Tag: davangere

  • ಚಿಕನ್ ಸಾರು ಮಾಡಿಲ್ಲವೆಂದು ಪತ್ನಿ ಕೊಲೆಗೈದಿದ್ದ ಪತಿಗೆ 6 ವರ್ಷ ಜೈಲು

    ಚಿಕನ್ ಸಾರು ಮಾಡಿಲ್ಲವೆಂದು ಪತ್ನಿ ಕೊಲೆಗೈದಿದ್ದ ಪತಿಗೆ 6 ವರ್ಷ ಜೈಲು

    ದಾವಣಗೆರೆ: ಚಿಕನ್ ಸಾರು (Chicken) ಮಾಡಿಲ್ಲವೆಂದು ಕ್ಯಾತೆ ತೆಗೆದು ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿದ್ದ ಪತಿಗೆ ಇದೀಗ ನ್ಯಾಯಾಲಯ ಜೈಲು ಶಿಕ್ಷೆಯ ಜೊತೆಗೆ ದಂಡವನ್ನೂ ವಿಧಿಸಿದೆ.

    ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಮಾಗನಹಳ್ಳಿ ಕೆಂಚಪ್ಪ ಶಿಕ್ಷೆಗೊಳಗಾದವ. ಸದ್ಯ ಈತನಿಗೆ ದಾವಣಗೆರೆ (Davanagere) 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 6 ವರ್ಷ ಜೈಲು (Jail) ಶಿಕ್ಷೆ ಹಾಗೂ 10,000 ದಂಡ ವಿಧಿಸಿದೆ.

    ಏನಿದು ಪ್ರಕರಣ..?: 2022ರ ಜೂನ್ 8 ರಂದು ಕೆಂಚಪ್ಪ ಕಂಠಪೂರ್ತಿ ಮದ್ಯ ಸೇವಿಸಿ ಬಂದು ಚಿಕನ್ ಸಾಂಬಾರು ಮಾಡಿಲ್ಲ ಅಂತಾ ಪತ್ನಿ ಶೀಲಾರೊಂದಿಗೆ ಜಗಳವಾಡಿ ಚಾಕುವಿನಿಂದ ಎಡಭುಜಕ್ಕೆ ಚುಚ್ಚಿ ಕೊಲೆ ಮಾಡಿದ್ದ. ಈ ಸಂಬಂಧ ಶೀಲಾ ಅವರ ತಾಯಿ ಉಕ್ಕಡಗಾತ್ರಿ ಗುತ್ಯಮ್ಮ ಅವರು ಹರಿಹರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ: ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಆರೋಪಿಯ ತಂದೆ ಅನುಮಾನಾಸ್ಪದ ಸಾವು

    ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ತನಿಖಾಧಿಕಾರಿ ಸಿಪಿಐ ಸತೀಶ್, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜೆ.ವಿ.ವಿಜಯಾನಂದ ಅವರು ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರ ವಕೀಲ ಸತೀಶ್ ಕುಮಾರ್ ವಾದ ಮಂಡಿಸಿದ್ದರು.

  • ವಿಷ ಕುಡಿದ ವ್ಯಕ್ತಿಯನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿದ ಶಾಸಕ

    ವಿಷ ಕುಡಿದ ವ್ಯಕ್ತಿಯನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿದ ಶಾಸಕ

    ದಾವಣಗೆರೆ: ವಿಷ (Poison) ಕುಡಿದಿದ್ದ ವ್ಯಕ್ತಿಯನ್ನು ಮಾಯಕೊಂಡ (Mayakonda) ಶಾಸಕ ಬಸವಂತಪ್ಪ (Basavantappa) ತಮ್ಮ ಕಾರಿನಲ್ಲಿಯೇ ಆಸ್ಪತ್ರೆಗೆ (Hospital) ಸಾಗಿಸಿ ಜೀವ ಉಳಿಸಿದ್ದಾರೆ.

    ದಾವಣಗೆರೆ (Davangere) ತಾಲೂಕು ಅಣಬೇರು ಗ್ರಾಮದಲ್ಲಿ ಘಟನೆ ನಡೆದಿದ್ದು, ರೇವಣಸಿದ್ದಪ್ಪ (45) ಎಂಬ ವ್ಯಕ್ತಿ ಕುಡಿದ ಮತ್ತಿನಲ್ಲಿ ವಿಷ ಸೇವಿಸಿದ್ದ. ಆತನನ್ನು ಚಿಕಿತ್ಸೆಗೆ ಕರೆದೊಯ್ಯಲು ಅಂಬುಲೆನ್ಸ್‌ಗೆ ಕರೆ ಮಾಡಲಾಗಿತ್ತು. ಆದರೆ 1 ಗಂಟೆ ಕಾದರೂ ಅಂಬುಲೆನ್ಸ್ ಬಾರದ ಹಿನ್ನೆಲೆ ಪಕ್ಕದ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಬಸವಂತಪ್ಪ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಮತ್ತೆ ಅರೆಸ್ಟ್ ವಾರೆಂಟ್ ಜಾರಿ

    ವಿಷ ಕುಡಿದು 1 ಗಂಟೆಯಿಂದ ನರಳಾಡುತ್ತಿದ್ದ ವ್ಯಕ್ತಿಯ ಸ್ಥಿತಿ ಗಂಭೀರ ಆಗಿದ್ದರಿಂದ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ತಮ್ಮ ಕಾರಿನಲ್ಲಿ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ದಾವಣಗೆರೆಯ ಸಿಜೆ ಆಸ್ಪತ್ರೆಗೆ ವ್ಯಕ್ತಿಯನ್ನು ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಶಾಸಕರ ಸಮಯಪ್ರಜ್ಞೆಯಿಂದ ಜೀವವೊಂದು ಉಳಿದಿದೆ. ಇದನ್ನೂ ಓದಿ: ಕಾರ್ಯಕ್ರಮಕ್ಕೆ ಬಂದಿದ್ದ ಕೆನಡಾ ಉರ್ದು ಸಾಹಿತಿಗೆ ಹೃದಯಾಘಾತ

