Tag: davangere

  • ಗೌರಿಗದ್ದೆಗೆ ಒಬ್ಬನೇ ಹೋಗಿದ್ದ ಚಂದ್ರಶೇಖರ್ – ತಮ್ಮನ ಮಗನನ್ನು ನೆನದು ರೇಣುಕಾಚಾರ್ಯ ಕಣ್ಣೀರು

    ಗೌರಿಗದ್ದೆಗೆ ಒಬ್ಬನೇ ಹೋಗಿದ್ದ ಚಂದ್ರಶೇಖರ್ – ತಮ್ಮನ ಮಗನನ್ನು ನೆನದು ರೇಣುಕಾಚಾರ್ಯ ಕಣ್ಣೀರು

    ದಾವಣಗೆರೆ: ಶಿವಮೊಗ್ಗದ (Shivamogga) ಗೌರಿಗದ್ದೆಗೆ ಚಂದ್ರಶೇಖರ್ (Chandrasekhar) ಹೋಗಿದ್ದನು. ಅಂದು ರಾತ್ರಿಯಿಂದಲೇ ಅವನ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಹೊನ್ನಾಳಿ (Honnali) ಕ್ಷೇತ್ರದ ಬಿಜೆಪಿ ಶಾಸಕ ಎಂ. ರೇಣುಕಾಚಾರ್ಯ (MP Renukacharya) ತಮ್ಮ ಸಹೋದರನ ಮಗ ನಾಪತ್ತೆಯಾಗಿರುವುದನ್ನು ನೆನೆದು ಕಣ್ಣೀರು ಹಾಕಿದ್ದಾರೆ.

    ಈ ಕುರಿತಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಅವರು, ಚಂದ್ರಶೇಖರ್ ಎಲ್ಲಿ ಹೋಗಿದ್ದಾನೆ, ಎಲ್ಲಿ ಇದ್ದಾನೆ ಎನ್ನುವುದು ಕೂಡ ತಿಳಿಯುತ್ತಿಲ್ಲ. ಯಾವಾಗಲೂ ಸ್ನೇಹಿತರ ಜೊತೆ ಇರುತ್ತಿದ್ದ, ಆದರೆ ಕಳೆದ ಭಾನುವಾರ ಒಬ್ಬನೇ ಗೌರಿಗದ್ದೆಗೆ (Gourigadde) ಹೋಗಿದ್ದ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ- ಕುಟುಂಬಸ್ಥರಲ್ಲಿ ಆತಂಕ

    ಬೆಳಗ್ಗೆಯಿಂದಲೂ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಎಲ್ಲರಿಗೂ ಕರೆ ಮಾಡಿ ವಿಚಾರಿಸುತ್ತಿದ್ದೇವೆ. ಯಾವುದೇ ಮಾಹಿತಿಯಾಗಲಿ, ಕಾರು ಕೂಡ ಸಿಗುತ್ತಿಲ್ಲ. ಮನಸ್ಸು ಎಷ್ಟೇ ಭಾರವಾಗಿದ್ದರೂ ಎರಡು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಂದಿದ್ದೇನೆ. ಎಲ್ಲರೂ ಆತ್ಮ ವಿಶ್ವಾಸ ತುಂಬುತ್ತಿದ್ದಾರೆ. ಚುನಾವಣೆ ಸೋತಾಗಲೂ ನಾನು ಇಷ್ಟು ಯೋಚನೆ ಮಾಡಿರಲಿಲ್ಲ. ಚಂದ್ರಶೇಖರ್ ಬಹಳ ಸೌಮ್ಯ ಸ್ವಭಾವದವನು. ಒಂದು ಕೆಟ್ಟ ಪದ ಕೂಡ ಮಾತನಾಡುತ್ತಿರಲಿಲ್ಲ. ಎಲ್ಲರೊಂದಿಗೂ ಅಷ್ಟು ಚೆನ್ನಾಗಿ ಬೆರೆಯುತ್ತಿದ್ದ. ಎಲ್ಲಾ ಕಾರ್ಯಕ್ರಮಗಳಲ್ಲಿಯೂ ನನ್ನೊಂದಿಗೆ ಇರುತ್ತಿದ್ದ. ಚಂದ್ರು ವಾಪಸ್ ಬರುತ್ತಾನೆ ಎಂದು ಭಗವಂತನನ್ನು ನಂಬಿದ್ದೇನೆ. ಅವನು ಬಂದ ತಕ್ಷಣ ಮುದ್ದಾಡಬೇಕು ಎಂಬ ಆಸೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

     

    ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಅವರು ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದಾರೆ. ಇತ್ತೀಚಿಗೆ ರೇಣುಕಾಚಾರ್ಯ ಜೊತೆ ಸಕ್ರಿಯವಾಗಿ ಓಡಾಡಿಕೊಂಡಿದ್ದ 27 ವರ್ಷದ ಚಂದ್ರಶೇಖರ್ ಭಾನುವಾರ ಗೌರಿಗದ್ದೆಯಿಂದ ಹೊನ್ನಾಳಿಗೆ ವಾಪಸ್ ಆಗಿದ್ದರು. ಅದೇ ದಿನ ರಾತ್ರಿ 11:30ರ ಸುಮಾರಿಗೆ ಹೊನ್ನಾಳಿಯ ಸಂತೆ ಮೈದಾನದ ಬಳಿ ಚಂದ್ರಶೇಖರ್ ಫೋನ್ ಸ್ವಿಚ್ ಆಫ್ ಆಗಿದೆ.

    ಎಲ್ಲಿ ಹುಡುಕಿದರೂ ಕಾಣುತ್ತಿಲ್ಲ. ಅವರ ಕಾರು ಕೂಡ ಎಲ್ಲಿಯೂ ಪತ್ತೆ ಆಗಿಲ್ಲ. ಇದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ರೇಣುಕಾಚಾರ್ಯ ಅವರು ಚಂದ್ರಶೇಖರ ಎಲ್ಲಿದ್ದರೂ ಬಾರಪ್ಪ ಎಂದು ಗೋಳಾಡುತ್ತಿದ್ದಾರೆ. ಹೊನ್ನಾಳಿ ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಾನುವಾರುಗಳಿಗೆ ಹೆಚ್ಚಿದ ಚರ್ಮ ಗಂಟು ರೋಗ – ದೇವರ ಮೊರೆ ಹೋದ ರೈತರು

    ಜಾನುವಾರುಗಳಿಗೆ ಹೆಚ್ಚಿದ ಚರ್ಮ ಗಂಟು ರೋಗ – ದೇವರ ಮೊರೆ ಹೋದ ರೈತರು

    ದಾವಣಗೆರೆ: ರೈತ ದೇಶದ ಬೆನ್ನೆಲುಬಾದರೆ, ರೈತನ ಬೆನ್ನೆಲುಬು ಜಾನುವಾರಗಳು (Cattle). ಇವುಗಳನ್ನು ನಂಬಿ ರೈತ ಜೀವನ ನಡೆಸುತ್ತಾನೆ. ಆದರೆ ಈಗ ಜಾನುವಾರುಗಳಿಗೆ ಚರ್ಮ ಗಂಟು ರೋಗ (Lumpy skin disease virus) ಹೆಚ್ಚಾಗಿ ಬರುತ್ತಿದ್ದು, ಇದರಿಂದ ಜಾನುವಾರುಗಳು ಸಾವನ್ನಪ್ಪುತ್ತಿದೆ. ಚಿಕಿತ್ಸೆ ಕೊಡಿಸಿದರೂ ಕಮ್ಮಿಯಾಗದ ಹಿನ್ನೆಲೆ ರೈತರು ಜಾನುವಾರುಗಳಿಗೆ ಬಂದಿರುವ ರೋಗ ನಿವಾರಣೆ ಮಾಡುವಂತೆ ದೇವರ ಮೊರೆ ಹೋಗಿದ್ದಾರೆ.

    ವಿಜಯನಗರ (Vijayanagara) ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಅಜ್ಜಿ ಹಬ್ಬ ಮಾಡುವ ಮೂಲಕ ತಮ್ಮ ಜಾನುವಾರುಗಳಿಗೆ ಬಂದಿರುವ ರೋಗ ಆದಷ್ಟು ಬೇಗ ಗುಣಮುಖವಾಗಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ದೇವತೆ ಉಚ್ಚಂಗಮ್ಮನಿಗೆ ಪೂಜೆ ಸಲ್ಲಿಕೆ ಮಾಡಿ ಎಡೆ ಇಟ್ಟು ರೈತರು ಭಕ್ತಿಯಿಂದ ಬೇಡಿಕೊಂಡರು. ಕಳೆದ ಎರಡ್ಮೂರು ತಿಂಗಳುಗಳಿಂದ ನಿರಂತರವಾಗಿ ಜಾನುವಾರುಗಳಿಗೆ ರೋಗ ಹೆಚ್ಚಾಗಿದ್ದು, ಅದರಲ್ಲೂ ಚರ್ಮ ಗಂಟು ರೋಗ ಹೆಚ್ಚಾಗಿದ್ದು, ಜಾನುವಾರುಗಳು ಸಾವನ್ನಪ್ಪುತ್ತಿವೆ. ಈ ರೋಗ ನಿವಾರಣೆ ಮಾಡುವಂತೆ ರೈತರು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಕೆ ಮಾಡಿದರು. ಇದನ್ನೂ ಓದಿ: ಕೊಹ್ಲಿ, ಪಾಂಡ್ಯ ಪಂಚ್‍ಗೆ ಪಾಕ್ ಪಂಚರ್ – ಶುಭಾರಂಭ ಕಂಡ ಭಾರತ

    ಅಲ್ಲದೇ ಬೇವಿನ ಸೊಪ್ಪು, ಹೋಳಿಗೆ, ಕಾಯಿ, ಹಣ್ಣು ಇಟ್ಟು ಜಾನುವಾರುಗಳಿಗೆ ಬಂದೋದಗಿದ ರೋಗ ನಿವಾರಣೆಯಾಗಿ ಜಾನುವಾರುಗಳು ಗುಣಮುಖವಾಗುವಂತೆ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇನ್ನು ಹಲವು ದಶಕಗಳಿಂದ ಈ ಸಂಪ್ರದಾಯ ವಾಡಿಕೆಯಲ್ಲಿದ್ದು, ಜನ ಜಾನುವಾರುಗಳಿಗೆ ಏನಾದರೂ ರೋಗ ಬಂದರೆ ಅಜ್ಜಿ ಹಬ್ಬ ಮಾಡಿ ಎಡೆ ಇಟ್ಟು, ಊರಿನ ಹೊರಗೆ ಇಟ್ಟು ಬರುತ್ತಾರೆ. ಇದರಿಂದ ರೋಗ ನಮ್ಮ ಗ್ರಾಮದಿಂದ ಹೊರ ಹೋಗಲಿದೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ಇದನ್ನೂ ಓದಿ: ಜೆಡಿಎಸ್ ಸೇರ್ಪಡೆ ಆಗ್ತಾರಾ ಕೆಜಿಎಫ್ ಬಾಬು? – ಕುತೂಹಲ ಮೂಡಿಸಿದ ಇಬ್ರಾಹಿಂ-ಕೆಜಿಎಫ್ ಬಾಬು ಭೇಟಿ

    Live Tv
    [brid partner=56869869 player=32851 video=960834 autoplay=true]

  • ಇಡೀ ಶೋ ಬುಕ್ ಮಾಡಿ, ಫ್ಯಾಮಿಲಿ ಸಮೇತ ಕಾಂತಾರ ನೋಡಿದ ದಾವಣಗೆರೆ ಪೊಲೀಸರು

    ಇಡೀ ಶೋ ಬುಕ್ ಮಾಡಿ, ಫ್ಯಾಮಿಲಿ ಸಮೇತ ಕಾಂತಾರ ನೋಡಿದ ದಾವಣಗೆರೆ ಪೊಲೀಸರು

    ದಾವಣಗೆರೆ: ರಿಷಬ್ ಶೆಟ್ಟಿ (Rishab Shetty) ಅಭಿನಯಿಸಿ ನಿರ್ದೇಶಿಸಿರುವ ಕಾಂತಾರ (Kantara) ಸಿನಿಮಾ ಇಡೀ ದೇಶದಲ್ಲೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಸಿನಿ ಪ್ರಿಯರನ್ನು ಆಕರ್ಷಿಸಿರುವ ಈ ಸಿನಿಮಾವನ್ನು ವೀಕ್ಷಿಸಲು ಪೊಲೀಸರು ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದಾರೆ.

    ಹೌದು, ದಾವಣಗೆರೆಯ (Davangere) ಇಡೀ ಪೊಲೀಸ್ ಇಲಾಖೆ ಶುಕ್ರವಾರ ಸಂಜೆ ಕಾಂತಾರ ಸಿನಿಮಾವನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ. ವಿಶೇಷ ಅಂದರೆ ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿ, ಎಸ್‍ಪಿ ಸಿಬಿ ರಿಷ್ಯಂತ್ ಕೂಡ ದಾವಣಗೆರೆ ನಗರದ ಗೀತಾಂಜಲಿ ಸಿನಿಮಾ ಮಂದಿರಕ್ಕೆ ಆಗಮಿಸಿದ್ದರು. ಇದನ್ನೂ ಓದಿ: ಸ್ಟುಡಿಯೋ ಕ್ಲೀನ್ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಫೋಟೋಗ್ರಾಫರ್‌ಗಳಿಬ್ಬರ ದುರ್ಮರಣ

    ಕುತೂಹಲ ಹೆಚ್ಚಾಗಿ ಪೊಲೀಸರು ಕೂಡ ಕಾಂತಾರ ಚಿತ್ರವನ್ನು ವೀಕ್ಷಿಸಲು ನಿರ್ಧಾರ ಮಾಡಿ, ಶುಕ್ರವಾರ ಸಂಜೆ ಇಡೀ ಶೋ ಬುಕ್ ಮಾಡಿಕೊಂಡು ಕುಟುಂಬ ಸಮೇತ ಸಿನಿಮಾ ನೋಡಿದ್ದಾರೆ. ಸದಾ ಕೆಲಸದ ಒತ್ತಡದಲ್ಲಿ ಬ್ಯುಸಿಯಾಗಿದ್ದ ದಾವಣಗೆರೆ ಪೊಲೀಸರು ಕೊಂಚ ಬಿಡುವು ಮಾಡಿಕೊಂಡು ತಮ್ಮ ಕುಟುಂಬಕ್ಕೂ ಸಮಯ ನೀಡಿ ಅವರೊಂದಿಗೆ ಚಿತ್ರ ನೋಡಿ ಮೈಂಡ್ ರಿಲೀಫ್ ಮಾಡಿಕೊಂಡಿದ್ದಾರೆ. ಇನ್ನು ಸಿನಿಮಾ ನೋಡಲು ಎಸ್‍ಪಿ, ಸಿಬಿ ರಿಷ್ಯಂತ್ ಹಾಗೂ ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿಯವರಿಗೆ ಎಎಸ್‍ಪಿ, ಡಿವೈಎಸ್‍ಪಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಸಾಥ್ ನೀಡಿದರು. ಇದನ್ನೂ ಓದಿ: ಸೂರ್ಯಗ್ರಹಣ ಬರಿಗಣ್ಣಲ್ಲಿ ನೋಡಲೇಬೇಡಿ – ಗ್ರಹಣದ ಬಗ್ಗೆ ಮಾಹಿತಿ ನೀಡಿದ್ದಾರೆ ಭೌತಶಾಸ್ತ್ರಜ್ಞ ಎ.ಪಿ ಭಟ್

    Live Tv
    [brid partner=56869869 player=32851 video=960834 autoplay=true]

