Tag: DC

  • ವಿಚಾರಣಾಧೀನ ಕೈದಿಯ ಮಗುವಿಗೆ ಜೈಲಿನಲ್ಲೇ ನಾಮಕರಣ ಮಾಡಿದ ಹಾವೇರಿ ಜಿಲ್ಲಾಧಿಕಾರಿ!

    ವಿಚಾರಣಾಧೀನ ಕೈದಿಯ ಮಗುವಿಗೆ ಜೈಲಿನಲ್ಲೇ ನಾಮಕರಣ ಮಾಡಿದ ಹಾವೇರಿ ಜಿಲ್ಲಾಧಿಕಾರಿ!

    ಹಾವೇರಿ: ವಿಚಾರಣಾಧೀನ ಕೈದಿಯೋರ್ವರಿಗೆ ಜನಿಸಿದ ನವಜಾತ ಶಿಶುವಿಗೆ ಜಿಲ್ಲಾಧಿಕಾರಿ ಕೇಂದ್ರ ಕಾರಾಗೃಹದಲ್ಲಿ ನಾಮಕರಣ ಮಾಡಿದ ಅಪರೂಪದ ಕಾರ್ಯಕ್ರಮ ಜರುಗಿತು.

    ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವ್ಹಿ.ವೆಂಕಟೇಶ್ ಮಗುವನ್ನ ತೊಟ್ಟಿನಲ್ಲಿ ಹಾಕಿ ಶಿಶುವಿಗೆ ಹರ್ಷಿತಾ ಎಂದು ನಾಮಕರಣ ಮಾಡಿದ್ರು. ಕಳ್ಳತನ ಪ್ರಕರಣ ಒಂದರಲ್ಲಿ ಜಿಲ್ಲಾ ಕಾರಾಗೃಹದಲ್ಲಿ, ಕೈದಿಯಾಗಿರುವ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮಹಾಲಿಂಗಪೂರ ಮೂಲದ 26 ವರ್ಷದ ಮಹಿಳೆ, ಕಳೆದ ಜನವರಿ 4 ರಂದು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು.

    19 ದಿನಗಳ ಈ ನವಜಾತ ಶಿಶುವಿಗೆ ಮಹಿಳಾ ಕೈದಿಗಳ ಸೆಲ್‍ನಲ್ಲಿ ಕಾರಾಗೃಹದ ಸಿಬ್ಬಂದಿ ನಾಮಕರಣ ಕಾರ್ಯಕ್ರಮ ಆಯೋಜನೆ ಮಾಡಿದ್ರು. ಜೈಲಿನ ಮಹಿಳಾ ಅಧಿಕಾರಿಗಳು ಒಳಗೊಂಡಂತೆ 11 ಜನ ಮಹಿಳಾ ಕೈದಿಗಳು ಹೆಣ್ಣು ಮಗುವಿನ ತಾಯಿಯ ಸಂಪ್ರದಾಯದಂತೆ ತೊಟ್ಟಿಲು ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ತೊಟ್ಟಿಲು ಅಲಂಕಾರ, ಜೈಲು ಮಹಿಳಾ ಸೆಲ್‍ನ ಅಲಂಕಾರ ಮನೆಯ ವಾತಾವರಣದಂತೆ ಕಂಗೊಳಿಸಿ ಎಲ್ಲರ ಗಮನಸೆಳೆಯಿತು.

    ಕಂಕಣ ಧರಿಸಿದ ಜಿಲ್ಲಾಧಿಕಾರಿಗಳು ಅಲಂಕರಿಸಿದ ತೊಟ್ಟಿನಲ್ಲಿ ನವಜಾತ ಶಿಶುವನ್ನು ಮಲಗಿಸಿ ನೂಲು ಹಿಡಿದು ಕಿವಿಯಲ್ಲಿ ಮೂರುಭಾರಿ ಹರ್ಷಿತಾ, ಹರ್ಷಿತಾ, ಹರ್ಷಿತಾ.. ಎಂದು ಕರೆಯುವುದರ ಮೂಲಕ ಕೈದಿಯ ಮಗಳಿಗೆ ನಾಮಕರಣಮಾಡಿದ ಅಪರೂಪದ ಪ್ರಸಂಗ ಜರುಗಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಅಧಿಕಾರಿಗಳು ಅಪರೂಪದ ಕಾರ್ಯಕ್ರಮದಲ್ಲಿ ಭಾಗವಹಿಸಿ ಖುಷಿ ವ್ಯಕ್ತಪಡಿಸಿದ್ರು.

  • ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಿಎಂ ಸಮರ್ಥನೆ

    ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಿಎಂ ಸಮರ್ಥನೆ

    ಬೆಂಗಳೂರು: ಖಡಕ್ ಅಧಿಕಾರಿ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯನ್ನು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

    ಈ ಬಗ್ಗೆ ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಆಡಳಿತಾತ್ಮಕ ದೃಷ್ಟಿಯಿಂದ ವರ್ಗ ಮಾಡಿದ್ದೇವೆ. ಇದರಲ್ಲಿ ಯಾರ ಒತ್ತಡವೂ ಇಲ್ಲ, ಯಾವ ರಾಜಕೀಯವೂ ಇಲ್ಲ. ಮಹಿಳಾ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದಾ? ಕೋಲಾರ, ಮಂಡ್ಯದಲ್ಲಿ ಮಹಿಳಾ ಡಿಸಿಗಳು ಇಲ್ವಾ? ನಮ್ಮ ವಿರೋಧಿಗಳು ಪ್ರತಿಭಟನೆ ಮಾಡ್ತಿದ್ದಾರೆ ಅಷ್ಟೇ ಅಂತ ಹೇಳಿದ್ರು.

    ಇತ್ತೀಚೆಗೆ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ರೋಹಿಣಿ ಸಿಂಧೂರಿ ದಾಸರಿ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಬಿದ್ದಿದೆ. ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಇದು ಐದನೇ ಜಿಲ್ಲಾಧಿಕಾರಿಯ ವರ್ಗಾವಣೆಯಾಗಿದೆ. ಈ ಹಿಂದೆ 2014ರಿಂದ ಈಚೆಗೆ ಜಿಲ್ಲೆಯಿಂದ ಎತ್ತಂಗಡಿಯಾದ ಜಿಲ್ಲಾಧಿಕಾರಿಗಳೆಂದರೆ ಮೋಹನ್ ರಾಜ್, ಅನ್ಬುಕುಮಾರ್, ಉಮೇಶ್ ಕುಸುಗಲ್,ವಿ.ಚೈತ್ರಾ ಮತ್ತು ರೋಹಿಣಿ ಸಿಂಧೂರಿ. ಇದನ್ನೂ ಓದಿ: ಹಣ ಹೊಡೆಯಲು ಬಿಟ್ಟಿಲ್ಲ ಅಂತ ಹೆಣ್ಮಗಳ ವರ್ಗ, ಸಿಎಂ ಜೊತೆ ವೇದಿಕೆ ಏರಲ್ಲ- ಸರ್ಕಾರಕ್ಕೆ ಥೂ ಎಂದು ಉಗಿದ ಹೆಚ್‍ಡಿಡಿ

    ಮಂಡ್ಯ ಜಿಲ್ಲಾ ಪಂಚಾಯಿತಿ ಸಿಈಓ ಆಗಿದ್ದ ರೋಹಿಣಿ ಐದು ತಿಂಗಳ ಹಿಂದೆ ಹಾಸನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. 2009ರ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿರುವ ಸಿಂಧೂರಿ ಹಾಸನಕ್ಕೆ ಬಂದ ಕೂಡಲೆ ಕೆಲ ಆಡಳಿತಾತ್ಮಕ ಕೆಲಸಗಳ ಮೂಲಕ ಸಾರ್ವಜನಿಕರ ಪ್ರಶಂಸೆ ಗಳಿಸಿದ್ದರು. ಜೊತೆಗೆ ಹಾಸನಾಂಬೆ ದರ್ಶನೋತ್ಸವದಲ್ಲಿ ಕೆಲ ಕ್ರಮಗಳನ್ನು ಕೈಗೊಂಡಿದ್ದ ರೋಹಿಣಿ ಮೆಚ್ಚುಗೆ ಗಳಿಸಿದ್ದರು. ಮುಂದಿನ ತಿಂಗಳು ನಡೆಯಲಿರುವ ಬಾಹುಬಲಿಯ ಮಸ್ತಕಾಭಿಷೇಕದ ಯಶಸ್ಸಿಗೆ ಸಾಕಷ್ಟು ಶ್ರಮವಹಿಸಿದ್ದರು. ಆದ್ರೆ ಈಗ ಏಕಾಏಕಿ ವರ್ಗಾವಣೆ ಆಗಿರೋದು ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಕೈ ನಾಯಕರ ದೂರಿನ ಬೆನ್ನಲ್ಲೇ ಹಾಸನ ಡಿಸಿ ರೋಹಿಣಿ ಸಿಂಧೂರಿ ಎತ್ತಂಗಡಿ

    ಡಿಸಿ ವರ್ಗಾವಣೆ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಕಾಂಗ್ರೆಸ್ ನಾಯಕರ ಚಿತಾವಣೆ ಅಡಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಕಳೆದ 10 ರಂದು ಜಿಲ್ಲೆಗೆ ಆಗಮಿಸಿ ಇಲ್ಲಿಯೇ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಕಾರ್ಯಕರ್ತರ ಮುಖಾಂತರ ಒತ್ತಡ ತಂದು ಈ ವರ್ಗಾವಣೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ.

    https://www.youtube.com/watch?v=FUGkTwzyPgk

  • ಹಣ ಹೊಡೆಯಲು ಬಿಟ್ಟಿಲ್ಲ ಅಂತ ಹೆಣ್ಮಗಳ ವರ್ಗ, ಸಿಎಂ ಜೊತೆ ವೇದಿಕೆ ಏರಲ್ಲ- ಸರ್ಕಾರಕ್ಕೆ ಥೂ ಎಂದು ಉಗಿದ ಹೆಚ್‍ಡಿಡಿ

    ಹಣ ಹೊಡೆಯಲು ಬಿಟ್ಟಿಲ್ಲ ಅಂತ ಹೆಣ್ಮಗಳ ವರ್ಗ, ಸಿಎಂ ಜೊತೆ ವೇದಿಕೆ ಏರಲ್ಲ- ಸರ್ಕಾರಕ್ಕೆ ಥೂ ಎಂದು ಉಗಿದ ಹೆಚ್‍ಡಿಡಿ

    ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶ್ರವಣಬೆಳಗೊಳದಲ್ಲಿ ನಡೆಯೋ ಮಹಾಮಸ್ತಕಾಭಿಷೇಕದಲ್ಲಿ ಹಣ ಹೊಡೆಯಲು ಬಿಟ್ಟಿಲ್ಲ ಅಂತಾ ಹೆಣ್ಮಗಳನ್ನು ವರ್ಗ ಮಾಡಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ.

    ಈ ಬಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಪ್ರತಿಕ್ರಿಯಿಸಿದ ದೇವೇಗೌಡರು, ಪ್ರಾಮಾಣಿಕ ಅಧಿಕಾರಿಯನ್ನು ಸರ್ಕಾರ ವರ್ಗ ಮಾಡಿದೆ. ಅವರು ಬಂದು ಆರು ತಿಂಗಳು ಕೂಡಾ ಆಗಿಲ್ಲ. ಈ ಹಿಂದಿನ ಡಿಸಿಗೂ ಕೂಡ ಸರ್ಕಾರ ಹೀಗೆಯೇ ಮಾಡಿದೆ. ಮಹಾಮಸ್ತಕಾಭಿಷೇಕದ ಸಿದ್ಧತೆ ಕೆಲಸ ನಡೆಯುತ್ತಿದೆ. ಇದರಲ್ಲಿ ಹಣ ಹೊಡೆಯಲು ಆ ಹೆಣ್ಣುಮಗಳು ಬಿಡಲಿಲ್ಲ. ಅಲ್ಲಿನ ಉಸ್ತುವಾರಿ ಸಚಿವರು ಏನ್ ಮಾಡ್ತಿದ್ದಾರೆ ಅಂತಾ ಗೊತ್ತು. ಇಂಥ ಪವಿತ್ರ ಕಾರ್ಯದಲ್ಲೂ ಪರ್ಸಂಟೇಜ್ ಬೇಕಾ ಅಂತ ಪ್ರಶ್ನಿಸಿದ್ರು. ಇದನ್ನೆಲ್ಲ ತಡೆಯಲು ಮುಂದಾಗಿದ್ದಕ್ಕೇ ವರ್ಗಾವಣೆ ಮಾಡಿದ್ದಾರೆ ಎಂದು ಹೇಳಿದ್ರು.

    ಸಿಎಂ ಸಿದ್ದರಾಮಯ್ಯ ಜೊತೆಗೆ ನಾನು ವೇದಿಕೆ ಹಂಚಿಕೊಳ್ಳಲ್ಲ. ಈ ಹಿನ್ನೆಲೆಯಲ್ಲಿ ಫೆಬ್ರವರಿ 7ರಂದು ನಡೆಯೋ ಮಹಾಮಸ್ತಾಭಿಷೇಕ ಉದ್ಘಾಟನೆಗೆ ಹೋಗಲ್ಲ. ಈ ಬಗ್ಗೆ ರಾಷ್ಟ್ರಪತಿಗೂ ಪತ್ರ ಬರೆಯುತ್ತೇನೆ ಅಂತ ಹೇಳಿದ್ರು.

    ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಮುಗಿಸೋದಕ್ಕೆ ಏನ್ ಮಾಡಬೇಕು ಅಂದಾಗ ಡಿಸಿ ರೋಹಿಣಿ ಸಿಂಧೂರಿ ವರ್ಗ ಮಾಡಬೇಕು ಅಂದ್ರಂತೆ. ನಾನು ಆಕೆಯನ್ನು ಡಿಸಿ ಕಚೇರಿಯಲ್ಲಿ ಒಮ್ಮೆ ಭೇಟಿಯಾಗಿದ್ದೆ ಅಷ್ಟೆ ಎಂದು ಹೇಳಿದ್ರು. ಇದನ್ನೂ ಓದಿ:  ಕೈ ನಾಯಕರ ದೂರಿನ ಬೆನ್ನಲ್ಲೇ ಹಾಸನ ಡಿಸಿ ರೋಹಿಣಿ ಸಿಂಧೂರಿ ಎತ್ತಂಗಡಿ

    ಥೂ ಎಂದು ಉಗಿದ ಹೆಚ್‍ಡಿಡಿ: ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್‍ಡಿಡಿ, ಪೊಲೀಸರೇ ರಕ್ಷಣೆ ಕೋರಿ ಗೃಹ ಕಾರ್ಯದರ್ಶಿಗೆ ಮನವಿ ಮಾಡುತ್ತಾರೆ. ಕೆಂಪಯ್ಯ ನವರ ಅಧಿಕಾರದಲ್ಲಿ ನಾವು ಕೆಲಸ ಮಾಡಲು ಸಾಧ್ಯವಿಲ್ಲ. ಜನ ಹೊಡಿತಾರೆ ಅಂತಾ ಪೊಲೀಸರೇ ಮನವಿ ಮಾಡುತ್ತಿದ್ದಾರೆ ಅಂದ್ರೆ ಇದನ್ನು ಯಾರಾದ್ರೂ ಸರ್ಕಾರ ಅಂತಾ ಕರೆಯಲು ಸಾಧ್ಯವೇ? ನಾ ಕಂಡ ಅತ್ಯಂತ ಕೆಟ್ಟ ಸರ್ಕಾರ ಇದು. ಮಾಜಿ ಪ್ರಧಾನಿ ಜಿಲ್ಲೆಯಲ್ಲೇ ಕಲೆಕ್ಷನ್ ಮಾಡಕ್ಕೆ ಅವಕಾಶ ಕೊಡಲ್ಲ ಅಂತಾ ಡಿಸಿ ವರ್ಗಾವಣೆ ಮಾಡ್ತಾರೆ ಅಂದ್ರೆ ಥೂ…. ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಎರಡೆರಡು ಬಾರಿ ಥೂ ಎಂದು ಉಗಿದರು.

    ಜನವರಿ 25 ಮತ್ತು ಫೆ. 4ರಂದು ಕರೆ ನೀಡಿರುವ ಬಂದ್‍ಗೆ ಜೆಡಿಎಸ್ ವಿರೋಧಿಸುವುದಿಲ್ಲ. ಈ ಬಂದ್‍ಗಳಿಂದ ಮಹಾದಾಯಿ ಸಮಸ್ಯೆ ವಿವಾದಕ್ಕೆ ಪರಿಹಾರ ಸಿಗಲ್ಲ. ಇದನ್ನು ಸರ್ಕಾರಿ ಪ್ರೇರಿತ ಬಂದ್ ಎನ್ನುತ್ತಿದ್ದಾರೆ ಎಂದರು.

    https://www.youtube.com/watch?v=es6FHQGRIb4

    https://www.youtube.com/watch?v=VljqR9QPwQo

  • ಸತ್ತವರ ಓಟುಗಳನ್ನು ಹಾಕಿ ನನ್ನ ಗೆಲ್ಲಿಸಿದ್ದಾರೆ ಎಂದಿದ್ದ ಸಿಎಂ ವಿರುದ್ಧ ವರ್ಷವಾದ್ರೂ ಇಲ್ಲ ತನಿಖೆ- ಕಾನೂನು ಮರೆತ್ರಾ ಮೈಸೂರು ಡಿಸಿ?

    ಸತ್ತವರ ಓಟುಗಳನ್ನು ಹಾಕಿ ನನ್ನ ಗೆಲ್ಲಿಸಿದ್ದಾರೆ ಎಂದಿದ್ದ ಸಿಎಂ ವಿರುದ್ಧ ವರ್ಷವಾದ್ರೂ ಇಲ್ಲ ತನಿಖೆ- ಕಾನೂನು ಮರೆತ್ರಾ ಮೈಸೂರು ಡಿಸಿ?

    ಮೈಸೂರು: ಸತ್ತವರ ಓಟುಗಳನ್ನು ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ ಎಂದಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ವರ್ಷವಾದ್ರೂ ಯಾವುದೇ ಕ್ರಮ ಕೈಗೊಳ್ಳದೆ ಮೈಸೂರು ಜಿಲ್ಲಾಧಿಕಾರಿ ರಂದೀಪ್ ಕಾನೂನು ಮರೆತರಾ ಎಂಬ ಪ್ರಶ್ನೆ ಎದ್ದಿದೆ.

    ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಸಿಎಂ ಸಿದ್ದರಾಮಯ್ಯ, ಸತ್ತವರ ಓಟುಗಳನ್ನು ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ ಅಂದಿದ್ರು. ಇದು ಭಾರಿ ವಿವಾದಕ್ಕೆ ಕಾರಣವಾದ ಬಳಿಕ ಸಾಮಾಜಿಕ ಕಾರ್ಯರ್ತ ಮರಿಲಿಂಗೇಗೌಡ ಮಾಲಿಪಾಟೀಲ್ ಸಿಎಂ ಶಾಸಕತ್ವ ರದ್ದುಪಡಿಸಬೇಕೆಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ರು.

    ಅದರಂತೆ 2016ರ ಅಕ್ಟೋಬರ್ ತಿಂಗಳಲ್ಲಿ ತನಿಖೆ ನಡೆಸುವಂತೆ ಚುನಾವಣಾ ಆಯೋಗ ಡಿಸಿಗೆ ಪತ್ರ ಬರೆದಿತ್ತು. ಆದ್ರೆ ಮೈಸೂರು ಡಿಸಿ ರಂದೀಪ್ ತನಿಖೆ ನಡೆಸದೆ ಉಪವಿಭಾಗಾಧಿಕಾರಿಗೆ ಪತ್ರ ಬರೆದಿದ್ರು. ಉಪವಿಭಾಗಾಧಿಕಾರಿಯೂ ಕೂಡ ತಹಶೀಲ್ದಾರ್ ಗೆ ಪತ್ರ ಬರೆದು ಸುಮ್ಮನಾಗಿದ್ದಾರೆ. ಒಟ್ನಲ್ಲಿ ದೂರು ನೀಡಿ ವರ್ಷವಾದ್ರೂ ಡಿಸಿ ಕೈಕಟ್ಟಿ ಕುಳಿತಿರೋದು ಯಾಕೆ ಅನ್ನೋ ಪ್ರಶ್ನೆ ಮೂಡಿದೆ.

  • ಹುಣಸೂರು ಹನುಮ ಜಯಂತಿ ಪ್ರಕರಣ: ಪರಿಸ್ಥಿತಿ ನಿಯಂತ್ರಣಕ್ಕೆ ಕನಿಷ್ಠ ಬಲ ಪ್ರಯೋಗವಾಯ್ತು ಎಂದು ಡಿಸಿ ಸ್ಪಷ್ಟನೆ

    ಹುಣಸೂರು ಹನುಮ ಜಯಂತಿ ಪ್ರಕರಣ: ಪರಿಸ್ಥಿತಿ ನಿಯಂತ್ರಣಕ್ಕೆ ಕನಿಷ್ಠ ಬಲ ಪ್ರಯೋಗವಾಯ್ತು ಎಂದು ಡಿಸಿ ಸ್ಪಷ್ಟನೆ

    ಮೈಸೂರು: ಹುಣಸೂರಿನಲ್ಲಿ ಹನುಮ ಜಯಂತಿ ವೇಳೆ ಗಲಭೆ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಡಳಿತ ಘಟನೆ ಕುರಿತು ಸ್ಪಷ್ಟೀಕರಣ ನೀಡಿದೆ.

    ಜಿಲ್ಲಾಧಿಕಾರಿ ಡಿ.ರಂದೀಪ್ ಇಡೀ ಘಟನೆಯ ಸಂಪೂರ್ಣ ವಿವರ ನೀಡಿದ್ದು, ಜಯಂತಿ ಆಚರಣೆಯ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳ ಮಾಹಿತಿ ಬಹಿರಂಗಪಡಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಗೃಹ ಕಾರ್ಯದರ್ಶಿಗಳ ನಡುವಿನ ಪತ್ರವ್ಯವಹಾರದ ಮಾಹಿತಿಯೂ ಬಹಿರಂಗವಾಗಿದೆ.

    ಮೆರವಣಿಗೆಗೆ ಅವಕಾಶವೇ ನೀಡಿಲ್ಲ ಅಂತ ಆರೋಪ ಮಾಡೋದು ಸರಿಯಲ್ಲ. ಎಲ್ಲವೂ ಕಾನೂನಿನ ರೀತಿಯಲ್ಲೆ ನಡೆದಿದೆ. ಆದ್ರೆ ಹನುಮ ಜಯಂತಿ ವೇಳೆ ನಿಗದಿತ ಸ್ಥಳದಿಂದ ನಿಗದಿತ ಸಮಯಕ್ಕೆ ಮೆರವಣಿಗೆ ಹೊರಟಿಲ್ಲ. ಪರಿಣಾಮ ಸ್ಥಳದಲ್ಲಿ ಹೆಚ್ಚಿನ ಜನ ಸೇರುವಂತಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಅಲ್ಲಿನ ಉಪವಿಭಾಗಾಧಿಕರಿಗಳು ಪೊಲೀಸರಿಗೆ ಮನವಿ ಮಾಡಿದ್ದಾರೆ. ಆಗ ಪೊಲೀಸರು ಕನಿಷ್ಠ ಬಲಪ್ರಯೋಗಿಸಿ ಗುಂಪು ಚದುರಿಸಿದ್ದಾರೆ. ಈ ಎಲ್ಲಾ ಕ್ರಮಗಳನ್ನ ಸಾರ್ವಜನಿಕ ಹಿತಾಸಕ್ತಿಯಿಂದ ತೆಗೆದುಕೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಿ. ರಂದೀಪ್ ಸ್ಪಷ್ಟೀಕರಣ ನೀಡಿದ್ದಾರೆ.

    ಈದ್ ಮಿಲಾದ್, ಹನುಮಜಯಂತಿ ಮೆರವಣಿಗೆಗೆ ತೆಗೆದುಕೊಂಡಿದ್ದ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಮೂರು ದಾಖಲೆಗಳನ್ನ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ನಂತರ ಹನುಮಜಯಂತಿ ವಿಚಾರವಾಗಿ ಮೇಲ್ಮನವಿ ಸಲ್ಲಿಕೆ ಹಾಗೂ ಅದಕ್ಕೆ ಗೃಹಕಾರ್ಯದರ್ಶಿಗಳಿಂದ ಬಂದ ಉತ್ತರದ ಮಾಹಿತಿಯನ್ನೂ ಬಿಡುಗಡೆ ಮಾಡಿದ್ದು, ದಾಖಲೆಗಳ ಸಮೇತ ಜಿಲ್ಲಾಡಳಿತ ಸ್ಪಷ್ಟೀಕರಣ ನೀಡಿದೆ.

  • ಕೊಪ್ಪಳ ಜಿಲ್ಲಾಧಿಕಾರಿಗೆ 6 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

    ಕೊಪ್ಪಳ ಜಿಲ್ಲಾಧಿಕಾರಿಗೆ 6 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

    ಕೊಪ್ಪಳ: ತಮ್ಮ ಕಚೇರಿ ನೌಕರನ ವಿಮಾ ಕಂತು ಪಾವತಿಸುವಲ್ಲಿ ನಿರ್ಲಕ್ಷಿಸಿ, ಕರ್ತವ್ಯ ಲೋಪ ಎಸಗಿರುವ ಕೊಪ್ಪಳ ಜಿಲ್ಲಾಧಿಕಾರಿಗಳು 6 ಲಕ್ಷ ರೂಪಾಯಿ ವಿಮೆಯನ್ನು ನೀಡಬೇಕು ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.

    ವಿಮೆಯ ಕ್ಲೇಮ್ 6 ಲಕ್ಷ ರೂಪಾಯಿ, ಮಾನಸಿಕ ಹಿಂಸೆಗೆ 10 ಸಾವಿರ ರೂಪಾಯಿ ಪರಿಹಾರ ಹಾಗೂ ಕೋರ್ಟ್ ವೆಚ್ಚಕ್ಕೆ 2500 ರೂಪಾಯಿ ಸೇರಿ ಒಟ್ಟು 6,10,2500 ರೂ.ಗಳನ್ನು ಪಾವತಿ ಮಾಡುವಂತೆ ಜಿಲ್ಲಾಧಿಕಾರಿ ಕನಕವಲ್ಲಿ ಅವರಿಗೆ ತಿಳಿಸಲಾಗಿದೆ.

    ಏನಿದು ಕೇಸ್?: ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ನೌಕರ ಮಂಜುನಾಥ್ ಅಳವಂಡಿ ಎಂಬವರು 2014ರ ಮಾರ್ಚ್ 28 ರಂದು ಎಲ್‍ಐಸಿ ವಿಮೆ ಮಾಡಿಸಿದ್ದರು. ಇದು ವೇತನ ಉಳಿತಾಯ ಪಾಲಿಸಿ ಆಗಿದ್ದರಿಂದ ಪ್ರತಿ ತಿಂಗಳ ವೇತನದಲ್ಲೇ ವಿಮಾ ಕಂತು ಕಡಿತಗೊಂಡು ಪಾವತಿಯಾಗುತ್ತಿತ್ತು. ಆದರೆ 2014ರ ಮೇ ತಿಂಗಳ ವಿಮಾ ಕಂತು ಪಾವತಿಯಾಗಿಲ್ಲ. ಮಂಜುನಾಥ 2015ರ ಅಕ್ಟೋಬರ್ 1 ರಂದು ಮಂಜುನಾಥ ಅಳವಂಡಿ ಅಪಘಾತದಲ್ಲಿ ಮೃತಪಟ್ಟಿದ್ದು, ನಾಮಿನಿಯಾಗಿದ್ದ ಮಂಜುನಾಥ್ ಅವರ ಪತ್ನಿ ಶಿಲ್ಪಾ ವಿಮೆಯ ಹಣಕ್ಕೆ ಅರ್ಜಿ ಸಲ್ಲಿಸಿದ್ದರು.

    ಎಲ್‍ಐಸಿ ಕಚೇರಿ ನಿಮ್ಮ ಪಾಲಸಿ ಕಂತು ಪಾವತಿಯಾಗದ್ದರಿಂದ ಪಾಲಿಸಿ ಲ್ಯಾಪ್ಸ್ ಆಗಿದೆ ಎಂದು ವಿವರಣೆ ನೀಡಿ ಕೈ ತೊಳೆದುಕೊಂಡಿತ್ತು. ಆಗ ಶಿಲ್ಪಾ ಕೊಪ್ಪಳ ಜಿಲ್ಲಾ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು. ಗ್ರಾಹಕರ ನ್ಯಾಯಾಲಯ, ಎಲ್‍ಐಸಿ ಮತ್ತು ಡಿಸಿಗೆ ನೋಟೀಸ್ ನೀಡಿತ್ತು. ನ್ಯಾಯಾಲಯಕ್ಕೆ ಹಾಜರಾದ ಎಲ್‍ಐಸಿ ಅಧಿಕಾರಿಗಳು, ಮಂಜುನಾಥ ವಿಮಾ ಕಂತು ಪಾವತಿ ಮಾಡದ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವುದನ್ನು ತಿಳಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ನ್ಯಾಯಾಲಯದ ನೋಟಿಸ್ ಗೆ ಯಾವುದೇ ಉತ್ತರವನ್ನು ನೀಡಿರಲಿಲ್ಲ. ಇದೆಲ್ಲವನ್ನೂ ಗಮನಿಸಿದ ಕೊಪ್ಪಳ ಜಿಲ್ಲಾ ಗ್ರಾಹಕರ ನ್ಯಾಯಾಲಯ ಅಧ್ಯಕ್ಷೆ ಎಚ್.ಡಿ. ಏಕತಾ ಹೆಗ್ಡೆ, ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ಕರ್ತವ್ಯ ಲೋಪ ಕಾಣುತ್ತಿದೆ ಎಂದು ತೀರ್ಮಾನಿಸಿ ದಂಡವನ್ನು ಪಾವತಿಸುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ.

  • ಡಿಸಿ ಟ್ರಾನ್ಸ್ ಫರ್ ಹಿಂದೆ ಭೂ ಮಾಫಿಯಾ – ಸಂಸದ ಮುನಿಯಪ್ಪ ಮೇಲೆ ಕೈವಾಡ ಶಂಕೆ

    ಡಿಸಿ ಟ್ರಾನ್ಸ್ ಫರ್ ಹಿಂದೆ ಭೂ ಮಾಫಿಯಾ – ಸಂಸದ ಮುನಿಯಪ್ಪ ಮೇಲೆ ಕೈವಾಡ ಶಂಕೆ

    ಕೋಲಾರ: ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೋಲಾರ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರರನ್ನು ವರ್ಗಾವಣೆ ಮಾಡಿ ಭಾನುವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ತ್ರಿಲೋಕಚಂದ್ರರನ್ನು ನೋಂದಣಿ ಮಹಾ ನಿರೀಕ್ಷಕರು ಹಾಗೂ ಮುದ್ರಾಂಕ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಇನ್ನು ವರ್ಗಾವಣೆಯಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಲಾಬಿ ಇದ್ದು ತಮ್ಮ ಆಪ್ತ ಮಾಲೂರು ಕಾಂಗ್ರೆಸ್ ಮುಖಂಡ ನಂಜೇಗೌಡ ಭೂ ವಿವಾದಕ್ಕೆ ಜಿಲ್ಲಾಧಿಕಾರಿ ಸ್ಪಂದಿಸುತ್ತಿಲ್ಲ ಹೀಗಾಗಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ವರ್ಗಾವಣೆ ಮಾಡಿಸಿದ್ದಾರೆ ಎನ್ನಲಾಗಿದೆ.

    ಜಿಲ್ಲಾಧಿಕಾರಿ ತ್ರಿಲೋಕಚಂದ್ರ ದಕ್ಷ ಅಧಿಕಾರಿಯಾಗಿದ್ದು ಉತ್ತಮ ಸೇವೆ, ಸರ್ಕಾರದ ಸೌಲಭ್ಯಗಳನ್ನ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ಯಾರ ಲಾಬಿಗೂ ಮಣಿಯುತ್ತಿರಲಿಲ್ಲ. ಹೀಗಾಗಿ ಮುಂದಿನ ವಿಧಾನಸಭೆ ಚುನಾವಣೆಗೆ ಡ್ಯಾಮೇಜ್ ಆಗದಂತೆ ತಮ್ಮ ಮೂಗಿನ ನೇರಕ್ಕೆ ಕೆಲಸ ಮಾಡುವ ಅಧಿಕಾರಿಗೆ ಮಣೆ ಹಾಕಿದ್ದಾರೆ ಅನ್ನೋ ಚರ್ಚೆ ನಡೆಯುತ್ತಿವೆ.

    ಕಳೆದ ಹಲವು ವರ್ಷಗಳಿಂದ ಕೋಲಾರ ಜಿಲ್ಲೆಯಲ್ಲಿ ಯಾವೊಬ್ಬ ಜಿಲ್ಲಾಧಿಕಾರಿಯೂ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಿಲ್ಲ. ಪ್ರಭಾವಿ ಮುಖಂಡರು ಹಾಗೂ ಜನಪ್ರತಿನಿಧಿಗಳ ಅಕ್ರಮಗಳಿಗೆ ಕಡಿವಾಣ ಹಾಕಲು ಹೋದವರಿಗೆ ಉಳಿಗಾಲವಿಲ್ಲ ಅನ್ನೋದು ಇದೀಗ ಮತ್ತೊಮ್ಮೆ ಸಾಬೀತಾಗಿದೆ.

     

  • ದಸರಾ ಹೆಲಿರೈಡ್: ಹದ್ದು ಡಿಕ್ಕಿಯಾಗಿ ಹೆಲಿಕಾಪ್ಟರ್ ಗಾಜು ಪುಡಿ

    ದಸರಾ ಹೆಲಿರೈಡ್: ಹದ್ದು ಡಿಕ್ಕಿಯಾಗಿ ಹೆಲಿಕಾಪ್ಟರ್ ಗಾಜು ಪುಡಿ

    ಮೈಸೂರು: ದಸರಾ ಪ್ರಯುಕ್ತ ಹೆಲಿಕಾಪ್ಟರ್ ಮೂಲಕ ಪ್ರವಾಸಿಗರಿಗೆ ಮೈಸೂರು ದರ್ಶನ ಮಾಡಿಸುವಾಗ ಹದ್ದೊಂದು ಬಡಿದು ಪೈಲೆಟ್ ಮುಂಬದಿಯ ಗಾಜು ಪುಡಿಯಾಗಿರುವ ಘಟನೆ ನಡೆದಿದೆ.

    ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಭಾನುವಾರ ಬೆಳಗ್ಗೆ 9 ಗಂಟೆಯ ವೇಳೆ 9 ಮಂದಿಯನ್ನು ಕರೆದುಕೊಂಡು ಹೆಲಿಕಾಪ್ಟರ್ ಮೇಲೆ ಹಾರಿತ್ತು. ಹಾರಾಟ ನಡೆಸುತ್ತಿರುವಾಗ ಅಗಸದಲ್ಲಿ ಏಕಾಏಕಿ ಹದ್ದು ಡಿಕ್ಕಿ ಹೊಡೆದಿದೆ.

    ಹದ್ದು ಸಾವನ್ನಪ್ಪಿದ್ದು, ಹೆಲಿಕಾಪ್ಟರ್ ಮುಂದಿನ ಬಲಬದಿಯ ಗಾಜು ಒಡೆದು ಹೋಗಿದೆ. ಪೈಲಟ್ ಶ್ರೀನಿವಾಸ ರಾವ್ ತಕ್ಷಣ ನಿಯಂತ್ರಣ ತಪ್ಪದಂತೆ ಜಾಗೃತಿ ವಹಿಸಿ ಸುರಕ್ಷಿತವಾಗಿ ಹೆಲಿಕಾಪ್ಟರ್ ಅನ್ನು ಕೆಳಗಡೆ ಇಳಿಸಿದ್ದಾರೆ.

    ದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ತೊಂದರೆಗಳಾಗಿಲ್ಲ. ಯಾರೂ ಗಾಬರಿ ಪಡಬೇಕಾಗಿಲ್ಲ ಎಂದು ಪವನ್ ಹನ್ಸ್ ಸಂಸ್ಥೆ ತಿಳಿಸಿದೆ.

    ಕಳೆದ ಹತ್ತು ದಿನಗಳಿಂದ ಹೆಲಿಕಾಪ್ಟರ್ ಮೂಲಕ ಆಕಾಶದಿಂದ ಮೈಸೂರು ನೋಡುವ ಅವಕಾಶವನ್ನು ಸಾರ್ವಜನಿಕರಿಗೆ ಒದಗಿಸಲಾಗಿತ್ತು. 2500 ರೂಪಾಯಿ ದರ ನಿಗದಿ ಮಾಡಿ ಮೈಸೂರಿನ ವೈಮಾನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

  • ಡಿಸಿ ಯಾಗಿ ಅಧಿಕಾರ ಸ್ವೀಕರಿಸಿದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು

    ಡಿಸಿ ಯಾಗಿ ಅಧಿಕಾರ ಸ್ವೀಕರಿಸಿದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು

    ಹೈದರಾಬಾದ್: ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಬುಧವಾರದಂದು ಆಂಧ್ರ ಪ್ರದೇಶ ಸರ್ಕಾರದಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

    ವಿಜಯವಾಡ ಹೊರವಲಯದ ಗೊಲ್ಲಾಪುಡಿಯಲ್ಲಿರುವ ಭೂ ಆಡಳಿತದ ಮುಖ್ಯ ಆಯುಕ್ತರ ಕಚೇರಿಯಲ್ಲಿ ಪಿವಿ ಸಿಂಧು ಕರ್ತವ್ಯಕ್ಕೆ ರ್ಸೇರ್ಪಡೆಗೊಂಡ್ರು. ವಿಶೇಷ ಮುಖ್ಯ ಕಾರ್ಯದರ್ಶಿ ಅನಿಲ್ ಚಂದ್ರ ಪುನೇತಾ ಅವರಿಗೆ ಸಿಂಧು ರಿಪೋರ್ಟ್ ಮಾಡಿಕೊಂಡ್ರು. ನಂತರ ಹಿರಿಯ ಐಎಎಸ್ ಅಧಿಕಾರಿ ಎಂ ಜಗನ್ನಾಥಂ ಅವರ ಸಮ್ಮುಖದಲ್ಲಿ ರೋಸ್ಟರ್‍ನಲ್ಲಿ ಸಹಿ ಹಾಕುವ ಮೂಲಕ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ರು. ಕಚೇರಿಯ ಸಿಬ್ಬಂದಿ ಹೂಗುಚ್ಛ ಹಾಗೂ ಹಾರಗಳನ್ನ ಹಾಕಿ ಬ್ಯಾಡ್ಮಿಂಟನ್ ತಾರೆಗೆ ಅದ್ಧೂರಿ ಸ್ವಾಗತ ಕೋರಿದ್ರು.

    ಇದೇ ವೇಳೆ ಮಾತನಾಡಿದ ಸಿಂಧು, ಜಿಲ್ಲಾಧಿಕಾರಿ ಆಗಿ ಆಂಧ್ರಪ್ರದೇಶ ಸರ್ಕಾರದ ಭಾಗವಾಗಿರೋದಕ್ಕೆ ನನಗೆ ತುಂಬಾ ಖುಷಿಯಾಗಿದೆ. ನನ್ನ ಕೆಲಸಕ್ಕೆ ಸೂಕ್ತ ನ್ಯಾಯ ಒದಗಿಸುತ್ತೇನೆ ಅಂತ ಭರವಸೆ ನೀಡಿದ್ರು. ಇದರ ಜೊತೆಗೆ ಬ್ಯಾಡ್ಮಿಂಟನ್ ಆಟವನ್ನು ಮುಂದುವರೆಸುವುದಾಗಿ ಹೇಳಿದ್ರು.

    ಮುಂಬರುವ ಪಂದ್ಯಗಳಿಗಾಗಿ ನಾನು ಸದ್ಯ ಪುಲೆಲಾ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದೇನೆ. ನಾನು ಎಲ್ಲಾ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಟೂರ್ನಿಮೆಂಟ್‍ಗಳಲ್ಲಿ ಭಾಗವಹಿಸುತ್ತೇನೆ. ದೇಶಕ್ಕೆ ಮತ್ತಷ್ಟು ಪ್ರಶಸ್ತಿಗಳನ್ನ ತಂದುಕೊಡುತ್ತೇನೆ ಎಂಬ ಭರವಸೆ ನನಗಿದೆ ಎಂದು ಪಿವಿ ಸಿಂಧು ಹೇಳಿದ್ದಾರೆ.

    ಜುಲೈ 27 ರಂದು ಆಂಧ್ರಪ್ರದೇಶ ಸರ್ಕಾರ ಪಿವಿ ಸಿಂಧು ಅವರನ್ನು ಜಿಲ್ಲಾಧಿಕಾರಿಯಾಗಿ  ನೇಮಿಸಿ ಆದೇಶ ಹೊರಡಿಸಿತ್ತು. ಸ್ವತಃ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ನೇಮಕಾತಿ ಪತ್ರವನ್ನ ಸಿಂಧು ಅವರಿಗೆ ನೀಡಿದ್ದರು. ಸಿಂಧು ಅವರು ಎಲ್ಲಾ ಅಗತ್ಯ ದಾಖಲೆಗಳನ್ನು ಒದಗಿಸಿ ಕರ್ತವ್ಯಕ್ಕೆ ಹಾಜರಾಗಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು.

    ಪಿವಿ ಸಿಂಧು ಅವರನ್ನ ಸರ್ಕಾರದಲ್ಲಿ ಗ್ರೂಪ್-1 ಅಧಿಕಾರಿಯಾಗಿ ನೇಮಕ ಮಾಡಲು ಮೇ ತಿಂಗಳಲ್ಲಿ ರಾಜ್ಯ ಸಾರ್ವಜನಿಕ ಸೇವೆಗಳ ಕಾಯ್ದೆಗೆ ತಿದ್ದುಪಡಿ ತಂದು ಮಸೂದೆಯನ್ನು ಪಾಸ್ ಮಾಡಲಾಗಿತ್ತು. ತೆಲಂಗಾಣ ಕೂಡ ಸಿಂಧುಗೆ ಉದ್ಯೋಗ ಅವಕಾಶ ನೀಡಿತ್ತು. ಆದ್ರೆ ಆಂಧ್ರಪ್ರದೇಶ ತನ್ನ ಪೋಷಕರ ಮೂಲ ಸ್ಥಳವಾಗಿರೋದ್ರಿಂದ ಸಿಂಧು ಆಂಧ್ರಪ್ರದೇಶ ಸರ್ಕಾರದ ಉದ್ಯೋಗವನ್ನ ಸ್ವೀಕರಿಸಿದ್ದಾರೆ.

    ಪಿವಿ ಸಿಂಧು ಸದ್ಯ ಆಗಸ್ಟ್ 21ರಿಂದ ಗ್ಲಾಸ್ಗೋನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‍ಶಿಪ್‍ಗಾಗಿ ತಯಾರಾಗುತ್ತಿದ್ದಾರೆ.

  • ರಾಜಕೀಯದಿಂದ ದೂರ ಉಳಿದು ಉತ್ತಮ ಆಡಳಿತ ನೀಡುವುದಷ್ಟೇ ನನ್ನ ಗುರಿ: ಹಾಸನ ಡಿಸಿ ರೋಹಿಣಿ ಸಿಂಧೂರಿ

    ರಾಜಕೀಯದಿಂದ ದೂರ ಉಳಿದು ಉತ್ತಮ ಆಡಳಿತ ನೀಡುವುದಷ್ಟೇ ನನ್ನ ಗುರಿ: ಹಾಸನ ಡಿಸಿ ರೋಹಿಣಿ ಸಿಂಧೂರಿ

    ಹಾಸನ: ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ ಜಿಲ್ಲಾಡಳಿತದ ಅಧಿಕಾರಿಗಳು, ಸಿಬ್ಬಂದಿ ನೂತನ ಡಿಸಿಗೆ ಹೂ ಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.

    ಈ ವೇಳೆ ಮಾತನಾಡಿದ ಅವರು, ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿಯ ಸಮಸ್ಯೆ ಇರಲಿದೆ. ಆ ಎಲ್ಲಾ ಸಮಸ್ಯೆಗಳನ್ನು ಮನಗಂಡು, ಪ್ರತಿಯೊಬ್ಬರಿಗೂ ಉತ್ತಮ ಆಡಳಿತ ನೀಡಲು ಪ್ರಯತ್ನ ಮಾಡುವುದಾಗಿ ಹೇಳಿದರು.

    ಹಾಸನ ಸೂಕ್ಷ್ಮ ಜೊತೆಗೆ ರಾಜಕೀಯವಾಗಿ ಪ್ರಾಬಲ್ಯ ಹೊಂದಿರುವ ಜಿಲ್ಲೆ ಎಂದು ಕೇಳಿದ್ದೇನೆ. ಸರಿಯಾದ ರೀತಿಯಲ್ಲಿ ಕಾನೂನು ಪ್ರಕಾರ, ಜನಪರವಾದ ಆಡಳಿತ ನೀಡಿದರೆ ಯಾವುದೇ ಸಮಸ್ಯೆ ಸೃಷ್ಟಿಯಾಗದು. ರಾಜಕೀಯದಿಂದ ದೂರ ಉಳಿದು ಉತ್ತಮ ಆಡಳಿತ ನೀಡುವುದಷ್ಟೇ ನನ್ನ ಗುರಿ. ಒಳ್ಳೆಯ ಆಡಳಿತ ನೀಡಿದರೆ, ರಾಜಕೀಯದವರಿಗೂ ತಿಳಿಯಲಿದೆ ಅನ್ನೋ ವಿಶ್ವಾಸ ನನ್ನದು ಎಂದರು.

    ಹಾಸನ ಜಿಲ್ಲಾಧಿಕಾರಿಯಾಗಿದ್ದ ವಿ. ಚೈತ್ರ ಅವರನ್ನು ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆ ಹಾಗೂ ರೆಸಿಡೆನ್ಸಿಯಲ್ ಎಜುಕೇಷನ್ ಇನ್‍ಸ್ಟಿಟ್ಯೂಟ್ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಸರ್ಕಾರ ವರ್ಗ ಮಾಡಿದೆ.

    ಯಾರು ರೋಹಿಣಿ ಸಿಂಧೂರಿ?
    ಈ ಹಿಂದೆ ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರು. ರಾಜ್ಯದಲ್ಲಿ ಮೊದಲ ಬಾರಿಗೆ ಭೂ ದಾಖಲೆಗಳ ಕುರಿತಂತೆ ವಿನ್ಯಾಸಗೊಂಡಿರುವ ಎಂ -ಆಸ್ತಿ ಅಪ್ಲಿಕೇಷನ್ ತಂದಿದ್ದರು.

    ಬಯಲು ಶೌಚಾಲಯ ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಪಣ ತೊಟ್ಟಿದ್ದ ರೋಹಿಣಿ ಸಿಂಧೂರಿ ಅವರು ಹಳ್ಳಿ ಹಳ್ಳಿಗೆ ಹೋಗಿ, ಬಯಲು ಶೌಚಕ್ಕೆ ಹೋಗುವವರಿಗೆ ಶೌಚಾಲಯ ಬಳಸುವಂತೆ ತಿಳುವಳಿಕೆ ಹೇಳುವ ಮೂಲಕ ವಿಶೇಷ ಅಭಿಯಾನ ಮಾಡುತ್ತಿದ್ದರು.

    ನಿರ್ಮಲ್ ಭಾರತ್ ಯೋಜನೆಯಡಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಶೌಚಾಲಯ ನಿರ್ಮಾಣ ಗುರಿ ಸಾಧಿಸಿದ್ದ ಇವರ ಅಧಿಕಾರ ಅವಧಿಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಮಂಡ್ಯ ಜಿಲ್ಲೆ ಭಾರತದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಸಿಇಓ ಅವರ ಕಾರ್ಯ ವೈಖರಿಯನ್ನು ನೋಡಿ ಮಂಡ್ಯದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದರು.

    2015ರ ಸೆಪ್ಟೆಂಬರ್ ನಲ್ಲಿ ರೋಹಿಣಿ ಸಿಂಧೂರಿ ಅವರನ್ನು ಸರ್ಕಾರ ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಿಸಿ ವರ್ಗಮಾಡಿತ್ತು. ಈಗ ಅಲ್ಲಿಂದ ಮೊದಲ ಬಾರಿಗೆ ಜಿಲ್ಲಾಧಿಕಾರಿಯಾಗಿ ಹಾಸನಕ್ಕೆ ಬಂದಿದ್ದಾರೆ.

    https://youtu.be/RIlr3y8t7ow

    https://youtu.be/c6PoH0rh1XE

    https://youtu.be/Ipp8L7Zgu-A

    https://youtu.be/I0pUTEiRfSo