Tag: DC

  • ಪಬ್ಲಿಕ್ ಟಿವಿ ಬಿಗ್ ಇಂಪ್ಯಾಕ್ಟ್: ಶಾಲಾ ಕಟ್ಟಡ ದುರಸ್ತಿಗೆ ಜಿಲ್ಲಾಡಳಿತದಿಂದ 20ಲಕ್ಷ ರೂ. ಅನುದಾನ ಬಿಡುಗಡೆ

    ಪಬ್ಲಿಕ್ ಟಿವಿ ಬಿಗ್ ಇಂಪ್ಯಾಕ್ಟ್: ಶಾಲಾ ಕಟ್ಟಡ ದುರಸ್ತಿಗೆ ಜಿಲ್ಲಾಡಳಿತದಿಂದ 20ಲಕ್ಷ ರೂ. ಅನುದಾನ ಬಿಡುಗಡೆ

    ಬೆಳಗಾವಿ: ಟೆಂಟ್‍ನಲ್ಲಿ ವಿದ್ಯಾರ್ಥಿಗಳು ಪಾಠ ಕಲಿಯುತ್ತಿರುವ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿದ ಬಳಿಕ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಶಾಲಾ ದುರಸ್ತಿಗೆ ತಕ್ಷಣಕ್ಕೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿರುವುದಾಗಿ ಆದೇಶ ಹೊರಡಿಸಿದರು.

    ಶಿಥಿಲವಾದ ಶಾಲಾ ಕೊಠಡಿ ಹಿನ್ನೆಲೆ ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮಸ್ಥರು ಸರ್ಕಾರಿ ಶಾಲಾ ಮೈದಾನದಲ್ಲಿಯೇ ಮೊದಲ ದಿನವೇ ಟೆಂಟ್‍ನಲ್ಲಿ ವಿದ್ಯಾರ್ಥಿಗಳು ಪಾಠಕ್ಕೆ ಪಟ್ಟುಡಿದಿದ್ದರು. ಈ ಬಗ್ಗೆ ಸಂಪೂರ್ಣವಾಗಿ ವರದಿ ಬಿತ್ತರಿಸಿ ಪಬ್ಲಿಕ್ ಟಿವಿ ಶಾಲಾ ಮಕ್ಕಳ ಸಮಸ್ಯೆಯನ್ನು ಎಳೆಎಳೆಯಾಗಿ ಪ್ರಸಾರ ಮಾಡುವ ಮೂಲಕ ಸರ್ಕಾರದ ಗಮನಕ್ಕೆ ತಂದಿತ್ತು. ಪರಿಣಾಮ, ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಶಾಲಾ ದುರಸ್ತಿ ತಕ್ಷಣಕ್ಕೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿರುವುದಾಗಿ ಆದೇಶ ಹೊರಡಿಸಿದರು. ಇದನ್ನೂ ಓದಿ: ಯಾರಿಗೂ ತಿಳಿಯದೇ ವಾಟ್ಸಪ್ ಗ್ರೂಪ್‍ನಿಂದ ನಿರ್ಗಮಿಸುವುದು ಹೇಗೆ? 

    ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದ್ದೇನೂರು ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಬೀಡು ಬಿಟ್ಟಿರುವ ಪಬ್ಲಿಕ್ ಟಿವಿಯ ಪ್ರತಿನಿಧಿಗಳು ಮುದ್ದೇನೂರು ಗ್ರಾಮದ ಸರ್ಕಾರಿ ಶಾಲೆಯ ಸಮಸ್ಯೆಗಳ ಸರಮಾಲೆಯನ್ನು ಸರ್ಕಾರಕ್ಕೆ ಎಚ್ಚರಿಸಿತ್ತು. ಇದರ ಪರಿಣಾಮವಾಗಿ ರಾಜ್ಯ ಸರ್ಕಾರ ಮುದ್ದೇನೂರು ಗ್ರಾಮದ ಕನ್ನಡ ಶಾಲೆಯ ಏಂಟು ಕೊಠಡಿಗಳ ದುರಸ್ಥಿಗೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ.

    ಜೊತೆಗೆ ತಕ್ಷಣವೇ ನಿತೇಶ್ ಪಾಟೀಲ್ ಅವರು, ದುರಸ್ತಿ ಕಾರ್ಯವನ್ನು ಪ್ರಾರಂಭ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ಕೊಟ್ಟಿದ್ದಾರೆ.

  • ಪ್ಲೇ ಆಫ್ ಸನಿಹಕ್ಕೆ ಡೆಲ್ಲಿ – ಪಂಜಾಬ್ ಕನಸು ನುಚ್ಚುನೂರು

    ಪ್ಲೇ ಆಫ್ ಸನಿಹಕ್ಕೆ ಡೆಲ್ಲಿ – ಪಂಜಾಬ್ ಕನಸು ನುಚ್ಚುನೂರು

    ಮುಂಬೈ: ಪ್ಲೇ ಆಫ್‍ಗೇರಲು ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿದ ಡೆಲ್ಲಿ ತಂಡ ಪಂಜಾಬ್ ವಿರುದ್ಧ 17 ರನ್‍ಗಳ ಅಂತರದ ಗೆಲುವು ದಾಖಲಿಸಿತು. ಈ ಮೂಲಕ ಡೆಲ್ಲಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡರೆ, ಇತ್ತ ಪಂಜಾಬ್ ಈ ಸೋಲಿನೊಂದಿಗೆ ಬಹತೇಕ ಟೂರ್ನಿಯಿಂದ ಹೊರಬಿದ್ದಿದೆ.

    ಡೆಲ್ಲಿ ನೀಡಿದ 160 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡದ ಗೆಲುವಿಗಾಗಿ ಜಿತೇಶ್ ಶರ್ಮಾ ಮತ್ತು ರಾಹುಲ್ ಚಾಹರ್ ಹೋರಾಟ ನಡೆಸಿದರು. ಕೊನೆಯಲ್ಲಿ ಡೆಲ್ಲಿ ಬೌಲರ್‌ಗಳ ವೇಗಕ್ಕೆ ಥಂಡಾ ಹೂಡಿದ ಪಂಜಾಬ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 142 ರನ್ ಸಿಡಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

    ಅಲ್ಪಮೊತ್ತವನ್ನು ಬೆನ್ನಟ್ಟುವ ವಿಶ್ವಾಸದಲ್ಲಿ ಕಣಕ್ಕಿಳಿದ ಪಂಜಾಬ್‍ನ ಆರಂಭಿಕ ಆಟಗಾರರಾದ ಜಾನಿ ಬೈರ್‌ಸ್ಟೋವ್ ಮತ್ತು ಶಿಖರ್ ಧವನ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಬೈರ್‌ಸ್ಟೋವ್ ಸಿಡಿಯುವ ಸೂಚನೆ ನೀಡಿ 28 ರನ್ (15 ಎಸೆತ, 4 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು. ಆ ಬಳಿಕ ವಿಕೆಟ್ ಒಂದರ ಹಿಂದೆ ಒಂದು ಬೀಳತೊಡಗಿತು. ಈ ನಡುವೆ ಉತ್ತಮವಾಗಿ ಬ್ಯಾಟ್‍ಬೀಸುತ್ತಿದ್ದ ಧವನ್ 19 ರನ್ (16 ಎಸೆತ, 3 ಬೌಂಡರಿ) ವಿಕೆಟ್ ಕಳೆದುಕೊಂಡರು. ಆ ಬಳಿಕ ಡೆಲ್ಲಿ ಚೇತರಿಸಿಕೊಳ್ಳಲಿಲ್ಲ.

    ಈ ಮೊದಲು ಟಾಸ್ ಗೆದ್ದ ಪಂಜಾಬ್ ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಡೆಲ್ಲಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ಇನ್ನೋರ್ವ ಆರಂಭಿಕ ಆಟಗಾರ ಸರ್ಫರಾಜ್ ಖಾನ್ ಸ್ಫೋಟಕ 32 ರನ್ (16 ಎಸೆತ, 5 ಬೌಂಡರಿ, 1 ಸಿಕ್ಸ್) ಚಚ್ಚಿ ಔಟ್ ಆದರು.