  • ಒಂದ್ ಬೆಣ್ಣೆ, ಒಂದು ಖಾಲಿ ದೋಸೆ ತಿಂದ ರಮ್ಯಾ: ಮತ್ತೊಂದು ತಿನ್ನಲು ಡಯಟ್ ಅಡ್ಡಿ

    ಒಂದ್ ಬೆಣ್ಣೆ, ಒಂದು ಖಾಲಿ ದೋಸೆ ತಿಂದ ರಮ್ಯಾ: ಮತ್ತೊಂದು ತಿನ್ನಲು ಡಯಟ್ ಅಡ್ಡಿ

    ಸ್ಯಾಂಡಲ್ ವುಡ್ ಕ್ವೀನ್ ಎಂದೇ ಖ್ಯಾತಿಯ ನೂರಾರು ಸಿನಿಮಾಗಳಲ್ಲಿ ಮಿಂಚಿ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದ ನಟಿ ರಮ್ಯಾ (Ramya) ದಿಢೀರ್ ದಾವಣಗೆರೆಯಲ್ಲಿ ಕಾಣಿಸಿಕೊಂಡರು. ‘ಹೆಡ್ ಬುಷ್’ ಸಿನಿಮಾ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸ್ಯಾಂಡಲ್ ವುಡ್ ನ ಮೊಹಕ ತಾರೆ ರಮ್ಯಾ ದಾವಣಗೆರೆಗೆ ಭೇಟಿ ನೀಡಿ ಬೆಣ್ಣೆ ದೋಸೆ ಸವಿದರು.

    ದಾವಣಗೆರೆಯಲ್ಲಿ (Davangere) ಮೋಹಕತಾರೆ ರಮ್ಯಾ ದಿಢೀರ್ ಕಾಣಿಸಿಕೊಂಡರು, ವಿವಿಧ ಸಿನಿಮಾಗಳಲ್ಲಿ ನಟಿಸಿ ಪಡ್ಡೆಯುವಕರ ನಿದ್ದೆಗೆಡಿಸಿದ್ದ ನಟಿ ರಮ್ಯಾ ದಾವಣಗೆರೆಯ ಪ್ರಸಿದ್ದ ಗುರು ಕೊಟ್ಟೂರೇಶ್ವರ ಬೆಣ್ಣೆದೋಸೆ (Butter Dosa) ಹೋಟೆಲ್ ನಲ್ಲಿ ಬೆಣ್ಣೆದೋಸೆ ಸವಿದರು.  ಕಳೆದ ದಿನ ದಾವಣಗೆರೆಯಲ್ಲಿ ನಡೆದ ನಟ ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ (Head Bush)ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ನೆರೆದಿದ್ದ ಅಭಿಮಾನಿಗಳ ಕಣ್ಣಿಗೆ ಕುಕ್ಕುವಂತೆ ಕಾಣಿಸಿಕೊಂಡರು. ಇನ್ನು ಸ್ಯಾಂಡಲ್ ವುಡ್ ಮೋಹಕ ತಾರೆ ರಮ್ಯಾ ದಾವಣಗೆರೆಯ ಖಾಸಗಿ ಹೋಟೆಲ್ ನಲ್ಲಿ ಉಳಿದುಕೊಂಡು ಬಳಿಕ ಬೆಳಗಿನ ಉಪಹಾರ ಸೇವಿಯಲು ಅಭಿಮಾನಿಗಳ ಸಲಹೆಯಂತೆ ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್ ಗೆ ಭೇಟಿ ನೀಡಿ ಗರಿಗರಿ ಬೆಣ್ಣೆ ದೋಸೆ ಸವಿದರು. ಇದನ್ನೂ ಓದಿ: ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

    ರಮ್ಯಾ ಬಂದಿದ್ದಾರೆ ಎಂಬ ಸುದ್ದಿ ಹಬ್ಬಿದಂತೆ ಅಭಿಮಾನಿಗಳು ಹಾಗೂ ಪಡ್ಡೆ ಯುವಕರು ಕಿಕ್ಕಿರಿದು ಸೇರಿದ್ದರು. ಇನ್ನು ಕೆಲ ಚಿರ ಯುವಕರು, ಹಾಗು ಕ್ಯೂಟ್ ಹುಡುಗಿಯರು ಸೆಲ್ಫಿಗೆ ಫೋಸ್ ನೀಡಿದರು. ಕೆಲವು ಅಭಿಮಾನಿಗಳು ಗುಂಪು ಗುಂಪಾಗಿ ಸೆಲ್ಫಿಗಾಗಿ ಮುಗಿ ಬಿದ್ದ ದೃಶ್ಯಗಳು ಕಂಡುಬಂದವು.  ಕೆಲವರು ಹರಸಾಹಸ ಪಟ್ಟು ಸೆಲ್ಫಿಗೆ ಪ್ರಯತ್ನಿಸಿ ಸೆಲ್ಫಿ ಸಿಗದೆ ನಿರಾಸೆಯಾದ್ರು,

     

    ದಾವಣಗೆರೆಯ ಬೆಣ್ಣೆ ದೋಸೆ ಸವಿದ ಸ್ಯಾಂಡಲ್ ವುಡ್  ಕ್ವೀನ್ ರಮ್ಯಾ ಸಂತಸ ವ್ಯಕ್ತಪಡಿಸಿದರು. ದಾವಣಗೆರೆ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್ ನಲ್ಲಿ ಬೆಣ್ಣೆ ದೋಸೆ ಸವಿದ ಬಳಿಕ ಮಾತನಾಡಿದ ಅವರು ನಿನ್ನೆ ಹೆಡ್ ಬುಷ್ ಸಿನಿಮ ಪ್ರೀ ರೀಲಿಸ್ ವೇದಿಕೆಯಲ್ಲಿ ಹೇಳಿದ್ದ. ವೇದಿಕೆಯಲ್ಲು ಜನ ಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್ ನಲ್ಲಿ ಬೆಣ್ಣೆ ದೋಸೆ ಸವಿಯಿರಿ ಎಂದಿದ್ದರು. ಅದರಂತೆ ಬೆಣ್ಣೆ ದೋಸೆ ಸವಿದಿದ್ದೇನೆ. ಬೆಣ್ಣೆದೋಸೆ ತುಂಬಾ ಟೇಸ್ಟಿಯಾಗಿದೆ. ಇಲ್ಲಿ ಬಳಕೆ ಮಾಡುವ ಬೆಣ್ಣೆ‌ ಹಳ್ಳಿ ಬೆಣ್ಣೆ ಬಳಕೆ ಮಾಡ್ತಾರೆ. ಇನ್ನು ಬೆಣ್ಣೆ ದೋಸೆಯನ್ನು ಪಾರ್ಸಲ್ ತಿಂದ್ರೆ ಅಷ್ಟು ಚೆನ್ನಾಗಿರೋಲ್ಲ, ಸೋ ಅದಕ್ಕೆ ಹೋಟೆಲ್ ಗೆ ಬಂದು ಒಂದು ಬೆಣ್ಣೆ ಒಂದು ಖಾಲಿ ಎರಡು ದೋಸೆ ತಿಂದೆ, ತುಂಬಾ ರುಚಿಯಾಗಿದೆ  ಎಂದು ನಟಿ ರಮ್ಯಾ ದಾವಣಗೆರೆ ಜನತೆಗೆ ಧನ್ಯವಾದಗಳು ತಿಳಿಸಿದರು.

    ಗುರು ಕೊಟ್ಟೂರೇಶ್ವರ ಬೆಣ್ಣೆದೋಸೆ ಹೋಟೆಲ್ ಗೆ ನಟಿ ರಮ್ಯಾ ಬಂದಿದ್ದಾರೆ ಎಂಬ ಸುದ್ದಿ ತಿಳಿದ ಅಭಿಮಾನಿಗಳು ಹೊಟೇಲ್ ಮುಂದೆ ಜಮಾಯಿಸಿದ್ದರಿಂದ ಕಿಮೀ ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು.‌ ಇದರಿಂದ ವಾಹನ ಸವಾರರಿಗೆ ಟ್ರಾಫಿಕ್‌ ಕಿರಿಕಿರಿ ಅನುಭವಿಸುವಂತಾಯಿತು. ಇನ್ನು ಟ್ರಾಫಿಕ್ ಜಾಮ್‌ ಕ್ಲಿಯರ್ ಮಾಡಲು ಸಂಚಾರಿ ಪೋಲಿಸರು ಹರಸಾಹಸ ಪಡುವಂತಾಯಿತು. ಇನ್ನು ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಭಾಗಿಯಾಗಿ ಅಪ್ಪು ಅಪ್ಪು ಎಂದು ಘೋಷಣೆ ಹಾಕಿದರು.

    Live Tv
    [brid partner=56869869 player=32851 video=960834 autoplay=true]

  • ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್

    ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya) ನಿನ್ನೆ ದಾವಣಗೆರೆಯಲ್ಲಿ ನಡೆದ ಹೆಡ್ ಬುಷ್ (Head Bush) ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅತಿಥಿಯಾಗಿ ಭಾಗಿಯಾಗಿದ್ದ ರಮ್ಯಾ ವೇದಿಕೆಯ ಮೇಲೆ ‘ನಾನು ದಾವಣಗೆರೆಗೆ ಬಂದಿದ್ದೇನೆ. ಇಲ್ಲಿನ ಫೇಮಸ್ ದೋಸೆಯನ್ನು ತಿಂದೇ ಹೋಗುತ್ತೇನೆ’ ಎಂದು ಅಭಿಮಾನಿಗಳಿಗೆ ಮಾತು ಕೊಟ್ಟಿದ್ದರು. ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆ ರಮ್ಯಾ. ಇಂದು ದಾವಣಗೆರೆಯಲ್ಲಿ ಬೆಣ್ಣೆ ದೋಸೆ (Butter Dose) ಸವಿದಿದ್ದಾರೆ.

    ದಾವಣಗೆರೆಯ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್ ಗೆ ಆಗಮಿಸಿದ ರಮ್ಯಾ, ಡಬಲ್ ಬೆಣ್ಣೆದೋಸೆಗೆ ಆರ್ಡರ್ ಮಾಡಿದ್ದಾರೆ. ರಮ್ಯಾ ಕಂಡು ಖುಷಿಗೊಂಡ ಹೋಟೆಲ್ ಮಾಲೀಕರು ರಮ್ಯಾಗೆ ಸ್ಪೆಷಲ್ ಎನ್ನುವಂತೆ ದೋಸೆ ಮಾಡಿಕೊಟ್ಟಿದ್ದಾರೆ. ರಮ್ಯಾ ಜೊತೆ ನಿರ್ಮಾಪಕ ಕಾರ್ತಿಕ್ ಗೌಡ (Karthik Gowda) ಕೂಡ ಆಗಮಿಸಿದ್ದರು. ಇಬ್ಬರೂ ಹೊಟ್ಟೆ ತುಂಬುವಷ್ಟು ಬೆಣ್ಣೆ ದೋಸೆ ಸವಿದಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ರಮ್ಯಾ ಸಿನಿಮಾ ಸಂಬಂಧಿ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅದರಲ್ಲೂ ಕೆ.ಆರ್.ಜಿ ಸಂಸ್ಥೆಯ ಜೊತೆ ಹಲವು ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಳ್ಳಲು ಚಿಂತನೆ ನಡೆಸಿದ್ದಾರೆ. ಹೀಗಾಗಿಯೇ ಕೆ.ಆರ್.ಜಿ ಪ್ರೊಡಕ್ಷನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾಗಳ ಚಿತ್ರೀಕರಣ ಸ್ಥಳಕ್ಕೂ ರಮ್ಯಾ ಹೋಗುತ್ತಿದ್ದಾರೆ. ಹೊಯ್ಸಳ ಸಿನಿಮಾ ಕೆ.ಆರ್.ಜಿ ಪ್ರೊಡಕ್ಷನ್ ಲಾಂಛನದಲ್ಲಿ ಮೂಡಿ ಬರುತ್ತಿದೆ. ಇದರ ಹೀರೋ ಧನಂಜಯ್. ಇದನ್ನೂ ಓದಿ:ಬಿಗ್ ಬಾಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ: ಗುರೂಜಿ ಮೇಲೆ ಕಿಚ್ಚ ಕೆಂಡಾಮಂಡಲ

    ಡಾಲಿ ಧನಂಜಯ್ (Dhananjay) ನಿರ್ಮಾಣ ಮತ್ತು ನಾಯಕನಾಗಿ ನಟಿಸುತ್ತಿರುವ ಹೆಡ್ ಬುಷ್ ಸಿನಿಮಾಗೂ ರಮ್ಯಾ ಅನೇಕ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅದರ ಭಾಗವಾಗಿ ದಾವಣಗೆರೆಯ (Davangere) ಪ್ರಿ ಇವೆಂಟ್ ರಿಲೀಸ್ ಕಾರ್ಯಕ್ರಮಕ್ಕೂ ಅವರು ಹಾಜರಾಗಿದ್ದಾರೆ. ನಿನ್ನೆ ಕಾರ್ಯಕ್ರಮ ಮುಗಿಸಿ, ಇವತ್ತು ದೋಸೆ ತಿಂದು ಬೆಂಗಳೂರಿನತ್ತ ಪ್ರವಾಸ ಬೆಳೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೋದಿ ವಿರುದ್ಧ ಹೋಗ್ತಾರಲ್ಲ ಇದು ಚೈಲ್ಡಿಶ್  ತನ, ರಾಹುಲ್ ಗಾಂಧಿ ಫನ್ನಿಬಾಯ್ : ರೇಣುಕಾಚಾರ್ಯ ವ್ಯಂಗ್ಯ

    ಮೋದಿ ವಿರುದ್ಧ ಹೋಗ್ತಾರಲ್ಲ ಇದು ಚೈಲ್ಡಿಶ್ ತನ, ರಾಹುಲ್ ಗಾಂಧಿ ಫನ್ನಿಬಾಯ್ : ರೇಣುಕಾಚಾರ್ಯ ವ್ಯಂಗ್ಯ

    ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿಯವರು ಒಂದು ದೈತ್ಯ ಬಂಡೆ, ಆ ಬಂಡೆಯ ವಿರುದ್ಧ ಹೋಗ್ತಾರಲ್ಲ, ಇದು ಚೈಲ್ಡಿಶ್, ರಾಹುಲ್ ಗಾಂಧಿ (Rahul Gandhi) ಫನ್ನಿಬಾಯ್ ಎಂದು ಶಾಸಕ ಎಂಪಿ ರೇಣುಕಾಚಾರ್ಯ (Renukacharya) ವಾಗ್ದಾಳಿ ನಡೆಸಿದ್ದಾರೆ.

    ದಾವಣಗೆರೆಯಲ್ಲಿ (Davangere) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಮಾಡುತ್ತಿರುವುದು ಭಾರತ್ ಜೋಡೋ (Bharat Jodo Yatra) ಅಲ್ಲ ಭಾರತ ತೋಡೋ ಯಾತ್ರೆ. ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಒಂದು ದೈತ್ಯ ಬಂಡೆ, ಆ ಬಂಡೆಯ ವಿರುದ್ಧ ಹೋಗ್ತಾರಲ್ಲ ಇದು ಚೈಲ್ಡಿಶ್, ರಾಹುಲ್ ಗಾಂಧಿ ಫನ್ನಿಬಾಯ್ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ; ತ್ರಿಪಾಠಿ ನಾಮಪತ್ರ ತಿರಸ್ಕೃತ – ಖರ್ಗೆ, ಶಶಿ ತರೂರ್‌ ನಡುವೆ ಫೈಟ್

    ಕನ್ಯಾಕುಮಾರಿಯಿಂದ (Kanyakumari) ಕಾಶ್ಮೀರದವರೆಗೂ (Kashmir) ಜನರು ಗೋ ಬ್ಯಾಕ್ ಎಂದು ಜನ ಓಡುಸುತ್ತಾರೆ, ರಾಹುಲ್ ಗಾಂಧಿಗೆ ರಾಜಕೀಯ ಪ್ರಬುದ್ಧತೆ ಇಲ್ಲ, ದೇಶವನ್ನು ವೋಟಿಗಾಗಿ ಸ್ವಾರ್ಥಕ್ಕಾಗಿ ಛಿದ್ರ ಮಾಡಿದವರು. ರಾಜಸ್ಥಾನದಲ್ಲಿ (Rajasthan) ಕಾಂಗ್ರೆಸ್ ಒಡೆದ ಮನೆಯಾಗಿದೆ. ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷರಾಗಲು ಯಾರು ಸಿದ್ಧರಿಲ್ಲ, ರಾಹುಲ್ ಗಾಂಧಿ ಏನಾದರೂ ಅಧ್ಯಕ್ಷರಾದರೆ ಕಾಂಗ್ರೆಸ್ ಧೂಳಿಪಟವಾಗುತ್ತದೆ ಎನ್ನುವುದು ಅವರಿಗೆ ಗೊತ್ತಿದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಗಾಂಧೀಜಿಯವರು ಇದ್ದಿದ್ದ ಕಾಂಗ್ರೆಸ್ ಅದು ದೇಶ ಭಕ್ತಿ ಕಾಂಗ್ರೆಸ್, ಈಗ ನಕಲಿ ಕಾಂಗ್ರೆಸ್ ಪಕ್ಷ ದೇಶದಲ್ಲಿದೆ. ಭಾರತ್ ಜೋಡೋ ಯಾತ್ರೆ ಐಷಾರಾಮಿ ಯಾತ್ರೆಯಾಗಿದೆ, ಅದಕ್ಕೆ ದಿನಕ್ಕೆ ಕೋಟ್ಯಂತರ ರೂಪಾಯಿ ವ್ಯಯ ಮಾಡುತ್ತಿದ್ದಾರೆ, ಕೋವಿಡ್ ಸಂದರ್ಭದಲ್ಲಿ ರಾಹುಲ್ ಗಾಂಧಿ ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸತತ 6ನೇ ಬಾರಿಗೆ ದೇಶದ ಸ್ವಚ್ಛ ನಗರ ಕಿರೀಟ ಮುಡಿಗೇರಿಸಿಕೊಂಡ ಇಂದೋರ್

    ಸಿದ್ದರಾಮೋತ್ಸವದಲ್ಲಿ ಡಿಕೆಶಿ, ಸಿದ್ದರಾಮಯ್ಯ (Siddaramaiah) ದೂರ ಆಗಿರುವ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮೋತ್ಸವದಲ್ಲಿ ಡಿಕೆಶಿ (D.K.Shivakumar), ಸಿದ್ದರಾಮಯ್ಯ ಬಲವಂತದಿಂದ ಅಪ್ಪುಗೆ ಮಾಡಿದರು. ಬೆಂಗಳೂರಿಗೆ ಹೋದ ನಂತರ ನಾನೊಂದು ತೀರಾ ನೀನೊಂದು ತೀರಾ ಎಂಬಂತೆ ಆಗಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಜನರು ಬರುತ್ತಿಲ್ಲ. ಪೇಮೆಂಟ್ ಕೊಟ್ಟು ಕರೆತರುತ್ತಿದ್ದಾರೆ. ಗೋ ಬ್ಯಾಕ್ ರಾಹುಲ್ ಗಾಂಧಿ ಎಂದು ಜನರು ಹೇಳುತ್ತಿದ್ದಾರೆ, 2023ಕ್ಕೆ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ, ಸೂರ್ಯ ಚಂದ್ರರೂ ಇರುವುದು ಎಷ್ಟು ಸತ್ಯವೋ, ನಾವು ಅಧಿಕಾರಿಕ್ಕೆ ಬರುವುದು ಅಷ್ಟೇ ಸತ್ಯ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಲು ಯಾರು ಮುಂದೆ ಬರುತ್ತಿಲ್ಲ. ಆದ್ದರಿಂದ ಖರ್ಗೆಯವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಖರ್ಗೆಯವರ ಮೇಲೆ ಅಪಾರವಾದ ಗೌರವ ಇದೆ, ಈ ವಿಚಾರದಲ್ಲಿ ಅವರನ್ನು ಬಲಿ ಪಶು ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

    ಇದೇ ವೇಳೆ ಡಿಕೆಶಿ ಕಣ್ಣಿನಲ್ಲಿ ಕಣ್ಣೀರು ಬರುತ್ತದೆ ಎಂದರೆ ಭೂತದ ಬಾಯಿಯಲ್ಲಿ ಭಗವದ್ಗೀತೆ ಕೊಟ್ಟಂತೆ, ಇನ್ನು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ದಿವಂಗತ ಮಹಾದೇವ ಪ್ರಸಾದ್‍ರವರ ಪತ್ನಿ ಸ್ಪರ್ಧೆ ಮಾಡಿದಾಗ, ಅವರಿಗೆ ಕಣ್ಣೀರು ಹಾಕು, ಕಣ್ಣೀರು ಹಾಕು ಅನುಕಂಪ ಬರುತ್ತದೆ ಎಂದು ಪಕ್ಕದಲ್ಲಿ ಕುಳಿತು ಡಿ.ಕೆ.ಶಿವಕುಮಾರ್ ಅವರು ಒತ್ತಾಯಿಸಿದ್ದರು. ಅಂದು ಡಿಕೆಶಿ ಆ ಹೆಣ್ಣು ಮಗಳಿಗೆ ಕಣ್ಣೀರು ಹಾಕಿಸಿದರು. ಡಿಕೆಶಿ ಮೊಸಳೆ ಕಣ್ಣೀರು ಹಾಕಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೀಲ್ಸ್ ಮಾಡಲು ಹೋಗಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವು

    ರೀಲ್ಸ್ ಮಾಡಲು ಹೋಗಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವು

    ದಾವಣಗೆರೆ: ರೀಲ್ಸ್ (Reels) ಮಾಡಲು ಹೋಗಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ (Davangere) ಜಿಲ್ಲೆ ಹರಗನಹಳ್ಳಿ ಚೆಕ್ ಡ್ಯಾಂ ಬಳಿ ನಡೆದಿದೆ.

    ಮೃತರನ್ನು ಹರಿಹರದ ಆಶ್ರಯ ಬಡಾವಣೆ ಪವನ್ (25), ಪ್ರಕಾಶ್ (24) ಎಂದು ಗುರುತಿಸಲಾಗಿದೆ. ಇವರಿಬ್ಬರು ಸ್ನೇಹಿತರಾಗಿದ್ದು, ರೀಲ್ಸ್ ಮಾಡಲು ಹೋಗಿ ನೀರಲ್ಲಿ ಬಿದ್ದ ಪ್ರಕಾಶ್ ನನ್ನು ರಕ್ಷಿಸಲು ಹೋಗಿ ಪವನ್ ಸಹ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಒಂದೇ ಹಕ್ಕಿಗೆ ಗುರಿಯಿಟ್ಟ ಡಿಕೆ ಬ್ರದರ್ಸ್, ಬಿಜೆಪಿ ಬ್ರದರ್ಸ್ ಆಟದ ಗೆಲುವು ಯಾರಿಗಣ್ಣೋ?

    ಹರಿಹರ ಸಮೀಪದ ಹರಗನಹಳ್ಳಿ ಚೆಕ್ ಡ್ಯಾಂನಲ್ಲಿ ಕಳೆದ ಮೂರು ದಿನಗಳ ಹಿಂದೆ ಯುವಕರು ನೀರಿನಲ್ಲಿ ಮುಳುಗಿದ್ದು, ಹರಿಹರದ ರಾಘವೇಂದ್ರ ಮಠದ ಬಳಿ ಓರ್ವನ ಶವ ಪತ್ತೆಯಾಗಿದೆ. ಮತ್ತೊಬ್ಬ ಸ್ನೇಹಿತನ ನೀರಿನಲ್ಲಿ ತೇಲುತ್ತಿದ್ದ ದೃಶ್ಯ ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಇದೀಗ ಅಗ್ನಿಶಾಮಕ ದಳ ಹಾಗೂ ಪೊಲೀಸರು ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.  ಇದನ್ನೂ ಓದಿ: ಡೆಲ್ಲಿಯಲ್ಲಿ ಕುಳಿತು ಸ್ವೀಡನ್‍ನಲ್ಲಿ ಕಾರು ಚಲಾಯಿಸಿದ ಮೋದಿ

    Live Tv
    [brid partner=56869869 player=32851 video=960834 autoplay=true]

  • ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ – ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದ ಅಭಿಮಾನಿ

    ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ – ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದ ಅಭಿಮಾನಿ

    ದಾವಣಗೆರೆ: ಮತ್ತೊಮ್ಮೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಬೇಕೆಂದು ಅಭಿಮಾನಿಯೊಬ್ಬ ಬಾಳೆ ಹಣ್ಣಿನ ಮೇಲೆ ಬರೆದು ದೇವರ ಮೇಲೆ ಎಸೆದಿದ್ದಾನೆ.

    ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂಜಿತ್ ಎಂಬಾತ ಮತ್ತೊಮ್ಮೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಬೇಕೆಂದು ದೇವರಲ್ಲಿ ಬೇಡಿಕೆ ಇಟ್ಟಿದ್ದಾನೆ. ಹೀಗಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಹಿರೇಕಲ್ಮಠ ರಥೋತ್ಸವದ ವೇಳೆ ಬಾಳೆ ಹಣ್ಣಿನ ಮೇಲೆ ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ ಎಂದು ಬರೆದು ದೇವರ ರಥದ ಮೇಲೆ ಎಸೆದಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಹಾಲು ಮಾರಾಟಗಾರನ ಹತ್ಯೆ – ಮೋದಿ ಭೇಟಿ ಸಮಯದಲ್ಲೇ ಗುಜರಾತ್‍ನಲ್ಲಿ ಗುಂಪು ಘರ್ಷಣೆ

    ಜಾತ್ರಾಮಹೋತ್ಸವದಲ್ಲಿ ರಥೋತ್ಸವಕ್ಕೆ ಬಯಕೆ ಈಡೇರಲೆಂದು ಹಣ್ಣು ಜವಣೆ ಎಸೆಯುವ ಪದ್ದತಿ ಇದೆ. ಇದೇ ರೀತಿ ಈ ಹಿಂದೆ ಆರ್‌ಸಿಬಿ ಅಭಿಮಾನಿಯೊಬ್ಬರು ಈ ಸಲ ಕಪ್ ನಮ್ದೆ ಎಂದು ಬಾಳೆ ಹಣ್ಣಿನ ಮೇಲೆ ಬರೆದು, ಬಾಳೆ ಹಣ್ಣಿನ ಜೊತೆಗೆ ಹತ್ತು ರೂಪಾಯಿ ಇಟ್ಟು ಪ್ರಾರ್ಥನೆ ಮಾಡಿ ರಥದ ಮೇಲೆ ಎಸೆದಿದ್ದರು. ಇದನ್ನೂ ಓದಿ: ಪಠ್ಯ, ಪುಸ್ತಕ ಪರಿಷ್ಕರಣೆಗೆ ಮುಂದುವರಿದ ವಿರೋಧ- ತಮ್ಮ ಕವಿತೆಯನ್ನು ಬಳಸಬೇಡಿ: ರೂಪಾ ಹಾಸನ

    Live Tv
    [brid partner=56869869 player=32851 video=960834 autoplay=true]

  • ಗಣೇಶೋತ್ಸವಕ್ಕೆ ಡಬಲ್ ಸೌಂಡ್ ಹಚ್ಚಿ ಮೆರವಣಿಗೆ ಮಾಡಿ, ಏನ್ ಮಾಡ್ತಾರೆ ನೋಡೋಣ: ಪ್ರಮೋದ್ ಮುತಾಲಿಕ್

    ಗಣೇಶೋತ್ಸವಕ್ಕೆ ಡಬಲ್ ಸೌಂಡ್ ಹಚ್ಚಿ ಮೆರವಣಿಗೆ ಮಾಡಿ, ಏನ್ ಮಾಡ್ತಾರೆ ನೋಡೋಣ: ಪ್ರಮೋದ್ ಮುತಾಲಿಕ್

    ದಾವಣಗೆರೆ: ಡಿಜೆ ಸೌಂಡ್ ಸಿಸ್ಟಮ್‌ಗೆ ಅನುಮತಿ ಪಡೆಯಬೇಡಿ, ಡಬಲ್ ಸೌಂಡ್ ಹಚ್ಚಿ, ಏನ್ ಮಾಡ್ತಾರೆ ನೋಡೋಣ. ಸುಪ್ರೀಂ ಕೋರ್ಟ್ ಹೆಸರು ಹೇಳುತ್ತಾ ನಮ್ಮನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗಣೇಶ ಮಂಡಳಿಗಳಿಗೆ ಕರೆ ನೀಡಿದರು.

    ದಾವಣಗೆರೆಯಲ್ಲಿ ಮಾತನಾಡಿದ ಅವರು, ನಾವು ಸೌಂಡ್ ಸಿಸ್ಟಮ್‌ಗೆ ಪರ್ಮಿಷನ್ ತೆಗೆದುಕೊಳ್ಳುವುದಿಲ್ಲ. ಸರ್ಕಾರ ಮೊದಲು ಮಸೀದಿ ಮೇಲಿರುವ ಲೌಡ್ ಸ್ಪೀಕರ್ ಅನುಮತಿ ಪಡೆದಿರುವುದನ್ನು ತೋರಿಸಲಿ. ಬಳಿಕ ನಾವು ಡಿಜೆಗೆ ಅನುಮತಿಯನ್ನು ಪಡೆಯುತ್ತೇವೆ. ಮೊದಲು ಮಸೀದಿ ಮೇಲಿರುವ ಲೌಡ್ ಸ್ಪೀಕರ್‌ಗಳ ಅನುಮತಿ ಬಗ್ಗೆ ದಾಖಲೆ ನೀಡಿ. ಇಂದಿಗೂ ಲೌಡ್ ಸ್ಪೀಕರ್ ಶಬ್ದ ನಿಂತಿಲ್ಲ, ಇಂದಿಗೂ ಕಿರಿಕಿರಿ ಆಗುತ್ತಿದೆ ಎಂದು ಕಿಡಿಕಾರಿದರು.

    loud speaker

    ನಮ್ಮ ಸೌಂಡ್ ಸಿಸ್ಟಮ್ ಅನ್ನು ನಿಲ್ಲಿಸಲು ನಿಮಗೆ ಹಕ್ಕಿಲ್ಲ. ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧ ಹೇರಬೇಡಿ. ಗಲಭೆ ಆಗದಂತೆ ಮುಂಜಾಗೃತಾ ಕ್ರಮ ವಹಿಸುತ್ತೇವೆ. ಗಣೇಶನ ಕೂರಿಸಲು ಅನುಮತಿ ಪಡೆಯುವ ಪ್ರಕ್ರಿಯೆ ಸರಿ ಅಲ್ಲ. ನೀವು ಸ್ವಾತಂತ್ರ‍್ಯ ಹರಣ ಮಾಡ್ಬೇಡಿ. ನಿಮ್ಮ ಅನುಮತಿ ಪಡೆಯುವ ಅವಶ್ಯಕತೆ ನಮಗಿಲ್ಲ. ನಮಗೆ ಮುಕ್ತವಾದ ಹಕ್ಕಿದೆ. ನಿಮಗೆ ಕೇಳಿಕೊಂಡು ಗಣೇಶೋತ್ಸವ ಮಾಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಗುಡುಗಿದರು.

    ಬೆಂಗಳೂರಿನ ಈದ್ಗಾ ಮೈದಾನದ ಜಾಗ ಸರ್ಕಾರದ್ದು ಎಂದು ನಿರ್ಧರಿಸಲಾಗಿದೆ. ಜಮೀರ್ ಅಹ್ಮದ್ ಸೇರಿ ಕೆಲ ಮುಸ್ಲಿಂ ನಾಯಕರು ಇದು ನಮ್ಮದು ಎಂದು ಹೇಳುತ್ತಿದ್ದವರ ಬಾಯಿ ಬಂದ್ ಆಗಿದೆ. ಸರ್ಕಾರದಿಂದ ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವುದನ್ನು ನಾನು ಸ್ವಾಗತಿಸುತ್ತೇನೆ. ಅಲ್ಲಿ ಜಮೀರ್ ಅಹ್ಮದ್‌ಗೆ ಮಾತ್ರ ಅವಕಾಶ ಎಂದಲ್ಲ, ಅಲ್ಲಿ ಸಾರ್ವಜನಿಕರೂ ಆಗಮಿಸಬೇಕು. 75ನೇ ಸ್ವಾತಂತ್ರ‍್ಯೋತ್ಸವ ಮಾಡಬೇಕು. ಆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೂ ಅವಕಾಶ ಮಾಡಿಕೊಡಬೇಕು ಎಂದರು. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಿಎಂ ಚಾಲನೆ – ಭವ್ಯ ಭಾರತ ಕಟ್ಟಲು ಯುವಜನತೆ ಸನ್ನದ್ಧರಾಗುವಂತೆ ಕರೆ

    ಅಲ್ಲಿ ಮುಸ್ಲಿಮರ ಧಾರ್ಮಿಕ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ನಾವು ಹಿಂದೂಗಳು ಏನ್ ಪಾಪ ಮಾಡಿದ್ದೇವೆ? ನಮಗೂ ಗಣೇಶೋತ್ಸವ ಆಚರಣೆ ಮಾಡಲು ಅವಕಾಶ ನೀಡಿ. ಸರ್ಕಾರ ಪ್ರತಿನಿಧಿಗಳೇ ನಿಮ್ಮ ಗಡ್ಸ್ ತೋರ್ಸಿ. ಅಲ್ಲಿ ಕೋಮು ಗಲಭೆ ಮಾಡಿದರೆ ಗುಂಡು ಹೊಡೀರಿ. ಗಣೇಶ ಮಂಡಳಿಯವರು ಯಾವಾಗಲೂ ಗಲಾಟೆ, ಗೊಂದಲ ಮಾಡುವುದಿಲ್ಲ. ಗಣೇಶೋತ್ಸವ ಆಚರಣೆ ಮೈದಾನದಲ್ಲಿ ಮಾಡಲಾಗುವುದಿಲ್ಲ ಎಂದು ಜಮೀರ್ ಸೊಕ್ಕಿನಿಂದ ಹೇಳಿದ್ದಾರೆ. ಜಮೀರ್ ನೀನು ಮುಸ್ಲಿಂ ಮತದಿಂದ ಗೆದ್ದಿಲ್ಲ, ಎಲ್ಲರಿಂದಲೂ ಗೆದ್ದಿದ್ದೀಯ. ನೀನು ಮುಸ್ಲಿಂ ಶಾಸಕ ಅಲ್ಲಪ್ಪ, ನೀನೇ ಮುಂದೆ ನಿಂತು ಗಣೇಶೋತ್ಸವ ಮಾಡ್ಬೇಕು ಎಂದರು.

    ಪರೇಶ್ ಮೇಸ್ತಾ ಕೊಲೆ ಮಾಡಿದ ಎ1 ಆರೋಪಿ ಅಣ್ಣಿಗೇರಿಯನ್ನು ವಕ್ಫ್ ಬೋರ್ಡ್‌ನ ಉಪಾಧ್ಯಕ್ಷನಾಗಿ ಬಿಜೆಪಿ ಸರ್ಕಾರ ನೇಮಕ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಅವನೊಬ್ಬ ಕೊಲೆಗಡುಕ, ಕ್ರಿಮಿನಲ್. ಕೊಲೆಗಡುಕನನ್ನು ವಕ್ಫ್ ಬೋರ್ಡ್ ಉಪಾಧ್ಯಕ್ಷನಾಗಿ ನೇಮಕ ಮಾಡಿದ ಅಧಿಕಾರಿಗಳನ್ನು ವಜಾ ಮಾಡಿ. ವಕ್ಫ್ ಬೋರ್ಡ್ ಅಧ್ಯಕ್ಷ ಶಫೀನೇ ಕೊಲೆಗಡುಕ, ಹಿಂದೂದ್ರೋಹಿ. ಅವನೇ ಕಾಂಗ್ರೆಸ್‌ನವರನ್ನು, ಕೊಲೆಗಡುಕರನ್ನು, ಹಿಂದೂ ವಿರೋಧಿಗಳನ್ನು ವಕ್ಫ್ ಬೋರ್ಡ್‌ನಲ್ಲಿ ಸೇರಿಸುತ್ತಿದ್ದಾನೆ. ಬಿಜೆಪಿಯವರೇ ಜಾಗೃತರಾಗಿ, ಅನಾಹುತ ಆಗಬಹುದು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ತಿರಂಗಮಯವಾದ ಸುಪ್ರಸಿದ್ಧ ಮುಗಳಖೋಡ ಶ್ರೀಮಠ

    ಬೆಂಗಳೂರಿನ ಜೈಲಿನಲ್ಲಿ ಆರೋಪಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ಜೈಲಿನಲ್ಲಿ ವೀಡಿಯೋ ಮಾಡುವ ಮೂಲಕ ಮುಸ್ಲಿಂ ಗೂಂಡಾಗಳು ಅವ್ಯವಹಾರ ಮಾಡುತ್ತಿದ್ದಾರೆ. ಇದಕ್ಕೆ ಒಂದು ವಿಶೇಷ ಸಮಿತಿ ನಿಯೋಜನೆ ಮಾಡಿ ಎಂದು ಮುತಾಲಿಕ್ ಒತ್ತಾಯಿಸಿದರು.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮೋತ್ಸವ ಹೌಸ್ ಫುಲ್- ಸಿದ್ದರಾಮಯ್ಯ ಬಗ್ಗೆ ಹಾಡಿಗೆ ಕಂಬಳಿ ಬೀಸಿ ಡ್ಯಾನ್ಸ್ ಮಾಡಿದ ಅಭಿಮಾನಿಗಳು

    ಸಿದ್ದರಾಮೋತ್ಸವ ಹೌಸ್ ಫುಲ್- ಸಿದ್ದರಾಮಯ್ಯ ಬಗ್ಗೆ ಹಾಡಿಗೆ ಕಂಬಳಿ ಬೀಸಿ ಡ್ಯಾನ್ಸ್ ಮಾಡಿದ ಅಭಿಮಾನಿಗಳು

    ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಒಂದು ತಿಂಗಳಿಂದ ಭಾರೀ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇಂದು ಆ ದಿನ ಬಂದಿದ್ದು, ಸಿದ್ದರಾಮಯ್ಯ ಅವರು 75ನೇ ಹರೆಯಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಅವರ ಹುಟ್ಟುಹಬ್ಬಕ್ಕೆ ಅದ್ಧೂರಿಯಾಗಿ ವೇದಿಕೆ ಸಿದ್ಧವಾಗಿದ್ದು, ‘ವಂದೇಮಾತರಂ’ ಹಾಡುವ ಮೂಲಕ ಸಿದ್ದರಾಮೋತ್ಸವ ಆರಂಭವಾಗಿದೆ.

    ಸಿದ್ದರಾಮೋತ್ಸವಕ್ಕೆ ಮುಖ್ಯ ವೇದಿಕೆ ಅದ್ಧೂರಿಯಾಗಿ ಸಿದ್ಧವಾಗಿತ್ತು. ಮುಖ್ಯ ವೇದಿಕೆಯಲ್ಲಿ ಮೂರು ಬೃಹತ್ ಎಲ್‍ಇಡಿ ಪರದೆಗಳಿದ್ದು, ಇದರಲ್ಲಿ ಸಿದ್ದರಾಮಯ್ಯ, ವರಿಷ್ಠರ ಭಾವಚಿತ್ರ, ವೀಡಿಯೋಗಳ ಪ್ರದರ್ಶನ ಮಾಡಲಾಗುತ್ತಿದೆ. ಜನ ಕೂರಲು ಐದು ದೊಡ್ಡ ಪೆಂಡಾಲ್‍ಗಳ ನಿರ್ಮಾಣ ಮಾಡಲಾಗಿದ್ದು, ಐದು ಲಕ್ಷಕ್ಕೂ ಹೆಚ್ಚು ಕುರ್ಚಿಗಳನ್ನು ಹಾಕಲಾಗಿದೆ. ಆದರೆ ಕುರ್ಚಿಗಳು ಸಾಲದಂತೆ ಸಿದ್ದರಾಮಯ್ಯ ಅಭಿಮಾನಿ ಬಳಗ ಬಂದಿದ್ದರು. ಅಲ್ಲದೇ ಮುಖ್ಯವೇದಿಕೆಯಲ್ಲಿ ರಾಹುಲ್ ಗಾಂಧಿ ಸೇರಿ 50 ಗಣ್ಯರು ಕೂರಲು ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಸಿದ್ದರಾಮೋತ್ಸವ : ‘ಮೈಸೂರು ಹುಲಿಯಾ’, ‘ಸೆಲ್ಫ್ ಮೇಡ್ ಸಿದ್ದಣ್ಣ’ ಹಾಡು ರಿಲೀಸ್

    ಹೌಸ್ ಫುಲ್
    ಸಿದ್ದರಾಮೋತ್ಸವಕ್ಕೆ ಜನಸಾಗರ ಹರಿದು ಬಂದಿದ್ದು, ಸಿದ್ದರಾಮೋತ್ಸವದಲ್ಲಿ ಹೌಸ್ ಫುಲ್ ಆಗಿದೆ. ಐದು ಲಕ್ಷಕ್ಕೂ ಹೆಚ್ಚು ಕುರ್ಚಿಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿರೀಕ್ಷೆ ಮೀರಿ ಅಭಿಮಾನಿಗಳು ಬಂದಿದ್ದು, ಕುರ್ಚಿಗಳು ಸಿಗದೇ ಸಹಸ್ರಾರು ಜನ ನಿಂತಿದ್ದಾರೆ. ಆಯೋಜನಕರ ಸಂಖ್ಯಾ ಲೆಕ್ಕಾಚಾರ ಮೀರಿ ಜನ ಬಂದಿದ್ದು, ಸುಮಾರು 7 ಲಕ್ಷ ಜನಕ್ಕೂ ಹೆಚ್ಚು ಬಂದಿರಬಹುದು ಎಂದು ಹೇಳಲಾಗುತ್ತಿದೆ.

    ಸಂಗೀತ ಕಾರ್ಯಕ್ರಮ
    ‘ವಂದೇಮಾತರಂ’ ಹಾಡುವ ಮೂಲಕ ಸಿದ್ದರಾಮೋತ್ಸವ ಆರಂಭವಾಗಿದ್ದು, ಸಂಗೀತದ ಮೂಲಕವೇ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿಯಿತು. ಸಾಧುಕೋಕಿಲ ಮತ್ತು ತಂಡ ಭಾರೀ ಸಿದ್ದರಾಮಯ್ಯ ಅವರ ಅಭಿಮಾನಿಗಳನ್ನು ತಮ್ಮ ಸಂಗೀತದ ಮೂಲಕ ರಂಚಿಸಿದ್ದಾರೆ. ಹಂಸಲೇಖ, ಸಾಧುಕೋಕಿಲ, ಅನುರಾಧ ಭಟ್, ಹೇಮಂತ್ ಅವರಿಂದ ಸಂಗೀತದ ಮೂಲಕ ಮನರಂಜನೆ ನೀಡಿದ್ದಾರೆ.

    ಅಭಿಮಾನಿಯಿಂದ ಸ್ಟೆಪ್ಸ್
    ಅಭಿಮಾನಿಗಳು ಸಿದ್ದರಾಮಯ್ಯ ಕುರಿತು ಹಾಡು ಬರೆದಿದ್ದು, ಅದಕ್ಕೆ ಅಭಿಮಾನಿ ಸಖತ್ ಸ್ಟೆಪ್ಸ್ ಹಾಕಿದ್ದಾನೆ. ತಲೆವಸ್ತ್ರ ಕಟ್ಟಿಕೊಂಡು ಭರ್ಜರಿ ಡಾನ್ಸ್ ಮಾಡಿ ಹರ್ಷವನ್ನು ವ್ಯಕ್ತಪಡಿಸಿದ್ದಾನೆ. ಅಲ್ಲದೇ ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳೆಲ್ಲ ಸಖತ್ ಆಗಿ ಡ್ಯಾನ್ಸ್ ಮಾಡಿದ್ದು, ಸಿದ್ದರಾಮಯ್ಯ ಅವರ ಘೋಷಣೆಯನ್ನು ನಿರಂತರವಾಗಿ ಕೂಗುತ್ತ ಇದ್ದರು. ಇದನ್ನೂ ಓದಿ:  30 ವರ್ಷಗಳ ನಂತರ ಕೋಡಿ ಹರಿದ ಕೆರೆಗೆ ಮೂವರು ಬಾಲಕರ ಬಲಿ

    ಕಂಬಳಿ ಬಿಸಿ ಡ್ಯಾನ್ಸ್
    ಸಿದ್ದರಾಮಯ್ಯ ಹಾಡಿಗೆ ಅಭಿಮಾನಿಗಳು ಕಂಬಳಿ ಬೀಸಿ ಡ್ಯಾನ್ಸ್ ಮಾಡಿದ್ದು, ಸಂಭ್ರಮದಿಂದ ಕೇಕ್, ಚಪ್ಪಾಳೆ ಶಿಳ್ಳೆಯಿಂದ ಕುಣಿದು ಕುಪ್ಪಳಿಸಿದ್ದಾರೆ.

    ಸಿದ್ದರಾಮೋತ್ಸವ ವೇದಿಕೆ ಮೇಲೆ ಸಿದ್ದರಾಮಯ್ಯ ಜೊತೆ ಮೊದಲ ಸಾಲಿನಲ್ಲಿ ಜಿ.ಪರಮೇಶ್ವರ್, ಜಮೀರ್, ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ, ಸತೀಶ್ ಜಾರಕಿಹೊಳಿ, ರಮೇಶ್ ಕುಮಾರ್, ಕೆ.ಬಿ.ಕೋಳಿವಾಡ, ಕೆ.ಎನ್.ರಾಜಣ್ಣ ಆಸೀನ, ಎರಡನೇ, ಮೂರನೇ ಸಾಲಿನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್, ಪ್ರಿಯಾಂಕ್ ಖರ್ಗೆ, ಯತೀಂದ್ರ, ನಾಸೀರ್ ಹುಸೇನ್, ಸುದರ್ಶನ್, ಬಿ.ಎಲ್.ಶಂಕರ್, ಭೀಮಾನಾಯಕ್ ಸೇರಿ ಹಲವರು ಆಸೀನರಾಗಿದ್ದಾರೆ. ವೇದಿಕೆಯ ಅಕ್ಕ-ಪಕ್ಕ ಶಾಸಕರು, ಪರಿಷತ್ ಸದಸ್ಯರು ಕುಳಿತು ಕೊಡಿದ್ದರು.

    Live Tv
    [brid partner=56869869 player=32851 video=960834 autoplay=true]