Tag: dayananda swamiji

  • ಸ್ವಾಮೀಜಿಗಳ ಮೇಲೆ ಆರೋಪ ಕೇಳಿಬರುತ್ತಲೇ ಆತ್ಮಹತ್ಯೆ ನಿರ್ಧಾರ ಮಾಡೋದು ಸರಿಯಲ್ಲ: ದಯಾನಂದ ಸ್ವಾಮೀಜಿ

    ಸ್ವಾಮೀಜಿಗಳ ಮೇಲೆ ಆರೋಪ ಕೇಳಿಬರುತ್ತಲೇ ಆತ್ಮಹತ್ಯೆ ನಿರ್ಧಾರ ಮಾಡೋದು ಸರಿಯಲ್ಲ: ದಯಾನಂದ ಸ್ವಾಮೀಜಿ

    ಹುಬ್ಬಳ್ಳಿ: ಇತ್ತೀಚೆಗೆ ಸ್ವಾಮೀಜಿಗಳ (Swamiji) ಮೇಲೆ ಹಲವಾರು ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಅನೇಕ ಸ್ವಾಮೀಜಿಗಳು ಆತ್ಮಹತ್ಯೆಯ (Suicide) ನಿರ್ಧಾರಕ್ಕೆ ಮುಂದಾಗುತ್ತಿದ್ದಾರೆ. ಇದು ಸರಿಯಲ್ಲ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ (Dayananda Swamiji) ಹೇಳಿದ್ದಾರೆ.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಸನ್ಯಾಸಿಯಾದವರು ಸನ್ಯಾಸತ್ವದ ನೀತಿಗಳನ್ನು ಪಾಲಿಸಿ, ತನ್ನ ಸ್ವಾಮೀತ್ವ ಜೀವನ ನಡೆಸಬೇಕು. ಅದನ್ನು ಬಿಟ್ಟು ಆಸ್ತಿ, ಅಧಿಕಾರಕ್ಕಾಗಿ ಬಡೆದಾಡಿಕೊಂಡು ಸಮಾಜದ ಎದುರಿಗೆ ಬರುವುದು ಅಪಚಾರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಕರ್ನಾಟಕ ವಿವಿಯಲ್ಲಿದ್ದ ಉಗಾಂಡ ದೇಶದ ವಿದ್ಯಾರ್ಥಿ ನಾಪತ್ತೆ

    &

    ಮಠ ಮಾನ್ಯಗಳು ಸಮಾಜದಲ್ಲಿ ಕೆಟ್ಟ ವಿಚಾರಗಳನ್ನು ತಿದ್ದಿ, ಸುಸಂಸ್ಕೃತ ವಾತಾವರಣವನ್ನು ಕಟ್ಟಬೇಕು. ಆ ಕೆಲಸಗಳಲ್ಲಿ ಸ್ವಾಮೀಜಿಗಳು ಕಾರ್ಯೋನ್ಮುಖವಾಗಬೇಕು. ಅದನ್ನು ಬಿಟ್ಟು ಅವರ ಮೇಲೆ ಆರೋಪಗಳು ಬಂದಕೂಡಲೇ ಆತ್ಮಹತ್ಯೆ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನ.11ಕ್ಕೆ ಬೆಂಗಳೂರಿಗೆ ಮೋದಿ – ಅಂದು ಏನೇನು ಕಾರ್ಯಕ್ರಮ ನಡೆಯುತ್ತೆ?

    Live Tv
    [brid partner=56869869 player=32851 video=960834 autoplay=true]

  • ರಾಜ್ಯ ಸರ್ಕಾರ ವೆಜ್ ಬೇರೆ, ನಾನ್ ವೆಜ್ ಬೇರೆ ಶಾಲೆ ತೆರೆಯಲಿ: ದಯಾನಂದ ಸ್ವಾಮೀಜಿ

    ರಾಜ್ಯ ಸರ್ಕಾರ ವೆಜ್ ಬೇರೆ, ನಾನ್ ವೆಜ್ ಬೇರೆ ಶಾಲೆ ತೆರೆಯಲಿ: ದಯಾನಂದ ಸ್ವಾಮೀಜಿ

    ಧಾರವಾಡ: ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆ ವಿಚಾರವಾಗಿ ಅಖಿಲ ಭಾರತ ಸಸ್ಯಹಾರಿ ಒಕ್ಕೂಟದ ಪ್ರಧಾನ ಸಂಚಾಲಕರಾಗಿರುವ ದಯಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮೊಟ್ಟೆ ತಿನ್ನಿಸುವ ಕೆಲಸ ಪ್ರಾರಂಭಿಸಿದೆ, ಸಸ್ಯಹಾರಿ ಧಾರ್ಮಿಯರ ಆಗ್ರಹಕ್ಕೆ ಸ್ಪಂದಿಸುತ್ತಿಲ್ಲ ಎಂದು ಹೇಳಿದರು. ನಾಡಿನ ಪೂಜ್ಯರು, ಗಣ್ಯರೆಲ್ಲ ಬೇಡಿಕೊಂಡರೂ ಸರ್ಕಾರ ಕಿವುಡಾಗಿದೆ. ಸಸ್ಯಹಾರಿ ಧರ್ಮಿಯರ ಮಾತುಗಳಿಗೆ ಕಿಂಚಿತ್ತು ಬೆಲೆ ಕೊಡುತ್ತಿಲ್ಲ ಎಂದ ಕಿಡಿಕಾರಿದರು. ಇದನ್ನೂ ಓದಿ: ಒಬ್ಬ ಕ್ರಿಮಿನಲ್‍ನ ರಕ್ಷಿಸುತ್ತಿದ್ದೀರಾ – ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ

     

    ವಿದ್ಯಾ ದೇಗುಲಗಳನ್ನು ಮಿಲ್ಟ್ರಿ ಹೋಟೆಲ್ ಮಾಡಬೇಡಿ, ಮೊಟ್ಟೆಗೆ ಬದಲಾಗಿ ಅನೇಕ ಸಸ್ಯಹಾರಿ ಪೌಷ್ಟಿಕಾಂಶ ಪದಾರ್ಥಗಳಿವೆ, ಅವುಗಳನ್ನು ಮಕ್ಕಳಿಗೆ ನೀಡಬೇಕು. ಈ ಕೂಡಲೇ ಸರ್ಕಾರ ಮೊಟ್ಟೆ ವಿತರಣೆ ಕೈ ಬಿಡಬೇಕು, ಇಲ್ಲದಿದ್ದಲ್ಲಿ ಸಸ್ಯಾಹಾರಿ ಮಕ್ಕಳಿಗೆ ಪ್ರತ್ಯೇಕ ಶಾಲೆ ಮತ್ತು ನಾನ್ ವೆಜ್ ಶಾಲೆಗಳನ್ನು ತೆರೆಯಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕೆಮಿಕಲ್ಸ್ ಫ್ಯಾಕ್ಟರಿ ಸ್ಫೋಟ – 2 ಸಾವು, 15 ಮಂದಿಗೆ ಗಾಯ

    ಡಿ. 19ರೊಳಗೆ ಮೊಟ್ಟೆ ಆದೇಶ ಹಿಂಪಡೆಯಬೇಕು, ಇಲ್ಲದಿದ್ದಲ್ಲಿ 20ರಂದು ಬೆಳಗಾವಿ ಸುವರ್ಣ ಸೌಧ ಬಳಿ ಬೃಹತ್ ಸಂತ ಸಮಾವೇಶ ಮಾಡುತ್ತೇವೆ. ಸಹಸ್ರಾರು ಸಸ್ಯಹಾರಿಗಳು ಪಾಲ್ಗೊಳ್ಳುತ್ತಾರೆ. ಸುವರ್ಣ ಸೌಧಕ್ಕೆ ಘೇರಾವ್ ಹಾಕುತ್ತೇವೆ. ಜೈಲ್ ಭರೋ ಸಹ ಮಾಡಲು ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

  • ಮೊಟ್ಟೆ ವಿತರಣೆ ಕೈಬಿಡಿ, ಇಲ್ಲದಿದ್ದರೆ ಸಸ್ಯಾಹಾರಿಗಳಿಗೆ ಪ್ರತ್ಯೇಕ ಶಾಲೆ ತೆರೆಯಿರಿ: ದಯಾನಂದ ಸ್ವಾಮೀಜಿ

    ಮೊಟ್ಟೆ ವಿತರಣೆ ಕೈಬಿಡಿ, ಇಲ್ಲದಿದ್ದರೆ ಸಸ್ಯಾಹಾರಿಗಳಿಗೆ ಪ್ರತ್ಯೇಕ ಶಾಲೆ ತೆರೆಯಿರಿ: ದಯಾನಂದ ಸ್ವಾಮೀಜಿ

    ಹುಬ್ಬಳ್ಳಿ: ಶಾಲೆಗಳಲ್ಲಿ ಮತ್ತು ಅಂಗನವಾಡಿಯಲ್ಲಿ ಮೊಟ್ಟೆಗೆ ಬದಲಾಗಿ ಸತ್ವಯುತ-ಸರ್ವಸಮ್ಮತ ಸಸ್ಯಹಾರ ಪದಾರ್ಥ ನೀಡಬೇಕು ಎಂದು ಅಖಿಲ ಭಾರತ ಸಸ್ಯಹಾರಿ ಪ್ರಧಾನ ಸಂಚಾಲಕರಾದ ದಯಾನಂದ ಸ್ವಾಮೀಜಿ ಆಗ್ರಹಿಸಿದರು.

    ನಗರದಲ್ಲಿಂದು ಸುದ್ದಿಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮತ್ತು ಅಂಗನವಾಡಿಗಳಲ್ಲಿನ ಮಕ್ಕಳಿಗೆ – ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಹೆಸರಿನಲ್ಲಿ ಸರ್ಕಾರ ಮೊಟ್ಟೆ ತಿನ್ನಿಸುತ್ತಿರುವುದನ್ನು ಕೈಬಿಟ್ಟು, ಮೊಟ್ಟೆಗಿಂತಲೂ ಅಧಿಕ ಬಹುಪೋಷಕಾಂಶಗಳನ್ನೊಳಗೊಂಡ ಶುದ್ಧ ಸಸ್ಯಹಾರ ಪದಾರ್ಥಗಳನ್ನು ನೀಡಲು ಕೇಳಿಕೊಂಡರು. ಇದನ್ನೂ ಓದಿ: ಇಂತಹ ಕೆಟ್ಟ, ದುರಾಡಳಿತ, ಭ್ರಷ್ಟಾಚಾರದ ಸರ್ಕಾರವನ್ನು ಇದುವರೆಗೂ ನಾನು ನೋಡಿರಲಿಲ್ಲ: ಸಿದ್ದರಾಮಯ್ಯ

    ಮೊಟ್ಟೆ ಮುಕ್ತಗೊಳಿಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೇ ರಾಜ್ಯದ ಲಿಂಗಾಯತ ಧರ್ಮ, ಜೈನ ಧರ್ಮ ಮುಂತಾದ ಧರ್ಮಗಳ, ಬ್ರಾಹ್ಮಣ, ವೈಶ್ಯ ಸೇರಿದಂತೆ ಸಸ್ಯಾಹಾರಿ ಪರ ಜನತೆಯ ಲಕ್ಷಾಂತರ ಮಕ್ಕಳಿಗೆ ಪ್ರತ್ಯೇಕ ಸಸ್ಯಹಾರಿ ಶಾಲೆ ಮತ್ತು ಅಂಗನವಾಡಿಗಳನ್ನು ತೆರೆಯಬೇಕು. ಈ ಹಕ್ಕೋತ್ತಾಯಿಸಿ ಡಿ.20 ರಂದು ಬೆಳಗ್ಗೆ 10ಕ್ಕೆ ಬೆಳಗಾವಿ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಸಂತ ಸಮಾವೇಶ ಮತ್ತು ವಿಧಾನಸೌಧ ಚಲೋ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಶಾಲೆಗಳಲ್ಲಿ ಏಕರೂಪತೆ ಪಡೆದುಕೊಳ್ಳಬೇಕಿದ್ದ ಸರ್ಕಾರ ಈ ರೀತಿ ಮಾಡಬಾರದು. ಮೌಲ್ಯ ಆಧಾರಿತ ಶಿಕ್ಷಣ ಕೊಡಿ, ಮೊಟ್ಟೆ ಅಲ್ಲ. ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ಏಕೆ? ಎಲ್ಲರಿಗೂ ಒಂದೇ ತರವಾಗಿ ಸರ್ಕಾರ ನೋಡಬೇಕು. ಮೊಟ್ಟೆಯನ್ನ ಶಾಲೆಯಲ್ಲಿ ತರಲು ಹುನ್ನಾರ ಏನು? ಕಾಂಗ್ರೆಸ್, ಜೆಡಿಎಸ್ ತೆಗೆದಿರುವ ಈ ಯೋಜನೆಯನ್ನ ಬಿಜೆಪಿ ಏಕೆ ತಂದಿದೆ? ಲಿಂಗಾಯತ, ಬ್ರಾಹ್ಮಣ, ಜೈನ ಧರ್ಮದ ಜನರಿಂದ ಮತ ಪಡೆದ ಬಿಜೆಪಿ ಈ ರೀತಿ ಏಕೆ ಮಾಡಿದೆ. ಸಾಮರಸ್ಯ ಬಗ್ಗೆ ಸಾರಿ ಹೇಳುವ, ಆರ್ ಎಸ್ ಎಸ್ ಇದರ ಬಗ್ಗೆ ಏಕೆ ಮಾತಾಡುತ್ತಿಲ್ಲ ಎಂದು ಪ್ರಶ್ನಿಸಿದರು.

    ಈ ಬಗ್ಗೆ ಆರ್ ಎಸ್ ಎಸ್ ಮಾತನಾಡದಿದ್ದರೆ ನಾವು ಸಸ್ಯಾಹಾರಿಗಳು ಮುಂದೆಂದು ಅವರ ಮಾತು ಕೇಳೋದಿಲ್ಲ. ರಾಜ್ಯದ ನೂರಾರು ಶ್ರೀಗಳು ಸಿಎಂ ಗೆ ಮನವಿ ಮಾಡಿದ್ದಾರೆ. ಆದ್ರೂ ಸರ್ಕಾರ ಸ್ವಾಮಿಗಳಿಂದಲೇ ಮೊಟ್ಟೆ ತಿನ್ನಿಸುವ ಹುನ್ನಾರ ಮಾಡುತ್ತಿದೆ. ಇನ್ನೇನಿದ್ರೂ ನಾವು ಯಾರ ಜೊತೆ ಮಾತನಾಡೋದಿಲ್ಲ. ಎಲ್ಲ ಸ್ವಾಮೀಜಿಗಳು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಲಿಂಗಾಯತರಿಂದಲೇ ಸರ್ಕಾರ ಪತನವಾಗುತ್ತೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಹೆಂಡ್ತಿ ಇಲ್ಲ ಅಂತ ಎರಡನೇ ಮದುವೆ- ಈಕೆಗೆ ಇವನು ನಾಲ್ಕನೆಯವನು!

    ಸುದ್ದಿಗೋಷ್ಠಿಯಲ್ಲಿ ಬಸವಧರ್ಮ ಪೀಠದ ಮಾತೆ ಗಂಗಾದೇವಿ, ಚನ್ನಬಸವನಂದ ಸ್ವಾಮೀಜಿ, ಭವರಲಾಲ್ ಜೈನ್, ರಮೇಶ್ ಕುಲಕರ್ಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

