Tag: Dawid Malan

  • ಶತಕ ಸಿಡಿಸಿ ಎರಡು ದಾಖಲೆ ಬರೆದ ಮಲಾನ್‌ – ಇಂಗ್ಲೆಂಡ್‌ಗೆ 137ರನ್‌ಗಳ ಭರ್ಜರಿ ಜಯ

    ಶತಕ ಸಿಡಿಸಿ ಎರಡು ದಾಖಲೆ ಬರೆದ ಮಲಾನ್‌ – ಇಂಗ್ಲೆಂಡ್‌ಗೆ 137ರನ್‌ಗಳ ಭರ್ಜರಿ ಜಯ

    ಧರ್ಮಶಾಲಾ: ಆರಂಭಿಕ ಆಟಗಾರ ಡೇವಿಡ್‌ ಮಲಾನ್‌ (Dawid Malan) ಅವರ ಸ್ಫೋಟಕ ಶತಕದ ಆಟದಿಂದ ಬಾಂಗ್ಲಾದೇಶದ (Bangladesh) ವಿರುದ್ಧ ಇಂಗ್ಲೆಂಡ್‌ (England) 137 ರನ್‌ಗಳ ಭರ್ಜರಿ ಜಯ ಸಾಧಿಸಿ ವಿಶ್ವಕಪ್‌ ಟೂರ್ನಿಯಲ್ಲಿ (World Cup Cricket) ಶುಭಾರಂಭ ಮಾಡಿದೆ.

    ಇಂಗ್ಲೆಂಡ್‌ ನೀಡಿದ 365 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 48.2 ಓವರ್‌ಗಳಲ್ಲಿ 227 ರನ್‌ಗಳಿಗೆ ಸರ್ವಪತನ ಕಂಡಿತು.

    ಬಾಂಗ್ಲಾ ಪರವಾಗಿ ಆರಂಭಿಕ ಆಟಗಾರ ಲಿಟ್ಟನ್‌ ದಾಸ್‌ 76 ರನ್‌ (66 ಎಸೆತ, 7 ಬೌಂಡರಿ, 2 ಸಿಕ್ಸರ್‌) ಹೊಡೆದರೆ ಮುಷ್ಫಿಕರ್‌ ರಹೀಂ 51 ರನ್‌ (64 ಎಸೆತ, 4 ಬೌಂಡರಿ) ತೌಹಿದ್‌ 39 ರನ್‌ (61 ಎಸೆತ, 2 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.  ಇದನ್ನೂ ಓದಿ: ಪಾಕ್‌ ಉಗ್ರರನ್ನ ಹತ್ಯೆಗೈದ ಕಮಾಂಡೋಗಳಿಂದಲೇ ಭಾರತ-ಪಾಕ್ ಪಂದ್ಯಕ್ಕೆ ಭದ್ರತೆ – ಇಲ್ಲಿದೆ ಡಿಟೇಲ್ಸ್‌

    ರೀಸ್ ಟೋಪ್ಲಿ 4 ವಿಕೆಟ್‌, ಕ್ರೀಸ್‌ ವೋಕ್ಸ್‌ 2 ವಿಕೆಟ್‌ ಪಡೆದರು. ಸ್ಯಾಮ್‌ ಕರ್ರನ್‌, ಮಾರ್ಕ್‌ ವುಡ್‌, ಅದಿಲ್‌ ರಶೀದ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ಪರವಾಗಿ ಜಾನಿ ಬೈರ್‌ಸ್ಟೋವ್‌ ಮತ್ತು ಡೇವಿಡ್‌ ಮಲಾನ್‌ ಮೊದಲ ವಿಕೆಟಿಗೆ 107 ಎಸೆತಗಳಲ್ಲಿ 115 ರನ್‌ ಜೊತೆಯಾಟವಾಡಿದರು. ಜಾನಿ ಬೈರ್‌ಸ್ಟೋವ್‌ 52 ರನ್‌(59 ಎಸೆತ, 8 ಬೌಂಡರಿ ಹೊಡೆದು ಔಟಾದರೆ, ಮಲಾನ್‌ 140 ರನ್‌ (107 ಎಸೆತ, 16 ಬೌಂಡರಿ, 5 ಸಿಕ್ಸರ್‌), ನಾಯಕ ಜೋ ರೂಟ್‌ 82 ರನ್‌ (68 ಎಸೆತ, 8 ಬೌಂಡರಿ, 1 ಸಿಕ್ಸರ್)‌ ಹೊಡೆದು ಔಟಾದರು. ಅಂತಿಮವಾಗಿ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 364 ರನ್‌ ಹೊಡೆಯಿತು.

    ಮಲಾನ್‌ ದಾಖಲೆ:
    ಡೇವಿಡ್‌ ಮಲಾನ್‌ ಕೇವಲ 23 ಇನ್ನಿಂಗ್ಸ್‌ನಲ್ಲಿ 6ನೇ ಶತಕ ಹೊಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಈ ಹಿಂದೆ ಪಾಕಿಸ್ತಾನದ ಇಮಾನ್‌ ಉಲ್‌ ಹಕ್‌ 27 ಇನ್ನಿಂಗ್ಸ್‌, ಶ್ರೀಲಂಕಾದ ಉಪುಲ್‌ ತರಂಗಾ 29 ಇನ್ನಿಂಗ್ಸ್‌ನಲ್ಲಿ 6 ಶತಕ ಹೊಡೆದಿದ್ದರು.

    ಶತಕ ಹೊಡೆಯುವ ಜೊತೆ ವಿಶ್ವಕಪ್‌ನಲ್ಲಿ ಒಂದೇ ಓವರ್‌ನಲ್ಲಿ ಗರಿಷ್ಠ ರನ್‌ ಹೊಡೆದ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೂ ಮಲಾನ್‌ ಪಾತ್ರವಾಗಿದ್ದಾರೆ. ಮೆಹ್ದಿ ಹಸನ್‌ ಓವರ್‌ನಲ್ಲಿ 2 ಸಿಕ್ಸ್‌, 2 ಬೌಂಡರಿ,   ಸಿಂಗಲ್‌ ಸೇರಿ ಒಟ್ಟು 21 ರನ್‌ ಚಚ್ಚುವ ಮೂಲಕ ದಾಖಲೆ ಬರೆದಿದ್ದಾರೆ. ಈ ಹಿಂದೆ ಶ್ರೀಲಂಕಾ ವಿರುದ್ಧ ಜೋಸ್‌ ಬಟ್ಲರ್‌ ಮತ್ತು ಇಯನ್‌ ಮಾರ್ಗನ್‌ 20 ರನ್‌ ಚಚ್ಚಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2ನೇ ಪಂದ್ಯದಲ್ಲಿ ಎಡವಿದ ಭಾರತ – ಇಂಗ್ಲೆಂಡ್‌ಗೆ 100 ರನ್‌ಗಳ ಭರ್ಜರಿ ಜಯ

    2ನೇ ಪಂದ್ಯದಲ್ಲಿ ಎಡವಿದ ಭಾರತ – ಇಂಗ್ಲೆಂಡ್‌ಗೆ 100 ರನ್‌ಗಳ ಭರ್ಜರಿ ಜಯ

    ಲಂಡನ್: ಆರಂಭಿಕ ಪಂದ್ಯದಲ್ಲಿ ಮಾರಕ ವೇಗದ ಬೌಲಿಂಗ್ ಹಾಗೂ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಮುಗ್ಗರಿಸಿತು. ರೀಸ್ ಟೋಪ್ಲಿ ಮಾರಕ ಬೌಲಿಂಗ್‌ಗೆ ತತ್ತರಿಸಿದ ಭಾರತ 100 ರನ್‌ಗಳ ಅಂತರದಿಂದ ಸೋಲು ಕಂಡಿತು.

    ಲಾರ್ಡ್ಸ್ ಅಂಗಳದಲ್ಲಿ ನಡೆದ 2ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 49 ಓವರಲ್ಲಿ 246 ಗಳ ಸಾಧಾರಣ ಮೊತ್ತ ಗಳಿಸಿ ಆಲೌಟಾಯಿತು. ಈ ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ 38.5 ಓವರ್‌ಗಳಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 146 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಅತಿಥೇಯ ಇಂಗ್ಲೆಂಡ್ 3 ಪಂದ್ಯಗಳ ಸರಣಿ 1-1 ಅಂತರದಿಂದ ಸಮಬಲಗೊಂಡಿತು. ಇದನ್ನೂ ಓದಿ: ಇಂದು ಭಾರತ-ಇಂಗ್ಲೆಂಡ್ 2ನೇ ಏಕದಿನ – ಸರಣಿ ಗೆಲ್ಲುವ ತವಕದಲ್ಲಿ ಟೀಂ ಇಂಡಿಯಾ

