Tag: David miller

  • ರನ್‌ ಹೊಳೆಯಲ್ಲಿ ತೇಲಾಡಿದ ಭಾರತ – ಸಂಜು, ತಿಲಕ್‌ ಶತಕಗಳ ಅಬ್ಬರಕ್ಕೆ ದಾಖಲೆಗಳು ಧೂಳಿಪಟ

    ರನ್‌ ಹೊಳೆಯಲ್ಲಿ ತೇಲಾಡಿದ ಭಾರತ – ಸಂಜು, ತಿಲಕ್‌ ಶತಕಗಳ ಅಬ್ಬರಕ್ಕೆ ದಾಖಲೆಗಳು ಧೂಳಿಪಟ

    ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆ ದ 4ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ (Sanju Samson) ಹಾಗೂ ತಿಲಕ್‌ ವರ್ಮಾ ದ್ವಿಶತಕ ಜೊತೆಯಾಟಕ್ಕೆ ದಾಖಲೆಗಳು ಧೂಳಿಪಟವಾಗಿವೆ.

    ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 4 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು. ಮೊದಲ ಓವರ್‌ನಲ್ಲಿ ಕೇವಲ 4 ರನ್‌ ಕಲೆಹಾಕಿದ ಭಾರತ 2ನೇ ಓವರ್‌ನಿಂದಲೇ ಎದುರಾಳಿ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿತು. ಇದನ್ನೂ ಓದಿ: Champions Trophy | ಪಾಕ್‌ ಆಕ್ರಮಿತ ಕಾಶ್ಮೀರ ಪ್ರವಾಸಕ್ಕೆ ಬಿಸಿಸಿಐ ಆಕ್ಷೇಪ, ನೋ ಎಂದ ಐಸಿಸಿ

    ಹರಿಣರ ಪಡೆಯ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಬೆಂಡೆತ್ತಿದ ಸಂಜು ಮತ್ತು ಅಭಿಷೇಕ್‌ ಶರ್ಮಾ ಜೋಡಿ ಮೊದಲ ವಿಕೆಟ್‌ಗೆ 35 ಎಸೆತಗಳಲ್ಲಿ 73 ರನ್‌ ಜೊತೆಯಾಟ ನೀಡಿತು. ಈ ವೇಳೆ 200 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅಭಿಷೇಕ್‌ ಶರ್ಮಾ 18 ಎಸೆತಗಳಲ್ಲಿ 4 ಸಿಕ್ಸರ್‌, 3 ಬೌಂಡರಿಗಳೊಂದಿಗೆ 36 ರನ್‌ ಬಾರಿಸಿ ಔಟಾದರು. ಇದನ್ನೂ ಓದಿ: ಟೀಂ ಇಂಡಿಯಾಕ್ಕೆ ಉಗ್ರರ ದಾಳಿಯದ್ದೇ ಭೀತಿ – ಐಸಿಸಿ ಬಳಿ ಇರೋದು ಮೂರೇ ಆಯ್ಕೆ

    ಬಳಿಕ ಕ್ರೀಸ್‌ಗೆ ಬಂದ ತಿಲಕ್‌ ವರ್ಮಾ (Tilak Varma) ಸಂಜು ಜೊತೆಗೂಡಿ ಅಬ್ಬರಿಸಲು ಶುರು ಮಾಡಿದರು. ಕೊನೆಯವರೆಗೂ ವಿಕೆಟ್‌ ಬಿಟ್ಟುಕೊಡದ ಈ ಜೋಡಿ ಕೇವಲ 86 ಎಸೆತಗಳಲ್ಲಿ ಬರೋಬ್ಬರಿ 210 ರನ್‌ ಪೇರಿಸಿತು. ಇದರೊಂದಿಗೆ 20 ಓವರ್‌ಗಳಲ್ಲಿ ಭಾರತ ಕೇವಲ 1 ವಿಕೆಟ್‌ ನಷ್ಟಕ್ಕೆ 283 ರನ್‌ ಗಳಿಸಿ, ಎದುರಾಳಿ ತಂಡಕ್ಕೆ 284 ರನ್‌ ಗಳ ಗುರಿ ನೀಡಿತು. ಇದನ್ನೂ ಓದಿ: Ranji Trophy: ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್‌ ಕಿತ್ತು ದಾಖಲೆ ಬರೆದ ಅಂಶುಲ್‌ ಕಾಂಬೋಜ್‌

    ಸ್ಫೋಟಕ ಶತಕ ಸಿಡಿಸಿದ 3ನೇ ಭಾರತೀಯ
    ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದ ತಿಲಕ್‌ ವರ್ಮಾ ಸತತ 2ನೇ ಅಂತಾರಾಷ್ಟ್ರೀಯ ಟಿ20 ಶತಕ ಸಿಡಿಸಿ ಮಿಂಚಿದರು. 255.31 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ತಿಲಕ್‌ 41 ಎಸೆತಗಳಲ್ಲೇ 6 ಬೌಂಡರಿ, 9 ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿದರು. ಈ ಮೂಲಕ ವೇಗದ ಶತಕ ಸಿಡಿಸಿದ 3ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ 35 ಎಸೆತಗಳಲ್ಲಿ, ಬಾಂಗ್ಲಾದೇಶದ ವಿರುದ್ಧ ಸಂಜು ಸ್ಯಾಮ್ಸನ್‌ 40 ಎಸೆತಗಳಲ್ಲಿ ಶತಕ ಸಿಡಿಸಿ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ. ಒಟ್ಟಾರೆ 47 ಎಸೆತಗಳನ್ನು ಎದುರಿಸಿದ ತಿಲಕ್‌ 10 ಸಿಕ್ಸರ್‌, 9 ಬೌಂಡರಿಗಳೊಂದಿಗೆ ಬರೋಬ್ಬರಿ 120 ರನ್‌ ಚಚ್ಚಿದರು.

    ಸಂಜು ವಿಶೇಷ ಸಾಧನೆ:
    ಸರಣಿಯ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ, ಕಳೆದ ಎರಡು ಪಂದ್ಯಗಳಲ್ಲಿ ಡಕ್‌ಔಟ್‌ ಆಗಿದ್ದ ಆರಂಭಿಕ ಸಂಜು ಸ್ಯಾಮ್ಸನ್‌ ಅಂತಿಮ ಪಂದ್ಯದಲ್ಲಿ 51 ಎಸೆತಗಳಲ್ಲಿ 6 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿದರು. ಈ ಮೂಲಕ ಒಂದೇ ವರ್ಷದಲ್ಲಿ 3 ಟಿ20 ಶತಕ ಸಿಡಿಸಿದ ಮೊದಲ ಆಟಗಾರ ಎಂಬ ವಿಶೇಷ ಸಾಧನೆ ಮಾಡಿದ್ದಾರೆ. ಒಟ್ಟಾರೆ 200 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಸಂಜು ಸ್ಯಾಮ್ಸನ್‌ 56 ಎಸೆತಗಳಲ್ಲಿ 109 ರನ್‌ (9 ಸಿಕ್ಸರ್‌, 6 ಬೌಂಡರಿ) ಸಿಡಿಸಿ ಅಜೇಯರಾಗುಳಿದರು.

  • ತವರಲ್ಲಿ ಹರಿಣರ ದರ್ಬಾರ್‌ – ಭಾರತದ ವಿರುದ್ಧ ದಕ್ಷಿಣ ಆಫ್ರಿಕಾಗೆ 3 ವಿಕೆಟ್‌ಗಳ ರೋಚಕ ಜಯ

    ತವರಲ್ಲಿ ಹರಿಣರ ದರ್ಬಾರ್‌ – ಭಾರತದ ವಿರುದ್ಧ ದಕ್ಷಿಣ ಆಫ್ರಿಕಾಗೆ 3 ವಿಕೆಟ್‌ಗಳ ರೋಚಕ ಜಯ

    ಗ್ಕೆಬರ್ಹಾ: ಟ್ರಿಸ್ಟನ್‌ ಸ್ಟಬ್ಸ್‌ (Tristan Stubbs) ಅಮೋಘ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಟೀಂ ಇಂಡಿಯಾ (Team India) ವಿರುದ್ಧ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿದೆ.

    ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
    ಟೀಂ ಇಂಡಿಯಾ ಸ್ಪಿನ್ನರ್‌ ವರುಣ್‌ ಚಕ್ರವರ್ತಿ (Varun Chakravarthy) 13ನೇ ಓವರ್‌ನಲ್ಲಿ ಬೌಲಿಂಗ್‌ನಲ್ಲಿದ್ದರು. ಮೊದಲ ಎರಡು ಎಸೆತಗಳಲ್ಲಿ ಹೆನ್ರಿಚ್‌ ಕ್ಲಾಸೆನ್‌, ಡೇವಿಡ್‌ ಮಿಲ್ಲರ್‌ ದೈತ್ಯ ಆಟಗಾರರಿಗೆ ಪೆವಿಲಿಯನ್‌ ದಾರಿ ತೋರಿದರು. ಇದರಿಂದ ಭಾರತದ ಗೆಲುವು ಸುಲಭ ಎಂದೇ ಭಾವಿಸಲಾಗಿತ್ತು. ಆದ್ರೆ ಕೊನೇ ಮೂರು ಓವರ್‌ಗಳಲ್ಲಿ ಟ್ರಿಸ್ಟನ್‌ ಸ್ಟಬ್ಸ್‌ ಹಾಗೂ ಜೆರಾಲ್ಡ್‌ ಕೋಟ್ಜಿ ಅವರ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವು ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಯಿತು. ಈ ಜೋಡಿ 17,18,19ನೇ ಓವರ್‌ನಲ್ಲೇ ಕ್ರಮವಾಗಿ 12, 12, 16 ರನ್‌ ಚಚ್ಚಿದ್ದರ ಪರಿಣಾಮ ಗೆಲುವು ದಕ್ಷಿಣ ಆಫ್ರಿಕಾದ ಪಾಲಾಯಿತು.

    ಮೊದಲು ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 126 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 19 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 128 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

    ದಕ್ಷಿಣ ಆಫ್ರಿಕಾ ಪರ ಟ್ರಿಸ್ಟನ್‌ ಸ್ಟಬ್ಸ್‌ ಅಜೇಯ 47 ರನ್‌, ರೀಝಾ ಹೆಂಡ್ರಿಕ್ಸ್‌ 24 ರನ್‌, ಜೆರಾಲ್ಡ್‌ ಕೋಟ್ಜಿ ಅಜೇಯ 19 ರನ್‌, ರಿಯಾನ್‌ ರಿಕ್ಲೆಂಟನ್‌ 13 ರನ್‌ ಗಳಿಸಿದರು.

    ಸೋತ ಪಂದ್ಯದಲ್ಲಿ ಮಿಂಚಿದ ವರುಣ್‌:
    ಭಾರತ ಸೋತ ದಕ್ಷಿಣ ಆಫ್ರಿಕಾ ವಿರುದ್ಧ ಸೋತರು ಸ್ಪಿನ್‌ ಮಾಂತ್ರಿಕ ವರುಣ್‌ ಚಕ್ರವರ್ತಿ ಪ್ರಮುಖ ವಿಕೆಟ್‌ ಕಿತ್ತು ಸೈ ಎನಿಸಿಕೊಂಡರು. 4 ಓವರ್‌ಗಳಲ್ಲಿ ಕೇವಲ 17 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಪಡೆದು ಮಿಂಚಿದರು. ಅರ್ಷ್‌ದೀಪ್‌ ಸಿಂಗ್‌, ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್‌ ಪಡೆದರು.

    ಇನ್ನೂ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ, 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 126 ರನ್‌ ಗಳಿಸಿ, ದಕ್ಷಿಣ ಆಫ್ರಿಕಾಗೆ 125 ರನ್‌ಗಳ ಗುರಿ ನೀಡಿತ್ತು. ಆರಂಭದಲ್ಲೇ ವಿಕೆಟ್‌ ಕಳೆದಕೊಂಡು ಸಂಕಷ್ಟಕ್ಕೀಡಾದ ಟೀಂ ಇಂಡಿಯಾಕ್ಕೆ ಅಕ್ಷರ್‌ ಪಟೇಲ್‌ ನೆರವಾಗಿದ್ದರು. 21 ಎಸೆತಗಳಲ್ಲಿ 27 ರನ್‌ ಬಾರಿಸಿ, ಉತ್ಸಾಹ ತುಂಬಿದ್ದರು. ಈ ವೇಳೆ ಹಾರ್ದಿಕ್‌ ಪಾಂಡ್ಯ ಹೊಡೆದ ಸ್ಟ್ರೈಟ್‌ಲೆಂತ್‌ ಬಾಲ್‌ ಬೌಲರ್‌ ಕೈಗೆ ತಾಕಿ ವಿಕೆಟ್‌ಗೆ ಬಡಿದು ರನೌಟ್‌ಗೆ ತುತ್ತಾದರು.

    ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ ಹೋರಾಟದಿಂದ ಭಾರತ 120 ರನ್‌ಗಳ ಗಡಿ ದಾಟಿತು. ಟೀಂ ಇಂಡಿಯಾ ಪರ ಹಾರ್ದಿಕ್‌ ಪಾಂಡ್ಯ 31 ರನ್‌ ಗಳಿಸಿದ್ರೆ, ಅಕ್ಷರ್‌ ಪಟೇಲ್‌ 27 ರನ್‌, ತಿಲಕ್‌ ವರ್ಮಾ 20 ರನ್‌ ಗಳಿಸಿದ್ರು, ಉಳಿದವರು ಅಲ್ಪ ಮೊತ್ತಕ್ಕೆ ಔಟಾದರು.

  • ಸೂರ್ಯನ ಸ್ಟನ್ನಿಂಗ್‌ ಕ್ಯಾಚ್‌ ಸುತ್ತ ವಿವಾದದ ಹುತ್ತ – ಅಂಪೈರ್‌ ವಿರುದ್ಧ ಸಿಡಿದ ಆಫ್ರಿಕಾ ಫ್ಯಾನ್ಸ್‌!

    ಸೂರ್ಯನ ಸ್ಟನ್ನಿಂಗ್‌ ಕ್ಯಾಚ್‌ ಸುತ್ತ ವಿವಾದದ ಹುತ್ತ – ಅಂಪೈರ್‌ ವಿರುದ್ಧ ಸಿಡಿದ ಆಫ್ರಿಕಾ ಫ್ಯಾನ್ಸ್‌!

    ಬ್ರಿಡ್ಜ್‌ಟೌನ್‌: 11 ವರ್ಷಗಳ ನಂತರ ಕೊನೆಗೂ ಭಾರತ ಐಸಿಸಿ ಟ್ರೋಫಿಗೆ ಮು‌ತ್ತಿಟ್ಟಿದೆ. 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಚಾಂಪಿಯನ್‌ ಟ್ರೋಫಿ ಮುಡಿಗೇರಿಸಿಕೊಂಡಿದ್ದ ಭಾರತ ಕೊನೆಗೂ ವಿಶ್ವಕಪ್‌ಗೆ (T20 World Cup 2024) ಮುತ್ತಿಟ್ಟು ವಿಶೇಷ ಸಾಧನೆಗೆ ಪಾತ್ರವಾಗಿದೆ. ಆದ್ರೆ ಕೊನೆಯಲ್ಲಿ ಪಂದ್ಯದ ಗತಿಯನ್ನೇ ಬದಲಿಸಿದ ಸೂರ್ಯಕುಮಾರ್‌ ಯಾದವ್‌ (Suryakumar Yadav) ಅವರ ಸ್ಟನಿಂಗ್‌ ಕ್ಯಾಚ್‌ ವಿವಾದಕ್ಕೆ ಕಾರಣವಾಗಿದೆ.

    ಹೌದು. 15ನೇ ಓವರ್‌ನಲ್ಲಿ ಅಕ್ಷರ್‌ ಪಟೇಲ್‌ ಬೌಲಿಂಗ್‌ಗೆ ಹೆನ್ರಿಕ್‌ ಕ್ಲಾಸೆನ್‌ 24 ರನ್‌ ಚಚ್ಚಿದ್ದರು. ಇದರಿಂದ ಟೀಂ ಇಂಡಿಯಾ ಸೋಲು ಖಚಿತ ಎಂದೇ ಭಾವಿಸಲಾಗಿತ್ತು. ಆ ನಂತರ ಜಸ್‌ಪ್ರೀತ್‌ ಬುಮ್ರಾ, ಹಾರ್ದಿಕ್‌ ಪಾಂಡ್ಯ ಹಾಗೂ ಹರ್ಷ್‌ದೀಪ್‌ ಸಿಂಗ್‌ ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.

    ಕೊನೇ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್‌ ಬೇಕಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಡೇವಿಡ್‌ ಮಿಲ್ಲರ್‌ (David Miller) ಮೊದಲ ಎಸೆತವನ್ನೇ ಸಿಕ್ಸರ್‌ ಬಾರಿಸಲು ಯತ್ನಿಸಿದ್ದರು. ಈ ವೇಳೆ ಲಾಂಗ್‌ ಆನ್‌ನಲ್ಲಿದ್ದ ಸೂರ್ಯಕುಮಾರ್‌ ಯಾದವ್‌ ಬೌಂಡರಿ-ರೋಪ್ ಕ್ಯಾಚ್ (Surya Clean Catch) ಪಡೆಯುವ ಮೂಲಕ ಮಿಲ್ಲರ್‌ಗೆ ಪೆವಿಲಿಯನ್‌ ಹಾದಿ ತೋರಿದರು. ಡೇವಿಡ್‌ ಮಿಲ್ಲರ್‌ ಔಟಾಗುವ ವೇಳೆಗೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ನೆಲ ಕಚ್ಚಿದ್ದರು. ಹಾಗಾಗಿ ಈ ಒಂದು ಕ್ಯಾಚ್‌ ಭಾರತಕ್ಕೆ ವಿಶ್ವಕಪ್‌ ಗೆಲುವಿಗೆ ಕಾರಣವಾಯಿತು. ಆದ್ರೆ ಸೂರ್ಯಕುಮಾರ್‌ ಹಿಡಿದ ಈ ಕ್ಯಾಚ್‌ ವಿವಾದಕ್ಕೆ ಕಾರಣವಾಗಿದೆ.

    ದಕ್ಷಿಣ ಆಫ್ರಿಕಾದ ಮಾಜಿ ಆಟಗಾರರು, ಕ್ರಿಕೆಟ್‌ ತಜ್ಷರು ಹಾಗೂ ಕ್ರಿಕೆಟ್‌ ಅಭಿಮಾನಿಗಳು ಸೂರ್ಯ ಕ್ಯಾಚ್‌ ರೋಫ್‌ ಮಾಡುವ ಮುನ್ನ ಕಾಲು ಬೌಂಡರಿ ಲೈನ್‌ಗೆ ತಗುಲಿದೆ. ಸೂರ್ಯನ ಕ್ಯಾಚ್‌ ಅನ್ನು 3ನೇ ಅಂಪೈರ್‌ ವಿವಿಧ ಕೋನಗಳಿಂದ ಪರಿಶೀಲಿಸಬೇಕಿತ್ತು. ಆದ್ರೆ ಟಿವಿ ಅಂಪೈರ್‌ ಕೇವಲ ಎರಡು ಮೂರು ಕೋನಗಳಲ್ಲಿ ಪರಿಶೀಲಿಸಿ ಭಾರತ ತಂಡದ ಪರವಾಗಿ ತೀರ್ಪು ನೀಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತ ವೀಡಿಯೋ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ವಿಶ್ವ ವಿಜೇತ ಭಾರತ- ಟಿ20 ವಿಶ್ವಕಪ್‌ಗೆ ಈಗ ಟೀಂ ಇಂಡಿಯಾ ಬಾಸ್‌

    ಶನಿವಾರ ನಡೆದ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ ಗೆಲ್ಲಲು 177 ರನ್‌ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ (South Africa) ಅಂತಿಮವಾಗಿ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 169 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಇದನ್ನೂ ಓದಿ: ವಿಶ್ವಕಪ್‌ ಜೊತೆಗೆ ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದ್ದೀರಿ: ಟೀಂ ಇಂಡಿಯಾಕ್ಕೆ ಮೋದಿ ಅಭಿನಂದನೆ

    ಕೊನೇ ಓವರ್‌ನಲ್ಲಿ ಆಗಿದ್ದೇನು?
    ಕೊನೆಯ 6 ಎಸೆತಗಳಲ್ಲಿ 16 ರನ್‌ ಬೇಕಿತ್ತು. ಪಾಂಡ್ಯ ಎಸೆದ ಮೊದಲ ಎಸೆತವನ್ನು ಮಿಲ್ಲರ್‌ ಸಿಕ್ಸರ್‌ಗೆ ಯತ್ನಿಸಿದರು. ಆದರೆ ಬೌಂಡರಿ ಗೆರೆಯ ಬಳಿ ಸೂರ್ಯಕುಮಾರ್‌ ಯಾದವ್‌ ಅವರು ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಮಿಲ್ಲರ್‌ 21 ರನ್‌ ಗಳಿಸಿ ಔಟ್‌ ಆದರು. ನಂತರ ಬಂದ ರಬಡಾ ಮೊದಲ ಎಸೆತ ಬೌಂಡರಿಗೆ ಅಟ್ಟಿದರು. ನಂತರ ಎಸೆತದಲ್ಲಿ ಲೆಗ್‌ಬೈ ಮೂಲಕ 1 ರನ್‌ ಬಂತು. ನಂತರ 1 ರನ್‌ ಒಂದು ವೈಡ್‌ ಬಂತು. ಐದನೇ ಎಸೆತದಲ್ಲಿ ಸಿಕ್ಸ್‌ ಸಿಡಿಸಲು ಹೋದ ರಬಡಾ ಕ್ಯಾಚ್‌ ನೀಡಿ ಔಟಾದ ಬೆನ್ನಲ್ಲೇ ಸಂಭ್ರಮಾಚರಣೆ ಆರಂಭವಾಯಿತು. ಕೊನೆಯ ಎಸೆತದಲ್ಲಿ ಒಂದು ರನ್‌ ಬಂತು. ಈ ಮೂಲಕ ಭಾರತ ಎರಡನೇ ಬಾರಿ ವಿಶ್ವಕಪ್‌ ಚಾಂಪಿಯನ್‌ ಪಟ್ಟ ಅಲಂಕರಿಸಿತು.

  • IPL 2024: ಕೊನೇ ಓವರ್ ಥ್ರಿಲ್ಲರ್ – ರೋಚಕ ಪಂದ್ಯದಲ್ಲಿ ಡೆಲ್ಲಿಗೆ 4 ರನ್‌ಗಳ ಜಯ; ಹೋರಾಡಿ ಸೋತ ಟೈಟಾನ್ಸ್!

    IPL 2024: ಕೊನೇ ಓವರ್ ಥ್ರಿಲ್ಲರ್ – ರೋಚಕ ಪಂದ್ಯದಲ್ಲಿ ಡೆಲ್ಲಿಗೆ 4 ರನ್‌ಗಳ ಜಯ; ಹೋರಾಡಿ ಸೋತ ಟೈಟಾನ್ಸ್!

    ನವದೆಹಲಿ: ರಶೀದ್ ಖಾನ್ ಅವರ ಸಿಕ್ಸರ್, ಬೌಂಡರಿ ಆಟದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 4 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

    ಕೊನೇ ಓವರ್ ಥ್ರಿಲ್ಲಿಂಗ್?
    ಕೊನೇ ಓವರ್‌ನಲ್ಲಿ ಗುಜರಾತ್ ಗೆಲುವಿಗೆ 19 ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿದ್ದ ರಶೀದ್ ಖಾನ್ ಮೊದಲ 2 ಎಸೆತಗಳಲ್ಲಿ ಭರ್ಜರಿ ಬೌಂಡರಿ ಬಾರಿಸಿದ್ದರು. 3-4ನೇ ಎಸೆತದಲ್ಲಿ ರನ್ ಕದಿಯುವಲ್ಲಿ ವಿಫಲರಾದರು. 2 ಎಸೆತಗಳಲ್ಲಿ 11 ರನ್ ಬೇಕಿದ್ದಾಗಲೇ 5ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ್ದರು, ಇದರಿಂದ ಕೊನೇ ಕ್ಷಣದವರೆಗೂ ಗುಜರಾತ್‌ಗೆ ಗೆಲುವಿನ ಆಸೆ ಜೀವಂತವಾಗಿತ್ತು. ಆದ್ರೆ ಕೊನೇ ಎಸೆತದಲ್ಲಿ ಬೌಂಡರಿಗೆ ಯತ್ನಿಸಿದ ರಶೀದ್ ಖಾನ್ ಒಂದು ರನ್ ಕದಿಯುವಲ್ಲಿ ಮಾತ್ರ ಸಫಲರಾದರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್‌ಗೆ 4 ರನ್‌ಗಳ ರೋಚಕ ಗೆಲುವು ಸಿಕ್ಕಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್ ಬಾರಿಸಿತ್ತು. ಈ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಚೇಸಿಂಗ್ ಆರಂಭಿಸಿದ ಗುಜರಾತ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಉತ್ತಮ ರನ್ ಕಲೆಹಾಕಿತ್ತು. ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್ ಅವರ ಸ್ಫೋಟಕ ಬ್ಯಾಟಿಂಗ್ ತಂಡಕ್ಕೆ ನೆರವಾಗಿತ್ತು. ಇವರಿಬ್ಬರ ವಿಕೆಟ್ ಉರುಳುತ್ತಿದ್ದಂತೆ ರನ್ ವೇಗವೂ ಕಡಿಮೆಯಾಯಿತು.

    ಟೈಟಾನ್ಸ್ ಪರ ಸಾಯಿ ಸುದರ್ಶನ್ 65 ರನ್ (39 ಎಸೆತ, 2 ಸಿಕ್ಸರ್, 7 ಬೌಂಡರಿ), ಡೇವಿಡ್ ಮಿಲ್ಲರ್ 55 ರನ್ (23 ಎಸೆತ, 3 ಸಿಕ್ಸರ್, 6 ಬೌಂಡರಿ), ವೃದ್ಧಿಮಾನ್ ಸಾಹಾ 39 ರನ್, ಶುಭಮನ್ ಗಿಲ್ 6 ರನ್, ಅಜ್ಮತುಲ್ಲಾ ಒಮರ್ಜಾಯ್ 1 ರನ್, ಎಂ. ಶಾರೂಖ್ ಖಾನ್ 8 ರನ್, ರಾಹುಲ್ ತೆವಾಟಿಯಾ 8 ರನ್, ಸಾಯಿ ಕಿಶೋರ್ 13 ರನ್, ರಶೀದ್ ಖಾನ್ 21 ರನ್ ಗಳಿಸಿದರು.

    ಟಾಸ್ ಸೋತು ಮೊದಲು ಕ್ರೀಸ್‌ಗಿಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ಫೋಟಕ ಆರಂಭ ಪಡೆದರೂ ಮಧ್ಯಮ ಕ್ರಮಾಂಕದಲ್ಲಿ ನಿಧಾನಗತಿಯ ಬ್ಯಾಟಿಂಗ್‌ನಿಂದ 200 ರನ್‌ಗಳ ಗಡಿ ತಲುಪುವುದೂ ಕಷ್ಟವಾಗಿತ್ತು. ಆದ್ರೆ ಕೊನೇ 2 ಓವರ್‌ಗಳಲ್ಲಿ ರಿಷಭ್ ಪಂತ್ ಹಾಗೂ ಟ್ರಿಸ್ಟಾನ್ ಸ್ಟಬ್ಸ್ ಅವರ ಸ್ಫೋಟಕ ಇನ್ನಿಂಗ್ಸ್‌ನಿಂದಾಗಿ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ಕೊನೇ 10 ಎಸೆತಗಳಲ್ಲಿ ಸ್ಟಬ್ಸ್ ಮತ್ತು ಪಂತ್ ಜೋಡಿ ಬರೋಬ್ಬರಿ 51 ರನ್ ಚಚ್ಚಿತ್ತು. ಇದರಲ್ಲಿ ಬರೋಬ್ಬರಿ 6 ಸಿಕ್ಸರ್ ಹಾಗೂ 3 ಬೌಂಡರಿಗಳೂ ಸೇರಿದ್ದವು.

    ಡೆಲ್ಲಿ ಕ್ಯಾಪಿಟಲ್ಸ್ ಪರ ರಿಷಭ್ ಪಂತ್ 88 ರನ್ (43 ಎಸೆತ, 8 ಸಿಕ್ಸರ್, 5 ಬೌಂಡರಿ), ಅಕ್ಷರ್ ಪಟೇಲ್ 66 ರನ್ (43 ಎಸೆತ, 4 ಸಿಕ್ಸರ್. 5 ಬೌಂಡರಿ), ಟ್ರಿಸ್ಟಾನ್ ಸ್ಟಬ್ಸ್ 26 ರನ್ (2 ಸಿಕ್ಸರ್, 3 ಬೌಂಡರಿ), ಜೇಕ್ ಫ್ರೇಸರ್-ಮ್ಯಾಕ್‌ಗಾರ್ಕ್ 23 ರನ್, ಪೃಥ್ವಿ ಶಾ 11 ರನ್, ಶಾಯ್ ಹೋಪ್ 5 ರನ್ ಗಳಿಸಿದರು. ಗುಜರಾತ್ ಟೈಟಾನ್ಸ್ ಪರ ಮಾರಕ ದಾಳಿ ನಡೆಸಿದ ಸಂದೀಪ್ ವಾರಿಯರ್ಸ್ 3 ವಿಕೆಟ್ ಕಿತ್ತರೆ, ನೂರ್ ಅಹ್ಮದ್ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

  • ಹೈದರಾಬಾದ್‌ ಪಾಲಿಗೆ ಕಿಲ್ಲರ್‌ ಆದ ಮಿಲ್ಲರ್‌ – ಗುಜರಾತ್‌ ಟೈಟಾನ್ಸ್‌ಗೆ 7 ವಿಕೆಟ್‌ಗಳ ಜಯ

    ಹೈದರಾಬಾದ್‌ ಪಾಲಿಗೆ ಕಿಲ್ಲರ್‌ ಆದ ಮಿಲ್ಲರ್‌ – ಗುಜರಾತ್‌ ಟೈಟಾನ್ಸ್‌ಗೆ 7 ವಿಕೆಟ್‌ಗಳ ಜಯ

    – ಮಿಂಚಿದ ಮಿಲ್ಲರ್‌, ಮೋಹಿತ್‌ ಶರ್ಮಾ – ಗಿಲ್‌ ನಾಯಕತ್ವದಲ್ಲಿ 2ನೇ ಜಯ

    ಅಹಮದಾಬಾದ್‌: ಡೇವಿಡ್‌ ಮಿಲ್ಲರ್‌, ಸಾಯಿ ಸುದರ್ಶನ್‌ ಹಾಗೂ ಶುಭಮನ್‌ ಗಿಲ್‌ (Shubman Gill) ಸಂಘಟಿತ ಬ್ಯಾಟಿಂಗ್‌ ಹಾಗೂ ಮೋಹಿತ್‌ ಶರ್ಮಾ ಬೌಲಿಂಗ್‌ ದಾಳಿ ನೆರವಿನಿಂದ ಗುಜರಾತ್‌ ಟೈಟಾನ್ಸ್‌ ತಂಡವು ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳಲ್ಲಿ 2ನೇ ಗೆಲುವು ದಾಖಲಿಸಿ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ.

    ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 162 ರನ್‌ ಗಳಿಸಿತ್ತು. 163 ರನ್‌ಗಳ ಗುರಿ ಬೆನ್ನತ್ತಿದ ಟೈಟಾನ್ಸ್‌ (Gujarat Titans) ಪಡೆ 19.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 168 ರನ್‌ ಗಳಿಸಿ ಗೆಲುವು ಸಾಧಿಸಿತು. ಸ್ಫೋಟಕ ಬ್ಯಾಟರ್‌ ಡೇವಿಡ್‌ ಮಿಲ್ಲರ್‌ ಕೊನೇ ಓವರ್‌ ಮೊದಲ ಎಸೆತದಲ್ಲೇ ಅದ್ಧೂರಿ ಸಿಕ್ಸರ್‌ ಬಾರಿಸುವ ಮೂಲಕ ಗೆಲುವಿನ ಕೇಕೆ ಹಾಕಿದರು.

    ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಎಚ್​ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಕಳೆದ ಪಂದ್ಯದಲ್ಲಿ ಮುಂವೈ ವಿರುದ್ಧ ದಾಖಲೆಯ 277 ರನ್​ ಬಾರಿಸಿದ್ದ ಎಸ್​ಆರ್​ಎಚ್ ಈ ಪಂದ್ಯದಲ್ಲಿ ಆರಂಭದಿಂದಲೇ ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಮಯಾಂಕ್ ಅಗರ್ವಾಲ್​ 16 ರನ್​ಗೆ ಔಟಾದರೆ, ಟ್ರಾವಿಸ್​ ಹೆಡ್​ 19 ರನ್​ಗೆ ಬೌಲ್ಡ್ ಆದರು. ಅಭಿಷೇಕ್ ಶರ್ಮಾ 29 ರನ್, ಏಡೆನ್​ ಮಾರ್ಕ್ರಮ್​ 17 ರನ್​ಗೆ ಸೀಮಿತಗೊಂಡರು. ಹೆನ್ರಿಚ್ ಕ್ಲಾಸೆನ್​ 24 ಹಾಗೂ ಶಾಬಾಜ್‌ ಅಹಮದ್​ 22 ರನ್ ಬಾರಿಸಿದರು. ಕೊನೆಯಲ್ಲಿ ಅಬ್ದುಲ್​ ಸಮದ್ 29 ರನ್ ಬಾರಿಸುವ ಮೂಲಕ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ತಂಡಕ್ಕೆ ನೆರವಾದರು.

    ಗುಜರಾತ್‌ಗೆ ಸುಲಭ ತುತ್ತಾದ ಹೈದರಾಬಾದ್‌:
    ಸ್ಪರ್ಧಾತ್ಮಕ ಗುರಿ ಎದುರಿಸಲು ಕಣಕ್ಕಿಳಿದ ಗುಜರಾತ್​ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 36 ರನ್ ಬಾರಿಸಿತು. ವೃದ್ಧಿಮಾನ್​ ಸಾಹ 25 ರನ್ ಬಾರಿಸಿದರೆ ನಾಯಕ ಶುಭ್​ಮನ್​ ಗಿಲ್​ 36 ರನ್​ ಕೊಡುಗೆ ನೀಡಿದರು. 3ನೇ ಕ್ರಮಾಂಕದಲ್ಲಿ ಆಡಿದ ಸಾಯಿ ಸುದರ್ಶನ್​ 45 ರನ್ ಬಾರಿಸಿದರೆ ಡೇವಿಡ್ ಮಿಲ್ಲರ್​ ಅಜೇಯ 44 ರನ್​ ಬಾರಿಸುವ ಮೂಲಕ ಸುಲಭ ಗೆಲುವು ತಂದುಕೊಟ್ಟರು. ವಿಜಯ್ ಶಂಕರ್​ 14 ರನ್​ ಬಾರಿಸಿ ಕ್ರೀಸ್‌ನಲ್ಲಿ ಉಳಿದರು.

  • ಅರ್ಷ-ಆವೇಶ ಘಾತುಕ ಬೌಲಿಂಗ್‌ – ಶ್ರೇಯಸ್‌, ಸುದರ್ಶನ್‌ ಅರ್ಧಶತಕಗಳ ಮಿಂಚು – ಭಾರತಕ್ಕೆ 8 ವಿಕೆಟ್‌ಗಳ ಜಯ

    ಅರ್ಷ-ಆವೇಶ ಘಾತುಕ ಬೌಲಿಂಗ್‌ – ಶ್ರೇಯಸ್‌, ಸುದರ್ಶನ್‌ ಅರ್ಧಶತಕಗಳ ಮಿಂಚು – ಭಾರತಕ್ಕೆ 8 ವಿಕೆಟ್‌ಗಳ ಜಯ

    ಜೋಹಾನ್ಸ್‌ಬರ್ಗ್‌: ಅರ್ಷ್‌ದೀಪ್‌ ಸಿಂಗ್‌ (Arshdeep Singh) ಮತ್ತು ಅವೇಶ್​ ಖಾನ್​ ಅವರ ಘಾತಕ ಬೌಲಿಂಗ್​ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ತಂಡ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲಿಗೆ ತುತ್ತಾಗಿದೆ. ಯುವ ಆರಂಭಿಕ ಸಾಯಿ ಸುದರ್ಶನ್‌ ಹಾಗೂ ಶ್ರೇಯಸ್‌ ಅಯ್ಯರ್‌ (Shreyas Iyer) ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಭಾರತ (Team India) 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-0 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

    ಜೋಹಾನ್ಸ್​ಬರ್ಗ್​ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಸೂಪರ್‌ ಸಂಡೇ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ದಕ್ಷಿಣ ಆಫ್ರಿಕಾ (South Africa) ತಂಡ 27.3 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್‌ ಆಯಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಭಾರತ 16.4 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 117 ರನ್‌ ಗಳಿಸಿ ಜಯ ಸಾಧಿಸಿತು.

    ಭಾರತದ ಪರ ತಾಳ್ಮೆಯ ಆಟವಾಡಿದ ಯುವ ಆರಂಭಿಕ ಸಾಯಿ ಸುದರ್ಶನ್‌ (Sai Sudharsan) ಹಾಗೂ ಶ್ರೇಯಸ್‌ ಅಯ್ಯರ್‌ ಅರ್ಧಶತಕಗಳ ಕೊಡುಗೆ ನೀಡಿದರು. ಶ್ರೇಯಸ್‌ ಅಯ್ಯರ್‌ 45 ಎಸೆತಗಳಲ್ಲಿ 52 ರನ್‌ (6 ಬೌಂಡರಿ, 1 ಸಿಕ್ಸರ್‌) ಗಳಿಸಿ ಔಟಾದರೆ, ಸಾಯಿ ಸುದರ್ಶನ್‌ 43 ಎಸೆತಗಳಲ್ಲಿ 55 ರನ್‌ (9 ಬೌಂಡರಿ, 43 ಎಸೆತ) ಬಾರಿಸಿ ಅಜೇಯರಾಗುಳಿದರು. ಇದರಿಂದ ಭಾರತ 16.4 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 117 ರನ್​ ಬಾರಿಸಿ ಗೆಲುವು ದಾಖಲಿಸಿತು. ಸರಣಿಯ ದ್ವಿತೀಯ ಪಂದ್ಯ ಡಿಸೆಂಬರ್​ 19 ಮಂಗಳವಾರ ನಡೆಯಲಿದೆ.

    ದಾಖಲೆ ಬರೆದ ಅರ್ಷ್‌ದೀಪ್‌:
    ವೇಗಿ ಅರ್ಷ್‌ದೀಪ್‌ ಸಿಂಗ್ ಹರಿಣರ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್​ ಪಡೆಯುವ ಮೂಲಕ ಭಾರತ ಪರ ಹೊಸ ದಾಖಲೆಯೊಂದನ್ನು ಬರೆದರು. ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್​ ಕಿತ್ತ ಮೊದಲ ಭಾರತೀಯ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದ್ರೆ, ಒಟ್ಟಾರೆಯಾಗಿ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್​ ಪಡೆದ ಭಾರತೀಯ ಬೌಲರ್​ಗಳ ಪಟ್ಟಿಯಲ್ಲಿ ಅವರಿಗೆ 4ನೇ ಸ್ಥಾನವನ್ನೂ ಪಡೆದುಕೊಂಡರು. ಮಾಜಿ ಕ್ರಿಕೆಟಿಗ ಸುನೀಲ್​ ಜೋಶಿ ಮೊದಲಿಗರಾಗಿದ್ದಾರೆ. ಜೋಶಿ 1999ರಲ್ಲಿ ನಡೆದಿದ್ದ ಪಂದ್ಯದಲ್ಲಿ ಕೇವಲ 6 ರನ್​ಗೆ 5 ವಿಕೆಟ್​ ಕಿತ್ತು ಮಿಂಚಿದ್ದರು. ಯಜುವೇಂದ್ರ ಚಾಹಲ್​ (22 ರನ್​ಗೆ 5) ಮತ್ತು ರವೀಂದ್ರ ಜಡೇಜಾ (33 ರನ್​ಗೆ 5) ನಂತರದ ಸ್ಥಾನಗಳಲ್ಲಿದ್ದಾರೆ.

    ಅರ್ಷ-ಆವೇಶ ನಡುವೆ ಹಣಾ-ಹಣಿ:
    ಅರ್ಷ್‌ದೀಪ್‌ ಸಿಂಗ್‌ಗೆ ಜಿದ್ದಿಗೆ ಬಿದ್ದವರಂತೆ ಪೈಪೋಟಿ ನೀಡಿದ ಅವೇಶ್​ ಖಾನ್​ ತಮ್ಮ ಆವೇಶಭರಿತ ಬೌಲಿಂಗ್​ ದಾಳಿ ನಡೆಸುವ ಮೂಲಕ 27 ರನ್​ ನೀಡಿ 4 ವಿಕೆಟ್​ ಕಿತ್ತರು. ಕುಲ್ದೀಪ್‌ ಯಾದವ್‌ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು. ಉಭಯ ಬೌಲರ್​ಗಳ ಘಾತುಕ ಬೌಲಿಂಗ್​ ದಾಳಿಯನ್ನು ಎದುರಿಸಲು ವಿಫಲವಾದ ಡೇವಿಡ್​ ಮಿಲ್ಲರ್​ 2 ರನ್‌, ಹೆನ್ರಿಕ್ ಕ್ಲಾಸೆನ್ 6 ರನ್‌, ನಾಯಕ ಐಡೆನ್​ ಮಾರ್ಕ್ರಮ್ 12 ರನ್‌ ಗಳಿಸಿದ್ರೆ ವಿಯಾನ್ ಮುಲ್ಡರ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಹೆಂಡ್ರಿಕ್ಸ್ ಶೂನ್ಯ ಸುತ್ತಿದರು.

    ಫೆಹ್ಲುಕ್ವಾಯೊ ಹೋರಾಟ ವ್ಯರ್ಥ:
    58ರನ್​ಗೆ 7 ವಿಕೆಟ್​ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡ 100 ರನ್‌ ಗಳಿಸುವುದೂ ಕಷ್ಟವಾಗಿತ್ತು. ಆದ್ರೆ ಬೌಲರ್​ ಆಂಡಿಲೆ ಫೆಹ್ಲುಕ್ವಾಯೊ. ಭಾರತೀಯ ಬೌಲರ್​ಗಳ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ 2 ಸಿಕ್ಸರ್​ ಮತ್ತು 3 ಬೌಂಡರಿ ಬಾರಿಸಿ 33 ರನ್​ ಗಳಿಸಿದರು. ಇಂದು ಇದೇ ತಂಡದ ಪರ‌ ಗಳಿಸಿದ ಅಧಿಕ ರನ್‌ ಆಗಿತ್ತು. ಆದ್ರೆ ಭಾರತದ ಎದುರು ಈ ಆಟ ವ್ಯರ್ಥವಾಯಿತು.

  • ರೋಚಕ ಕದನದಲ್ಲಿ ಹರಿಣರ ಬೇಟೆಯಾಡಿದ ಕಾಂಗರೂ ಪಡೆ – ಫೈನಲ್‌ನಲ್ಲಿ ಭಾರತ-ಆಸೀಸ್‌ ಮುಖಾಮುಖಿ

    ರೋಚಕ ಕದನದಲ್ಲಿ ಹರಿಣರ ಬೇಟೆಯಾಡಿದ ಕಾಂಗರೂ ಪಡೆ – ಫೈನಲ್‌ನಲ್ಲಿ ಭಾರತ-ಆಸೀಸ್‌ ಮುಖಾಮುಖಿ

    * 6 ಕ್ಯಾಚ್‌, 1 ರನೌಟ್‌ ಕೈಚೆಲ್ಲಿದ ದಕ್ಷಿಣ ಆಫ್ರಿಕಾ
    * ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ
    * ಡೇವಿಡ್‌ ಮಿಲ್ಲರ್‌ ಶತಕದ ಏಕಾಂಗಿ ಹೋರಾಟ ವ್ಯರ್ಥ
    * 8ನೇ ಬಾರಿ ಆಸ್ಟ್ರೇಲಿಯಾ ವಿಶ್ವಕಪ್‌ ಫೈನಲ್‌ಗೆ ಎಂಟ್ರಿ

    ಕೋಲ್ಕತ್ತಾ: ಕೊನೆಯವರೆಗೂ ರೋಚಕತೆಯಿಂದ ಕೂಡಿದ್ದ ಜಿದ್ದಾ-ಜಿದ್ದಿ ಕಣದಲ್ಲಿ ಬಲಿಷ್ಠ ಆಸ್ಟ್ರೇಲಿಯಾ (Australia) ತಂಡ ದಕ್ಷಿಣ ಆಫ್ರಿಕಾ (South Africa) ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಆಸ್ಟ್ರೇಲಿಯಾ 8ನೇ ಬಾರಿಗೆ ವಿಶ್ವಕಪ್‌ ಫೈನಲ್‌ ಪ್ರವೇಶಿಸಿದ್ದು, ನವೆಂಬರ್‌ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ (Team India) ವಿರುದ್ಧ ಸೆಣಸಲಿದೆ.

    ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ 2ನೇ ಸೆಮಿಫೈನಲ್‌ ಪಂದ್ಯವು ಅತ್ಯಂತ ರೋಚಕತೆಯಿಂದ ಕೂಡಿತ್ತು. ಆರಂಭದಲ್ಲೇ ಸ್ಫೋಟಕ ಇನ್ನಿಂಗ್ಸ್‌ ಕಟ್ಟಲು ಮುಂದಾದ ಟ್ರಾವಿಸ್‌ ಹೆಡ್‌ ಹಾಗೂ ಡೇವಿಡ್‌ ವಾರ್ನರ್‌ ಜೋಡಿ 6.1 ಓವರ್‌ಗಳಲ್ಲಿ 60 ರನ್‌ಗಳ ಜೊತೆಯಾಟ ನೀಡಿತ್ತು. ಅಲ್ಲದೇ ಟ್ರಾವಿಸ್‌ ಹೆಡ್‌ ಸ್ಫೋಟಕ ಬ್ಯಾಟಿಂಗ್‌ ಹರಿಣರನ್ನು ಕಂಗಾಲಾಗುವಂತೆ ಮಾಡಿತ್ತು. 15 ಓವರ್‌ಗಳಲ್ಲಿ 109 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದ ಆಸೀಸ್‌ ಪಡೆ ಬಳಿಕ ಹರಿಣರ ಸ್ಪಿನ್‌ ದಾಳಿಯಿಂದ ನಿಧಾನಗತಿಯ ಬ್ಯಾಟಿಂಗ್‌ಗೆ ಮುಂದಾಯಿತು. ಪ್ರಮುಖ ಬ್ಯಾಟರ್‌ಗಳು ಅಲ್ಪ ಮೊತ್ತಕ್ಕೆ ವಿಕೆಟ್‌ ಕಳೆದುಕೊಂಡ ಪರಿಣಾಮ ಪಂದ್ಯದ ಫಲಿತಾಂಶವೇ ಬುಡಮೇಲಾಗಿತ್ತು. ಒಂದೊಂದು ರನ್‌ ಕದಿಯಲೂ ಆಸೀಸ್‌ ತಂಡ ಹೆಣಗಾಡಿತ್ತು. ದಕ್ಷಿಣ ಆಫ್ರಿಕಾ ತಂಡವೇ ಗೆಲುವು ಸಾಧಿಸುವ ಸಾಧ್ಯತೆಗಳಿತ್ತು. ಆದ್ರೆ ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ತಂಡದ ಸೋಲಿಗೆ ಕಾರಣವಾಯಿತು.

    2015ರ ವಿಶ್ವಕಪ್‌ ಟೂರ್ನಿಯಲ್ಲೂ ದಕ್ಷಿಣ ಆಫ್ರಿಕಾ, ಕಿವೀಸ್‌ ವಿರುದ್ಧ ಇದೇ ರೀತಿ ವಿರೋಚಿತ ಸೋಲಿಗೆ ತುತ್ತಾಗಿತ್ತು. ಕ್ರಿಕೆಟ್‌ ದಿಗ್ಗಜ ಎಬಿಡಿ ವಿಲಿಯರ್ಸ್‌ ಸೇರಿದಂತೆ ಇತರ ಆಟಗಾರರು ಮೈದಾನದಲ್ಲೇ ಕಣ್ಣೀರಿಟ್ಟಿದ್ದರು. ಅಂದು ಮಳೆಯ ಕಾರಣದಿಂದಾಗಿ ಓವರ್‌ ಕಡಿತಗೊಳಿಸಲಾಗಿತ್ತು. ದಕ್ಷಿಣ ಆಫ್ರಿಕಾ 43 ಓವರ್‌ಗಳಲ್ಲಿ 5 ವಿಕೆಟ್‌ಗೆ 281 ರನ್‌ ಗಳಿಸಿತ್ತು. ಆ ನಂತರವೂ ಮಳೆಬಂದಿದ್ದರಿಂದ ಡಕ್ವರ್ತ್‌ ಲೂಯಿಸ್‌ ನಿಯಮದ ಅನ್ವಯ ನ್ಯೂಜಿಲೆಂಡ್‌ಗೆ 43 ಓವರ್‌ಗಳಲ್ಲೇ 298 ರನ್‌ಗಳ ಗುರಿ ನೀಡಲಾಗಿತ್ತು. ಆದ್ರೆ ಹರಿಣರ ಬಳಗದ ಕಳಪೆ ಫೀಲ್ಡಿಂಗ್‌ನಿಂದಾಗಿ ವಿರೋಚಿತ ಸೋಲಿಗೆ ತುತ್ತಾದರು. ಇಂದು ಸಹ ಆರಂಭದಲ್ಲೇ ಕ್ಯಾಚ್‌ಗಳನ್ನ ಕೈಚೆಲ್ಲಿದರು, ಅಲ್ಲದೇ ಅಗ್ರ ಕ್ರಮಾಂಕದ ಬ್ಯಾಟರ್ಸ್‌ಗಳ ವೈಫಲ್ಯದಿಂದ ಮತ್ತೊಮ್ಮೆ ಚೋಕರ್ಸ್‌ ಹಣೆಪಟ್ಟಿಯೊಂದಿಗೆ 2023ರ ವಿಶ್ವಕಪ್‌ಗೆ ವಿದಾಯ ಹೇಳಿತು.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ದಕ್ಷಿಣ ಆಫ್ರಿಕಾ 49.4 ಓವರ್‌ಗಳಲ್ಲಿ 212 ರನ್‌ಗಳಿಗೆ ಆಲೌಟ್‌ ಆಯಿತು. 213 ರನ್‌ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ 47.2 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 215 ರನ್‌ ಗಳಿಸಿ ಗೆಲುವು ಸಾಧಿಸಿತು. ಆಸೀಸ್‌ ಪರ ಟ್ರಾವಿಸ್‌ ಹೆಡ್‌ 62 ರನ್‌ (48 ಎಸೆತ, 9 ಬೌಂಡರಿ, 2 ಸಿಕ್ಸರ್)‌, ಡೇವಿಡ್‌ ವಾರ್ನರ್‌ 29 ರನ್‌ (18 ಎಸೆತ, 4 ಸಿಕ್ಸರ್‌, 1 ಬೌಂಡರಿ), ಸ್ವೀವನ್‌ ಸ್ಮಿತ್‌ 30 ರನ್‌ (62 ಎಸೆತ ), ಮಾರ್ನಸ್‌ ಲಾಬುಶೇನ್‌ 18 ರನ್‌, ಮ್ಯಾಕ್ಸ್‌ವೆಲ್‌ 1 ರನ್‌ ಗಳಿಸಿದ್ರೆ ಮಿಚೆಲ್‌ ಮಾರ್ಷ್‌ ಶೂನ್ಯ ಸುತ್ತಿದರು. ಕೊನೆಯಲ್ಲಿ ಜವಾಬ್ದಾರಿ ಬ್ಯಾಟಿಂಗ್‌ ಮಾಡಿದ ಜಾಸ್‌ ಇಂಗ್ಲಿಸ್‌ 28 ರನ್‌, ಮಿಚೆಲ್‌ ಸ್ಟಾರ್ಕ್‌ 16 ರನ್‌ ಹಾಗೂ ಪ್ಯಾಟ್‌ ಕಮ್ಮಿನ್ಸ್‌ 14 ರನ್‌ ಗಳಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

    ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ ಕೋಟ್ಜಿ, ತಬ್ರೈಜ್ ಶಮ್ಸಿ ತಲಾ 2 ವಿಕೆಟ್‌ ಕಿತ್ತರೆ, ಕಾಗಿಸೊ ರಬಾಡ, ಏಡನ್‌ ಮಾರ್ಕ್ರಮ್‌, ಕೇಶವ್‌ ಮಹಾರಾಜ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ರೋಚಕ ಕದನದಲ್ಲಿ ಹರಿಣರ ಬೇಟೆಯಾಡಿದ ಕಾಂಗರೂ ಪಡೆ – ಫೈನಲ್‌ನಲ್ಲಿ ಭಾರತ-ಆಸೀಸ್‌ ಮುಖಾಮುಖಿ

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಆಸ್ಟ್ರೇಲಿಯಾ ಬೌಲರ್‌ಗಳ ಮಾರಕ ದಾಳಿಗೆ ನಲುಗಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಹೀನಾಯ ಪ್ರದರ್ಶನ ತೋರಿ ಪೆವಿಲಿಯನ್ ಸೇರಿಕೊಂಡರು. ಪಂದ್ಯದ ಆರಂಭದಿಂದಲೂ ಒಂದು ಅರ್ಧಶತಕವನ್ನೂ ಗಳಿಸದ ನಾಯಕ ತೆಂಬಾ ಬವುಮಾ ಶೂನ್ಯಕ್ಕೆ ಔಟಾಗಿ ನಿರ್ಮಿಸಿದರು. ಈ ಬೆನ್ನಲ್ಲೇ ಲೀಗ್ ಸುತ್ತಿನಲ್ಲಿ 4 ಶತಕ ಸಿಡಿಸಿ ಮಿಂಚಿದ್ದ ಕ್ವಿಂಟನ್ ಡಿಕಾಕ್ ಕೇವಲ 3 ರನ್‌ಗಳಿಗೆ, ರಾಸಿ ವಾನ್ ಡೇರ್ ಡುಸ್ಸೆನ್ 6 ರನ್ ಮತ್ತು ಏಡನ್ ಮಾರ್ಕ್ರಮ್ 10 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಹೊರನಡೆದರು. 11.5 ಓವರ್‌ಗಳಾದರೂ ಕೇವಲ 24 ರನ್ ಗಳಿಸಿದ ದಕ್ಷಿಣ ಆಫ್ರಿಕಾ ತಂಡ ಪ್ರಮುಖ 4 ವಿಕೆಟ್‌ಗಳನ್ನೂ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಇದನ್ನೂ ಓದಿ: ಇನ್ಮುಂದೆ ನಿಮ್ಮ ಅದ್ಭುತ ಪ್ರತಿಭೆ ಪ್ರದರ್ಶಿಸಬಹುದು – ಬಾಬರ್‌ ಆಜಂ ಹೊಗಳಿದ ಬೆಂಗ್ಳೂರು ಮೂಲದ ರಚಿನ್‌

    ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. 113 ಎಸೆತಗಳಲ್ಲಿ ಈ ಜೋಡಿ 95 ರನ್‌ಗಳ ಜೊತೆಯಾಟ ನೀಡಿತು. ಅಷ್ಟರಲ್ಲೇ ಟ್ರಾವಿಸ್ ಹೆಡ್ ಸ್ಪಿನ್ ದಾಳಿಗೆ ಹೆನ್ರಿಚ್ ಕ್ಲಾಸೆನ್ ವಿಕೆಟ್ ಒಪ್ಪಿಸಿದರು. ಆ ಬಳಿಕ ಡೇವಿಡ್ ಮಿಲ್ಲರ್ ಒಬ್ಬರೇ ಏಕಾಂಗಿ ಹೋರಾಟ ನಡೆಸಿದರು. ಕೊನೆಯವರೆಗೂ ಹೋರಾಡಿದ ಮಿಲ್ಲರ್ 101 ರನ್ (5 ಸಿಕ್ಸರ್, 8 ಬೌಂಡರಿ) ಸಿಡಿಸಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ತಂಡ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಇದರ ಹೊರತಾಗಿ ಜೆರಾಲ್ಡ್ ಕೋಟ್ಜಿ 19 ರನ್, ಕೇಶವ್ ಮಹಾರಾಜ್ 4 ರನ್, ಕಾಗಿಸೋ ರಬಾಡ, 10 ರನ್, ತಬ್ರೈಜ್ ಶಮ್ಸಿ 1 ರನ್ ಗಳಿಸಿದರು. ವೈಡ್ ನೋಬಾಲ್‌ನಿಂದ ತಂಡಕ್ಕೆ ಹೆಚ್ಚುವರಿ 11 ರನ್ ಸೇರ್ಪಡೆಯಾಯಿತು. ಹರಿಣರ ವಿರುದ್ಧ ಮಾರಕ ದಾಳಿ ನಡೆಸಿದ ಆಸೀಸ್ ಪರ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಜೋಶ್ ಹ್ಯಾಜಲ್ವುಡ್ ಮತ್ತು ಟ್ರಾವಿಸ್ ಹೆಡ್ ತಲಾ 2 ವಿಕೆಟ್ ಪಡೆದು ಮಿಂಚಿದರು.

  • World Cup Semifinal: ದಕ್ಷಿಣಾ ಆಫ್ರಿಕಾಗೆ ಪಿಲ್ಲರ್‌ ಆದ ಮಿಲ್ಲರ್‌ ಶತಕ – ಆಸೀಸ್‌ಗೆ 213 ರನ್‌ಗಳ ಗುರಿ

    World Cup Semifinal: ದಕ್ಷಿಣಾ ಆಫ್ರಿಕಾಗೆ ಪಿಲ್ಲರ್‌ ಆದ ಮಿಲ್ಲರ್‌ ಶತಕ – ಆಸೀಸ್‌ಗೆ 213 ರನ್‌ಗಳ ಗುರಿ

    ಕೋಲ್ಕತ್ತಾ: ಡೇವಿಡ್‌ ಮಿಲ್ಲರ್‌ (David Miller) ಜವಾಬ್ದಾರಿಯುತ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ (South Africa) ತಂಡ 49.4 ಓವರ್‌ಗಳಲ್ಲಿ 212 ರನ್‌ ಗಳಿಸಿದ್ದು, ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ 213 ರನ್‌ಗಳ ಸುಲಭ ಗುರಿ ನೀಡಿದೆ.

    ಇಲ್ಲಿನ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆಯುತ್ತಿರುವ ವಿಶ್ವಕಪ್‌ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಆಸ್ಟ್ರೇಲಿಯಾ (Australia) ಬೌಲರ್‌ಗಳ ಮಾರಕ ದಾಳಿಗೆ ನಲುಗಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಹೀನಾಯ ಪ್ರದರ್ಶನ ತೋರಿ ಪೆವಿಲಿಯನ್‌ ಸೇರಿಕೊಂಡರು.

    ಪಂದ್ಯದ ಆರಂಭದಿಂದಲೂ ಒಂದು ಅರ್ಧಶತಕವನ್ನೂ ಗಳಿಸದ ನಾಯಕ ತೆಂಬಾ ಬವುಮಾ ಶೂನ್ಯಕ್ಕೆ ಔಟಾಗಿ ನಿರ್ಮಿಸಿದರು. ಈ ಬೆನ್ನಲ್ಲೇ ಲೀಗ್‌ ಸುತ್ತಿನಲ್ಲಿ 4 ಶತಕ ಸಿಡಿಸಿ ಮಿಂಚಿದ್ದ ಕ್ವಿಂಟನ್‌ ಡಿಕಾಕ್‌ (Quinton de Kock) ಕೇವಲ 3 ರನ್‌ಗಳಿಗೆ, ರಾಸಿ ವಾನ್‌ ಡೇರ್‌ ಡುಸ್ಸೆನ್‌ 6 ರನ್‌ ಮತ್ತು ಏಡನ್‌ ಮಾರ್ಕ್ರಮ್‌ 10 ರನ್‌ಗಳಿಗೆ ವಿಕೆಟ್‌ ಒಪ್ಪಿಸಿ ಹೊರನಡೆದರು. 11.5 ಓವರ್‌ಗಳಾದರೂ ಕೇವಲ 24 ರನ್‌ ಗಳಿಸಿದ ದಕ್ಷಿಣ ಆಫ್ರಿಕಾ ತಂಡ ಪ್ರಮುಖ 4 ವಿಕೆಟ್‌ಗಳನ್ನೂ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.

    ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್‌ ಕ್ಲಾಸೆನ್‌ (Heinrich Klaasen) ಮತ್ತು ಡೇವಿಡ್‌ ಮಿಲ್ಲರ್‌ (David Miller) ಜೊತೆಗೂಡಿ ಉತ್ತಮ ಇನ್ನಿಂಗ್ಸ್‌ ಕಟ್ಟಲು ಪ್ರಯತ್ನಿಸಿದರು. 113 ಎಸೆತಗಳಲ್ಲಿ ಈ ಜೋಡಿ 95 ರನ್‌ಗಳ ಜೊತೆಯಾಟ ನೀಡಿತು. ಅಷ್ಟರಲ್ಲೇ ಟ್ರಾವಿಸ್‌ ಹೆಡ್‌ ಸ್ಪಿನ್‌ ದಾಳಿಗೆ ಹೆನ್ರಿಚ್‌ ಕ್ಲಾಸೆನ್‌ ವಿಕೆಟ್‌ ಒಪ್ಪಿಸಿದರು. ಆ ಬಳಿಕ ಡೇವಿಡ್‌ ಮಿಲ್ಲರ್‌ ಒಬ್ಬರೇ ಏಕಾಂಗಿ ಹೋರಾಟ ನಡೆಸಿದರು. ಕೊನೆಯವರೆಗೂ ಹೋರಾಡಿದ ಮಿಲ್ಲರ್‌ 101 ರನ್‌ (5 ಸಿಕ್ಸರ್‌, 8 ಬೌಂಡರಿ) ಸಿಡಿಸಿದರು. ಇದರಿಂದಾಗಿ ದಕ್ಷಣ ಆಫ್ರಿಕಾ ತಂಡ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಇದರ ಹೊರತಾಗಿ ಜೆರಾಲ್ಡ್ ಕೋಟ್ಜಿ 19 ರನ್‌, ಕೇಶವ್‌ ಮಹಾರಾಜ್‌ 4 ರನ್‌, ಕಾಗಿಸೋ ರಬಾಡ, 10 ರನ್‌, ತಬ್ರೈಜ್ ಶಮ್ಸಿ 1 ರನ್‌ ಗಳಿಸಿದರು. ವೈಡ್‌ ನೋಬಾಲ್‌ನಿಂದ ತಂಡಕ್ಕೆ ಹೆಚ್ಚುವರಿ 11 ರನ್‌ ಸೇರ್ಪಡೆಯಾಯಿತು.

    ಹರಿಣರ ವಿರುದ್ಧ ಮಾರಕ ದಾಳಿ ನಡೆಸಿದ ಆಸೀಸ್‌ ಪರ ಮಿಚೆಲ್‌ ಸ್ಟಾರ್ಕ್‌ (Mitchell Starc) ಮತ್ತು ಪ್ಯಾಟ್‌ ಕಮ್ಮಿನ್ಸ್‌ ತಲಾ 3 ವಿಕೆಟ್‌ ಪಡೆದು ಮಿಂಚಿದರು. ಜೋಶ್‌ ಹ್ಯಾಜಲ್ವುಡ್‌ ಮತ್ತು ಟ್ರಾವಿಸ್‌ ಹೆಡ್‌ ತಲಾ 2 ವಿಕೆಟ್‌ ಪಡೆದು ಮಿಂಚಿದರು.

  • World Cup 2023: ಡಿಕಾಕ್‌ ಡಿಚ್ಚಿಗೆ ಬಾಂಗ್ಲಾ ಬರ್ನ್‌ – 149 ರನ್‌ಗಳ ಜಯದೊಂದಿಗೆ 2ನೇ ಸ್ಥಾನಕ್ಕೆ ಜಿಗಿದ ಹರಿಣರು

    World Cup 2023: ಡಿಕಾಕ್‌ ಡಿಚ್ಚಿಗೆ ಬಾಂಗ್ಲಾ ಬರ್ನ್‌ – 149 ರನ್‌ಗಳ ಜಯದೊಂದಿಗೆ 2ನೇ ಸ್ಥಾನಕ್ಕೆ ಜಿಗಿದ ಹರಿಣರು

    ಮುಂಬೈ: ಕ್ವಿಂಟನ್‌ ಡಿಕಾಕ್‌ (Quinton de Kock), ಹೆನ್ರಿಚ್‌ ಕ್ಲಾಸೆನ್‌ (Heinrich Klaasen) ಸ್ಫೋಟಕ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶದ ವಿರುದ್ಧ 149 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದೆ. 5ರಲ್ಲಿ 5 ಪಂದ್ಯಗಳಲ್ಲೂ ಗೆಲುವು ಸಾಧಿಸಿರುವ ಭಾರತ ಮೊದಲ ಸ್ಥಾನದಲ್ಲಿದ್ದರೆ, 4 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ನ್ಯೂಜಿಲೆಂಡ್‌ ತಂಡ 3ನೇ ಸ್ಥಾನಕ್ಕೆ ಕುಸಿದಿದೆ.

    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ (South Africa) ತಂಡ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 382 ರನ್‌ ಬಾರಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ (Bangladesh) ತಂಡವು 46.4 ಓವರ್‌ಗಳಲ್ಲಿ 233 ರನ್‌ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ನಮ್ಮನ್ನು ಕ್ಷಮಿಸಿಬಿಡಿ ಪಾಕಿಸ್ತಾನ – ಅಫ್ಘಾನ್‌ ವಿರುದ್ಧ ಸೋಲಿನ ಬಳಿಕ ಅಬ್ದುಲ್ಲಾ ಶಫೀಕ್ ಭಾವುಕ ಟ್ವೀಟ್‌

    ಚೇಸಿಂಗ್‌ ಆರಂಭಿಸಿದ ಬಾಂಗ್ಲಾದೇಶ ತಂಡವು ಆರಂಭದಲ್ಲೇ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 6 ಓವರ್‌ಗಳಲ್ಲಿ 30 ರನ್‌ಗಳಿಸಿ ಸ್ಫೋಟಕ ಇನ್ನಿಂಗ್ಸ್‌ ಆರಂಭಿಸಿದ್ದ ಬಾಂಗ್ಲಾದೇಶ ಬಳಿಕ ಒಂದೊಂದೇ ವಿಕೆಟ್‌ಗಳನ್ನ ಕಳೆದುಕೊಂಡಿತು. ಕೇವಲ 16 ರನ್‌ಗಳ ಅಂತರದಲ್ಲೇ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತು. ಇಲ್ಲಿಂದ ಬಾಂಗ್ಲಾದ ಅವನತಿ ಶುರುವಾಯಿತು. 12ನೇ ಓವರ್‌ನಲ್ಲಿ 46 ರನ್‌ ಗಳಿಸಿದ್ದ ತಂಡ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ನಾಯಕ ಶಕೀಬ್‌ ಅಲ್‌ ಹಸನ್‌ ಕೂಡ 1 ರನ್‌ಗಳಿಗೆ ವಿಕೆಟ್‌ ಕೈಚೆಲ್ಲಿದರು. ಇದನ್ನೂ ಓದಿ: Record Break: ಭಾರತ-ಕಿವೀಸ್‌ ರೋಚಕ ಪಂದ್ಯಕ್ಕೆ ಗ್ರೌಂಡ್‌ ಹೊರಗಿನ ದಾಖಲೆಗಳೂ ಉಡೀಸ್‌

    ಮೊಹಮ್ಮದುಲ್ಲಾ ಶತಕ ಹೋರಾಟ ವ್ಯರ್ಥ: ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಹಮ್ಮದುಲ್ಲಾ ಕೊನೆಯವರೆಗೂ ಹೋರಾಡಿ ಶತಕ ಗಳಿಸಿದರೂ ವ್ಯರ್ಥವಾಯಿತು. ಮೊಹಮ್ಮದುಲ್ಲಾ 111 ಎಸೆತಗಳಲ್ಲಿ 111 ರನ್‌ (11 ಬೌಂಡರಿ, 4 ಸಿಕ್ಸರ್) ಗಳಿಸಿ ಔಟಾಗುತ್ತಿದ್ದಂತೆ, ಉಳಿದ ಎರಡೂ ವಿಕೆಟ್‌ಗಳು ಪತನಗೊಂಡಿತು. ಅಂತಿಮವಾಗಿ ಬಾಂಗ್ಲಾದೇಶ 46.4 ಓವರ್‌ಗಳಲ್ಲಿ 233 ರನ್‌ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: ಶಮಿ ಹೊಸ ದಾಖಲೆ – ODI ವಿಶ್ವಕಪ್‌ ಇತಿಹಾಸದಲ್ಲೇ 2 ಬಾರಿ ಐದು ವಿಕೆಟ್‌ ಕಬಳಿಸಿದ ಮೊದಲ ಭಾರತೀಯ

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾ ಬೌಲರ್‌ಗಳನ್ನು ಚೆಂಡಾಡಿತ್ತು. ಆರಂಭದಲ್ಲಿ ಎರಡು ವಿಕೆಟ್‌ ಕಳಡೆದುಕೊಂಡರೂ ಬಳಿಕ ಉತ್ತಮ ರನ್‌ ಪೇರಿಸುವಲ್ಲಿ ತಂಡ ಯಶಸ್ವಿಯಾಯಿತು. ಸ್ಫೋಟಕ ಇನ್ನಿಂಗ್ಸ್‌ ಆರಂಭಿಸಿದ ಕ್ವಿಂಟನ್‌ ಡಿಕಾಕ್‌ 140 ಎಸೆತಗಳಲ್ಲಿ 174 ರನ್‌ (7 ಸಿಕ್ಸರ್‌, 15 ಬೌಂಡರಿ) ಚಚ್ಚಿದರೆ, ನಾಯಕ ಏಡನ್‌ ಮಾರ್ಕ್ರಮ್‌ 69 ಎಸೆತಗಳಲ್ಲಿ 60 ರನ್‌, ಹೆನ್ರಿಚ್‌ ಕ್ಲಾಸೆನ್‌ 49 ಎಸೆತಗಳಲ್ಲಿ ಸ್ಫೋಟಕ 90 ರನ್‌ (8 ಸಿಕ್ಸರ್‌, 2 ಬೌಂಡರಿ), ಡೇವಿಡ್‌ ಮಿಲ್ಲರ್‌ 15 ಎಸೆತಗಳಲ್ಲಿ 34 ರನ್‌ (4 ಸಿಕ್ಸರ್‌, 1 ಬೌಂಡರಿ) ಬಾರಿಸಿ 350 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

    ದಕ್ಷಿಣ ಆಫ್ರಿಕಾ ಪರ ಮಾರ್ಕೊ ಜಾನ್ಸೆನ್, ಲಿಜಾಡ್ ವಿಲಿಯಮ್ಸ್, ಕಗಿಸೊ ರಬಾಡ ತಲಾ ಎರಡು ವಿಕೆಟ್‌ ಕಿತ್ತರೆ, ಜೆರಾಲ್ಡ್ ಕೊಯೆಟ್ಜಿ 3 ವಿಕೆಟ್‌ ಹಾಗೂ ಕೇಶವ್ ಮಹಾರಾಜ್ ಒಂದು ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: ಇಶಾನ್‌ಗೆ ಜೇನುಹುಳು ಕಂಟಕ, ಸೂರ್ಯನಿಗೆ ಮೊಣಕೈ ಗಾಯ – ಪಂದ್ಯ ಆರಂಭಕ್ಕೂ ಮುನ್ನವೇ ಭಾರತಕ್ಕೆ ತ್ರಿಬಲ್‌ ಶಾಕ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಳೆಯಿಂದ ಲಂಕಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಹಬ್ಬ – ಕಣಕ್ಕಿಳಿಯಲಿದ್ದಾರೆ ಸ್ಟಾರ್ ಪ್ಲೇಯರ್ಸ್

    ನಾಳೆಯಿಂದ ಲಂಕಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಹಬ್ಬ – ಕಣಕ್ಕಿಳಿಯಲಿದ್ದಾರೆ ಸ್ಟಾರ್ ಪ್ಲೇಯರ್ಸ್

    ಕೊಲಂಬೊ: ಭಾರತದಲ್ಲಿ ಐಪಿಎಲ್ ಟೂರ್ನಿ ಜನಪ್ರಿಯತೆ ಪಡೆದುಕೊಂಡ ನಂತರ ವಿದೇಶಗಳಲ್ಲೂ ಟಿ20 ಕ್ರಿಕೆಟ್ ಸಖತ್ ಟ್ರೆಂಡ್ ಆಗಿದೆ. ಲಂಡನ್‌ನಲ್ಲಿ ಇತ್ತೀಚೆಗಷ್ಟೇ ಟಿ20 ಬ್ಲಾಸ್ಟ್ ಕ್ರಿಕೆಟ್ ಟೂರ್ನಿ ನಡೆಯಿತು. ನಂತರ ಅಮೇರಿಕದಲ್ಲಿ ಮೇಜರ್ ಕ್ರಿಕೆಟ್ ಲೀಗ್ ಟೂರ್ನಿ ಆಯೋಜನೆಗೊಂಡಿದ್ದು, ಈ ಬೆನ್ನಲ್ಲೇ ಶ್ರೀಲಂಕಾದಲ್ಲಿ LPL (ಲಂಕಾ ಪ್ರೀಮಿಯರ್ ಲೀಗ್) ಟೂರ್ನಿಯ 4ನೇ ಆವೃತ್ತಿ ಆಯೋಜನೆಗೊಂಡಿದೆ.

