಲಿದ್ದಾರೆ. ಇದನ್ನೂ ಓದಿ: 1948ರಲ್ಲಿ ಪಾಕಿಸ್ತಾನಿ ಮೂಲಭೂತವಾದಿಗಳಿಂದ ಹಾನಿಗೊಳಗಾಗಿದ್ದ ಶಾರದಾ ಮಂದಿರ ಪುನರ್‌ ನಿರ್ಮಾಣ – ಶೃಂಗೇರಿ ಶ್ರೀ ಭೇಟಿ

  • ಗೃಹಲಕ್ಷ್ಮಿ ಹಣ ಯಾರಿಗೆ ಅಂತ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತೆ: ಹೆಬ್ಬಾಳ್ಕರ್ ಹೇಳಿಕೆ ಒಪ್ಪದ ಡಿಕೆಶಿ

    ಗೃಹಲಕ್ಷ್ಮಿ ಹಣ ಯಾರಿಗೆ ಅಂತ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತೆ: ಹೆಬ್ಬಾಳ್ಕರ್ ಹೇಳಿಕೆ ಒಪ್ಪದ ಡಿಕೆಶಿ

    – ಗೊಂದಲ ಮೂಡಿಸದಂತೆ ಮಂತ್ರಿಗಳಿಗೆ ಎಚ್ಚರಿಕೆ

    ಬೆಂಗಳೂರು: ಗೃಹಲಕ್ಷ್ಮಿ (Gruhalakshmi) ಹಣ ಯಾರಿಗೆ ಅಂತ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ಮನೆಯ ಯಜಮಾನಿ ಯಾರು ಅಂತ ನಾವು ನಿರ್ಧಾರ ಮಾಡೋಕಾಗುತ್ತಾ? ಮನೆಯ ಯಜಮಾನಿ ಯಾರು ಅಂತ ಆಯಾ ಮನೆಯವರೇ ನಿರ್ಧರಿಸುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿಕೆ ನೀಡಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಡಿಕೆಶಿ, ಅತ್ತೆಯೇ ಮನೆಗೆ ಯಜಮಾನಿ ಎಂದಿದ್ದ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಮನೆಯ ಯಜಮಾನಿ ಯಾರು ಅಂತ ನಾವು ನಿರ್ಧಾರ ಮಾಡಲು ಸಾಧ್ಯವಿಲ್ಲ. ಮನೆಯ ಯಜಮಾನಿ ಯಾರು ಅಂತ ಆಯಾ ಮನೆಯವರೇ ನಿರ್ಧರಿಸುತ್ತಾರೆ. ಅತ್ತೆನಾ, ಸೊಸೆನಾ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸುತ್ತದೆ. ಈ ಬಗ್ಗೆ ಯಾವುದೇ ಮಂತ್ರಿಗಳು ಮಾತನಾಡಿ ಗೊಂದಲ ಮೂಡಿಸದಂತೆ ಸೂಚಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನಕ್ಸಲರಿಗಿಂತ ಸಿ.ಟಿ ರವಿಯೇ ಡೇಂಜರ್: ಎಸ್.ಎಲ್ ಭೋಜೇಗೌಡ

    ಒಮ್ಮೆಲೆ ಎಲ್ಲ 5 ಗ್ಯಾರಂಟಿಗಳ ಜಾರಿಯಾಗುತ್ತೋ ಇಲ್ವೋ ಎಂಬುದನ್ನು ನಾನು ಬಹಿರಂಗಪಡಿಸಲ್ಲ. ಆರ್ಥಿಕ ಇಲಾಖೆ ಅಧಿಕಾರಿಗಳು 4-5 ಆಯ್ಕೆ ಕೊಟ್ಟಿದ್ದಾರೆ. ನಾವು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಸಂಪುಟ ಸಭೆಯಲ್ಲಿ ಚರ್ಚಿಸಿ, ಯೋಜನೆಗಳನ್ನು ಹೇಗೆ ಜಾರಿಗೊಳಿಸೋದು ಎಂಬುದನ್ನು ನಿರ್ಧರಿಸುತ್ತೇವೆ. ನುಡಿದಂತೆ ನಡೆಯುತ್ತೇವೆ, ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳುತ್ತೇವೆ. ಎಲ್ಲವನ್ನೂ ಕ್ರಮಬದ್ಧವಾಗಿ ಜಾರಿ ಮಾಡುತ್ತೇವೆ ಎಂದರು.

    ವಿಪಕ್ಷಗಳು ಏನೇ ಮಾತಾಡಲಿ, ಒತ್ತಡ ಹಾಕಲಿ. ಅವರಿಗೆ ಮಾತನಾಡುವ ಸ್ವಾತಂತ್ರ‍್ಯ ಇದೆ. ಬಿಜೆಪಿಯವರು 15 ಲಕ್ಷ ರೂ. ಕೊಡುತ್ತೇವೆ ಎಂದಿದ್ದರು. ನಾವು ರಾಜ್ಯ, ಮತದಾರರನ್ನು ಉಳಿಸುವ ಕೆಲಸ ಮಾಡುತ್ತೇವೆ. ಷರತ್ತುಗಳು ಇವೆಯೋ ಇಲ್ಲವೋ ಎಂಬುದು ಮುಖ್ಯ ಅಲ್ಲ. ಪ್ರತಿಯೊಂದಕ್ಕೂ ಒಂದು ವ್ಯವಸ್ಥೆ ಅಗತ್ಯ. ವ್ಯವಸ್ಥಿತವಾಗಿ ಜಾರಿ ಮಾಡ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಜೋಶ್‍ನಲ್ಲಿ ನನಗೂ ಫ್ರೀ ನಿನಗೂ ಫ್ರೀ ಅಂತ ಹೇಳಿದ್ದಾರೆ: ಶಿವಲಿಂಗೇ ಗೌಡ