    ಆರಂಭಿಕ ಆಘಾತ, ಬ್ಯಾಟಿಂಗ್ ವೈಫಲ್ಯ:
    ಟಾಸ್ ಗೆದ್ದು ನಂತರ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕದಲ್ಲೇ ಆಘಾತ ಎದುರಿಸಿತು. ನಾಯಕ ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಶೂನ್ಯ ಸುತ್ತಿದರು. ವಿರಾಟ್ ಕೊಹ್ಲಿ 25 ಎಸೆತಗಳಲ್ಲಿ 16 ರನ್ ಗಳಿಸಿ ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ಸೂರ್ಯಕುಮಾರ್ ಯಾದವ್ 29 ಎಸೆತಗಳಲ್ಲಿ 27, ಹಾರ್ದಿಕ್ ಪಾಂಡ್ಯ 44 ಎಸೆತಗಳಲ್ಲಿ 29 ಹಾಗೂ ರವೀಂದ್ರ ಜಡೇಜಾ 44 ಎಸೆತಗಳಲ್ಲಿ 29 ರನ್‌ಗಳಿಸಿ ತಂಡಕ್ಕೆ ನೆರವಾದರು. ಆದರೆ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಿ ಗೆಲುವು ದಾಖಲಿಸುವಲ್ಲಿ ವಿಫಲರಾದರು. ಇದನ್ನೂ ಓದಿ: ಸ್ಫೋಟಕ ಶತಕ- ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಸೂರ್ಯ ಭಾರೀ ಹೈಜಂಪ್‌

    ವಿಲಿ, ಮೊಯಿನ್ ಅಲಿ ಆಸರೆ:
    ಭಾರತದ ಬೌಲಿಂಗ್ ಪಡೆಯ ಪರಿಣಾಮಕಾರಿ ದಾಳಿಯಿಂದಾಗಿ ಇಂಗ್ಲೆಂಡ್ ತಂಡವು 102 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ 33ರನ್ (2 ಸಿಕ್ಸರ್, 2 ಬೌಂಡರಿ), ಮೊಯಿನ್ ಅಲಿ 47 (2 ಬೌಂಡರಿ, 2 ಸಿಕ್ಸರ್) ಜೊತೆಯಾಟದಲ್ಲಿ 6ನೇ ವಿಕೆಟ್‌ಗೆ 62 ರನ್‌ಗಳನ್ನು ಸಿಡಿಸಿದರು. ನಂತರದಲ್ಲಿ ಕ್ರೀಸ್‌ಗಿಳಿದು ಅಬ್ಬರಿಸಿದ ಡೇವಿಡ್ ವಿಲಿ 41 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇನ್ನೂ ಜೇಸನ್ ರಾಯ್ 23ರನ್ ಗಳಿಸಿದರೆ ಜಾನಿ ಬೈರ್‌ಸ್ಟೋವ್ 6 ಬೌಂಡರಿಗಳೊಂದಿಗೆ 38 ರನ್ ಸಿಡಿಸಿದರು.

    ಭಾರತ ತಂಡಕ್ಕೆ ಈ ಪಂದ್ಯದಲ್ಲಿ ಆರಂಭದಲ್ಲಿ ಯಶಸ್ಸು ಸಿಗಲಿಲ್ಲ. ಆದರೆ 9ನೇ ಓವರ್‌ನಲ್ಲಿ ಜೇಸನ್ ರಾಯ್ ವಿಕೆಟ್ ಕಬಳಿಸಿದ ಹಾರ್ದಿಕ್ ಪಾಂಡ್ಯ ಮೊದಲ ಯಶಸ್ಸು ಪಡೆದರು. ಚಾಹಲ್ ಜಾನಿ ಬೈರ್‌ಸ್ಟೋವ್ ವಿಕೆಟ್ ಅನ್ನು 15ನೇ ಓವರ್‌ನಲ್ಲಿ ಉರುಳಿಸಿದ ಚಾಹಲ್ ತಮ್ಮ ಖಾತೆ ತೆರೆದರು. ಜೋ ರೂಟ್ ಅವರನ್ನು LBW ಮಾಡಿ ಪೆವಿಲಿಯನ್‌ಗೆ ಕಳುಹಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ನಲ್ಲಿ ಅಬ್ಬರಿಸುತ್ತಿದ್ದ ಡೇವಿಡ್ ವಿಲಿಗೆ ಅರ್ಧಶತಕ ಗಳಿಸಲು ಬುಮ್ರಾ ಬ್ರೇಕ್ ಹಾಕಿದರು. ಮೊದಲ ಪಂದ್ಯದಲ್ಲಿ 6 ವಿಕೆಟ್ ಗಳಿಸಿದ್ದ ಬುಮ್ರಾ ಇಲ್ಲಿ ಡೇವಿಡ್ ಸೇರಿದಂತೆ ಎರಡು ವಿಕೆಟ್ ಗಳಿಸಿದರು.

    ಒಟ್ಟಿನಲ್ಲಿ ಮೊದಲ ಪಂದ್ಯದಲ್ಲಿ ಬೌಲಿಂಗ್, ಬ್ಯಾಟಿಂಗ್ ವಿಭಾಗದಲ್ಲಿ ಅಬ್ಬರಿಸಿದ ಟೀಂ ಇಂಡಿಯಾ 2ನೇ ಪಂದ್ಯದಲ್ಲಿ ಎರಡೂ ವಿಭಾಗಗಳ ವೈಫಲ್ಯದಿಂದಾಗಿ ಸೋಲನ್ನು ಅನುಭವಿಸಿತು.

    Live Tv
    [brid partner=56869869 player=32851 video=960834 autoplay=true]

  • ಪಂದ್ಯ ಸೋತು ಸರಣಿ ಗೆದ್ದ ಭಾರತ – ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್‌ಗೆ 17 ರನ್‌ಗಳ ಜಯ

    ಪಂದ್ಯ ಸೋತು ಸರಣಿ ಗೆದ್ದ ಭಾರತ – ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್‌ಗೆ 17 ರನ್‌ಗಳ ಜಯ

    ಲಂಡನ್‌: ಡೇವಿಡ್ ಮಲನ್‌ ಸ್ಫೋಟಕ ಅರ್ಧ ಶತಕದ ನೆರವಿನಿಂದ ನಾಟಿಂಗ್‌ ಹ್ಯಾಮ್‌ನ ಟ್ರೆಂಟ್‌ ಬ್ರಿಡ್ಜ್‌ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವು 17ರನ್‌ಗಳ ಜಯ ಸಾಧಿಸಿತು.

    ಟಾಸ್‌ಗೆದ್ದು ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 215ರನ್‌ ಗಳಿಸಿ 216 ರನ್‌ಗಳ ಬೃಹತ್‌ ಮೊತ್ತದ ಗುರಿ ನೀಡಿತು. ಈ ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 198  ರನ್‌ಗಳನ್ನು ಗಳಿಸುವ ಮೂಲಕ ತನ್ನ ಸೋಲನ್ನು ಒಪ್ಪಿಕೊಂಡಿತು. ಇದನ್ನೂ ಓದಿ: ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಲು ರೋಹಿತ್ ಶರ್ಮಾಗೆ ಇನ್ನೊಂದೆ ಹೆಜ್ಜೆ

    ಮೂರು ಪಂದ್ಯಗಳ ಸರಣಿಯನ್ನು ಭಾರತ ಈಗಾಗಲೇ 2–0 ಅಂತರದಲ್ಲಿ ಗೆದ್ದುಕೊಂಡಿದೆ. ಸರಣಿಯನ್ನು ಕೈವಶ ಮಾಡಿಕೊಂಡಿದ್ದ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭಾರತ ದೊಡ್ಡ ಬದಲಾವಣೆಯೊಂದಿಗೆ ಕಣಕ್ಕಿಳಿದು ಯುವ ಆಟಗಾರರಿಗೆ ಅವಕಾಶ ಮಾಡಿಕೊಟ್ಟಿತು.

    ಟೀಂ ಇಂಡಿಯಾಕ್ಕೆ ಆರಂಭಿಕ ಆಘಾತ:
    ಟಾಸ್‌ ಸೋತು ನಂತರ ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪವರ್‌ ಪ್ಲೇನಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡಿತು. ಆರಂಭಿಕರಾದ ನಾಯಕ ರೋಹಿತ್‌ ಶರ್ಮಾ ಮತ್ತು ರಿಷಭ್‌ ಪಂತ್‌ ಬೇಗನೆ ನಿರ್ಗಮಿಸಿದರು. ರೋಹಿತ್‌ 12 ಎಸೆತಗಳಲ್ಲಿ 11 ರನ್‌ ಹಾಗೂ ರಿಷಭ್‌ 5 ಎಸೆತಗಳಲ್ಲಿ 1 ರನ್‌ಗಳಿಸಿ ಹೊರನಡೆದರು. ಸತತ ಬ್ಯಾಟಿಂಗ್‌ ವೈಫಲ್ಯ ಕಂಡಿರುವ ವಿರಾಟ್‌ ಕೊಹ್ಲಿ 6 ಎಸೆತಗಳಲ್ಲಿ 11 ರನ್‌ ಗಳಿಸಿ ಔಟಾದರು.