    ಐಪಿಎಲ್ (IPL) ಟೂರ್ನಿ ಮಾದರಿಯಲ್ಲೇ ಲಂಕಾ ಟೂರ್ನಿಯೂ ನಡೆಯಲಿದ್ದು ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ. ಜುಲೈ 30 ರಿಂದ ಆಗಸ್ಟ್ 21ರ ವರೆಗೆ ಲಂಕಾದ ಕೊಲಂಬೊ ಮತ್ತು ಕ್ಯಾಂಡಿ ಕ್ರಿಕೆಟ್ ಅಂಗದಲ್ಲಿ ನಡೆಯಲಿದೆ. ಆಗಸ್ಟ್ 20ರಂದು ಫೈನಲ್ ಪಂದ್ಯ ನಡೆಯಲಿದೆ ಒಂದು ವೇಳೆ ಮಳೆಯಿಂದ ಅಡ್ಡಿಯಾದರೆ ಆ.21 ರಂದು ಫೈನಲ್ ಪಂದ್ಯ ಮುಂದೂಡಲಾಗುತ್ತದೆ. ಅದಕ್ಕಾಗಿಯೇ ಒಂದು ದಿನ ಹೆಚ್ಚುವರಿಯಾಗಿ ನಿಗದಿ ಮಾಡಲಾಗಿದೆ ಎಂದು ಎಲ್‌ಪಿಎಂ ಸಮಿತಿ ತಿಳಿಸಿದೆ. ಇದನ್ನೂ ಓದಿ: ಪಟಾಕಿ ಗೋದಾಮಿನಲ್ಲಿ ಸ್ಫೋಟ – ಒಂದೇ ಕುಟುಂಬದ ನಾಲ್ವರು ಸೇರಿ 9 ಮಂದಿ ಸಾವು

    ನಿರೋಶನ್ ಡಿಕ್ವೆಲ್ಲಾ ನಾಯಕತ್ವದ ಕೊಲಂಬೊ ಸ್ಟ್ರೈಕರ್ಸ್ (Colombo Strikers), ಕುಸಲ್ ಮೆಂಡಿಸ್ ನೇತೃತ್ವದ ದಂಬುಲ್ಲಾ ಔರಾ, ದಸುನ್ ಶನಾಕ ನೇತೃತ್ವದ ಗಾಲೆ ಟೈಟಾನ್ಸ್, ವಾನಿಂದು ಹಸರಂಗ ನಾಯಕತ್ವದ ಬಿ-ಲವ್ ಕ್ಯಾಂಡಿ ಮತ್ತು ಹಾಲಿ ಚಾಂಪಿಯನ್ ಜಾಫ್ನಾ ಕಿಂಗ್ಸ್ (Jaffna Kings) ಸೇರಿ ಐದು ತಂಡಗಳು ಕಾದಾಡಲಿವೆ.

    ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ (David Miller), ಪಾಕಿಸ್ತಾನದ ಬಾಬರ್ ಆಜಂ (Babar Azam) ಹಾಗೂ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ (Shakib Al Hasan) ಸೇರಿದಂತೆ ಸ್ಟಾರ್ ಕ್ರಿಕೆಟಿಗರು ಕಣದಲ್ಲಿ ಅಬ್ಬರಿಸಲಿದ್ದಾರೆ. ರೌಂಡ್ ರಾಬಿನ್ ಸ್ವರೋಪದಲ್ಲಿ ಟೂರ್ನಿ ನಡೆಯಲಿದ್ದು ಪ್ರತಿ ತಂಡವು ಇತರ ತಂಡಗಳೊಂದಿಗೆ ಎರಡು ಬಾರಿ ಸೆಣಸಲಿವೆ. ಅಗ್ರಸ್ಥಾನ ಪಡೆದ 4 ತಂಡಗಳು ಆಗಸ್ಟ್ 17ರಿಂದ ಆರಂಭವಾಗುವ ಪ್ಲೇ ಆಫ್ ಪ್ರವೇಶಿಸಲಿವೆ. ಆಗಸ್ಟ್ 21 ರಂದು ಫೈನಲ್ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್‌ – ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ CBI

    ಯಾವ ತಂಡದಲ್ಲಿ ಯಾರಿದ್ದಾರೆ?
    ಕೊಲಂಬೊ ಸ್ಟ್ರೈಕರ್ಸ್‌:
    ಬಾಬರ್ ಆಜಮ್, ಮಥೀಶ ಪತಿರಾನ, ನಸೀಮ್ ಶಾ, ಚಾಮಿಕ ಕರುಣಾರತ್ನೆ, ಪಾತುಮ್ ನಿಸ್ಸಾಂಕ, ಅಹಾನ್ ವಿಕ್ರಮಸಿಂಘೆ, ಧನಂಜಯ ಲಕ್ಷಣ್, ನಿರೋಶನ್ ಡಿಕ್ವೆಲ್ಲಾ, ವಹಾಬ್ ರಿಯಾಜ್, ಲಕ್ಷಣ್ ಸಂದಕನ್, ನಿಪುನ್ ಧನಂಜಯ, ಮೊವಿನ್ ಸುಬಸಿಂಗ್, ಲಹಿರು ಉದಾರ, ಎಫ್ ನುಶಾನ್ ಉದಾರ, ಎಫ್. ನಂದೋ, ಇಫ್ತಿಕರ್ ಅಹ್ಮದ್, ಲೋರ್ಕನ್ ಟಕರ್, ಕವಿಶ್ಕಾ ಅಂಜುಲಾ, ರಮೇಶ್ ಮೆಂಡಿಸ್, ಮೊಹಮ್ಮದ್ ನವಾಜ್, ಯಶೋಧ ಲಂಕಾ, ಏಂಜೆಲೊ ಪೆರೆರಾ.

    ದಾಂಬೂಲಾ ಔರಾ:
    ಮ್ಯಾಥ್ಯೂ ಹೆಡ್, ಕುಸಾಲ್ ಮೆಂಡಿಸ್, ಹಸನ್ ಅಲಿ, ಅವಿಷ್ಕ ಫೆರ್ನಾಂಡೋ, ಧನಂಜಯ ಡಿ ಸಿಲ್ವ, ಕುಸಲ್ ಪೆರೇರಾ, ಹೇಡನ್ ಕೆರ್, ಸದೀರ ಸಮರವಿಕ್ರಮ, ಬಿನೂರ ಫೆರ್ನಾಂಡೋ, ನೂರ್ ಅಹ್ಮದ್, ಸಚಿತ ಜಯತಿಲಕೆ, ಜನಿತ್ ಲಿಯಾನಗೆ, ದುಶನ್ ಹೇಮಂತ, ಪ್ರಮೋದ್ ಮದುಜಾನ್, ಪ್ರಮೋದ್ ಮದುಜಾನ್, ಪ್ರಮೋದ್ ಮಧೂಶನ್, ಎದಿರಿಸಿಂಗ್, ಜೆಹಾನ್ ಡೇನಿಯಲ್, ವನುಜಾ ಸಹನ್, ಕವಿಂದು ಪತಿರತ್ನೆ, ರವಿಂದು ಫೆರ್ನಾಂಡೋ, ಅಲೆಕ್ಸ್ ರಾಸ್, ಮನೇಲ್ಕರ್ ಡಿ ಸಿಲ್ವಾ, ಪ್ರವೀಣ್ ಜಯವಿಕ್ರಮ.

    ಗಾಲೆ ಟೈಟಾನ್ಸ್
    ಶಕೀಬ್ ಅಲ್ ಹಸನ್, ದಸುನ್ ಶನಕ, ತಬ್ರೈಜ್ ಶಮ್ಸಿ, ಭಾನುಕಾ ರಾಜಪಕ್ಸೆ, ಸೀಕ್ಕುಗೆ ಪ್ರಸನ್ನ, ಲಹಿರು ಕುಮಾರ, ಶೆವೊನ್ ಡೇನಿಯಲ್, ಲಸಿತ್ ಕ್ರೂಸ್‌ಪುಲ್ಲೆ, ಸೋಹನ್ ಡಿ ಲಿವೇರಾ, ಅಶಾನ್ ಪ್ರಿಯಾಂಜನ್, ಬೆನ್ ಕಟಿಂಗ್, ಮೊಹಮ್ಮದ್ ಮಿಥುನ್, ಮಿನೋದ್ ಭಾನುಕ, ಪಸಿಂದು ಸೂರಿಯಬಂಡಾರ, ಅವಿಷ್ಕ ಪೆರ್ರಾಜ್ ಲಹಿರು ಸಮರಕೋನ್, ಕಸುನ್ ರಜಿತ, ಅಕಿಲ ಧನಂಜಯ, ಚಾಡ್ ಬೋವ್ಸ್, ಟಿಮ್ ಸೀಫರ್ಟ್, ಸೋನಾಲ್ ದಿನುಶಾ, ವಿಶ್ವ ಫೆರ್ನಾಂಡೋ, ಅನುಕ್ ಫೆರ್ನಾಂಡೋ.

    ಜಾಫ್ನಾ ಕಿಂಗ್ಸ್
    ಡೇವಿಡ್ ಮಿಲ್ಲರ್, ಮಹೇಶ್ ತೀಕ್ಷಣ, ರಹಮಾನುಲ್ಲಾ ಗುರ್ಬಾಜ್, ತಿಸಾರ ಪೆರೇರಾ, ಚರಿತ್ ಅಸಲಂಕಾ, ದುನಿತ್ ವೆಲ್ಲಲಾಗೆ, ಶೋಯಬ್ ಮಲಿಕ್, ಪಾತುಮ್ ಕುಮಾರ, ವಿಜಯಕಾಂತ್ ವ್ಯಾಸಕಾಂತ್, ತೀಸನ್ ವಿಥುಶನ್, ಅಸಂಕ ಮನೋಜ್, ನಿಶಾನ್ ಮದುಷ್ಕ, ಅಸಿತ ಫೆರ್ನಾಂಡೋ, ಹರ್ದುಸ್ ನುವಾನ್ ತುಷಾರ, ಡಿಲ್ ನುವಾನ್ ತುಷಾರ, ಡಿ.ಆಶಾನ್ ರಾಂದಿಕ, ರತ್ನರಾಜ ತನುರಾದನ್, ಕ್ರಿಸ್ ಲಿನ್, ಅಸೆಲಾ ಗುಣರತ್ನ.

    ಬಿ-ಲವ್ ಕ್ಯಾಂಡಿ
    ಮುಜೀಬ್ ಉರ್ ರೆಹಮಾನ್, ವನಿಂದು ಹಸರಂಗ, ಫಖರ್ ಜಮಾನ್, ಏಂಜೆಲೊ ಮ್ಯಾಥ್ಯೂಸ್, ಇಸುರು ಉದಾನ, ದಿನೇಶ್ ಚಾಂಡಿಮಲ್, ಮೊಹಮ್ಮದ್ ಹಸನೈನ್, ದುಷ್ಮಂತ ಚಮೀರ, ಸಹನ್ ಆರಾಚ್ಚಿಗೆ, ಅಶೇನ್ ಬಂಡಾರ, ಮೊಹಮ್ಮದ್ ಹ್ಯಾರಿಸ್, ನವೋದ್ ಪರಣವಿತಾನ, ಆಸಿಫ್ ಅಲಿ, ಕಾಮಿಂದು, ಪ್ರಣೀಪ್ ಮೆಂಡಿಸ್, ಎಸ್. ಲಹಿರು ಮಧುಶಂಕ, ಅಮೀರ್ ಜಮಾಲ್, ಮಲ್ಶಾ ತರುಪತಿ, ತನುಕಾ ದಬಾರೆ, ಲಸಿತ್ ಅಬೇರತ್ನೆ, ಅವಿಷ್ಕ ತರಿಂದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]