Tag: DC

  • ಖಾನಪೂರದಲ್ಲಿ ಗೋಡೆ ಬಿದ್ದು ಬಾಲಕನ ಸಾವು – 5 ಲಕ್ಷ ರೂಪಾಯಿ ಪರಿಹಾರ ವಿತರಿಸಿದ ಡಿಸಿ

    ಖಾನಪೂರದಲ್ಲಿ ಗೋಡೆ ಬಿದ್ದು ಬಾಲಕನ ಸಾವು – 5 ಲಕ್ಷ ರೂಪಾಯಿ ಪರಿಹಾರ ವಿತರಿಸಿದ ಡಿಸಿ

    ಬೆಳಗಾವಿ: ಖಾನಾಪುರ ತಾಲೂಕಿನ ಬೀಡಿ ಹೋಬಳಿಯ ಚುಂಚವಾಡ ಗ್ರಾಮದಲ್ಲಿ ಮಳೆಯಿಂದ ಗೋಡೆ ಬಿದ್ದು ಮೃತಪಟ್ಟಿರುವ ಬಾಲಕನಿಗೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಐದು ಲಕ್ಷ ಪರಿಹಾರ ನೀಡಿದ್ದಾರೆ.

    ಖಾನಾಪುರ ತಾಲೂಕಿನ ಚುಂಚವಾಡ ಗ್ರಾಮದ ಅನಂತರಾಜ ಧರಣೇಂದ್ರ ಪಾಶೆಟ್ಟಿ(15) ಮನೆಯ ಗೋಡೆ ಕುಸಿದು ಸಾವನ್ನಪ್ಪಿದ್ದನು. ಬಾಲಕ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಆರ್.ಟಿ.ಜಿ.ಎಸ್ ಮೂಲಕ ಕುಟುಂಬಸ್ಥರಿಗೆ ಐದು ಲಕ್ಷ ರೂಪಾಯಿ ಪರಿಹಾರವನ್ನು ನೀಡಿದ್ದಾರೆ. ಇದನ್ನೂ ಓದಿ: ಗೋಡೆ ಕುಸಿತ – 15 ವರ್ಷದ ಬಾಲಕ ಸ್ಥಳದಲ್ಲೆ ಸಾವು

    ಪ್ರಕೃತಿ ವಿಕೋಪದಿಂದ ಈ ಘಟನೆ ಸಂಭವಿಸಿರುವ ಹಿನ್ನೆಲೆ ನಿಯಮಾವಳಿ ಪ್ರಕಾರ ಮೃತ ಬಾಲಕನ ತಂದೆ ಧರಣೇಂದ್ರ ಪಾಶೆಟ್ಟಿ ಅವರ ಬ್ಯಾಂಕ್ ಖಾತೆಗೆ ಪರಿಹಾರ ಧನವನ್ನು ಖಾನಾಪುರ ತಹಶೀಲ್ದಾರರ ಪಿ.ಡಿ. ಖಾತೆಯಿಂದ ಜಮಾ ಮಾಡಲಾಗಿದೆ. ದುರಂತದ ಕುರಿತು ವರದಿಯನ್ನು ಪಡೆದುಕೊಂಡ ಕೆಲವೇ ಗಂಟೆಗಳಲ್ಲಿ ಮೃತರ ವಾರಸುದಾರರಿಗೆ ಪರಿಹಾರಧನವನ್ನು ನೀಡುವ ಮೂಲಕ ಜಿಲ್ಲಾಡಳಿತ ಅತ್ಯಂತ ತ್ವರಿತವಾಗಿ ಸ್ಪಂದಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ನೌಕರರು ಕಚೇರಿಗಳಲ್ಲಿ ಜೀನ್ಸ್-ಟೀ ಶರ್ಟ್ ಧರಿಸುವಂತಿಲ್ಲ- ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

    ಸರ್ಕಾರಿ ನೌಕರರು ಕಚೇರಿಗಳಲ್ಲಿ ಜೀನ್ಸ್-ಟೀ ಶರ್ಟ್ ಧರಿಸುವಂತಿಲ್ಲ- ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

    ಲಕ್ನೋ: ಉತ್ತರ ಪ್ರದೇಶದಲ್ಲಿ ಮತ್ತೊಂದು ರೂಲ್ಸ್ ಜಾರಿಗೆ ಬಂದಿದ್ದು ನೆರೆ ರಾಜ್ಯಗಳ ಗಮನ ಸೆಳೆದಿದೆ.

    ಹೌದು.. ಸರ್ಕಾರಿ ನೌಕರರು ಕಚೇರಿಗಳಲ್ಲಿ ಜೀನ್ಸ್-ಟೀ ಶರ್ಟ್ ಧರಿಸುವಂತಿಲ್ಲ ಅಂತ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಜಿಲ್ಲಾಧಿಕಾರಿ ಆರ್ಯಕಾ ಚೌಧರಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆ ಕುರಿತಾದ ಚರ್ಚೆಗೆ ಪಾಕ್ ಪತ್ರಕರ್ತ ನುಸ್ರತ್ ಮಿರ್ಜಾನನ್ನು ನಾನು ಆಹ್ವಾನಿಸಿಲ್ಲ: ಹಮೀದ್ ಅನ್ಸಾರಿ

    ಈ ಜಿಲ್ಲೆ ವ್ಯಾಪ್ತಿಯ ಸರ್ಕಾರಿ ಶಾಲೆ ಶಿಕ್ಷಕರು, ಇತರೆ ಇಲಾಖೆಗಳ ನೌಕರರು ಜೀನ್ಸ್-ಟೀ ಶರ್ಟ್ ಧರಿಸುವಂತಿಲ್ಲ. ಕೇವಲ ಫಾರ್ಮಲ್ಸ್ ಧರಿಸಲಷ್ಟೇ ಅವಕಾಶ. ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ ಅಂತ ಎಚ್ಚರಿಕೆ ನೀಡಿದ್ದಾರೆ. ಆದ್ರೆ ಕೆಲ ಸರ್ಕಾರಿ ಕಚೇರಿಯ ನೌಕರರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉಡುಪಿಯಲ್ಲಿ ಮಳೆಯ ಆರ್ಭಟ – 10 ದಿನಗಳಲ್ಲಿ 30 ಕೋಟಿ ನಷ್ಟ

    ಉಡುಪಿಯಲ್ಲಿ ಮಳೆಯ ಆರ್ಭಟ – 10 ದಿನಗಳಲ್ಲಿ 30 ಕೋಟಿ ನಷ್ಟ

    ಉಡುಪಿ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಕಳೆದ ಹತ್ತು ದಿನಗಳಲ್ಲಿ 30 ಕೋಟಿ ರೂ.ನಷ್ಟು ಆಸ್ತಿ ನಷ್ಟವಾಗಿದೆ.

    ಜಿಲ್ಲೆಯಲ್ಲಿ ಜುಲೈ 405 ಮಿ.ಮೀ ವಾಡಿಕೆ ಮಳೆಯಾಗಿದ್ದು, ಇದುವರೆಗೆ 1,050 ಮಿ.ಮೀ ಮಳೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ 750 ಎಂಎಲ್ ದಾಖಲೆ ಮಳೆಯಾಗಿದೆ. ಒಟ್ಟು 250 ಹೆಕ್ಟೇರ್ ಭತ್ತ ಬೆಳೆ ಹಾನಿಯಾಗಿದೆ. ನಗರ ಪ್ರದೇಶದಲ್ಲಿ 93 ಕಿಮೀ. ಹಾಗೂ ಗ್ರಾಮೀಣ ಪ್ರದೇಶದ 685 ಕಿಮೀ. ನಷ್ಟು ರಸ್ತೆ ಮಳೆಗೆ ಹಾನಿಯಾಗಿದೆ. ಇದನ್ನೂ ಓದಿ: ‘ರೋಡೀಸ್’ ರಿಯಾಲಿಟಿ ಶೋ ಗೆದ್ದ ಬೆಂಗಳೂರಿನ ಹುಡುಗಿ : ಗೆಲುವು ಸುಲಭದ್ದಲ್ಲ ಎಂದ ನಂದಿನಿ

    ಜಿಲ್ಲೆ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ 7.5 ಕಿಮೀ. ಮುಖ್ಯರಸ್ತೆ ಹಾಳಾಗಿದೆ. 13 ಸೇತುವೆಗಳು ಹಾನಿಯಾಗಿದೆ. 1,515 ವಿದ್ಯುತ್‌ ಕಂಬಗಳು ಬಿದ್ದುಹೋಗಿದ್ದು, 47 ಕಿಮೀ. ನಷ್ಟು ವಿದ್ಯುತ್ ತಂತಿಗಳು ಹಾಳಾಗಿದೆ. 64 ಮನೆಗಳು ಭಾಗಶಃ ಹಾನಿಯಾಗಿದೆ. ಕಳೆದ 10 ದಿನಗಳಲ್ಲಿ 30 ಕೋಟಿ ರೂ.ಗಳಷ್ಟು ಆಸ್ತಿ ನಷ್ಟವಾಗಿದ್ದು, ನೆರೆ ಪೀಡಿತ ಪ್ರದೇಶಗಳ ನಷ್ಟದ ಲೆಕ್ಕಾಚಾರ ಇನ್ನಷ್ಟೇ ಆಗಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದ್ದಾರೆ. ಇದನ್ನೂ ಓದಿ:  ಆಫರ್‌ ಬೆನ್ನಲ್ಲೇ ದಾಖಲೆ ಪ್ರಮಾಣದಲ್ಲಿ ರಷ್ಯಾದಿಂದ ತೈಲ ಖರೀದಿಸಿದ ಭಾರತ

