Tag: David miller

  • ʻಹಿಟ್‌ʼ ಮೇಯರ್‌, ಸಂಜು ಸೂಪರ್‌ ಸಿಕ್ಸರ್‌ – ರೋಚಕ ಪಂದ್ಯದಲ್ಲಿ ರಾಜಸ್ಥಾನ್‌ಗೆ 3 ವಿಕೆಟ್‌ಗಳ ಜಯ

    ʻಹಿಟ್‌ʼ ಮೇಯರ್‌, ಸಂಜು ಸೂಪರ್‌ ಸಿಕ್ಸರ್‌ – ರೋಚಕ ಪಂದ್ಯದಲ್ಲಿ ರಾಜಸ್ಥಾನ್‌ಗೆ 3 ವಿಕೆಟ್‌ಗಳ ಜಯ

    ಅಹಮದಾಬಾದ್‌: ಸಂಜು ಸ್ಯಾಮ್ಸನ್‌ (Sanju Samson), ಶಿಮ್ರಾನ್‌ ಹೆಟ್ಮೇಯರ್‌ (Shimron Hetmyer) ಸಿಕ್ಸರ್‌, ಬೌಂಡರಿ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ ಹಾಲಿ ಚಾಂಪಿಯನ್ಸ್‌ ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಮೊದಲ 10 ಓವರ್‌ಗಳಲ್ಲಿ ಕೇವಲ 53 ರನ್‌ ಗಳಿಸಿದ್ದ ರಾಜಸ್ಥಾನ್‌ (Rajasthan Royals) ತಂಡ ಮುಂದಿನ 56 ಎಸೆತಗಳಲ್ಲಿ ಬರೋಬ್ಬರಿ 126 ರನ್‌ ಸಿಡಿಸಿತು. ಕೊನೆಯ 6 ಓವರ್‌ಗಳಲ್ಲಿ ತಂಡದ ಗೆಲುವಿಗೆ 64 ರನ್‌ಗಳ ಅಗತ್ಯವಿತ್ತು. ಈ ವೇಳೆ 15ನೇ ಓವರ್‌ನಲ್ಲಿ 13 ರನ್‌, 16ನೇ ಓವರ್‌ನಲ್ಲಿ 20 ರನ್‌, 17ನೇ ಓವರ್‌ನಲ್ಲಿ 8 ರನ್‌, 18ನೇ ಓವರ್‌ನಲ್ಲಿ 13 ರನ್‌ ಹಾಗೂ 19ನೇ ಓವರ್‌ನಲ್ಲಿ 16‌ ರನ್‌ ಸೇರ್ಪಡೆಯಾಯಿತು. ಕೊನೆಯ ಓವರ್‌ನಲ್ಲಿ 7 ರನ್‌ಗಳು ಬೇಕಿದ್ದಾಗ ಮೊದಲ ಎಸೆತದಲ್ಲಿ 2 ರನ್‌ ಕದ್ದ ಹೆಟ್ಮೇಯರ್‌ ರನೌಟ್‌ನಿಂದ ಪಾರಾದರು. 2ನೇ ಎಸೆತದಲ್ಲೇ ಸಿಕ್ಸರ್‌ ಚಚ್ಚಿ ತಂಡ ರೋಚಕ ಜಯ ಸಾಧಿಸಲು ಕಾರಣವಾದರು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 177 ರನ್‌ ಗಳಿಸಿತ್ತು. 178 ರನ್‌ಗಳ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ ರಾಯಲ್ಸ್‌ 19.2 ಓವರ್‌ಗಳಲ್ಲೇ 179 ರನ್‌ ಗಳಿಸಿ ಗುಜರಾತ್‌ ತವರಿನಲ್ಲೇ ಗೆದ್ದು ಬೀಗಿತು. ಇದನ್ನೂ ಓದಿ: IPL 2023: ಕೊನೆಗೂ ಐಪಿಎಲ್‌ಗೆ ಎಂಟ್ರಿಕೊಟ್ಟ ಸಚಿನ್‌ ತೆಂಡೂಲ್ಕರ್‌ ಪುತ್ರ

    ಚೇಸಿಂಗ್‌ ಆರಂಭಿಸಿದ ರಾಜಸ್ಥಾನ್‌ ರಾಯಲ್ಸ್‌ ಆರಂಭದಲ್ಲೇ ಆಘಾತ ಎದುರಿಸಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್‌ 1 ರನ್‌ ಗಳಿಸಿದರೆ, ಜೋಸ್‌ ಬಟ್ಲರ್‌ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ ಸೇರಿದರು. ಇದರಿಂದ ಮೊದಲ 6 ಓವರ್‌ಗಳಲ್ಲಿ ಕೇವಲ 26 ರನ್‌ ಕಲೆಹಾಕಿತ್ತು. 3ನೇ ಕ್ರಮಾಂಕದಲ್ಲಿ ಬಂದ ದೇವದತ್‌ ಪಡಿಕಲ್‌ ಕೂಡ 25 ಎಸೆತಗಳಲ್ಲಿ 26 ರನ್‌, ರಿಯಾನ್‌ ಪರಾಗ್‌ 5 ರನ್‌ ಗಳಿಸಿ ಔಟಾದರು. ಇದರಿಂದ ತಂಡಕ್ಕೆ ಬಹುತೇಕ ಸೋಲು ಖಚಿತವಾಗಿತ್ತು.

    ಮಧ್ಯಮ ಕ್ರಮಾಂಕದಲ್ಲಿ ಒಂದಾದ ಶಿಮ್ರಾನ್‌ ಹೆಟ್ಮೇಯರ್‌ ಹಾಗೂ ಸಂಜು ಸ್ಯಾಮನ್‌ ಭರ್ಜರಿ ಬ್ಯಾಟಿಂಗ್‌ ನಡೆದರು. ಸಿಕ್ಸರ್‌, ಬೌಂಡರಿ ಸಿಡಿಸುತ್ತಾ ಉತ್ತಮ ರನ್‌ ಕಲೆಹಾಕಿದರು. 13ನೇ ಓವರ್‌ನಲ್ಲಿ ರಶೀದ್‌ಖಾನ್‌ ಬೌಲಿಂಗ್‌ಗೆ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿದ ಸಂಜು ಸ್ಯಾಮ್ಸನ್‌ ಒಂದೇ ಓವರ್‌ನಲ್ಲಿ 20 ರನ್‌ ಚಚ್ಚಿದರು. ಆ ನಂತರ ತಂಡದಲ್ಲಿ ಗೆಲುವಿನ ಆಸೆ ಚಿಗುರಿತು. 32 ಎಸೆತಗಳನ್ನು ಎದುರಿಸಿದ ಸಂಜು ಬರೋಬ್ಬರಿ 6 ಸಿಕ್ಸರ್‌, 3 ಬೌಂಡರಿಗಳೊಂದಿಗೆ 60 ರನ್‌ ಗಳಿಸಿದರು. ಈ ವೇಳೆ ಮತ್ತೊಮ್ಮೆ ಸಿಕ್ಸರ್‌ ಸಿಡಿಸುವ ಬರದಲ್ಲಿ ಕ್ಯಾಚ್‌ ನೀಡಿದರು. ಸಂಜು ಔಟಾಗುತ್ತಿದ್ದಂತೆ ಗುಜರಾತ್‌ ಫ್ಯಾನ್ಸ್‌ ಹುಚ್ಚೆದ್ದು ಕುಣಿದರು. ಆದರೆ ತನ್ನ ಅಬ್ಬರ ನಿಲ್ಲಿಸದ ಹೆಟ್ಮೇಯರ್‌ ಸ್ಫೋಟಕ ಅರ್ಧಶತಕದೊಂದಿಗೆ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.

    ಕೇವಲ 25 ಎಸೆತಗಳನ್ನು ಎದುರಿಸಿದ ಹೆಟ್ಮೇಯರ್‌ 5 ಸಿಕ್ಸರ್‌, 2 ಬೌಂಡರಿಯೊಂದಿಗೆ 56 ರನ್‌ ಚಚ್ಚಿ ಅಜೇಯರಾಗುಳಿದರು. ಈ ನಡುವೆ ದ್ರುವ್‌ ಜುರೆಲ್‌ ಸ್ಪೋಟಕ 17 ರನ್‌ (10 ಎಸೆತ, 1 ಸಿಕ್ಸರ್‌, 2 ಬೌಂಡರಿ), ಅಶ್ವಿನ್‌ 3 ಎಸೆತಗಳಲ್ಲಿ 10 ರನ್‌ ಚಚ್ಚಿ ಔಟಾದರು. ಇದನ್ನೂ ಓದಿ: IPL 2023: ಇಶಾನ್‌ ಕಿಶನ್‌ ಶೈನ್‌, ಅಯ್ಯರ್‌ ಶತಕದಾಟ ವ್ಯರ್ಥ – ಮುಂಬೈಗೆ 5 ವಿಕೆಟ್‌ಗಳ ಜಯ

    ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಗುಜರಾತ್ ಟೈಟಾನ್ಸ್‌ ಬ್ಯಾಟ್ಸ್‌ಮ್ಯಾನ್‌ಗಳು ತವರಿನಲ್ಲಿ ಪಂದ್ಯ ನಡೆದರು ನಿರೀಕ್ಷಿತ ಮಟ್ಟದಲ್ಲಿ ಅಬ್ಬರಿಸಲು ವಿಫಲವಾದರು. ಪವರ್‌ಪ್ಲೇ ಅವಧಿಯಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲರ್‌ಗಳು ಗುಜರಾತ್‌ ವಿರುದ್ಧ ವಿರುದ್ಧ ಅದ್ಭುತ ಯಶಸ್ಸು ಸಾಧಿಸಿದರು. ಮೊದಲ 6 ಓವರ್‌ಗಳಲ್ಲಿ ಗುಜರಾತ್‌ ಟೈಟಾನ್ಸ್‌ 42 ರನ್‌ಗಳಿಗೆ ಪ್ರಮುಖ 2 ವಿಕೆಟ್‌ ಕಳೆದುಕೊಂಡಿತ್ತು.

    ಆರಂಭಿಕ ಆಟಗಾರ ಶುಭಮನ್‌ ಗಿಲ್‌ 34 ಎಸೆತಗಳಲ್ಲಿ 45 ರನ್‌, ಮಂದಗತಿಯ ಬ್ಯಾಟಿಂಗ್‌ ನಡೆಸಿದ ಸಾಯಿ ಸುದರ್ಶನ್‌ 19 ಎಸೆತಗಳಲ್ಲಿ 20 ರನ್‌ ಗಳಿಸಲಷ್ಟೇ ಶಕ್ತವಾದರು. ನಾಯಕ ಹಾರ್ದಿಕ್‌ ಪಾಂಡ್ಯ 28 ರನ್‌ (19 ಎಸೆತ, 3 ಬೌಂಡರಿ, 1 ಸಿಕ್ಸರ್‌), ಅಭಿನವ್‌ ಮನೋಹರ್‌ 27 ರನ್‌ (13 ಎಸೆತ, 3 ಸಿಕ್ಸರ್‌) ಗಳಿಸಿದರು. ಈ ನಡುವೆ ಡೇವಿಡ್‌ ಮಿಲ್ಲರ್‌ 46 ರನ್‌ (30 ಎಸೆತ, 3 ಬೌಂಡರಿ, 2 ಸಿಕ್ಸರ್‌) ಗಳಿಸಿ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ರಾಹುಲ್‌ ತೆವಾಟಿಯಾ (1 ರನ್‌), ಅಲ್ಝರಿ ಜೋಸೆಫ್‌ ಅಜೇಯರಾಗುಳಿದರು.

    ರಾಜಸ್ಥಾನ್ ರಾಯಲ್ಸ್ ಪರವಾಗಿ ಸಂದೀಪ್ ಶರ್ಮಾ ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. 4 ಓವರ್‌ಗಳಲ್ಲಿ 25 ರನ್ ನೀಡಿ 2 ವಿಕೆಟ್ ಪಡೆದರು. ಟ್ರೆಂಟ್ ಬೋಲ್ಟ್‌, ಆಡಂ ಜಂಪಾ ಹಾಗೂ ಚಾಹಲ್ ತಲಾ ಒಂದೊಂದು ವಿಕೆಟ್ ಪಡೆದರು.

  • IPl 2023: ಗುಜರಾತ್‌ ಗುನ್ನಕ್ಕೆ ಪಂಜಾಬ್‌ ಪಂಚರ್‌ – ರೋಚಕ ಪಂದ್ಯದಲ್ಲಿ ಟೈಟಾನ್ಸ್‌ಗೆ 6 ವಿಕೆಟ್‌ಗಳ ಜಯ

    IPl 2023: ಗುಜರಾತ್‌ ಗುನ್ನಕ್ಕೆ ಪಂಜಾಬ್‌ ಪಂಚರ್‌ – ರೋಚಕ ಪಂದ್ಯದಲ್ಲಿ ಟೈಟಾನ್ಸ್‌ಗೆ 6 ವಿಕೆಟ್‌ಗಳ ಜಯ

    ಮೊಹಾಲಿ: ಶುಭಮನ್‌ ಗಿಲ್‌ (Shubman Gill) ಭರ್ಜರಿ ಅರ್ಧ ಶತಕದ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಗುಜರಾತ್‌ ಜೈಂಟ್ಸ್‌ (Gujarat Titans) ತಂಡವು ಕಿಂಗ್ಸ್‌ ಪಂಜಾಬ್‌ (Punjab Kings) ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ.

    ಕೊನೆಯ 6 ಎಸೆತಗಳಲ್ಲಿ 6 ರನ್‌ಗಳ ಅಗತ್ಯವಿತ್ತು. ಈ ವೇಳೆ ಬೌಲಿಂಗ್‌ಗಿಳಿದ ಸ್ಯಾಮ್‌ ಕರ್ರನ್‌ (Sam Curran) ಮೊದಲ ಎಸೆತದಲ್ಲಿ ರನ್‌ ನೀಡಿದರೆ, 2ನೇ ಎಸೆತದಲ್ಲಿ ಶುಭಮನ್‌ ಗಿಲ್‌ ಅವರನ್ನ ಕ್ಲೀನ್‌ ಬೌಲ್ಡ್‌ ಮಾಡಿದರು. ನಂತರ ಕ್ರೀಸ್‌ಗೆ ಬಂದ ರಾಹುಲ್‌ ತೆವಾಟಿಯ 1 ರನ್‌ ಕದ್ದರು, ಮರು ಎಸೆತದಲ್ಲಿ ಡೇವಿಡ್‌ ಮಿಲ್ಲರ್‌ ರನೌಟ್‌ ಆಗುವ ಸಾಧ್ಯತೆಯಿತ್ತು. ಆದರೆ ಒಂದು ಕರ್ರನ್‌ ಯಾವುದೇ ಪ್ರಯತ್ನ ಮಾಡದೇ 1 ರನ್‌ ನೀಡಿದರು. ಕೊನೆಯ 2 ಎಸೆತಗಳಲ್ಲಿ 4ರನ್‌ ಬೇಕಿದ್ದಾಗ ತೆವಾಟಿಯಾ ಬೌಂಡರಿ ಬಾರಿಸಿ ತಂಡಕ್ಕೆ ರೋಚಕ ಜಯ ತಂದರು.

    ಇಲ್ಲಿನ ಐಎಸ್‌ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಪಂಜಾಬ್‌ ಕಿಂಗ್ಸ್‌ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 153 ರನ್‌ ಗಳಿಸಿತ್ತು. 154 ರನ್‌ಗಳ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ್ದ ಗುಜರಾತ್‌ ಟೈಟಾನ್ಸ್‌ 19.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 154 ರನ್‌ ಗಳಿಸಿ ಗೆಲುವು ಸಾಧಿಸಿತು.

    ಚೇಸಿಂಗ್‌ ಆರಂಭಿಸಿದ ಗುಜರಾತ್‌ ಟೈಟಾನ್ಸ್‌ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಶುಭಮನ್‌ ಗಿಲ್‌ ಹಾಗೂ ವೃದ್ಧಿಮಾನ್‌ ಸಾಹಾ ಜೋಡಿ ಮೊದಲ ವಿಕೆಟ್‌ ಪತನಕ್ಕೆ 4.4 ಓವರ್‌ಗಳಲ್ಲಿ 48 ರನ್‌ ಕಲೆಹಾಕಿತ್ತು. ವೃದ್ಧಿಮಾನ್‌ ಸಾಹಾ 19 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ ಸ್ಫೋಟಕ 30 ರನ್‌ ಚಚ್ಚಿದರು. ಸಾಹಾ ಔಟಾಗುತ್ತಿದ್ದಂತೆ ರನ್‌ ಕದಿಯುವಲ್ಲಿ ತಂಡ ಹೆಣಗಾಡಿತ್ತು.

    ನಿಧಾನಗತಿಯ ಬ್ಯಾಟಿಂಗ್‌ ಮಾಡಿದ ಶುಭಮನ್‌ ಗಿಲ್‌ ಕೊನೆಯ ಓವರ್‌ ವರೆಗೂ ಹೋರಾಡಿ 49 ಎಸೆತಗಳಲ್ಲಿ 67 ರನ್‌ (7 ಬೌಂಡಿರಿ, 1 ಸಿಕ್ಸರ್‌) ಗಳಿಸಿ ಔಟಾದರು. ಈ ನಡುವೆ ಸಾಯಿ ಸುದರ್ಶನ್‌ 19 ರನ್‌, ಹಾರ್ದಿಕ್‌ ಪಾಂಡ್ಯ 8 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಕೊನೆಯಲ್ಲಿ ಡೇವಿಡ್‌ ಮಿಲ್ಲರ್‌ 17 ರನ್‌, 5 ರನ್‌ ಗಳಿಸಿ ಅಜೇಯರಾಗುಳಿದರು.

    ಪಂಜಾಬ್‌ ಕಿಂಗ್ಸ್‌ ಪರ ಅರ್ಷ್‌ದೀಪ್‌ ಸಿಂಗ್‌, ಕಗಿಸೋ ರಬಾಡ, ಹರ್ಪ್ರೀತ್‌ ಬ್ರಾರ್‌, ಸ್ಯಾಮ್‌ ಕರ್ರನ್‌ ತಲಾ ಒಂದೊಂದು ವಿಕೆಟ್‌ಕಿತ್ತರು.

    ಮೊದಲು ಬ್ಯಾಟಿಂಗ್‌ ಮಾಡಿದ್ದ ಪಂಜಾಬ್‌ ಕಿಂಗ್ಸ್‌ ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳ ಕಳಪೆ ಪ್ರದರ್ಶನದಿಂದ ಬೃಹತ್‌ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. ಮ್ಯಾಥಿವ್‌ ಶಾರ್ಟ್‌ 36‌ ರನ್‌, ಭಾನುಕ ರಾಜಪಕ್ಸ 20 ರನ್‌, ಜಿತೇಶ್‌ ಶರ್ಮಾ 25 ರನ್‌, ಸ್ಯಾಮ್‌ ಕರ್ರನ್‌ 22 ರನ್‌ ಹಾಗೂ ಎಂ.ಶಾರೂಖ್‌ ಖಾನ್‌ 22 ರನ್‌ ಗಳಿಸಿ, ತಂಡದ ಮೊತ್ತ 150ರನ್‌ ಗಡಿ ದಾಟಿಸಿದರು. ಆದರೆ ಯಾರೊಬ್ಬರು ಹೆಚ್ಚು ಮೊತ್ತ ಕಲೆಹಾಕದ ಕಾರಣ ತಂಡ ಸಾಧಾರಣ ಮೊತ್ತಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

    ಗುಜರಾತ್‌ ಟೈಟಾನ್ಸ್‌ ಪರ ಮೋಹಿತ್‌ ಶರ್ಮಾ 2 ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಶಮಿ, ಜೋಶ್‌ ಲಿಟಲ್‌, ಅಲ್ಝರಿ ಜೋಸೆಫ್‌ ಹಾಗೂ ರಶೀದ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • ಸುದರ್ಶನ್‌ ಫಿಫ್ಟಿ, ಮಿಲ್ಲರ್‌ ಸ್ಫೋಟಕ ಆಟ – ಗುಜರಾತ್‌ಗೆ ಸತತ ಎರಡನೇ ಜಯ

    ಸುದರ್ಶನ್‌ ಫಿಫ್ಟಿ, ಮಿಲ್ಲರ್‌ ಸ್ಫೋಟಕ ಆಟ – ಗುಜರಾತ್‌ಗೆ ಸತತ ಎರಡನೇ ಜಯ

    ನವದೆಹಲಿ: ಸಾಯ್‌ ಸುದರ್ಶನ್‌ (Sai Sudharsan) ಅವರ ಅರ್ಧಶತಕ ಮತ್ತು ಕೊನೆಯಲ್ಲಿ ಡೇವಿಡ್‌ ಮಿಲ್ಲರ್‌ (David Miller) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧಗುಜರಾತ್‌ ಟೈಟಾನ್ಸ್‌ (Gujarat Titans) 6 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 8 ವಿಕೆಟ್‌ ನಷ್ಟಕ್ಕೆ 162 ರನ್‌ ಹೊಡೆಯಿತು. ನಂತರ ಬ್ಯಾಟಿಂಗ್‌ ಮಾಡಿದ ಗುಜರಾತ್‌ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡರೂ ಅಂತಿಮವಾಗಿ 18.1 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 163 ರನ್‌ ಹೊಡೆದು ಟೂರ್ನಿಯಲ್ಲಿ ಸತತ ಎರಡನೇ ಜಯ ಸಾಧಿಸಿತು.

    54 ರನ್‌ ಗಳಿಗೆ 3 ವಿಕೆಟ್‌ ಕಳೆದುಕೊಂಡಿದ್ದಾಗ ಸಾಯ್‌ ಸುದರ್ಶನ್‌ ಮತ್ತು ವಿಜಯ್‌ ಶಂಕರ್‌ (Vijay Shankar) ತಂಡಕ್ಕೆ ನೆರವಾದರು. ಇಬ್ಬರು 44 ಎಸೆತಗಳಲ್ಲಿ 53 ರನ್‌ ಜೊತೆಯಾಟವಾಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ವಿಜಯ್‌ ಶಂಕರ್‌ 29 ರನ್‌(23 ಎಸೆತ, 3 ಬೌಂಡರಿ) ಹೊಡೆದು ಔಟಾದರು. ಇದನ್ನೂ ಓದಿ: ಜಿಯೋ ಸಿನಿಮಾದಲ್ಲಿ ದಾಖಲೆ ಬರೆದ ಧೋನಿಯ ಅವಳಿ ಸಿಕ್ಸರ್

    ಮುರಿಯದ ಐದನೇ ವಿಕೆಟ್‌ಗೆ ಸುದರ್ಶನ್‌ ಮತ್ತು ಡೇವಿಡ್‌ ಮಿಲ್ಲರ್‌ 29 ಎಸೆತಗಳಲ್ಲಿ 56 ರನ್‌ ಚಚ್ಚುವ ಮೂಲಕ ತಂಡಕ್ಕೆ ಜಯವನ್ನು ತಂದುಕೊಟ್ಟರು. ಸುದರ್ಶನ್‌ ಔಟಾಗದೇ 62 ರನ್(‌ 48 ಎಸೆತ, 4 ಬೌಂಡರಿ, 2 ಸಿಕ್ಸರ್‌) ಡೇವಿಡ್‌ ಮಿಲ್ಲರ್‌ ಔಟಾಗದೇ 31 ರನ್‌(16 ಎಸೆತ, 2 ಬೌಂಡರಿ, 2 ಸಿಕ್ಸರ್‌) ಹೊಡೆದರು.

    ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ 8.3 ಓವರ್‌ಗಳಲ್ಲಿ 67 ರನ್‌ಗಳಿಗೆ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು. ನಾಯಕ ಡೇವಿಡ್‌ ವಾರ್ನರ್‌ 37 ರನ್‌(32 ಎಸೆತ, 7 ಔಂಡರಿ), ಸರ್ಫರಾಜ್‌ ಖಾನ್‌ 30 ರನ್‌( 34 ಎಸೆತ), ಅಕ್ಷರ್‌ ಪಟೇಲ್‌ 36 ರನ್‌(22 ಎಸೆತ, 2 ಬೌಂಡರಿ, 3 ಸಿಕ್ಸರ್‌) ಅಭಿಷೇಕ್‌ ಪೂರೆಲ್‌ 20 ರನ್‌(11 ಎಸೆತ, 2 ಸಿಕ್ಸರ್‌) ಹೊಡೆದ ಪರಿಣಾಮ ಅಂತಿಮವಾಗಿ ಡೆಲ್ಲಿ ತಂಡ 162 ರನ್‌ ಗಳಿಸಿತು.

    ಮೊಹಮ್ಮದ್‌ ಶಮಿ ಮತ್ತು ರಶೀದ್‌ ಖಾನ್‌ ತಲಾ ಮೂರು ವಿಕೆಟ್‌ ಪಡೆದರೆ ಅಲ್ಜಾರಿ ಜೋಸೆಫ್‌ 2 ವಿಕೆಟ್‌ ಪಡೆದರು.

  • ಋತುರಾಜ್‌ – ಇಶಾನ್‌ ಶೈನ್‌, ಹರ್ಷಲ್‌ ಬೌಲಿಂಗ್‌ ಕಮಾಲ್‌ – ಭಾರತಕ್ಕೆ 48 ರನ್‌ಗಳ ಭರ್ಜರಿ ಜಯ

    ಋತುರಾಜ್‌ – ಇಶಾನ್‌ ಶೈನ್‌, ಹರ್ಷಲ್‌ ಬೌಲಿಂಗ್‌ ಕಮಾಲ್‌ – ಭಾರತಕ್ಕೆ 48 ರನ್‌ಗಳ ಭರ್ಜರಿ ಜಯ

    ಮುಂಬೈ: ಋತುರಾಜ್‌ ಗಾಯಕ್ವಾಡ್‌ ಹಾಗೂ ಇಶಾನ್‌ ಕಿಶನ್‌ ಅಮೋಘ ಅರ್ಧ ಶತಕಗಳ ಅಬ್ಬರ ಹಾಗೂ ಯಜುವೇಂದ್ರ ಚಾಹಲ್‌, ಹರ್ಷಲ್‌ ಪಟೇಲ್‌ ಅವರ ಬೌಲಿಂಗ್‌ ಕಮಾಲ್‌ ನಿಂದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 48 ರನ್‌ಗಳ ಭರ್ಜರಿ ಜಯ ಸಾಧಿಸಿತು.

    ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 3ನೇ T20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 5 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿ, ಎದುರಾಳಿ ತಂಡಕ್ಕೆ 180 ರನ್‌ಗಳ ಗುರಿ ನೀಡಿತು. ಈ ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 19.1 ಓವರ್‌ಗಳಲ್ಲೇ 131 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಭಾರತಕ್ಕೆ ಮಂಡಿಯೂರಿತು. ಇದನ್ನೂ ಓದಿ: ವಿಶ್ವದ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದ IPL

    ಕಳೆದ ಎರಡು ಪಂದ್ಯಗಳಲ್ಲಿ ಹೋರಾಡಿ ಸೋತಿದ್ದ ಭಾರತ 3ನೇ ಪಂದ್ಯದಲ್ಲಿ ಎದುರಾಳಿ ತಂಡವನ್ನು ಮಣ್ಣುಮುಕ್ಕಿಸುವ ಮೂಲಕ ಸರಣಿ ಆಥಿತೇಯರ ಕೈವಶವಾಗುವುದನ್ನು ತಪ್ಪಿಸಿತು. ಇದನ್ನೂ ಓದಿ: ಕನ್ನಡ ಸಿನಿಮಾದಲ್ಲಿ ನಟಿಸಿದ್ರಾ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ?: ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಮಾಜಿ ಕ್ರಿಕೆಟ್ ನಾಯಕ

    ಟಾಸ್‌ ಸೋತು ನಂತರ ಬ್ಯಾಟಿಂಗ್‌ ಮಾಡಿದ ದಕ್ಷಿಣಾಫ್ರಿಕಾ ತಂಡ ಪವರ್‌ ಪ್ಲೇನಲ್ಲಿ ಒಂದು ವಿಕೆಟ್‌ ಕಳೆದುಕೊಂಡರೂ ಸಾಧಾರಣ ಮೊತ್ತ ದಾಖಲಿಸಿತ್ತು. 36 ಎಸೆತಗಳಲ್ಲಿ 37 ರನ್‌ಗಳನ್ನು ಕಲೆಹಾಕಿತ್ತು. ನಂತರ ತನ್ನ ಬೌಲಿಂಗ್‌ ಪರಾಕ್ರಮ ಮೆರೆದ ಟೀಂ ಇಂಡಿಯಾ ಬೌಲರ್‌ಗಳು ಪ್ರಮುಖ ಬ್ಯಾಟರ್‌ಗಳನ್ನು ಉರುಳಿಸಿದರು.

    ಎಸ್‌ಎ ಕ್ಯಾಪ್ಟನ್‌ ತೆಂಬಾ ಬವುಮಾ ಪವರ್‌ ಪ್ಲೇನಲ್ಲೇ ಕೇವಲ 8 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ರೀಜಾ ಹೆನ್ರಿಕ್ಸ್ 20 ಎಸೆತಗಳಲ್ಲಿ 23 ರನ್‌ಗಳಿಸಿದರು. ಇದಕ್ಕೆ ಜೊತೆಯಾದ ಡ್ವೇನ್ ಪ್ರಿಟೊರಿಯಸ್ 16 ಎಸೆತಗಳಲ್ಲಿ 20 ರನ್‌ಗಳಿಸಿ ಪೆವಿಲಿಯನ್‌ ಸೇರಿದರು. ಇನ್ನು ಕಳೆದೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾಗಿ ಕಂಠಕವಾಗಿದ್ದ ಸ್ಫೋಟಕ ಬ್ಯಾಟ್ಸ್‌ಮನ್‌ ಡೇವಿಡ್‌ ಮಿಲ್ಲರ್‌ ಹಾಗೂ ಡುಸ್ಸೆನ್‌ ಕ್ರಮವಾಗಿ 3 ಮತ್ತು 1 ರನ್‌ಗಳಿಸಿ ಹೊರನಡೆದರು. ಹೆನ್ರಿಚ್ ಕ್ಲಾಸೆನ್ 24 ಎಸೆತಗಳಲ್ಲಿ 1 ಸಿಕ್ಸರ್‌, 3 ಬೌಂಡರಿಯೊಂದಿಗೆ 29 ರನ್‌ಗಳಿಸಿದರೆ, ಕಗಿಸೊ ರಬಾಡ 9 ರನ್‌ ಹೊಡೆದರು.