  • ದಯಾನಂದ ಸ್ವಾಮಿ ಜೊತೆ ರಾಸಲೀಲೆ ಪ್ರಕರಣ: ಕೊನೆಗೂ ರಹಸ್ಯ ಬಿಚ್ಚಿಟ್ಟ ನಟಿ ಕಾವ್ಯಾ ಆಚಾರ್ಯ

    ದಯಾನಂದ ಸ್ವಾಮಿ ಜೊತೆ ರಾಸಲೀಲೆ ಪ್ರಕರಣ: ಕೊನೆಗೂ ರಹಸ್ಯ ಬಿಚ್ಚಿಟ್ಟ ನಟಿ ಕಾವ್ಯಾ ಆಚಾರ್ಯ

    ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ಮಠಗಳಲ್ಲೊಂದಾದ ಹುಣಸಮಾರನಹಳ್ಳಿಯ ಜಂಗಮ ಮಠದ ದಯಾನಂದ ಸ್ವಾಮಿ ರಾಸಲೀಲೆಯಲ್ಲಿ ಭಾಗಿಯಾಗಿದ್ದ ನಟಿ ಕಾವ್ಯ ಆಚಾರ್ಯ ಇದೇ ಮೊದಲ ಬಾರಿಗೆ ತನ್ನ ಹೇಳಿಕೆಯ ವಿಡಿಯೋ ಬಿಡುಗಡೆ ಮಾಡಿದ್ದಾರೆ.

    ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದ್ದು, ವಿಡಿಯೋದಲ್ಲಿ ಕಾವ್ಯಾ ಆಚಾರ್ಯ ರಾಸಲೀಲೆ ರಹಸ್ಯ ಬಿಚ್ಚಿಟ್ಟಿದ್ದಾರೆ. ಮೊದಲು ಮೀಡಿಯಾದವರಲ್ಲಿ ಕ್ಷಮೆ ಕೇಳಲು ಇಷ್ಟ ಪಡ್ತೀನಿ. ನನಗೆ ಹುಷಾರಿರಲಿಲ್ಲ. ಅಲ್ಲದೇ ನನಗೆ ಬೆದರಿಕೆ ಕೂಡ ಬಂದಿತ್ತು. ಹೀಗಾಗಿ ಘಟನೆಯ ಬಳಿಕ ಮಾಧ್ಯಮದ ಮುಂದೆ ಬರಲು ಆಗಲಿಲ್ಲ ಅಂತ ಹೇಳಿದ್ದಾರೆ.

    ಇನ್ನು 2-3 ದಿನಗಳಲ್ಲೆ ಕೆಲವರ ಮುಖಾಂತರ ಬಂದು ನಾನು ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಪೊಲೀಸರ ಬಳಿ ದೂರು ದಾಖಲಿಸುತ್ತೇನೆ. ಅದರಲ್ಲಿ 10 ಮಂದಿಯ ಹೆಸರು ಬರೆದಿದ್ದೀನಿ. ದೂರು ಕೊಟ್ಟ ಬಳಿಕ ನಾನು ಮಾಧ್ಯಮದ ಮುಂದೆ ಬಂದು ಯಾರ್ಯಾರು ಏನೇನು ಮಾಡಿದ್ದಾರೆ? ಬಲತ್ಕಾರವಾಗಿ ನನ್ನನ್ನು ಬಳಸಿಕೊಂಡಿದ್ದಾರೆ. ಇವುಗಳನ್ನೆಲ್ಲಾ ಬಹಿರಂಗಪಡಿಸುತ್ತೇನೆ ಅಂತ ಹೇಳಿದ್ರು.

    ಇದನ್ನೂ ಓದಿ: ಪ್ರತಿಭಟನೆ ಮಾಡಿದವ್ರಿಂದ್ಲೇ ಡೀಲ್- ಸ್ವಾಮೀಜಿ ರಾಸಲೀಲೆ ಪ್ರಕರಣದ ಇನ್‍ಸೈಡ್ ಸ್ಟೋರಿ

    ಇಂದು ನನ್ನ ಕುಟುಂಬವನ್ನು ಹೊರಗಡೆ ಓಡಾಡದ ಹಾಗೆ ಮಾಡಿಬಿಟ್ಟಿದ್ದಾರೆ. ಆದ್ರೆ ನಾನು ಸಾಯೋ ಸಮಯದಲ್ಲಿ ನನ್ನ ಅಣ್ಣ ಹಾಗೂ ದೊಡ್ಡಮ್ಮ ನನ್ನನ್ನು ಉಳಿಸಿ, ಧೈರ್ಯ ತುಂಬಿದ್ದಾರೆ. ನೀನು ಸಾಯಬಾರದು. ಈ ರೀತಿ ಮಾಡಿದವರ ವಿರುದ್ಧ ಪೊಲೀಸರಿಗೆ ದೂರು ನೀಡಲೇಬೇಕು ಅಂತ ಧೈರ್ಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ನಾನು ಧೈರ್ಯವಾಗಿದ್ದೀನಿ. ಈ ರೀತಿ ಯಾವ ಹೆಣ್ಣುಮಕ್ಕಳಿಗೂ ಆಗಬಾರದು ಅಂತ ಕಣ್ಣೀರು ಹಾಕಿದ್ದಾರೆ.

    ಜಂಗಮ ಮಠದ ಪೀಠಾಧ್ಯಕ್ಷನಾಗಲು ಮುಂದಾಗಿದ್ದ ದಯಾನಂದ್ ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೊಡಗಿರೋ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಸ್ವಾಮೀಜಿಯ ಜೊತೆ ರಾಸಲೀಲೆಯಲ್ಲಿ ತೊಡಗಿರುವುದು ನಟಿ ಕಾವ್ಯಾ ಆಚಾರ್ಯ ಎಂದು ಹೇಳಲಾಗಿತ್ತು.

    ಈ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ನಟಿ ಕಾವ್ಯಾರನ್ನು ಸಂಪರ್ಕಿಸಿದಾಗ, ನಾನು ಈಗ ತಾನೇ ಈ ಸುದ್ದಿ ಕೇಳಿದೆ. ಆದರೆ ಅದು ನಾನಲ್ಲ. ನಿಮಗೆ ಗೊತ್ತಿದೆ ಯಾರು ಬೇಕಾದರೂ ಹೀಗೆ ಮಾಡ್ತಾರೆ. ಯಾರೋ ಬೇಕಂತಾನೇ ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ಈ ರೀತಿ ಮಾಡುವವರು ಇರುತ್ತಾರೆ. ನನಗೆ ಯಾವ ಸ್ವಾಮೀಜಿಯೂ ಗೊತ್ತಿಲ್ಲ. ನನಗೂ ಇದಕ್ಕೂ ಏನು ಸಂಬಂಧ ಇಲ್ಲ ಎಂದು ಹೇಳಿದ್ದರು.

    ದಯಾನಂದ ಹೇಳಿದ್ದೇನು?: ರಾಸಲೀಲೆ ರಹಸ್ಯ ವಿಡಿಯೋ ಮಾಡಿದ್ದು 2014 ಜನವರಿ 4 ರಂದು. ಇದಾದ ಬಳಿಕ 2014 ಜನವರಿ 6 ರಂದು ನನ್ನ ಬಳಿ ಡೀಲ್‍ಗೆ ಬಂದ್ರು. ನನ್ನ ಬಳಿ 5 ಕೋಟಿ ಕೊಡುವಂತೆ ಡಿಮ್ಯಾಂಡ್ ಮಾಡಿದ್ರು. ಆ ರೀತಿಯ ವಿಡಿಯೋ ಏನು ಇಲ್ಲ ಅಂದಾಗ ಮೊಬೈಲ್‍ನಲ್ಲಿ ವಿಡಿಯೋ ತೋರಿಸಿದ್ರು. ಬಸವರಾಜ್, ಮಹೇಶ್, ಹಿಮಾಚಲಪತಿ, ಸೂರ್ಯ, ಧರ್ಮೇಂದ್ರ ಅಲಿಯಾಸ್ ಶಂಕರ್ ಈ ಐವರೇ ನನ್ನ ಬಳಿ ದುಡ್ಡು ತೆಗೆದುಕೊಂಡಿದ್ದಾರೆ ಅಂತ ಸ್ವಾಮೀಜಿ ಹೇಳಿದ್ದ.

    https://www.youtube.com/watch?v=jzvC69jzdBg

    https://www.youtube.com/watch?v=s_FMyEPUKf4

    https://www.youtube.com/watch?v=9JvRzC7ZT_g

    https://www.youtube.com/watch?v=4hUdbxqu6qw

    https://www.youtube.com/watch?v=Ro8s_y6UJHE

    https://www.youtube.com/watch?v=Wju-SCH4x1s