Tag: davangere

  • ದಾವಣಗೆರೆ | ಪ್ರೀತಿಸುವಂತೆ ಯುವತಿಗೆ ಪೀಡಿಸಿದ ಯುವಕನಿಗೆ 3 ತಿಂಗಳ ಜೈಲು!

    ದಾವಣಗೆರೆ | ಪ್ರೀತಿಸುವಂತೆ ಯುವತಿಗೆ ಪೀಡಿಸಿದ ಯುವಕನಿಗೆ 3 ತಿಂಗಳ ಜೈಲು!

    ದಾವಣಗೆರೆ: ಪ್ರೀತಿಸುವಂತೆ (Love) ಯುವತಿಗೆ ಪೀಡಿಸಿದ್ದ ಯುವಕನಿಗೆ ದಾವಣಗೆರೆಯ (Davangere) ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

    ನಗರದ ಎಸ್‌ಓಜಿ ಕಾಲನಿ ಸಿ ಬ್ಲಾಕ್ ನಿವಾಸಿಯಾದ ನವೀನ್ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ. ಆತ 2021ರ ಜೂ.19 ರಂದು ಹದಡಿ ರಸ್ತೆಯ ಮಾಲ್ ಮುಂಭಾಗ ತಂದೆಯೊಂದಿಗೆ ಬೈಕ್‌ನಲ್ಲಿ ಹೊರಟಿದ್ದ ಯುವತಿಯನ್ನು ಅಡ್ಡ ಹಾಕಿ ಪ್ರೀತಿಸುವಂತೆ ಅವಾಜ್‌ ಹಾಕಿದ್ದ. ಅಲ್ಲದೇ ಅವಾಚ್ಯವಾಗಿ ನಿಂದಿಸಿ, ಪ್ರಾಣ ಬೆದರಿಕೆ ಹಾಕಿ, ಲಾಂಗ್‌ನಿಂದ ಹಲ್ಲೆ ಮಾಡಿದ್ದ. ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಳು. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ನವೀನ್‌ ವಿರುದ್ಧ ದೂರು ದಾಖಲಾಗಿತ್ತು.

    ಪೊಲೀಸ್‌ ಅಧಿಕಾರಿ ರೂಪಾ ತೆಂಬದ್ ತನಿಖೆ ಮಾಡಿ, ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ, ಅಪರಾಧಿಗೆ 3 ತಿಂಗಳು ಜೈಲು ಶಿಕ್ಷೆ, 15 ಸಾವಿರ ರೂ. ದಂಡ ವಿಧಿಸಿ ತೀಪು ನೀಡಿದ್ದಾರೆ.

    ಆರೋಪಿಯು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದುದರಿಂದ ಈ ಬಂಧನದ ಅವಧಿಯನ್ನು ಪರಿಗಣಿಸಿ, ಶಿಕ್ಷಾ ಅವಧಿಯನ್ನು ಕಡಿತಗೊಳಿಸಲಾಗಿದೆ. ಅಪರಾಧಿಯಿಂದ ವಸೂಲು ಮಾಡಿದ 10 ಸಾವಿರ ರೂ. ಹಣವನ್ನು ಸಂತ್ರಸ್ತೆಗೆ ಪರಿಹಾರ ನೀಡಲು, ಉಳಿದ 5 ಸಾವಿರ ರೂ.ಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಲಾಗಿದೆ.

    ಸರ್ಕಾರದ ಪರ ಸರ್ಕಾರಿ ವಕೀಲ ಬಿ.ಮಂಜುನಾಥ ವಾದ ಮಂಡಿಸಿದ್ದರು.

  • 15 ಎಕರೆ ಒತ್ತುವರಿ ಭೂಮಿ ವಶಕ್ಕೆ ಪಡೆದ ಅರಣ್ಯ ಇಲಾಖೆ: 3 ಸಾವಿರ ಅಡಿಕೆ ಮರಕ್ಕೆ ಕೊಡಲಿ

    15 ಎಕರೆ ಒತ್ತುವರಿ ಭೂಮಿ ವಶಕ್ಕೆ ಪಡೆದ ಅರಣ್ಯ ಇಲಾಖೆ: 3 ಸಾವಿರ ಅಡಿಕೆ ಮರಕ್ಕೆ ಕೊಡಲಿ

    ದಾವಣಗೆರೆ: ಚನ್ನಗಿರಿ (Channagiri) ತಾಲೂಕಿನ ಶಾಂತಿಸಾಗರದಲ್ಲಿ ಅರಣ್ಯ ಭೂಮಿ (Forest Land) ಒತ್ತುವರಿ ಮಾಡಿದವರಿಗೆ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಶಾಕ್ ನೀಡಿದ್ದಾರೆ. ಒತ್ತುವರಿ ಮಾಡಿದ್ದ 15 ಎಕರೆ ಅರಣ್ಯ ಪ್ರದೇಶವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಶಾಂತಿಸಾಗರದ ಗುಡುಂಘಟ್ಟದ ಸರ್ವೇ ನಂ.43 ರಲ್ಲಿ 15 ಎಕರೆ ಜಾಗವನ್ನು ವಶಕ್ಕೆ ಪಡೆಯಲಾಗಿದೆ. ಈ ಭಾಗದಲ್ಲಿ ಜನರು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಆ ಜಾಗದಲ್ಲಿ ಅಡಿಕೆ ಮತ್ತು ಬಾಳೆ ಬೆಳೆದಿದ್ದರು. ಅಧಿಕಾರಿಗಳು 3 ಸಾವಿರ ಅಡಿಕೆ ಮತ್ತು ಬಾಳೆ ಗಿಡಗಳನ್ನು ತೆರವು ಮಾಡಿ, ಜಾಗವನ್ನು ವಶಕ್ಕೆ ಪಡೆದಿದ್ದಾರೆ.

