Tag: DC Ravi

  • ಕೇರಳ ಗಡಿಗೆ ಚಾಮರಾಜನಗರ ಡಿಸಿ ದಿಢೀರ್ ಭೇಟಿ

    ಕೇರಳ ಗಡಿಗೆ ಚಾಮರಾಜನಗರ ಡಿಸಿ ದಿಢೀರ್ ಭೇಟಿ

    ಚಾಮರಾಜನಗರ: ಕೇರಳ ರಾಜ್ಯದಿಂದ ಬರುತ್ತಿರುವ ಸರಕು ಸಾಗಾಣಿಕೆ, ಸಾರ್ವಜನಿಕರ ವಾಹನಗಳು ಸೇರಿದಂತೆ ಎಲ್ಲಾ ಬಗೆಯ ವಾಹನ ತಪಾಸಣೆಯನ್ನು ವೀಕ್ಷಿಸಿದ ಚಾಮರಾಜನಗರ ಡಿ.ಸಿ ಡಾ.ಎಂ.ಆರ್.ರವಿ ರಾಜ್ಯಕ್ಕೆ ಬರುವವರು ಕೋವಿಡ್ ಟೆಸ್ಟ್ ವರದಿ ತರಬೇಕು. ಎಲ್ಲಾ ವಾಹನಗಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದು ಚೆಕ್‍ ಪೋಸ್ಟ್ ಸಿಬ್ಬಂದಿಗೆ ಸೂಚಿಸಿದ್ದಾರೆ.

    ಕೊರೊನಾ ಡೆಲ್ಟಾ ಪ್ಲಸ್ ಕಟ್ಟೆಚ್ಚರದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೇರಳ ಗಡಿ ಮೂಲೆಹೊಳೆ ಚೆಕ್‍ ಪೋಸ್ಟ್ ಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದರು.

    ಕೇರಳದಿಂದ ಬರುವವರು ಕಡ್ಡಾಯವಾಗಿ 72 ಗಂಟೆಯ ಒಳಗಡೆ ಮಾಡಿಸಿರುವ ಕೋವಿಡ್ ಟೆಸ್ಟ್ ರಿಪೋರ್ಟ್ ಅಥವಾ 1 ಡೋಸ್ ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ತರುವವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ಕೊಡಿ, ಯಾವುದೇ ಕಾರಣಕ್ಕೂ ವರದಿ ಇಲ್ಲದವರನ್ನು ಬಿಡಬೇಡಿ. ಆರ್‌ಟಿ-​ಪಿಸಿಆರ್ ಪರೀಕ್ಷೆಯ ವರದಿಯನ್ನು ವಾಹನಗಳ ದಾಖಲಾತಿ ಪುಸ್ತಕದಲ್ಲಿ ನಮೂದಿಸಬೇಕು. ವರದಿ ಇಲ್ಲದೇ ಬಂದವರನ್ನು ವಾಪಸ್ ಕಳುಹಿಸಿದ ಮಾಹಿತಿಯನ್ನೂ ಬರೆಯಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಂಗಳ ಮುಖಿಯರಿಂದ ಗ್ರಾ.ಪಂ ಸದಸ್ಯನ ಮೇಲೆ ಹಲ್ಲೆ

  • ಇದೇನಾ ಕರ್ಫ್ಯೂ? ಸಬ್ ಇನ್ಸ್‌ಪೆಕ್ಟರ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿ – ಚಾಮರಾಜನಗರ ಡಿಸಿ ಗರಂ

    ಇದೇನಾ ಕರ್ಫ್ಯೂ? ಸಬ್ ಇನ್ಸ್‌ಪೆಕ್ಟರ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿ – ಚಾಮರಾಜನಗರ ಡಿಸಿ ಗರಂ

    ಚಾಮರಾಜನಗರ: ಕಳೆದ ಮೂರು ದಿನಗಳಿಂದ ಲಾಕ್ ಡೌನ್ ಮಾದರಿಯ ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಚಾಮರಾಜನಗರದಲ್ಲಿ ವಾಹನ ಸವಾರರು ಯಾವುದಕ್ಕೂ ಕೇರ್ ಮಾಡದೇ ಜನರು ಒಂದಲ್ಲ ಒಂದು ಕಾರಣ ಹೇಳಿಕೊಂಡು ಓಡಾಡುತ್ತಿದ್ದಾರೆ.

    ನಗರದ ಭುವನೇಶ್ವರಿ ವೃತ್ತದ ದೃಶ್ಯಗಳನ್ನು ಕಣ್ಣಾರೆ ಕಂಡು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಸ್ಥಳದಲ್ಲೇ ಎಸ್ಪಿಗೆ ಫೋನ್ ಕರೆ ಮಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿಗೆ ಬಂದು ನೋಡಿ. ಯಾವ ರೀತಿ ಕರ್ಫ್ಯೂ ಉಲ್ಲಂಘನೆ ಆಗುತ್ತಿದೆ. ಮೂವರು ಪೊಲೀಸ್ ಸಿಬ್ಬಂದಿ ಬಿಟ್ಟರೆ ಸ್ಥಳದಲ್ಲಿ ಯಾವ ಹಿರಿಯ ಪೊಲೀಸ್ ಅಧಿಕಾರಿಯು ಇಲ್ಲ. ಸಂಬಂಧಪಟ್ಟ ಸಬ್ ಇನ್ಸ್ ಪೆಕ್ಟರ್ ಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಎಂದು ಸೂಚನೆ ನೀಡಿದರು.

    ಹೀಗೆ ಹೇಳಿ ಫೋನ್ ಸಂಪರ್ಕ ಕಡಿತ ಮಾಡಿದ ಕೆಲವೇ ಹೊತ್ತಿನಲ್ಲಿ ತಕ್ಷಣ ಸ್ಥಳಕ್ಕೆ ಬಂದ ಡಿವೈಎಸ್ಪಿ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ರನ್ನು ಸಹ ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು. ಸಮಜಾಯಿಷಿ ನೀಡಲು ಬಂದ ಪೊಲೀಸ್ ಅಧಿಕಾರಿಗಳ ವಿರುದ್ದ ಮತ್ತೆ ಗರಂ ಆದ ಜಿಲ್ಲಾಧಿಕಾರಿ, ಇದೇನಾ ಕರ್ಫ್ಯೂ? ಅರ್ಥ ಆಗ್ತಾ ಇಲ್ವಾ? ಯಾವ ಭಾಷೆಯಲ್ಲಿ ಹೇಕಬೇಕು? ಮಾತು ಕಡಿಮೆ ಮಾಡಿ ಕೆಲಸ ಮಾಡಿ. ಹೀಗೆ ಜನ ಸಂಚರಿಸಲು ಬಿಟ್ಟರೆ ಏನು ಪ್ರಯೋಜನ? ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಸೀಜ್ ಮಾಡಿ, ಕೇಸ್ ಹಾಕಿ ಜನಸಂಚಾರ ನಿಯಂತ್ರಣ ಮಾಡಿ ಎಂದು ಖಡಕ್ ಸೂಚನೆ ನೀಡಿದರು.