    ಜಿಲ್ಲೆಯಲ್ಲಿ ನಿರಂತರ ಮಳೆ ಮುಂದುವರಿದಿದ್ದು, ನಷ್ಟದ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 5 ಲಕ್ಷ ರೂ. ಲಂಚ ಪಡೆದ ಪ್ರಕರಣ- ಬೆಂಗಳೂರು ಡಿಸಿಯಾಗಿದ್ದ ಮಂಜುನಾಥ್ ಅರೆಸ್ಟ್

    5 ಲಕ್ಷ ರೂ. ಲಂಚ ಪಡೆದ ಪ್ರಕರಣ- ಬೆಂಗಳೂರು ಡಿಸಿಯಾಗಿದ್ದ ಮಂಜುನಾಥ್ ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ಇದೀಗ ಅರೆಸ್ಟ್ ಆಗಿದ್ದಾರೆ. ಜಮೀನು ವ್ಯಾಜ್ಯ ಇತ್ಯರ್ಥಪಡಿಸಲು 5 ಲಕ್ಷ ಪಡೆದ ಪ್ರಕರಣದಲ್ಲಿ ಸದ್ಯ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಎಂಡಿ ಆಗಿರುವ ಮಂಜುನಾಥ್ ಅರೆಸ್ಟ್ ಆಗಿದ್ದಾರೆ.

    ಎಸಿಬಿ ಅಧಿಕಾರಿಗಳು ಮಂಜುನಾಥ್‍ರನ್ನು ಇಂದು ವಿಚಾರಣೆಗೆ ಕರೆದು ಸಾಕ್ಷ್ಯಾಧಾರ ಪಕ್ಕಾ ಆದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಮೂಲತಃ ರಾಜ್ಯ ಲೆಕ್ಕ ಪತ್ರ ಇಲಾಖೆ ಹಿರಿಯ ಅಧಿಕಾರಿಯಾಗಿದ್ದ ಮಂಜುನಾಥ್ ಅವರು ನಾನ್ ಕೆಎಎಸ್ ವಿಭಾಗದಲ್ಲಿ ಐಎಎಸ್ ಪದೋನ್ನತಿ ಪಡೆದವರಾಗಿದ್ದಾರೆ. ಚಿಕ್ಕಬಳ್ಳಾಪುರ ಸಿಇಒ ಆಗಿದ್ದರು ನಂತರ ಕೋಲಾರ ಡಿಸಿ ಆಗಿದ್ದರು. ಬಳಿಕ ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದರು. ಕಳೆದ 1 ವರ್ಷದಿಂದ ಬೆಂಗಳೂರು ಡಿಸಿಯಾಗಿದ್ದರು.

    ಭ್ರಷ್ಟಾಚಾರ ಆರೋಪ ಕೇಳಿಬಂದ ಬೆನ್ನಲ್ಲೇ ಬೆಂಗಳೂರು ಡಿಸಿಯಿಂದ ಕಳೆದ ವಾರವಷ್ಟೇ ಇಂಟಿಗ್ರೇಟೆಡ್ ಚೈಲ್ಡ್ ಪ್ರೊಟೆಕ್ಷನ್ ಸ್ಕೀಮ್ ಎಂಡಿಯಾಗಿ ಮಂಜುನಾಥ್‍ನನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಇದೀಗ ವಿಚಾರಣೆಗೆ ಕರೆದು ಮಂಜುನಾಥ್ ರನ್ನ ಕರೆದು ಎಸಿಬಿ ಅರೆಸ್ಟ್ ಮಾಡಿದೆ. ಇದನ್ನೂ ಓದಿ: ಮುಂಚೆನೇ ಹೇಳಿದ್ದೆ, ಯಾರು ಎಷ್ಟೇ ದೊಡ್ಡವರಿದ್ರೂ ಕ್ರಮ ತಗೋತೀವಿ ಅಂತ: ಸಿಎಂ

    ಏನಿದು ಪ್ರಕರಣ..?: ಆನೇಕಲ್ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನಿಗಾಗಿ ಗಲಾಟೆ ನಡೆದಿತ್ತು. ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದ ಕೇಸ್ ಡಿಸಿ ಕೋರ್ಟಿಗೆ ಬಂದಿತ್ತು. ದೂರುದಾರದ ಪರವಾಗಿ ಆದೇಶ ನೀಡಲು ಬೇಡಿಕೆ ವ್ಯಕ್ತವಾಗಿತ್ತು. ಬೇಗೂರು ನಿವಾಸಿ ಅಜಂ ಪಾಷಾ ಎಂಬವರು ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಜಿಲ್ಲಾಧಿಕಾರಿ ಮಂಜುನಾಥ್ 5 ಲಕ್ಷ ಲಂಚ ಪಡೆದ ಆರೋಪ ಕೇಳಿ ಬಂದಿತ್ತು. ತನ್ನ ಅಧೀನ ಕೆಲಸಗಾರನ ಮೂಲಕ ಡಿಸಿ ಹಣ ಪಡೆದಿದ್ದರು. ಈ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಅಲ್ಲದೆ ಹಣದ ಸಮೇತ ಡಿಸಿ ಅಧೀನ ಕೆಲಸಗಾರನ ಬಂಧಿಸಲಾಗಿತ್ತು.

    ಆತ ಡಿಸಿ ಹೇಳಿದ್ದಕ್ಕೆ ಹಣ ಪಡೆದಿದ್ದಾಗಿ ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದಾನೆ. ಅನಂತರ ಡಿಸಿ ವಿರುದ್ಧ ಎಸಿಬಿ ಎಫ್‍ಐಆರ್ ದಾಖಲಿಸಿ ತನಿಖೆ ಕೈಗೊಂಡಿದೆ. ತನ್ನ ವಿರುದ್ಧದ ಎಫ್‍ಐಆರ್ ಹಾಗೂ ಎಸಿಬಿ ತನಿಖೆ ರದ್ದುಪಡಿಸುವಂತೆ ಕೋರಿ ಮಂಜುನಾಥ್ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಪಿಎಸ್‌ಐ ಅಕ್ರಮ -ADGP ಅಮೃತ್‌ ಪೌಲ್ ಅರೆಸ್ಟ್‌

    ಮಂಜುನಾಥ್‌ ಸಸ್ಪೆಂಡ್:‌ ಬಂಧಿತ ಐಎಎಸ್ ಅಧಿಕಾರಿ  ಮಂಜುನಾಥ್ ನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಆಲ್ ಇಂಡಿಯ ಸರ್ವಿಸ್ ರೂಲ್ಸ್ ಅಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರಧಾನಿ ಕಚೇರಿ ಅಧಿಕಾರಿ ಹೆಸರಿನಲ್ಲಿ ಚಾಮರಾಜನಗರ ಡಿಸಿಗೆ ಫೇಕ್ ಕಾಲ್- ನಕಲಿ ಅಧಿಕಾರಿ ವಿರುದ್ಧ FIR

    ಪ್ರಧಾನಿ ಕಚೇರಿ ಅಧಿಕಾರಿ ಹೆಸರಿನಲ್ಲಿ ಚಾಮರಾಜನಗರ ಡಿಸಿಗೆ ಫೇಕ್ ಕಾಲ್- ನಕಲಿ ಅಧಿಕಾರಿ ವಿರುದ್ಧ FIR

    ಚಾಮರಾಜನಗರ: `ನಾನು ಪ್ರಧಾನ ಮಂತ್ರಿ ಕಚೇರಿಯಲ್ಲಿ ಕೆಲಸ ನಿರ್ವಹಿಸ್ತಾ ಇದ್ದೀನಿ’ ಎಂದು ಚಾಮರಾಜನಗರ ಜಿಲ್ಲಾಧಿಕಾರಿಗೆ ಕರೆ ಮಾಡಿದ್ದ ನಕಲಿ ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

    ಬಿಳಿಗಿರಿರಂಗನ ಬೆಟ್ಟದ ಕೆ.ಗುಡಿಯಲ್ಲಿ ವಾಸ್ತವ್ಯ, ಜಂಗಲ್ ಸಫಾರಿ, ದೇವರ ದರ್ಶನ ದೊಡ್ಡಸಂಪಿಗೆ ಮರದ ವೀಕ್ಷಣೆಗೆ ವ್ಯವಸ್ಥೆ ಮಾಡುವಂತೆ ರಾವ್ ಹೆಸರಿನ ವ್ಯಕ್ತಿಯೊಬ್ಬ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಕರೆ ಮಾಡಿದ್ದಾನೆ. ಇದನ್ನೂ ಓದಿ: ಹೋಳಿಗೆ, ನಿಪ್ಪಟ್ಟು, ಆಲೂ ಕೂರ್ಮಾ; ತೆಲಂಗಾಣ ಸಾಂಪ್ರದಾಯಿಕ ಖಾದ್ಯ ಸವಿದ ಮೋದಿ – ಮೆನುವಿನಲ್ಲಿತ್ತು 50 ಐಟಂ

    CRIME 2

    ಈ ವೇಳೆ ನಿಖರ ಹುದ್ದೆ ಬಗ್ಗೆ ಡಿಸಿ ಕೇಳಿದ್ದಾರೆ. ಆದರೆ ವ್ಯಕ್ತಿ ಹೆಸರು ಹಾಗೂ ಹುದ್ದೆ ಬಹಿರಂಗಪಡಿಸಬಾರದೆಂದು ತಿಳಿಸಿದ್ದಾನೆ. ಅನುಮಾನಗೊಂಡ ಡಿಸಿ ಪ್ರಧಾನ ಮಂತ್ರಿ ಕಚೇರಿ ಹೆಸರು ದುರುಪಯೋಗ ಆರೋಪ ಹಾಗೂ ವಂಚಿಸಲು ಯತ್ನಿಸಿರುವ ಆರೋಪದ ಮೇಲೆ ಪೊಲೀಸರಿಗೆ ದೂರು ನೀಡಿ, ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ವಿಜಯ್ ದೇವರಕೊಂಡ ಅರೆ ನಗ್ನ ಫೋಟೋ ನೋಡಿ ರಶ್ಮಿಕಾ ಹೇಳಿದ್ದು ಹೀಗೆ

