Tag: DC Thamanna

  • ಮೊಸಳೆ ಕಣ್ಣೀರು ಹಾಕಿ ಏನು ಋಣ ತೀರಿಸಿದ್ದಾರೆ: ಸುಮಲತಾಗೆ ಡಿಸಿ ತಮ್ಮಣ್ಣ ಟಾಂಗ್

    ಮೊಸಳೆ ಕಣ್ಣೀರು ಹಾಕಿ ಏನು ಋಣ ತೀರಿಸಿದ್ದಾರೆ: ಸುಮಲತಾಗೆ ಡಿಸಿ ತಮ್ಮಣ್ಣ ಟಾಂಗ್

    ಮಂಡ್ಯ: ಬರೀ ಮೊಸಳೆ ಕಣ್ಣೀರು ಹಾಕಿ, ಋಣ ಇದೆ ಋಣ ಇದೆ ಎಂದು ಹೇಳುತ್ತಾರೆ. ಆದರೆ ಅವರು ಏನು ಋಣ ತೀರಿಸಿದ್ದಾರೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಮದ್ದೂರಿನ ಹೊನ್ನಲಗೆರೆಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಡಿಸಿ ತಮ್ಮಣ್ಣ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ 9 ತಿಂಗಳಿಗೆ ಮಂಡ್ಯ ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ಮಾಡಿದ್ದಾರೆ. ಜೊತೆಗೆ ಮಂಡ್ಯಕ್ಕೆ ಬಂದು ಶಂಕು ಸ್ಥಾಪನೆ ಕೂಡ ಮಾಡಿದ್ದಾರೆ. ಸ್ವತಂತ್ರ ಬಂದ 80 ವರ್ಷದಲ್ಲಿ ಯಾವ ಮುಖ್ಯಮಂತ್ರಿ ಒಂದು ಜಿಲ್ಲೆಗೆ ಸಾವಿರ ಕೋಟಿ ಅನುದಾನ ನೀಡಿದ್ದಾರೆ ತೋರಿಸಿ? ಅಂತಹವರನ್ನು ನೀವು ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.

    ರೈತರ ಬಗ್ಗೆ ಯಾರಿಗೆ ಮೇಲೆ ಕಾಳಜಿ ಇದೆ. ಯಾರಿಗೆ ಇಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ಬರೀ ಮೊಸಳೆ ಕಣ್ಣೀರು ಹಾಕಿ, ಋಣ ಇದೆ ಋಣ ಇದೆ ಎಂದು ಹೇಳುತ್ತಾರೆ. ಆದರೆ ಅವರು ಏನು ಋಣ ತೀರಿಸಿದ್ದಾರೆ. ಈ 70 ವರ್ಷದಲ್ಲಿ ಬಂದ ಎಲ್ಲ ರಾಜಕಾರಣಿಗಳ ಮೇಲು ನಿಮ್ಮ ಋಣ ಇದೆ. ಆದರೆ ಋಣ ತೀರಿಸುವವರು ಎಷ್ಟು ಜನರು ಇದ್ದಾರೆ ಹೇಳಿ. ಅಂತಹವರಿಗೆಲ್ಲ ನೀವು ಉತ್ತರ ಕೊಡಬೇಕು ಎಂದು ಡಿಸಿ ತಮ್ಮಣ್ಣ ಸುಮಲತಾಗೆ ಟಾಂಗ್ ಕೊಟ್ಟಿದ್ದಾರೆ.

  • ಕಾವೇರಿ ಹೋರಾಟಗಾರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ

    ಕಾವೇರಿ ಹೋರಾಟಗಾರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ

    ಮಂಡ್ಯ: ಜಿಲ್ಲೆಗೆ 5 ಸಾವಿರ ಕೋಟಿಗೂ ಹೆಚ್ಚಿನ ಅನುದಾನ ಘೋಷಿಸಿದ ಬೆನ್ನಲ್ಲೇ ಕಾವೇರಿ ಹೋರಾಟಗಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.

    ಹೌದು. ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಹೋರಾಟದ ಸಂದರ್ಭದಲ್ಲಿ ರೈತರ ಮೇಲೆ ಹಾಕಿದ್ದ ಕೇಸುಗಳ ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮದ್ದೂರಿನ ಕೆಎಂ ದೊಡ್ಡಿಯಲ್ಲಿ ಮಾತನಾಡಿದ್ದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಕ್ಯಾಬಿನೆಟ್ ಉಪ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕಾವೇರಿ ಹೋರಾಟದ ಸಮಯದಲ್ಲಿ ರೈತರ ಮೇಲೆ ದಾಖಲಾಗಿದ್ದ ಶೇ.95 ರಷ್ಟು ಕೇಸುಗಳನ್ನು ಕೈಬಿಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.

    ಈಗಾಗಲೇ ರೈತರ ಮೇಲೆ ಹೂಡಿರುವ ಕೇಸುಗಳ ಬಗ್ಗೆ ತಾಲೂಕುವಾರು ಮಾಹಿತಿ ಕಲೆ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೋರಾಟದ ಸಂದರ್ಭದಲ್ಲಿ ಸರ್ಕಾರದ ಆಸ್ತಿ-ಪಾಸ್ತಿ ನಷ್ಟ ಮಾಡಿರುವ ಕೇಸುಗಳು ವಾಪಸ್ ಪಡೆಯಲಿದ್ದೇವೆ. ಆದರೆ ಖಾಸಗಿ ಆಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಕ್ಯಾಮೆರಾ, ಕಾರುಗಳ ಜಖಂ, ಅಂಗಡಿ, ಮುಗ್ಗಟ್ಟು ಮೇಲೆ ಕಲ್ಲು ತೂರಾಟ, ಪಾಂಡವಪುರ ಜಡ್ಜ್ ಮನೆ ಮೇಲೆ ದಾಳಿ ಸೇರಿದಂತೆ ಖಾಸಗಿಯಾಗಿ ನೀಡಿರುವ ಕೇಸುಗಳು ಕೋರ್ಟ್ ನಲ್ಲೇ ಇತ್ಯರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

    ಈಗಾಗಲೇ ಹೋರಾಟಗಾರರ ಪಟ್ಟಿ ಕಾರ್ಯ ಭರದಿಂದ ಸಾಗಿದ್ದು, ಇದೇ ತಿಂಗಳು 27 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯಕ್ಕೆ ಆಗಮಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಅಂದೇ ಕಾವೇರಿ ಹೋರಾಗಾರರ ಮೇಲಿನ ಕೇಸ್ ವಾಪಸ್ ಪಡೆಯುವ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv