Tag: DCM

  • ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂಬ ಹೇಳಿಕೆಗೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ

    ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂಬ ಹೇಳಿಕೆಗೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ

    ತುಮಕೂರು: ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಂತ ಹೇಳಿಲ್ಲ. ನನ್ನ ಬಾಯಲ್ಲಿ ಯಾಕೆ ಹೇಳಿಸ್ತೀರಿ. ಮುಖ್ಯಮಂತ್ರಿಗಳು ಇದ್ದಾರೆ. ಹೀಗಾಗಿ ಅದರ ವಿಚಾರವನ್ನೇ ಮಾತನಾಡಬಾರದು ಅಂತ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

    ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಮುಖ್ಯಮಂತ್ರಿಗಳು ಇದ್ದಾರೆ. ಸರ್ಕಾರ ಇದೆ. ಮತ್ತೆ ಯಾಕೆ ಈಗ ಮುಖ್ಯಮಂತ್ರಿಗಳ ವಿಚಾರ ಮಾತನಾಡುತ್ತಿದ್ದೀರಿ ಅಂತ ಪ್ರಶ್ನಿಸಿದ್ರು.

    ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿಯೇ ಸರ್ಕಾರ ರಚನೆ ಮಾಡಿದ್ದೇವೆ. ಸುಮ್ನೆ ಬಾಯಿ ಚಪಲಕ್ಕೆ ಈ ರೀತಿ ಎಲ್ಲ ಮಾತನಾಡುತ್ತಾರೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪ್ರಶ್ನೆಯೇ ಇಲ್ಲ. ಅವರ್ಯಾರು ಬೆಳಗಾವಿಯಲ್ಲಿ ನಿಮಗೆ ಸಿಎಂ ಆಗೋ ಸಾಮಥ್ರ್ಯ ಇದೆ ಅಂತ ಹೇಳಿದ್ರು. ಅದಕ್ಕೆ ನಾನು ಹೌದಪ್ಪ ಆ ಸಾಮಥ್ರ್ಯ ನನಗೆ ಇದೆ ಅಂತ ಹೇಳಿದ್ದೆ. ಅದರಲ್ಲೇನೂ ತಪ್ಪಿಲ್ಲ. ಸಿಎಂ ಸ್ಥಾನ ಕೊಟ್ಟರೆ ಆಮೇಲೆ ನೋಡೋಣ ಅಂತ ಹೇಳಿದ್ರು.

    ಇದೇ ವೇಳೆ ಕಬ್ಬು ಬೆಳೆಗಾರರ ಪ್ರತಿಭಟನೆ ವಿಚಾರದ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರತಿ ಟನ್ ಗೆ ನಿಗದಿ ಪಡಿಸುವ ಎಫ್.ಆರ್.ಪಿ(ನ್ಯಾಯ ಹಾಗೂ ಲಾಭದಾಯಕ) ಬೆಲೆ ಏರುಪೇರಾಗುತ್ತದೆ. ಅದರ ಮೇಲೆ ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿನ ಬೆಲೆ ನಿಗದಿಪಡಿಸುತ್ತಾರೆ. ಕೆಲವು ಸಂದರ್ಭ ಎಫ್.ಆರ್.ಪಿ ಬೆಲೆಗಿಂತ ಹೆಚ್ಚು ಸಿಗುತ್ತೆ, ಕಡಿಮೆಯೂ ಸಿಗುತ್ತದೆ. ಕಾರ್ಖಾನೆಗಳು ರೈತರೊಂದಿಗೆ ಮಾಡಿಕೊಂಡ ಒಪ್ಪಂದಗಳಂತೆ ನಡೆದುಕೊಳೋದಿಲ್ಲ. ರೈತರಿಗೆ ಸಹಾಯ ಮಾಡೋಕೆ ಅಂತಾ ಕಾರ್ಖಾನೆಗಳಿಗೆ ಸರ್ಕಾರ ಹಣ ನೀಡಿದೆ. ಕಳೆದ ಬಾರಿ ಸಿದ್ದರಾಮಯ್ಯ ಅವರು 450 ರೂಪಾಯಿ ಬೆಂಬಲ ನೀಡಿದ್ದಾರೆ ಅಂತ ಹೇಳಿದ್ರು.

    2017-18 ನಡೆದ ಒಪ್ಪಂದದ ಹಣ ಕೊಟಿಲ್ಲ ಅಂತಾ ರೈತರು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಈಗಾಗಲೇ ರೈತರೊಂದಿಗೆ, ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿದೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಅಂತಿಮವಾಗಿ ತೀರ್ಮಾನಿಸಲಾಗುವುದು. ಕೇಂದ್ರ ಸರ್ಕಾರ ದರ ನಿಗದಿಪಡಿಸುವುದರಿಂದ ಅವರು ಸ್ಪಂದಿಸಬೇಕಿದೆ. ಬಿಜೆಪಿಗೆ ರೈತರ ಬಗ್ಗೆ ಮಾತನಾಡೋ ಯಾವುದೇ ನೈತಿಕತೆ ಇಲ್ಲ. ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕೋದು ಬೇಡ. ರಾಜ್ಯದ ರೈತರ ಸಮಸ್ಯೆ ಅಂತಾ ಕೇಂದ್ರಕ್ಕೆ ಹೋದಾಗ ಯಾವುದೇ ರೀತಿ ಸ್ಪಂದಿಸಿಲ್ಲ. ರಾಜಕೀಯಕ್ಕಾಗಿ ರೈತರ ಪರವಾಗಿ ಮಾತಾಡ್ತಾರೆ ಅಂತ ವಿರೋಧ ಪಕ್ಷದ ವಿರುದ್ಧ ಕಿಡಿಕಾರಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ದೊಡ್ಡವರ ದೋಖಾ- ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯೆ

    ದೊಡ್ಡವರ ದೋಖಾ- ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯೆ

    -ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡ ನಾಯಕರ ಬಗ್ಗೆ ಪರಂ ಹೇಳಿದ್ದು ಹೀಗೆ

    ಬೆಂಗಳೂರು: ಕೂಡಲೇ ಬಾಕಿ ಉಳಿಸಿಕೊಂಡಿರುವ ತೆರಿಗೆ ವಸೂಲಿ ಮಾಡುವಂತೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಸೂಚನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯಲ್ಲಿ ದೊಡ್ಡವರ ದೋಖಾ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತ ಡಿಸಿಎಂ, ಯಾವ ಒತ್ತಡಕ್ಕೂ ಮಣಿಯದೆ ಈ ವರ್ಷದ ಅಂತ್ಯದ ವೇಳೆಗೆ ಬಾಕಿ ಉಳಿದಿರುವ ತೆರಿಗೆಯನ್ನು ವಸೂಲಿ ಮಾಡುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

    ಒಟ್ಟು 2 ಸಾವಿರ ಕೋಟಿ ಬಾಕಿ ಅಸ್ತಿ ತೆರಿಗೆ ಇರುವ ಹಿನ್ನೆಲೆಯಲ್ಲಿ ಕೂಡಲೇ ವಸೂಲಿ ಮಾಡಿ ವರದಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡೋದಾಗಿ ಪಬ್ಲಿಕ್ ಟಿವಿಗೆ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

    ಈ ವರ್ಷಕ್ಕೆ 3 ಸಾವಿರ ಕೋಟಿ ಆಸ್ತಿ ತೆರಿಗೆಯನ್ನು ಅಂದಾಜು ಮಾಡಿದ್ದೇವೆ. ಅದರಲ್ಲಿ ಸುಮಾರು 2 ಸಾವಿರದ 31 ಕೋಟಿ ರೂ. ಸಂಗ್ರಹಿಸಿದ್ದೇವೆ. ಇನ್ನು ಮಾರ್ಚ್ ತಿಂಗಳೊಳಗೆ 3 ಸಾವಿರ ಕೋಟಿ ರೂ. ಹಣವನ್ನು ಸಂಗ್ರಹಿಸುತ್ತೇವೆ. ಕಳೆದ ವರ್ಷ ಆಸ್ತಿ ತೆರಿಗೆ ಸಂಗ್ರಹಿಸುವ ಕೆಲಸ ಬಹಳಷ್ಟು ಬಾಕಿ ಉಳಿದಿದೆ. ಸುಮಾರು 2 ಸಾವಿರ ಕೋಟಿ ರೂ ಬಾಕಿ ಉಳಿದಿದೆ ಅಂತ ಅಂದಾಜಿಸಲಾಗಿದೆ. ಹೀಗಾಗಿ ಈ ಕುರಿತು ಪ್ರತ್ಯೇಕ ಸಭೆ ಕರೆದು ಹಣಕಾಸಿನ ವ್ಯವಹಾರ ನೋಡಿಕೊಳ್ಳುವ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಅಂದ್ರು.

    ಇಂತಿಷ್ಟು ದಿವಸದೊಳಗೆ ತೆರಿಗೆ ಹಣ ಸಂಗ್ರಹಿಸಬೇಕು ಅಂತ ತಿಳಿಸಿದ್ದೇನೆ. ಕಳೆದ ಒಂದೂವರೆ ತಿಂಗಳಲ್ಲೇ 350 ಕೋಟಿ ರೂ. ಸಂಗ್ರಹಿಸಿದ್ದಾರೆ. ಆದುದರಿಂದ ಸಂಗ್ರಹಿಸುವ ಪ್ರಕ್ರಿಯೆ ನಡೀತಾ ಇದೆ. ಒಟ್ಟಿನಲ್ಲಿ ಮಾರ್ಚ್ ಒಳಗಾಗಿ ಎಲ್ಲಾ ತೆರಿಗೆ ಹಣವನ್ನು ಸಂಗ್ರಹಿಸಲಾಗುವುದು ಅಂತ ಅವರು ತಿಳಿಸಿದ್ರು.

    ಇದೇ ಸಂದರ್ಭದಲ್ಲಿ ರೈತರ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಇವತ್ತಿನ ರೈತ ಮುಖಂಡರೊಂದಿಗೆ ಸಭೆಯಲ್ಲಿ ಪರಿಹಾರ ಸಿಗುವ ವಿಶ್ವಾಸವಿದೆ. ರೈತರ ಹಿತ ನಮ್ಮ ಸರ್ಕಾರಕ್ಕೆ ಬಹಳ ಮುಖ್ಯವಾದದ್ದಾಗಿದೆ. ಬಿಜೆಪಿಯಿಂದ ರೈತರ ಬಗ್ಗೆ ಪಾಠ ಕಲಿಯಬೇಕಿಲ್ಲ. ಹಸಿರು ಕ್ರಾಂತಿ ನೀತಿ ಮಾಡಿದ್ದೇ ಕಾಂಗ್ರೆಸ್. ಯಾರೇ ಬಾಕಿ ಉಳಿಸಿಕೊಂಡಿದ್ದರೂ ರೈತರಿಗೆ ನೀಡಬೇಕಾದ ಹಣ ನೀಡಬೇಕು. ಇಲ್ಲಿ ಶಾಸಕರು ಅಂತ ನೋಡಲ್ಲ ಅವರನ್ನ ಕಾರ್ಖಾನೆಯ ಮಾಲೀಕರು ಅಂತ ನೋಡೋದು. ಬಾಕಿ ಪಾವತಿಸುವ ಬಗ್ಗೆ ಗಡುವ ನೀಡುತ್ತೇವೆ ಅದು ಅವರಿಗೂ ಅನ್ವಹಿಸುತ್ತದೆ ಅಂತ ಅವರು ನುಡಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಕೈಬಿಡಲ್ಲ- ಸಿಎಂ

    ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಕೈಬಿಡಲ್ಲ- ಸಿಎಂ

    ಬೆಂಗಳೂರು/ತುಮಕೂರು: ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆಯನ್ನು ಕೈಬಿಡಲ್ಲ ಅಂತ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಟಿಪ್ಪು ಜಯಂತಿ ಆಚರಣೆ ನಿಲ್ಲಿಸಲ್ಲ. ಅಂತಹ ಯೋಚನೆಯೂ ನಮ್ಮ ಬಳಿ ಇಲ್ಲ. ನನಗೆ ಅನಾರೋಗ್ಯದ ನಿಮಿತ್ತ ವೈದ್ಯರ ಸಲಹೆಯ ಮೇರೆಗೆ ನಾನು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆ. ಹೀಗಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಆದ್ರೆ ಯಾವುದೇ ಕಾರಣಕ್ಕೂ ಆಚರಣೆಯನ್ನು ಮಾಡೋದನ್ನು ನಿಲ್ಲಿಸುವುದಿಲ್ಲ ಅಂತ ತಿಳಿಸಿದ್ದಾರೆ.

    ಮುಂದಿನ ವರ್ಷಗಳಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಿಯೇ ಆಚರಿಸ್ತೀವಿ. ಅದನ್ನು ವಿರೋಧಿಸುವ ಅಜೆಂಡಾವೇ ಇಲ್ಲ. ಮುಖ್ಯಮಂತ್ರಿಗಳು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಲೇ ಬೇಕು ಅಂತ ಏನಿಲ್ಲ ಅಂತ ಸಿಎಂ ಖಡಕ್ ಆಗಿಯೇ ನುಡಿದಿದ್ದಾರೆ. ಭಾರೀ ವಿರೋಧದ ನಡುವೆಯೂ ನವೆಂಬರ್ 10 ರಂದು ರಾಜ್ಯಾದ್ಯಂತ ಟಿಪ್ಪು ಜಯಂತಿಯನ್ನು ಆಚರಿಸಲಾಗಿತ್ತು. ಕೆಲವೆಡೆ ಆಚರಣೆ ವಿರುದ್ಧ ಪ್ರತಿಭಟನೆಗಳು ನಡೆದಿತ್ತು.

    ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಮಾತನಾಡಿದ ಡಿಸಿಎಂ ಪರಮೇಶ್ವರ್, ಯಾರನ್ನೂ ನಾವು ಟಾರ್ಗೆಟ್ ಮಾಡಿಲ್ಲ. ಟಿಪ್ಪುಜಯಂತಿ ಸರ್ಕಾರಿ ಕಾರ್ಯಕ್ರಮವಾಗಿದೆ. ಇದಕ್ಕೆ ಟೀಕೆ ಟಿಪ್ಪಣಿಗಳನ್ನ ಮಾಡಬಹುದು. ಆದ್ರೆ ಅವಹೇಳನಕಾರಿ ಹೇಳಿಕೆಗಳನ್ನ ನೀಡಬಾರದು. ಹೇಳಿಕೆ ಯಾರೇ ನೀಡಿದ್ರೂ ಕಾನೂನು ಕ್ರಮಕ್ಕೆ ನಾವೇ ಸೂಚಿಸಿದ್ದೀವಿ ಅಂದ್ರು.

    ಇದೇ ವೇಳೆ ಹಿಂದೂ ದೇವರ ಮೇಲೆ ಚಿಂತಕ ಭಗವಾನ್ ಅವಹೇಳನಕಾರಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅವರ ಮೇಲೂ ಕ್ರಮ ಕೈಗೊಳ್ತೀವಿ. ಯಾರೂ ಪ್ರಚೋದನಕಾರಿಯಾಗಿ ಮಾತಾಡ್ತಾರೋ ಅಂಥವರ ಮೇಲೆ ನಾವು ಕ್ರಮ ಕೈಗೊಳ್ತೇವೆ ಅಂತ ತಿಳಿಸಿದ್ರು.

    ಟಿಪ್ಪು ಜಯಂತಿ ಆಚರಣೆ ಮುಂದಿನ ವರ್ಷ ಆಚರಣೆ ಬೇಕೋ ಬೇಡವೋ ಎಂಬ ವಿಚಾರದ ಕುರಿತು ಯಾವ ಸಮನ್ವಯ ಸಮಿತಿಯಲ್ಲೂ ಅದರ ಚರ್ಚೆ ಆಗಿಲ್ಲ. ಅದು ಮುಂದಿನ ವರ್ಷಕ್ಕೆ ನೋಡಿಕೊಳ್ಳೋಣ ಅಂತ ಅವರು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಒಬ್ಬ ಮಂತ್ರಿ ಸತ್ರೆ ಏನೂ ಆಗಲ್ಲ, ಸಾವಿರ ಜನ ಸತ್ತರೆ ಗತಿಯೇನು..? – ಸರ್ಕಾರದ ವಿರುದ್ಧ ಸಾಣೆಹಳ್ಳಿ ಮಠದ ಶ್ರೀಗಳು ಗರಂ

    ಒಬ್ಬ ಮಂತ್ರಿ ಸತ್ರೆ ಏನೂ ಆಗಲ್ಲ, ಸಾವಿರ ಜನ ಸತ್ತರೆ ಗತಿಯೇನು..? – ಸರ್ಕಾರದ ವಿರುದ್ಧ ಸಾಣೆಹಳ್ಳಿ ಮಠದ ಶ್ರೀಗಳು ಗರಂ

    ಚಿತ್ರದುರ್ಗ: ಸಾವಿರಾರು ಜನ ಭಕ್ತರು ಸ್ವೀಕರಿಸುವ ಪ್ರಸಾದವನ್ನು ಪರೀಕ್ಷಿಸದ ಪೊಲೀಸರು, ಕೇವಲ ಓರ್ವ ಮಂತ್ರಿ ಸೇವಿಸುವ ಆಹಾರವನ್ನು ಪರೀಕ್ಷಿಸಿದ್ದು ದುರಂತವೆಂದು ಸಾಣೆಹಳ್ಳಿಯ ತರಳುಬಾಳು ಗುರುಪೀಠ ಶಾಖಾ ಮಠ ಪಂಡಿತಾರಾದ್ಯ ಸ್ವಾಮೀಜಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಚಿತ್ರದುರ್ಗದ ಸಾಣೆಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಭಾಗಿಯಾಗಿದ್ದರು. ರಾತ್ರಿ ಭೋಜನವನ್ನು ಶ್ರೀಮಠದಲ್ಲಿ ಸವಿಯುವ ಮೂಲಕ ಸರ್ಕಾರ ಹಾಗು ಸಾಣೆಹಳ್ಳಿ ಮಠದ ನಡುವೆ ಕುಮಾರಸ್ವಾಮಿ ಪ್ರಮಾಣ ವಚನದ ವೇಳೆ ಅಳಿಸಿ ಹೋಗಿದ್ದ ಸಂಬಂಧವನ್ನು ಮತ್ತೆ ಸರಿಪಡಿಸಲು ಯತ್ನಿಸಿದ್ರು.

    ಉಪ ಮುಖ್ಯಮಂತ್ರಿ ಸವಿಯುವ ಆಹಾರದ ಪರೀಕ್ಷೆಯನ್ನು ಮಠದಲ್ಲೂ ಪಾಲನೆ ಮಾಡಿದ ಅಧಿಕಾರಿಗಳ ವಿರುದ್ಧ ಸಾಣೆ ಹಳ್ಳಿ ಶ್ರೀಗಳು ಗುಡುಗಿದ್ದಾರೆ. ಮಂತ್ರಿ ಒಬ್ಬರು ಸತ್ತರೆ ಏನು ಆಗಲ್ಲ. ಸಾವಿರಾರು ಜನ ಭಕ್ತರು ಸತ್ತರೆ ಗತಿ ಏನು ಅಂತ ಪ್ರಶ್ನಿಸಿದ್ರು.

    ಅಲ್ಲದೇ ಮತವನ್ನು ಹಾಕುವವರೆಗೂ ಪ್ರಜೆಗಳೆ ಪ್ರಭುಗಳು ಅನ್ನೋ ಈ ರಾಜಕಾರಣಿಗಳು, ಮತ ಕೊಟ್ಟ ಮೇಲೆ ಮತದಾರರೆಲ್ಲ ಇವರಿಗೆ ದಾಸರಾಗಬೇಕಿದೆ ಅಂತ ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸಮ್ಮುಖದಲ್ಲೇ ಸರ್ಕಾರದ ನಡೆಯ ಬಗ್ಗೆ ಟೀಕಿಸಿದ್ರು.

    ಜೊತೆಗೆ ಭಾಷಣದ ವೇಳೆ ಪೋಡಿಯಂ ಬಳಕೆ ಸರಿಯಲ್ಲ. ರಾಜಕಾರಣಿಗಳು ಜನರ ಮಧ್ಯೆ ಇರಬೇಕೇ ಹೊರೆತು ಪೋಡಿಯಂ ಮಧ್ಯೆಯಲ್ಲ. ನಮ್ಮ ದೇಶದಲ್ಲಿ ಪೋಡಿಯಂ ಸಂಸ್ಕೃತಿ ಸರಿಯಲ್ಲ. ಈ ಸಂಸ್ಕೃತಿ ಜನರು ಮತ್ತು ರಾಜಕಾರಣಿಗಳ ಸಂಬಂಧವನ್ನು ಬೇರ್ಪಡಿಸಿ ಅನಾಹುತ ಸೃಷ್ಟಿಸಿದೆ. ಈ ಸರ್ಕಾರ, ಮಠಗಳು, ಅಧಿಕಾರಿಗಳು ಅವನತಿಯ ಕಡೆ ಸಾಗುತ್ತಿದ್ದಾರೆ. ಅಭಿವೃದ್ಧಿಯ ಸದಾಶಯ ಎಲ್ಲೂ ಇಲ್ಲ ಅಂತ ಭಾಷಣದ ವೇಳೆ ಉಪ ಮುಖ್ಯಮಂತ್ರಿ ಪರಮೇಶ್ವರ್ ಸಮ್ಮುಖದಲ್ಲೇ ಮಾತಿನ ಚಾಟಿ ಬೀಸುವ ಮೂಲಕ ರಾಜಕಾರಿಣಿಗಳ ನಡೆಗೆ ಬೇಸರ ವ್ಯಕ್ತಪಡಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಸ್ತು ಪ್ರಕಾರದಂತೆ ಡಿಸಿಎಂ ಸರ್ಕಾರಿ ಬಂಗಲೆ ಚೇಂಜ್- 25 ಕೋಟಿಯ ಮನೆಯಿದ್ರೂ ಕೂಗಳತೆಯಲ್ಲಿ ಬಂಗಲೆ!

    ವಾಸ್ತು ಪ್ರಕಾರದಂತೆ ಡಿಸಿಎಂ ಸರ್ಕಾರಿ ಬಂಗಲೆ ಚೇಂಜ್- 25 ಕೋಟಿಯ ಮನೆಯಿದ್ರೂ ಕೂಗಳತೆಯಲ್ಲಿ ಬಂಗಲೆ!

    ಬೆಂಗಳೂರು: ಜನ ಸತ್ತರೂ ಚಿಂತೆ ಇಲ್ಲ, ರೋಡಿಗಿಳಿದ್ರೆ ಝೀರೋ ಟ್ರಾಫಿಕ್ ದರ್ಬಾರು ಮಾಡಿ ಚರ್ಚೆಗೀಡಾಗಿದ್ದ ಉಪ ಮುಖ್ಯಮಂತ್ರಿ ಪರಮೇಶ್ವರ್, ಇದೀಗ ಸ್ವಂತ ಮನೆಯಿಂದ ಕೂಗಳತೆ ದೂರದಲ್ಲೇ ಇರೋ ಸರ್ಕಾರಿ ಬಂಗಲೆಯನ್ನು ವಾಸ್ತುಪ್ರಕಾರವಾಗಿ ಬದಾವಣೆ ಮಾಡುತ್ತಿದ್ದಾರೆ.

    ಹೌದು. ಡಿಸಿಎಂ ಅವರಿಗೆ ಸದಾಶಿವನಗರದಲ್ಲಿ 25 ಕೋಟಿಯ ಮನೆ ಇದ್ರೂ ಕೂಗಳತೆಯಲ್ಲಿ ಸರ್ಕಾರಿ ಬಂಗಲೆಯಿದೆ. ಇದೀಗ ಈ ಬಂಗಲೆಗೆ ಲಕ್ಷ ಲಕ್ಷ ಸರ್ಕಾರಿ ವೆಚ್ಚದಲ್ಲಿ ವಾಸ್ತು ಪ್ರಕಾರದಂತೆ ಬದಲಾವಣೆ ಮಾಡುವ ಮೂಲಕ ಮತ್ತೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಬದಲಾವಣೆ ಏನು?:
    ಮೂರು ರಸ್ತೆ ಕೂಡುವ ಜಾಗದಲ್ಲಿ ಮನೆ ಇರೋದ್ರಿಂದ ಎಲ್ಲವೂ ವಾಸ್ತುಪ್ರಕಾರವಾಗಿ ಚೇಂಜ್ ಮಾಡಲಾಗುತ್ತಿದೆ. ಮನೆಯಿಂದ ಹೊರಗೆ ಬಂದ್ರೆ ಕಾಣುವಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮನೆಯ ಎಡಭಾಗದಲ್ಲಿ ಮತ್ಸ್ಯಾಕಾರ ಕಲ್ಲಿನ ಆಕೃತಿ, ಮನೆಯ ಒಳಭಾಗವನ್ನು ವಾಸ್ತುಪ್ರಕಾರವೇ ಸಿದ್ಧಪಡಿಸಿದ್ದಾರೆ.

    ಚಂದ್ರಶೇಖರ ಸ್ವಾಮೀಜಿ ಸೂಚನೆಯಂತೆ ಪರಮೇಶ್ವರ್ ಅವರು ಈ ಮನೆ ಬದಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಿತೃಪಕ್ಷ ಇತ್ತು, ಮನೆ ಕಟ್ಟಿಸಿಕೊಡೋಕೆ ಆಗ್ಲಿಲ್ಲ- ಡಿಸಿಎಂ ಮುಂದೆ ಪುಂಗಿದ ಅಧಿಕಾರಿ

    ಪಿತೃಪಕ್ಷ ಇತ್ತು, ಮನೆ ಕಟ್ಟಿಸಿಕೊಡೋಕೆ ಆಗ್ಲಿಲ್ಲ- ಡಿಸಿಎಂ ಮುಂದೆ ಪುಂಗಿದ ಅಧಿಕಾರಿ

    ತುಮಕೂರು: ವಸತಿ ಯೋಜನೆಯ ಮನೆಗಳ ನಿರ್ಮಾಣಕ್ಕೆ ಪಿತೃಪಕ್ಷ ಅಡ್ಡಿಯಾಗಿದೆ ಅಂತ ಕೆಡಿಪಿ ಸಭೆಯಲ್ಲಿ ಅಧಿಕಾರಿಯೊಬ್ಬರು ಹೇಳಿರುವುದು ಹಾಸ್ಯಾಸ್ಪದವಾಗಿತ್ತು.


    ಮಧುಗಿರಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಮೋಹನಕುಮಾರ್ ಅವರು ಶುಕ್ರವಾರ ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಹೇಳಿಕೆ ನಿಡಿದ್ದರು, ಅಧಿಕಾರಿಯ ಹೇಳಿಕೆಯಿಂದ ಡಿಸಿಎಂ ಪರಮೇಶ್ವರ್ ಅವರು ಕೆಂಡಾಮಂಡಲರಾಗಿದ್ದಾರೆ.

    ವಿವಿಧ ವಸತಿ ಯೋಜನೆಯಡಿ 35,410 ಮನೆಗಳ ನಿರ್ಮಾಣ ಮಾಡುವ ಗುರಿ ಹೊಂದಲಾಗಿತ್ತು. ಆದ್ರೆ ಇಲ್ಲಿಯವರೆಗೂ 3118 ಮನೆಯಷ್ಟನ್ನೇ ನಿರ್ಮಿಸಲಾಗಿದೆ. 12240 ಮನೆಗಳು ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಡಿಸಿಎಂ ಜಿ.ಪರಮೇಶ್ವರ್ ಅವರು ಮನೆ ನಿರ್ಮಾಣ ವಿಳಂಬಕ್ಕೆ ಕಾರಣ ಕೇಳಿದ್ದಾರೆ. ಡಿಸಿಎಂ ಪ್ರಶ್ನೆಗೆ ಪಿತೃಪಕ್ಷ ಅಂತ ಅಧಿಕಾರಿ ಉತ್ತರ ಕೊಟ್ಟಿದ್ದಾರೆ. ಅಧಿಕಾರಿ ಮಾತು ಕೇಳಿ ಸಭೆ ನಗೆ ಗಡಲಿನಲ್ಲಿ ತೇಲಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • NIA ಅನೇಕ ವಿಚಾರಗಳನ್ನು ನಮಗೆ ಹೇಳಲ್ಲ, ಅರೆಸ್ಟ್ ಮಾಡ್ಕೊಂಡು ಹೋಗ್ತಾರೆ- ಡಿಸಿಎಂ

    NIA ಅನೇಕ ವಿಚಾರಗಳನ್ನು ನಮಗೆ ಹೇಳಲ್ಲ, ಅರೆಸ್ಟ್ ಮಾಡ್ಕೊಂಡು ಹೋಗ್ತಾರೆ- ಡಿಸಿಎಂ

    ಹುಬ್ಬಳ್ಳಿ: ಎನ್‍ಐಎ ಅನೇಕ ವಿಚಾರಗಳನ್ನು ನಮಗೆ ಹೇಳಲ್ಲ. ಅಧಿಕಾರಿಗಳು ಬಂದು ಅರೆಸ್ಟ್ ಮಾಡಿಕೊಂಡು ಹೋಗುತ್ತಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

    ಬೌದ್ಧ ಧರ್ಮಗುರು, ದಲೈಲಾಮಾ ಕೊಲೆಗೆ ಉಗ್ರರು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎನ್‍ಐಎ ಅವರು ಅನೇಕ ವಿಚಾರಗಳನ್ನು ನಮಗೆ ಹೇಳೋದೇ ಇಲ್ಲ. ಇಂತಹ ಸಂದರ್ಭಗಳಲ್ಲಿ ಅವರೇ ಬಂದು ಅರೆಸ್ಟ್ ಮಾಡಿಕೊಂಡು ಹೋಗುತ್ತಾರೆ. ಅನೇಕ ಉದಾಹರಣೆಗಳು ಇವೆ. ಉಗ್ರ ಚಟುವಟಿಕೆಯಲ್ಲಿರುವಂತವರನ್ನು ಅವರೇ ಬಂದು ಬಂಧಿಸಿಕೊಂಡು ಹೋಗುತ್ತಾರೆ. ಮಾಹಿತಿ ಜಾಲ (information Network) ನಲ್ಲಿ ಅವರು ನಮಗೂ ಕೂಡ ಮಾಹಿತಿ ಕೊಡಬೇಕು. ಆದ್ರೆ ಕೊಡುತ್ತಿಲ್ಲ ಅಂದ್ರು.

     

    ಇಂಟೆಲಿಜೆನ್ಸ್(ಗುಪ್ತಚರ ಇಲಾಖೆ) ಅವರು ಅವರಿಗಿರುವ ಇಂಟೆಲಿಜೆನ್ಸ್ ಮೂಲಕ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಮಾಹಿತಿಗಳನ್ನು ಸಂಗ್ರಹಿಸುತ್ತಾರೆ. ಕಳೆದ 3 ದಿನಗಳ ಹಿಂದೆ ದಕ್ಷಿಣ ರಾಜ್ಯದ ಡಿಜಿಗಳ ಕಾನ್ಫರೆನ್ಸ್ ಮಾಡಿದ್ದೆ. ಅದರಲ್ಲಿ ಒಂದು ವಿಷಯ ಇಂಟೆಲಿಜೆನ್ಸ್ ಶೇರಿಂಗ್ ಆಗಿದೆ. ಅವರಿಗೇನಾದ್ರೂ ಗೊತ್ತಾದ್ರೆ ಅವರು ನಮಗೆ ಹೇಳುತ್ತಾರೆ. ನಮಗೆ ಏನಾದ್ರೂ ಗೊತ್ತಾದ್ರೆ ಅವರಿಗೆ ಹೇಳುತ್ತೀವಿ. ಇದೊಂದು ಇಲಾಖೆಯ ಭಾಗವಾಗಿದೆ ಅಂದ್ರು.

    ಈ ವೇಳೆ ರಾಜ್ಯದ ಗುಪ್ತಚರ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಆರೋಪ ಬಂದಿದೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಡಿಸಿಎಂ, ಈ ಬಗ್ಗೆ ನನಗೆ ಗೊತ್ತಿಲ್ಲ ಅಂತ ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=XBYQ_jQcHJ4

  • ಶ್ರೀರಾಮುಲು ಡಿಸಿಎಂ ಆಗೋದಾದ್ರೆ, ಆಪರೇಷನ್ ಕಮಲದ ಖರ್ಚೆಲ್ಲಾ ನಂದೆ ಅಂದ್ರಂತೆ ಗಾಲಿ ಜನಾರ್ದನ ರೆಡ್ಡಿ…!

    ಶ್ರೀರಾಮುಲು ಡಿಸಿಎಂ ಆಗೋದಾದ್ರೆ, ಆಪರೇಷನ್ ಕಮಲದ ಖರ್ಚೆಲ್ಲಾ ನಂದೆ ಅಂದ್ರಂತೆ ಗಾಲಿ ಜನಾರ್ದನ ರೆಡ್ಡಿ…!

    ಬಳ್ಳಾರಿ: ಪರಮಾಪ್ತ ಶಾಸಕ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವುದಾದರೆ, ಬಿಜೆಪಿಯ ಆಪರೇಷನ್ ಕಮಲದ ಖರ್ಚನ್ನೆಲ್ಲಾ ಸಂಪೂರ್ಣ ವಹಿಸಿಕೊಳ್ಳುವುದಾಗಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪಕ್ಷದ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ ಎಂಬ ತಿಳಿದು ಬಂದಿದೆ.

    ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ಸರ್ಕಾರವನ್ನು ಕೆಡವಲು ಬಿಜೆಪಿ ಆಪರೇಷನ್ ಕಮಲಕ್ಕೆ ಕೈ ಹಾಕಲು ಮುಂದಾಗಿದೆ. ಆದರೆ ಈ ಆಪರೇಷನ್ ಕಮಲ ಮಾಡಿದಾಗ ಕೈ ಶಾಸಕರಿಗೆ ಕೊಡಬೇಕಾದ ಕೋಟಿ ಕೋಟಿ ಹಣದ ಮೊತ್ತವನ್ನು ತಾವೇ ಭರಿಸುವುದಾಗಿ ಗಣಿಧಣಿ ರೆಡಿಯಾಗಿದ್ದಾರೆ. ಅಲ್ಲದೇ ಆಪರೇಷನ್ ಕಮಲಕ್ಕೆ ಬೇಕಾಗುವ 300 ಕೋಟಿ ರೂಪಾಯಿ ಫಂಡ್ ಅನ್ನು ಕೊಡಲು ಅವರು ಸಿದ್ಧರಾಗಿದ್ದಾರೆ.

    ಶ್ರೀರಾಮುಲು ಡಿಸಿಎಂ ಆಗ್ತಾರಾ?
    ಹೌದು, ಮಾಜಿ ಸಚಿವ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ತಮ್ಮ ಪರಮಾಪ್ತ ಸ್ನೇಹಿತನಾದ ಶಾಸಕ ಶ್ರೀರಾಮುಲುರನ್ನು ಬಿಜೆಪಿ ಡಿಸಿಎಂ ಮಾಡಲು ಒಪ್ಪಿದರೆ, ಆಪರೇಷನ್ ಕಮಲದ ಖರ್ಚೆಲ್ಲಾ ತಮಗೆ ಇರಲಿ ಅನ್ನುವ ಸಂದೇಶವನ್ನು ಕಮಲ ಪಾಳಯಕ್ಕೆ ರವಾನೆ ಮಾಡಿದ್ದಾರಂತೆ. ಅಲ್ಲದೇ ಕೈ ಶಾಸಕರು ಏನೇ ಬೇಡಿಕೆ ಇಟ್ಟರೂ, ಈಡೇರಿಸಲು ತಾವೂ ಸಿದ್ಧ. ಆದರೆ ಬಿಜೆಪಿ ಮಾತ್ರ ಶಾಸಕ ಶ್ರೀರಾಮುಲುರನ್ನು ಮುಂದಿನ ಉಪಮುಖ್ಯಮಂತ್ರಿ ಮಾಡುವ ಭರವಸೆ ನೀಡಬೇಕು ಎನ್ನುವ ಸಂದೇಶ ರವಾನಿಸಿದ್ದಾರಂತೆ ಎಂದು ತಿಳಿದು ಬಂದಿದೆ.

    ಹೀಗಾಗಿ ಶಾಸಕ ಶ್ರೀರಾಮುಲು ಸೇರಿದಂತೆ ಬಿಜೆಪಿಯ ಕೆಲ ನಾಯಕರು ಇದೀಗ ಕೈ ಶಾಸಕರನ್ನ ಖರೀದಿ ಮಾಡಲು ಆಪರೇಷನ್ ಕಮಲಕ್ಕೆ ಕೈ ಹಾಕಿದ್ದಾರಂತೆ. ಈ ಹಿಂದೆಯೂ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆಯಾಗೋ ವೇಳೆಯೂ ಶಾಸಕರಾದ ಶ್ರೀರಾಮುಲು ಹಾಗೂ ಸೋಮಶೇಖರ ರೆಡ್ಡಿ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಮುಂದಾಗಿ ವಿಫಲರಾಗಿದ್ದರು. ಆದರೆ ಈ ಭಾರಿ ಎಷ್ಟೇ ಖರ್ಚಾದ್ರೂ ಸರಿ ಶ್ರೀರಾಮುಲುರನ್ನು ಡಿಸಿಎಂ ಮಾಡಲು ತಾವೂ ಸಿದ್ಧ ಅನ್ನುವ ಸಂದೇಶ ರೆಡ್ಡಿ ಪಾಳಯದಿಂದ ಹೊರಬಿದ್ದಿದೆ ಎನ್ನಲಾಗಿದೆ.

    ಯಾವ ಶಾಸಕರು ಜಂಪ್ ಆಗ್ತಾರೆ?
    ಸದ್ಯ ವಿದೇಶದಲ್ಲಿರುವ ಮಾಜಿ ಸಚಿವ ಸಂತೋಷ್ ಲಾಡ್ ರೊಂದಿಗೆ ಶ್ರೀರಾಮುಲು ಸತತ ಸಂಪರ್ಕದಲ್ಲಿ ಇದ್ದಾರಂತೆ. ಬಳ್ಳಾರಿಯ 5 ಶಾಸಕರನ್ನ ಸೆಳೆಯಲು ಮುಂದಾಗಿದ್ದಾರಂತೆ. ಸಂತೋಷ್ ಲಾಡ್ ರ ನೇತೃತ್ವದಲ್ಲಿ ಹೊಸಪೇಟೆ ಶಾಸಕ ಆನಂದಸಿಂಗ್. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ, ಜೆಡಿಎಸ್ ತೊರೆದು ಕೈ ಪಾಳಯ ಸೇರಿದ ಹಗರಿಬೊಮ್ಮನಹಳ್ಳಿಯ ಭೀಮಾನಾಯ್ಕ್, ಕಂಪ್ಲಿಯ ಜಿ.ಎನ್.ಗಣೇಶ್, ಸಂಡೂರು ಶಾಸಕ ತುಕಾರಾಂ ಇವರೆಲ್ಲರೂ ಬಿಜೆಪಿಗೆ ತರುವ ಪ್ರಯತ್ನದಲ್ಲಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಸಚಿವ ರಮೇಶ್ ಜಾರಕಿಹೊಳಿಯೊಂದಿಗೆ ಕೆಲ ಶಾಸಕರು ಬಿಜೆಪಿ ಸೇರ್ಪಡೆಯಾಗೋದು ಖಚಿತವಾದರೆ, ಬಳ್ಳಾರಿ ಜಿಲ್ಲೆಯ 5 ಶಾಸಕರನ್ನ ಸಂತೋಷ ಲಾಡ್ ಮೂಲಕವೇ ಬಿಜೆಪಿಗೆ ಕರೆತರಲು ಶ್ರೀರಾಮುಲು ಸಜ್ಜಾಗಿ ನಿಂತಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಹೊಸಪೇಟೆ ಶಾಸಕ ಆನಂದಸಿಂಗ್ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಅಸಮಧಾನಗೊಂಡಿದ್ದಾರಂತೆ. ಕಾಂಗ್ರೆಸ್ ಸೇರ್ಪಡೆ ವೇಳೆ ಸಚಿವ ಸ್ಥಾನದ ಭರವಸೆ ನೀಡಿದ್ದರಂತೆ. ಡಿಕೆ ಶಿವಕುಮಾರ್ ತಮಗೆ ಸಚಿವ ಸ್ಥಾನ ಕೊಡಿಸದ್ದಕ್ಕೆ ಬೇಸರಗೊಂಡು ಆನಂದಸಿಂಗ್ ಚುನಾವಣಾ ನಿವೃತ್ತಿ ಘೋಷಿಸಿದರು ಎಂಬ ಸುದ್ದಿಗಳು ಬಳ್ಳಾರಿ ರಾಜಕಾರಣದಲ್ಲಿ ಹರಿದಾಡುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏಕಾಏಕಿ ಡಿಸಿಎಂ ಪರಮೇಶ್ವರ್ ವಿದೇಶಿ ಪ್ರವಾಸ ರದ್ದು!

    ಏಕಾಏಕಿ ಡಿಸಿಎಂ ಪರಮೇಶ್ವರ್ ವಿದೇಶಿ ಪ್ರವಾಸ ರದ್ದು!

    ಬೆಂಗಳೂರು: ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ವಿದೇಶ ಪ್ರವಾಸ ರದ್ದಾಗಿದೆ. ಪರಂ ಅವರು ಇಂದು ಸ್ಯಾನ್ ಫ್ರಾನ್ಸಿಸ್ಕೋ ಭೇಟಿಗೆ ಇಂದು ತೆರಳಬೇಕಿತ್ತು. ಆದ್ರೆ ಹೈಕಮಾಂಡ್ ಏಕಾಏಕಿ ಇವರ ಪ್ರವಾಸವನ್ನು ರದ್ದು ಮಾಡಿದೆ.

    ಡಿಸಿಎಂ ಅವರು ಇಂದು ವಿದೇಶಕ್ಕೆ ಭೇಟಿ ನೀಡಿ ಅಲ್ಲಿನ ಪೊಲೀಸ್ ಇಲಾಖೆ ಕುರಿತ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಬೇಕಿತ್ತು. ಆದ್ರೆ ಇದೀಗ ಏಕಾಏಕಿ ಹೈಕಮಾಂಡ್ ಸೂಚನೆಯಿಂದ ಪರಮ್ ಕೈಬಿಟ್ಟಿದ್ದಾರೆ.

    ರದ್ದಾಗಿದ್ದು ಏಕೆ?:
    ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ. ಬಿಜೆಪಿ ಸದ್ದಿಲ್ಲದೇ ರಹಸ್ಯ ಚಟುವಟಿಕೆ ನಡೆಸುತ್ತಿದೆ. ಆಪರೇಷನ್ ಕಮಲ ನಡೆಸಲು ಬಿಜೆಪಿ ಪ್ಲಾನ್ ಮಾಡುತ್ತಿದೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ವಿದೇಶ ಪ್ರವಾಸದಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಶಾಸಕರ ಮೇಲೆ ನಿಗಾ ಇಡಲು ನಾಯಕರೇ ಇಲ್ಲದಾದರೆ ಕಷ್ಟ ಅಂತ ಹೈಕಮಾಂಡ್ ಹೇಳಿದೆ. ಇದನ್ನೂ ಓದಿ: 10 ದಿನದ ಯುರೋಪ್ ಪ್ರವಾಸ ಹೊರಟ ಸಿದ್ದರಾಮಯ್ಯ- ಕಾಂಗ್ರೆಸ್ ಮುಖಂಡರು ಏನ್ ಹೇಳಿದ್ರು?

    ಇವೆಲ್ಲದರ ಮಧ್ಯೆ ಸಚಿವ ಡಿಕೆಶಿಗೆ ಇಡಿಯಿಂದ ನೊಟೀಸ್ ಬರುವ ಸಾಧ್ಯತೆಗಳು ಕೂಡ ಹೆಚ್ಚಿವೆ. ಡಿಕೆಶಿ ಅವರು ಇಡೀ ಸವಾಲು ಎದುರಿಸಲು ಕಾನೂನು ಸಲಹೆಗೆ ಮುಂದಾಗಿದ್ದಾರೆ. ಈ ಎಲ್ಲಾ ಗೊಂದಲದಿಂದ ಡಿಕೆಶಿ ಕೈ ಕಟ್ಟಿ ಹಾಕಲ್ಪಟ್ಟಿದೆ. ಈ ಎಲ್ಲಾ ಸಮಸ್ಯೆಗಳಿರುವಾಗ ಪರಮೇಶ್ವರ್ ಕೂಡ ವಿದೇಶಕ್ಕೆ ಹೊರಟರೆ ನಮ್ಮಲ್ಲಿ ನಲ್ಲಿ ಹೇಳೋರು ಕೆಳೋರು ಇರಲ್ಲ. ಬಿಜೆಪಿಯ ಆಪರೇಷನ್ ಕಮಲ ಪ್ರಯತ್ನಗಳಿಗೆ ತಡೆ ಹಾಕುವ ತುರ್ತಿದೆ. ಹೀಗಾಗಿ ಪರಮೇಶ್ವರ್ ಅಮೆರಿಕ ಪ್ರವಾಸ ಬೇಡ ಎಂದ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ ಅಂತ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಗರ ಪ್ರದಕ್ಷಿಣೆಯಲ್ಲಿ ಡಿಸಿಎಂ ಪರಮೇಶ್ವರಿಂದ ಅಂಧ ದರ್ಬಾರ್!

    ನಗರ ಪ್ರದಕ್ಷಿಣೆಯಲ್ಲಿ ಡಿಸಿಎಂ ಪರಮೇಶ್ವರಿಂದ ಅಂಧ ದರ್ಬಾರ್!

    ಬೆಂಗಳೂರು: ನಗರ ಪ್ರದಕ್ಷಿಣೆ ವೇಳೆ ರಸ್ತೆಯ ಕೆಸರು ಬಟ್ಟೆಗೆ ಸಿಡಿದಿದ್ದಕ್ಕೆ, ಸ್ಥಳದಲ್ಲೇ ಗನ್‍ಮ್ಯಾನ್‍ನಿಂದ ಬಟ್ಟೆ ಹಾಗೂ ಶೂಗಳನ್ನು ಸ್ವಚ್ಛಮಾಡಿಸಿಕೊಳ್ಳುವ ಮೂಲಕ ಉಪಮುಖ್ಯಮಂತ್ರಿ ಹಾಗೂ ನಗರ ಉಸ್ತುವಾರಿ ಸಚಿವ ಪರಮೇಶ್ವರ್ ಅಂಧ ದರ್ಬಾರ್ ನಡೆಸಿದ್ದಾರೆ.

    ಡಿಸಿಎಂ ಪರಮೇಶ್ವರ್ ರವರು ತಮ್ಮ ಎರಡನೇ ದಿನದ ಸಿಟಿ ರೌಂಡ್ಸ್ ಮುಂದುವರಿಸಿ, ಹಲಸೂರು ಬಳಿಯಿರುವ ಗುರುದ್ವಾರದ ಮಳೆ ನೀರುಗಾಲುವೆಗೆ ಮೊದಲು ಭೇಟಿ ನೀಡಿದ್ದರು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರಸ್ತೆ ಮೇಲಿದ್ದ ನೀರು ಸಚಿವರ ಬಟ್ಟೆ ಹಾಗೂ ಶೂಗೆ ಸಿಡಿದಿದೆ. ಕೂಡಲೇ ಅಲ್ಲೇ ಇದ್ದ ತಮ್ಮ ಗನ್‍ಮ್ಯಾನ್ ಹಾಗೂ ಸಹಾಯಕರಿಗೆ ಸ್ವಚ್ಛಮಾಡುವಂತೆ ತಾಕೀತು ಮಾಡಿದ್ದಾರೆ.

    ಈ ವೇಳೆ ಗನ್‍ಮ್ಯಾನ್ ತಮ್ಮ ಕರವಸ್ತ್ರದ ಮೂಲಕವೇ ಸಚಿವರ ಬಟ್ಟೆ ಹಾಗೂ ಶೂಗಳನ್ನು ಸ್ವಚ್ಛ ಮಾಡಿದ್ದಾರೆ. ಅಧಿಕಾರಿಗಳು, ಸಾರ್ವಜನಿಕರು ಹಾಗೂ ಮಾಧ್ಯಮಗಳ ಮುಂದೆಯೇ ಡಿಸಿಎಂ ತಮ್ಮ ಅಂಧಾ ದರ್ಬಾರ್ ಮೆರೆದಿದ್ದಾರೆ.

    ಪರಮೇಶ್ವರ್ ರವರ ನಡೆಗೆ ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕಿ, ಅವರು ನಗರ ಪ್ರದಕ್ಷಿಣೆಗಾಗಿಯೇ ಬಂದಿದ್ದಾರೆ. ಈ ತರಹದ ಘಟನೆಗಳು ಸಾಮಾನ್ಯ, ಕೇವಲ ಕೆಸರು ನೀರು ಸಿಡಿದಿದ್ದಕ್ಕೆ, ತಮಗಿಂತ ಕೆಳವರ್ಗದ ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಂಡಿದ್ದು ಸರಿಯಲ್ಲ. ಉನ್ನತ ಸ್ಥಾನದಲ್ಲಿರವ ಅವರು ತಮ್ಮ ಯೋಗ್ಯತೆಗೆ ತಕ್ಕಂತೆ ನಡೆದುಕೊಂಡು, ಎಲ್ಲರಿಗೂ ಮಾದರಿಯಾಗಬೇಕು ಎಂದು ಬೇಸರ ವ್ಯಕ್ತಪಡಿಸಿದರು.

    ಕೇವಲ ಕೆಸರು ನೀರು ಸಿಡಿದ್ದಿದ್ದಕ್ಕೆ ಚಡಪಡಿಸಿದ ಅವರು, ಜನಸಾಮಾನ್ಯರು ದಿನನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಮೊದಲು ಗಮನಹರಿಸಬೇಕು. ಪ್ರಮುಖ ಹಾಗೂ ಗೌರವಾನ್ವಿತ ರಾಜಕಾರಣಿ ಎಂದು ಗುರುತಿಸಿಕೊಂಡಿರುವ ಅವರು, ನಾನು ಏನು ಮಾಡುತ್ತಿದ್ದೇನೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು ಎಂದು ಡಿಸಿಎಂ ನಡೆಗೆ ಅಸಮಧಾನವನ್ನು ಹೊರಹಾಕಿದ್ದಾರೆ.

    ಇದಾದ ನಂತರ ಹಲಸೂರಿನ ಬಿಡಿಎ ಸಮುಚ್ಚಯಕ್ಕೆ ಭೇಟಿ ನೀಡಿದರು. ಈ ವೇಳೆ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಸಚಿವರ ಬಳಿ ಹೇಳಿಕೊಂಡು, ಸಮುಚ್ಚಯದಲ್ಲಿ ಒಳಚರಂಡಿ ಹಾಗೂ ನೀರಿನ ಸಮಸ್ಯೆ ತುಂಬಾ ಹೆಚ್ಚಿದೆ. ಕಟ್ಟಡ ಈಗಾಗಲೇ ಶಿಥಿಲಾವಸ್ಥೆ ತಲುಪಿದೆ. ಯಾವಾಗ ಕಟ್ಟಡ ಬೀಳುತ್ತದೋ ಎಂಬ ಭಯದ ನಡೆವೆಯೇ ವಾಸಿಸುತ್ತಿದ್ದೇವೆ. ಹೀಗಾಗಿ ನಮಗೆ ಹೊಸದಾಗಿ ಕಟ್ಟಡ ನಿರ್ಮಿಸಿಕೊಡುವಂತೆ ಮನವಿ ಮಾಡಿಕೊಂಡರು. ಡಿಸಿಎಂ ಪ್ರದಕ್ಷಿಣೆಗೆ ವೇಳೆ ಶಿವಾಜಿನಗರ ಶಾಸಕ ರೋಷನ್ ಬೇಗ್, ಬಿಬಿಎಂಪಿ ಮೇಯರ್ ಸಂಪತ್ ರಾಜ್, ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳ ಸಾಥ್ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=FiT_gomhI6Q