Tag: dawood ibrahim

  • ಮುಂಬೈ | ದಾವೂದ್ ಇಬ್ರಾಹಿಂನ ಮಾದಕ ವಸ್ತು ಫ್ಯಾಕ್ಟರಿ ಮ್ಯಾನೇಜರ್ ದಾನಿಶ್ ಚಿಕ್ನಾ ಅರೆಸ್ಟ್‌

    ಮುಂಬೈ | ದಾವೂದ್ ಇಬ್ರಾಹಿಂನ ಮಾದಕ ವಸ್ತು ಫ್ಯಾಕ್ಟರಿ ಮ್ಯಾನೇಜರ್ ದಾನಿಶ್ ಚಿಕ್ನಾ ಅರೆಸ್ಟ್‌

    ಮುಂಬೈ: ದರೋಡೆಕೋರ ದಾವೂದ್ ಇಬ್ರಾಹಿಂನ (Dawood Ibrahim) ಪ್ರಮುಖ ಸಹಚರ ದಾನಿಶ್ ಚಿಕ್ನಾ ಅಲಿಯಾಸ್ ಡ್ಯಾನಿಶ್ ಮರ್ಚೆಂಟ್‌ನನ್ನು ಮಾದಕ ವಸ್ತು ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿ (Mumbai) ಬಂಧಿಸಲಾಗಿದೆ.

    ಬಂಧಿತ ಆರೋಪಿ ಡೋಂಗ್ರಿ ಪ್ರದೇಶದಲ್ಲಿ ದಾವೂದ್‌ನ ಮಾದಕ ವಸ್ತು ಕಾರ್ಯಾಚರಣೆಯನ್ನು ನಿರ್ವಹಿಸುತ್ತಿದ್ದ. ಡ್ಯಾನಿಶ್‌ ಜೊತೆ ಆತನ ಸಹಚರ ಕಾದರ್ ಗುಲಾಮ್ ಶೇಖ್‌ನನ್ನು ಸಹ ಬಂಧಿಸಲಾಗಿದೆ. ಮರ್ಚೆಂಟ್ ಈ ಪ್ರಕರಣದಲ್ಲಿ ಬೇಕಾಗಿರುವ ಪ್ರಮುಖ ಆರೋಪಿ ಆಗಿದ್ದ. ಕಳೆದ ತಿಂಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಆಶಿಕುರ್ ಸಾಹಿದುರ್ ರೆಹಮಾನ್ ಮತ್ತು ರೆಹಾನ್ ಶಕೀಲ್ ಅನ್ಸಾರಿ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿತ್ತು.

    ನವೆಂಬರ್ 8 ರಂದು 144 ಗ್ರಾಂ ಡ್ರಗ್ಸ್‌ನೊಂದಿಗೆ ಮೆರೈನ್ ಲೈನ್ಸ್ ಸ್ಟೇಷನ್ ಬಳಿ ರೆಹಮಾನ್ ಸಿಕ್ಕಿಬಿದ್ದಿದ್ದ. ವಿಚಾರಣೆ ವೇಳೆ, ಡೋಂಗ್ರಿಯಲ್ಲಿ ಅನ್ಸಾರಿಯಿಂದ ಡ್ರಗ್ಸ್ ಖರೀದಿಸಲಾಗಿದೆ ಎಂದು ಆತ ಬಾಯಿಬಿಟ್ಟಿದ್ದ. ಈ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಅನ್ಸಾರಿಯನ್ನು ಬಂಧಿಸಿ ಹೆಚ್ಚುವರಿ 55 ಗ್ರಾಂ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದರು. ವಿಚಾರಣೆ ವೇಳೆ ಡ್ಯಾನಿಶ್ ಮರ್ಚೆಂಟ್ ಮತ್ತು ಇನ್ನೊಬ್ಬ ಸಹವರ್ತಿ ಖಾದಿರ್ ಫಾಂಟಾ ಎಂಬವರಿಂದ ಡ್ರಗ್ಸ್ ಸರಬರಾಜು ಮಾಡಲಾಗಿತ್ತು ಎಂದು ಅನ್ಸಾರಿ ಒಪ್ಪಿಕೊಂಡಿದ್ದ.

    ಪೊಲೀಸರು ಹಲವು ವಾರಗಳಿಂದ ಮರ್ಚೆಂಟ್ ಮತ್ತು ಫಾಂಟಾಗಾಗಿ ಹುಡುಕಾಟ ನಡೆಸಿದ್ದರು. ಸುಳಿವಿನ ಮೇರೆಗೆ ಪೊಲೀಸರು ಡಿಸೆಂಬರ್ 13 ರಂದು ಡೋಂಗ್ರಿ ಪ್ರದೇಶದಲ್ಲಿ ಇಬ್ಬರೂ ಶಂಕಿತರನ್ನು ಪತ್ತೆ ಮಾಡಿದ್ದರು. ವಿಚಾರಣೆ ವೇಳೆ ಇಬ್ಬರೂ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.

    2019 ರಲ್ಲಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಡೋಂಗ್ರಿಯಲ್ಲಿರುವ ದಾವೂದ್‌ನ ಡ್ರಗ್ ಫ್ಯಾಕ್ಟರಿಯನ್ನು ಕೆಡವಿತ್ತು. ಈ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆ ಸಮಯದಲ್ಲಿ, ದಾನಿಶ್‌ನನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿತ್ತು. ಇತ್ತೀಚಿಗೆ ಆತನನ್ನು ಬಿಡುಗಡೆ ಮಾಡಲಾಗಿತ್ತು.

