Tag: Dayanand

  • ಉಚಿತ ಟಿಕೆಟ್‌ ಘೋಷಣೆಯಿಂದ ಕಾಲ್ತುಳಿತ: ದಯಾನಂದ್‌

    ಉಚಿತ ಟಿಕೆಟ್‌ ಘೋಷಣೆಯಿಂದ ಕಾಲ್ತುಳಿತ: ದಯಾನಂದ್‌

    ಬೆಂಗಳೂರು: ಉಚಿತ ಟಿಕೆಟ್‌ (Entry Free) ಎಂದು ಘೋಷಣೆ ಮಾಡಿದ್ದರಿಂದ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium Stampede) ಬಳಿ ಕಾಲ್ತುಳಿತ ಸಂಭವಿಸಿತು ಎಂದು ಅಮಾನತಾಗಿರುವ ಐಪಿಎಸ್‌ ಅಧಿಕಾರಿ ದಯಾನಂದ್‌ (Dayanand) ತಿಳಿಸಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಆರ್‌ಸಿಬಿ (RCB) ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣದ ಮ್ಯಾಜಿಸ್ಟ್ರೇಟ್ ತನಿಖೆ ಮುಕ್ತಾಯದ ಹಂತಕ್ಕೆ ಬಂದಿದೆ. ವಿಚಾರಣೆಯ ಪ್ರಮುಖ ಭಾಗವಾದ ದಯಾನಂದ್‌ ಅವರ ಹೇಳಿಕೆಯನ್ನು ದಾಖಲು ಮಾಡಲಾಗಿದೆ.

    ಮ್ಯಾಜಿಸ್ಟ್ರೇಟ್ ಮುಂದೆ ಗುರುವಾರ ವಿಚಾರಣೆಗೆ ಹಾಜರಾದ ದಯಾನಂದ್‌ ಅಂದು ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. ಘಟನೆ ನಡೆದ ದಿನ 21 ಗೇಟ್‌ಗಳಿಗೂ ನಾನೇ ಖುದ್ದಾಗಿ ಭೇಟಿ ನೀಡಿದ್ದೆ. ಸಂಪೂರ್ಣವಾಗಿ ಬಂದೋಬಸ್ತ್‌ ಮಾಡಿಕೊಳ್ಳಲಾಗಿತ್ತು.ಪ್ರತಿ ಬಾರಿ ಐಪಿಎಲ್ ಮ್ಯಾಚ್ ನಡೆಯುವಾಗ ಇರುವಷ್ಟು ಬಂದೋಬಸ್ತ್‌ ಮಾಡಿಕೊಳ್ಳಲಾಗಿತ್ತು. ಆದರೆ ಅಂದು ಗೇಟ್ ತೆಗೆಯಲು ತಡಮಾಡಿದ್ದರು. ಉಚಿತ ಟಿಕೆಟ್‌ ಎಂದು ಘೋಷಣೆ ಮಾಡಿದ್ದರಿಂದ ಇಷ್ಟೆಲ್ಲ ಅವಾಂತರ ನಡೆದಿದೆ ಎಂದು ಹೇಳಿಕೆ ದಾಖಲಿಸಿದ್ದಾರೆ. ಇದನ್ನೂ ಓದಿ: ಮೈಸೂರಲ್ಲಿ ಮೊದಲ ಆಷಾಢ ಶುಕ್ರವಾರ ಸಂಭ್ರಮ – ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತಸಾಗರ

     

    ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತಕ್ಕೆ ಬಲಿಯಾದ 11 ಜನರ ಸಾವಿನ ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಇಂದು ಇಡೀ ದಿನ ಓಪನ್ ಡೇ ವಿಚಾರಣೆ ನಡೆಯಲಿದ್ದು ತನಿಖೆ ಕೊನೆಯ ಭಾಗವಾಗಿ ಸಾರ್ವಜನಿಕರು ಭಾಗಿಯಾಗಲಿದ್ದಾರೆ.

    ಕಾಲ್ತುಳಿತ ಸಂಬಂಧ ಈವರೆಗೆ 140 ಮಂದಿ ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದ್ದು ಮುಂದಿನ ವಾರ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದೆ.

    ತನಿಖೆಯಲ್ಲಿ ಬೆಳಕಿಗೆ ಬಂದ ಅಂಶಗಳು
    1) ಪೊಲೀಸ್ ಠಾಣೆಯಲ್ಲಿ ಅನುಮತಿಗಿಂತ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್
    2) ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದವರ ವೈಫಲ್ಯ
    3) ಬ್ಯಾರಿಕೇಡ್, ಗೇಟ್‌ಗಳಲ್ಲಿ ಸರಿಯಾದ ಸಂಖ್ಯೆಯಲ್ಲಿ ಸಿಬ್ಬಂದಿ ನಿಯೋಜನೆ ಮಾಡದೇ ಇರುವುದು
    4) ಅಂತಿಮ ಘಟ್ಟದಲ್ಲಿ ಉಚಿತ ಪ್ರವೇಶದ ಬಗ್ಗೆ ಘೋಷಣೆ

  • ಖಾಕಿ ಸಮವಸ್ತ್ರದಲ್ಲಿ ರೀಲ್ಸ್ ಮಾಡುವ ಪೊಲೀಸರಿಗೆ ಬಿಸಿ ಮುಟ್ಟಿಸಿದ ಪೊಲೀಸ್ ಕಮಿಷನರ್‌

    ಖಾಕಿ ಸಮವಸ್ತ್ರದಲ್ಲಿ ರೀಲ್ಸ್ ಮಾಡುವ ಪೊಲೀಸರಿಗೆ ಬಿಸಿ ಮುಟ್ಟಿಸಿದ ಪೊಲೀಸ್ ಕಮಿಷನರ್‌

    ಬೆಂಗಳೂರು: ಖಾಕಿ ಸಮವಸ್ತ್ರದಲ್ಲಿ ರೀಲ್ಸ್ (Reels) ಮಾಡುವ ಪೊಲೀಸರಿಗೆ ಪೊಲೀಸ್ ಕಮಿಷನರ್ (Bengaluru Police Commissioner) ದಯಾನಂದ್ ಬಿಸಿ ಮುಟ್ಟಿಸಿದ್ದಾರೆ.

    ಪೊಲೀಸರು ಸಮವಸ್ತ್ರದಲ್ಲಿ ರೀಲ್ಸ್ ಮಾಡುವ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ ರೀಲ್ಸ್ ಸ್ಟಾರ್‌ಗೆ ಠಕ್ಕರ್ ಕೊಡುವ ಮಟ್ಟಕ್ಕೆ ಪೊಲೀಸರು ಸಮವಸ್ತ್ರಗಳಲ್ಲಿ ರೀಲ್ಸ್ ಮಾಡಿ ಸಮಾಜಿಕ ಜಾಲಾತಾಣದಲ್ಲಿ ಶೇರ್ ಮಾಡಿಕೊಳ್ತಾ ಇದ್ದಾರೆ. ಸಮವಸ್ತ್ರಗಳಲ್ಲಿ ರೀಲ್ಸ್ ಮಾಡಿ ಸ್ಟಾರ್ ಆಗೋ ಪ್ರಯತ್ನದಲ್ಲಿದ್ದ ಪೊಲೀಸರಿಗೆ ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಬಿಸಿ ಮುಟ್ಟಿಸಿದ್ದಾರೆ. ಇದನ್ನೂ ಓದಿ: ಒಂದೇ ರಾತ್ರಿ 6 ಮನೆ, 2 ದೇವಸ್ಥಾನ ಕಳ್ಳತನ ಮಾಡಿದ ಚಡ್ಡಿಗ್ಯಾಂಗ್

    ಇಲಾಖೆಗೆ ಸಂಬಂಧಪಡದ ವಿಷಯಗಳನ್ನ ಪೊಲೀಸ್ ಸಮವಸ್ತ್ರದಲ್ಲಿ ರೀಲ್ಸ್ ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಳ್ಳುವ ಹಾಗಿಲ್ಲ. ಸಮವಸ್ತ್ರಗಳಲ್ಲಿ ರೀಲ್ಸ್ ಮಾಡಿದ್ರೆ ಅಶಿಸ್ತು ತೋರಿಸುತ್ತೆ. ಹಾಗಾಗಿ ಸಮವಸ್ತ್ರಗಳಲ್ಲಿ ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವುದು ಕಂಡು ಬಂದರೆ ಕಠಿಣ ಕ್ರಮಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ದಯಾನಂದ್ ಅಧಿಕೃತ ಆದೇಶ ಹೊರಡಿಸಿದ್ದಾರೆ.

    ಆದೇಶ ಉಲ್ಲಂಘನೆ ಮಾಡಿ ಅಶಿಸ್ತು ತೋರಿಸುವ ಸಿಬ್ಬಂದಿ ಮೇಲೆ ನಿಗಾ ಇಡಲು ಸೂಚನೆ ಕೊಡಲಾಗಿದೆ. ಪೊಲೀಸ್ ಕರ್ತವ್ಯಗಳಿಗೆ ಸಂಬಂಧಿಸದ ವಿಷಯಗಳಲ್ಲಿ ಫೋಟೊ, ರೀಲ್ಸ್ ಅಪ್ಲೋಡ್ ಮಾಡುವಂತಿಲ್ಲ. ಇಲಾಖೆಗೆ ಸಂಬಂಧಪಡದೇ ಇರುವ ವಿಷಯಗಳು ಇಲಾಖೆಯ ಘನತೆಗೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಬೆಳಗಾವಿಗೆ ವಂದೇ ಭಾರತ್ ರೈಲು ವಿಸ್ತರಣೆ ಇಲ್ಲ: ಎಂಬಿ ಪಾಟೀಲ್

    ಪೊಲೀಸ್ ಸಮವಸ್ತ್ರವು ಪೊಲೀಸರ ಬದ್ಧತೆ, ಸಮರ್ಪಣೆ ಮತ್ತು ಹೊಣೆಗಾರಿಕೆಯ ಸಂಕೇತವಾಗಿದೆ. ಡಿಜಿಟಲ್ ಫೋರಮ್‌ನಲ್ಲಿ ಇದರ ಬಳಕೆಯು ಈ ಮೌಲ್ಯಗಳನ್ನು ಪ್ರತಿಬಿಂಬಿಸುವಂತಿರಬೇಕಾಗುತ್ತದೆ. ಹಾಗಾಗಿ ಸಮವಸ್ತ್ರದಲ್ಲಿ ರೀಲ್ಸ್ ಮಾಡುವವರಿಗೆ ಶಿಸ್ತು ಕ್ರಮದ ಎಚ್ಚರಿಕೆಯನ್ನ ಕೊಡಲಾಗಿದೆ.

  • ಮತದಾನಕ್ಕೆ ಮೂರೇ ದಿನ ಬಾಕಿ- ಬೆಂಗ್ಳೂರಿನಲ್ಲಿ ತಯಾರಿ ಬಗ್ಗೆ ಚುನಾವಣಾಧಿಕಾರಿಗಳು ಹೇಳಿದ್ದು ಹೀಗೆ

    ಮತದಾನಕ್ಕೆ ಮೂರೇ ದಿನ ಬಾಕಿ- ಬೆಂಗ್ಳೂರಿನಲ್ಲಿ ತಯಾರಿ ಬಗ್ಗೆ ಚುನಾವಣಾಧಿಕಾರಿಗಳು ಹೇಳಿದ್ದು ಹೀಗೆ

    ಬೆಂಗಳೂರು: ಮತದಾನಕ್ಕೆ (Loksabha Elections 2024) ಕೇವಲ ಮೂರು ದಿನ ಬಾಕಿ ಇರುವಾಗ ಚುನಾವಣಾಧಿಕಾರಿಗಳಿಂದ ಅಂತಿಮ ಹಂತದ ಸಿದ್ಧತೆಯ ಸಭೆ ಇಂದು ನಡೆಸಲಾಗಿದೆ. ಸಭೆಯಲ್ಲಿ ಮತದಾನದ ಪೂರ್ವ ದಿನ ಹೇಗೆಲ್ಲ ತಯಾರಿ ಆಗಬೇಕು ಅಂತಾ ಸಿದ್ಧತೆ ಬಗ್ಗೆ ಚರ್ಚೆ ನಡೆಸಲಾಗಿದೆ.

    ಸಭೆಯ ಬಳಿಕ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ (Tushar Girinath) ಹಾಗೂ ಪೊಲೀಸ್ ಆಯುಕ್ತ ದಯಾನಂದ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್ ಹಾಗೂ ಬೆಂಗಳೂರು ಗ್ರಾಮಾಂತರ ಹೀಗೆ ಒಟ್ಟು 5 ಲೋಕಸಭಾ ಕ್ಷೇತ್ರಗಳಿವೆ. ಜೊತೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬೆಂಗಳೂರಿನ ಕೆಲ ಏರಿಯಾಗಳು ಸೇರ್ಪಡೆಗೊಂಡಿವೆ ಎಂದರು.

    ಬಂದೋಬಸ್ತ್: ಬೆಂಗಳೂರು ನಗರ ಪೊಲೀಸ್ ಘಟಕದಿಂದ 9397 ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 3,919 ಗೃಹ ರಕ್ಷಕ ಸಿಬ್ಬಂದಿ, 54 ಸಶಸ್ತ್ರ ತುಕಡಿ ಹಾಗೂ 11 ಕೇಂದ್ರಿಯ ಪೊಲೀಸ್ ತುಕಡಿ ಇದೆ. ಇವತ್ತಿಂದ ಮತದಾನಕ್ಕೆ 72 ಗಂಟೆ ಇದೆ. ಮತದಾನ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಕ್ಲೋಸ್ ಆಗಲಿದೆ. ಈ ಸಮಯದಲ್ಲಿ ಹಣ ಹಂಚಿಕೆ ಆಗಲಿ, ಆಮಿಷ ಮಾಡೋದು ನಡೆಯಬಾರದು. ಮತದಾರರ ಮೇಲೆ ಪ್ರಭಾವ ಬೀರುವ ಚಟುವಟಿಕೆ ಮೇಲೆ ನಿಗಾ ವಹಿಸಲಾಗಿದೆ. ಇವತ್ತಿನ ಸಭೆಯಲ್ಲಿ ಕೋಡ್ ಆಫ್ ಕಂಡೆಕ್ಟ್ ಸ್ಟ್ರಾಟಜಿ ಬಗ್ಗೆ ಮಾತಾಡಿರುವುದಾಗಿ ತಿಳಿಸಿದ ಅವರು, ಈ ಮೂರು ದಿನದಲ್ಲಿ ಹೆಚ್ಚು ನಿಗಾ ವಹಿಸಬೇಕು ಅಂತ ಎಫ್ ಎಸ್ ಟಿ ಗೆ ತಿಳಿಸಿದ್ದೇವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹೇಳಿದರು.

    ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 8,984 ಮತಗಟ್ಟೆಗಳಿವೆ. ಇದರಲ್ಲಿ 2003 ಕ್ರಿಟಿಕಲ್ ಮತಗಟ್ಟೆ ಗಳು, 253 ವಲ್ನರಬಲ್ ಮತಗಟ್ಟೆಗಳು, 30 ಎಕ್ಸ್ ಪೆಂಡೀಚರ್ ಸೆನ್ಸಿಟಿವ್ ಮತಗಟ್ಟೆಗಳು, 305 ಮೈಕ್ರೋ ಅಬ್ಸವರ್ಸರ್‍ಗಳಿವೆ. ಸೂಕ್ಷ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ 11794 ಸಿಎಪಿಎಫ್ ಮತ್ತು ನಾನ್ ಸಿಎಪಿಎಫ್ ತಂಡಗಳ ನಿಯೋಜನೆ ಮಾಡಲಾಗುತ್ತದೆ. 103 ಚೆಕ್ ಪೋಸ್ಟ್ ಗಳು, 91 ಪ್ಲೇಯಿಂಗ್ ಸ್ಕ್ವಾಡ್ ಗಳು ಇರಲಿವೆ. ಇನ್ನು 5,117 ರೌಡಿಶೀಟರ್ ಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು. 7,533 ಪರವಾನಿಗೆ ಇರುವ ಶಸ್ತ್ರಾಸ್ತ್ರಗಳನ್ನು ಜಮಾ ಮಾಡಲಾಗಿದೆ. ಏ. 24 ಸಂಜೆ ಆರು ಗಂಟೆಯಿಂದ – ಏ. 26 ರಾತ್ರಿ 12 ಗಂಟೆ ತನಕ ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವುದಾಗಿ ಹೇಳಿದರು.

    ಮದ್ಯ ನಿಷೇಧ: ಕರ್ನಾಟಕದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆಯ ಹಿನ್ನೆಲೆ ಬೆಂಗಳೂರಿನ ಒಟ್ಟು ಐದು ಲೋಕಸಭಾ ಕ್ಷೇತ್ರಗಳಿದ್ದು, 8088 ಒಟ್ಟು ಮತಗಟ್ಟೆಗಳಿವೆ. ಇದರಲ್ಲಿ 6,351 ಸಾಮಾನ್ಯ ಮತಗಟ್ಟೆಗಳಿದ್ದು, 1,737 ಸೂಕ್ಷ್ಮ ಮತಗಟ್ಟೆಗಳಿವೆ. ಮತದಾನ ಮುಗಿಯುವ ಅವಧಿಯ ಹಿಂದಿನ 48 ಗಂಟೆಗಳ ಕಾಲ ಮದ್ಯ ನಿಷೇಧ ಮಾಡಲಾಗುತ್ತದೆ. ಮಾದಕ ವಸ್ತುಗಳ ಮಾರಾಟ ಮಾಡುವಂತಿಲ್ಲ. ಮದ್ಯ ಮಾರಾಟ ಮಾಡದಿರಲು ನಿಷೇಧಾಜ್ಞೆ ಜಾರಿಗೆ ತರಲಾಗುತ್ತದೆ ಎಂದರು.

    ಬೆಂಗಳೂರಿನಲ್ಲಿ 1.10 ಕೋಟಿಗೂ ಹೆಚ್ಚು ಮತದಾರರು ಇದ್ದಾರೆ. 31 ಸಾವಿರ ವಿಶೇಷ ಚೇತನರು, 1,685 ಸೇವಾ ಮತದಾರರು, 1,60,232 ಒಟ್ಟು ಯುವ ಮತದಾರರು, 2,158 ಎನ್ ಆರ್ ಐ ಮತದಾರರು ಇದ್ದಾರೆ. ಇನ್ನು 105 ಚೆಕ್ ಪೋಸ್ಟ್, 28 ಮಸ್ಟರಿಂಗ್ ಕೇಂದ್ರಗಳಿವೆ ಎಂದು ತಿಳಿಸಿದರು. ಸಭೆಯಲ್ಲಿ ಮಸ್ಟರಿಂಗ್ ಅಧಿಕಾರಿಗಳು, ಮತಗಟ್ಟೆ ಅಧಿಕಾರಿಗಳು, ಎಂಸಿಸಿ ನೋಡಲ್ ಆಫೀಸರ್ ಗಳು ಮತ್ತು ಬೆಂಗಳೂರು ನಾಲ್ಕು ಲೋಕಸಭಾ ಕ್ಷೇತ್ರಗಳ ಆರ್ ಓಗಳು ಮತ್ತು ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.

  • Special -‘ಬಾಟಲಿ ಆಯುವ ಹುಡುಗ’ನ ಬೆನ್ನಿಗೆ ನಿಂತ ನಟ ನೀನಾಸಂ ಸತೀಶ್, ದಯಾನಂದ್

    Special -‘ಬಾಟಲಿ ಆಯುವ ಹುಡುಗ’ನ ಬೆನ್ನಿಗೆ ನಿಂತ ನಟ ನೀನಾಸಂ ಸತೀಶ್, ದಯಾನಂದ್

    ನ್ನಡದ ಹೆಸರಾಂತ ನಟ ನೀನಾಸಂ ಸತೀಶ್ ಇದೀಗ ಅವರ ಹೊಸ ಸಿನಿಮಾ ‘ಅಶೋಕ ಬ್ಲೇಡ್’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದದ್ದು ಪ್ರತಿಭಾವಂತ ಬರಹಗಾರ ಟಿ.ಕೆ.ದಯಾನಂದ್. ತಮ್ಮ ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ನಡೆದ ಘಟನೆಯೊಂದನ್ನು ದಯಾನಂದ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಬೀದಿಗೆ ಬಿದ್ದಿದ್ದ ಹುಡುಗನಿಗೆ ಹೊಸ ಬದುಕು ರೂಪಿಸುವಲ್ಲಿ ನಟ ಸತೀಶ್ ನೀನಾಸಂ ನೆರವಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಓವರ್ ಟು ದಯಾನಂದ್..

    ಅಶೋಕ ಬ್ಲೇಡ್ ಶೂಟಿಂಗಲ್ಲಿದ್ದೆ.. ಒಬ್ಬ ಹುಚ್ಚನ ಥರ ಇರೋ ಹುಡುಗ ಖಾಲಿಬಾಟಲಿ ತುಂಬಿದ ಚೀಲವೊಂದನ್ನು ಹಿಡಿದು ಸಿನಿಮ ಸೆಟ್’ನಲ್ಲಿ ಓಡಾಡುತ್ತಿದ್ದ, ನಮ್ಮ ಅಸೋಸಿಯೇಟ್ ಡೈರೆಕ್ಟರ್ ಸುಹಾಸ್ ಸ್ಕ್ರಿಪ್ಟ್ ಹಿಡಿದು  ಏನೋ ಪ್ರಿಪೇರ್ ಆಗ್ತಿದ್ದ ವೇಳೆ ಈತ ಸುಹಾಸ್ ಪಕ್ಕ ನಿಂತು ಸ್ಕ್ರಿಪ್ಟನ್ನೇ ನೋಡ್ತಿದ್ದ.  ಕುತೂಹಲವಾಗಿ ಪಕ್ಕ ಕೂರಿಸಿಕೊಂಡು ಏನ ಮರಾಯ ವಯಸ್ಸುಡುಗ ಹಿಂಗಾಗಿದಿ? ಯಾವೂರು, ಅಪ್ಪ-ಅಮ್ಮ ಏನ್ಮಾಡ್ತರೆ? ಅಂದೆ. ಬಿಕ್ಕಲು ಶುರುಮಾಡಿದವನು ಒಂದೇ ಸಮ ಅಳತೊಡಗಿದ.

    ಅವನದೊಂದು ದಾರುಣ ಕಥೆ. ಈತ ಚಿತ್ರದುರ್ಗದ ಹೊಳಲ್ಕೆರೆಯವ.  ಅಪ್ಪ ಮರಳುಲೋಡ್ ಮಾಡುವಾಗ ಟ್ರಾಕ್ಟರ್ ಮಗುಚಿಬಿದ್ದು ತೀರಿದ್ದಾರೆ. ಮಾತು ಬಾರದ ತಾಯಿ ಇವನನ್ನು ಎದೆಯೆತ್ತರ ಸಾಕಿ ಆಕೆಯೂ ತೀರಿದ್ದಾರೆ. ನಂತರ ಈತ ನೋಡಿದ್ದು ಕ್ರೂರ ಸಮಾಜದ ಹತ್ತೆಂಟು ಮುಖಗಳು, ಸಂಬಂಧಗಳು ಯಾತನೆ ಕೊಡಲು ಶುರುವಾದಂತೆ ವೈರಾಗ್ಯ ಹುಟ್ಟಿದವನಂತೆ ಮನೆ ತೊರೆದು ಗರಗರ ಸುತ್ತುತ್ತಿದ್ದಾನೆ. ಹೊಟ್ಟೆಪಾಡಿಗೆ ಬಾಟಲಿ ಆಯುತ್ತಾನೆ, ಕೆಜಿಗೆ 20 ಸಿಗುತ್ತದೆ. ದಿನಕ್ಕೆ 150-200. ಊಟ ಮಾಡಿ ಟ್ರೈನು, ಗುಡಿ, ಫುಟ್’ಪಾತ್ ಎಲ್ಲೆಂದರಲ್ಲಿ ರಾತ್ರಿ ಕಳೆಯುತ್ತಾನೆ. ಇದನ್ನೂ ಓದಿ: ರಾಜಣ್ಣ ಮನೆಯ ಮಿಸ್ಟರ್ ಗರಗಸ ಎಂದು ಕಿಚ್ಚನ ಬಳಿ ದೂರಿಟ್ಟ ಮನೆಮಂದಿ

    ಆತ ಹೇಳಿಕೊಂಡ ವ್ಯಥೆಯೊಂದು ಇಲ್ಲಿ ಬರೆಯಲಾಗದಷ್ಟು ಬರ್ಬರವಾಗಿದೆ.‌ ಸಣ್ಣವಯಸ್ಸಿಗೇ ತಿನ್ನಬಾರದ ಏಟುಗಳನ್ನೆಲ್ಲ ತಿಂದು ಬಿಟ್ಟಿದೆ ಈ ಜೀವ. ಅಳುತ್ತಿದ್ದ ಅವನನ್ನು ಎಬ್ಬಿಸಿಕೊಂಡು ಬಟ್ಟೆ ಅಂಗಡಿಗೆ ಒಯ್ದು, ಅವನಿಗಿಷ್ಟವಾದ ಬಟ್ಟೆ ಕೊಡಿಸಿ, ಕಟಿಂಗ್ ಶೇವಿಂಗ್ ಮಾಡಿಸಿದರೆ ಮುದ್ದಾದ ಈ ಹೊಸ ದೇವರಾಜ ತಯಾರಾದ. ನಟ ಸತೀಶ್ ನೀನಾಸಂರಿಗೆ ಪರಿಚಯ ಮಾಡಿಸಿದೆ. ದಿನಬೆಳಗಾದರೆ ಎಲ್ಲರಿಂದ ದೂರ ಓಡಿಸಲ್ಪಡುತ್ತಿದ್ದ ಹುಡುಗ ಕಾನ್ಫಿಡೆಂಟಾಗಿ ಸತೀಶ್ ನೀನಾಸಂರ ಕೈಕುಲುಕಿ ಶೇಕ್ ಹ್ಯಾಂಡ್ ಕೊಟ್ಟ. ಸತೀಶ್’ರಿಗೆ ಎಲ್ಲ ವಿವರಿಸಿದೆ. ಈಗ ದೇವರಾಜನ ಬದುಕಿಗೊಂದು ವ್ಯವಸ್ಥೆಯಾಗುತ್ತಿದೆ. ಸತೀಶ್ ನೀನಾಸಂ, ದೇವರಾಜನ ಬೆನ್ನಿಗೆ ನಿಂತಿದ್ದಾರೆ. ಹೀಗೆ ಶೂಟಿಂಗ್ ನಡುವೆ ನಮ್ಮ ಒಂದು ದಿನ ಸಾರ್ಥಕವಾಯ್ತು.

    ಹೀಗೆ ದಯಾನಂದ ದಾರುಣ ಬದುಕಿನ ವ್ಯಥೆಯೊಂದನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಅಲ್ಲದೇ, ಈ ಹುಡುಗನ ಊರಿನವರು ಯಾರಾದರೂ ಸಂಪರ್ಕಕ್ಕೆ ಬನ್ನಿ ಎಂದು ಅವರು ಕೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಿಸ್‍ಕಾಲ್ ಪ್ರೇಯಸಿಯಿಂದ ಪ್ರಿಯಕರನ ಬರ್ಬರ ಹತ್ಯೆ

    ಮಿಸ್‍ಕಾಲ್ ಪ್ರೇಯಸಿಯಿಂದ ಪ್ರಿಯಕರನ ಬರ್ಬರ ಹತ್ಯೆ

    ಕಲಬುರಗಿ: ಮಿಸ್‍ಕಾಲ್ ಪ್ರೇಯಸಿಯಿಂದ ಪ್ರಿಯಕರನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರಗಿಯ ವಾಜಪೇಯಿ ಬಡಾವಣೆಯಲ್ಲಿ ನಡೆದಿದೆ.

    ದಯಾನಂದ್ ಕೊಲೆಯಾದವನಾಗಿದ್ದು, ಈತ ಮೇ 24ರಂದು ಆಳಂದ ತಾಲೂಕಿನ ಸುಕ್ರವಾಡಿ ಗ್ರಾಮದ ನಿವಾಸಿ. ಈತನನ್ನು ಪ್ರೇಯಸಿ ಅಂಬಿಕಾ ಆಂಡ್ ಗ್ಯಾಂಗ್ ನಿಂದ ಮೂರು ಲಕ್ಷಕ್ಕೆ ಸುಪಾರಿ ಪಡೆದು ಕೊಲೆ ಮಾಡಲಾಗಿದೆ.

    ದಯಾನಂದ್ ನನ್ನ ಬರ್ಬರವಾಗಿ ಕೊಲೆ ಮಾಡುವ ವೀಡಿಯೋವನ್ನು ಸ್ವತಃ ಅಂಬಿಕಾಳೇ ಮಾಡಿದ್ದಾಳೆ. ಅಲ್ಲದೆ ಕೊಲೆಯ ವೀಡಿಯೋವನ್ನು ತನ್ನ ಇನ್ನೊಬ್ಬ ಪ್ರಿಯಕರ ಮಿಲಿಟರಿಯಲ್ಲಿರುವ ಸುನೀಲ್ ಗೆ ಕಳುಹಿಸಿದ್ದಾಳೆ. ಇದನ್ನೂ ಓದಿ: ಕೂಡಲೇ ವಿಚಾರಣೆಗೆ ಹಾಜರಾಗಿ – ಬಂಗಾಳ ಪೊಲೀಸರಿಂದ ನೂಪುರ್‌ಗೆ ಕೊನೆಯ ಎಚ್ಚರಿಕೆ

    ಕೊಲೆಯ ಲೈವ್ ವೀಡಿಯೋ ಮಾಡಿ ತಾನು ಬಚಾವ್ ಆಗೋದಕ್ಕೆ ಪ್ಲ್ಯಾನ್ ಮಾಡಿದ್ದಳು. ಆದರೆ ಇದೀಗ ತಾನೇ ತೋಡಿದ್ದ ಅಂಬಿಕಾ ಖೆಡ್ಡಾಗೆ ತಾನೇ ಬಿದ್ದಿದ್ದಾಳೆ. ಘಟನೆ ಸಂಬಂಧ ವಿಶ್ವವಿದ್ಯಾಲಯ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಒಂದೇ ದಿನ ಜೀವನದಲ್ಲಿ ಗಳಿಸಿದ್ದೆಲ್ಲ ಕಳೆದುಕೊಂಡೆ- ಮಿಮಿಕ್ರಿ ದಯಾನಂದ್ ಮನದಾಳದ ಮಾತು

    ಒಂದೇ ದಿನ ಜೀವನದಲ್ಲಿ ಗಳಿಸಿದ್ದೆಲ್ಲ ಕಳೆದುಕೊಂಡೆ- ಮಿಮಿಕ್ರಿ ದಯಾನಂದ್ ಮನದಾಳದ ಮಾತು

    ನ್ನಡ ಜನತೆ ಕಂಡ ಹೆಸರಾಂತ ಮಿಮಿಕ್ರಿ ಆರ್ಟಿಸ್ಟ್ ಹಾಗೂ ನಟ ಮಿಮಿಕ್ರಿ ದಯಾನಂದ್ ನಮ್ಮೊಂದಿದೆ ಅವರ ಜೀವನದ ಒಂದಿಷ್ಟು ಘಟನೆಗಳನ್ನು ಹಂಚಿಕೊಂಡಿದ್ದಾರೆ.

    ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ, ಕಲಾವಿದನಾಗಿ ನೀವು ಚಿರಪರಿಚಿತರು ಒಮ್ಮೆ ನಿಮ್ಮ ಬಾಲ್ಯದ ದಿನಗಳನ್ನು ನೆನೆಯುವಿರಾ?
    ನಾನು ಹುಟ್ಟಿ ಬೆಳೆದಿದ್ದು ಮೈಸೂರಿನಲ್ಲಿ. ನನ್ನ ತಂದೆ ತಾಯಿ ಇಬ್ಬರು ವೃತ್ತಿಯಲ್ಲಿ ವೈದ್ಯರು. ಚಿಕ್ಕಂದಿನಿಂದಲೂ ಓದಿಗಿಂತಲೂ ನನಗೆ ಕಲೆಯಲ್ಲಿ ಬಹಳ ಆಸಕ್ತಿ ಇತ್ತು. ಪ್ರಾಥಮಿಕ ಹಂತದಲ್ಲಿ ಓದುತ್ತಿದ್ದಾಗಲೇ ನಾನು ಬೇರೆಯವರ ಅನುಕರಣೆ (ಮಿಮಿಕ್ರಿ) ಮಾಡಿ ಮಾತನಾಡಿ ನಗಿಸುತ್ತಿದೆ. ಮನೆಯ ಹತ್ತಿರ ಯಾವುದೇ ಕಾರ್ಯಕ್ರಮವಿದ್ರೂ ಸ್ಟೇಜ್ ಖಾಲಿ ಇದ್ರೆ ಓಡಿ ಹೋಗಿ ಮೈಕ್ ಹಿಡಿದು ಮಿಮಿಕ್ರಿ ಮಾಡುತ್ತಿದ್ದೆ. ಆಗ ನನ್ನನ್ನು ನೋಡಿ ಎಲ್ಲರೂ ಖುಷಿ ಪಡುತ್ತಿದ್ರು. ವಿಶೇಷವಾಗಿ ಗಣೇಶ ಹಬ್ಬದ ಸಂದರ್ಭದಲ್ಲಿ ಮನೋರಂಜನಾ ಕಾರ್ಯಕ್ರಮಗಳು ಇರುತ್ತಿತ್ತು ಕಾರ್ಯಕ್ರಮ ಆರಂಭಕ್ಕೂ ಮುನ್ನ ನಾನು ಸ್ಟೇಜ್ ಮೇಲೆ ಹತ್ತಿ ಮೈಸೂರಿನಲ್ಲಿ ಟಾಂಗ ಓಡಿಸುವವರು, ಹಾವಾಡಿಗರ ಮಿಮಿಕ್ರಿ ಮಾಡುತ್ತಿದ್ದೆ, ಜೋಕ್ ಮಾಡುತ್ತಿದ್ದೆ. ಇದನ್ನು ನೋಡಿ ನನಗೆ ಹಣ್ಣು, ಚಾಕೋಲೇಟ್ ನೀಡುತ್ತಿದ್ರು, ಆಗಿನ್ನು ನನಗೆ ಆರರಿಂದ ಏಳು ವರ್ಷ ವಯಸ್ಸು. ಹೀಗೆ ಅವಕಾಶ ಸಿಕ್ಕಾಗೆಲ್ಲ ಮಿಮಿಕ್ರಿ ಮಾಡುತ್ತಾ ಇದ್ದೆ. ಈ ರೀತಿ ನನ್ನ ಬಾಲ್ಯದ ದಿನಗಳಲ್ಲೇ ಓದಿನ ಜೊತೆ ಮಿಮಿಕ್ರಿ ಕೂಡ ಹವ್ಯಾಸವಾಗಿ ಬೆಳೆಯುತ್ತಾ ಹೋಯಿತು. ಇದನ್ನೂ ಓದಿ: ನನ್ನ ಹೆಸರಲ್ಲೇ ಹೀರೋ, ವಿಲನ್ ಇಬ್ಬರೂ ಇದ್ದಾರೆ: ಖ್ಯಾತ ಖಳನಟ ಮುನಿರಾಜು

    ಕೈಯಲ್ಲಿ ಸರ್ಕಾರಿ ಉದ್ಯೋಗವಿದ್ರು ನಾಟಕ, ಮಿಮಿಕ್ರಿ ಕಡೆಗಿನ ಆಸಕ್ತಿ ಮಾಸಲಿಲ್ಲ.
    ನಾನು ಬೆಳೆಯುತ್ತಾ ಮಿಮಿಕ್ರಿಯಲ್ಲಿ ಬಹಳ ಆಸಕ್ತಿ ಮೂಡಿತು. ನಟರನ್ನು, ರಾಜಕಾರಣಿಗಳನ್ನು, ಸಾಮಾನ್ಯ ಜನರನ್ನು ಹೀಗೆ ಎಲ್ಲರನ್ನು ನಾನು ಅನುಕರಣೆ ಮಾಡಿ ಮಿಮಿಕ್ರಿ ಮಾಡುತ್ತಿದ್ದೆ, ಅವಕಾಶ ಸಿಕ್ಕಾಗ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದೆ. ಪಿಯುಸಿ ಮುಗಿದ ನಂತರ ಕಾವೇರಿ ಎಂಪೋರಿಯಂನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಆರಂಭದಲ್ಲಿ ನನ್ನನ್ನು ಉತ್ತರ ಕರ್ನಾಟಕದ ಕೊಪ್ಪಳಕ್ಕೆ ಕಳಿಸಹಿಸಿದ್ರು. ಕೆಲಸ ಮಾಡುತ್ತಲೇ ಪದವಿ ಮುಗಿಸಿದೆ. ಇದರ ಜೊತೆ ಸಂಜೆ ಸಮಯದಲ್ಲಿ ಕಂಪನಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದೆ. ಮಿಮಿಕ್ರಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದೆ. 1980ರಲ್ಲಿ ನನಗೆ ಕೊಪ್ಪಳದಿಂದ ಬೆಂಗಳೂರಿಗೆ ವರ್ಗಾವಣೆಯಾಯಿತು. ಇಲ್ಲಿ ಬಂದ ಮೇಲೆ ಬೀದಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದೆ. ಆದ್ರೆ ಕೆಲಸದ ಜೊತೆ ನಾಟಕಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆಗ ನಾಟಕ ಮಾಡೋದನ್ನು ಬಿಟ್ಟು ಮಿಮಿಕ್ರಿಗೆ ಹೆಚ್ಚು ಪ್ರಾಶಸ್ತ್ಯ ನೀಡಲು ಆರಂಭಿಸಿದೆ. ವೃತ್ತಿಯನ್ನು ನಿರ್ವಹಿಸುತ್ತಾ ಮಿಮಿಕ್ರಿ ಆರ್ಟಿಸ್ಟ್ ಆಗಿಯೂ ಬೆಳೆದೆ.

    ದಿಗ್ಗಜ ನಟರೊಂದಿಗೆ ಬೆಳ್ಳಿತೆರೆ ಮೇಲೆ ಕೂಡ ಮಿಂಚಿದ್ದೀರಿ ನೀವು?
    ಮಿಮಿಕ್ರಿ ಕಾರ್ಯಕ್ರಮಗಳನ್ನು ಮಾಡುತ್ತಾ ಮಾಡುತ್ತಾ ಒಂದಿಷ್ಟು ಹೆಸರು ಬಂತು ಸಿನಿಮಾದಲ್ಲಿಯೂ ಅವಕಾಶ ಸಿಗಲು ಆರಂಭವಾಯಿತು. ಡಾ.ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್, ಶಂಕರ್ ನಾಗ್ ಹೀಗೆ ಚಿತ್ರರಂಗದ ಹಲವು ದಿಗ್ಗಜರ ಜೊತೆ ನಟಿಸುತ್ತಾ ಸುಮಾರು ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಹಿರಿಯ ಕಲಾವಿದರ ಜೊತೆ ಬಣ್ಣಹಚ್ಚಿದ್ದೇನೆ.

    ಸಿನಿಮಾದಲ್ಲಿ ಕೈತುಂಬ ಅವಕಾಶಗಳಿದ್ರೂ ಸಿನಿಮಾ ಬಿಟ್ಟು ಮಿಮಿಕ್ರಿ ಕಾರ್ಯಕ್ರಮಗಳಿಗೆ ಮರಳಿದ್ದು ಯಾಕೆ?
    ಸಿನಿಮಾದಲ್ಲಿ ಸ್ಟಾರ್ ನಟರ ಜೊತೆ ನಟಿಸಲು ಅವಕಾಶ ಸಿಕ್ಕರೂ ಕೂಡ ಒಂದಷ್ಟು ಸಿನಿಮಾದಲ್ಲಿ ನಟಿಸಿದ ನಂತರ ಮಿಮಿಕ್ರಿಯಲ್ಲೇ ನನ್ನನ್ನು ಗುರುತಿಸಿಕೊಳ್ಳುವ ಮನಸ್ಸಾಯಿತು. ಆಗ ಸಿನಿಮಾದಲ್ಲಿ ನಟಿಸೋದು ಬಿಟ್ಟು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಮಿಮಿಕ್ರಿ ಶೋಗಳನ್ನು ಮಾಡಲು ಆರಂಭಿಸಿದೆ. ಹೆಸರಾಂತ ಆರ್ಕೆಸ್ಟ್ರಾಗಳಲ್ಲಿ ನನ್ನ ಮಿಮಿಕ್ರಿ ಶೋ ಕಡ್ಡಾಯವಾಗಿ ಇರುತ್ತಿತ್ತು. ಇದರಲ್ಲಿ ಖ್ಯಾತಿ ಬಂದ ನಂತರ ಒಂದೇ ದಿನದಲ್ಲಿ ಆರರಿಂದ ಏಳು ಮಿಮಿಕ್ರಿ ಶೋಗಳನ್ನು ಇರುತ್ತಿದ್ವು, ಆಗ ನಾನು ನನ್ನ ಸರ್ಕಾರಿ ವೃತ್ತಿಗೂ ರಾಜೀನಾಮೆ ನೀಡಿ ಪೂರ್ಣ ಪ್ರಮಾಣದಲ್ಲಿ ಮಿಮಿಕ್ರಿಯಲ್ಲಿ ಬ್ಯುಸಿಯಾದೆ. ಇದನ್ನೂ ಓದಿ: ಶಿಕ್ಷಕನಾಗಬೇಕೆಂದು ಹೆದರಿ ನಟನಾದೆ: ಕಿರುತೆರೆ ನಟ ಜಹಂಗೀರ್

    ಇಲ್ಲಿವರೆಗೆ ಎಷ್ಟು ದೇಶಗಳಲ್ಲಿ ಮಿಮಿಕ್ರಿ ಶೋಗಳನ್ನು ಮಾಡಿದ್ದೀರಾ?
    ಮಿಮಿಕ್ರಿ ಆರ್ಟಿಸ್ಟ್ ಆಗಿ ಶೋ ಮಾಡುತ್ತಾ ವಿದೇಶಗಳಲ್ಲೂ ಪ್ರದರ್ಶನ ನೀಡಿದ್ದೇನೆ. ಎಸ್‍ಪಿಬಿ, ಜೇಸುದಾಸ್, ಉಷಾ ಉತ್ತುಪ್ ಸೇರಿದಂತೆ ದೊಡ್ಡ ಸೆಲೆಬ್ರಿಟಿಗಳ ಜೊತೆ ಕಾರ್ಯಕ್ರಮಗಳಲ್ಲಿ ಮಿಮಿಕ್ರಿ ಶೋ ಮಾಡುವ ಅವಕಾಶ ಸಿಕ್ತು. ಇವರ ಜೊತೆ ಪರ್ಫಾರ್ಮ್ ಮಾಡುತ್ತಾ ಅಮೆರಿಕಾದ ಸೌಂಡ್ ಆಫ್ ಮ್ಯೂಸಿಕ್‍ನಿಂದ ಆಫರ್ ಬಂತು. ಮೊದಲ ಬಾರಿ ಕನ್ನಡ ಮಿಮಿಕ್ರಿ ಆರ್ಟಿಸ್ಟ್ ಆಗಿ ಅಮೆರಿಕಾದಲ್ಲಿ ಪರ್ಫಾರ್ಮ್ ಮಾಡಿದ ಹೆಗ್ಗಳಿಕೆ, ಹೆಮ್ಮೆ ನನ್ನದು. ಇದು ನನ್ನ ಜೀವನದ ದೊಡ್ಡ ಮೈಲಿಗಲ್ಲು. ಪಾಕಿಸ್ತಾನ, ರಷ್ಯಾ ಹೊರತು ಪಡಿಸಿ ಎಲ್ಲಾ ದೇಶಗಳಲ್ಲೂ ಶೋ ಮಾಡಿದ್ದೇನೆ. ಇಲ್ಲಿವರೆಗೆ ಒಟ್ಟು 12 ಸಾವಿರಕ್ಕೂ ಅಧಿಕ ಮಿಮಿಕ್ರಿ ಶೋಗಳನ್ನು ಮಾಡಿರೋ ಕೀರ್ತಿ ನನ್ನದು ಅನ್ನೋದಕ್ಕೆ ನಾನು ಸಂತಸ ಪಡುತ್ತೇನೆ.

    ಸುಮಾರು 43 ವರ್ಷದ ಪಯಣವದಲ್ಲಿ ನೀವು ಕಂಡುಕೊಂಡ ಸತ್ಯ.
    ಪ್ರತಿಭೆ ನಂಬಿ ಬಂದವರಿಗೆ ಇಲ್ಲಿ ಅವಕಾಶ ಇದೆ. ಆದ್ರೆ ನಾವೇ ಹುಡುಕಿ ತೆಗೆದುಕೊಳ್ಳಬೇಕು. ನಮ್ಮ ಗುರಿ ತಲುಪಲು ಹಗಲು ರಾತ್ರಿ ಕಷ್ಟಪಡಬೇಕು. ಸ್ವಂತಿಕೆ ಹಾಗೂ ಹೊಸತನ ಅನ್ನೋದು ತುಂಬಾ ಮುಖ್ಯ. ಏನೇ ಮಾಡಿದ್ರು ಎಲ್ಲೂ ಕದಿಯದೇ ಸ್ವಂತಿಕೆಯಿಂದ, ಹೊಸತನದಿಂದ ಮಾಡಬೇಕು ಆಗ ಅಂದುಕೊಂಡಿದ್ದನ್ನು ಸಾಧಿಸಬಹುದು ಜೊತೆಗೆ ಜನರೂ ಬೆಳೆಸುತ್ತಾರೆ.

    ಜೀವನದಲ್ಲಿ ತುಂಬಾ ಕಾಡುವ ಘಟನೆ.
    ಹೇಳಲು ಎಷ್ಟೋ ಘಟನೆಗಳಿವೆ ಆದರೂ ಒಂದೇ ದಿನದಲ್ಲಿ ಆದ ಎರಡು ಘಟನೆಗಳ ಬಗ್ಗೆ ಹೇಳಲು ಇಚ್ಚಿಸುತ್ತೇನೆ. ಕನ್ನಡ ರಾಜ್ಯೋತ್ಸವ ದಿನದಂದು ನಾನು ಕಟ್ಟಿದ ಮನೆಯನ್ನು ಸರ್ಕಾರದ ಆದೇಶದ ಮೇರೆಗೆ ಒಡೆದು ಹಾಕಲಾಯಿತು, ಅದೇ ದಿನ ಸಂಜೆ ಮಿಮಿಕ್ರಿ ಶೋ ನಲ್ಲಿ ಸಾವಿರಾರು ಜನರನ್ನು ನಗಿಸುವ ಜವಾಬ್ದಾರಿ ನನಗಿತ್ತು. ನನ್ನ ಜೀವನದಲ್ಲಿ ನಾನು ಸಂಪಾದಿಸಿದ್ದೆಲ್ಲ ಒಂದೇ ದಿನ ಹೊರಟು ಹೋಯಿತು. ಇನ್ನೊಂದು ಕಡೆ ಸಾವಿರಾರು ಜನರನ್ನು ನನ್ನ ನೋವನ್ನು ಮರೆತು ನಗಿಸುವ ಜವಾಬ್ದಾರಿ ನನಗಿತ್ತು. ಈ ಘಟನೆ ನನ್ನನ್ನು ಬಹುವಾಗಿ ಕಾಡುತ್ತೆ.

    ವಿದೇಶಗಳಲ್ಲಿ ಒಬ್ಬ ಕನ್ನಡ ಮಿಮಿಕ್ರಿ ಕಲಾವಿದನನ್ನು ಬರಮಾಡಿಕೊಂಡ ಕ್ಷಣಗಳ ಬಗ್ಗೆ ತಿಳಿಸಿ.
    ಆರಂಭದ ದಿನಗಳಲ್ಲಿ ನಾನು ವಿದೇಶಕ್ಕೆ ಕಾರ್ಯಕ್ರಮಗಳಿಗೆ ಹೋದಾಗ ಮಿಮಿಕ್ರಿ ಆರ್ಟಿಸ್ಟ್ ಎಂದಾಗ ಅದೇನು ಎನ್ನುವುದೇ ಯಾರಿಗೂ ಗೊತ್ತಿರಲಿಲ್ಲ. ಆದ್ರೆ ಹೋಗ್ತಾ ಹೋಗ್ತಾ ಎಲ್ಲರೂ ನನ್ನನ್ನು ತುಂಬಾ ಪ್ರೀತಿಯಿಂದ ಸ್ವಾಗತಿಸಿದ್ರು, ಪ್ರೋತ್ಸಾಹಿಸಿದ್ರು. ಈಗ ವಿದೇಶಗಳಲ್ಲಿ ತುಂಬಾ ಆತ್ಮೀಯವಾದ ಸಂಬಂಧಗಳು ನನಗಿವೆ, ಫ್ಯಾಮಿಲಿ ಫ್ರೆಂಡ್ಸ್ ಹಾಗೆ ಅವರೆಲ್ಲ ನನ್ನ ಜೊತೆ ಇದ್ದಾರೆ. ಇದು ತುಂಬಾ ಖುಷಿ ಕೊಡುತ್ತೆ.

    ಮೊದಲ ಬಾರಿ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದೀರಾ ಇದರ ಬಗ್ಗೆ ಹೇಳಿ?
    ಹಲವು ಸಿನಿಮಾಗಳಿಗೆ ಸಹಾಯಕನಾಗಿ ದುಡಿದ್ದಿದ್ದೆ ಆದ್ರೆ ಮೊದಲ ಬಾರಿ ನಾನೇ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಮಾಡಿದ್ದು ಇದೇ ಮೊದಲು. ನಾನೇ ಕಥೆ ಬರೆದು ನಿರ್ದೇಶನ ಮಾಡೋದ್ರ ಜೊತೆ ಮುಖ್ಯ ಪಾತ್ರದಲ್ಲಿ ನಟಿಸಿದ್ದೇನೆ. ಸೋಲೋ ಪರ್ಫಾಮೆನ್ಸ್ ಇರುವ ಚಿತ್ರ ಇದು. ಈಗಾಗಲೇ ಶೂಟಿಂಗ್ ಪೂರ್ಣವಾಗಿ ಡಬ್ಬಿಂಗ್ ಕೆಲಸ ಕೂಡ ಮುಗಿದಿದೆ. ಚಿತ್ರಕ್ಕೆ ಟೈಟಲ್ ಇನ್ನೂ ಫೈನಲ್ ಆಗಿಲ್ಲ ಸದ್ಯದಲ್ಲೇ ಸಿನಿಮಾ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ. ಇದಲ್ಲದೆ ಇನ್ನೂ ಮೂರು ಸಿನಿಮಾ ನಿರ್ದೇಶನಕ್ಕೆ ಪ್ಲಾನ್ ಮಾಡಿದ್ದೇನೆ. ಕಥೆ, ಚಿತ್ರಕಥೆ ಎಲ್ಲವೂ ನನ್ನದೇ ಇರುತ್ತೆ. ಸದ್ಯದಲ್ಲೇ ಎಲ್ಲದರ ಬಗ್ಗೆ ಮಾಹಿತಿಯನ್ನು ನೀಡುತ್ತೇನೆ.

    ನಿಮ್ಮ ಜೀವನದಲ್ಲಿ ತುಂಬಾ ಖುಷಿ ಕೊಟ್ಟ ಘಟನೆ?
    ನಾನು ಯಾವಾಗಲೂ ನೆನದು ಖುಷಿ ಪಡುವ ಘಟನೆ ಡಾ. ರಾಜ್ ಕುಮಾರ್ ಅವರ ದನಿಯನ್ನ ಅವರ ಮುಂದೆಯೇ ಅನುಕರಣೆ ಮಾಡಿದ ಘಳಿಗೆ. ಹಾಸನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜ್ ಕುಮಾರ್ ಅವರ ಭಾಗವಹಿಸಿದ್ರು, ಆ ಕಾರ್ಯಕ್ರಮದಲ್ಲಿ ನಾನೂ ಭಾಗವಹಿಸಿದ್ದೆ. ಆಗ ಅವರ ಮುಂದೆಯೇ ಅವರ ಹಾಗೆ ಮಿಮಿಕ್ರಿ ಮಾಡಿ ಮಾತನಾಡಿದಾಗ ಅಣ್ಣಾವ್ರೆ ಒಮ್ಮೆಲೇ ಆಶ್ಚರ್ಯ ಪಟ್ರು ಜೊತೆಗೆ ನನ್ನನ್ನು ಪ್ರಶಂಸಿಸಿ ಪ್ರೋತ್ಸಾಹಿಸಿದ್ರು. ಸುಮಾರು ಎಪ್ಪತ್ತು ಸಾವಿರ ಜನಗಳ ಮುಂದೆ ನಡೆದ ಈ ಘಟನೆ ಇಂದಿಗೂ ಅಮರ. ಇದನ್ನೂ ಓದಿ: ಅಣ್ಣಾವ್ರ ಕೈ ಸ್ಪರ್ಶಿಸಿದ್ದೇ ನನ್ನ ಭಾಗ್ಯ: ನಟ ಗಣೇಶ್ ರಾವ್ ಕೇಸರ್ಕರ್

    ನಿಮ್ಮ ಕರಿಯರ್ ನಲ್ಲಿ ಯಾವಾಗಲೂ ನೆನಯುವ ವ್ಯಕ್ತಿ ಯಾರು?
    ನಾನು ಉಪೇಂದ್ರ ಅವರ ಶ್ ಸಿನಿಮಾದಲ್ಲಿ ಮೊದಲ ಬಾರಿ ನಟಿಸಿದ್ದೆ. ಅವರ ಸಿನಿಮಾಗಳಲ್ಲಿ ಕಲಾವಿದರಿಗೆ ನಟನೆ ಮಾಡಲು ಸಂಪೂರ್ಣವಾದ ಮುಕ್ತ ಅವಕಾಶ ಇರುತ್ತೆ. ಇದು ಅವರಲ್ಲಿ ನನಗೆ ಬಹಳ ಖುಷಿ ಕೊಡುವ ಸಂಗತಿ. ಅದಾದ ಮೇಲೆ ಅವರ ಹಲವು ಸಿನಿಮಾಗಳಲ್ಲಿ ನಾನು ನಟಿಸಿದ್ದೇನೆ. ಯಾವಾಗಲೂ ಪಾಸಿಟಿವ್ ಆಗಿ ಯೋಚಿಸುವ ವ್ಯಕ್ತಿ ಉಪೇಂದ್ರ. ಅವರಿದ್ದಲ್ಲಿ ಅಸಾಧ್ಯ ಅನ್ನೋದಿಲ್ಲ ಯಾಕೆ ಆಗಲ್ಲ ಪ್ರಯತ್ನ ಪಡೋಣ ಎಂಬ ವ್ಯಕ್ತಿತ್ವ ಅವರದ್ದು. ಕಲಾವಿದರಿಗೆ ಅವರು ನೀಡುವ ಗೌರವ ತುಂಬಾ ಮೆಚ್ಚುಗೆ ಪಡುವಂತದ್ದು. ಎಲ್ಲವೂ ಗೊತ್ತಿದ್ದು ಏನು ಗೊತ್ತಿರದ ಹಾಗೆ ಇರುವ ಅಪರೂಪದ ವ್ಯಕ್ತಿ ಅವರು. ಅವರ ವ್ಯಕ್ತಿತ್ವ ಬಹಳ ಇಷ್ಟವಾಗುತ್ತೆ.

    ಅವಕಾಶಗಳು ಸಿಗುತ್ತಿಲ್ಲ ಎಂಬ ದೂರಿನ ಬಗ್ಗೆ ನಿಮ್ಮ ಅಭಿಪ್ರಾಯ?
    ಯಾವತ್ತೂ ಯಾರೂ ನಿಮಗೆ ಇಲ್ಲಿ ಹಾಸಿಗೆ ಹಾಸಿ ಬಂದು ಮಲಗು ಎಂದು ಹೇಳೋದಿಲ್ಲ, ನಾವೇ ಬಟ್ಟೆ ತೆಗೆದುಕೊಂಡು, ಹತ್ತಿ ತೆಗೆದುಕೊಂಡು ಹಾಸಿಗೆ ಮಾಡಿಕೊಳ್ಳಬೇಕು. ಯಾರೂ ನನಗೆ ಸಹಾಯ ಮಾಡಿಲ್ಲ ಅನ್ನೋದು ತಪ್ಪು. ನಮ್ಮ ಪ್ರತಿಭೆ ಇಟ್ಟುಕೊಂಡು ನಾವು ಬೆಳೆಯಬೇಕು. ಅವರು ಸಹಾಯ ಮಾಡಿಲ್ಲ ಇವರು ಮಾಡಿಲ್ಲ ಎಂದು ದೂರೋದು ನನ್ನ ಪ್ರಕಾರ ತಪ್ಪು. ಯಾರಾದ್ರೂ ಸಹಾಯ ಮಾಡಿದ್ರೆ ಅದು ಅವರ ದೊಡ್ಡತನ ಹೊರತು ಅದು ಅವರ ಹಕ್ಕಲ್ಲ. ನಮ್ಮಲ್ಲಿ ಪ್ರತಿಭೆ ಇದ್ರೆ ಹೊಸತನದಿಂದ ಗುರುತಿಸಿಕೊಂಡ್ರೆ ಖಂಡಿತ ಗೆಲುವು ಸಿಗುತ್ತೆ. ಪರಿಶ್ರಮ, ಪ್ರಯತ್ನ, ಸ್ವಂತಿಕೆ ಅನ್ನೋದು ಇದ್ರೆ ಜನರು ಖಂಡಿತ ನಮ್ಮನ್ನು ಬೆಳೆಸುತ್ತಾರೆ. ಇದನ್ನೂ ಓದಿ: ಶಿಕ್ಷಕನಾಗಬೇಕೆಂದು ಹೆದರಿ ನಟನಾದೆ: ಕಿರುತೆರೆ ನಟ ಜಹಂಗೀರ್