    ಪ್ರಮುಖ ಬ್ಯಾಟರ್‌ಗಳ ವೈಫಲ್ಯ ತಂಡದ ಸೋಲಿಗೆ ಕಾರಣವಾಯ್ತು. ದಕ್ಷಿಣ ಆಫ್ರಿಕಾ ಪರ ಡ್ವೇನ್ ಪ್ರಿಟೊರಿಯಸ್ 2, ಕೇಶವ್ ಮಹಾರಾಜ್ 1, ತಬ್ರೆಜ್ ಶಮ್ಸಿ 1 ಹಾಗೂ ರಬಾಡ 1 ವಿಕೆಟ್ ಪಡೆದರು.  ಇದನ್ನೂ ಓದಿ: IPL: ಪ್ರತಿ ಪಂದ್ಯದ ಪ್ರಸಾರ ಹಕ್ಕು 100 ಕೋಟಿಗೂ ಅಧಿಕ – ಇಂದು ಮತ್ತಷ್ಟು ಏರಿಕೆ ಸಾಧ್ಯತೆ

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ ಋತುರಾಜ್ ಗಾಯಕ್ವಾಡ್‌ ಹಾಗೂ ಇಶಾನ್ ಕಿಶನ್ ಅವರ ಅಬ್ಬರದ ಅರ್ಧಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾಕ್ಕೆ 180 ರನ್ ಗುರಿ ನೀಡಿತು. ಇದನ್ನೂ ಓದಿ: T20 ಸರಣಿ: ದಕ್ಷಿಣ ಆಫ್ರಿಕಾಗೆ ಸತತ 2ನೇ ಗೆಲುವು – ಹೋರಾಡಿ ಸೋತ ಭಾರತ

    ಗಾಯಕ್ವಾಡ್‌ ಇಶಾನ್‌ ಶೈನ್‌:
    ಟೀಮ್ ಇಂಡಿಯಾಕ್ಕೆ ಆರಂಭಿಕರಾದ ಗಾಯಕವಾಡ್ ಹಾಗೂ ಇಶಾನ್ ಭದ್ರ ಬುನಾದಿ ಹಾಕಿಕೊಟ್ಟರು. ಕಳೆದ 2 ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಗಾಯಕ್ವಾಡ್‌ ಇಂದಿನ ಪಂದ್ಯದಲ್ಲಿ ಆರಂಭದಿಂದಲೇ ಅತಿಥೇಯ ತಂಡದ ಬೌಲರ್‌ಗಳ ಬೆವರಿಳಿಸಿದರು. ಗಾಯಕ್ವಾಡ್‌ 34 ಎಸೆತಗಳಲ್ಲಿ 57 ರನ್‌ ಚಚ್ಚಿ 57 ರನ್ (7 ಬೌಂಡರಿ, 2 ಸಿಕ್ಸರ್‌) ಗಳಿಸಿ ತಮ್ಮ 35ನೇ ಎಸೆತದಲ್ಲಿ ಮಹಾರಾಜ್‌ಗೆ ವಿಕೆಟ್ ಒಪ್ಪಿಸಿದರು.

    ಇದೇ ವೇಳೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಇಶಾನ್‌ ಕಿಶನ್‌ ಸಹ 35 ಎಸೆತಗಳಲ್ಲಿ 54 ರನ್‌ (2 ಸಿಕ್ಸರ್‌, 5 ಬೌಂಡರಿ) ಪೇರಿಸಿದರು. ಇಬ್ಬರ ಸಾಂಘಿಕ ಬ್ಯಾಟಿಂಗ್‌ ಪ್ರರ್ಶನದಿಂದ ಟೀಂ ಇಂಡಿಯಾ 180 ರನ್‌ ಗುರಿ ನೀಡಲು ಸಾಧ್ಯವಾಯಿತು.

    ನಿಗದಿತ 20 ಓವರ್‌ಗಳಲ್ಲಿ ಟೀಂ ಇಂಡಿಯಾ 200 ರನ್‌ಗಳ ಗುರಿ ತಲುಪುವ ನಿರೀಕ್ಷೆಯಿತ್ತು. ಆದರೆ ನಂತರ ಕ್ರಮಾಂಕದಲ್ಲಿ ಬಂದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ಶ್ರೇಯಸ್‌ ಅಯ್ಯರ್‌ 14 ರನ್‌, ರಿಷಭ್‌ ಪಂತ್‌ 6 ರನ್‌ ದಿನೇಶ್‌ ಕಾರ್ತಿಕ್‌ 6 ರನ್‌ ಗಳಿಸಿದರೆ ಅಕ್ಷರ್‌ ಪಟೇಲ್‌ ಸಹ 6 ರನ್‌ಗಳಿಸಿ ಅಜೇಯರಾಗುಳಿದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಹಾರ್ದಿಕ್‌ ಪಾಂಡ್ಯ 21 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 31 ರನ್‌ ಸಿಡಿಸಿ ಅಜೇಯರಾಗುಳಿದರು.

    ಚಾಹಲ್‌, ಪಟೇಲ್‌ ಬೌಲಿಂಗ್‌ ಕಮಾಲ್‌: ತಮ್ಮ ಬೌಲಿಂಗ್‌ ದಾಳಿಯಿಂದ ದಕ್ಷಿಣ ಆಫ್ರಿಕಾದ ಪ್ರಮುಖ ಬ್ಯಾಟರ್‌ಗಳನ್ನು ಉರುಳಿಸುವಲ್ಲಿ ಯಜುವೇಂದ್ರ ಚಾಹಲ್‌ ಹಾಗೂ ಹರ್ಷಲ್‌ ಪಟೇಲ್‌ ಯಶಸ್ವಿಯಾದರು. ಚಾಹಲ್‌ 4 ಓವರ್‌ಗಳಲ್ಲಿ 20 ರನ್ ನೀಡಿ 3 ವಿಕೆಟ್‌ ಪಡೆದರೆ, ಹರ್ಷಲ್‌ ಪಟೇಲ್‌ 3.1 ಓವರ್‌ನಲ್ಲಿ 25 ರನ್‌ ನೀಡಿ 4 ವಿಕೆಟ್‌ಗಳನ್ನು ಪಡೆದರು. ಇದು ಟೀಂ ಇಂಡಿಯಾ ಗೆಲುವಿಗೆ ಸಹಕಾರಿಯಾಯ್ತು. ಅಕ್ಷರ್‌ ಪಟೇಲ್‌ 1 ವಿಕೆಟ್‌ ಪಡೆದರು.

  • T20 ಸರಣಿ: ದಕ್ಷಿಣ ಆಫ್ರಿಕಾಗೆ ಸತತ 2ನೇ ಗೆಲುವು – ಹೋರಾಡಿ ಸೋತ ಭಾರತ

    T20 ಸರಣಿ: ದಕ್ಷಿಣ ಆಫ್ರಿಕಾಗೆ ಸತತ 2ನೇ ಗೆಲುವು – ಹೋರಾಡಿ ಸೋತ ಭಾರತ

    ಮುಂಬೈ: ನಾಯಕ ಟೆಂಬಾ ಬವುಮಾ, ಹೆನ್ರಿಚ್ ಕ್ಲಾಸೆನ್ ಅವರ ಬ್ಯಾಟಿಂಗ್‌ ಆಸರೆಯಿಂದ ದಕ್ಷಿಣ ಆಫ್ರಿಕಾ ಟೀಂ ಇಂಡಿಯಾ ವಿರುದ್ಧ ನಡೆದ T20 ಸರಣಿಯ 2ನೇ ಪಂದ್ಯದಲ್ಲಿ 4 ವಿಕೆಟ್‌ಗಳ ಜಯ ಸಾಧಿಸಿತು.

    ಒಡಿಶಾದ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 148ರನ್‌ ಗಳಿಸಿ, ಎದುರಾಳಿ ದಕ್ಷಿಣ ಆಫ್ರಿಕಾಗೆ 149 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿತು. ಈ ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ನಿಗದಿತ 18.2 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 149 ರನ್‌ಗಳಿಸುವ ಮೂಲಕ ಸತತ 2ನೇ ಗೆಲುವು ದಾಖಲಿಸಿತು.

    ಆರಂಭದಲ್ಲೇ ಆಘಾತ: ಹಿಂದಿನ ಪಂದ್ಯದಂತೆಯೇ ಆರಂಭದಲ್ಲೇ ಆಘಾತ ಎದುರಿಸಿದ ದಕ್ಷಿಣ ಆಫ್ರಿಕಾ ತಂಡವು ಪವರ್‌ ಪ್ಲೇ ನಲ್ಲೇ 3 ವಿಕೆಟ್‌ಗಳನ್ನು ಕಳೆದುಕೊಂಡಿತು. 10 ಓವರ್‌ಗಳ ವರೆಗೂ ಟೀಂ ಇಂಡಿಯಾ ಬೌಲರ್‌ಗಳ ಪರಾಕ್ರಮಕ್ಕೆ ದಕ್ಷಿಣ ಆಫ್ರಿಕಾ ತಂಡ ಹೈರಾಣಾಗಿತ್ತು. ಇದರಿಂದ ಟೀಂ ಇಂಡಿಯಾ ಗೆಲುವಿನ ವಿಶ್ವಾಸವನ್ನೂ ಕಂಡಿತ್ತು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಹೆನ್ರಿಚ್ ಕ್ಲಾಸೆನ್ ನಿಧಾನಗತಿಯಲ್ಲೇ ಬ್ಯಾಟಿಂಗ್‌ ಆರಂಭಿಸಿ, ನಂತರ ಭಾರತದ ಬೌಲರ್‌ಗಳ ಬೆವರಿಳಿಸಿದರು. ಇದನ್ನೂ ಓದಿ: ಮಿಂಚಿದ ಮಿಲ್ಲರ್‌, ಡುಸ್ಸೆನ್‌ – ದಕ್ಷಿಣ ಆಫ್ರಿಕಾಗೆ 7 ವಿಕೆಟ್‌ಗಳ ಜಯ

    ಆರಂಭಿಕ ಆಟಗಾರ ತೆಂಬಾ 30 ಎಸೆತಗಳಲ್ಲಿ 1 ಸಿಕ್ಸರ್‌, 4 ಬೌಂಡರಿಯೊಂದಿಗೆ 35 ರನ್‌ಗಳಿಸಿದರೆ, ರೀಜಾ ಹೆಂಡ್ರಿಕ್ಸ್ ಹಾಗೂ ವೇಯ್ನ್ ಪಾರ್ನೆಲ್ ತಲಾ 4 ರನ್‌ಗಳಿಸಿ ಪೆವಿಲಿಯನ್‌ ಸೇರಿದರು. ಕಳೆದ ಬಾರಿ ಆಕರ್ಷಕ ಅರ್ಧ ಶತಕಗಳಿಸಿದ್ದ ಡುಸ್ಸೆನ್‌ ಕೇವಲ 1 ರನ್‌ಗಳಿಸಿ ಮಂಡಿಯೂರಿದರು.

    ನಂತರ ಹೆನ್ರಿಚ್ ಕ್ಲಾಸೆನ್ 46 ಎಸೆತಗಳಲ್ಲಿ 81 ರನ್‌ ( 5 ಸಿಕ್ಸರ್‌, 7 ಬೌಂಡರಿ) ಅಬ್ಬರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದಕ್ಕೆ ಸಾತ್‌ ನೀಡಿದ ಡೇವಿಡ್‌ ಮಿಲ್ಲರ್‌ 15 ಎಸೆತಗಳಲ್ಲಿ 20 ರನ್‌ಗಳಿಸಿ ಅಜೇಯರಾಗುಳಿದರು. ವೇಯ್ನ್ ಪಾರ್ನೆಲ್ 1 ರನ್‌ಗಳಿಸಿ ಪೆವಿಲಿಯನ್‌ ಸೇರಿದರು.

    ಉತ್ತಮ ಬೌಲಿಂಗ್‌: 4 ಓವರ್‌ ಮಾಡಿದರೂ, ಕೇವಲ 15ರನ್‌ ನೀಡಿದ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ 1 ವಿಕೆಟ್‌ ಗಳಿಸಿದರು. 4 ಓವರ್‌ಗಳಲ್ಲಿ 36 ರನ್‌ ನೀಡಿದ ಅನ್ರಿಚ್ ನಾರ್ಕಿಯಾ 2 ವಿಕೆಟ್‌ ಗಳಿಸಿ ಸೈ ಎನಿಸಿಕೊಂಡರು.

    ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾಗೆ 149 ರನ್‌ಗಳ ಗುರಿ ನೀಡಿತು. ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್‌ ಗಾಯಕ್ವಾಡ್‌ 4 ಎಸೆತಗಳಲ್ಲಿ 1 ರನ್‌ ಗಳಿಸಿ ವಿಕೆಟ್‌ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಮತ್ತೋರ್ವ ಆರಂಭಿಕನಾಗಿ ಕಣಕ್ಕಿಳಿದಿದ್ದ ಇಶಾನ್‌ ಕಿಶನ್‌ ಹಾಗೂ 2ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಶ್ರೇಯಸ್‌ ಅಯ್ಯರ್‌ ಜೊತೆಯಾಟ ಟೀಂ ಇಂಡಿಯಾಗೆ ಆಸರೆಯಾಯಿತು.

    ಇಶಾನ್‌ ಕಿಶನ್‌ 21 ಎಸೆತಗಳಲ್ಲಿ 34 ರನ್‌ (3 ಸಿಕ್ಸರ್‌, 2 ಬೌಂಡರಿ) ಕಲೆಹಾಕಿದರೆ, ಶ್ರೇಯಸ್‌ ಅಯ್ಯರ್‌ 35 ಎಸೆತಗಳಲ್ಲಿ ಜವಾಬ್ದಾರಿಯುತ 40 ರನ್‌ (2 ಬೌಂಡರಿ, 2 ಸಿಕ್ಸರ್‌) ಗಳಿಸಿ ಇನ್ನಿಂಗ್ಸ್‌ ಕಟ್ಟಿದರು.

    ನಂತರದಲ್ಲಿ ಕ್ರೀಸ್‌ಗಿಳಿದ ರಿಷಭ್‌ ಪಂತ್‌ 5 ರನ್‌, ಹಾರ್ದಿಕ್‌ ಪಾಂಡ್ಯ 9 ರನ್‌, ಅಕ್ಷರ್‌ ಪಟೇಲ್‌ 10 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಆದರೆ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಆರಂಭಿಸಿದ ದಿನೇಶ್‌ ಕಾರ್ತಿಕ್‌ 21 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 2 ಬೌಂಡರಿಯೊಂದಿಗೆ 30 ರನ್‌ ಸಿಡಿಸಿ ಗಮನ ಸೆಳೆದರು.

    ಭುವನೇಶ್ವರ್ ಕುಮಾರ್ ಬೌಲಿಂಗ್‌ ಮಿಂಚು: ಟೀಂ ಇಂಡಿಯಾದಲ್ಲಿ ಮಿಂಚಿನ ಬೌಲಿಂಗ್‌ ದಾಳಿ  ನಡೆಸಿದ ಭುವನೇಶ್ವರ್ ಕುಮಾರ್ 4 ಓವರ್‌ಗಳಲ್ಲಿ ಕೇವಲ 13 ರನ್‌ ನೀಡಿ 4 ವಿಕೆಟ್‌ಗಳನ್ನು ಪಡೆದರು.

  • ಗುಜರಾತ್‌ನ್ನು ಫೈನಲ್‍ಗೇರಿಸಿ ರಾಜಸ್ಥಾನ್ ಫ್ರಾಂಚೈಸ್‍ಗೆ Sorry ಕೇಳಿದ ಮಿಲ್ಲರ್

    ಗುಜರಾತ್‌ನ್ನು ಫೈನಲ್‍ಗೇರಿಸಿ ರಾಜಸ್ಥಾನ್ ಫ್ರಾಂಚೈಸ್‍ಗೆ Sorry ಕೇಳಿದ ಮಿಲ್ಲರ್

    ಕೋಲ್ಕತ್ತಾ: 15ನೇ ಆವೃತ್ತಿ ಐಪಿಎಲ್‍ನ ಮೊದಲ ಕ್ವಾಲಿಫೈಯರ್ ಪಂದ್ಯ ರೋಚಕವಾಗಿ ಸಾಗಿ ಕೊನೆಗೆ ಮಿಲ್ಲರ್ ಹ್ಯಾಟ್ರಿಕ್ ಸಿಕ್ಸರ್ ಮೂಲಕ ಗುಜರಾತ್ ತಂಡವನ್ನು ಫೈನಲ್‍ಗೇರಿಸಿದರು. ಆ ಬಳಿಕ ತಮ್ಮ ಮಾಜಿ ಫ್ರಾಂಚೈಸ್ ರಾಜಸ್ಥಾನ ತಂಡಕ್ಕೆ Sorry ಎಂಬ ಸಂದೇಶ ಕಳುಹಿಸಿದ್ದಾರೆ.

    ಗೆಲ್ಲಲು 189 ರನ್‍ಗಳ ಗುರಿಯನ್ನು ಪಡೆದ ಗುಜರಾತ್ ಡೇವಿಡ್ ಮಿಲ್ಲರ್ ಅವರ ಸ್ಫೋಟಕ ಅರ್ಧಶತಕ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಸಾಹಸದಿಂದ 19.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 191 ರನ್ ಹೊಡೆದು ಫೈನಲ್ ಪ್ರವೇಶಿಸಿತು. ಡೇವಿಡ್ ಮಿಲ್ಲರ್ ಅಜೇಯ 68 ರನ್ (3 ಬೌಂಡರಿ, 5 ಸಿಕ್ಸ್) ಚಚ್ಚಿ ತಮ್ಮ ಈ ಹಿಂದಿನ ಫ್ರಾಂಚೈಸ್ ರಾಜಸ್ಥಾನ ನೇರ ಫೈನಲ್‍ಗೆ ಎಂಟ್ರಿಕೊಡುವ ಕನಸಿಗೆ ಕೊಳ್ಳಿ ಇಟ್ಟರು. ಇದನ್ನೂ ಓದಿ: ಇಂದು ಎಲಿಮಿನೇಟರ್ ಪಂದ್ಯ – ಆರ್‌ಸಿಬಿಗೆ ಲಕ್ನೋ ಸವಾಲು

    ಪಂದ್ಯದ ಬಳಿಕ ಡೇವಿಡ್ ಮಿಲ್ಲರ್ ಸಾಮಾಜಿಕ ಜಾಲತಾಣದಲ್ಲಿ Sorry ರಾಯಲ್ಸ್ ಫ್ಯಾಮಿಲಿ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್‌ಗೆ ರಾಜಸ್ಥಾನ ತಂಡ ರೀಟ್ವೀಟ್ ಮಾಡಿ ಮಿಲ್ಲರ್‌ಗೆ ಟಕ್ಕರ್ ನೀಡಿದೆ. ಈ ಹಿಂದೆ 2020 ಮತ್ತು 2021ರಲ್ಲಿ ರಾಜಸ್ಥಾನ ತಂಡದ ಪರ ಡೇವಿಡ್ ಮಿಲ್ಲರ್ ಆಡಿದ್ದರು. ಆದರೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲಗೊಂಡು ಕೆಲ ಪಂದ್ಯಗಳಲ್ಲಿ ಮಾತ್ರ ಆಡುವ ಅವಕಾಶ ಪಡೆದಿದ್ದರು. ಇದನ್ನೂ ಓದಿ: ಮಗ ಅರ್ಜುನ್‍ಗೆ ಐಪಿಎಲ್‍ನಲ್ಲಿ ಸಿಗದ ಅವಕಾಶ – ಕೊನೆಗೂ ಮೌನ ಮುರಿದ ತೆಂಡೂಲ್ಕರ್

    ಆ ಬಳಿಕ 2022ರ ಮೆಗಾ ಹರಾಜಿನಲ್ಲಿ ನೂತನ ತಂಡ ಗುಜರಾತ್ ಟೈಟಾನ್ಸ್ ತಂಡ ಡೇವಿಡ್ ಮಿಲ್ಲರ್‌ರನ್ನು 3 ಕೋಟಿ ರೂ. ನೀಡಿ ಖರೀದಿಸಿತು. ಈ ಬಾರಿ ಬ್ಯಾಟಿಂಗ್‍ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಮಿಲ್ಲರ್ ಒಟ್ಟು 15 ಪಂದ್ಯಗಳಿಂದ 449 ರನ್ ಬಾರಿಸಿ ಟಾಪ್ 10 ಬ್ಯಾಟ್ಸ್‌ಮ್ಯಾನ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

     

  • ಯುವಿ ಸಿಕ್ಸರ್ ದಾಖಲೆ ಮುರಿಯದಿದ್ರೂ ‘ಸೊನ್ನೆ’ ಸುತ್ತಬೇಕಾದವ 35 ಎಸೆತದಲ್ಲಿ ಸೆಂಚುರಿ ಬಾರಿಸಿದ!

    ಯುವಿ ಸಿಕ್ಸರ್ ದಾಖಲೆ ಮುರಿಯದಿದ್ರೂ ‘ಸೊನ್ನೆ’ ಸುತ್ತಬೇಕಾದವ 35 ಎಸೆತದಲ್ಲಿ ಸೆಂಚುರಿ ಬಾರಿಸಿದ!

    – ಮೊದಲ 14 ಎಸೆತಗಳಲ್ಲಿ 18 ರನ್, ನಂತರದ 21 ಎಸೆತದಲ್ಲಿ 82 ರನ್

    ಪೊಚೆಸ್ಟ್ರೂಮ್ (ದಕ್ಷಿಣ ಆಫ್ರಿಕಾ): ಬ್ಯಾಟಿಂಗ್ ಗೆ ಬಂದಿದ್ದು 10ನೇ ಓವರ್. ಎದುರಿಸಿದ 2ನೇ ಎಸೆತದಲ್ಲಿ ಕೈಚೆಲ್ಲಿದ ಕ್ಯಾಚ್, ಆರಂಭದ 14 ಎಸೆತಗಳಲ್ಲಿ 18 ರನ್, ನಂತರದ 21 ಎಸೆತಗಳಲ್ಲಿ 82 ರನ್, ಒಂದೇ ಓವರ್ ನಲ್ಲಿ 5 ಸಿಕ್ಸರ್, ಸ್ವಲ್ಪದರಲ್ಲೇ ತಪ್ಪಿದ ಯುವರಾಜ್ ಸಿಂಗ್ ದಾಖಲೆಯನ್ನು ಸರಿಗಟ್ಟುವ ಅವಕಾಶ. ಕೇವಲ 35 ಎಸೆತಗಳಲ್ಲಿ ಸೆಂಚುರಿ ಬಾರಿಸಿದ ಕೀರ್ತಿ ಡೇವಿಡ್ ಮಿಲ್ಲರ್ ಪಾಲಾಯ್ತು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಗೌರವವನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡರು. ಹೌದು, ದಕ್ಷಿಣ ಆಫ್ರಿಕಾ ತಂಡದ ಆಟಗಾರ ಡೇವಿಡ್ ಮಿಲ್ಲರ್ ಬಾಂಗ್ಲಾ ತಂಡದ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

    2ನೇ ಬಾಲಲ್ಲಿ ಶೂನ್ಯಕ್ಕೆ ಔಟಾಗಬೇಕಿತ್ತು!: ತನಗೆ ಬಾಂಗ್ಲಾ ವಿಕೆಟ್ ಕೀಪರ್ ನೀಡಿದ ಜೀವದಾನವನ್ನು ವರದಾನವಾಗಿ ಪರಿಗಣಿಸಿದ ಡೇವಿಡ್ ಮಿಲ್ಲರ್ ಆರಂಭದಲ್ಲಿ ಮುಗ್ಗರಿಸುತ್ತಲೇ ಬ್ಯಾಟಿಂಗ್ ಮಾಡಿದರು. 10ನೇ ಓವರ್ ನ ಕೊನೆಯ ಎಸೆತದಲ್ಲಿ ಬ್ಯಾಟಿಂಗ್ ಗೆ ಕ್ರೀಸ್ ಗೆ ಆಗಮಿಸಿದ್ದ ಮಿಲ್ಲರ್ ಯಾವುದೇ ರನ್ ಗಳಿಸಲಿಲ್ಲ.

    ಓವರ್ ಮುಗಿದ ಹಿನ್ನೆಲೆಯಲ್ಲಿ ಹಶೀಂ ಆಮ್ಲ ಸ್ಟ್ರೈಕ್ ಗೆ ಬಂದರು. 11ನೇ ಓವರ್ ನ ಮೊದಲ ಎಸೆತದಲ್ಲಿ ಹಶೀಂ ಆಮ್ಲ 1 ರನ್ ಗಳಿಸಿ ಮಿಲ್ಲರ್ ಗೆ ಸ್ಟ್ರೈಕ್ ನೀಡಿದರು. ಈ ಓವರ್ ಎಸೆಯುತ್ತಿದ್ದ ರೂಬೆಲ್ ಹುಸೈನ್ ನಂತರದ ಎಸೆತವನ್ನು ಶಾರ್ಟ್ ಬಾಲ್ ಮಾಡಿದರು. ಈ ವೇಳೆ ಬಾಲ್ ಮಿಲ್ಲರ್ ಗ್ಲೌಸ್ ಸವರಿಕೊಂಡು ವಿಕೆಟ್ ಕೀಪರ್ ಬಳಿಗೆ ಹೋಯಿತು. ವಿಕೆಟ್ ಕೀಪರ್ ಗ್ಲೌಸ್ ಗೆ ಕ್ಯಾಚ್ ಹೋದರೂ ಬ್ಯಾಲೆನ್ಸ್ ತಪ್ಪಿದ ಕಾರಣ ಮುಷ್ಫಿಕುರ್ ಕ್ಯಾಚ್ ಕೈ ಚೆಲ್ಲಿದರು. ನಂತರ ಹಲವಾರು ಎಸೆತಗಳಲ್ಲಿ ಮಿಲ್ಲರ್ ಮುಗ್ಗರಿಸಿದರು.

    ಆರಂಭದಲ್ಲಿ ನನಗೆ ಬ್ಯಾಟ್ ಮಾಡುವಾಗ ಸಮಸ್ಯೆ ಎದುರಾಯಿತು. ಆರಂಭದ 10 ಬಾಲ್ ನಲ್ಲಿ ನಾನು 2 ಬಾರಿ ಔಟಾಗಬೇಕಿತ್ತು. ಆದರೆ ನಾನು ಬಚಾವಾದೆ. ಆದರೆ ಕೊನೆಯಲ್ಲಿ ನನ್ನ ಬ್ಯಾಟಿಂಗ್ ನನಗೆ ತೃಪ್ತಿ ಹಾಗೂ ಸಂತೋಷ ತಂದು ಕೊಟ್ಟಿದೆ ಎಂದು ಹೇಳಿದರು. ಒಟ್ಟು 36 ಎಸೆತಗಳನ್ನು ಎದುರಿಸಿದ ಡೇವಿಡ್ ಮಿಲ್ಲರ್ 9 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿ ಅಜೇಯರಾಗಿ ಉಳಿದರು.

    ಯುವಿ ದಾಖಲೆ ಸರಿಗಟ್ಟಿದವರಿಲ್ಲ!: ಇನ್ನಿಂಗ್ಸ್‍ನ 19ನೇ ಓವರ್ ನ ಆರಂಭದ 5 ಎಸೆತಗಳನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ಬಾರಿಸಿದ್ದರು. ಕೊನೆಯ ಎಸೆತವನ್ನೂ ಅವರು ಸಿಕ್ಸರ್ ಬಾರಿಸುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಈ ಮೂಲಕ ಯುವರಾಜ್ ಸಿಂಗ್ ಒಂದೇ ಓವರ್ ಗೆ ಬಾರಿಸಿದ 6 ಸಿಕ್ಸರ್ ಗಳ ದಾಖಲೆಯನ್ನು ಮಿಲ್ಲರ್ ಸರಿಗಟ್ಟುವ ಅವಕಾಶವೂ ಇತ್ತು. ಆದರೆ ಕೊನೆಯ ಎಸೆತದಲ್ಲಿ ಕೇವಲ 1 ರನ್ ಮಾತ್ರ ಗಳಿಸುವುದು ಸಾಧ್ಯವಾಯ್ತು.

    ಮಿಲ್ಲರ್ ಆಮ್ಲ ಜೊತೆಯಾಟ: ಮಿಲ್ಲರ್ ಹಾಗೂ ಹಶೀಂ ಆಮ್ಲ ಜೋಡಿ ನಾಲ್ಕನೇ ವಿಕೆಟ್‍ಗೆ ಕೇವಲ 41 ಎಸೆತಗಳ ನೆರವಿನಿಂದ 79 ರನ್‍ಗಳ ಜೊತೆ ಆಟವನ್ನು ನೀಡಿದರು. ಆಮ್ಲ ಈ ಪಂದ್ಯದಲ್ಲಿ 51 ಎಸೆತಗಳಲ್ಲಿ 85 ಗಳಿಸಿ ಮಿಲ್ಲರ್‍ಗೆ ಉತ್ತಮ ಜೊತೆ ಆಟವನ್ನು ನೀಡಿದರು. 85 ರನ್ ಗಳ ಈ ಇನ್ನಿಂಗ್ಸ್ ನಲ್ಲಿ 1 ಸಿಕ್ಸರ್ ಹಾಗೂ 11 ಬೌಂಡರಿಗಳಿದ್ದವು.

    ಈ ಹಿಂದಿನ ಸೆಂಚುರಿ ದಾಖಲೆ!: ಈ ಹಿಂದೆ ಟಿ20 ಮಾದರಿಯಲ್ಲಿ ಅತ್ಯಂತ ವೇಗದ ಶತಕವನ್ನು ಸಿಡಿಸಿದ ದಾಖಲೆಯನ್ನು ದಕ್ಷಿಣ ಆಫ್ರಿಕಾದ ರಿಚರ್ಡ್ ಲೆವಿ ಹೊಂದಿದ್ದರು. ರಿಚರ್ಡ್ ಲೆವಿ 2012ರಲ್ಲಿ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಕೇವಲ 45 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು. ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಡೇವಿಡ್ ಮಿಲ್ಲರ್ ಸ್ಫೋಟಕ ಶತಕದಿಂದ ನಿಗದಿತ 20 ಓವರ್ ಗಳಲ್ಲಿ 224 ರನ್‍ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ದಕ್ಷಿಣ ಆಫ್ರಿಕಾ ಬೃಹತ್ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾ 141 ರನ್‍ಗಳಿಗೆ ಆಲೌಟಾಯಿತು. ಈ ಮೂಲಕ ದಕ್ಷಿಣ ಆಫ್ರಿಕಾ 83 ರನ್‍ಗಳ ಗೆಲುವು ಸಾಧಿಸಿತು.

    ಟಿ20ಯಲ್ಲಿ ದಾಖಲಾಗಿರುವ ಅತ್ಯಂತ ವೇಗದ ಟಾಪ್ 5 ಶತಕಗಳ ವಿವರ ಇಂತಿದೆ. ಡೇವಿಡ್ ಮಿಲ್ಲರ್- 101, 35 ಎಸೆತ, ರಿಚರ್ಡ್ ಲೆವಿ – 117, 45 ಎಸೆತ, ಪ್ಲಾಪ್ ಡೂಪ್ಲೆಸಿಸ್ – 119, 46 ಎಸೆತ, ಕರ್ನಾಟಕದ ಲೋಕೇಶ್ ರಾಹುಲ್ – 110, 46 ಎಸೆತ, ಕ್ರಿಸ್ ಗೇಲ್ – 100, 47 ಎಸೆತ ಹಾಗೂ ಅರೋನ್ ಫಿಂಚ್ – 156, 47 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ.

    ಐಪಿಎಲ್‍ನಲ್ಲಿ ದಾಖಲೆ: 2013ರಲ್ಲಿ ಕ್ರಿಸ್ ಗೇಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಕೇವಲ 30 ಎಸೆತಗಳಲ್ಲಿ ಶತಕವನ್ನು ಪೂರೈಸಿದ್ದರು. ಅಲ್ಲದೇ 2004 ರಲ್ಲಿ ಆಂಡ್ರೂ ಸೈಮಂಡ್ಸ್ 34 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು.