Tag: DC Thammanna

  • ಸಚಿವ ಡಿ.ಸಿ ತಮ್ಮಣ್ಣ ಬೆಂಬಲಿಗನ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ!

    ಸಚಿವ ಡಿ.ಸಿ ತಮ್ಮಣ್ಣ ಬೆಂಬಲಿಗನ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ!

    ಮಂಡ್ಯ: ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಬೆಂಬಲಿಗನ ಒಡೆತನದ ವಸತಿ ಗೃಹದ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಬಾಂಗ್ಲಾ ಮೂಲದ ಮೂವರು ಯುವತಿಯರನ್ನು ರಕ್ಷಣೆ ಮಾಡಿರುವ ಘಟನೆ ಮಂಡ್ಯದ ಮದ್ದೂರಿನಲ್ಲಿ ನಡೆದಿದೆ.

    ಒಡನಾಡಿ ಸಂಸ್ಥೆಯವರು ನೀಡಿದ ದೂರಿನ ಮೇರೆಗೆ ಮೈಸೂರು ಬೆಂಗಳೂರು ಹೆದ್ದಾರಿ ಪಕ್ಕದಲ್ಲೇ ಪ್ರಕೃತಿ ವಸತಿಗೃಹದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಸತತ 5 ಗಂಟೆಗಳ ಕಾಲ ಹುಡುಕಾಟದ ನಂತರ ಗುಹೆ ರೀತಿಯ ರಹಸ್ಯ ಕೊಠಡಿಯಲ್ಲಿ ಯುವತಿಯರನ್ನು ಅಡಗಿಸಿಟ್ಟಿದ್ದು ಪತ್ತೆಯಾಗಿದೆ.

    ವಸತಿ ಗೃಹವು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರ ಸಹೋದರನದ್ದಾಗಿದ್ದು, ಆತ ಸಾರಿಗೆ ಸಚಿವರ ಬೆಂಬಲಿಗ ಎಂದು ಹೇಳಲಾಗುತ್ತಿದೆ. ವಸತಿ ಗೃಹವನ್ನು ಬೇರೆಯವರಿಗೆ ಬಾಡಿಗೆ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

  • ಪಕ್ಷದ ಆಂತರಿಕ ವಿಷಯ ಬೀದಿ ರಂಪಾಟವಾಗೋದು ಬೇಡ: ಸಿ.ಎಸ್.ಪುಟ್ಟರಾಜು

    ಪಕ್ಷದ ಆಂತರಿಕ ವಿಷಯ ಬೀದಿ ರಂಪಾಟವಾಗೋದು ಬೇಡ: ಸಿ.ಎಸ್.ಪುಟ್ಟರಾಜು

    ಮಂಡ್ಯ: ಖಾತೆ ಹಂಚಿಕೆಯಲ್ಲಿ ತಾರತಮ್ಯ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಗೊಂಡ ಬೆಂಬಲಿಗರಿಗೆ ಶಾಸಕ ಸಿ.ಎಸ್.ಪುಟ್ಟರಾಜು ಅವರು ಪತ್ರಿಭಟನೆ ಕೈಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ನನಗೆ ಯಾವುದೇ ಅಸಮಾಧಾನವಿಲ್ಲ. ಪಕ್ಷದ ಆಂತರಿಕ ವಿಷಯ ಬೀದಿ ರಂಪಾಟವಾಗಬಾರದು, ಆದ್ದರಿಂದ ಪ್ರತಿಭಟನೆಯನ್ನು ಕೈಬಿಡಿ ಎಂದು ಪುಟ್ಟರಾಜು ಅವರು ಫೋನ್ ಮೂಲಕ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ.

    ನಡೆದಿದ್ದು ಏನು?
    ಜಿಲ್ಲೆಯಲ್ಲಿ ಪಕ್ಷಕ್ಕೆ ಏನು ಮಾಡದ ಡಿ.ಸಿ.ತಮ್ಮಣ್ಣಗೆ ಸಾರಿಗೆ ನೀಡಲಾಗಿದೆ. ಆದರೆ ಜಿಲ್ಲೆಯ ಜನತೆ ಹಾಗೂ ಪಕ್ಷಕ್ಕಾಗಿ ಶ್ರಮಿಸಿರುವ ಸಿ.ಎಸ್.ಪುಟ್ಟರಾಜು ಅವರಿಗೆ ಸಣ್ಣ ನೀರಾವರಿ ಖಾತೆ ನೀಡಿ ತಾರತಮ್ಯ ತೊರಿದ್ದಾರೆ ಅಂತಾ ಬೆಂಬಲಿಗರು ಪ್ರತಿಭಟನೆಗೆ ಮುಂದಾಗಿದ್ದರು. ಅಲ್ಲದೇ ಸಣ್ಣ ನೀರಾವರಿ ಖಾತೆ ಸಿಕ್ಕಿದ ಹಿನ್ನೆಲೆಯಲ್ಲಿ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿಯನ್ನು ಪಡೆಯಿರಿ ಎಂದು ಪುಟ್ಟರಾಜು ಅವರಿಗೆ ಬೆಂಬಲಿಗರು ಒತ್ತಾಯಿಸಿದ್ದರು.

    ಇತ್ತ ಸಿ.ಎಸ್.ಪುಟ್ಟರಾಜು ಅವರು ಪಕ್ಷದ ಮುಖಂಡರ ಜೊತೆಗೆ ಮಾತುಕತೆಗೆ ಮುಂದಾಗದೇ ಸರ್ಕಾರಿ ಕಾರನ್ನು ವಾಪಸ್ ನೀಡಿ ಖಾಸಗಿ ಕಾರಿನಲ್ಲಿ ಚಾಲಕ, ಪತ್ನಿಯ ಜೊತೆ ಸ್ವಕ್ಷೇತ್ರದಿಂದ ಬೇರೆ ಕಡೆಗೆ ಪ್ರಯಾಣ ಬೆಳೆಸಿದ್ದರು. ಅಷ್ಟೇ ಅಲ್ಲದೇ ತಮ್ಮ ಮೊಬೈಲ್ ಫೋನನ್ನು ಸ್ವಿಚ್ ಆಫ್ ಮಾಡಿದ್ದರು.