Tag: dcc bank

  • ದಾವಣಗೆರೆ ಸರ್ಕಾರಿ ಕಚೇರಿಯಲ್ಲಿ ಬ್ಯಾಂಕ್ ಅಧ್ಯಕ್ಷರಿಂದ್ಲೇ ಗುಂಡು-ತುಂಡು ಪಾರ್ಟಿ!

    ದಾವಣಗೆರೆ ಸರ್ಕಾರಿ ಕಚೇರಿಯಲ್ಲಿ ಬ್ಯಾಂಕ್ ಅಧ್ಯಕ್ಷರಿಂದ್ಲೇ ಗುಂಡು-ತುಂಡು ಪಾರ್ಟಿ!

    ದಾವಣಗೆರೆ: ಸರ್ಕಾರಿ ಅಧಿಕಾರಿಗಳಿಗೆ ಕಚೇರಿಗಳೇ ಬಾರ್ ಅಂಡ್ ರೆಸ್ಟೋರೆಂಟ್ ಆಗಿದೆ. ಅಧಿಕಾರಿಗಳು ಸರ್ಕಾರಿ ಕಚೇರಿಯಲ್ಲಿಯೇ ತಡರಾತ್ರಿ ಗುಂಡು ತುಂಡು ಪಾರ್ಟಿ ಮಾಡಿದ್ದು, ಪ್ರಶ್ನಿಸಿದ ಮಾಧ್ಯಮದವರಿಗೇ ಅವಾಜ್ ಹಾಕಿದ್ದಾರೆ.


    ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರ ಕಚೇರಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ನೇತೃತ್ವದಲ್ಲಿ ಗುಂಡು ತುಂಡು ಪಾರ್ಟಿ ಬಡೆದಿದೆ. ಈ ಪಾರ್ಟಿಯಲ್ಲಿ  ಡಿಸಿಸಿ ಬ್ಯಾಂಕ್ ಅಧಿಕಾರಿಗಳು, ಆಹಾರ ಇಲಾಖೆ ಸಿಬ್ಬಂದಿ ಸೇರಿ ಇತರ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ. ಆದ್ರೆ ಈ ಬಗ್ಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್ ಅವರನ್ನು ಕೇಳಿದ್ರೆ ಇದಕ್ಕೂ ನನಗೆ ಸಂಬಂಧವೇ ಇಲ್ಲ ಅಂತ ಹಾರಿಕೆಯ ಉತ್ತರ ನೀಡಿದ್ದಾರೆ.

    ಅಲ್ಲದೇ ಆಷಾಢ ಹಾಗಾಗಿ ಇಲ್ಲಿ ಬಂದು ಅಧಿಕಾರಿಗಳು ಗುಂಡು ತುಂಡು ಸೇವಿಸುತ್ತಾರೆ ಅಂತ ಹೇಳಿದ್ದಾರೆ. ಕ್ಯಾಮೆರಾ ಕಂಡ ತಕ್ಷಣ ಸ್ಥಳದಿಂದ ಹೊರಟ್ರು. ಇದೇ ವೇಳೆ ಸಿಬ್ಬಂದಿ ಸರ್ಕಾರಿ ಕಚೇರಿಯಲ್ಲಿ ಗುಂಡು ತುಂಡು ತಿನ್ನಬಾರದಾ ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳಲ್ಲಿದ್ದ ಅಧ್ಯಕ್ಷರ ಆಪ್ತನೊಬ್ಬ ಕ್ಯಾಮರಾ ಆಫ್ ಮಾಡುವಂತೆ ತಾಕೀತು ಮಾಡಿದ್ದಾನೆ.

  • ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ನಿವಾಸದ ಮೇಲೆ ಐಟಿ ದಾಳಿ

    ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ನಿವಾಸದ ಮೇಲೆ ಐಟಿ ದಾಳಿ

    ಶಿವಮೊಗ್ಗ: ನೋಟು ನಿಷೇಧ ವರ್ಷಚಾರಣೆಯಂದೇ ಶಿವಮೊಗ್ಗ ಜಿಲ್ಲಾ ಕೇದ್ರ ಸಹಕಾರಿ(ಡಿಸಿಸಿ) ಬ್ಯಾಂಕ್ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

    ಶಿವಮೊಗ್ಗದಲ್ಲಿರುವ ಡಿಸಿಸಿ ಬ್ಯಾಂಕ್ ಕಚೇರಿ, ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರ ನಿವಾಸದ ಮೇಲೆ  ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಶಿವಮೊಗ್ಗ, ತೀರ್ಥಹಳ್ಳಿಯ ಬೆಟ್ಟಮಕ್ಕಿ, ಕರಕುಚ್ಚಿಯಲ್ಲಿರುವ  ನಿವಾಸಗಳ ಮೇಲೂ ದಾಳಿ ನಡೆದಿದೆ.

    ಐಟಿ ದಾಳಿ ಮರೆಮಾಚಲು ನೆಟ್‍ವರ್ಕ್, ಸಾಫ್ಟ್ ವೇರ್ ಸಮಸ್ಯೆಯಿಂದ ವಹಿವಾಟು ಇಲ್ಲ ಎಂದು ಕಚೇರಿ ಹೊರಗೆ ಬೋರ್ಡ್ ಹಾಕಲಾಗಿದೆ. ನೋಟ್ ನಿಷೇಧವಾದ ಬಳಿಕ ಡಿಸಿಸಿ ಬ್ಯಾಂಕ್ ನಲ್ಲಿ ಅಪಾರ ಪ್ರಮಾಣದ ಹಣ ಜಮೆಯಾಗಿತ್ತು.

    ಈ ಹಿಂದೆ ಮಂಜುನಾಥ ಗೌಡ ಮೇಲೆ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ದಾಳಿ ನಡೆದಿತ್ತು. ಜತೆಗೆ ಅಪೆಕ್ಸ್ ಬ್ಯಾಂಕ್ ಅಕ್ರಮ ನೇಮಕಾತಿ, ನಕಲಿ ಚಿನ್ನ ಅಡವಿಟ್ಟು ಡಿಸಿಸಿ ಬ್ಯಾಂಕ್ ನಿಂದ ಅಕ್ರಮವಾಗಿ ಸಾಲ ಪಡೆದ 68 ಕೋಟಿ ರೂಪಾಯಿಯ ಹಗರಣದಲ್ಲಿಯೂ ಮಂಜುನಾಥ ಗೌಡ ಆರೋಪಿಯಾಗಿದ್ದಾರೆ.

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪನವರ ಕೆಜೆಪಿ ಪಕ್ಷದಿಂದ ಮಂಜುನಾಥ ಗೌಡ ತೀರ್ಥಹಳ್ಳಿಯಿಂದ ಸ್ಪರ್ಧಿಸಿ ಸೋತಿದ್ದರು. ಇತ್ತೀಚೆಗೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.