    ಪೊಲೀಸರು ತನಿಖೆ ಆರಂಭಿಸಿದ್ದು ಅಪರಿಚಿತ ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ್ದಾರೆ. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv

  • ಲಂಚ ಪಡೆದ ಆರೋಪ- ಬೆಂಗಳೂರು ಡಿಸಿ ಎತ್ತಂಗಡಿ

    ಲಂಚ ಪಡೆದ ಆರೋಪ- ಬೆಂಗಳೂರು ಡಿಸಿ ಎತ್ತಂಗಡಿ

    ಬೆಂಗಳೂರು: ಲಂಚ ಪಡೆದ ಆರೋಪದಡಿ ಬೆಂಗಳೂರು ಡಿಸಿ ಮಂಜುನಾಥ್‍ರನ್ನ ಸರ್ಕಾರ ಎತ್ತಂಗಡಿ ಮಾಡಿ ಆದೇಶ ನೀಡಿದೆ.

    ಭ್ರಷ್ಟಾಚಾರ ಪ್ರಕರಣದಲ್ಲಿ ಕೆಳಹಂತದ ಅಧಿಕಾರಿಗಳನ್ನ ಮಾತ್ರ ಎಸಿಬಿ ಮುಟ್ಟೋದು ಅಂತಾ ಹೈಕೋರ್ಟ್ ಛಾಟಿ ಬೆನ್ನಲ್ಲೇ ಸರ್ಕಾರ ಬೆಂಗಳೂರು ಡಿಸಿ ಮಂಜುನಾಥ್‍ರನ್ನ ವರ್ಗಾವಣೆ ಮಾಡಿದೆ. ಇದನ್ನೂ ಓದಿ: ದಕ್ಷಿಣ ಇರಾನ್‍ನಲ್ಲಿ ಭೂಕಂಪನ- ಮೂವರು ಸಾವು, 16 ಮಂದಿಗೆ ಗಂಭೀರ ಗಾಯ

    ಇತ್ತೀಚೆಗೆ ಎಸಿಬಿ ಡಿಸಿ ಕಚೇರಿ ಮೇಲೆ ದಾಳಿ ನಡೆಸಿತ್ತು. ಗುರುವಾರವೂ ಸಹ ಮಂಜುನಾಥ್‍ರನ್ನ 10 ಗಂಟೆಗಳ ಕಾಲ ವಿಚಾರಣೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿ ಹೈಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿತ್ತು. ಎಲ್ಲ ವಿವಾದಗಳ ಮಧ್ಯೆ ಡಿಸಿಯನ್ನ ಎತ್ತಂಗಡಿ ಮಾಡಿ ಇಂಟಿಗ್ರೇಟೆಡ್ ಚೈಲ್ಡ್ ಪ್ರೊಟೆಕ್ಷನ್ ಸ್ಕೀಮ್ ಎಂಡಿಯಾಗಿ ವರ್ಗಾವಣೆ ಮಾಡಿದೆ. ನೂತನ ಡಿಸಿಯಾಗಿ ಸಂಗಪ್ಪ ನೇಮಕಗೊಂಡಿದ್ದಾರೆ.

    Live Tv

  • ಈ ಬಾರಿ ಖಾಕಿ ಕಣ್ಗಾವಲಿನಲ್ಲಿ ಬಕ್ರೀದ್ ಆಚರಣೆ

    ಈ ಬಾರಿ ಖಾಕಿ ಕಣ್ಗಾವಲಿನಲ್ಲಿ ಬಕ್ರೀದ್ ಆಚರಣೆ

    ಕಲಬುರಗಿ: ಜಿಲ್ಲೆಯಾದ್ಯಂತ ಜುಲೈ 10 ರಂದು ಶಾಂತಿಯುತ ಬಕ್ರೀದ್ ಹಬ್ಬ ಆಚರಣೆಗೆ ಕರೆ ನೀಡಲಾಗಿದೆ.

    ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿಸಿ ಯಶವಂತ ವಿ. ಗುರುಕರ್ ಅಧ್ಯಕ್ಷತೆಯಲ್ಲಿ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಶಾಂತಿಯುತ ಆಚರಣೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಟೈಲರ್‌ ಶಿರಚ್ಛೇದನ ಮಾಡಿದ ಮುಸ್ಲಿಂ ಯುವಕರು ಕೆಲವೇ ಗಂಟೆಗಳಲ್ಲಿ ಅರೆಸ್ಟ್‌

    ಬಕ್ರೀದ್ ಹಬ್ಬ ದಿನದಂದು ಯಾವುದೇ ಮೆರವಣಿಗೆ ನಡೆಸುವಂತಿಲ್ಲ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020 ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಾರಣ ಗೋಹತ್ಯೆ ಮಾಡುವಂತಿಲ್ಲ. ಜೊತೆಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಿಲ್ಲ ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಣೆ ಮಾಡುವಂತೆ ಸೂಚನೆ ಜಿಲ್ಲಾಧಿಕಾರಿ ನೀಡಿದ್ದಾರೆ. ಇದನ್ನೂ ಓದಿ: ಒಬ್ಬ ಹೇಡಿ ಮಾಡಿದ ಕೃತ್ಯಕ್ಕೆ ಇಡೀ ಸಮುದಾಯವನ್ನು ವಿರೋಧಿಸುವುದು ಸರಿಯಲ್ಲ: ಅಬ್ದುಲ್ ರಜಾಕ್

    ತಾಲೂಕು ಮಟ್ಟದಲ್ಲಿ ಪೊಲೀಸ್ ಇಲಾಖೆಯಿಂದ ಅನಧಿಕೃತ ಪ್ರಾಣಿ ವಧೆ, ಸಾಗಾಟ ತಡೆಗೆ ಸ್ಕ್ವಾರ್ಡ್‌ ಸಮಿತಿ ರಚಿಸಿದ್ದು, ಎಲ್ಲಾ ಮುಂಜಾಗ್ರತೆ ಕೈಗೊಳ್ಳಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸುವಂತೆ ನಿರ್ದೇಶನ ನೀಡಿದ್ದಾರೆ.

    ಸಭೆಯಲ್ಲಿ ಎಸ್‌ಪಿ ಇಶಾ ಪಂತ್, ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ ಸೇರಿದಂತೆ ಶಾಂತಿ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

    Live Tv

  • ಈಡೇರಿದ ಬೆಂಗ್ಳೂರು ಅಭಿಮಾನಿಗಳ ಬಯಕೆ – ಆರ್‌ಸಿಬಿ ಪ್ಲೇ ಆಫ್‍ಗೆ ಡೆಲ್ಲಿ ಮನೆಗೆ

    ಈಡೇರಿದ ಬೆಂಗ್ಳೂರು ಅಭಿಮಾನಿಗಳ ಬಯಕೆ – ಆರ್‌ಸಿಬಿ ಪ್ಲೇ ಆಫ್‍ಗೆ ಡೆಲ್ಲಿ ಮನೆಗೆ

    ಮುಂಬೈ: ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ ಮುಂಬೈ 5 ವಿಕೆಟ್‌ಗಳ ಗೆಲುವಿನೊಂದಿಗೆ ಕೂಟಕ್ಕೆ ವಿದಾಯ ಘೋಷಿಸಿದರೆ, ಇತ್ತ ಈ ಸೋಲಿನೊಂದಿಗೆ ಡೆಲ್ಲಿ ಪ್ಲೇ ಆಫ್ ಕನಸು ನುಚ್ಚುನೂರಾಗಿದೆ.

    160 ರನ್‍ಗಳ ಗುರಿ ಪಡೆದ ಮುಂಬೈ ಗೆಲುವಿಗಾಗಿ ತಿಲಕ್ ವರ್ಮಾ ಮತ್ತು ಟಿಮ್ ಡೇವಿಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ವೇಳೆ ಸ್ಫೋಟಕ ಆಟವಾಡುತ್ತಿದ್ದ ಟಿಮ್ ಡೇವಿಡ್ 34 ರನ್ (15 ಎಸೆತ, 2 ಬೌಂಡರಿ, 4 ಸಿಕ್ಸ್) ವಿಕೆಟ್ ಕಳೆದುಕೊಂಡಿತು. ಈ ಮೊದಲು ಡೇವಿಡ್‌ ಅವರ ಸ್ಫೋಟಕ ಆಟ ಮುಂಬೈ ಗೆಲುವನ್ನು ಮತ್ತಷ್ಟು ಸನಿಹಕ್ಕೆ ತಂದು ನಿಲ್ಲಿಸಿತ್ತು. ಅಂತಿಮವಾಗಿ 19.1 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್‌ ನಷ್ಟಕ್ಕೆ 160 ರನ್‌ ಸಿಡಿಸಿ ಮುಂಬೈ ಗೆಲುವಿನ ನಗೆ ಬೀರಿತು. ಈ ಗೆಲುವು ಆರ್‌ಸಿಬಿ ಪ್ಲೇ ಆಫ್‍ಗೇರಲು ನೆರವಾಯಿತು. ಇತ್ತ ಮಹತ್ವದ ಪಂದ್ಯ ಸೋತ ಡೆಲ್ಲಿ ತಂಡದ ಈವರೆಗಿನ ಹೋರಾಟ ವ್ಯರ್ಥವಾಯಿತು.

    ಸಾಧಾರಣ ಮೊತ್ತ ಬೆನ್ನಟ್ಟಿದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಬಂದಷ್ಟೇ ವೇಗವಾಗಿ 2 ರನ್ ಗಳಿಸಿ ಪೆವಿಲಿಯನ್‍ಗೆ ಹೆಜ್ಜೆ ಹಾಕಿದರು. ಆ ಬಳಿಕ ಒಂದಾದ ಇಶಾನ್ ಕಿಶನ್ ಮತ್ತು ಡೆವಾಲ್ಡ್ ಬ್ರೆವಿಸ್ ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಬ್ರೆವಿಸ್ 37 ರನ್ (33 ಎಸೆತ, 1 ಬೌಂಡರಿ, 3 ಸಿಕ್ಸ್) ಮತ್ತು ಕಿಶನ್ 48 ರನ್ (35 ಎಸೆತ, 3 ಬೌಂಡರಿ, 4 ಸಿಕ್ಸ್) ಔಟ್ ಆಗುವ ಮುನ್ನ 2ನೇ ವಿಕೆಟ್‍ಗೆ 51 ರನ್ (37 ಎಸೆತ) ಜೊತೆಯಾಟವಾಡಿದರು.

    ಈ ಮೊದಲು ತೀವ್ರ ಕುತೂಹಲ ಮೂಡಿಸಿದ ಪಂದ್ಯದ ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಆದರೆ ಈ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾದ ಡೆಲ್ಲಿ ತಂಡದ ಆರಂಭಿಕರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.

    ಡೇವಿಡ್ ವಾರ್ನರ್ 5 ರನ್‍ಗೆ ಸುಸ್ತಾದರೆ, ಮಿಚೆಲ್ ಮಾರ್ಷ್ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ಇತ್ತ ಉತ್ತಮ ಹೊಡೆತಗಳ ಮೂಲಕ ಭರವಸೆ ಮೂಡಿಸಿದ ಪೃಥ್ವಿ ಶಾ 24 ರನ್ (23 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು.

    ಪಂತ್, ಪೊವೆಲ್ ಜೊತೆಯಾಟ
    50 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಡೆಲ್ಲಿ ತಂಡಕ್ಕೆ ನಾಯಕ ರಿಷಭ್ ಪಂತ್ ಮತ್ತು ರೋವ್ಮನ್ ಪೊವೆಲ್ ಚೇತರಿಕೆ ನೀಡಲು ಮುಂದಾದರು. ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ಬೌಂಡರಿ, ಸಿಕ್ಸ್ ಸಿಡಿಸುತ್ತ ಮೊತ್ತ ಹೆಚ್ಚಿಸಿದ ಈ ಜೋಡಿ 5ನೇ ವಿಕೆಟ್‍ಗೆ 75 ರನ್ (44 ಎಸೆತ) ಜೊತೆಯಾಟವಾಡಿತು. ಈ ವೇಳೆ ಪಂತ್ 39 ರನ್ (33 ಎಸೆತ, 4 ಬೌಂಡರಿ, 1 ಸಿಕ್ಸ್) ಚಚ್ಚಿ ಔಟ್ ಆದರು. ಆ ಬಳಿಕ ಪೊವೆಲ್ 43 ರನ್ (34 ಎಸೆತ, 1 ಬೌಂಡರಿ, 4 ಸಿಕ್ಸ್) ಸಿಡಿಸಿ ಮುನ್ನುಗ್ಗುತ್ತಿದ್ದ ವೇಳೆ ಬುಮ್ರಾ ಎಸೆದ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು.

    ಕೊನೆಯಲ್ಲಿ ಅಕ್ಷರ್ ಪಟೇಲ್ ಬಿರುಸಿನ ಅಜೇಯ 19 ರನ್ (10 ಎಸೆತ, 2 ಸಿಕ್ಸ್) ನೆರವಿನಿಂದ ತಂಡದ ಮೊತ್ತ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159ಕ್ಕೆ ಏರಿತು.

    ಮುಂಬೈ ಪರ ಬೌಲಿಂಗ್‍ನಲ್ಲಿ ಮಿಂಚಿದ ಬುಮ್ರಾ 3 ವಿಕೆಟ್ ಕಿತ್ತು ಡೆಲ್ಲಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ಉಳಿದಂತೆ ರಮಣದೀಪ್ ಸಿಂಗ್ 2, ಡೇನಿಯಲ್ ಸ್ಯಾಮ್ ಮತ್ತು ಮಯಾಂಕ್ ಮಾರ್ಕಂಡೆ ತಲಾ 1 ವಿಕೆಟ್ ಪಡೆದರು.

  • ಬೆಂಗಳೂರಲ್ಲಿ ಡಿಸಿ ಕಚೇರಿ ಮೇಲೆ ಎಸಿಬಿ ದಾಳಿ – ತಹಶೀಲ್ದಾರ್ ಬಂಧನ

    ಬೆಂಗಳೂರಲ್ಲಿ ಡಿಸಿ ಕಚೇರಿ ಮೇಲೆ ಎಸಿಬಿ ದಾಳಿ – ತಹಶೀಲ್ದಾರ್ ಬಂಧನ

    ಬೆಂಗಳೂರು: ನಗರದ ಡಿ.ಸಿ ಕಚೇರಿಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಇಬ್ಬರು ಭ್ರಷ್ಟ ಅಧಿಕಾರಿಗಳಿಗೆ ಬಲೆ ಬೀಸಿದ್ದಾರೆ.

    ಡಿಸಿ ಮಂಜುನಾಥ್ ಲಂಚ ಪಡೆಯುತ್ತಿರುವ ಬಗ್ಗೆ ಹಲವು ಆರೋಪಗಳು ಕೇಳಿ ಬಂದಿತ್ತು. ಈ ಹಿನ್ನೆಲೆ ಇಂದು 5 ಲಕ್ಷ ಹಣ ಪಡೆಯುವ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ಬಲೆಗೆ ತಹಶೀಲ್ದಾರ್ ಮಹೇಶ್, ಕೋರ್ಟ್ ಸಹಾಯಕ ಚಂದ್ರು ಸಿಕ್ಕಿಹಾಕಿಕೊಂಡಿದ್ದಾರೆ. ಇಬ್ಬರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ನಿಂತು ನಮಾಜ್- ವ್ಯಕ್ತಿಯ ಬಂಧನ

    ಡಿಸಿ ಮಾರ್ಗದರ್ಶನದಲ್ಲಿ ಹಣ ಪಡೆದಿದ್ದಾರೆ ಎಂಬ ಆರೋಪವಿದೆ ಆದರೆ ಆರೋಪಕ್ಕೆ ಸಾಕ್ಷ್ಯ ಇಲ್ಲ ಎಂದ ಎಸಿಬಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಮಂಜುನಾಥ್ ಎಸಿಬಿ ದಾಳಿ ನಡೆದಿದೆ. ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ನಾನು ಬೇರೆ ಕಾರ್ಯಕ್ರಮದಲ್ಲಿ ಇದ್ದೀನಿ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಉಪತಳಿ BA-4 ಮತ್ತೊಂದು ಪ್ರಕರಣ ತಮಿಳುನಾಡಿನಲ್ಲಿ ಪತ್ತೆ

     

     

  • ಹಾಸನ ಜಿಲ್ಲೆಯಲ್ಲಿ ಇಂದು 1 ರಿಂದ 10ನೇ ತರಗತಿವರೆಗೆ ರಜೆ ಘೋಷಣೆ

    ಹಾಸನ ಜಿಲ್ಲೆಯಲ್ಲಿ ಇಂದು 1 ರಿಂದ 10ನೇ ತರಗತಿವರೆಗೆ ರಜೆ ಘೋಷಣೆ

    ಹಾಸನ: ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಒಂದರಿಂದ ಹತ್ತನೇ ತರಗತಿವರೆಗೆ ಹಾಸನ ಜಿಲ್ಲೆಯಾದ್ಯಂತ ರಜೆ ಘೋಷಣೆ ಮಾಡಲಾಗಿದೆ.

    ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಹಾಸನ ಡಿಡಿಪಿಐ ಪ್ರಕಾಶ್ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಬೇಸಿಗೆ ರಜೆ ಮುಗಿದು ಎರಡು ದಿನಗಳ ಹಿಂದೆಯಷ್ಟೇ ಶಾಲೆಗಳು ಆರಂಭವಾಗಿದ್ದವು. ಆದರೆ ಮಂಗಳವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮಕ್ಕಳು ಶಾಲೆಗಳಿಗೆ ಬರಲು ಸಮಸ್ಯೆಯಾಗುತ್ತೆ. ಈ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಆಸ್ಪತ್ರೆಗೆ ಹೊರಟ ಆಂಬ್ಯುಲೆನ್ಸ್ ಅಡ್ಡಗಟ್ಟಿದ ಗಜರಾಜ

    ಈ ದಿನದ ನಷ್ಟವನ್ನು ಬೇರೆ ರಜಾ ದಿನಗಳಲ್ಲಿ ತರಗತಿ ನಡೆಸುವ ಮೂಲಕ ಸರಿದೂಗಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಹಾಸನ ಜಿಲ್ಲೆಯಾದ್ಯಂತ ನಿರಂತರ ಜೋರು ಮಳೆಯಾಗುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ವಾಹನ ಸವಾರರು ಪರದಾಡುವಂತಾಗಿದೆ.