  • ದುಬೈನಲ್ಲಿ ಶರದ್ ಪವಾರ್, ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿದ್ದರು: ಪ್ರಕಾಶ್ ಅಂಬೇಡ್ಕರ್

    ದುಬೈನಲ್ಲಿ ಶರದ್ ಪವಾರ್, ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿದ್ದರು: ಪ್ರಕಾಶ್ ಅಂಬೇಡ್ಕರ್

    ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ-ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ (Sharad Pawar) ಮುಖ್ಯಮಂತ್ರಿಯಾಗಿದ್ದಾಗ ದುಬೈನಲ್ಲಿ (Dubai) ದಾವೂದ್ ಇಬ್ರಾಹಿಂನನ್ನು (Dawood Ibrahim) ಭೇಟಿಯಾಗಿದ್ದರು ಎಂದು ವಂಚಿತ್ ಬಹುಜನ ಆಘಾಡಿ (ವಿಬಿಎ) ಮುಖ್ಯಸ್ಥ ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ (Prakash Ambedkar) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಅವರು ಮುಖ್ಯಮಂತ್ರಿಯಾಗಿದ್ದಾಗ ದಾವೂದ್ ಇಬ್ರಾಹಿಂನನ್ನು ಭೇಟಿ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆಯೇ? ಎಂಬುದನ್ನು ಖಚಿತಪಡಿಸಲು ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ಶರದ್ ಪವಾರ್ ಅವರು 1988 ರಿಂದ 1991 ರವರೆಗೆ ಮುಖ್ಯಮಂತ್ರಿಯಾಗಿದ್ದರು. ಆ ಅವಧಿಯಲ್ಲಿ ವಿದೇಶ ಪ್ರವಾಸ ಮಾಡಿದ್ದರು. ಮೊದಲು ಲಂಡನ್‌ಗೆ ಹೋಗಿದ್ದರು, ನಂತರ ಕ್ಯಾಲಿಫೋರ್ನಿಯಾದಲ್ಲಿ ಸಭೆ ಒಂದರ ಸಲುವಾಗಿ ಎರಡು ದಿನ ಕಳೆದಿದ್ದರು. ಬಳಿಕ ದುಬೈನಲ್ಲಿ ದಾವೂದ್ ಇಬ್ರಾಹಿಂನನ್ನು ಭೇಟಿಯಾದರು. ಆ ದಿನ ಸಂಜೆ ಪವಾರ್ ಲಂಡನ್‌ಗೆ ತೆರಳಿ ಎರಡು ದಿನಗಳ ನಂತರ ಭಾರತಕ್ಕೆ ಮರಳಿದ್ದರು. ಈ ಸಭೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತಾ ಎಂದು ಅವರು ಪ್ರಶ್ನಿಸಿದ್ದಾರೆ.

    ನಾನು ಯಾವುದೇ ಆರೋಪ ಮಾಡಿಲ್ಲ, ಆದರೆ ನಾನು ಕೆಲವು ಸತ್ಯಗಳನ್ನು ಸಮಾಜದ ಮುಂದಿಟ್ಟಿದ್ದೇನೆ. ಮುಖ್ಯಮಂತ್ರಿಯಾಗಿ ಪವಾರ್ ಅವರು ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ವಿದೇಶ ಪ್ರವಾಸ ಮಾಡಲು ಸಾಧ್ಯವಿಲ್ಲ. ಅಲ್ಲದೇ ಸಭೆಗಳ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆಯೇ? ದಾವುದ್‌ ಇಬ್ರಾಹಿಂ ಹಾಗೂ ಪವಾರ್ ಅವರ ಈ ಭೇಟಿಯ ವಿಶೇಷತೆ ಏನು ಎಂದು ಬಹಿರಂಗಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಮತದಾನ ನಡೆಯಲಿದ್ದು, ನವೆಂಬರ್ 23 ರಂದು ಎಲ್ಲಾ 288 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಪ್ರಕಾಶ್‌ ಅಂಬೇಡ್ಕರ್‌ ಅವರ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ದಾವೂದ್‌ ಇಬ್ರಾಹಿಂ ಆಡಿ ಬೆಳೆದ ಮಹಾರಾಷ್ಟ್ರದಲ್ಲಿರುವ ಮನೆ ಹರಾಜು

    ದಾವೂದ್‌ ಇಬ್ರಾಹಿಂ ಆಡಿ ಬೆಳೆದ ಮಹಾರಾಷ್ಟ್ರದಲ್ಲಿರುವ ಮನೆ ಹರಾಜು

    ನವದೆಹಲಿ: ಮಹಾರಾಷ್ಟ್ರದ ರತ್ನಗಿರಿಯಲ್ಲಿ ಭಯೋತ್ಪಾದಕ ದಾವೂದ್ ಇಬ್ರಾಹಿಂನ (Dawood Ibrahim) ಬಾಲ್ಯದ ಮನೆ ಮತ್ತು ಆತನ ಕುಟುಂಬದ ಒಡೆತನದ ಇತರ ಮೂರು ಆಸ್ತಿಗಳನ್ನು ಶುಕ್ರವಾರ ಹರಾಜು ಹಾಕಲಾಗುವುದು.

    ಸ್ಮಗ್ಲರ್ಸ್ ಮತ್ತು ಫಾರಿನ್ ಎಕ್ಸ್‌ಚೇಂಜ್ ಮ್ಯಾನಿಪ್ಯುಲೇಟರ್ಸ್ (ಆಸ್ತಿ ಮುಟ್ಟುಗೋಲು) ಕಾಯಿದೆ (SAFEMA) ಅಡಿಯಲ್ಲಿ ಅಧಿಕಾರಿಗಳು ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.‌ ಜನವರಿ 5 ರಂದು ಮುಂಬೈನಲ್ಲಿ ಹರಾಜು ನಡೆಯಲಿದೆ. ಇದನ್ನೂ ಓದಿ: ಸಚಿನ್‌ ಜೊತೆ ಮೊದಲ ಮಗುವಿನ ನಿರೀಕ್ಷೆಯಲ್ಲಿ 4 ಮಕ್ಕಳ ತಾಯಿ ಸೀಮಾ ಹೈದರ್

    ಕಳೆದ ಒಂಬತ್ತು ವರ್ಷಗಳಲ್ಲಿ ದಾವೂದ್ ಅಥವಾ ಆತನ ಕುಟುಂಬಕ್ಕೆ ಸೇರಿದ 11 ಆಸ್ತಿಗಳನ್ನು ಹರಾಜು ಮಾಡಲಾಗಿದೆ. 4.53 ಕೋಟಿ ರೂ.ಗೆ ರೆಸ್ಟೋರೆಂಟ್ ಮಾರಾಟ ಮಾಡಲಾಗಿದೆ. 3.53 ಕೋಟಿ ರೂ. ಆರು ಫ್ಲಾಟ್‌ಗಳು ಮತ್ತು 3.52 ಕೋಟಿ ರೂ.ಗೆ ಅತಿಥಿ ಗೃಹ ಕೂಡ ಮಾರಾಟವಾಗಿದೆ.

    1993 ರ ಮುಂಬೈ ಸರಣಿ ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ 1983 ರಲ್ಲಿ ಮುಂಬೈಗೆ ತೆರಳುವ ಮೊದಲು ಮುಂಬಾಕೆ ಗ್ರಾಮದಲ್ಲಿ ವಾಸಿಸುತ್ತಿದ್ದ. 257 ಜನರ ಸಾವಿಗೆ ಕಾರಣವಾದ ಸರಣಿ ಬಾಂಬ್ ಸ್ಫೋಟದ ನಂತರ ಭಾರತ ತೊರೆದಿದ್ದ. ಇದನ್ನೂ ಓದಿ: ದೇಶಾದ್ಯಂತ ಟ್ರಕ್‌ ಚಾಲಕರು ಪ್ರತಿಭಟನೆಗೆ ಧುಮುಕಿದ್ದು ಯಾಕೆ?

    1993, ಮಾರ್ಚ್ 12 ರಂದು ಮುಂಬೈ (ಆಗಿನ ಬಾಂಬೆ) ಸರಣಿ ಬಾಂಬ್ ಸ್ಫೋಟಗಳಿಂದ ತತ್ತರಿಸಿತ್ತು. ದಾಳಿಗೆ 257 ಜನರು ಬಲಿಯಾಗಿದ್ದರು. 700 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅಂದಾಜು 27 ಕೋಟಿ ರೂ. ಮೌಲ್ಯದ ಆಸ್ತಿ ನಾಶವಾಗಿತ್ತು. ಮಹಾರಾಷ್ಟ್ರ ಸರ್ಕಾರದ ಕೋರಿಕೆಯ ಮೇರೆಗೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಗಿತ್ತು.

    2017, ಜೂನ್ 16 ರಂದು ಮುಸ್ತಫಾ ದೊಸ್ಸಾ ಮತ್ತು ಅಬು ಸಲೇಂ ಸೇರಿದಂತೆ ಹಲವಾರು ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಲಾಯಿತು. ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ದಾಳಿಗಳನ್ನು ಯೋಜಿಸಿದ್ದ. ಇದನ್ನೂ ಓದಿ: ನಮ್ಮ ಮಸೀದಿಯನ್ನ ಕಳೆದುಕೊಂಡಿದ್ದೇವೆ.. ನಿಮ್ಮ ಹೃದಯದಲ್ಲಿ ನೋವಿಲ್ಲವೇ: ಬಾಬ್ರಿ ಮಸೀದಿ ಬಗ್ಗೆ ಮುಸ್ಲಿಂ ಯುವಕರಿಗೆ ಓವೈಸಿ ಪ್ರಶ್ನೆ

  • ದಾವೂದ್‌ಗೆ ಏನೂ ಆಗಿಲ್ಲ, ಆರಾಮಾಗಿದ್ದಾನೆ: ಛೋಟಾ ಶಕೀಲ್‌

    ದಾವೂದ್‌ಗೆ ಏನೂ ಆಗಿಲ್ಲ, ಆರಾಮಾಗಿದ್ದಾನೆ: ಛೋಟಾ ಶಕೀಲ್‌

    ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ (Dawood Ibrahim) ಆರೋಗ್ಯದ ಬಗ್ಗೆ ಆತನ ಆಪ್ತ ಛೋಟಾ ಶಕೀಲ್ (Chhota Shakeel) ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾನೆ.

    ದಾವೂದ್‌ಗೆ ಯಾರೋ ವಿಷ ನೀಡಿದ್ದಾರೆ ಅನ್ನೋದು ಆಧಾರರಹಿತ ವದಂತಿಯಾಗಿದೆ. ದಾವೂದ್ ನೂರಕ್ಕೆ ನೂರಷ್ಟು ಆರೋಗ್ಯವಾಗಿದ್ದಾನೆ. ಕಾಲಕಾಲಕ್ಕೆ ದುರುದ್ದೇಶದಿಂದ ಇಂತಹ ವದಂತಿಗಳನ್ನು ಹರಡಲಾಗುತ್ತಿದೆ. ಇದೀಗ ಐಎಸ್‌ಐನ ಆಸ್ತಿಯಾಗಿರುವ ಪರಾರಿಯಾಗಿರುವ ಭೂಗತ ದೊರೆ, ತಾನು ಇತ್ತೀಚೆಗೆ ಪಾಕಿಸ್ತಾನದಲ್ಲಿ ದಾವೂದ್‌ನನ್ನು ಭೇಟಿಯಾಗಿದ್ದೆ ಮತ್ತು ಅವನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ ಎಂದು ಛೋಟಾ ಶಕೀಲ್ ಹೇಳಿದ್ದಾನೆ.

    ದಾವೂದ್‌ಗೆ ಯಾರೋ ವಿಷ ಹಾಕಿದ್ದಾರೆ.‌ ಆತನನ್ನು ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ಚಿಂತಾಜನಕವಾಗಿದೆ ಎಂಬ ವದಂತಿಗಳು ಭಾರತ ಮತ್ತು ಪಾಕಿಸ್ತಾನದ ಎರಡೂ ದೇಶಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದರ ಬೆನ್ನಲ್ಲೇ ಆತನ ಆಪ್ತ ಛೋಟಾ ಶಕೀಲ್ ಕಡೆಯಿಂದ ಸ್ಫೋಟಕ ಮೆಸೇಜ್ ಬಂದಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ದಾವೂದ್‌ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಪಾಕಿಸ್ತಾನದಲ್ಲಿ (Pakistan) ಗೂಗಲ್ ಮತ್ತು ಟ್ವಿಟ್ಟರ್ ಕೂಡ ಸ್ಥಗಿತಗೊಳಿಸಲಾಗಿತ್ತು.‌

    ಛೋಟಾ ಶಕೀಲ್‌ನನ್ನು ದಾವೂದ್‌ನ ಬಲಗೈ ಬಂಟ ಎಂದು ಕರೆಯಲಾಗುತ್ತದೆ. ದಾವೂದ್ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದಾನೆ. ದರೋಡೆ, ಡಕಾಯಿತಿ, ಕಳ್ಳಸಾಗಣೆ, ಸುಲಿಗೆ, ಅಪಹರಣ ಮತ್ತು ಬಾಂಬ್ ಸ್ಫೋಟ ಸೇರಿದಂತೆ ಹಲವು ಪ್ರಕರಣಗಳಲ್ಲಿ ದಾವೂದ್ ಇಬ್ರಾಹಿಂ ಕೈವಾಡವಿದೆ. ಅಷ್ಟೇ ಅಲ್ಲದೆ, 1993 ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಕೂಡ ಇದೇ ಪಾತಕಿ. ಈ ದಾಳಿಯಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

  • ದಾವೂದ್ ಇಬ್ರಾಹಿಂ ಸ್ಥಿತಿ ಗಂಭೀರ- ವಿಷಪ್ರಾಶನ ಅಲ್ಲಗಳೆದ ಕುಟುಂಬಸ್ಥರು

    ದಾವೂದ್ ಇಬ್ರಾಹಿಂ ಸ್ಥಿತಿ ಗಂಭೀರ- ವಿಷಪ್ರಾಶನ ಅಲ್ಲಗಳೆದ ಕುಟುಂಬಸ್ಥರು

    ಇಸ್ಲಾಮಾಬಾದ್: ಗಂಭೀರ ಆರೋಗ್ಯ ಸಮಸ್ಯೆಗಳಿಂದಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು (Dawood Ibrahim) ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವರದಿಗಳ ನಡುವೆ, ಆತನ ಕುಟುಂಬದ ಸದಸ್ಯರು ವಿಷಪ್ರಾಶನ ವಿಚಾರವನ್ನು ಅಲ್ಲಗೆಳೆದಿದ್ದಾರೆ.

    ದಾವೂದ್ ಆರೋಗ್ಯದ ಕುರಿತ ವಿಚಾರ ಹೊರಬೀಳುತ್ತಿದ್ದಂತೆಯೇ ಮುಂಬೈ ಪೊಲೀಸರು ನಗರದಲ್ಲಿರುವ ಅವರ ಕುಟುಂಬ ಸದಸ್ಯರಿಂದ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ತಂಡವನ್ನು ಕಳುಹಿಸಿದ್ದಾರೆ. ಆಗ ದಾವೂದ್ ಸೋದರಳಿಯ, ಆರೋಗ್ಯ ಸಮಸ್ಯೆಗಳಿಂದ ಚೆನ್ನಾಗಿಲ್ಲ ಎಂದು ಖಚಿತಪಡಿಸಿದ್ದಾರೆ. ಆದರೆ ವಿಷಪ್ರಾಶನವಾಗಿಲ್ಲ‌ (Poisoning) ಎಂದು ಅವರು ತಿಳಿಸಿದ್ದಾರೆ.

    ಭಾನುವಾರ ರಾತ್ರಿಯಿಂದ ದಾವೂದ್ ಆರೋಗ್ಯದ ಬಗ್ಗೆ ವರದಿಗಳು ಹೊರಬಿದ್ದಿವೆ. ಆದರೆ ಭಾರತೀಯ ಅಧಿಕಾರಿಗಳಿಂದ ಯಾವುದೇ ದೃಢೀಕರಣವಿಲ್ಲ. ಈ ಸಂಬಂಧ ಪಾಕಿಸ್ತಾನ ಸರ್ಕಾರದಿಂದಲೂ ಅಧಿಕೃತ ಮಾಹಿತಿ ಇಲ್ಲ. ವಿಷಪ್ರಾಶನದಿಂದಾಗಿ ದಾವೂದ್ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಹೇಳಲಾಗಿದೆ. ಸದ್ಯ ದಾವೂದ್ ಪಾಕಿಸ್ತಾನದ ಕರಾಚಿ ಆಸ್ಪತ್ರೆಯಲ್ಲಿ (Karachi Hospital) ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯ ಸುತ್ತಮುತ್ತ ಪಾಕ್‌ ಸೇನೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ದಾವೂದ್ ಆಸ್ಪತ್ರೆಗೆ ದಾಖಲಾಗಿರುವುದು ಸುದ್ದಿಯಾಗುತ್ತಿದ್ದಂತೆಯೇ ಕರಾಚಿ, ರಾವಲ್ಪಿಂಡಿ, ಲಾಹೋರ್‌ ಹಾಗೂ ಇಸ್ಲಾಮಾಬಾದ್‍ನಲ್ಲಿ ಇಂಟರ್ ನೆಟ್ ಸ್ಥಗಿತಗೊಳಿಸಲಾಗಿದೆ ಎಂಬುದಾಗಿ ವರದಿಯಾಗಿದೆ. ಇದನ್ನೂ ಓದಿ: ವಿಷ ಸೇವಿಸಿರುವ ಶಂಕೆ – ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಆಸ್ಪತ್ರೆಗೆ ದಾಖಲು

    1993ರಲ್ಲಿ 250ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಮುಂಬೈ ಸ್ಫೋಟದ ಪ್ರಮುಖ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ದಶಕಗಳಿಂದ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ. ಜನವರಿಯಲ್ಲಿ ದಾವೂದ್ ಇಬ್ರಾಹಿಂನ ಸಹೋದರಿ ಹಸೀನಾ ಪಾರ್ಕರ್ ಅವರ ಮಗ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಭೂಗತ ಪಾತಕಿ ಎರಡನೇ ಬಾರಿಗೆ ಮದುವೆಯಾದ ನಂತರ ಕರಾಚಿಯಲ್ಲೇ ಇರುತ್ತಾನೆ ಎಂದು ತಿಳಿಸಿದ್ದರು.

  • ವಿಷ ಸೇವಿಸಿರುವ ಶಂಕೆ – ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಆಸ್ಪತ್ರೆಗೆ ದಾಖಲು

    ವಿಷ ಸೇವಿಸಿರುವ ಶಂಕೆ – ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಆಸ್ಪತ್ರೆಗೆ ದಾಖಲು

    ಇಸ್ಲಾಮಾಬಾದ್: ತಲೆಮರೆಸಿಕೊಂಡಿದ್ದ ಮುಂಬೈ ಸರಣಿ ಸ್ಫೋಟದ ರೂವಾರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಪಾಕಿಸ್ತಾನದ ಕರಾಚಿಯಲ್ಲಿ ಆಸ್ಪತ್ರೆಗೆ (Karachi Hospital) ದಾಖಲಾಗಿರುವುದಾಗಿ ಮೂಲಗಳು ತಿಳಿಸಿವೆ.

    ಸದ್ಯ ಪ್ರಾಥಮಿಕ ಮೂಲಗಳ ಮಾಹಿತಿಯಿಂದ ವಿಷ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಆದ್ರೆ ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ಎರಡು ದಿನಗಳಿಂದಲೂ ಇಬ್ರಾಹಿಂ ಆಸ್ಪತ್ರೆಯಲ್ಲಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ಇಂದು ಜಿಲ್ಲಾ ಕೋರ್ಟ್‌ಗೆ ವರದಿ ಸಲ್ಲಿಕೆ

    ದಾವೂದ್‌ ಇಬ್ರಾಹಿಂ ದಾಖಲಾಗಿರುವ ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಆಸ್ಪತ್ರೆಯ ಉನ್ನತ ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಮಾತ್ರವೇ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಇಬ್ರಾಹಿಂ ಸಂಬಂಧಿಕರಾದ ಅಲಿಶಾ ಪಾರ್ಕರ್ ಮತ್ತು ಸಾಜಿದ್ ವಾಗ್ಲೆ ಜೊತೆಗೆ ನಿರಂತರ ಸಂಪರ್ಕದಲ್ಲಿರುವ ಮುಂಬೈ ಪೊಲೀಸರು (Mumbai Police) ಪಾತಕಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಯು ಪ್ರಯತ್ನಿಸುತ್ತಿದ್ದಾರೆ.

    ಈ ವರ್ಷದ ಜನವರಿ ತಿಂಗಳಲ್ಲಿ ದಾವೂದ್‌ ಸಹೋದರಿ ಹಸೀನಾ ಪಾರ್ಕರ್‌ನ ಮಗ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹೇಳಿಕೆ ನೀಡಿದ್ದು, ಇಬ್ರಾಹಿಂ 2ನೇ ಮದುವೆಯಾಗಿ ಕರಾಚಿಯಲ್ಲೇ ನೆಲೆಸಿರುವುದಾಗಿ ತಿಳಿಸಿದ್ದ.

    ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಪಾಕ್ ಭದ್ರತಾ ಪಡೆಗಳ ನೆರಳಿನಲ್ಲಿ ಆಶ್ರಯ ಪಡೆದಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಮನೆ ಬಳಿ ಮೂತ್ರ ವಿಸರ್ಜಿಸಿದಳೆಂದು ಮಹಿಳೆಯ ಗುಪ್ತಾಂಗಕ್ಕೆ ರಾಡ್‍ನಿಂದ ಹಲ್ಲೆ!

  • 2ನೇ ಮದುವೆಯಾದ ದಾವೂದ್ ಇಬ್ರಾಹಿಂ

    2ನೇ ಮದುವೆಯಾದ ದಾವೂದ್ ಇಬ್ರಾಹಿಂ

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಕರಾಚಿಯಲ್ಲಿ ತಲೆಮರೆಸಿಕೊಂಡಿರುವ ಮುಂಬೈ ಸರಣಿ ಸ್ಫೋಟದ ರೂವಾರಿ, ಭೂಗತ ಪಾತಕಿ 67 ವರ್ಷದ ದಾವೂದ್ ಇಬ್ರಾಹಿಂ (Dawood Ibrahim) ಇನ್ನೊಂದು ಮದ್ವೆ ಮಾಡ್ಕೊಂಡಿದ್ದಾರೆ.

    ಈ ಬಗ್ಗೆ ಹಸೀನಾ ಪಾರ್ಕರ್ ಪುತ್ರ ಮತ್ತು ದಾವೂದ್ ಇಬ್ರಾಹಿಂ ಅವರ ಸೋದರಳಿಯ ಅಲಿಶಾ ಪಾರ್ಕರ್ ರಾಷ್ಟ್ರೀಯ ತನಿಖೆ ಸಂಸ್ಥೆ (NIA) ಮುಂದೆ ಈ ಬಗ್ಗೆ ಮಾಹಿತಿ ನೀಡಿದ್ದಾನೆ. ಮೊದಲ ಪತ್ನಿ ಮೈಜಾಬಿನ್ ಜೊತೆ ಪಾಕಿಸ್ತಾನಿ ಪಠಾಣ್ ಮಹಿಳೆಯನ್ನು ಮರುಮದುವೆ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ದಾವೂದ್ ಇಬ್ರಾಹಿಂನ ಮೊದಲ ಪತ್ನಿ ಮೈಜಾಬಿನ್, ವಾಟ್ಸಾಪ್ ಕರೆಗಳ ಮುಖಾಂತರ ಜನರೊಂದಿಗೆ ಸಂಪರ್ಕದಲ್ಲಿದ್ದಾಳೆ ಎಂದು ಮಾಹಿತಿ ನೀಡಿದರು.

    ದಾವೂದ್ ಇಬ್ರಾಹಿಂ 2ನೇ ಮದುವೆ ಆಗಲು ತನ್ನ ಮೊದಲ ಪತ್ನಿ ಮೈಜಾಬಿನ್‍ಗೆ ವಿಚ್ಛೇದನ ನೀಡಿದ್ದ ಎಂಬ ಸುದ್ದಿ ಹರಡಿತ್ತು. ಆದರೆ ಈ ಸುದ್ದಿ ನಿಜವಲ್ಲ. ಇದಲ್ಲದೇ ದಾವೂದ್ ಇಬ್ರಾಹಿಂ ತನ್ನ ವಿಳಾಸವನ್ನು ಬದಲಿಸಿದ್ದು, ಪ್ರಸ್ತುತ ಕರಾಚಿಯಲ್ಲಿರುವ ಅಬ್ದುಲ್ಲಾಗಾಜಿ ಬಾಬಾ ದರ್ಗಾದ ಹಿಂದೆ ರಹೀಮ್ ಫಕಿ ಬಳಿ ವಾಸಿಸುತ್ತಾನೆ ಎಂದು ತಿಳಿಸಿದ್ದಾನೆ.

    ದಾವೂದ್ ಪತ್ನಿ ಮೈಜಾಬಿನ್ ಹಬ್ಬ ಹರಿದಿನಗಳಲ್ಲೂ ನನ್ನ ಪತ್ನಿಗೆ ಕರೆ ಮಾಡುತ್ತಾಳೆ. ವಾಟ್ಸಾಪ್ ಕರೆಗಳ ಮೂಲಕ ನನ್ನ ಪತ್ನಿಯೊಂದಿಗೆ ಮಾತನಾಡುತ್ತಾಳೆ. ದಾವೂದ್ ಇಬ್ರಾಹಿಂನ ಪತ್ನಿ ಮೈಜಾಬಿನ್ ಅವರನ್ನು ಕೆಲವು ತಿಂಗಳ ಹಿಂದೆ ಜುಲೈ 2022ರಲ್ಲಿ ದುಬೈನಲ್ಲಿ ಭೇಟಿಯಾಗಿದ್ದೆ. ಈ ವೇಳೆ ದುಬೈನಲ್ಲಿರುವ ಜೈತೂನ್ ಹಮೀದ್ ಅಂತುಲೆ ಎಂಬುವವರ ಮನೆಯಲ್ಲಿ ತಂಗಿರುವುದಾಗಿ ಆತ ಹೇಳಿಕೊಂಡಿದ್ದಾನೆ.

    ಭೂಗತ ಪಾತಕಿ ದಾವುದ್ ಇಬ್ರಾಹಿಂ ಪಾಕ್ ಭದ್ರತಾ ಪಡೆಗಳ ನೆರಳಿನಲ್ಲಿ ಹಾಯಾಗಿ ಆಶ್ರಯ ಪಡೆದಿದ್ದಾನೆ ಎನ್ನಲಾಗಿದೆ. ಅತ್ತ ಪಾಕಿಸ್ತಾನ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾದ ಉಪ ಮುಖ್ಯಸ್ಥ ಅಬ್ದುಲ್ ಮಕ್ಕಿಯನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಘೋಷಿಸಿದೆ. ಜಮ್ಮುಕಾಶ್ಮೀರದಲ್ಲಿ ನಡೆಯೋ ಭಯೋತ್ಪಾದಕ ದಾಳಿಗಳ ಹಿಂದೆ ಅಬ್ದುಲ್ ಮಕ್ಕಿಯ ಪ್ಲಾನ್ ಇದೆ. ಅಲ್ಲದೇ ಈ ದಾಳಿಗಳಿಗೆ ಅಗತ್ಯವಿರುವ ನಿಧಿ ಸಂಗ್ರಹದಲ್ಲಿಯೂ ಮಕ್ಕಿ ಕೈವಾಡವಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾರತಕ್ಕೆ ದಾವೂದ್ ಇಬ್ರಾಹಿಂ ಅಸ್ತಾಂತರಿಸುತ್ತೀರಾ? – ಮಾಧ್ಯಮದವರ ಪ್ರಶ್ನೆಗೆ ‘ಶ್’ ಅಂದ ಪಾಕ್

    ಭಾರತಕ್ಕೆ ದಾವೂದ್ ಇಬ್ರಾಹಿಂ ಅಸ್ತಾಂತರಿಸುತ್ತೀರಾ? – ಮಾಧ್ಯಮದವರ ಪ್ರಶ್ನೆಗೆ ‘ಶ್’ ಅಂದ ಪಾಕ್

    ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಮತ್ತು 2008ರ ನವೆಂಬರ್ 26ರಂದು ನಡೆದ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ (Hafiz Saeed), ಭಾರತೀಯ ಭದ್ರತಾ ಏಜೆನ್ಸಿಗಳಿಗೆ ಬೇಕಾದ ವಾಟೆಂಡ್ ಕ್ರಿಮಿನಲ್ಸ್‌ಗಳಾಗಿದ್ದು, ಈ ಇಬ್ಬರು ಭಯೋತ್ಪದಕರು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಇವರ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸದೇ ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆಯ ಮುಖ್ಯಸ್ಥರು ನುಳುಚಿಕೊಂಡಿದ್ದಾರೆ.

    ಇಂಟರ್‌ಪೋಲ್ ಜನರಲ್ ಅಸೆಂಬ್ಲಿಗಾಗಿ (Interpol General Assembly) ದೆಹಲಿಗೆ ಇಸ್ಲಾಮಾಬಾದ್‍ನಿಂದ (Islamabad) ಇಬ್ಬರು ಸದಸ್ಯರ ನಿಯೋಗದ ಭಾಗವಾಗಿರುವ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ (ಎಫ್‍ಐಎ) (Federal Investigation Agency) ಮಹಾನಿರ್ದೇಶಕ ಮೊಹ್ಸಿನ್ ಬಟ್ (Mohsin Butt) ಆಗಮಿಸಿದ್ದರು. ಈ ವೇಳೆ ದಾವೂದ್ ಇಬ್ರಾಹಿಂ ಮತ್ತು ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‍ನನ್ನು ಪಾಕಿಸ್ತಾನವು ಭಾರತಕ್ಕೆ ಹಸ್ತಾಂತರಿಸುತ್ತದೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

    ಇಸ್ಲಾಮಾಬಾದ್ ಮತ್ತು ನವದೆಹಲಿ ನಡುವೆ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಕಾಶ್ಮೀರದ ವಿವಾದ, ಇತ್ತೀಚೆಗೆ ಮುಕ್ತಾಯಗೊಂಡ ಯುಎನ್ ಜನರಲ್ ಅಸೆಂಬ್ಲಿ ಸೇರಿದಂತೆ ಹಲವಾರು ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪಾಕಿಸ್ತಾನಿ ನಿಯೋಗ ಭಾರತಕ್ಕೆ ಆಗಮಿಸಿತ್ತು. ಸಾಮಾನ್ಯ ಸಭೆಯು ಇಂಟರ್‌ಪೋಲ್‍ನ ಸರ್ವೋಚ್ಚ ಆಡಳಿತ ಮಂಡಳಿಯಾಗಿದೆ. ಅದರ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ವರ್ಷಕ್ಕೊಮ್ಮೆ ಸಭೆ ಸೇರಲಾಗುತ್ತದೆ.

    ಇಂಟರ್‌ಪೋಲ್ ಅಸೆಂಬ್ಲಿಯನ್ನು (Interpol’s Assembly) ಉದ್ದೇಶಿಸಿ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾತನಾಡಿದ್ದರು. ನಾಲ್ಕು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮ ಶುಕ್ರವಾರದವರೆಗೂ ನಡೆಯುತ್ತದೆ. ಮಂತ್ರಿಗಳು, ದೇಶಗಳ ಪೊಲೀಸ್ ಮುಖ್ಯಸ್ಥರು, ರಾಷ್ಟ್ರೀಯ ಕೇಂದ್ರ ಬ್ಯೂರೋಗಳ ಮುಖ್ಯಸ್ಥರು ಮತ್ತು ಹಿರಿಯ ಲೀಸ್ ಅಧಿಕಾರಿಗಳು ಸೇರಿದಂತೆ 195 ಇಂಟರ್‌ಪೋಲ್ ಸದಸ್ಯ ರಾಷ್ಟ್ರಗಳ ನಿಯೋಗಗಳು ಈ ಈವೆಂಟ್‍ನಲ್ಲಿ ಭಾಗವಹಿಸುತ್ತಿವೆ. 1997ರಲ್ಲಿ ನಡೆದಿದ್ದ ಇಂಟರ್‌ಪೋಲ್ ಜನರಲ್ ಅಸೆಂಬ್ಲಿ ಸಭೆ ಸುಮಾರು 25 ವರ್ಷಗಳ ನಂತರ ಭಾರತದಲ್ಲಿ ನಡೆಯುತ್ತಿದೆ.

    Live Tv

    [brid partner=56869869 player=32851 video=960834 autoplay=true]

  • ದಾವೂದ್ ಇಬ್ರಾಹಿಂನ ತಲೆಗೆ 25 ಲಕ್ಷ ನಗದನ್ನು ಘೋಷಿಸಿದ ಎನ್‍ಐಎ

    ದಾವೂದ್ ಇಬ್ರಾಹಿಂನ ತಲೆಗೆ 25 ಲಕ್ಷ ನಗದನ್ನು ಘೋಷಿಸಿದ ಎನ್‍ಐಎ

    ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸುಳಿವು ಕೊಟ್ಟವರಿಗೆ 25 ಲಕ್ಷ ರೂ. ನಗದನ್ನು ಬಹುಮಾನವಾಗಿ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಘೋಷಿಸಿದೆ.

    ಭೂಗತ ಪಾತಕಿ ದಾವೂದ್ ಹಾಗೂ ಆತನ ಸಹಚರರು ಭಾರತದಲ್ಲಿ ನಕಲಿ ಹಣ ಮಾರಾಟ ಹಾಗೂ ಡ್ರಗ್ಸ್, ಶಸ್ತ್ರಾಸ್ತ್ರಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದಾರೆ. ಇದರ ಜೊತೆಗೆ ಪಾಕ್ ಏಜೆನ್ಸಿಗಳು ಹಾಗೂ ಭಯೋತ್ಪಾದಕ ಸಂಘಟನೆಗಳೊಂದಿಗೆ ಸೇರಿ ಆತ ಹಾಗೂ ಆತನ ಸಹಚರರು ಭಾರತದ ಮೇಲೆ ದಾಳಿಗಳನ್ನು ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಎನ್‍ಐಎ ಸಂಸ್ಥೆಯಿಂದ ಇಬ್ರಾಹಿಂ, ಇಬ್ರಾಹಿಂನ ಸಹೋದರ ಅನೀಸ್ ಇಬ್ರಾಹಿಂ ಅಲಿಯಾಸ್ ಹಾಜಿ ಅನೀಸ್ ಹಾಗೂ ಆತನ ಸಹಾಯಕರಾದ ಛೋಟಾ ಶಕೀಲ್, ಜಾವೇದ್ ಪಟೇಲ್ ಅಲಿಯಾಸ್ ಜಾವೇದ್ ಚಿಕ್ನಾ, ಇಬ್ರಾಹಿಂ ಮುಷ್ತಾಕ್ ಅಬ್ದುಲ್ ರಜಾಕ್ ಮೆಮನ್ ಅಲಿಯಾಸ್ ಟೈಗರ್ ಮೆಮನ್‍ನ ಸುಳಿವು ನೀಡಿದವರಿಗೆ ಬಹುಮಾನವನ್ನು ಘೋಷಿಸಿದೆ. ಇಬ್ರಾಹಿಂ ತಲೆಗೆ 25 ಲಕ್ಷ, ಛೋಟಾ ಶಕೀಲ್ ಸುಳಿವು ನೀಡಿದವರಿಗೆ 20 ಲಕ್ಷ, ಅನೀಸ್, ಚಿಕ್ನಾ ಹಾಗೂ ಮೆಮನ್ ಸುಳಿವು ನೀಡಿದವರಿಗೆ ತಲಾ 15 ಲಕ್ಷ ನಗದನ್ನು ಸಂಸ್ಥೆ ಘೋಷಿಸಿದೆ. ಇದನ್ನೂ ಓದಿ: ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ 91.50 ರೂ. ಇಳಿಕೆ

    ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿರುವ ಮತ್ತು 1993ರ ಮುಂಬೈ ಸರಣಿ ಸ್ಫೋಟ ಸೇರಿದಂತೆ ಭಾರತದಲ್ಲಿ ಅನೇಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ದಾವೂದ್ ಇಬ್ರಾಹಿಂ ತೊಡಗಿದ್ದ. ಈಗಾಗಲೇ 2003ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಆತನ ತಲೆಗೆ 25 ಮಿಲಿಯನ್ ಡಾಲರ್ ಬಹುಮಾನವನ್ನು ಘೋಷಿಸಿತ್ತು. ಭಾರತದ ಮೋಸ್ಟ್ ವಾಂಟೆಡ್ ವ್ಯಕ್ತಿಗಳಲ್ಲಿ ಒಬ್ಬನಾದ ಆತ, ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಮುಖ್ಯಸ್ಥ ಹಫೀಜ್ ಸಯೀದ್, ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ಹಿಜ್ಬುಲ್ ಮುಜಾಹಿದೀನ್ ಸಂಸ್ಥಾಪಕ ಸೈಯದ್ ಸಲಾಹುದ್ದೀನ್ ಮತ್ತು ಆತನ ಆಪ್ತ ಸಹಾಯಕ ಅಬ್ದುಲ್ ರೌಫ್ ಅಸ್ಗರ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆ. ಇದನ್ನೂ ಓದಿ: ಗರ್ಭಿಣಿ ಹಸುವಿನ ಮೇಲೆ ರೇಪ್ – ವಿಕೃತ ಕಾಮಿ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ದಾವೂದ್ ಇಬ್ರಾಹಿಂ ಜೊತೆ ಮಹಾರಾಷ್ಟ್ರ ಸರ್ಕಾರಕ್ಕೆ ನಂಟು? – ಬಂಡಾಯಕ್ಕೆ ಇದೇ ಕಾರಣ

    ದಾವೂದ್ ಇಬ್ರಾಹಿಂ ಜೊತೆ ಮಹಾರಾಷ್ಟ್ರ ಸರ್ಕಾರಕ್ಕೆ ನಂಟು? – ಬಂಡಾಯಕ್ಕೆ ಇದೇ ಕಾರಣ

    ಮಹಾರಾಷ್ಟ್ರ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದ್ದು. ಬಂಡಾಯ ಶಾಸಕರ ಮುನಿಸಿಗೆ ಮಹಾರಾಷ್ಟ್ರ ಸರ್ಕಾರ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಹೊಂದಿದ್ದ ನಂಟು ಪ್ರಮುಖ ಕಾರಣ ಎಂಬ ಸ್ಫೋಟಕ ಸುಳಿವೊಂದನ್ನು ಬಂಡಾಯ ಶಾಸಕರ ಗುಂಪಿನ ನಾಯಕ ಏಕನಾಥ್ ಶಿಂದೆ ಬಿಚ್ಚಿಟ್ಟಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಶಿಂಧೆ, ಹಲವಾರು ದುಷ್ಕೃತ್ಯಗಳನ್ನು ಮಾಡಿ, ಅಮಾಯಕರ ಬಲಿ ಪಡೆದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನೇರ ಸಂಪರ್ಕ ಹೊಂದಿರುವ ಜನರನ್ನು ಬಾಳ್ ಠಾಕ್ರೆ ಅವರ ಪಕ್ಷವು ಹೇಗೆ ಬೆಂಬಲಿಸುತ್ತದೆ ಎಂದು ಪ್ರಶ್ನಿಸಿದ್ದಾರೆ. ಇದು ಮಹಾ ಸರ್ಕಾರದ ಬಿಕ್ಕಟ್ಟಿನಲ್ಲಿ ತಿರುವು ಪಡೆದುಕೊಂಡಿದ್ದು, ಬಂಡಾಯ ಶಾಸಕರ ಕೆಂಗಣ್ಣಿಗೆ ಇದು ಪ್ರಮುಖ ಕಾರಣವಾಯಿತೇ ಎಂಬ ಅನುಮಾನ ಕಾಡುತ್ತಿದೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ಸರ್ಕಾರ ಬಹುತೇಕ ಪತನ – ಸುಪ್ರೀಂ ಕೋರ್ಟ್‍ನಲ್ಲಿ ಬಹುಮತ ಕಳೆದುಕೊಂಡಿದೆ ಎಂದ ಬಂಡಾಯ ಶಾಸಕರು

    ಏಕನಾಥ್ ಶಿಂಧೆ ಟ್ವೀಟ್‍ನಲ್ಲಿ ಇನ್ನಷ್ಟು ಅನುಮಾನಗಳು ಮೂಡುವಂತೆ ಬರೆದುಕೊಂಡಿದ್ದು, ಮುಂಬೈನಲ್ಲಿ ಬಾಂಬ್ ದಾಳಿಗಳನ್ನು ನಡೆಸಿ ಅಮಾಯಕ ಜನರನ್ನು ಕೊಂದ ದಾವೂದ್‍ನೊಂದಿಗೆ ನೇರ ಸಂಪರ್ಕ ಹೊಂದಿರುವವರನ್ನು ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಹೇಗೆ ಬೆಂಬಲಿಸುತ್ತಾರೆ? ಇದನ್ನು ವಿರೋಧಿಸಲು ಈ ರೀತಿ ಹೋರಾಟಕ್ಕೆ ಇಳಿದಿದ್ದೇವೆ. ಈ ಹೆಜ್ಜೆ ನಮ್ಮನ್ನು ಸಾವಿನ ಅಂಚಿಗೆ ಕೊಂಡೊಯ್ದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಮುನ್ನುಗ್ಗುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಕರ್ನಾಟಕ ಸರ್ಕಾರ ನಾಲಾಯಕ್ ಎಂದ MES ಪುಂಡರು – ಡಿಸಿ ಕಚೇರಿ ಮುಂಭಾಗದಲ್ಲೇ ನಾಡದ್ರೋಹಿ ಘೋಷಣೆ

    ಶಿವಸೇನೆ ಮತ್ತು ಬಾಳ್ ಠಾಕ್ರೆ ಅವರ ಸಿದ್ಧಾಂತವನ್ನು ರಕ್ಷಿಸಲು ಸತ್ತರೆ ನಾನು ಅದೃಷ್ಟಶಾಲಿ ಎಂದು ಸಂತೋಷ ಪಡುತ್ತೇನೆ ಎಂದು ಈ ಎರಡೂ ಟ್ವೀಟ್‍ಗಳನ್ನು ಶಿವಸೇನೆ ಸಂಸದ ಸಂಜಯ್ ರಾವತ್‍ಗೆ ಟ್ಯಾಗ್ ಮಾಡಿದ್ದಾರೆ.

    ಈ ನಡುವೆ ಮೂರು ಪ್ರಮುಖ ಬೇಡಿಕೆಗಳೊಂದಿಗೆ ಏಕನಾಥ್ ಶಿಂಧೆ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು ತುರ್ತು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿ ತುರ್ತು ವಿಚಾರಣೆಗೆ ಒಪ್ಪಿದ ಸುಪ್ರೀಂ ಕೋರ್ಟ್, ನ್ಯಾ. ಸೂರ್ಯಕಾಂತ್ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ಆರಂಭಿಸಿದೆ. ಈ ವೇಳೆ ಬಂಡಾಯ ಶಾಸಕರು ಉದ್ಧವ್ ಠಾಕ್ರೆ ಸರ್ಕಾರ 3ನೇ ಎರಡರಷ್ಟು ಬೆಂಬಲ ಕಳೆದುಕೊಂಡಿದೆ. ಉದ್ಧವ್ ಠಾಕ್ರೆ ಸರ್ಕಾರಕ್ಕೆ ನಮ್ಮ ಬೆಂಬಲವಿಲ್ಲ. ನಾವು 39 ಶಾಸಕರು ಸರ್ಕಾರದಿಂದ ಹೊರ ಬಂದಿದ್ದು ಬೆಂಬಲ ಹಿಂಪಡೆದಿದ್ದೇವೆ ಎಂದಿದ್ದಾರೆ. ಬಳಿಕ ಕೋರ್ಟ್ ಅರ್ಜಿ ವಿಚಾರಣೆಯನ್ನೂ ಜುಲೈ 11ಕ್ಕೆ ಮುಂದೂಡಿದೆ. ಈ ಮೂಲಕ ಇನ್ನಷ್ಟು ದಿನ ಮಹಾರಾಷ್ಟ್ರ ಸರ್ಕಾರದ ಹೈಡ್ರಾಮಾ ಮುಂದುವರಿಯಲಿದೆ.

    Live Tv