Tag: DCM G Parameshwar

  • ಡಿಸಿಎಂ ಸ್ವಕ್ಷೇತ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಆಯಾಗಳೇ ಡಾಕ್ಟರ್!

    ಡಿಸಿಎಂ ಸ್ವಕ್ಷೇತ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಆಯಾಗಳೇ ಡಾಕ್ಟರ್!

    ತುಮಕೂರು: ಡಿಸಿಎಂ ಜಿ.ಪರಮೇಶ್ವರ್ ಅವರ ಸ್ವಕ್ಷೇತ್ರ ಕೊರಟಗೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಆಯಾಗಳೇ ಡಾಕ್ಟರ್ ಆಗಿ ಪರಿವರ್ತನೆಯಾಗಿದ್ದಾರೆ. ರೋಗಿಗಳಿಗೆ ಆಯಾಗಳೇ ಇಂಜೆಕ್ಷನ್ ಹಾಗೂ ಗ್ಲೂಕೋಸ್ ನೀಡುತ್ತಿರುವ ವಿಡಿಯೋ ಇದಕ್ಕೆ ಸಾಕ್ಷಿಯಾಗಿದೆ.

    ಯಾವುದೇ ತರಬೇತಿ ಇಲ್ಲದ ಆಯಾಗಳು ನೇರವಾಗಿ ರೋಗಿಗಳಿಗೆ ಇಂಜೆಕ್ಷನ್, ಗ್ಲೂಕೋಸ್ ಕೊಡುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಸಂಬಂಧಿಯೊಬ್ಬರು ಆಯಾಗಳು ಸೂಜಿ ಚುಚ್ಚಿ ಗ್ಲೂಕೋಸ್ ಬಾಟಲಿ ಹಾಕುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದ್ದಾರೆ.

    ರೋಗಿಗಳಿಗೆ ಗ್ಲೂಕೋಸ್, ಇಂಜೆಕ್ಷನ್ ಕೊಡುವ ಕೆಲಸವನ್ನು ಡಾಕ್ಟರ್ ಅಥವಾ ನರ್ಸಗಳು ಮಾಡಬೇಕು. ಆದರೆ ಎಲ್ಲವನ್ನೂ ಬಿಟ್ಟು ಹೌಸ್ ಕೀಪಿಂಗ್ ಆಯಾಗಳು ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿರುವುದು ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುತ್ತಿರುವ ಗುಣಮಟ್ಟದ ಚಿಕಿತ್ಸೆಗೆ ಹಿಡಿದ ಕೈಗನ್ನಡಿಯಾಗಿದೆ.

    ಇಲ್ಲಿರುವ ನರ್ಸಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ತಮ್ಮ ಕೆಲಸವನ್ನು ಆಯಾಗಳ ಮೇಲೆ ಹಾಕಿ ತಾವು ಹಾಯಾಗಿದ್ದಾರೆ. ಇದನ್ನೆಲ್ಲಾ ಪ್ರಶ್ನಿಸಬೇಕಾದ ಡಾಕ್ಟರ್ ಸಹ ತೆಪ್ಪಗಿರುತ್ತಾರೆ. ರಾಜ್ಯದ ಉಪಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲೇ ಆಸ್ಪತ್ರೆಯ ಸ್ಥಿತಿ ಹೀಗಾದರೆ ಇನ್ನುಳಿದ ಆಸ್ಪತ್ರೆಗಳ ಗತಿ ಉಹಿಸಲು ಸಾಧ್ಯವೇ? ಎನ್ನುವ ಪ್ರಶ್ನೆ ಸದ್ಯ ಸಾರ್ವಜನಿಕರಲ್ಲಿ ಹುಟ್ಟಿಕೊಂಡಿದೆ.

  • ಪರಮೇಶ್ವರ್‌ ಗೃಹ ಖಾತೆ ಬದಲಾಯಿಸಿದ್ದು ನಾನಲ್ಲ- ಸಿದ್ದರಾಮಯ್ಯ

    ಪರಮೇಶ್ವರ್‌ ಗೃಹ ಖಾತೆ ಬದಲಾಯಿಸಿದ್ದು ನಾನಲ್ಲ- ಸಿದ್ದರಾಮಯ್ಯ

    ಹುಬ್ಬಳ್ಳಿ: ಜಿ.ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿ ಅಂತ ಒತ್ತಾಯ ಮಾಡಿದ್ದೇ ನಾನು. ಅವರ ಗೃಹ ಖಾತೆ ಬದಲಾಯಿಸಿದ್ದು ಮಾತ್ರ ನಾನಲ್ಲ. ಅದು ಹೈಕಮಾಂಡ್ ನಿರ್ಧಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾವು ಸಮನ್ವಯ ಸಮಿತಿಯಲ್ಲಿ ತೀರ್ಮಾನ ಮಾಡಿದಂತೆ ನಡೆದುಕೊಂಡಿದ್ದೇವೆ. ಬಸವರಾಜ್ ಹೊರಟ್ಟಿ ಅವರು ಕಾಂಗ್ರೆಸ್ ಮೇಲೆ ಯಾಕೆ ಅಸಮಾಧಾನ ಹೊರಹಾಕಿದ್ದರೋ ನನಗೆ ಗೊತ್ತಿಲ್ಲ. ಅವರು ನನ್ನನ್ನು ಪ್ರಶ್ನೆ ಮಾಡುವುದನ್ನು ಬಿಟ್ಟು ಸಿಎಂ ಕುಮಾರಸ್ವಾಮಿ ಅವರಿಗೆ ನೇರವಾಗಿ ಕೇಳಲಿ. ನಾವು ಸಮನ್ವಯ ಸಮಿತಿಯಲ್ಲಿ ತೀರ್ಮಾನ ಮಾಡಿದಂತೆ ನಡೆದುಕೊಂಡಿದ್ದೇವೆ ಎಂದು ತಿರುಗೇಟು ನೀಡಿದರು.

    ಇದೇ ವೇಳೆ ಜಿ.ಪರಮೇಶ್ವರ್ ದಲಿತ ಎನ್ನುವ ಕಾರಣಕ್ಕೆ ಕಾಂಗ್ರೆಸ್‍ನಲ್ಲಿ ತುಳಿಯಲಾಗುತ್ತಿದೆ ಎಂಬ ಎಚ್.ಡಿ. ರೇವಣ್ಣ ಹೇಳಿಕೆಗೆ ಸಿದ್ದರಾಮಯ್ಯ ಅಚ್ಚರಿ ವ್ಯಕ್ತಪಡಿಸಿ, ರೇವಣ್ಣಾ ಹಾಗೆಂದನಾ..? ಒಂದು ವೇಳೆ ರೇವಣ್ಣ ನನ್ನ ಪ್ರಶ್ನಿಸಿದ್ರೆ ಉತ್ತರ ನಾನೇ ಕೊಡ್ತೀನಿ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ ಬೆನ್ನಲ್ಲೇ ಟಿಪ್ಪು ಜಯಂತಿಗೆ ಡಿಸಿಎಂ ಗೈರು

    ಸಿಎಂ ಬೆನ್ನಲ್ಲೇ ಟಿಪ್ಪು ಜಯಂತಿಗೆ ಡಿಸಿಎಂ ಗೈರು

    ಬೆಂಗಳೂರು: ರಾಜ್ಯ ಸರ್ಕಾರದಿಂದ ನಗರದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಚರಿಸುತ್ತಿರುವ ಟಿಪ್ಪು ಜಯಂತಿಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಗೈರಾಗಿದ್ದಾರೆ.

    ಜಿ.ಪರಮೇಶ್ವರ್ ಅವರು ಸಿಂಗಾಪುರಕ್ಕೆ ತೆರಳಿದ್ದು, ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಹೀಗಾಗಿ ಅವರ ಬದಲಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರೇ ಕಾರ್ಯಕ್ರಮದ ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಸರ್ಕಾರದ ಪರವಾಗಿ ಆಯೋಜಿಸಿದ್ದ ಟಿಪ್ಪು ಜಯಂತಿಗೆ ನಾನು ಬರಲು ಆಗುವುದಿಲ್ಲ ಅಂತಾ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಹೀಗಾಗಿ ಆಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರನ್ನು ಬಿಡಲಾಗಿತ್ತು. ಆದರೆ ಈಗ ಪಿ.ಪರಮೇಶ್ವರ್ ಅವರು ಟಿಪ್ಪು ಜಯಂತಿಯಿಂದ ದೂರ ಸರಿದಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

    ರಾಜಕೀಯ ಜಂಜಾಟದಿಂದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕೊಂಚ ಬಿಡುವು ಪಡೆದುಕೊಂಡಿದ್ದು, ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. ಹೀಗಾಗಿ ಅರಣ್ಯ ಪ್ರದೇಶಕ್ಕೆ ತೆರಳಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸಿಎಂ ಅವರು 3 ದಿನ ವಿಶ್ರಾಂತಿಗೆ ತೆರಳಿದ್ದಾರೆ. ಪಶ್ಚಿಮ ಘಟ್ಟ ಅರಣ್ಯ ಪ್ರದೇಶದ ವಿಶ್ರಾಂತಿ ಗೃಹವೊಂದರಲ್ಲಿ 3 ದಿನ ವಾಸ್ತವ್ಯ ಹೂಡಲಿದ್ದಾರೆ. ಈಗಾಗಲೇ ಮುಖ್ಯಮಂತ್ರಿಯವರು ತಮ್ಮ ಪತ್ನಿ ಹಾಗೂ ಪುತ್ರ ನಿಖಿಲ್ ಜೊತೆ ಅಲ್ಲಿಗೆ ತೆರಳಿದ್ದಾರೆ. ವಿಶ್ರಾಂತಿ ಪಡೆದ ಬಳಿಕ ಅಂದರೆ ನವೆಂಬರ್ 11 ರ ಸಂಜೆ ರಾಜಧಾನಿಗೆ ವಾಪಸ್ಸಾಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಣ್ಣ ಸುದ್ದಿಯನ್ನು ಇಂಟರ್‌ನ್ಯಾಷನಲ್‌ ಸುದ್ದಿ ಮಾಡಿದ್ದಕ್ಕೆ ಧನ್ಯವಾದಗಳು: ಡಿಸಿಎಂ

    ಸಣ್ಣ ಸುದ್ದಿಯನ್ನು ಇಂಟರ್‌ನ್ಯಾಷನಲ್‌ ಸುದ್ದಿ ಮಾಡಿದ್ದಕ್ಕೆ ಧನ್ಯವಾದಗಳು: ಡಿಸಿಎಂ

    ಬೆಂಗಳೂರು: ನಗರ ಪ್ರದಕ್ಷಿಣೆ ವೇಳೆ ಅಚಾನಕ್ ಸಿಡಿದಿದ್ದ ಕೆಸರನ್ನು ಗನ್‍ಮ್ಯಾನ್ ಒರೆಸಿದ್ದಕ್ಕೆ, ಅಂಧ ದರ್ಬಾರ್ ಎಂದು ಅಂತರಾಷ್ಟ್ರೀಯ ಮಟ್ಟದ ಸುದ್ದಿಯನ್ನಾಗಿ ಮಾಡಿದ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

    ಮಂಗಳವಾರ ಬೆಳಗ್ಗೆ ಡಿಸಿಎಂ ಪರಮೇಶ್ವರ್ ರವರು ತಮ್ಮ ಎರಡನೇ ದಿನದ ಸಿಟಿ ರೌಂಡ್ಸ್ ಮುಂದುವರಿಸಿದ್ದರು. ಈ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರಸ್ತೆ ಮೇಲಿದ್ದ ನೀರು ಸಚಿವರ ಬಟ್ಟೆ ಹಾಗೂ ಶೂಗೆ ಸಿಡಿದಿತ್ತು. ಅಲ್ಲೇ ಇದ್ದ ತಮ್ಮ ಗನ್‍ಮ್ಯಾನ್ ಹಾಗೂ ಸಹಾಯಕರಿಗೆ ಸ್ವಚ್ಛಮಾಡುವಂತೆ ಹೇಳಿದ್ದರು. ಕೂಡಲೇ ಗನ್‍ಮ್ಯಾನ್ ತಮ್ಮ ಕರವಸ್ತ್ರದ ಮೂಲಕವೇ ಸಚಿವರ ಬಟ್ಟೆ ಹಾಗೂ ಶೂಗಳನ್ನು ಸ್ವಚ್ಛ ಮಾಡಿದ್ದರು. ಅಧಿಕಾರಿಗಳು, ಸಾರ್ವಜನಿಕರು ಹಾಗೂ ಮಾಧ್ಯಮಗಳ ಮುಂದೆಯೇ ಡಿಸಿಎಂ ತಮ್ಮ ಅಂಧಾ ದರ್ಬಾರ್ ಮೆರೆದಿದ್ದರು.

    ಈ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, ಏನೋ ಅಚಾನಕ್ ಆಗಿ ಕೆಸರು ಸಿಡಿದಿತ್ತು, ಕೂಡಲೇ ನಮ್ಮ ಸಿಬ್ಬಂದಿ ಬಂದು ಅದನ್ನು ಸರಿಪಡಿಸಿದರು. ಅದನ್ನೇ ನೀವು ಡಿಸಿಎಂ ಅಂಧ ದರ್ಬಾರ್ ನಡೆಸಿದ್ದಾರೆ. ಎನ್ನುವ ಮೂಲಕ ಸಣ್ಣ ಸುದ್ದಿಯನ್ನು ಅಂತರಾಷ್ಟ್ರೀಯ ಸುದ್ದಿಯನ್ನಾಗಿ ತೋರಿಸಿದ್ದೀರಿ. ಇದಕ್ಕೆ ನಾನು ನಿಮಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಉತ್ತರಿಸಿದರು. ಇದನ್ನೂ ಓದಿ: ನಗರ ಪ್ರದಕ್ಷಿಣೆಯಲ್ಲಿ ಡಿಸಿಎಂ ಪರಮೇಶ್ವರಿಂದ ಅಂಧ ದರ್ಬಾರ್!

    ಪರಮೇಶ್ವರ್ ರವರ ನಡೆಗೆ ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕಿದ್ದರು. ಅವರು ನಗರ ಪ್ರದಕ್ಷಿಣೆಗಾಗಿಯೇ ಬಂದಿದ್ದರು. ಈ ತರಹದ ಘಟನೆಗಳು ಸಾಮಾನ್ಯ, ಕೇವಲ ಕೆಸರು ನೀರು ಸಿಡಿದಿದ್ದಕ್ಕೆ, ತಮಗಿಂತ ಕೆಳವರ್ಗದ ಅಧಿಕಾರಿಯಿಂದ ಕೆಲಸ ಮಾಡಿಸಿಕೊಂಡಿದ್ದು ಸರಿಯಲ್ಲ. ಉನ್ನತ ಸ್ಥಾನದಲ್ಲಿರುವ ಅವರು ತಮ್ಮ ಯೋಗ್ಯತೆಗೆ ತಕ್ಕಂತೆ ನಡೆದುಕೊಂಡು, ಎಲ್ಲರಿಗೂ ಮಾದರಿಯಾಗಬೇಕು. ಕೇವಲ ಕೆಸರು ನೀರು ಸಿಡಿದ್ದಿದ್ದಕ್ಕೆ ಚಡಪಡಿಸಿದ ಅವರಿಗೆ ನಮ್ಮ ಕಷ್ಟಗಳು ಹೇಗೆ ಅರ್ಥವಾಗುತ್ತವೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಾಸರಹಳ್ಳಿ ಬಿಬಿಎಂಪಿ ಕಚೇರಿಗೆ ಪರಮೇಶ್ವರ್ ಧಿಡೀರ್ ಭೇಟಿ, ಅಧಿಕಾರಿಗಳಿಗೆ ಕ್ಲಾಸ್

    ದಾಸರಹಳ್ಳಿ ಬಿಬಿಎಂಪಿ ಕಚೇರಿಗೆ ಪರಮೇಶ್ವರ್ ಧಿಡೀರ್ ಭೇಟಿ, ಅಧಿಕಾರಿಗಳಿಗೆ ಕ್ಲಾಸ್

    ಬೆಂಗಳೂರು: ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಶುಕ್ರವಾರ ಬೆಳಗ್ಗೆ ದಾಸರಹಳ್ಳಿ ಬಿಬಿಎಂಪಿ ಕಚೇರಿಗೆ ಧಿಡೀರ್ ಭೇಟಿ ನೀಡಿ, ಅಧಿಕಾರಿಗಳ ಹಾಜರಾತಿ ಪರಿಶೀಲನೆ ಮಾಡಿದ್ದಾರೆ. ಬಯೋಮೆಟ್ರಿಕ್ ಸರಿಯಾಗಿ ಕೆಲಸ ನಿರ್ವಹಿಸದೇ ಇರುವುದನ್ನು ಗಮನಿಸಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.

    ಕಚೇರಿ ಸಮಯ ಪ್ರಾರಂಭವಾಗಿ ಮುಕ್ಕಾಲು ಗಂಟೆ ಕಳೆದರೂ ಅಧಿಕಾರಿಗಳು ಗೈರಾಗಿದ್ದರು. ಅಷ್ಟೇ ಅಲ್ಲ ಜಂಟಿ ಆಯುಕ್ತ ಮತ್ತು ಎಂಜಿನಿಯರ್‍ಗಳು ಇರಲಿಲ್ಲ. ಹಲವು ಸಿಬ್ಬಂದಿ ಕಚೇರಿಗೆ ಆಗಮಿಸಿರಲಿಲ್ಲ. ಎಲ್ಲವನ್ನೂ ಗಮನಿಸಿದ ಪರಮೇಶ್ವರ್ ಅವರು, ಸಮಯಪ್ರಜ್ಞೆ ಇಲ್ಲದ ಹಾಗೂ ಅಶಿಸ್ತು ತೋರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಆದೇಶಿಸುವುದಾಗಿ ತಿಳಿಸಿದರು.

    ಅಧಿಕಾರಿಗಳು ಹಾಗೂ ಸ್ಥಳೀಯ ಬಿಬಿಎಂಪಿ ಸದಸ್ಯರೊಂದಿಗೆ ಸಭೆ ನಡೆಸಿದ ಅವರು, ದಾಖಲೆಗಳ ಪರಿಶೀಲನೆ ನಡೆಸಿ, 2014ರಿಂದ ಹಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿರುವ ವಿಚಾರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡಿಸಿಎಂ ಪರಮೇಶ್ವರ್ ಸಹೋದರ ಶಿವಪ್ರಸಾದ್ ವಿಧಿವಶ

    ಡಿಸಿಎಂ ಪರಮೇಶ್ವರ್ ಸಹೋದರ ಶಿವಪ್ರಸಾದ್ ವಿಧಿವಶ

    ಬೆಂಗಳೂರು: ತುಮಕೂರಿನ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಸಹೋದರ ಡಾ.ಜಿ.ಶಿವಪ್ರಸಾದ್ ವಿಧಿವಶರಾಗಿದ್ದಾರೆ.

    ಕಳೆದ ಆರು ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿದ್ದ ಶಿವಪ್ರಸಾದ್ (70) ಅವರು ಗುರುವಾರ ಸಂಜೆ ನಿಧನರಾದರು. ವೃತ್ತಿಯಿಂದ ನೇತ್ರ ತಜ್ಞರಾಗಿದ್ದರು ಶೈಕ್ಷಣಿಕ ರಂಗಕ್ಕೂ ಕೊಡುಗೆ ನೀಡಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, ರಾಜ್ಯದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಹಿರಿಯ ಸಹೋದರ ಡಾ.ಜಿ.ಶಿವಪ್ರಸಾದ್ ನಿಧನರಾದ ಸುದ್ದಿ ಕೇಳಿ ದು:ಖವಾಯಿತು. ಡಾ.ಶಿವಪ್ರಸಾದ್ ತುಮಕೂರಿನಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಅವರ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಬರೆದು ಸಂತಾಪ ಸೂಚಿಸಿದ್ದಾರೆ.

  • ವೃಕ್ಷಮಾತೆಗೆ `ಛಲವಾದಿ ರತ್ನ’ ಪ್ರಶಸ್ತಿ ಪ್ರಧಾನ

    ವೃಕ್ಷಮಾತೆಗೆ `ಛಲವಾದಿ ರತ್ನ’ ಪ್ರಶಸ್ತಿ ಪ್ರಧಾನ

    ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಬೆಳಲಗೆರೆಯಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕರಿಗೆ ಛಲವಾದಿ ರತ್ನ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು.

    ಇಂದು ಬೆಳಗೆರೆಯಲ್ಲಿ ಕಟ್ಟೆಮನೆ ವಂಶಸ್ಥರು ಏಕಾದಶಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಉಪಮುಖ್ಯಮಂತ್ರಿಗಳಾದ ಜಿ. ಪರಮೇಶ್ವರ್ ರವರು ವೃಕ್ಷಮಾತೆ ಸಾಲುಮರದ ತಿಮ್ಮಕ್ಕರಿಗೆ `ಛಲವಾದಿ ರತ್ನ’ ಎಂಬ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಸಾಲುಮರದ ತಿಮ್ಮಕ್ಕರ ಸೇವೆಯನ್ನು ಹಾಡಿಹೊಗಳಿದ್ದಾರೆ.

    ಸರ್ಕಾರಿ ಶಾಲೆ ಮಕ್ಕಳಿಗೆ ಬಸ್ ಪಾಸ್ ವಿಚಾರ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್, ಮುಂದಿನ ದಿನಗಳಲ್ಲಿ ಖಾಸಗಿ ಶಾಲಾ ವಿದ್ಯಾರ್ಥಿಗಳಿಗೂ ಪಾಸ್ ಕೊಡುವ ಚಿಂತನೆ ಮಾಡಿರುವುದಾಗಿ ಹೇಳಿದ್ದಾರೆ. ಅಲ್ಲದೇ ಮೊದಲನೇ ಹಂತದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಪಾಸ್ ವಿತರಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ದೇಶದಲ್ಲಿರುವ ಜಾತಿ ವರ್ಗೀಕರಣ ನಿರ್ನಾಮ ಆಗ್ಬೇಕು: ಪರಮೇಶ್ವರ್

  • ಬಿಎಂಆರ್‌ಸಿಎಲ್‌ ಖಾತೆಗಾಗಿ ಸಿಎಂ ಎಚ್‍ಡಿಕೆ, ಡಿಸಿಎಂ ಪರಂ ನಡುವೆಯೇ ಹಗ್ಗಜಗ್ಗಾಟ!

    ಬಿಎಂಆರ್‌ಸಿಎಲ್‌ ಖಾತೆಗಾಗಿ ಸಿಎಂ ಎಚ್‍ಡಿಕೆ, ಡಿಸಿಎಂ ಪರಂ ನಡುವೆಯೇ ಹಗ್ಗಜಗ್ಗಾಟ!

    ಬೆಂಗಳೂರು: ಸಾಂದರ್ಭಿಕ ಶಿಶು ಮೈತ್ರಿ ಸರ್ಕಾರದಲ್ಲಿ ಈಗ ಮತ್ತೊಂದು ಹೊಸ ರಾಗ ಆರಂಭವಾಗಿದೆ. ಸಚಿವ ಸ್ಥಾನ ಹಂಚಿಕೆ ಸಮಸ್ಯೆ ಇನ್ನು ಬಾಕಿ ಇರುವಂತೆ ಸಿಎಂ ಹಾಗೂ ಡಿಸಿಎಂ ಮಧ್ಯೆ ಖಾತೆ ಹಂಚಿಕೆಯಲ್ಲಿ ಮನಸ್ತಾಪ ಎದುರಾಗುತ್ತಿದೆಯಂತೆ.

    ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ನಡುವೆ ಖಾತೆ ಹಂಚಿಕೆಗಾಗಿ ಹಗ್ಗ ಜಗ್ಗಾಟ ಪ್ರಾರಂಭವಾಗಿದೆ. ನನಗೆ ಅದು ಬೇಕು, ಕೊಟ್ಟುಬಿಡಿ ಎಂದು ಪರಮೇಶ್ವರ್ ಅವರು ಪಟ್ಟು ಹಿಡಿದಿದ್ದಾರಂತೆ.

    ಡಿಸಿಎಂ ಪರಮೇಶ್ವರ್ ಕೇಳಿದ್ದೇನು:
    ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿರುವ ಪರಮೇಶ್ವರ್ ಅವರು ಸದ್ಯ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಟ್ (ಬಿಎಂಆರ್ ಸಿಎಲ್) ಖಾತೆಯೂ ಬೇಕೆಂದು ಪಟ್ಟು ಹಿಡಿದಿದ್ದಾರೆ. ನಾನು ಈಗಾಗಲೇ ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿರುವೆ. ಹೀಗಾಗಿ ಬಿಎಂಆರ್ ಸಿಎಲ್ ಖಾತೆ ನನ್ನ ಬಳಿಯೇ ಇದ್ದರೆ, ಅಭಿವೃದ್ಧಿ ಕಾರ್ಯ ಸಾಧ್ಯವಾಗುತ್ತದೆ ಎಂದು ಹೊಸ ಬೇಡಿಕೆ ಇಟ್ಟಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಇತ್ತ ಜಿ.ಪರಮೇಶ್ವರ್ ಅವರ ಬೇಡಿಕೆಯನ್ನು ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ದೂರ ತಳ್ಳುತ್ತಿದ್ದಾರೆ. ಈ ಮೂಲಕ ಇಬ್ಬರ ನಡುವೆ ಹಗ್ಗಜಗ್ಗಾಟ ಪ್ರಾರಂಭವಾಗಿದ್ದು, ಸಮಸ್ಯೆ ಮಾಜಿ ಪ್ರದಾಣಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರ ಬಳಿಗೆ ಹೋಗುವ ಸಾಧ್ಯತೆಗಳಿವೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.