    ಸುಮಾರು ವರ್ಷಗಳಿಂದ ರೈತರು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಸಾಗುವಳಿ ಮಾಡಿಕೊಂಡು ಬಂದಿದ್ದರು. ಬಳಿಕ ಜಾಗದಲ್ಲಿ ಅಡಿಕೆ ತೋಟ ಮಾಡಿದ್ದರು. ಅಡಿಕೆ, ಬಾಳೆಗಿಡಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಿಬ್ಬಂದಿ ತೆರವು ಮಾಡಿದ್ದಾರೆ.

  • ದಾವಣಗೆರೆ | ವಿದ್ಯುತ್ ಶಾಕ್‍ಗೆ ಒಂದೂವರೆ ವರ್ಷದ ಮಗು ಬಲಿ

    ದಾವಣಗೆರೆ | ವಿದ್ಯುತ್ ಶಾಕ್‍ಗೆ ಒಂದೂವರೆ ವರ್ಷದ ಮಗು ಬಲಿ

    ದಾವಣಗೆರೆ: ವಿದ್ಯುತ್ ಶಾಕ್ ಹೊಡೆದು ಒಂದೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ಹೊನ್ನಾಳಿಯ (Honnali) ಸೊರಟೂರು ಗ್ರಾಮದಲ್ಲಿ ನಡೆದಿದೆ.

    ಮೃತ ಮಗುವನ್ನು ಗ್ರಾಮದ ಆಂಜನೇಯ ಎಂಬುವರ ಪುತ್ರ ಮಂಜು ಎಂದು ಗುರುತಿಸಲಾಗಿದೆ. ಮಗುವಿನ ತಾಯಿ ಮನೆಯಲ್ಲಿ ಮೋಟರ್ ಆನ್ ಮಾಡಿ ನೀರು ತುಂಬಿಸುವಾಗ ಈ ಘಟನೆ ನಡೆದಿದೆ. ಆಟವಾಡುತ್ತಿದ್ದಾಗ ಮಗು ನೀರಿನ ಮೋಟರ್ ಹಿಡಿದುಕೊಂಡಿದೆ. ಇದರಿಂದ ಮಗುವಿಗೆ ವಿದ್ಯತ್ ಶಾಕ್ ಹೊಡೆದಿದ್ದು, ಮಗು ಸ್ಥಳದಲ್ಲೇ ಸಾವಿಗೀಡಾಗಿದೆ.

    ಮಗುವಿನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್‌ – ದಾವಣಗೆರೆಯ ಪಾಕ್ ಸೊಸೆ ಚೆನ್ನೈನಲ್ಲಿ ಅರೆಸ್ಟ್‌

    ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್‌ – ದಾವಣಗೆರೆಯ ಪಾಕ್ ಸೊಸೆ ಚೆನ್ನೈನಲ್ಲಿ ಅರೆಸ್ಟ್‌

    – ದಾವಣಗೆರೆ ಮೂಲದ ವ್ಯಕ್ತಿಯಿಂದಲೇ ಪಾಕ್ ಮೂಲದವರಿಗೆ ಆಶ್ರಯ

    ದಾವಣಗೆರೆ: ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಿಂದ ಬಂದು, ಹಿಂದೂಗಳ (Hindu) ಹೆಸರಿಟ್ಟುಕೊಂಡು ಅಕ್ರಮವಾಗಿ ನೆಲೆಸಿದ್ದ ಪಾಕ್‌ ಮೂಲದ ಮಹಿಳೆ ಹಾಗೂ ದಾವಣಗೆರೆ (Davanagere) ಮೂಲದ ವ್ಯಕ್ತಿ ಚೆನ್ನೈನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

    ಇವರು ಮೆಹೆದಿ ಫೌಂಡೇಷನ್ ಇಂಟರ್ ನ್ಯಾಷನಲ್ ಸಂಘಟನೆ ಸದಸ್ಯರಾಗಿದ್ದರು. ಇಸ್ಲಾಂ ಧರ್ಮ ಪ್ರಸಾರಕ್ಕಾಗಿ ಆರಂಭವಾದ ಬಾಂಗ್ಲಾದ (Bangladesh) ವಾಹಿನಿಯೊಂದರಲ್ಲಿ ಬರುವ ಕಾರ್ಯಕ್ರಮವನ್ನು ವೀಕ್ಷಣೆ ಮಾಡುವಂತೆ ಸ್ಥಳೀಯ ಮುಸ್ಲಿಂ ಸಮಾಜದವರಿಗೆ ಪ್ರೇರೇಪಿಸುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಬಂಧನವಾಗಿದ್ದ ಶಂಕಿತ ಉಗ್ರನಿಂದ ರಹಸ್ಯ ಸ್ಫೋಟ –  ಆ.15ರಂದು ಸ್ಫೋಟಿಸಲು ಇರಿಸಿದ್ದ ಜೀವಂತ IED ವಶ

    ಮಂಗಳವಾರ ಬೆಂಗಳೂರಿನ ಆನೇಕಲ್ ತಾಲೂಕಿನ ಜಿಗಣಿ ಠಾಣೆಯ ಪೊಲೀಸರು ನಾಲ್ವರನ್ನ ಬಂಧಿಸಿದ್ದರು. ಇವರು ಜಿಗಣಿ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಜಾಪೂರ ಗ್ರಾಮದಲ್ಲಿ ವಾಸವಿದ್ದರು. ಈ ಪ್ರಕರಣ ಹೊರ ಬಿದ್ದ ಬೆನ್ನಲ್ಲೇ ನಕಲಿ ದಾಖಲೆ ಸೃಷ್ಠಿಸಿ ನೆಲೆಸಿದ್ದ ದಾವಣಗೆರೆ ಮೂಲದ ಅಲ್ತಾಫ್‌ ಹಾಗೂ ಆತನ ಹೆಂಡತಿ ಪಾಕ್‌ ಮೂಲದ ಫಾತಿಮಾ ಚೆನ್ನೈನಲ್ಲಿ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಹಿಂದೆ ಹೋಗು ಎಂದಿದ್ದಕ್ಕೆ ಬಿಎಂಟಿಸಿ ಕಂಡಕ್ಟರ್‌ ಹೊಟ್ಟೆಗೆ ಚಾಕು ಇರಿದ ಯುವಕ

    ಅಲ್ತಾಫ್‌ ತಂದೆ ಖಲಂದರಸಾಬ್ ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಕರಾಗಿದ್ದರು. ದಾವಣಗೆರೆ ನಗರದ ಶಿವಕುಮಾರ ಬಡಾವಣೆಯಲ್ಲಿ ಜೆಕೆ ಮಂಜಿಲ್ ಎಂಬಲ್ಲಿ ಸ್ವಂತ ಮನೆ ಹೊಂದಿದ್ದಾರೆ. ಖಲಂದರ ಸಾಬ್ ಬೆಂಗಳೂರಿಗೆ ವರ್ಗಾವಣೆ ಆದ ಬಳಿಕ ಕುಟುಂಬ ಬೆಂಗಳೂರಿನಲ್ಲಿದೆ. ಅವರ ಮೂರು ಜನ ಮಕ್ಕಳಲ್ಲಿ ಈಗ ಚೆನ್ನೈನಲ್ಲಿ ಬಂಧನಕ್ಕೊಳಗಾದ ಅಲ್ತಾಫ್‌ ಕೂಡ ಒಬ್ಬ ಎಂಬುದು ಆಘಾತಕಾರಿ ವಿಚಾರ. ಇತ್ತ ಫಾತಿಮಾ ಎಂಬ ಪಾಕ್ ಮೂಲಕ ಯುವತಿಯನ್ನ ಮದ್ವೆ ಆಗಿದ್ದಾನೆ. ಬಾಂಗ್ಲಾ ದೇಶಕ್ಕೆ ಹೋಗಿ ವಾಪಸ್‌ ಬರುವಾಗ ಈತ ಚೆನ್ನೈ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇವರಿಬ್ಬರು ಇಸ್ಲಾಂ ಧರ್ಮದ ಬಗ್ಗೆ ಪ್ರಚಾರ ಮಾಡುವ ಮೆಹೆದಿ ಫೌಂಡೇಷನ್ ಇಂಟರ್ ನ್ಯಾಷನಲ್ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಫಾತಿಮಾಳನ್ನು ಮದುವೆಯಾದ ಬಳಿಕ ಅವಳ ತಂದೆ, ತಾಯಿ, ಅಣ್ಣ ಅತ್ತಿಗೆಯನ್ನ ಪಾಕ್ ಮತ್ತು ಬಾಂಗ್ಲಾದಿಂದ ಮೊದಲು ದೆಹಲಿ ನಂತರ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಅಲ್ಲದೇ ಪಾಕ್ ಮೂಲದ ಮಹಿಳೆಗೆ ದಾವಣಗೆರೆಯ ನಿವಾಸದ ವಿಳಾಸದಲ್ಲೇ ಪಾಸ್‌ಪೋರ್ಟ್‌ ದಾಖಲೆಗಳನ್ನು ಮಾಡಿಸಿಕೊಟ್ಟಿದ್ದರು ಎಂಬ ರಹಸ್ಯವೂ ತನಿಖೆಯಲ್ಲಿ ಬಯಲಾಗಿದೆ.

    ಪಾಕ್‌ ಮೂಲದ ಪ್ರಜೆಗಳು 2018ರಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ದೆಹಲಿಯಲ್ಲಿ ನಕಲಿ ಆಧಾರ್‌ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಯಾರಿಗೂ ಸಂಶಯ ಬಾರದಿರಲಿ ಎಂದು ಹಿಂದೂಗಳ ಹೆಸರಿಟ್ಟುಕೊಂಡು ಜೀವನ ನಡೆಸುತ್ತಿದ್ದರು. ರಶೀದ್ ಅಲಿ ಸಿದ್ದೀಕಿ ಅಲಿಯಾಸ್ ಶಂಕರ್ ಶರ್ಮಾ, ಪಾಕಿಸ್ತಾನದ ಕರಾಚಿ ಮೂಲದವರು. ಆಯೆಷಾ ಅಲಿಯಾಸ್ ಆಶಾರಾಣಿ, ಹನೀಫ್ ಮೊಹಮ್ಮದ್‌ ಅಲಿಯಾಸ್ ರಾಮ್ ಬಾಬು ಶರ್ಮಾ, ರುಬೀನಾ ಅಲಿಯಾಸ್ ರಾಣಿ ಶರ್ಮಾ ಲಾಹೋರ್‌ ಮೂಲದವರು. ಈ ನಾಲ್ವರನ್ನ ಜಿಗಣಿ ಪೊಲೀಸರು ಬಂಧಿಸಿದ್ದರು.

    ಅಲ್ತಾಫ್‌ ಮತ್ತು ಫಾತಿಮಾ ದಂಪತಿ ಇಲ್ಲಿನ ಮುಸ್ಲಿಂ ಸಮಾಜದವರಿಗೆ ಮುಸ್ಲಿಂ ಪ್ರಚಾರ ಕಾರ್ಯಕ್ರಮಗಳನ್ನು ನೋಡುವಂತೆ ಪ್ರೇರೇಪಿಸುತ್ತಿದ್ದರು. ಈ ಕೆಲಸಕ್ಕಾಗಿ ಇವರಿಗೆ ಫಂಡಿಂಗ್‌ ಕೂಡ ಬರುತ್ತಿತ್ತು. ಸದ್ಯ ಇಬ್ಬರನ್ನು ಬಂಧಿಸಿರುವ ತನಿಖಾ ಸಂಸ್ಥೆಗಳು ಅಲ್ತಾಫ್‌ ಮನೆಯಲ್ಲಿ ಪರಿಶೀಲನೆ ನಡೆಸಿವೆ. ದಾವಣಗೆರೆ ಪೊಲೀಸರು ಕೂಡ ಅಲರ್ಟ್‌ ಆಗಿದ್ದು, ನಕಲಿ ಪಾಸ್‌ಪೋರ್ಟ್‌ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ.

  • ಡಾಲಿ ಧನಂಜಯ್ ‘ಕೋಟಿ’ ಅಬ್ಬರಕ್ಕೆ  ದಾವಣಗೆರೆ ಫ್ಯಾನ್ಸ್ ಫಿದಾ

    ಡಾಲಿ ಧನಂಜಯ್ ‘ಕೋಟಿ’ ಅಬ್ಬರಕ್ಕೆ ದಾವಣಗೆರೆ ಫ್ಯಾನ್ಸ್ ಫಿದಾ

    ಡಾಲಿ ಧನಂಜಯ್ (Dolly Dhananjay) ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಕೋಟಿ’ (Kotee) ಜೂನ್ 14ರಂದು ಬಿಡುಗಡೆಯಾಗಲು ಸಿದ್ಧವಾಗಿದೆ.‌ ಈಗಾಗಲೇ ಚಿತ್ರದ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದು, ಇದೇ ಬುಧವಾರ ‘ಕೋಟಿ’ಯ ಟ್ರೇಲರ್ ಬಿಡುಗಡೆಯಾಗಲಿದೆ.

    ‘ಕೋಟಿ’ಯ ಪ್ರಮೋಷನ್ ಸಲುವಾಗಿ ಡಾಲಿ ಧನಂಜಯ ದಾವಣಗೆರೆಗೆ (Davangere) ತೆರಳಿದ್ದರು. ದಾವಣಗೆರೆಯ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ‘ದವನ ಫೆಸ್ಟ್’ ಅತಿದೊಡ್ಡ ಕಾಲೇಜ್ ಫೆಸ್ಟಿವಲ್‌ಗಳಲ್ಲೊಂದು. ಇಲ್ಲಿಗೆ ಡಾಲಿ ಮುಖ್ಯ ಅತಿಥಿಯಾಗಿ ಬಂದಿದ್ದು ಅಭಿಮಾನಿಗಳನ್ನು ಖುಷಿಯ ಕಡಲಿನಲ್ಲಿ ತೇಲಿಸಿತ್ತು. ಸುಮಾರು ಐದು ಸಾವಿರಕ್ಕೂ ಅಧಿಕ ವಿಧ್ಯಾರ್ಥಿಗಳು ಸೇರಿದ್ದ ಈ ಸಮಾರಂಭದಲ್ಲಿ ಡಾಲಿಯ ಜತೆ ಕೋಟಿಯ ನಾಯಕಿ ಮೋಕ್ಷಾ ಕುಶಾಲ್, ಸಹಕಲಾವಿದರಾದ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್ ಮತ್ತು ಅಭಿಷೇಕ್ ಶ್ರೀಕಾಂತ್ ಪಾಲ್ಗೊಂಡಿದ್ದರು.

    ಡಾಲಿ ಧನಂಜಯ ‘ದವನ’ದ ವೇದಿಕೆಯ ಮೇಲೆ ಬರುತ್ತಿದ್ದಂತೆ ಅಭಿಮಾನಿಗಳ ಕೇಕೆ, ಕೂಗಾಟ ಮುಗಿಲ ಮುಟ್ಟಿತ್ತು. ‘ಕೋಟಿ’ ಒಬ್ಬ ಸಾಮಾನ್ಯ ಡ್ರೈವರ್‌. ಅವನಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ದುಡಿದು ತನ್ನ‌ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ. “ಇಲ್ಲಿ ಯಾರ್ಯಾರಿಗೆ ಕೋಟಿ ದುಡಿಯುವ ಆಸೆ ಇದೆ?” ಎಂದು ನೆರೆದಿದ್ದ ವಿಧ್ಯಾರ್ಥಿಗಳ ಕೇಳಿದ ಧನಂಜಯ ಎಲ್ಲರ ಉತ್ತರ ಕೇಳಿ, “ಕೋಟಿ ನಮ್ಮೆಲ್ಲರಿಗೂ ಕನೆಕ್ಟ್ ಆಗುವ ಸಿನಿಮಾ” ಎಂದರು. ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ‘ಕೋಟಿ’ಯ ಟೀಸರ್ ಮತ್ತು ಹಾಡುಗಳಿಗೆ ಅದ್ಭುತ ಪ್ರತಿಕ್ರಿಯೆ ದೊರೆಯಿತು. ಧನಂಜಯ್ ಕಾರ್ಯಕ್ರಮದಿಂದ ವಾಪಾಸು ಹೋಗುವವರೆಗೂ ಇಡೀ ಕಾಲೇಜಿನ‌ ಮೂಲೆಮೂಲೆಯಲ್ಲಿ ‘ಡಾಲಿ ಡಾಲಿ’ ಎಂಬ  ಅಭಿಮಾನಿಗಳ‌ ಪ್ರೀತಿಯ ದನಿ ಮೊಳಗುತ್ತಿತ್ತು.

    ಜೂನ್ 14 ರಂದು ಬಿಡುಗಡೆಗೆ ಸಿದ್ಧವಾಗಿರುವ ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

    ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್. ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

  • ಅಲ್ಪಸಂಖ್ಯಾತರು ಗಲಭೆ ಮಾಡಿದ್ರೆ ಯಾಕೆ ಖಂಡನೆ ಮಾಡೋದಿಲ್ಲ – ಸಿಎಂಗೆ ಜೋಶಿ ಪ್ರಶ್ನೆ!

    ಅಲ್ಪಸಂಖ್ಯಾತರು ಗಲಭೆ ಮಾಡಿದ್ರೆ ಯಾಕೆ ಖಂಡನೆ ಮಾಡೋದಿಲ್ಲ – ಸಿಎಂಗೆ ಜೋಶಿ ಪ್ರಶ್ನೆ!

    – ಚನ್ನಗಿರಿ ಪ್ರಕರಣದಲ್ಲಿ ಮಾತ್ರ ಪೊಲೀಸರ ಮೇಲೆ ಕ್ರಮ ಯಾಕೆ?
    – ರಾಜ್ಯ ಸರ್ಕಾರದ ವಿರುದ್ಧ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

    ಹುಬ್ಬಳ್ಳಿ: ಯಾರು ಎಲ್ಲೇ ಗಲಭೆ ಮಾಡಿದರೂ ತಪ್ಪು, ಅದನ್ನು ಖಂಡಿಸಬೇಕು. ಆದ್ರೆ ಅಲ್ಪಸಂಖ್ಯಾತರು ಗಲಭೆ ಮಾಡಿದ್ರೆ ಯಾಕೆ ಖಂಡನೆ ಮಾಡೋದಿಲ್ಲ? ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಅವರು ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನ ಪ್ರಶ್ನೆ ಮಾಡಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಗಿರಿ ಲಾಕಪ್‌ ಡೆತ್ (Channagiri Lockup Death) ವಿಚಾರದಲ್ಲಿ ಸಿದ್ದರಾಮಯ್ಯನವರು ತೆಗೆದುಕೊಂಡ ನಿರ್ಧಾರವನ್ನು ಈ ಹಿಂದೆ ನಡೆದ ಯಾವುದೇ ವಿಚಾರದಲ್ಲಿಯೂ ತೆಗೆದುಕೊಂಡಿಲ್ಲ. ಅಂಜಲಿ, ನೇಹಾ ಹಿರೇಮಠ ಪ್ರಕರಣದಲ್ಲಿ ಪೊಲೀಸರ ಮೇಲೆ ಕ್ರಮ ಆಗಿಲ್ಲ. ಆದರೆ ಈ ಪ್ರಕರಣದಲ್ಲಿ ಪೊಲೀಸರ ಮೇಲೆ ಕ್ರಮ ಯಾಕೆ ಅಂತ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಜಗತ್ತನ್ನೇ ಬೆಚ್ಚಿ ಬೀಳಿಸಿದ ಸೋಂಕಿತ ರಕ್ತ ಹಗರಣ – ಯುಕೆಯಲ್ಲಿ ಡೆಡ್ಲಿ ಚಿಕಿತ್ಸೆ ತಂದ ವಿಪತ್ತು; ಏನಿದು ಹಗರಣ?

    ಒತ್ತಡ ಹಾಕಿದ್ರೆ ಪೊಲೀಸರೇ ಓಡಿ ಹೋಗ್ತಾರೆ:
    ಸಿದ್ದರಾಮಯ್ಯನವರೇ ನೀವು ಎಷ್ಟು ತುಷ್ಟೀಕರಣದ ರಾಜಕೀಯ ಮಾಡುತ್ತಿದ್ದೀರಿ, ನಿಮ್ಮ ಈ ತುಷ್ಟಿಕರಣ ರಾಜಕೀಯದಿಂದ ಅರಾಜಕತೆ ಸೃಷ್ಟಿ ಆಗುತ್ತದೆ. ಅಲ್ಪಸಂಖ್ಯಾತರು ಗಲಭೆ ಮಾಡಿದ್ರೆ ಯಾಕೆ ಖಂಡನೆ ಮಾಡೋದಿಲ್ಲ? ಯಾರೇ ಗಲಭೆ ಮಾಡಿದ್ರೂ ತಪ್ಪು, ಅದನ್ನು ಖಂಡಿಸಲೇಬೇಕು. ಆದ್ರೆ ಈ ವಿಚಾರದಲ್ಲಿ ಪೊಲೀಸರ ನೈತಿಕತೆ ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ, ಠಾಣೆ ಬಿಟ್ಟು ಓಡಿಹೋಗ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಇನ್ನೂ ಪೊಲೀಸರು ಪ್ರತಿ 2 ಗಂಟೆಗೆ ಡ್ರಿಲ್‌ ಮಾಡಬೇಕು ಎಂಬ ಸಿಎಂ ಆದೇಶ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊದಲು ಸಿಎಂಗೆ ಮತ್ತು ಗೃಹಸಚಿವರಿಗೆ ಡ್ರಿಲ್‌ ಮಾಡಿಸಬೇಕು. ರಾಜ್ಯ ಪೊಲೀಸರಿಂದು ಒತ್ತಡದಲ್ಲಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಔರಾಧ್ ಕರ್ ವರದಿಯನ್ನೇ ಇನ್ನೂ ಜಾರಿ ಮಾಡಿಲ್ಲ, 2 ಗಂಟೆಗೊಮ್ಮೆ ಡ್ರಿಲ್‌ ಮಾಡಿ ಅಂದರೆ ಅವರು ಎಲ್ಲಿಂದ ಮಾಡಬೇಕು? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆಯ ಧ್ವನಿಯಲ್ಲಿ ಮಾತನಾಡಿ 7 ವಿದ್ಯಾರ್ಥಿನಿಯರ ಅತ್ಯಾಚಾರ – ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ

    ಪೊಲೀಸರು ಹುಚ್ಚರಂತೆ ರಸ್ತೆಯಲ್ಲಿ ಓಡಾಡಬೇಕಾ? ಹೀಗೆ ಮಾಡಿದರೆ ಜನ ಏನು ಹೇಳತ್ತಾರೆ? ಕರ್ನಾಟಕ ಸರ್ಕಾರ ಮತಿಭ್ರಮಣೆಗೊಂಡಿದೆ. ಆದೇಶ ಮಾಡುವುದಕ್ಕೂ ಮುನ್ನ ಯೋಚನೆ ಮಾಡುತ್ತಿಲ್ಲ. ಪೊಲೀಸರಿಗೆ ಹೊರಡಿಸಿರುವ ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.  ಇದನ್ನೂ ಓದಿ: ಕುರಾನ್ ಸತ್ಯವಾಗಿ ನನ್ನ ಗಂಡನಿಗೆ ಯಾವ್ದೇ ರೋಗ ಇರಲಿಲ್ಲ, ಪೊಲೀಸರೇ ಹೊಡೆದು ಕೊಂದಿದ್ದಾರೆ: ಮೃತ ಆದಿಲ್ ಪತ್ನಿ

  • ಅಂಜಲಿ ಬಳಿಕ ರೈಲಿನಲ್ಲಿ ಮಹಿಳೆಗೆ ಚಾಕು ಹಾಕಲು ಯತ್ನಿಸಿ ಸಿಕ್ಕಿಬಿದ್ದ ಕಿರಾತಕ ವಿಶ್ವ

    ಅಂಜಲಿ ಬಳಿಕ ರೈಲಿನಲ್ಲಿ ಮಹಿಳೆಗೆ ಚಾಕು ಹಾಕಲು ಯತ್ನಿಸಿ ಸಿಕ್ಕಿಬಿದ್ದ ಕಿರಾತಕ ವಿಶ್ವ

    ಹುಬ್ಬಳ್ಳಿ: ಅಂಜಲಿ ಕೊಲೆ (Anjali Murder) ಮಾಡಿದ್ದಲ್ಲದೇ ಮತ್ತೊಂದು ಕೊಲೆ ಮಾಡಲು ಹೋಗಿ ಕಿರಾತಕ ವಿಶ್ವ (Vishwa) ಈಗ ಅರೆಸ್ಟ್‌ ಆಗಿದ್ದಾನೆ.

    ಅಂಜಲಿಯನ್ನು ಹತ್ಯೆ ಮಾಡಿದ ಬಳಿಕ ವಿಶ್ವ ಪರಾರಿಯಾಗಿ ದಾವಣಗೆರೆ (Davanagere) ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ. ಈ ವೇಳೆ ರೈಲಿನಲ್ಲಿ ಮಹಿಳೆ ಜೊತೆ ಗಲಾಟೆ ಮಾಡಿ ಸಿಟ್ಟಾಗಿ ಚಾಕು ಹಾಕಲು ಮುಂದಾಗಿದ್ದ. ಇದನ್ನೂ ಓದಿ: ಅಂಜಲಿ ಹತ್ಯೆಗೈದಿದ್ದ ಆರೋಪಿ ಅರೆಸ್ಟ್ – ಬಗೆದಷ್ಟು ಬಯಲಾಗ್ತಿದೆ ವಿಶ್ವನ ದುಷ್ಕೃತ್ಯ

     

    ಈ ವಿಚಾರ ತಿಳಿಯುತ್ತಿದ್ದಂತೆ ಪ್ರಯಾಣಿಕರು ಆತನಿಗೆ ರೈಲಿನಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದರು. ಜನರಿಂದ ತಪ್ಪಿಸಿಕೊಳ್ಳಲು ವಿಶ್ವ ರೈಲಿನಿಂದ ಜಿಗಿದಿದ್ದ. ಹಳಿಯಲ್ಲಿ ಬಿದ್ದು ಗಾಯಗೊಂಡಿದ್ದ ಈತನನ್ನು ದಾವಣಗೆರೆ ರೈಲ್ವೇ ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ವೇಳೆ ವಿಶ್ವನ ವಿಳಾಸ ಇತ್ಯಾದಿ ಮಾಹಿತಿಗಳನ್ನು ಪರಿಶೀಲಿಸಿದಾಗ  ಈತನೇ ಅಂಜಲಿಯನ್ನು ಕೊಲೆ ಮಾಡಿದ ಆರೋಪಿ ಎನ್ನುವುದು ಪೊಲೀಸರಿಗೆ ದೃಢಪಡುತ್ತದೆ.

    ಈಗ ವಿಶ್ವನನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ್‌ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

  • ರಾಮನಗರಲ್ಲಿ 30 ಕೆಜಿಗೂ ಅಧಿಕ ಪ್ರಮಾಣದ ಚಿನ್ನ; ದಾವಣಗೆರೆಯಲ್ಲಿ 12.50 ಕೋಟಿ ರೂ. ಮೌಲ್ಯದ ಚಿನ್ನಾಭರಣ, ವಜ್ರ ಜಪ್ತಿ!

    ರಾಮನಗರಲ್ಲಿ 30 ಕೆಜಿಗೂ ಅಧಿಕ ಪ್ರಮಾಣದ ಚಿನ್ನ; ದಾವಣಗೆರೆಯಲ್ಲಿ 12.50 ಕೋಟಿ ರೂ. ಮೌಲ್ಯದ ಚಿನ್ನಾಭರಣ, ವಜ್ರ ಜಪ್ತಿ!

    ರಾಮನಗರ: ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಫುಲ್‌ ಅಲರ್ಟ್‌ ಆಗಿರುವ ಚುನಾವಣಾಧಿಕಾರಿಗಳು ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಕೋಟಿ ಕೋಟಿ ರೂ. ಬೆಲೆ ಬಾಳುವ ಚಿನ್ನ, ವಜ್ರ ಆಭರಣವನ್ನು ಜಪ್ತಿ ಮಾಡಿದ್ದಾರೆ. ರಾಮನಗರ, ದಾವಣಗೆರೆ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ (Gold Jewelry), ಕಚ್ಚಾ ಚಿನ್ನ ಹಾಗೂ ವಜ್ರಗಳನ್ನ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

    ರಾಮನಗರದ ಹೆಜ್ವಾಲ ಚೆಕ್‌ಪೋಸ್ಟ್‌ (Ramanagara Hejwala Checkpost) ಬಳಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ, 30 ಕೆಜಿಗೂ ಹೆಚ್ಚು ಚಿನ್ನ, 10 ಕೆಜಿಯಷ್ಟು ಬೆಳ್ಳಿಯನ್ನ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಬಾಡೂಟ ವಶಕ್ಕೆ ಪಡೆದ FST ಟೀಂ- ರಸ್ತೆಬದಿ ಚೆಲ್ಲಿದ ಊಟವನ್ನೇ ತಿಂದ ಕೆಲವರು!

    ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಮಲಬಾರ್‌ ಗೋಲ್ಡ್‌ & ಡೈಮಂಡ್‌ ಕಂಪನಿಗೆ ಸೇರಿದ್ದು ಎನ್ನಲಾದ ವಾಹನದಲ್ಲಿ ಚಿನ್ನ, ಬೆಳ್ಳಿ ಪತ್ತೆಯಾಗಿದೆ. ಸೂಕ್ತ ದಾಖಲೆ ಇಲ್ಲದಿದ್ದರಿಂದ ಅಧಿಕಾರಿಗಳು ಚಿನ್ನವನ್ನ ಜಪ್ತಿ ಮಾಡಿದ್ದಾರೆ. ಸೂಕ್ತ ದಾಖಲೆ ತೋರಿಸಿ, ಹಿಂಪಡೆದುಕೊಳ್ಳುವಂತೆ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Bengaluru: ಫ್ಲೈಓವರ್ ಮೇಲಿಂದ ಜಿಗಿದು ಕರ್ನಾಟಕ ವಿದ್ಯುತ್ ಕಾರ್ಖಾನೆ ಗುತ್ತಿಗೆ ನೌಕರ ಆತ್ಮಹತ್ಯೆ!

    ದಾವಣಗೆರೆಯಲ್ಲಿ 12.50 ಕೋಟಿ ರೂ. ಮೌಲ್ಯದ ಚಿನ್ನಾಭರಣ ಸೀಜ್‌:
    ಮತ್ತೊಂದು ಪ್ರಕರಣದಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 12.50 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ವಜ್ರವನ್ನು ದಾವಣಗೆರೆಯ ನಗರದ ಲೋಕಿಕೆರೆ ಚೆಕ್‌ಪೋಸ್ಟ್ ಬಳಿ ವಶಕ್ಕೆ ಪಡೆದಿದ್ದಾರೆ. ವಿವಿಧ ಆಭರಣ ಅಂಗಡಿಗಳಿಗೆ ಸಾಗಿಸುತ್ತಿದ್ದ ಚಿನ್ನಾಭರಣವನ್ನು ಸೂಕ್ತ ದಾಖಲೆಗಳಿಲ್ಲದ ಕಾರಣ ವಶಕ್ಕೆ ಪಡೆಯಲಾಗಿದೆ. ಚುನಾವಣಾ ಅಧಿಕಾರಿ ರೇಣುಕಾ, ಕಮರ್ಷಿಯಲ್ ಟ್ಯಾಕ್ಸ್ ನ ಇಲಾಖೆ ಉಪ ಆಯುಕ್ತ ಮಂಜುನಾಥ್ ನೇತೃತ್ವದಲ್ಲಿ ಜಪ್ತಿ ಮಾಡಲಾಗಿದೆ.

  • ಪತ್ನಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಇಡೀ ಜಿಲ್ಲೆಗೆ ಖುಷಿಯಾಗಿದೆ: ಜಿ.ಎಂ ಸಿದ್ದೇಶ್ವರ್

    ಪತ್ನಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಇಡೀ ಜಿಲ್ಲೆಗೆ ಖುಷಿಯಾಗಿದೆ: ಜಿ.ಎಂ ಸಿದ್ದೇಶ್ವರ್

    ಬೆಂಗಳೂರು: ಆರೋಗ್ಯದ ಸಮಸ್ಯೆಯಿಂದ ನನಗೆ ಲೋಕಸಭಾ ಚುನಾವಣೆಗೆ (General Elections 2024) ಸ್ಪರ್ಧಿಸಲು ಆಗುತ್ತಿಲ್ಲ. ಇದೇ ಕಾರಣಕ್ಕೆ ನನ್ನ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದೆ. ಅಂತಿಮವಾಗಿ ನನ್ನ ಪತ್ನಿಗೆ ವರಿಷ್ಠರು ಟಿಕೆಟ್ ಕೊಟ್ಟಿದ್ದಾರೆ ಎಂದು ದಾವಣಗೆರೆ (Davangere) ಸಂಸದ ಜಿ.ಎಂ ಸಿದ್ದೇಶ್ವರ್ (GM Siddeshwar) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ನನ್ನ ಪತ್ನಿಯ ಟಿಕೆಟ್‍ನಿಂದ ಇಡೀ ಜಿಲ್ಲೆಗೆ ಖುಷಿಯಾಗಿದೆ. ಅಲ್ಲೋ ಇಲ್ಲೋ ಒಬ್ಬರು ಮಾತಾಡ್ತಿದ್ದಾರೆ. ಅವರು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಚುನಾವಣೆ ಮಾಡುತ್ತೇನೆ ಎಂದಿದ್ದಾರೆ.

    ಜಿಲ್ಲೆಯಲ್ಲಿ ಡೀಸೆಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೆಲ್ಲ ಬರೀ ನಾಟಕ ಅಷ್ಟೇ. ಎಂ.ಪಿ ರೇಣುಕಾಚಾರ್ಯ ನನ್ನ ಮಿತ್ರ ನಾನು ಅವನ ಜೊತೆ ಮಾತಾನಾಡುತ್ತೇನೆ. ನನ್ನ ಪತ್ನಿಯ ಗೆಲುವಿಗೆ ಅವನು ಸಹಕಾರ ಕೊಡುತ್ತಾನೆ ಎಂದಿದ್ದಾರೆ.

  • ಬೆಳಗಾವಿ ಅಧಿವೇಶನದ ಬಳಿ ಪ್ರತಿಭಟನೆಗೆ ತೆರಳುತ್ತಿದ್ದ ಬಸ್ ಅಪಘಾತ – 17 ಮಂದಿಗೆ ಗಾಯ

    ಬೆಳಗಾವಿ ಅಧಿವೇಶನದ ಬಳಿ ಪ್ರತಿಭಟನೆಗೆ ತೆರಳುತ್ತಿದ್ದ ಬಸ್ ಅಪಘಾತ – 17 ಮಂದಿಗೆ ಗಾಯ

    ದಾವಣಗೆರೆ: ದಾವಣಗೆರೆಯ (Davangere) ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ (Accident) ಸಂಭವಿಸಿದೆ. ಬೆಳಗಾವಿ ಅಧಿವೇಶನದ (Belagavi Session) ಬಳಿ ಪ್ರತಿಭಟನೆಗೆ (Protest)  ತೆರಳುತ್ತಿದ್ದ ಬಸ್ (Bus) ಲಾರಿಗೆ ಡಿಕ್ಕಿ ಹೊಡೆದಿದೆ.

    ಬಸ್‌ನಲ್ಲಿ ಬೆಂಗಳೂರು, ಚಿಕ್ಕಬಳ್ಳಾಪುರ, ಚಿಂತಾಮಣಿ ಮಾದಿಗ ದಂಡೋರ ಜಾಗೃತಿ ಸಮಿತಿ ಪದಾಧಿಕಾರಿಗಳು ಇದ್ದರು. ಸದಾಶಿವ ಆಯೋಗ ಜಾರಿಗೆ ಆಗ್ರಹಿಸಿ ಹೋರಾಟಗಾರರು ಪ್ರತಿಭಟನೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು – ರೈಲು ಸೇವೆಯಲ್ಲಿ ವ್ಯತ್ಯಯ

    ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ 17 ಮಂದಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆ ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಯುವಕ ಪರಾರಿಯಾಗಿದ್ದಕ್ಕೆ ತಾಯಿಯ ವಿವಸ್ತ್ರಗೊಳಿಸಿ ಹಲ್ಲೆ