    ಇನ್ನೊಂದೆಡೆ ಮಿಚೆಲ್ ಮಾರ್ಷ್ ಡೆಲ್ಲಿ ರನ್ ಏರಿಸುವ ಹೊಣೆ ಹೊತ್ತರು. ಇವರಿಗೆ ಕೆಲ ಹೊತ್ತು ಲಲಿತ್ ಯಾದವ್ 24 ರನ್ (21 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು. ಆ ಬಳಿಕ ಪಟಪಟನೇ ವಿಕೆಟ್ ಕಳೆದುಕೊಂಡು ಸಾಗಿದ ಡೆಲ್ಲಿಗೆ ಮಾರ್ಷ್ ಮಾತ್ರ ಏಕಾಂಗಿ ಹೋರಾಟ ನಡೆಸಿ ಅರ್ಧಶತಕ ಸಿಡಿಸಿ ಮಿಂಚಿದರು.

    ಪಂಜಾಬ್ ಬೌಲರ್‌ಗಳಿಗೆ ಕಾಡಿದ ಮಾರ್ಷ್ 63 ರನ್ (48 ಎಸೆತ, 4 ಬೌಂಡರಿ, 3 ಸಿಕ್ಸ್) ಬಾರಿಸಿ ವಿಕೆಟ್ ಕಳೆದುಕೊಂಡರು. ಕೊನೆಯಲ್ಲಿ ಅಕ್ಷರ್ ಪಟೇಲ್ ಅಜೇಯ 17 ರನ್ (20 ಎಸೆತ, 2 ಬೌಂಡರಿ) ಸಿಡಿಸಿ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು.

    ಅಂತಿಮವಾಗಿ ಡೆಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಒಟ್ಟುಗೂಡಿಸಿತು. ಪಂಜಾಬ್ ಪರ ಲಿವಿಂಗ್‍ಸ್ಟೋನ್ ಮತ್ತು ಅರ್ಷದೀಪ್ ಸಿಂಗ್ ತಲಾ 3 ವಿಕೆಟ್ ಕಿತ್ತು ಡೆಲ್ಲಿ ರನ್ ಓಟಕ್ಕೆ ಬ್ರೇಕ್ ಹಾಕಿದರು.

  • ವೈದ್ಯರ ಎಡವಟ್ಟು – ಆಪರೇಷನ್ ಮಾಡಿದ ಎರಡೇ ಗಂಟೆಗೆ ಬಿಚ್ಚಿಕೊಂಡ ಹೊಲಿಗೆ!

    ವೈದ್ಯರ ಎಡವಟ್ಟು – ಆಪರೇಷನ್ ಮಾಡಿದ ಎರಡೇ ಗಂಟೆಗೆ ಬಿಚ್ಚಿಕೊಂಡ ಹೊಲಿಗೆ!

    ವಿಜಯಪುರ: ಜಿಲ್ಲಾಸ್ಪತ್ರೆಯ ವೈದ್ಯರು ದೊಡ್ಡ ಎಡವಟ್ಟು ಮಾಡಿದ್ದಾರೆ. ಕಳೆದ 10 – 15 ದಿನದಲ್ಲಿ 40 ಮಹಿಳೆಯರಿಗೆ ಸಿಜೇರಿಯನ್ ಆಗಿದ್ದು, 25ಕ್ಕೂ ಹೆಚ್ಚು ಮಂದಿಯ ಹೊಲಿಗೆಗಳು ಬಿಚ್ಚಿಕೊಂಡಿವೆ.

    ಜಿಲ್ಲಾಸ್ಪತ್ರೆ ಅಂದ್ರೆ ಸಾಕು ಜನರು ಬೆಚ್ಚಿ ಬೀಳ್ತಾರೆ. ಯಾಕಂದ್ರೆ ಅಲ್ಲಿಯ ಅವ್ಯವಸ್ಥೆ, ವೈದ್ಯರ ಎಡವಟ್ಟುಗಳನ್ನು ಕಂಡು ಜಿಲ್ಲಾಸ್ಪತ್ರೆಗಳಿಗೆ ಹೋಗಲು ಜನ ಭಯ ಪಡುತ್ತಾರೆ. ಆದ್ರೆ ಬಡ ರೋಗಿಗಳಿಗೆ ಮಾತ್ರ ಜಿಲ್ಲಾಸ್ಪತ್ರೆ ಆನಿವಾರ್ಯ. ಆದರೆ ವಿಜಯಪುರದ ಜಿಲ್ಲಾಸ್ಪತ್ರೆಯ ಎಡವಟ್ಟಿನಿಂದ ಇದೀಗ ಬಾಣಂತೀಯರು ನರಳಾಡುವಂತಾಗಿದೆ. ಇದನ್ನೂ ಓದಿ: ವಾಹನ ಚಾಲನೆ ಮಾಡುತ್ತಲೇ ಮೂರ್ಛೆ ಹೋದ ಚಾಲಕ – ಪ್ರವಾಸಿಗರಿದ್ದ ವಾಹನ ಪಲ್ಟಿ

    ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರಿಗೆ ಸಿಜೇರಿಯನ್ ನಂತರ ಹಾಕಿದ ಹೊಲಿಗೆಗಳು ಬಿಚ್ಚಿ ಬಾಣಂತಿಯರು ಪರದಾಡುವಂತಾಗಿದೆ. 25ಕ್ಕೂ ಹೆಚ್ಚು ಬಾಣಂತಿಯರಿಗೆ ಹಾಕಿದ ಹೊಲಿಗೆಗಳು ಬಿಚ್ಚಿಹೋಗಿವೆ. ಅಲ್ಲದೆ ಹಲವರಿಗೆ ಹೊಲಿಗೆ ಬಿಚ್ಚಿದ ಕಾರಣ ರಕ್ತಸ್ರಾವವಾಗಿ ಸೋಂಕಾಗಿದೆ. ಇನ್ನು ಬಾಣಂತಿಯರಿಗೆ ನೀಡುವ ಇಂಜೆಕ್ಷನ್, ಮಾತ್ರೆ ಸೇರಿದಂತೆ ಸರಿಯಾಗಿ ತಪಾಸಣೆ ಕೂಡ ಮಾಡದೆ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪವಿದ್ದು, ಬಾಣಂತಿಯರಿಗೆ ಹಾಕಿದ ಹೊಲಿಗೆಗಳು ಬಿಚ್ಚಿ ಮೂರ್ನಾಲ್ಕು ದಿನಗಳು ಕಳೆದರು ಇದುವರೆಗೂ ಅವರಿಗೆ ಮರಳಿ ಹೊಲಿಗೆ ಹಾಕದೆ ವೈದ್ಯರು ಅಸಡ್ಡೆ ತೋರಿದ್ದಾರೆ. ವೈದ್ಯರ ಈ ಎಡವಟ್ಟಿನಿಂದ ಬಾಣಂತಿಯರು ಕಣ್ಣೀರಿಡುತ್ತಿದ್ದಾರೆ. ಇದನ್ನೂ ಓದಿ: BBMP ಕಸದ ಲಾರಿಗೆ ಮತ್ತೊಂದು ಬಲಿ – ಫುಡ್ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವು

    ಬಾಣಂತಿಯರ ಈ ಗೋಳಾಟದ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾ ಸರ್ಜನ್ ಎಸ್ ಲಕ್ಕಣ್ಣವರ್ ವೈದ್ಯರನ್ನು ಕಳುಹಿಸಿ ಬಾಣಂತಿಯರ ಚಿಕಿತ್ಸೆಗೆ, ತಪಾಸಣೆಗೆ ಮುಂದಾದರು. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್ ಲಕ್ಕಣ್ಣವರ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಂದೇ ಆಪರೇಷನ್ ಥೇಟರ್ ಇದೆ. ಸಿಜೇರಿಯನ್ ಹೆರಿಗೆ ಆದವರ ಇಂಜೆಕ್ಷನ್ ಖಾಲಿ ಆಗಿದ್ದು ನಿಜ. ಇದರ ಜೊತೆಗೆ ಹೊಲಿಗೆ ಬಿಚ್ಚಿದ ಬಾಣಂತಿಯರಲ್ಲಿ ಹಿಮೋಗ್ಲೋಬಿನ್ ಕಡಿಮೆ ಆದ ಕಾರಣ ಈ ರೀತಿ ಆಗಿದೆ. ಇದರಲ್ಲಿ ನಮ್ಮ ತಪ್ಪು ಇದೆ ಅವರ ತಪ್ಪು ಇದೆಎಂದು ಸಮಜಾಯಿಸಿ ನೀಡಿದ್ದಾರೆ. ಇತ್ತ ಜಿಲ್ಲಾಧಿಕಾರಿ ಬಾಣಂತಿಯರಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಜಿಲ್ಲಾಸ್ಪತ್ರೆಯ ವೈದ್ಯರಿಗೆ ಸೂಚಿಸಿದ್ದಾರೆ.

  • 6.47 ಕೋಟಿ ರೂ. ಮೌಲ್ಯದ 4.28 ಎಕರೆ ಪ್ರದೇಶ ಒತ್ತುವರಿ ತೆರವು: ಜೆ. ಮಂಜುನಾಥ್

    6.47 ಕೋಟಿ ರೂ. ಮೌಲ್ಯದ 4.28 ಎಕರೆ ಪ್ರದೇಶ ಒತ್ತುವರಿ ತೆರವು: ಜೆ. ಮಂಜುನಾಥ್

    ಬೆಂಗಳೂರು: ನಗರ ಜಿಲ್ಲೆಯ 5 ತಾಲೂಕುಗಳಲ್ಲಿ ಸರ್ಕಾರಿ ಜಮೀನುಗಳಾದ ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆ ಮತ್ತು ಇತರೆ ಸರ್ಕಾರಿ ಜಮೀನುಗಳನ್ನು ರಕ್ಷಿಸಲು ಇಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.

    ಬೆಂಗಳೂರು ನಗರ ಜಿಲ್ಲೆಯಲ್ಲಿ 0.11 ವಿಸ್ತೀರ್ಣದ ಒಟ್ಟು ಎರಡು ಸರ್ಕಾರಿ ಕೆರೆಗಳು ಒತ್ತುವರಿಯಾಗಿದ್ದು ಅದರ ಅಂದಾಜು ಸುಮಾರು 55 ಲಕ್ಷ ರೂ. ಮೌಲ್ಯವಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಅಗರ ಗ್ರಾಮದ 0.06 ವಿಸ್ತೀರ್ಣದ 30 ಲಕ್ಷ ರೂ. ಹಾಗೂ ಅನೇಕಲ್ ತಾಲೂಕಿನ ಕಸಬಾ ಹೋಬಳಿಯ ಬ್ಯಾಗಡದೇನಹಳ್ಳಿ ಗ್ರಾಮದ 0.05 ವಿಸ್ತೀರ್ಣದ 25 ಲಕ್ಷ ರೂ. ಮೌಲ್ಯದ ಕೆರಗಳ ಒತ್ತುವರಿ ಮಾಡಿ ತೆರವುಗೊಳಿಸಲಾಗಿದೆ. ಇದನ್ನೂ ಓದಿ: ಸಿಎಂ ದಾವೋಸ್ ಪ್ರವಾಸ ನಾಳೆ ನಿರ್ಧಾರ: ಕುತೂಹಲ ಮೂಡಿಸಿದ ಬಿಜೆಪಿ ಹೈಕಮಾಂಡ್ ಸಂದೇಶ

    ಬೆಂಗಳೂರು ನಗರ ಜಿಲ್ಲೆಯಲ್ಲಿ 1.35 ವಿಸ್ತೀರ್ಣದ ಒಟ್ಟು ಎರಡು ನಕಾಶೆ ದಾರಿ ಒತ್ತುವರಿಯಾಗಿದ್ದು ಅದರ ಅಂದಾಜು ಸುಮಾರು 95 ಲಕ್ಷ ರೂ. ಮೌಲ್ಯವಾಗಿದೆ. ಆನೇಕಲ್ ತಾಲ್ಲೂಕಿನ ಕಸಬಾ ಹೋಬಳಿಯ ಗೆರೆಟಗನಬೆಲೆ ಗ್ರಾಮದ 1-20 ವಿಸ್ತೀರ್ಣದ ರೂ.75 ಲಕ್ಷ ಹಾಗೂ ಅತ್ತಿಬೆಲೆ ಹೋಬಳಿಯ ಕೂಡ್ಲೀಪುರ ಗ್ರಾಮದ 0-15 ವಿಸ್ತೀರ್ಣದ 20 ಲಕ್ಷ ರೂ. ಮೌಲ್ಯದ ನಕಾಶೆ ದಾರಿ ಒತ್ತುವರಿ ಮಾಡಿ ತೆರವು ಮಾಡಲಾಗಿದೆ.

    ಯಲಹಂಕ ತಾಲೂಕಿನ ಜಾಲ-1 ಹೋಬಳಿಯ ಹುತ್ತನಹಳ್ಳಿ ಗ್ರಾಮದ 2.00 ವಿಸ್ತೀರ್ಣದ ಸರ್ಕಾರಿ ಗೋಮಾಳ ಒತ್ತುವರಿಯಾಗಿದ್ದು ಅದರ ಅಂದಾಜು ಸುಮಾರು 380 ಲಕ್ಷ ರೂ. ಮೌಲ್ಯದ ಒತ್ತುವರಿ ಮಾಡಿ ತೆರೆವುಗೊಳಿಸಲಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ನ್ಯಾನಪನಹಳ್ಳಿ ಗ್ರಾಮದ 0-00.08 ವಿಸ್ತೀರ್ಣದ ಸರ್ಕಾರಿ ಗುಂಡುತೋಪು ಒತ್ತುವರಿಯಾಗಿದ್ದು ಅದರ ಅಂದಾಜು ಸುಮಾರು 2.19 ಲಕ್ಷ ರೂ. ಮೌಲ್ಯದ ಒತ್ತುವರಿ ಮಾಡಿ ತೆರವುಗೊಳಿಸಲಾಗಿದೆ. ಇದನ್ನೂ ಓದಿ: ಬಾಹ್ಯಾಕಾಶದಿಂದ ನೆಲಕ್ಕೆ ಅಪ್ಪಳಿಸಿದ ಲೋಹದ ಚೆಂಡುಗಳು – ಮೂರು ಗ್ರಾಮದಲ್ಲಿ ಕಂಪನ

    ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ದೊಡ್ಡತಿಮ್ಮಸಂದ್ರ ಗ್ರಾಮದ 0-19 ವಿಸ್ತೀರ್ಣದ 100.00 ಲಕ್ಷ ರೂ. ಮೌಲ್ಯದ ಹಾಗೂ ಸರ್ಜಾಪುರ ಹೋಬಳಿಯ ಹಲಸಹಳ್ಳಿ ತಿಪ್ಪಸಂದ್ರ ಗ್ರಾಮದ 0-02 ವಿಸ್ತೀರ್ಣದ 15 ಲಕ್ಷ ರೂ. ಮೌಲ್ಯದ ಸರ್ಕಾರಿ ಖರಾಬು ಒತ್ತುವರಿ ಮಾಡಿ ತೆರೆವುಗೊಳಿಸಲಾಗಿದೆ. ಒಟ್ಟು 6,47,19,000 ಮೌಲ್ಯದ 4.28 ಎ/ಗು ವಿಸ್ತೀರ್ಣದ ಕೆರೆ, ಸರ್ಕಾರಿ ಗೋಮಾಳ, ಗುಂಡು ತೋಪು ಹಾಗೂ ಸರ್ಕಾರಿ ಖರಾಬು ಒತ್ತುವರಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ಹಂಚಿಕೊಂಡರು.

  • ಟೀಚರ್ಸ್ ಎಕ್ಸಾಂಗೆ ಟಫ್ ರೂಲ್ಸ್ ಜಾರಿ – ಯಾವುದಕ್ಕೆ ನಿಷೇಧ?

    ಟೀಚರ್ಸ್ ಎಕ್ಸಾಂಗೆ ಟಫ್ ರೂಲ್ಸ್ ಜಾರಿ – ಯಾವುದಕ್ಕೆ ನಿಷೇಧ?

    ಬೆಂಗಳೂರು: 15 ಸಾವಿರ ಶಿಕ್ಷಕರ ನೇಮಕಾತಿ ಪರೀಕ್ಷೆ ನಿಗಧಿಯಾಗಿರುವಂತೆ ಮೇ 21, 22 ರಂದು ನಡೆಯಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಪರೀಕ್ಷಾ ಸಿದ್ಧತೆ ಕುರಿತು ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ, ಪಿಎಸ್‌ಐ ಮತ್ತು ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅಕ್ರಮದ  ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಪರೀಕ್ಷೆ ಅಕ್ರಮ ಆಗದಂತೆ ಕ್ರಮವಹಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: MBP ನನ್ನ ಸ್ನೇಹಿತರು, ಬೇಕೆಂದಾಗ ಭೇಟಿ ಮಾಡ್ತೀನಿ: ಡಿಕೆಶಿಗೆ ಅಶ್ವಥ್ ನಾರಾಯಣ ತಿರುಗೇಟು

    bc nagesh

    ಪ್ರತಿ ಜಿಲ್ಲೆಗಳಲ್ಲಿ ಡಿಸಿ, ಸಿಇಓ, ಎಸ್ಪಿ ನೇತೃತ್ವದಲ್ಲಿ ಕಮಿಟಿ ರಚನೆ ಮಾಡಲಾಗಿದ್ದು, ಸಂಪೂರ್ಣ ಜವಾಬ್ದಾರಿ ಅವರಿಗೇ ನೀಡಲಾಗಿದೆ. ಶಿಕ್ಷಕರ ಪರೀಕ್ಷೆಗೆ 1,06,083 ಅಭ್ಯರ್ಥಿಗಳು ನೋಂದಣಿಯಾಗಿದ್ದು, ರಾಜ್ಯದ 435 ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಚಿಕ್ಕೋಡಿ ಜಿಲ್ಲೆಯೊಂದರಲ್ಲೇ 11 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿರೋದ್ರಿಂದ ಅತಿ ಹೆಚ್ಚು ಪರೀಕ್ಷಾ ಕೇಂದ್ರಗಳು ಇವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ಸಿದ್ದು ಆಪ್ತರ ಮೇಲೆ ಅನುಮಾನ ಪಟ್ಟಿದ್ದಾರಾ ಡಿಕೆಶಿ?

    ಏನಿದೇ ಮಾರ್ಗಸೂಚಿಯಲ್ಲಿ?

    • ಪರೀಕ್ಷಾ ಕೇಂದ್ರಗಳಲ್ಲಿ ಎರಡು ರೀತಿ ಪರಿಶೀಲನಾ ವ್ಯವಸ್ಥೆ.
    • ಮೊಲದು ಪೊಲೀಸರಿಂದ, ಬಳಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ
    • ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು ಮೊಬೈಲ್, ವಾಚ್, ಎಲೆಕ್ಟ್ರಾನಿಕ್‌ ಉಪಕರಣಗಳ ನಿಷೇಧ
    • ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು ಒಂದು ಗಂಟೆ ಮುಂಚೆ ಬರಬೇಕು.
    • ಪ್ರತಿ ಕೇಂದ್ರಕ್ಕೂ ಶಿಕ್ಷಣ ಇಲಾಖೆಯಿಂದಲೇ ಗಡಿಯಾರ ವ್ಯವಸ್ಥೆ

    TET EXAM 2

    • ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಕೆ.
    • ಸಿಸಿ ಟಿವಿ ಮಾನಿಟರ್ ಮಾಡಲು ವಿಶೇಷ ತಂಡ ರಚನೆ.
    • ಒಂದು ಕೊಠಡಿಗೆ 20 ಅಭ್ಯರ್ಥಿಗಳು ಕೂರಲು ಅವಕಾಶ
    • ಪರೀಕ್ಷೆಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟ
    • ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಮೆಟಲ್ ಡಿಟೆಕ್ಟಿವ್ ಅಳವಡಿಕೆಗೆ ಕ್ರಮ.
    Students Exam
    ಸಾಂದರ್ಭಿಕ ಚಿತ್ರ
    • ಪ್ರತಿ ಜಿಲ್ಲೆಗೆ ಡಿಸಿ, ಸಿಇಓ, ಎಸ್ಪಿ ನೇತೃತ್ವದಲ್ಲಿ ಸಮಿತಿ ನೇಮಕ. ಪರೀಕ್ಷೆ ಸಂಪೂರ್ಣ ಜವಾಬ್ದಾರಿ ಈ ಸಮಿತಿಗೆ.
    • ಪ್ರತಿ ಜಿಲ್ಲೆಗಳಲ್ಲಿ ಸ್ಕ್ವಾರ್ಡ್‌ ವ್ಯವಸ್ಥೆ ಇರಲಿದೆ.
    • ಪರೀಕ್ಷೆಗೆ ಖಾಸಗಿ ಶಾಲಾ ಕೊಠಡಿಗಳ ಬಳಕೆ, ಆ ಶಾಲಾ ಶಿಕ್ಷಕರನ್ನು ಎಕ್ಸಾಂಗೆ ಬಳಸಿಕೊಳ್ಳೊಲ್ಲ.
    • ಪ್ರತಿ ಕೇಂದ್ರಕ್ಕೂ ತಹಶಿಲ್ದಾರರ್ ಮೇಲ್ಪಟ್ಟ ಅಧಿಕಾರಿಗಳ ನೇಮಕ ಮಾಡಲಾಗಿದೆ.
    • ಪ್ರತಿ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ

  • ವಾರ್ನರ್, ಪೊವೆಲ್ ಪರಾಕ್ರಮ – ಹೈದರಾಬಾದ್ ಹೈರಾಣ

    ವಾರ್ನರ್, ಪೊವೆಲ್ ಪರಾಕ್ರಮ – ಹೈದರಾಬಾದ್ ಹೈರಾಣ

    ಮುಂಬೈ: ಬ್ಯಾಟಿಂಗ್‍ನಲ್ಲಿ ಡೇವಿಡ್ ವಾರ್ನರ್ ಮತ್ತು ಪೊವೆಲ್ ಪರಾಕ್ರಮದ ಮುಂದೆ ಧೂಳಿಪಟವಾದ ಹೈದರಾಬಾದ್ ಬೌಲರ್‌ಗಳ ಉರಿ ಚೆಂಡಿನ ದಾಳಿ ಒಂದು ಕಡೆಯಾದರೆ, ಇನ್ನೊಂದೆಡೆ ಬ್ಯಾಟ್ಸ್‌ಮ್ಯಾನ್‌ಗಳ ವೈಫಲ್ಯದಿಂದಾಗಿ ಡೆಲ್ಲಿ ವಿರುದ್ಧ ಹೈದರಾಬಾದ್ 21 ರನ್‍ಗಳ ಅಂತರದಿಂದ ಸೋಲಿಗೆ ಶರಣಾಯಿತು.

    208 ರನ್‍ಗಳ ಬಾರಿ ಮೊತ್ತವನ್ನು ಚೇಸ್ ಮಾಡುವ ವೇಳೆ ಹೈದರಾಬಾದ್ ಪರ ನಿಕೋಲಸ್ ಪೂರನ್ ಏಕಾಂಗಿ ಹೋರಾಟ ನಡೆಸಿದರು. ಸ್ಫೋಟಕ ಬ್ಯಾಟಿಂಗ್ ಮೂಲಕ ಹೈದರಾಬಾದ್‍ಗೆ ಗೆಲುವಿನ ಆಸೆ ಚಿಗುರಿಸಿದ ಪೂರನ್ 62 ರನ್ (34 ಎಸೆತ, 2 ಬೌಂಡರಿ, 6 ಸಿಕ್ಸ್) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟ್ ಆಗುವುದರೊಂದಿಗೆ ಗೆಲುವಿನ ಆಸೆಗೆ ಬ್ರೇಕ್ ಬಿತ್ತು. ಅಂತಿಮವಾಗಿ ಹೈದರಾಬಾದ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 186 ರನ್‍ಗಳಿಸಿ 21 ರನ್‍ಗಳಿಂದ ಸೋಲು ಅನುಭವಿಸಿತು.

    ಡೆಲ್ಲಿ ನೀಡಿದ ಬೃಹತ್ ಗುರಿ ಬೆನ್ನಟ್ಟುವಲ್ಲಿ ಹೈದರಾಬಾದ್ ಆರಂಭದಲ್ಲೇ ಎಡವಿತು. ತಂಡದ ಮೊತ್ತ 24 ರನ್ ಆಗುವಷ್ಟರಲ್ಲಿ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ರಾಹುಲ್ ತ್ರಿಪಾಠಿ ಮತ್ತು ಮಾಕ್ರಾರ್ಮ್ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದರೂ ಹೆಚ್ಚು ಹೊತ್ತು ನಡೆಯಲಿಲ್ಲ.

    ಡೆಲ್ಲಿ ಬೌಲರ್‌ಗಳ ಶಿಸ್ತಿನ ದಾಳಿಗೆ ತ್ರಿಪಾಠಿ 22 ರನ್ (18 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ಮಾಕ್ರಾರ್ಮ್ 42 ರನ್ (25 ಎಸೆತ, 4 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರು.

    ಮೊದಲು ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನ ನೀಡಿದರು. ನಾಯಕನ ನಿರ್ಧಾರದಂತೆ ಹೈದರಾಬಾದ್ ಬೌಲರ್‌ಗಳು ಆರಂಭದಲ್ಲೇ ಮನ್‍ದೀಪ್ ಸಿಂಗ್ ಮತ್ತು ಮಿಚೆಲ್ ಮಾರ್ಷ್ ಅವರ ಪ್ರಮುಖ 2 ವಿಕೆಟ್ ಕಿತ್ತು ಆರಂಭಿಕ ಮುನ್ನಡೆಯನ್ನು ತಂದುಕೊಟ್ಟರು.

    ಆರಂಭಿಕ ಆಘಾತದ ಬಳಿಕ ಡೆಲ್ಲಿ ತಂಡಕ್ಕೆ ಡೇವಿಡ್ ವಾರ್ನರ್ ಮತ್ತು ರಿಷಭ್ ಪಂತ್ ಚೇತರಿಕೆ ನೀಡಿದರು. ಪಂತ್ 26 ರನ್ (16 ಎಸೆತ, 1 ಬೌಂಡರಿ, 3 ಸಿಕ್ಸ್) ಸಿಡಿಸಿ ವಿಕೆಟ್ ಕೈಚೆಲ್ಲಿಕೊಂಡರು.

    ವಾರ್ನರ್, ಪೊವೆಲ್ ರಣಾರ್ಭಟ:
    ಮೂರು ವಿಕೆಟ್ ಕಳೆದುಕೊಂಡ ಬಳಿಕ ಡೆಲ್ಲಿ ತಂಡಕ್ಕೆ ಡೇವಿಡ್ ವಾರ್ನರ್ ಮತ್ತು ರೋವ್ಮನ್ ಪೊವೆಲ್ ಮನಬಂತಂತೆ ಬ್ಯಾಟ್‍ಬೀಸಿದರು. ಹೈದರಾಬಾದ್ ಬೌಲರ್‌ಗಳ ಉರಿ ಚೆಂಡಿನ ದಾಳಿಯನ್ನು ಬೌಂಡರಿ, ಸಿಕ್ಸರ್‌ಗೆ ಸರಾಗವಾಗಿ ಅಟ್ಟಿದ ಈ ಜೋಡಿ ವೇಗವಾಗಿ ರನ್ ಏರಿಸಲು ಆರಂಭಿಸಿತು.

    ಅದರಲ್ಲೂ ವಾರ್ನರ್ ಅಂತು ತಮ್ಮ ಈ ಹಿಂದಿನ ಫ್ರಾಂಚೈಸ್ ವಿರುದ್ಧ ಸೇಡು ತಿರಿಸಿಕೊಳ್ಳುತ್ತಿರುವಂತೆ ಬೌಂಡರಿ, ಸಿಕ್ಸ್ ಚಚ್ಚಿ ಕಾಡಿದರು. ಒಂದು ಹಂತದಲ್ಲಿ 180ರ ಗಡಿದಾಟುವ ಹಂತದಲ್ಲಿದ್ದ ವೇಳೆ ಪೊವೆಲ್ ಸ್ಫೋಟಕ ಆಟಕ್ಕೆ ಮುಂದಾದರು ಬಲಿಷ್ಠ ಬೌಲಿಂಗ್ ಪಡೆ ಹೊಂದಿದ್ದ ಹೈದರಾಬಾದ್ ಬೌಲರ್‌ಗಳಿಗೆ ನೀರು ಕುಡಿಸಿದ ಈ ಜೋಡಿ 4 ವಿಕೆಟ್‍ಗೆ ಮುರಿಯದ 122 ರನ್ (66 ಎಸೆತ) ಜೊತೆಯಾಟವಾಡಿ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಅಂತಿಮವಾಗಿ ವಾರ್ನರ್ ಅಜೇಯ 92 ರನ್ (58 ಎಸೆತ, 12 ಬೌಂಡರಿ, 3 ಸಿಕ್ಸ್) ಮತ್ತು ಪೊವೆಲ್ 67 ರನ್ (35 ಎಸೆತ, 3 ಬೌಂಡರಿ, 6 ಸಿಕ್ಸ್) ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 207 ರನ್‍ಗಳ ಬೃಹತ್ ಮೊತ್ತ ಪೇರಿಸಿದರು.

    ರನ್ ಏರಿದ್ದು ಹೇಗೆ?
    36 ಎಸೆತ 50 ರನ್
    67 ಎಸೆತ 100 ರನ್
    150 ರನ್ 99 ಎಸೆತ
    200 ರನ್ 119 ಎಸೆತ
    207 ರನ್ 120 ಎಸೆತ

  • ನಾನು ಧರಣಿ ಕುಳಿತರು ಸ್ಥಳಕ್ಕೆ ಡಿಸಿ ಬರಲಿಲ್ಲ, ನಾನೇನು ದನಕಾಯೋನ: ಹೆಚ್‍ಡಿ.ರೇವಣ್ಣ

    ನಾನು ಧರಣಿ ಕುಳಿತರು ಸ್ಥಳಕ್ಕೆ ಡಿಸಿ ಬರಲಿಲ್ಲ, ನಾನೇನು ದನಕಾಯೋನ: ಹೆಚ್‍ಡಿ.ರೇವಣ್ಣ

    ಹಾಸನ: ಆಲೂಗೆಡ್ಡೆ ಬಿತ್ತನೆ ಬೀಜ ವಿಚಾರವಾಗಿ ಡಿಸಿ ಸಭೆ ಕರೆದಿದ್ದಾರೆ. ನನ್ನ ಪಿಎಗೆ ಫೋನ್ ಮಾಡಿ ಹೇಳಿದ್ದಾರೆ. ನನಗೆ ಯಾವುದೇ ಲೆಟರ್ ಕೊಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ವಿರುದ್ಧ ಮಾಜಿಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದರು.

    ಹಾಸನದಲ್ಲಿ ಮಾತನಾಡಿದ ಅವರು, ಡಿಸಿ ಸಭೆಗೆ ಹೋದರೆ ಬೆಲೆ ಕೊಡಲ್ಲ. ಡಿಸಿ ಎಷ್ಟು ದಿನ ಆಡ್ತಾನೆ ಆಡ್ಲಿ ಎಂದು ಬೇಸರ ಹೊರಹಾಕಿದರು. ರಾತ್ರಿ ವೇಳೆ ಹಾಸನ ತಾಲೂಕು ಕಚೇರಿ ಕಟ್ಟಡ ಒಡೆದು ಹಾಕಿದ ಬಗ್ಗೆಯೂ ಅಸಮಾಧಾನ ಹೊರಹಾಕಿದ ರೇವಣ್ಣ ಅವರು, ಡಿಸಿಯವರಿಗೆ ಪುರುಸೊತ್ತಿಲ್ಲ, ರಾತ್ರಿ ವೇಳೆ ಬಿಲ್ಡಿಂಗ್ ಹೊಡೆಯುವುದರಲ್ಲಿ ಬ್ಯುಸಿ ಇದ್ದಾರೆ. ಡಿಸಿ ಅನ್ನೋ ಪದ ತೆಗೆಯಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ:  ಹನುಮಾನ್ ಚಾಲೀಸಾ ನುಡಿಸುವುದು ಒಂದು ದಿನದ ವಿಷಯವಲ್ಲ, ಅದು ಮುಂದುವರಿಯಬೇಕು: ರಾಜ್ ಠಾಕ್ರೆ 

    ನಾನು ಒಬ್ಬ ಶಾಸಕನಾಗಿದ್ದೇನೆ. ನನಗೂ ಎರಡು ಹೋಬಳಿ ಬರುತ್ತೆ. ಮಂತ್ರಿ ಹೇಳಿದ್ರು ಅಂತಾರೆ, ಮಂತ್ರಿ ಇವರಿಗೆ ನನಗಲ್ಲ. ಕಟ್ಟಡವನ್ನು ರಾತ್ರಿ ಹೊಡೆಯದು ಏನಿತ್ತು, ಬೆಳಗ್ಗೆ ಹೊಡಿಬೇಕಿತ್ತು. ಹೇಳೋರು, ಕೇಳೋರು ಯಾರು ಇಲ್ಲ ಇವರಿಗೆ. ಅಧಿಕಾರ ಇದೆ ಎಂದು ದರ್ಪ ತೋರಿದ್ರೆ ಹೆಚ್ಚು ದಿನ ನಡೆಯಲ್ಲ. ಪೊಲೀಸ್ ಇಲಾಖೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ನಾನು ಧರಣಿ ಕುಳಿತರು ಸ್ಥಳಕ್ಕೆ ಡಿಸಿ ಬರಲಿಲ್ಲ, ನಾವೇನು ದನಕಾಯೋನ? ಏನ್ ಯಾವಾಗ್ಲು ಬಿಜೆಪಿ ಇರುತ್ತೆ ಅನ್ಕಂಡಿದ್ದಾರೆ. ನಾನು ಇಪ್ಪತ್ತೈದು ವರ್ಷದಿಂದ ಎಲ್ಲವನ್ನೂ ನೋಡಿದ್ದೇನೆ ಎಂದು ಆಕ್ರೋಶ ಹೊರಹಾಕಿದರು.

    ಡಿಸಿ ಆಫೀಸ್ ಹೊಡೆದ್ರೆ ಅದರ ಪರಿಣಾಮ ಬೇರೆ ಆಗುತ್ತೆ. ಜಿಲ್ಲಾಧಿಕಾರಿ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು. ನಾನು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ಡಿಸಿ ರಬ್ಬರ್ ಸ್ಟಾಂಪ್ ಇದ್ದಂಗೆ, ಡಿಸಿ ಆಗುವುದಕ್ಕೆ ಅವರಿಗೆ ಯೋಗ್ಯತೆಯಿಲ್ಲ. ಯಾವೋನೋ ಹೇಳ್ದಾ ಕಟ್ಟಡ ಹೊಡುದ್ರು. ಎಷ್ಟು ದಿನ ದಬ್ಬಾಳಿಕೆ ಮಾಡ್ತಾರೆ ಮಾಡ್ಲಿ. ಕೆಲವು ಅಧಿಕಾರಿಗಳು ಮುಂದಿನ ದಿನಗಳಲ್ಲಿ ಅನುಭವಿಸುತ್ತಾರೆ. ಇವರೆಲ್ಲ ಜನಹಿತ ಕಾಪಾಡುವುದಿಲ್ಲ. ಇವರು ಬರಿ ದುಡ್ಡು ಹೊಡೆಯುತ್ತಾರೆ. ಡಿಸಿ ಮೇಲೆ ಕ್ರಿಮಿನಲ್ ಕೇಸ್ ಹಾಕುವಂತೆ ರಾಜ್ಯಪಾಲರು, ಸಿಎಂಗೆ ಮನವಿ ಕೊಟ್ಟಿದ್ದೇನೆ ಎಂದರು. ಇದನ್ನೂ ಓದಿ:  ಆರೋಗ್ಯಮೇಳದಲ್ಲಿ ಭಾಗವಹಿಸಿ ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಿ: ಸುಧಾಕರ್

  • ಮೊಹ್ಸಿನ್ ಖಾನ್ ಮುಂದೆ ನಡೆಯಲಿಲ್ಲ ಡೆಲ್ಲಿ ದರ್ಬಾರ್ – ಲಕ್ನೋಗೆ 6 ರನ್‍ಗಳ ಜಯ

    ಮೊಹ್ಸಿನ್ ಖಾನ್ ಮುಂದೆ ನಡೆಯಲಿಲ್ಲ ಡೆಲ್ಲಿ ದರ್ಬಾರ್ – ಲಕ್ನೋಗೆ 6 ರನ್‍ಗಳ ಜಯ

    ಮುಂಬೈ: ಬ್ಯಾಟಿಂಗ್‍ನಲ್ಲಿ ರಾಹುಲ್, ಹೂಡಾ ಹೊಡಿ ಬಡಿ ಆಟ ಬೌಲಿಂಗ್‍ನಲ್ಲಿ ಮೊಹ್ಸಿನ್ ಖಾನ್ ಮಾರಕ ದಾಳಿಗೆ ಬೆಚ್ಚಿ ಬಿದ್ದ ಡೆಲ್ಲಿ ದರ್ಬಾರ್ ನಡೆಸಲಾಗದೇ ಲಕ್ನೋ ವಿರುದ್ಧ ಕೇವಲ 6 ರನ್‍ಗಳಿಂದ ಸೋಲು ಕಂಡಿದೆ.

    196 ರನ್‍ಗಳ ಟಾರ್ಗೆಟ್ ಬೆನ್ನಟುವ ವೇಳೆ ರೋವ್ಮನ್ ಪೊವೆಲ್ 35 ರನ್ (21 ಎಸೆತ, 3 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗುವುದರೊಂದಿಗೆ ಡೆಲ್ಲಿ ಗೆಲುವಿನ ಕನಸಿಗೆ ಹಿನ್ನಡೆ ಆಯಿತು. ಆದರೆ ಇತ್ತ ಅಕ್ಷರ್ ಪಟೇಲ್ ಡೆಲ್ಲಿ ಗೆಲುವಿಗಾಗಿ ಹೋರಾಡಲು ಮುಂದಾದರು ಕಡೆಯ ವರೆಗೆ ಲಕ್ನೋ ಬೌಲರ್‌ಗಳಿಂದ ಗೆಲುವು ಕಸಿಯಲು ಪ್ರಯತ್ನಿಸಿದ ಅಕ್ಷರ್ ಪಟೇಲ್ ಅಜೇಯ 42 ರನ್ (24 ಎಸೆತ, 1 ಬೌಂಡರಿ, 3 ಸಿಕ್ಸ್) ಸಿಡಿಸಿದ ಹೊರತಾಗಿಯು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 189 ರನ್ ಸಿಡಿಸಲಷ್ಟೇ ಶಕ್ತವಾಗಿ 6 ರನ್‍ಗಳ ಅಂತರದ ಸೋಲು ಕಾಣಬೇಕಾಯಿತು.

    ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 13 ರನ್ ಆಗುವಷ್ಟರಲ್ಲಿ ಆರಂಭಿಕರಿಬ್ಬರನ್ನು ಕಳೆದುಕೊಂಡಿತು. ಆ ಬಳಿಕ ಮಿಚೆಲ್ ಮಾರ್ಷ್ ಮತ್ತು ನಾಯಕ ಪಂತ್ ಜೊತೆಗೂಡಿ ರನ್ ಏರಿಸಲು ಮುಂದಾದರು. ಮಿಚೆಲ್ ಮಾರ್ಷ್ ಸ್ಫೋಟಕ 37 ರನ್ (20 ಎಸೆತ, 3 ಬೌಂಡರಿ, 3 ಸಿಕ್ಸ್) ಮತ್ತು ರಿಷಭ್ ಪಂತ್ 44 ರನ್ (30 ಎಸೆತ, 7 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು. ಡೆಲ್ಲಿ ತಂಡದ ಸ್ಟಾರ್ ಬ್ಯಾಟ್ಸ್‌ಮ್ಯಾನ್‌ಗಳನ್ನು ಟಾರ್ಗೆಟ್ ಮಾಡಿ ವಿಕೆಟ್ ಬೇಟೆಯಾಡಿದ ಮೊಹ್ಸಿನ್ ಖಾನ್  ಪ್ರಮುಖ 4 ವಿಕೆಟ್ ಕಿತ್ತು ಡೆಲ್ಲಿಗೆ ಶಾಕ್ ನೀಡಿದರು.

    ಈ ಮೊದಲು ಟಾಸ್ ಗೆದ್ದ ಲಕ್ನೋ ನಾಯಕ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರಕ್ಕೆ ಬಂದರು. ಅದರಂತೆ ರಾಹುಲ್ ಮತ್ತು ಡಿ ಕಾಕ್ ಆರಂಭಿಕರಾಗಿ ಕಣಕ್ಕಿಳಿದು ಅಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಮೊದಲ 4 ಓವರ್‌ಗಳಲ್ಲಿ 40 ರನ್ ಚಚ್ಚಿದ ಈ ಜೋಡಿ ಅಪಾಯಕಾರಿಯಾಗುವ ಸೂಚನೆ ನೀಡುತ್ತಿದ್ದಂತೆ ಶಾರ್ದೂಲ್ ಠಾಕೂರ್ ದಾಳಿಗಿಳಿದ ಡಿ ಕಾಕ್ 23 ರನ್ (13 ಎಸೆತ, 3 ಬೌಂಡರಿ, 1 ಸಿಕ್ಸ್) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

    ಈ ಮೊದಲು ಟಾಸ್ ಗೆದ್ದ ಲಕ್ನೋ ನಾಯಕ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರಕ್ಕೆ ಬಂದರು. ಅದರಂತೆ ರಾಹುಲ್ ಮತ್ತು ಡಿ ಕಾಕ್ ಆರಂಭಿಕರಾಗಿ ಕಣಕ್ಕಿಳಿದು ಅಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಮೊದಲ 4 ಓವರ್‌ಗಳಲ್ಲಿ 40 ರನ್ ಚಚ್ಚಿದ ಈ ಜೋಡಿ ಅಪಾಯಕಾರಿಯಾಗುವ ಸೂಚನೆ ನೀಡುತ್ತಿದ್ದಂತೆ ಶಾರ್ದೂಲ್ ಠಾಕೂರ್ ದಾಳಿಗಿಳಿದು ಡಿ ಕಾಕ್ 23 ರನ್ (13 ಎಸೆತ, 3 ಬೌಂಡರಿ, 1 ಸಿಕ್ಸ್) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

    ರಾಹುಲ್, ಹೂಡಾ ಭರ್ಜರಿ ಬ್ಯಾಟಿಂಗ್
    ಆ ಬಳಿಕ ಜೊತೆಯಾದ ದೀಪಕ್ ಹೂಡಾ ಮತ್ತು ರಾಹುಲ್ ಡೆಲ್ಲಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಇಬ್ಬರೂ ಕೂಡ ಬೌಂಡರಿ, ಸಿಕ್ಸರ್ ಸಿಡಿಸುತ್ತ ಲಕ್ನೋ ರನ್ ಹೆಚ್ಚಿಸಲು ಮುಂದಾದರು. ಈ ಜೋಡಿ 14.3 ಓವರ್‌ಗಳ ವರೆಗೆ ಕ್ರಿಸ್‍ನಲ್ಲಿ ನಿಂತು 2ನೇ ವಿಕೆಟ್‍ಗೆ 95 ರನ್ (61 ಎಸೆತ) ಗಳ ಜೊತೆಯಾಟವಾಡಿತು. ಈ ವೇಳೆ ಮತ್ತೆ ದಾಳಿಗಿಳಿದ ಠಾಕೂರ್, ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಹೂಡಾ 52 ರನ್ (34 ಎಸೆತ, 6 ಬೌಂಡರಿ, 1 ಸಿಕ್ಸ್) ವಿಕೆಟ್ ಕಿತ್ತು ಬ್ರೇಕ್ ನೀಡಿದರು.

    ಇತ್ತ ರಾಹುಲ್ ಮಾತ್ರ ಆರ್ಭಟ ನಿಲ್ಲಿಸಲಿಲ್ಲ. ಸರಾಗವಾಗಿ ರನ್ ಏರಿಸುತ್ತಿದ್ದ ರಾಹುಲ್ ಕಡೆಗೆ 77 ರನ್ (51 ಎಸೆತ, 4 ಬೌಂಡರಿ, 5 ಸಿಕ್ಸ್) ಸಿಡಿಸಿ ಠಾಕೂರ್‌ಗೆ ಮೂರನೇ ಬಳಿಯಾದರು. ನಂತರ ಸ್ಲಾಗ್ ಓವರ್‌ಗಳಲ್ಲಿ ಅಬ್ಬರಿಸಿದ ಸ್ಟೊಯಿನಿಸ್ ಅಜೇಯ 17 ರನ್ (16 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಕೃನಾಲ್ ಪಾಂಡ್ಯ 9 ರನ್ (6 ಎಸೆತ) ಸಿಡಿಸಿ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 195 ರನ್‍ಗಳ ಬೃಹತ್ ಮೊತ್ತ ಪೇರಿಸಲು ನೆರವಾದರು.

    ರನ್ ಏರಿದ್ದು ಹೇಗೆ
    31 ಎಸೆತ 50 ರನ್
    63 ಎಸೆತ 100 ರನ್
    97 ಎಸೆತ 150 ರನ್
    120 ಎಸೆತ 195 ರನ್

  • ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದ ಎನ್.ಜಯರಾಮ್ ವಿರುದ್ಧ ಪ್ರಕರಣ ದಾಖಲು

    ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದ ಎನ್.ಜಯರಾಮ್ ವಿರುದ್ಧ ಪ್ರಕರಣ ದಾಖಲು

    ಬೆಳಗಾವಿ: ನ್ಯಾಯಾಲಯದ ಸೂಚನೆಯ ಮೆರೆಗೆ ಖಾಸಗಿ ಮಾರುಕಟ್ಟೆ ನಿರ್ಮಾಣ ಮಾಡಲು ಸಹಕಾರ ನೀಡಿದ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದ್ದಗೌಡ ಮೋದಗಿ ಒತ್ತಾಯಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಮಾರುಕಟ್ಟೆ ನಿರ್ಮಾಣ ಮಾಡಲು ಸಹಕಾರ ನೀಡಿದ ಅಂದಿನ ಜಿಲ್ಲಾಧಿಕಾರಿ ಎನ್.ಜಯರಾಮ್, ಬುಡಾ ಆಯುಕ್ತ, ತಹಶೀಲ್ದಾರ ಪ್ರೀತಂ ನಸಲಾಪುರೆ, ಮೇಲೆ ಏ.26ರಂದು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

    ಸರ್ಕಾರದ ಸಂಸ್ಥೆಯಾದ ಎಪಿಎಂಸಿ ಖಾಸಗಿ ಮಾರುಕಟ್ಟೆ ಮುಂದೆ ಮಂಡಿಯೂರಿದೆ. ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿರುವುದನ್ನು ಬಂದ್ ಮಾಡಿಸುವಂತೆ 75 ದಿನಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಯಾವುದು ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ತಾಕತ್ತಿದ್ದರೆ ನನ್ನ ವಿರುದ್ಧ ರೇವಣ್ಣ ನಿಲ್ಲಲಿ: ಪ್ರೀತಂ ಸವಾಲು

    ಎಪಿಎಂಸಿ ಕಚೇರಿಯ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಕುಳಿತ ವೇಳೆ ಜಿಲ್ಲಾಧಿಕಾರಿ ಸಮಿತಿ ರಚನೆ ಮಾಡಿ ತನಿಖೆ ಮಾಡುವುದಾಗಿ ಹೇಳಿದ್ದರು. ಈ ವಿಷಯದ ಕುರಿತು ಇಲ್ಲಿಯವರೆಗೆ ಏನಾಗಿದೆ ಎಂದು ಸ್ಪಷ್ಟವಾಗಿಲ್ಲ ಎಂದರು. ಇದನ್ನೂ ಓದಿ: ಪರಿಹಾರದ ಹಣಕ್ಕಾಗಿ ಅಧಿಕಾರಿಯ ಕಾಲಿಗೆ ಬಿದ್ದು ಕಣ್ಣೀರು ಹಾಕಿದ ಮಹಿಳೆ

    ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಮಾತನಾಡಿ, ಸಿದ್ದಲಿಂಗಪ್ಪ ಬಾವಿ 2011ರಲ್ಲಿ ಮೃತಪಟ್ಟ ವ್ಯಕ್ತಿಯ ಹೆಸರಿನ ಮೇಲೆ ಭೂಪರಿವರ್ತನೆ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಜೈಕಿಸಾನ್ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲು ಎನ್‍ಎ ಲೇಔಟ್‍ಗೆ ಅರ್ಜಿ ಸಲ್ಲಿಸಿದ್ದರು. ಖಾಸಗಿ ಮಾರುಕಟ್ಟೆ ನಿರ್ಮಾಣ ಮಾಡಲು ಅಧಿಕಾರಿಗಳು ಹಾಗೂ ಸರ್ಕಾರ ಸಹಕಾರ ಮಾಡಿದೆ. ಪ್ರಕರಣ ದಾಖಲಾದ ಅಧಿಕಾರಿಗಳ ಮೇಲೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

  • ಚೇತನ್ ಸಕಾರಿಯಾ ‘ಡ್ರ್ಯಾಗನ್ ಬಾಲ್ Z’ ಸಂಭ್ರಮಾಚರಣೆ ಹಿಂದಿದೆ ಭಾವನಾತ್ಮಕ ಸಂಬಂಧ

    ಚೇತನ್ ಸಕಾರಿಯಾ ‘ಡ್ರ್ಯಾಗನ್ ಬಾಲ್ Z’ ಸಂಭ್ರಮಾಚರಣೆ ಹಿಂದಿದೆ ಭಾವನಾತ್ಮಕ ಸಂಬಂಧ

    ಮುಂಬೈ: ಕೋಲ್ಕತ್ತಾ ತಂಡದ ಆರಂಭಿಕ ಆಟಗಾರ ಆರನ್ ಫಿಂಚ್ ವಿಕೆಟ್ ಪಡೆದ ಡೆಲ್ಲಿ ಬೌಲರ್ ಚೇತನ್ ಸಕಾರಿಯಾ ‘ಡ್ರ್ಯಾಗನ್ ಬಾಲ್ Z’ ಸಂಭ್ರಮಾಚರಣೆ ಮಾಡಿ ನಿನ್ನೆಯ ಪಂದ್ಯದಲ್ಲಿ ಎಲ್ಲರ ಗಮನಸೆಳೆದಿದ್ದಾರೆ.

    ಚೇತನ್ ಸಕಾರಿಯಾ ಡೆಲ್ಲಿ ಮತ್ತು ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ ಆರಂಭದಲ್ಲೇ ಆರನ್ ಫಿಂಚ್ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದರು. ಈ ವಿಕೆಟ್ ಕಬಳಿಸಿದ ಬಳಿಕ ಸಕಾರಿಯಾ ಬಲಗೈ ಮುಷ್ಟಿ ಹಿಡಿದು ಎಡಗೈನ ಎರಡು ಬೆರಳುಗಳನ್ನು ಹಣೆಯ ಮೇಲೆ ಇಟ್ಟು ಸಂಭ್ರಮಿಸಿದ್ದರು. ಈ ಸಂಭ್ರಮಾಚರಣೆ ಡ್ರ್ಯಾಗನ್ ಬಾಲ್ Z ಕಾರ್ಟೂನ್ ಪಾತ್ರ ಗೊಕು ರೀತಿ ಕಾಣಿಸಿಕೊಂಡಿತ್ತು. ಇದನ್ನೂ ಓದಿ: ಕೊರೊನಾ ಸೋಂಕಿನಿಂದ ತಂದೆಯನ್ನು ಕಳೆದುಕೊಂಡ ಚೇತನ್ ಸಕಾರಿಯಾ

    ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಸಕಾರಿಯಾ, ಇದು ಭಾವನಾತ್ಮಕ ಸಂಭ್ರಮಾಚರಣೆ ನನ್ನ ತಂದೆಗಾಗಿ. ನನ್ನ ತಂದೆ ಯಾವತ್ತು ನಾನು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮ್ಯಾನ್‌ ವಿಕೆಟ್ ಪಡೆಯುವುದನ್ನು ಎದುರು ನೋಡುತ್ತಿದ್ದರು. ಹಾಗಾಗಿ ತಂದೆಗಾಗಿ ಈ ರೀತಿ ಸಂಭ್ರಮಾಚರಣೆ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಸ್ಟಾರ್ ಆಲ್‍ರೌಂಡರ್ ಬೆನ್ ಸ್ಟೋಕ್ಸ್‌ಗೆ ನಾಯಕನ ಪಟ್ಟ ಕಟ್ಟಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್

    IPL DC VS KKR 7

    2021ರಲ್ಲಿ ಸಕಾರಿಯಾ ಐಪಿಎಲ್‍ನಲ್ಲಿ ಆಡುತ್ತಿದ್ದಾಗ ಅವರ ತಂದೆ ಕಾಂಜಿಭಾಯ್ ಸಕಾರಿಯಾಗೆ ಕೊರೊನಾ ಸೋಂಕು ಕಾಣಿಸಿಕೊಂಡು ಮರಣ ಹೊಂದಿದ್ದರು. ಈ ವೇಳೆ ಸಕಾರಿಯಾ ರಾಜಸ್ಥಾನ ಪರ ಉತ್ತಮ ಪ್ರದರ್ಶನ ತೋರಿ ಗಮನಸೆಳೆದಿದ್ದರು. ನಂತರ ಟೀಂ ಇಂಡಿಯಾ ಪರ ಆಡುವ ಅವಕಾಶವನ್ನು ಗಿಟ್ಟಿಸಿಕೊಂಡರು. 15ನೇ ಆವೃತ್ತಿ ಐಪಿಎಲ್ ಹರಾಜಿನಲ್ಲಿ ಸಕಾರಿಯಾ ಅವರನ್ನು ಡೆಲ್ಲಿ ತಂಡ 4.20 ಕೋಟಿ ರೂ. ನೀಡಿ ಖರೀದಿಸಿತು. ನಿನ್ನೆ 2022ರ ಐಪಿಎಲ್‍ನಲ್ಲಿ ಡೆಲ್ಲಿ ಪರ ಮೊದಲ ಪಂದ್ಯವಾಡಿದ ಸಕಾರಿಯಾ 3 ಓವರ್ ಎಸೆದು 17 ರನ್ ನೀಡಿ 1 ವಿಕೆಟ್ ಪಡೆಯಲು ಯಶಸ್ವಿಯಾದರು.

     

    View this post on Instagram

     

    A post shared by IPL (@iplt20)

    ಈ ಪಂದ್ಯದಲ್ಲಿ ಕೋಲ್ಕತ್ತಾ ನೀಡಿದ 146 ರನ್‍ಗಳ ಸಾಧರಣ ಮೊತ್ತ ಬೆನ್ನಟ್ಟಿದ ಡೆಲ್ಲಿ 19 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 150 ರನ್ ಸಿಡಿಸಿ 4 ವಿಕೆಟ್‍ಗಳ ಜಯ ದಾಖಲಿಸಿತು.