    ಸೂರ್ಯಕುಮಾರ್‌ ಸ್ಫೋಟಕ ಶತಕ:
    3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಸೂರ್ಯಕುಮಾರ್‌ ಸ್ಪೋಟಕ ಶತಕ ಸಿಡಿಸಿದರು. ಗೆಲುವಿನ ವಿಶ್ವಾಸಕ ಕಳೆದುಕೊಂಡಿದ್ದ ಟೀ ಇಂಡಿಯಾಕ್ಕೆ ಮತ್ತೆ ಗೆಲುವಿನ ಆಸೆ ಚಿಗುರಿಸಿದ್ದರು. ಆಂಗ್ಲ ಬೌಲರ್‌ಗಳರ ಬೆಂಡೆತ್ತಿದ್ದ ಯಾದವ್‌ 48 ಎಸೆಗಳಲ್ಲೇ 5 ಸಿಕ್ಸರ್‌ ಮತ್ತು 12 ಬೌಂಡರಿಗಳನ್ನು ಚಚ್ಚಿ 101 ರನ್‌ಗಳಿಸಿದರು. ನಂತರವೂ ಆಂಗ್ಲರ ವಿರುದ್ಧ ದಾಳಿ ಮುಂದುವರಿಸಿದರು. ಸೂರ್ಯಕುಮಾರ್‌ ಯಾದವ್‌ 117 ರನ್‌(6 ಸಿಕ್ಸರ್‌, 14 ಬೌಂಡರಿ) ಗಳಿಸಿದರೆ, ಶ್ರೇಯಸ್‌ ಅಯ್ಯರ್‌ 28 ರನ್‌ (23 ಎಸೆತ, 2 ಸಿಕ್ಸರ್‌) ಗಳಿಸಿ ತಂಡಕ್ಕೆ ನೆರವಾದರು. ದಿನೇಶ್‌ ಕಾರ್ತಿಕ್‌ 6ರನ್‌, ರವಿಂದ್ರ ಜಡೇಜಾ 7 ರನ್‌ ಹಾಗೂ ಹರ್ಷಲ್‌ ಪಟೇಲ್‌ 5 ರನ್‌ಗಳಿಸಿದರು.

    ಬೌಲಿಂಗ್‌ನಲ್ಲಿ ಭಾರತದ ಪರ ಹರ್ಷಲ್ ಪಟೇಲ್ ಮತ್ತು ರವಿ ಬಿಶ್ನೋರ್‌ ತಲಾ 2 ವಿಕೆಟ್, ಅವೇಶ್‌ ಖಾನ್‌ ಹಾಗೂ ಉಮ್ರಾನ್‌ ಮಲಿಕ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ – ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ನಲ್ಲಿ ಕಾಣಿಸಿಕೊಂಡ ಧೋನಿ

    ಟಾಸ್‌ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡದಿಂದ ಆರಂಭಿಕರಾಗಿ ಕಣಕ್ಕಿಳಿದ ಜೇಸನ್‌ ರಾಯ್‌ ಹಾಗೂ ಜೋಸ್‌ ಬಟ್ಲರ್‌ ನಿಧಾನಗತಿಯಲ್ಲೇ ಬ್ಯಾಟಿಂಗ್‌ ಆರಂಭಿಸಿದ್ದರು. ರಾಯ್‌ 26 ಎಸೆತಗಳಲ್ಲಿ 27 ರನ್‌ಗಳಿಸಿದರೆ, ಬಟ್ಲರ್‌ 2 ಬೌಂಡರಿ 1 ಸಿಕ್ಸರ್‌ಗಳೊಂದಿಗೆ 9 ಎಸೆತಗಳಲ್ಲಿ 18 ರನ್‌ಗಳಿಸಿ ಪೆವಿಲಿಯನ್‌ ಸೇರಿದರು. 2ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಡೇವಿಡ್‌ ಮಲನ್‌ ತಮ್ಮ ಸ್ಫೋಟಕ ಅರ್ಧ ಶತಕದ ನೆರವಿಂದ ತಂಡವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಲಿಯಾಂ ಲಿವಿಂಗ್‌ಸ್ಟೋನ್‌ ಸಹ ಇದಕ್ಕೆ ಜೊತೆಯಾದರು.

    ಇಂಗ್ಲೆಂಡ್‌ ಬ್ಯಾಟರ್‌ ಡೇವಿಡ್ ಮಲಾನ್ 39 ಎಸೆತಗಳಲ್ಲಿ 77 ರನ್ (6 ಬೌಂಡರಿ, 5ಸಿಕ್ಸರ್‌) ಗಳಿಸಿದರೆ, 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಲಿಯಾಂ ಲಿವಿಂಗ್‌ಸ್ಟೋನ್‌ 29 ಎಸೆತಗಳಲ್ಲಿ 42 ರನ್‌ (4 ಸಿಕ್ಸರ್‌) ಗಳಿಸಿ ಅಜೇಯರಾಗುಳಿದರು. ಇಬ್ಬರ ಸಾಂಘಿಕ ಬ್ಯಾಟಿಂಗ್‌ ಪ್ರದರ್ಶನದಿಂದ ಇಂಗ್ಲೆಂಡ್‌ ತಂಡವು 200ರ ಗಡಿ ದಾಟಿತು. ಫಿಲ್‌ಸಾಲ್ಟ್‌ 8 ರನ್‌, ಹ್ಯಾರಿಬುಕ್‌ 19, ಚೆರೀಸ್‌ ಜೊರ್ಡನ್‌ 11 ರನ್‌ಗಳಿಸಿದರೆ ಭರವಸೆ ಆಟಗಾರ ಮೊಯಿನ್‌ ಅಲಿ ಶೂನ್ಯಕ್ಕೆ ನಿರ್ಗಮಿಸಿದರು.

    ಇಂಗ್ಲೆಂಡ್‌ ಪರ ಡೇವಿಡ್‌ ವಿಲ್ಲಿ 2 ಹಾಗೂ ರೀಸ್ ಟೋಪ್ಲಿ 3 ವಿಕೆಟ್‌ ಪಡೆದು ತಂಡಕ್ಕೆ ನೆರವಾದರು. ಇದನ್ನೂ ಓದಿ:  ಆಂಗ್ಲರ ವಿರುದ್ಧ 49 ರನ್‌ಗಳ ಜಯ- ಸರಣಿ ಗೆದ್ದ ಭಾರತ

    ರನ್‌ ಏರಿದ್ದು ಹೇಗೆ?
    34 ಎಸೆತ 50 ರನ್‌
    68 ಎಸೆತ 100 ರನ್‌
    88 ಎಸೆತ 150 ರನ್‌
    120 ಎಸೆತ 215 ರನ್‌

    ಟೀಂ ಇಂಡಿಯಾದಲ್ಲಿ ಮೆಘಾ ಬದಲಾವಣೆ: ಭಾರತ ಈ ಬಾರಿ ನಾಲ್ಕು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದು ವಿಶೇಷವಾಗಿತ್ತು. ಯಜುವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಅಂತಿಮ ಪಂದ್ಯದಲ್ಲಿ ಕೈಬಿಡಲಾಗಿತ್ತು. ಶೀಘ್ರವೇ ಭಾರತ ಮತ್ತು ಇಂಗ್ಲೆಂಡ್‌ ನಡುವೆ ಏಕದಿನ ಸರಣಿ ಆರಂಭವಾಗಲಿದ್ದು, ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. ಇವರ ಬದಲಾಗಿ ರವಿ ಬಿಶ್ನೋಯ್‌, ಉಮ್ರಾನ್ ಮಲಿಕ್, ಅವೇಶ್ ಖಾನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಐರ್ಲೆಂಡ್‌ ವಿರುದ್ಧದ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ದೀಪಕ್ ಹೂಡಾ ಅವರನ್ನು ಪಂದ್ಯದಿಂದ ಕೈಬಿಟ್ಟದ್ದು ಹಲವು ಹಿರಿಯ ಕ್ರಿಕೆಟಿಗರಲ್ಲಿ ಬೇಸರ ತರಿಸಿತು.

    Live Tv
    [brid partner=56869869 player=32851 video=960834 autoplay=true]