  • ದುರಾಡಳಿತ ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಬರ ಅಧ್ಯಯನ ತಂಡದಿಂದ ಹೊರಗಿಟ್ಟಿದ್ದಾರೆ: ರೇಣುಕಾಚಾರ್ಯ ಅಸಮಾಧಾನ

    ದುರಾಡಳಿತ ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಬರ ಅಧ್ಯಯನ ತಂಡದಿಂದ ಹೊರಗಿಟ್ಟಿದ್ದಾರೆ: ರೇಣುಕಾಚಾರ್ಯ ಅಸಮಾಧಾನ

    ದಾವಣಗೆರೆ: ನಾನು 2018 ರ ಚುನಾವಣಾ ಪೂರ್ವದಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಬರ ಅಧ್ಯಯನ (Drought Study) ಮಾಡಿದ್ದೆ. ಆದರೆ ಈ ಬಾರಿ ನನ್ನನ್ನು ಬರ ಅಧ್ಯಯನ ತಂಡದಿಂದ ಹೊರ ಇಟ್ಟಿದ್ದಾರೆ. ಪಕ್ಷದ ಕೆಲ ನಾಯಕರ ದುರಾಡಳಿತ ಪ್ರಶ್ನೆ ಮಾಡಿದ್ದಕ್ಕೆ ಈ ರೀತಿ ಮಾಡಿದ್ದಾರೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ಅಸಮಾಧಾನ ಹೊರಹಾಕಿದ್ದಾರೆ.

    ಹೊನ್ನಾಳಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಇದ್ದಿದ್ದು ಇದ್ದಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ರಂತೆ ಹಂಗಾಗಿದೆ. ಪಕ್ಷದಲ್ಲಿರುವ ಲೋಪವನ್ನು ನೇರವಾಗಿ ಹೇಳಿದ್ದಕ್ಕೆ ಕೆಲ ನಾಯಕರು ನನ್ನನ್ನು ಹೊರಗಿಟ್ಟಿದ್ದಾರೆ. ನಮ್ಮ ಬಿಜೆಪಿಯಲ್ಲಿ ಒಂದು ತಂಡ ಇದೆ ಅದು ಈ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

    ಈ ಚುನಾವಣಾ ಪೂರ್ವದಲ್ಲಿ ಜೆಡಿಎಸ್ ಬಿಜೆಪಿ (BJP) ಹೊಂದಾಣಿಕೆ ಮಾಡಿಕೊಂಡಿದ್ರು. ಆದ್ದರಿಂದ ನಮ್ಮ ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸಿದ್ದಾರೆ. ಯಡಿಯೂರಪ್ಪರನ್ನು ಕೆಳಗೆ ಇಳಿಸಿದ್ರು. ಈಶ್ವರಪ್ಪ, ಜಗದೀಶ್ ಶೆಟ್ಟರ್, ಸವದಿ ಸೇರಿದಂತೆ ಫ್ರಂಟ್ ಲೈನ್ ನಾಯಕರನ್ನು ಮುಗಿಸಿದರು. ಒಬ್ಬ ವ್ಯಕ್ತಿ ದೆಹಲಿಯಲ್ಲಿ ಕೂತು ಸಿಎಂ ಆಗಲು ಇದೆಲ್ಲ ಮಾಡಿದ್ದಾನೆ ಎಂದು ಪರೋಕ್ಷವಾಗಿ ಬಿಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ 7 ಗಂಟೆ ವಿದ್ಯುತ್‌ – ಸಿಎಂ ಮಹತ್ವದ ಸಭೆಯಲ್ಲಿ ನಿರ್ಧಾರ

    ಯಡಿಯೂರಪ್ಪರವರ ಪರವಾಗಿ ಮಾತನಾಡಿದ್ದಕ್ಕೆ ಈ ರೀತಿ ಮಾಡ್ತಾ ಇದ್ದಾರೆ. ಪರವಾಗಿ ಮಾತನಾಡಿದರೆ ನೋಟಿಸ್, ಅವರ ವಿರುದ್ಧವಾಗಿ ಮಾತನಾಡಿದರೆ ನೋಟೀಸ್ ಇಲ್ಲ. ಇದು ಯಾವ ನ್ಯಾಯ? ಎಂದು ಎಂಪಿ ರೇಣುಕಾಚಾರ್ಯ ಕಿಡಿಕಾರಿದರು. ಇದನ್ನೂ ಓದಿ: ಚುನಾವಣಾ ಹೊಸ್ತಿಲಲ್ಲೇ ʼಕೈʼಗೆ ಶಾಕ್-‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಶಾಸಕ

  • ಮುಖ್ಯಮಂತ್ರಿ ಸೀಟ್ ಖಾಲಿ ಇಲ್ಲ, ಇನ್ನು 5 ವರ್ಷ ಸಿದ್ದರಾಮಯ್ಯನೇ ಸಿಎಂ: ಜಮೀರ್

    ಮುಖ್ಯಮಂತ್ರಿ ಸೀಟ್ ಖಾಲಿ ಇಲ್ಲ, ಇನ್ನು 5 ವರ್ಷ ಸಿದ್ದರಾಮಯ್ಯನೇ ಸಿಎಂ: ಜಮೀರ್

    ದಾವಣಗೆರೆ: ಸಿಎಂ (CM) ಸೀಟ್ ಖಾಲಿ ಇಲ್ಲ, ಇನ್ನು 5 ವರ್ಷ ಸಿದ್ದರಾಮಯ್ಯನೇ (Siddaramaiah) ಸಿಎಂ ಎಂದು ದಾವಣಗೆರೆಯಲ್ಲಿ (Davangere) ವಸತಿ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.

    ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಯಾರೇ ಏನು ಅಂದರೂ ಸಿದ್ದರಾಮಯ್ಯ ಪರ. ಸಿಎಂ ಸ್ಥಾನದ ಅವಧಿ ಬಗ್ಗೆ ನಿರ್ಧಾರ ಮಾಡೋದು ಹೈಕಮಾಂಡ್. ಹೈಕಮಾಂಡ್ ಹೇಳಿದ್ರೆ ಸಿದ್ದುನೇ 5 ವರ್ಷ ಸಿಎಂ ಆಗಿರುತ್ತಾರೆ ಎಂದರು.

    ಮಾಜಿ ಸಚಿವ ರಮೇಶ್ ಜಾರಕಿಹೊಳಿಯಿಂದ ಆಪರೇಷನ್ ಕಮಲ ಅಸಾಧ್ಯ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಗಲು ಕನಸು ಕಾಣ್ತಿದ್ದಾರೆ. 56 ಜನ ಎಂಎಲ್‌ಎಗಳನ್ನು ಕರೆದುಕೊಂಡು ಹೋಗಿ ಆಪರೇಷನ್ ಮಾಡೋದು ಸಾಧ್ಯನಾ? ರಮೇಶ್ ಜಾರಕಿಹೊಳಿ ಅವರನ್ನೇ ಕೇಳಿ ಆಪರೇಷನ್ ಎಷ್ಟು ಕಷ್ಟ ಅಂತ. ಸಮ್ಮಿಶ್ರ ಸರ್ಕಾರದಲ್ಲಿ 17 ಜನರನ್ನು ಕರೆದುಕೊಂಡು ಹೋಗಲು ಎಷ್ಟು ಎಷ್ಟು ಸರ್ಕಸ್ ಮಾಡಿದ್ದಾರೆ. ರಮೇಶ್ ಹೈಕಮಾಂಡ್ ಬಳಿ ಬೇಳೆ ಬೇಯಿಸಿಕೊಳ್ಳಲು ಹೀಗೆ ಮಾತಾಡ್ತಿದ್ದಾರೆ. ರಮೇಶ್ ಬಿಜೆಪಿಯಲ್ಲಿ ಇರೋ ಶಾಸಕರನ್ನು ಉಳಿಸಿಕೊಳ್ಳಲಿ. ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರಲು ಒಂದು ಕಾಲಿನಲ್ಲಿ ನಿಂತಿದ್ದಾರೆ. ಮೊದಲು ಅವರ ಬಗ್ಗೆ ಗಮನ ಹರಿಸಲಿ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಅಲುಗಾಡಿಸಲು ಸಾಧ್ಯವಿಲ್ಲ, ಅವರೇ ಸಿಎಂ ಅಂತ ಹೈಕಮಾಂಡ್‌ ಹೇಳಿದೆ – ಶಿವಲಿಂಗೇಗೌಡ

    ಇನ್ನು ಡಾ. ಪರಮೇಶ್ ಮನೆಯಲ್ಲಿ ಸಿಎಂ ಸಿದ್ದರಾಮಯ್ಯ ಊಟಕ್ಕೆ ಹೋದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನನ್ನು ಕೂಡಾ ಕರೆದಿದ್ದರು. ಆದ್ರೆ ಹೋಗುವುದಕ್ಕೆ ಆಗಿಲ್ಲ. ಉಪಮುಖ್ಯಮಂತ್ರಿಯವರನ್ನು ಕರೆದಿರುತ್ತಾರೆ. ಸತೀಶ್ ಜಾರಕಿಹೊಳಿ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದ ಜಮೀರ್ ಅಹಮದ್ ಮೂಡಿದ ಗೊಂದಲಕ್ಕೆ ತೆರೆ ಎಳೆದರು. ಇದನ್ನೂ ಓದಿ: ಬಸ್‌ಗೆ ಬೆಂಕಿ ಹಚ್ಚಿದ ಪ್ರಕರಣ- ಮಹಾರಾಷ್ಟ್ರದ ಬಸ್ ಕರ್ನಾಟಕಕ್ಕೂ ಬರುತ್ತೆ: ರಾಮಲಿಂಗಾರೆಡ್ಡಿ ಖಡಕ್ ವಾರ್ನಿಂಗ್

    Web Stories 
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಸ್ಲಿಂ ಸ್ನೇಹಿತನ ಆರೋಗ್ಯ ಸುಧಾರಣೆಗೆ ಹಿಂದೂ ವ್ಯಕ್ತಿಯಿಂದ ಧರ್ಮಸ್ಥಳದಲ್ಲಿ ತುಲಾಭಾರ

    ಮುಸ್ಲಿಂ ಸ್ನೇಹಿತನ ಆರೋಗ್ಯ ಸುಧಾರಣೆಗೆ ಹಿಂದೂ ವ್ಯಕ್ತಿಯಿಂದ ಧರ್ಮಸ್ಥಳದಲ್ಲಿ ತುಲಾಭಾರ

    ದಾವಣಗೆರೆ: ಅನಾರೋಗ್ಯಕ್ಕೀಡಾದ ಮುಸ್ಲಿಂ (Muslim) ಸಮುದಾಯಕ್ಕೆ ಸೇರಿದ ಪ್ರಾಣ ಸ್ನೇಹಿತನ ಆರೋಗ್ಯ ಸುಧಾರಣೆಗೆ ಹಿಂದೂ (Hindu) ವ್ಯಕ್ತಿಯೊಬ್ಬರು ಧರ್ಮಸ್ಥಳದ (Dharmasthala) ಮಂಜುನಾಥ ದೇವಾಲಯದಲ್ಲಿ ತುಲಾಭಾರ (Tulabhara) ಮಾಡಿಸಿದ ಅಪರೂಪದ ಘಟನೆ ನಡೆದಿದೆ.

    ಅನಿಸ್ ಪಾಷ ಹಾಗೂ ಅರುಣ್ ಕುಮಾರ್ ಇಬ್ಬರು ಹಲವು ವರ್ಷಗಳಿಂದ ಪ್ರಾಣ ಸ್ನೇಹಿತರು. ದಾವಣಗೆರೆ (Davangere) ನಗರದಲ್ಲಿ ವಕೀಲ ವೃತ್ತಿ ಮಾಡುತ್ತಿರುವ ಅನಿಸ್ ಪಾಷ ಅರುಣ್ ಅವರಿಗೆ ಸಂಬಂಧಿಸಿದ ಕೇಸ್ ವೊಂದನ್ನು ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿ ಗೆದ್ದು ಬೀಗಿದ್ದರು. ದುರಂತ ಎಂದರೆ ಕೋವಿಡ್ ವೇಳೆ ಅನಿಸ್ ಪಾಷ ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗಿದ್ದರು. ಇದರಿಂದ ಚಿಂತಿತರಾದ ಸ್ನೇಹಿತ ಅರುಣ್ ಕುಮಾರ್ ಪ್ರಾಣ ಸ್ನೇಹಿತ ಬಹುಬೇಗ ಗುಣಮುಖರಾಗಲಿ ಎಂದು ತಿರುಪತಿ ತಿಮ್ಮಪ್ಪನಿಗೆ ಕಾಣಿಕೆ ಸಲ್ಲಿಸಿ, ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ತುಲಾಭಾರದ ಹರಕೆ ಹೊತ್ತಿದ್ದರು.

    ಇದೀಗ ಪ್ರಾಣಸ್ನೇಹಿತ ಅನಿಸ್ ಪಾಷಾ ಗುಣಮುಖರಾಗಿದ್ದು, ಇದರ ಬೆನ್ನಲ್ಲೇ ಅರುಣ್ ಕುಮಾರ್ ಅನಿಸ್ ಪಾಷ ಅವರನ್ನು ಮೊದಲಿಗೆ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಕರೆದೊಯ್ದು ದರ್ಶನ ಮಾಡಿಸಿ, ಕಾಣಿಕೆ ಸಲ್ಲಿಸಿ, ಹರಕೆ ತೀರಿಸಿದ್ದಾರೆ. ಬಳಿಕ ಧರ್ಮಸ್ಥಳಕ್ಕೆ ಕರೆದೊಯ್ದು ಮಂಜುನಾಥನ ಸನ್ನಿಧಿಯಲ್ಲಿ ಅಭಿಷೇಕ ನಡೆಸಿ ಬಳಿಕ ಅಕ್ಕಿ, ಬೆಲ್ಲ, ಕೊಬ್ಬರಿ ಮೂಲಕ ತುಲಾಭಾರ ಮಾಡಿಸಿ ಹರಕೆ ತೀರಿಸಿದ್ದಾರೆ. ಈ ಘಟನೆ ಕೋಮು ಸೌಹಾರ್ದಕ್ಕೆ ಮಾದರಿಯಾಗಿದೆ. ಇದನ್ನೂ ಓದಿ: ನಾನು ಅಪ್ಪನ ಹೆಗಲ ಮೇಲೆ ಕೂತು ದಸರಾ ನೋಡಿದ್ದೆ: ಸಿದ್ದರಾಮಯ್ಯ

    ನಿಮ್ಮ ಧರ್ಮವನ್ನು ಪ್ರೀತಿಸಿ ಬೇರೊಬ್ಬರ ಧರ್ಮವನ್ನು ಗೌರವಿಸಿ ಎಂದು ನಮ್ಮ ಇಸ್ಲಾಂ ಧರ್ಮ ಹೇಳುತ್ತದೆ. ಇದಲ್ಲದೆ ಅನಾಥ ಮಕ್ಕಳ ಮುಂದೆ ತಮ್ಮ ಮಕ್ಕಳನ್ನು ಮುದ್ದಾಡಬೇಡಿ ಎಂದು ಪ್ರವಾದಿಯವರು ಹೇಳುತ್ತರೆ. ಅದರಂತೆ ನನ್ನ ಧರ್ಮ, ಆಚರಣೆಗಳು ಬೇರೆಯಾದರೂ ಅರುಣ್ ಅವರ ಧಾರ್ಮಿಕ ನಂಬಿಕೆಗಳಿಗೆ ಯಾವುದೇ ಧಕ್ಕೆಯಾಗದಂತೆ ಹರಕೆ ನೆರವೇರಿಸಿದ್ದೇನೆ. ದಯವೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರ ವಚನ, ಇನ್ನೊಬ್ಬರ ಭಾವನೆಗಳಿಗೆ ಧಕ್ಕೆಯಾಗದಂತೆ ಬದುಕುವುದೇ ನಿಜವಾದ ಧರ್ಮ ಎಂಬ ಖುರಾನ್ ಸಾಲುಗಳಂತೆ ನಾವು ಎಲ್ಲರೊಳಗೆ ಒಂದಾಗಿ ಬದುಕುತ್ತಿದ್ದೇವೆ ಎಂದು ಅನಿಸ್ ಪಾಷಾ ವಿವರಿಸಿದರು.

    ಮೊದಲಿಗೆ ಅರುಣ್ ಕುಮಾರ್ ನನ್ನ ಕಕ್ಷಿದಾರ. ಬಳಿಕ ಅವನು ಕುಟುಂಬದ ಸ್ನೇಹಿತನಂತೆ ಇದ್ದಾನೆ. ಈ ವಕೀಲ ವೃತ್ತಿಯಲ್ಲಿ ಸಾಕಷ್ಟು ಕಕ್ಷಿದಾರರನ್ನು ಕಂಡಿದ್ದೇನೆ. ಆದರೆ ಪ್ರಕರಣವೊಂದರಿಂದ ಪರಿಚಿತರಾದ ಅರುಣ್ ಕುಮಾರ್ ತುಂಬಾ ಹತ್ತಿರವಾದರು. 2021ರಲ್ಲಿ ನನಗೆ ಎದೆ ನೋವು ಕಾಣಿಸಿಕೊಂಡು ರಕ್ತನಾಳ ಎರಡು ಕಡೆ ಬ್ಲಾಕ್ ಆಗಿದ್ದು ಸ್ಟಂಟ್ ಅಳವಡಿಸಿದ್ದರಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ. ಈ ಸಂದರ್ಭ ಗೆಳೆಯ ಅರುಣ್ ನನ್ನ ಆರೋಗ್ಯ ಸುಧಾರಣೆಗಾಗಿ ಹರಕೆ ಹೊತ್ತಿದ್ದರು. ಇತ್ತೀಚೆಗೆ ಧರ್ಮಸ್ಥಳಕ್ಕೆ ಒಟ್ಟಿಗೆ ತೆರಳಿ ಹರಕೆ ತೀರಿಸಿದ್ದಾರೆ ಎಂದು ಅನಿಸ್ ಪಾಷ ಮಾಹಿತಿ ನೀಡಿದರು. ಇದನ್ನೂ ಓದಿ: ಮೈಸೂರಿನ ಐತಿಹಾಸಿಕ ದಸರಾ ಜೀವಂತ ಮಹಾಕಾವ್ಯ: ಕಾರ್ಯಕ್ರಮಗಳಿಗೆ ಹಂಸಲೇಖ ಚಾಲನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭದ್ರಾ ನೀರಿಗಾಗಿ ಪ್ರತಿಭಟನೆ – ಒಣಗಿದ ಗದ್ದೆಯಲ್ಲಿ ವಿಷದ ಬಾಟಲಿ ಹಿಡಿದು ಕುಳಿತ ರೈತರು

    ಭದ್ರಾ ನೀರಿಗಾಗಿ ಪ್ರತಿಭಟನೆ – ಒಣಗಿದ ಗದ್ದೆಯಲ್ಲಿ ವಿಷದ ಬಾಟಲಿ ಹಿಡಿದು ಕುಳಿತ ರೈತರು

    ದಾವಣಗೆರೆ: ಭದ್ರಾ ನೀರಿಗಾಗಿ (Bhadra Water) ದಾವಣಗೆರೆ (Davangere) ಬಂದ್ ಮುಗಿದಿದ್ದರೂ ರೈತರ ಹೋರಾಟ ಮಾತ್ರ ಮುಂದುವರಿದಿದೆ. ಜಿಲ್ಲೆಯ ಹರಿಹರ (Harihara) ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ರೈತರು ಭದ್ರಾ ನೀರಿಗಾಗಿ ಒತ್ತಾಯಿಸಿ ಬತ್ತಿಹೋದ ಗದ್ದೆಯಲ್ಲಿ ವಿಷದ ಬಾಟಲಿ ಹಿಡಿದುಕೊಂಡು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

    ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಬಿಡದೆ ಸರ್ಕಾರ ಸತಾಯಿಸುತ್ತಿದೆ. ಭದ್ರಾದಿಂದ 100 ದಿನಗಳ ಕಾಲ ನೀರು ಬಿಡುವುದಾಗಿ ಭದ್ರಾ ನೀರು ನಿರ್ವಹಣ ಪ್ರಾಧಿಕಾರ ಹೇಳಿತ್ತು. ಆದರೆ ಈಗ ನೀರು ಬಂದ್ ಮಾಡಿ ದಾವಣಗೆರೆ ಭಾಗದ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

    ರೈತರು ಭತ್ತ ನಾಟಿ ಮಾಡಿ ನೀರಿಗಾಗಿ ಕಾದು ಕುಳಿತಿದ್ದು, ಸರ್ಕಾರ ಹಾಗೂ ಕಾಡಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಸೋಮವಾರ ದಾವಣಗೆರೆ ಬಂದ್ ಕೂಡ ಮಾಡಿ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡಿದ್ದರು. ಇಂದು ಒಣಗಿ ಹೋದ ಭತ್ತದ ಗದ್ದೆಯಲ್ಲಿ ವಿಷದ ಬಾಟಲಿ ಹಿಡಿದು ಕೂತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ಕೊಡಿ ಇಲ್ಲ ನಮಗೆ ವಿಷವಾದರೂ ಕೊಡಿ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಇದನ್ನೂ ಓದಿ: Bengaluru Bandh: ಬಂದೋಬಸ್ತ್‌ನಲ್ಲಿದ್ದ ಪೊಲೀಸರಿಗೆ ಕೊಟ್ಟ ಟಿಫನ್‍ನಲ್ಲಿ ಇಲಿ!

    ಒಂದು ಎಕರೆಗೆ ಸಾವಿರಾರು ರೂ. ಖರ್ಚು ಮಾಡಿ ಈಗ ಭದ್ರಾ ನೀರು ಇಲ್ಲದೆ ಪರದಾಡುವಂತಾಗಿದೆ. ಕೂಡಲೆ ನೀರು ಬಿಡಬೇಕು ಇಲ್ಲವಾದರೆ ದಾವಣಗೆರೆ ಭಾಗದ ರೈತರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತರು ಭತ್ತದ ಗದ್ದೆಗಳಲ್ಲಿ ಕೂತು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿಯವರು ಕಾವೇರಿ ಪ್ರತಿಭಟನೆ ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ: ಸಿದ್ದರಾಮಯ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಲಿ ಕೊಲ್ಲಲೆಂದು ವಿಷ ಸವರಿ ಇಟ್ಟ ಹಣ್ಣು ತಿಂದು ಯುವತಿ ಸಾವು!

    ಇಲಿ ಕೊಲ್ಲಲೆಂದು ವಿಷ ಸವರಿ ಇಟ್ಟ ಹಣ್ಣು ತಿಂದು ಯುವತಿ ಸಾವು!

    ದಾವಣಗೆರೆ: ಇಲಿ (Rat) ಸಾಯಿಸಲು ಇಟ್ಟ ಹಣ್ಣು (Poisoned Fruit) ತಿಂದು ಯುವತಿಯೊಬ್ಬಳು ಮೃತಪಟ್ಟ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದ ನಿವಾಸಿ ಐಶ್ವರ್ಯಾ (21) (Aishwarya) ಸಾವನ್ನಪ್ಪಿದ ಯುವತಿ. ಈಕೆ ನ್ಯಾಮತಿಯ ಸರ್ಕಾರಿ ಕಾಲೇಜ್ ನಲ್ಲಿ ಬಿಎ ಓದುತ್ತಿದ್ದಳು.

    ಮನೆಯಲ್ಲಿ ಓಡಾಡಿ ಉಪಟಳ ಕೊಡುವ ಇಲಿಯನ್ನು ಸಾಯಿಸಲೆಂದು ಕುಟುಂಬಸ್ಥರು ಹಣ್ಣಿಗೆ ವಿಷ ಸವರಿ ಇಟ್ಟಿದ್ದರು. ಆದರೆ ಇದನ್ನು ಗಮನಿಸದೇ ಯುವತಿ ಕಾಲೇಜು ಮುಗಿಸಿ ಮನೆಗೆ ಬಂದಾಗ ನೆಲದ ಮೇಲೆ ಬಿದ್ದಿದ್ದ ಹಣ್ಣನ್ನು ತಿಂದಿದ್ದಳು. ಇದನ್ನೂ ಓದಿ: ತಲೆ ನೋವು ನಿವಾರಕದ ಡಬ್ಬಿ ನುಂಗಿ 9 ತಿಂಗಳ ಮಗು ಸಾವು

    ಹಣ್ಣು ತಿಂದ ಯುವತಿಯ ಆರೋಗ್ಯದಲಲಿ ಏರುಪೇರಾಗುತ್ತಿದ್ದಂತೆಯೇ ಕುಟುಂಬಸ್ಥರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾದರೆ ಯುವತಿ ಸಾವನ್ನಪ್ಪಿದ್ದಾಳೆ.

    ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮರದ ಕೊಂಬೆ ಕಡಿಯಲು ಹೋಗಿ ವಿದ್ಯುತ್ ಸ್ಪರ್ಶ – ಯುವಕ ಸಾವು

    ಮರದ ಕೊಂಬೆ ಕಡಿಯಲು ಹೋಗಿ ವಿದ್ಯುತ್ ಸ್ಪರ್ಶ – ಯುವಕ ಸಾವು

    ದಾವಣಗೆರೆ: ಮರದ ಕೊಂಬೆ ಕಡಿಯಲು ಹೋಗಿ ವಿದ್ಯುತ್ ಸ್ಪರ್ಶಿಸಿ (Electric Shock) ಯುವಕ ಸಾವನ್ನಪ್ಪಿದ ಘಟನೆ ದಾವಣಗೆರೆ (Davangere) ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಜಗಳೂರು (Jagaluru) ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಶಿವಕುಮಾರ್ (18) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಳೆ ಬರುತ್ತಿದ್ದ ಸಂದರ್ಭದಲ್ಲಿ ಈತ ಮೇಕೆಗಳಿಗೆ ಮೇವು ತರಲು ಹೋಗಿದ್ದರು. ಮರವನ್ನೇರಿ ಸೊಪ್ಪು ಕಡಿಯುತ್ತಿರುವಾಗ ಮರದ ಕೊಂಬೆ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಕೊಂಬೆಯಿಂದ ವಿದ್ಯುತ್ ಪ್ರವಹಿಸಿದ ಹಿನ್ನೆಲೆ ಈ ಅವಘಡ ನಡೆದಿದೆ. ಇದನ್ನೂ ಓದಿ: ಶಾಲೆಗೆ ಬಾಂಬ್ ಬೆದರಿಕೆ – ಸ್ಥಳಕ್ಕೆ ಪೊಲೀಸರ ದೌಡು

    ಗ್ರಾಮಸ್ಥರು ಯುವಕನ ದೇಹವನ್ನು ಮುಟ್ಟಲು ಭಯಪಡುತ್ತಿದ್ದರು. ಅವಘಡ ನಡೆದು 30 ನಿಮಿಷಗಳಾದರೂ ಬೆಸ್ಕಾಂ ಸಿಬ್ಬಂದಿ ಬಾರದ ಕಾರಣ ಶಿವಕುಮಾರ್ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮಳೆಯ ಅವಾಂತರ – 5 ಮನೆಗಳು ಕುಸಿದು ಕಾರುಗಳು ಸಂಪೂರ್ಣ ಜಖಂ

  • ಜೆ.ಪಿ.ನಡ್ಡಾ ರೋಡ್ ಶೋನಲ್ಲಿ ಜೂನಿಯರ್ ಮೋದಿ ಮೋಡಿ

    ಜೆ.ಪಿ.ನಡ್ಡಾ ರೋಡ್ ಶೋನಲ್ಲಿ ಜೂನಿಯರ್ ಮೋದಿ ಮೋಡಿ

    ದಾವಣಗೆರೆ: ಶನಿವಾರ ದಾವಣಗೆರೆಯಲ್ಲಿ ನಡೆದ ಜೆ.ಪಿ.ನಡ್ಡಾ (J.P.Nadda) ರೋಡ್ ಶೋನಲ್ಲಿ ವ್ಯಕ್ತಿಯೋರ್ವರು ತಮ್ಮ ಚಹರೆ ಮೂಲಕ ಎಲ್ಲರ ಗಮನಸೆಳೆದಿದ್ದರು. ಒಂದು ಕ್ಷಣ ಜನರೆಲ್ಲಾ ಮೋದಿ ಮೋದಿ ಎಂದು ಜೈಕಾರ ಹಾಕಲು ಆರಂಭಿಸಿದರು. ಆದರೆ ಅದು ನಿಜಾವಾದ ಮೋದಿಯಾಗಿರಲಿಲ್ಲ. ನೋಡಲು ಮೋದಿಯ ಪ್ರತಿರೂಪವಾಗಿದ್ದ ಆ ವ್ಯಕ್ತಿಯನ್ನು ಜೂನಿಯರ್ ಮೋದಿ (Junior Modi) ಎಂದೇ ಕರೆಯಲಾಗುತ್ತದೆ. ಇವರನ್ನು ನೋಡಿದ ಜನ ಮೋದಿ ಎಂದು ಕೈಕುಲುಕಿದ್ದಲ್ಲದೆ ಸೆಲ್ಫಿಗಾಗಿ ಇವರ ಹಿಂದೆ ಮುಗಿಬಿದ್ದಿದ್ದರು.

    ಮೋದಿಯ ಪಡಿಯಚ್ಚಿನಂತೆ ಕಾಣುವ ಈ ವ್ಯಕ್ತಿಯ ಹೆಸರು ಸದಾನಂದ ನಾಯಕ್. ಇವರು ಉಡುಪಿ ಸಮೀಪದ ಹಿರಿಯಡ್ಕ ನಿವಾಸಿ. ಇವರು ಬಿಜೆಪಿಯ ಕಟ್ಟರ್ ಅಭಿಮಾನಿಯಾಗಿದ್ದು, ಮೋದಿಯ ತದ್ರೂಪದಿಂದಾಗಿ ಬಿಜೆಪಿಯಲ್ಲಿ (BJP) ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಶನಿವಾರ ದಾವಣಗೆರೆಯಲ್ಲಿ (Davangere) ನಡೆದ ಜೆ.ಪಿ.ನಡ್ಡಾ ರೋಡ್ ಶೋಗೂ ಮುನ್ನ ಜೂನಿಯರ್ ಮೋದಿಯವರು ರೋಡ್ ಶೋ ನಡೆಸಿ ಎಲ್ಲಡೆ ಹವಾ ಸೃಷ್ಟಿಸುವ ಮೂಲಕ ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಎಲ್ಲರ ಗಮನಸೆಳೆದಿದ್ದಾರೆ. ಇದನ್ನೂ ಓದಿ: ಮೋದಿ ನೇತೃತ್ವದಲ್ಲಿ ಭಾರತ ವಿಶ್ವ ಮೆಚ್ಚುವ ಕೆಲಸ ಮಾಡುತ್ತಿದೆ: ರಾಜನಾಥ್ ಸಿಂಗ್

    ಜೂನಿಯರ್ ಮೋದಿ ಎಂದೇ ಖ್ಯಾತವಾಗಿರುವ ಸದಾನಂದ ನಾಯಕ್ (Sadananda Nayak) ವೃತ್ತಿಯಲ್ಲಿ ಅಡುಗೆ ವೃತ್ತಿ ಮಾಡುತ್ತಿದ್ದಾರೆ. ಹಿಂದೆ ಒಂದು ಸಲ ಇವರು ಹರಿದ್ವಾರಕ್ಕೆ ಪ್ರವಾಸ ಹೋಗಿದ್ದರು. ಪ್ರವಾಸದಲ್ಲಿ ಇದ್ದ ಕಾರಣ ಗಡ್ಡ ತೆಗೆದಿರಲಿಲ್ಲ. ಗಡ್ಡ ಬಿಟ್ಟಿದ್ದ ಇವರನ್ನು ನೋಡಿದ ಉತ್ತರ ಭಾರತದ ಜನ ಮೋದಿ ಎಂದುಕೊಂಡು ಇವರ ಹಿಂದೆ ಮುಗಿಬಿದ್ದರಂತೆ. ಅಂದೇ ತನ್ನ ಮುಖದಲ್ಲಿ ನರೇಂದ್ರ ಮೋದಿಯವರ ಛಾಯೆಯಿದೆ ಎಂದು ಅವರಿಗೆ ಅರಿವಾಗಿದ್ದು. ಅಂದಿನಿಂದ ಇವರ ಬೇಡಿಕೆ ಹೆಚ್ಚಾಗಿದ್ದು, ಒಂದು ದಿನ ವಿರಾಮವಿಲ್ಲದಂತೆ ಬಿಜೆಪಿ ಪರವಾಗಿ ಸಂಚಾರ ಮಾಡುತ್ತಿದ್ದಾರೆ. ಇವರ ಹಾವಭಾವಗಳು ಸಹ ಮೋದಿಯಂತೆ ಇರುವುದರಿಂದ ಜನರನ್ನು ಮೋಡಿಮಾಡುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರೋಡ್ ಶೋ – ಕೇಸರಿ ಪೇಟ ಧರಿಸಿದ ಮೋದಿ

  • ಕಿಚ್ಚನಿಗೆ ಬೆದರಿಕೆ ಪತ್ರ: ಸುದೀಪ್ ನೀಡಿದ ಅಚ್ಚರಿಕೆ ಪ್ರತಿಕ್ರಿಯೆ

    ಕಿಚ್ಚನಿಗೆ ಬೆದರಿಕೆ ಪತ್ರ: ಸುದೀಪ್ ನೀಡಿದ ಅಚ್ಚರಿಕೆ ಪ್ರತಿಕ್ರಿಯೆ

    ಟ ಸುದೀಪ್ (Sudeep) ಅವರಿಗೆ ಬೆದರಿಕೆ ಪತ್ರ ಬಂದು ಒಂದು ತಿಂಗಳು ಕಳೆದಿದೆ. ಅವರು ದೂರು ದಾಖಲಿಸಿ 25 ದಿನಕ್ಕೂ ಹೆಚ್ಚು ದಿನಗಳು ಉರುಳಿವೆ. ಪತ್ರ ಬರೆದವರ ಬೆನ್ನತ್ತಿರುವ ಸಿಸಿಬಿಗೆ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಆದರೂ, ತಮ್ಮ ಪ್ರಯತ್ನವನ್ನು ಅವರು ನಿಲ್ಲಿಸಿಲ್ಲ. ಈ ಕುರಿತು ಇದೇ ಮೊದಲ ಬಾರಿಗೆ ಕಿಚ್ಚು ಸುದೀಪ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಚುನಾವಣಾ ಪ್ರಚಾರಕ್ಕೆ ಹೊರಡುತ್ತಿರುವ ಸಂದರ್ಭದಲ್ಲಿ ಬೆದರಿಕೆ ಪತ್ರದ ಬಗ್ಗೆ ಮಾತನಾಡಿದ್ದಾರೆ.

    ಬೆದರಿಕೆಯ ಪತ್ರದ (Threat letter) ಬಗ್ಗೆ ಮಾತನಾಡಿದ ಸುದೀಪ್, ‘ನಂಗೆ ತುಂಬಾ ಲವ್ ಲೇಟರ್ ಗಳು ಬರ್ತಾ ಇರ್ತಾವೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳೋಕೆ ಆಗಲ್ಲ’ ಎಂದು ಚುಟುಕಾಗಿ ಉತ್ತರಿಸಿದ್ದಾರೆ. ಈ ಮೂಲಕ ಪತ್ರ ಬರೆದವರ ಬಗ್ಗೆ ಕೇರ್ ಮಾಡುವುದಿಲ್ಲ ಎಂದು ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ‘ಆ ವಿಚಾರದಲ್ಲಿ ತನಿಖೆ ನಡೆಯುತ್ತಿದೆ. ನನ್ನ ಪಾಡಿಗೆ ನಾನು ಇವತ್ತಿನಿಂದ ಪ್ರಚಾರಕ್ಕೆ ಹೋಗ್ತಾ ಇದೀನಿ’ ಎಂದಿದ್ದಾರೆ.

    ಇಂದಿನಿಂದ ಸುದೀಪ್ ಬಿಜೆಪಿ (BJP) ಅಭ್ಯರ್ಥಿಗಳ ಪರವಾಗಿ ಮತಯಾಚನೆ (Campaign) ಮಾಡುತ್ತಿದ್ದಾರೆ.  ಬೆಂಗಳೂರಿನಿಂದ ಹೊರಡುವ ಇವರ ಪಯಣ ಮೊದಲು ಮೊಳಕಾಲ್ಮೂರು (Molakalmuru) ಕ್ಷೇತ್ರದಿಂದ ಪ್ರಚಾರ ಆರಂಭಿಸಲಿದೆ. ಬೆಳಗ್ಗೆ 10.15ಕ್ಕೆ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ತಿಪ್ಪೇಸ್ವಾಮಿ ಪರವಾಗಿ ಕಿಚ್ಚ ಮತಯಾಚನೆ ಮಾಡಲಿದ್ದಾರೆ. ಇದನ್ನೂ ಓದಿ: ವಿಜಯ್‌ ವರ್ಮಾ ಜೊತೆ KGF ನಟಿ ತಮನ್ನಾ ಡಿನ್ನರ್‌ ಡೇಟ್‌

    ಮೊಳಕಾಲ್ಮೂರು ಕ್ಷೇತ್ರದಿಂದ ನೇರವಾಗಿ ಜಗಳೂರು ಕ್ಷೇತ್ರದತ್ತ ಹೆಲಿಕಾಪ್ಟರ್ ನಲ್ಲೇ ಪ್ರಯಾಣ ಮುಂದುವರೆಸುವ ಸುದೀಪ್ 12.30ಕ್ಕೆ ಜಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಅವರ ಪರವಾಗಿ ರೋಡ್ ಶೋ ನಡೆಸಲಿದ್ದಾರೆ. ಒಂದು ಗಂಟೆಗೂ ಅಧಿಕ ಕಾಲ ಅವರು ರೋಡ್ ಶೋ ಮಾಡಲಿದ್ದಾರೆ.

    ಜಗಳೂರು (Jagaluru) ರೋಡ್ ಶೋ ಮುಗಿಸಿಕೊಂಡು ಊಟದ ನಂತರ ಸುದೀಪ್, ಮಾಯಕೊಂಡ (Mayakonda) ಕ್ಷೇತ್ರದತ್ತ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 3.10ಕ್ಕೆ ಮಾಯಕೊಂಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ನಾಯ್ಕ ಪರವಾಗಿ ಸುದೀಪ್ ಮತಯಾಚನೆ ಮಾಡಲಿದ್ದಾರೆ. ಅಲ್ಲದೇ, ಸರಕಾರಿ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲೂ ಅವರು ಭಾಗಿಯಾಗಲಿದ್ದಾರೆ.

    ಮಾಯಕೊಂಡದಿಂದ ಸುದೀಪ್ ದಾವಣಗೆರೆಗೆ (Davangere) ತೆರಳಲಿದ್ದು, ದಾವಣಗೆರೆಯ ಸೌತ್ ಮತ್ತು ನಾರ್ತ್ ಕ್ಷೇತ್ರಗಳ ಅಭ್ಯರ್ಥಿಗಳಾದ ಲೊಕ್ಕಿಕೆರೆ ನಾಗರಾಜ ಹಾಗೂ ಬಿ.ಜಿ. ಅಜಯ್ ಕುಮಾರ್ ಪರವಾಗಿ ಸಂಜೆ 4.20ಕ್ಕೆ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ. ಅಲ್ಲಿಂದ ನೇರವಾಗಿ ಸಂಡೂರಿಗೆ ತೆರಳಿ ಸಂಡೂರು (Sandur) ಬಿಜೆಪಿ ಅಭ್ಯರ್ಥಿ ಶಿಲ್ಪಾ ನಾಗೇಂದ್ರ ಪರವಾಗಿ ಸಂಜೆ 6.10ಕ್ಕೆ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ.