Tag: davangere

  • ದಾವಣಗೆರೆಯ ಈ ಹಳ್ಳಿಗೆ ದೀಪಾವಳಿ ಅಂದ್ರೆ ಕರಾಳ ದಿನ!

    ದಾವಣಗೆರೆಯ ಈ ಹಳ್ಳಿಗೆ ದೀಪಾವಳಿ ಅಂದ್ರೆ ಕರಾಳ ದಿನ!

    ದಾವಣಗೆರೆ: ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಹಬ್ಬದ ದಿನ ದೀಪ ಹಚ್ಚಿ, ಪಟಾಕಿ ಸಿಡಿಸಿ ಎಲ್ಲರೂ ಸಂಭ್ರಮ ಪಡುತ್ತಾರೆ. ಇಲ್ಲೊಂದು ಗ್ರಾಮದಲ್ಲಿ ದೀಪಾವಳಿ (Deepavali) ಅಂದ್ರೇನೆ ಭಯ ಅಂತೇ, ಈ ಹಬ್ಬ ಬಂದ್ರೆ ಇಲ್ಲಿನ ಜನ ಕರಾಳ ದಿನ ಬಂದಂತೆ ಅಂತಾರೆ. ಅಯ್ಯೋ ಇಂತಹದ್ದು ಒಂದು ಊರು ಇದಿಯಾ? ಅಂತೀರಾ. ಹೌದು, ಅನಾದಿಕಾಲದಿಂದಲೂ ದೀಪಾವಳಿಗೆ ಭಯಪಡುವ ಗ್ರಾಮದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

    ದಾವಣಗೆರೆ (Davangere) ತಾಲೂಕಿನ ಲೋಕಿಕೆರೆ ಗ್ರಾಮದ ಕೆಲ ಸಮುದಾಯದ ಜನರಿಗೆ ದೀಪಾವಳಿ ಹಬ್ಬ ಕರಾಳ ದಿನವಂತೆ. ವಿವಿಧ ಕಾರಣಕ್ಕೆ ಕಳೆದ ಆರೇಳು ತಲೆಮಾರುಗಳಿಂದ ದೀಪಾವಳಿ ನಮ್ಮ ಪಾಲಿಗೆ ಕರಾಳ ಹಬ್ಬ ಎನ್ನುವ ನಂಬಿಕೆಯಲ್ಲಿ ದೀಪಾವಳಿಯಿಂದ ಗ್ರಾಮದ ಸುಮಾರು 200 ಕ್ಕೂ ಅಧಿಕ ಕುಟುಂಬಗಳು ದೂರ ಉಳಿದಿವೆ. ದೇಶದೆಲ್ಲೆಡೆ ಮನೆ ಮನೆಯಲ್ಲಿ ಬೆಳಕು ಮೂಡಿದರೆ, ಇಲ್ಲಿ ಮಾತ್ರ ಕತ್ತಲು ಆವರಿಸಿರುತ್ತದೆ. ಇದನ್ನೂ ಓದಿ: ಪಟಾಕಿ ಸಿಡಿಸಲು ಹೋಗಿ ಅನಾಹುತ – ನಾರಾಯಣ ನೇತ್ರಾಲಯದಲ್ಲಿ 20 ಕೇಸ್ ದಾಖಲು

    ಈ ಗ್ರಾಮದವರು ಹಬ್ಬ ಮಾಡದಿರಲು ಸಾಕಷ್ಟು ಕಾರಣ ಹೇಳುತ್ತಾರೆ. ನೂರಾರು ವರ್ಷದ ಹಿಂದೆ ಈ ಗ್ರಾಮದಲ್ಲಿ ವಿವಿಧ ಸಮುದಾಯದ ನೂರಾರು ಯುವಕರು ದೀಪಾವಳಿ ಹಬ್ಬದ ದಿನದಂದೇ ಕಾಣೆಯಾಗಿದ್ದರಂತೆ. ಹಬ್ಬದ ದಿನ ಪೂಜೆಗಾಗಿ, ಉತ್ರಾಣಿ ಕಡ್ಡಿ, ಕಾಶಿಕಡ್ಡಿ, ಹೂ ತರಲು ಊರಿಂದ ಹೊರಗೆ ಹೋದವರು ಮರಳಿ ಬರಲೇ ಇಲ್ವಂತೆ. ಗ್ರಾಮಸ್ಥರು ಅದೆಷ್ಟೇ ಹುಡುಕಿದರೂ ಅವರು ಸುಳಿವು ಸಿಗಲಿಲ್ಲ ಅದೇ ಕಾರಣಕ್ಕೆ ಅಂದೆ ದೀಪಾವಳಿ ಕರಾಳ ದಿನ ಎಂದು ಹಬ್ಬ ಆಚರಣೆ ಕೈಬಿಟ್ಟಿದ್ದಾರೆ. ಅದು ತಲೆ ತಲೆಮಾರುಗಳಿಂದ ಇಲ್ಲಿ ಮುಂದುವರೆಯುತ್ತಾ ಬಂದಿದೆ.

    ಯಾವುದಕ್ಕೂ ಆಗಿದ್ದೆಲ್ಲಾ ಆಗಿ ಹೋಗಿದೆ, ಹಿಂದಿನದೆಲ್ಲಾ ಏಕೆ ಎಂದು ದೀಪಾವಳಿ ಹಬ್ಬ ಆಚರಣೆ ಮಾಡಲು ಐದು ದಶಕದ ಹಿಂದೆ ನಿರ್ಧಾರ ಮಾಡಿದ್ದರು. ಎಂದಿನಂತೆ ದೀಪಾವಳಿ ಹಬ್ಬದ ದಿನದಂದು ಹಬ್ಬ ಆಚರಣೆ ಮಾಡಲು ಮುಂದಾಗಿದ್ದಾರೆ ಈ ವೇಳೆ ಏಕಾಏಕಿ ಜಮೀನಿನಲ್ಲಿನ ಪೈರಿಗೆ, ಹುಲ್ಲಿನ ಬಣವಿಗೆ ಬೆಂಕಿ ಬಿದ್ದು ಹೊತ್ತಿ ಉರಿದಿದೆ. ಇದನ್ನು ಕಂಡು ಆ ಕುಟುಂಬಸ್ಥರು ಮತ್ತಷ್ಟು ಆತಂಕಗೊಂಡಿದ್ದಾರೆ, ಅವತ್ತೇ ಕೊನೆ ಮುಂದೆ ಯಾವತ್ತೂ ಹಬ್ಬ ಮಾಡುವ ಯೋಚನೆಯನ್ನೇ ಇವರು ಮಾಡಿಲ್ಲವಂತೆ. ಇದನ್ನೂ ಓದಿ: ದೀಪಾವಳಿ 2025 – ಬಲಿಪಾಡ್ಯಮಿ ಹಬ್ಬದ ಮಹತ್ವ ಏನು?

  • ದಾವಣಗೆರೆಯಲ್ಲಿ ಏಕಾಏಕಿ 36 ಮನೆಗಳ ತೆರವು – ಬೀದಿಗೆ ಬಿದ್ದ ಕುಟುಂಬಗಳು

    ದಾವಣಗೆರೆಯಲ್ಲಿ ಏಕಾಏಕಿ 36 ಮನೆಗಳ ತೆರವು – ಬೀದಿಗೆ ಬಿದ್ದ ಕುಟುಂಬಗಳು

    – ಪಾರ್ಕ್ ಜಾಗದಲ್ಲಿ ಮನೆ ಕಟ್ಟಿದ್ದಕ್ಕೆ ಕ್ರಮ

    ದಾವಣಗರೆ: ನಗರದ (Davanagere) ರಾಮನಗರ ಕೈಗಾರಿಕಾ ಪ್ರದೇಶದಲ್ಲಿದ್ದ 36 ಮನೆಗಳನ್ನು ಪಾಲಿಕೆ ಅಧಿಕಾರಿಗಳು ಏಕಾಏಕಿ ತೆರವು ಮಾಡಿದ್ದಾರೆ.

    2013-14ರಿಂದ ಪಾಲಿಕೆಯ ಪಾರ್ಕ್ ಜಾಗದಲ್ಲಿ ಜನ ಮನೆ ಕಟ್ಟಿಕೊಂಡಿದ್ದರು. ಅದು ಪಾಲಿಕೆಯ ಪಾರ್ಕ್ ಜಾಗ ಎಂದು 2018ರಲ್ಲಿ ನ್ಯಾಯಾಲಯದಲ್ಲಿ ವ್ಯಕ್ತಿಯೊಬ್ಬರು ದಾವೆ ಹೂಡಿದ್ದರು. ದೂರುದಾರರ ಹಾಗೂ ಮನೆ ಮಾಲೀಕರ ವಾದ ಆಲಿಸಿದ್ದ ನ್ಯಾಯಾಲಯ ಪಾಲಿಕೆ ಪಾರ್ಕ್ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡಿರೋದು ಅಕ್ರಮ. ಆ ಮನೆಗಳನ್ನು ತಕ್ಷಣವೇ ತೆರವುಗೊಳಿಸಿ ಎಂದು ತಹಸೀಲ್ದಾರ್ ಅವರಿಗೆ ನಿರ್ದೇಶನ ನೀಡಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ತಹಸೀಲ್ದಾರ್ ಡಾ.ಅಶ್ವಥ್ ಅಲ್ಲಿನ ನಿವಾಸಿಗಳಿಗೆ ಮನೆ ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಿದ್ದರು. ಆದರೆ, ಅಲ್ಲಿನ ನಿವಾಸಿಗಳು ಮನೆ ತೆರವು ಮಾಡದ ಕಾರಣ ಇಂದು (ಅ.11) ಬೆಳಗ್ಗೆ ಪೊಲೀಸರ ಬಿಗಿ ಬಂದೋಬಸ್ತ್‍ನಲ್ಲಿ ಮನೆ ತೆರವುಗೊಳಿಸಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಬಾಲಕಿ ಅತ್ಯಾಚಾರ & ಕೊಲೆ ಪ್ರಕರಣ – ಸಿದ್ದರಾಮಯ್ಯಗೆ ಕಪ್ಪು ಚುಕ್ಕೆ: ಆರ್.‌ ಅಶೋಕ್‌

    ಮನೆ ತೆರವಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಒಂದೆರಡು ದಿನ ಅವಕಾಶ ಕೊಡಿ ನಾವೇ ಮನೆ ಖಾಲಿ ಮಾಡ್ತಿವಿ ಎಂದು ಗೊಗರೆದರು. ಕೆಲವರು ಜೆಸಿಬಿಗೆ ಅಡ್ಡ ಹೋಗಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಅಲ್ಲಿನ ನಿವಾಸಿಗಳ ಪರವಾಗಿ ಪಾಲಿಕೆ ಮಾಜಿ ಸದಸ್ಯ ಪಾಮೇನಹಳ್ಳಿ ನಾಗರಾಜ್ ಅಧಿಕಾರಿಗಳ ಕಾಲು ಹಿಡಿಯಲು ಮುಂದಾಗಿದ್ದರು. ಆದರೂ ಅಧಿಕಾರಿಗಳ ಮನಸ್ಸು ಕರಗದ ಹಿನ್ನೆಲೆ ಪ್ರತಿಭಟನೆ ನಡೆಸಲು ಮುಂದಾದಾಗಾ ಪೊಲೀಸರು ಅಲ್ಲಿಂದ ಕಳಿಸಿದ್ದಾರೆ.

    ನಿವಾಸಿಗಳು ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ರು. ಪಾಲಿಕೆ ವತಿಯಿಂದ ನೀರು ಸೌಲಭ್ಯ ಕೂಡ ಕಲ್ಪಿಸಲಾಗಿತ್ತು. ಅಷ್ಟೇ ಅಲ್ಲ ವೋಟರ್ ಐಡಿ, ಪಡಿತರ ಕೂಡ ವಿತರಣೆ ಮಾಡುತ್ತಿದ್ದರು. ಆರಂಭದಲ್ಲೇ ಇದು ಪಾರ್ಕ್ ಜಾಗ ಅಂತ ಹೇಳಿದ್ರೆ ನಾವು ಮನೆಗಳನ್ನೇ ಕಟ್ಟುತ್ತಿರಲಿಲ್ಲ. ಮನೆಗಳನ್ನ ಕಟ್ಟಿಕೊಂಡ್ಮೇಲೆ ಅಧಿಕಾರಿಗಳು ಮತ್ತು ಕೆಲವರು ಬಂದು ಇದು ಪಾರ್ಕ್ ಜಾಗ ಅಂತ ತಗಾದೆ ತೆಗೆದಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ಬೆಲೆ ಕೊಡ್ತಿವಿ. ಮನೆ ಖಾಲಿ ಮಾಡೋಕೆ ಸಮಯವಕಾಶ ನೀಡಿ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಜನರಿಗೆ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳು ಬೂದಾಳ್ ರಸ್ತೆ ಹಾಗೂ ತುರ್ಚಘಟ್ಟ ಬಳಿ ಜಾಗ ಗೊತ್ತುಪಡಿಸಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಆಟ ಆಡುವಾಗ ಭದ್ರಾ ನಾಲೆಗೆ ಬಿದ್ದು ಕೊಚ್ಚಿ ಹೋದ ಬಾಲಕ

  • ದಾವಣಗೆರೆ | ರಾಮಜ್ಯೋತಿ ರಥಯಾತ್ರೆ ದುರಂತಕ್ಕೆ 35 ವರ್ಷ – ಫೈರಿಂಗ್‌ನಲ್ಲಿ ಮೃತಪಟ್ಟವರ ಬ್ಯಾನರ್‌ ತೆರವಿಗೆ ಭಾರೀ ವಿರೋಧ

    ದಾವಣಗೆರೆ | ರಾಮಜ್ಯೋತಿ ರಥಯಾತ್ರೆ ದುರಂತಕ್ಕೆ 35 ವರ್ಷ – ಫೈರಿಂಗ್‌ನಲ್ಲಿ ಮೃತಪಟ್ಟವರ ಬ್ಯಾನರ್‌ ತೆರವಿಗೆ ಭಾರೀ ವಿರೋಧ

    ದಾವಣಗೆರೆ: ನಗರದಲ್ಲಿ  (Davangere) ಶಿವಾಜಿ, ಐ ಲವ್ ಮಹಮ್ಮದ್, ರಾಮನ ಫ್ಲೆಕ್ಸ್ ವಿವಾದದ ಬಳಿಕ ಮತ್ತೊಂದು ಫ್ಲೆಕ್ಸ್ ವಿವಾದ ಮುನ್ನೆಲೆಗೆ ಬಂದಿದೆ.

    ಅಡ್ವಾಣಿ (L.K Advani) ನೇತೃತ್ವದ ರಾಮಜ್ಯೋತಿ ರಥಯಾತ್ರೆ (Ram Rath Yatra) ವೇಳೆ ನಗರದಲ್ಲಿ ನಡೆದಿದ್ದ ಫೈರಿಂಗ್‌ಗೆ 8 ಜನ ಬಲಿಯಾಗಿದ್ದರು. ಈ ಘಟನೆ ನಡೆದು ಇಂದಿಗೆ 35 ವರ್ಷಗಳು ಕಳೆದಿವೆ. ಈ ಹಿನ್ನಲೆ ವೆಂಕಟೇಶ್ವರ ವೃತ್ತದಲ್ಲಿ ಮೃತಪಟ್ಟವರ ಬ್ಯಾನರ್‌ ಹಾಕಿ ಹಿಂದೂ ಕಾರ್ಯಕರ್ತರು ಗೌರವ ನಮನ ಸಲ್ಲಿಸಿದ್ದರು. ಈ ವಿವಾದಾತ್ಮಕ ಫ್ಲೆಕ್ಸ್‌ನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಪೊಲೀಸರ ನಡೆಗೆ ಹಿಂದೂ ಕಾರ್ಯಕರ್ತರು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ದಾವಣಗೆರೆ | `ಐ ಲವ್ ಮಹಮ್ಮದ್’ ಬ್ಯಾನರ್ ಗಲಾಟೆಯಾಗಿದ್ದ ಜಾಗದಲ್ಲೇ ರಾಮನ ಫ್ಲೆಕ್ಸ್ ಹರಿದು ವಿಕೃತಿ

    ಶಾಂತಿಯಿಂದ ಗೌರವ ಅರ್ಪಣೆ ಮಾಡಿದ್ರೆ ಯಾಕೆ ವಿರೋಧ? ಐ ಲವ್ ಮಹಮ್ಮದ್ ಬ್ಯಾನರ್‌ಗೆ ಅವಕಾಶ ನೀಡ್ತಿರಿ. ಹಿಂದೂ ಹಬ್ಬಗಳಿಗೆ ತೊಂದರೆ ಕೊಡ್ತೀರಿ. ಮುಸ್ಲಿಮರ ಓಲೈಕೆಗಾಗಿ ಹಿಂದೂ ಹುತಾತ್ಮರ ಬ್ಯಾನರ್ ತೆಗೆಸಿದ್ದೀರಿ. ಶಿವಾಜಿ ಬ್ಯಾನರ್ ತೆಗೆಸಿದ್ರೆ, ಶ್ರೀ ರಾಮನ ಬ್ಯಾನರ್ ಕಿತ್ತಾಕಿದ್ದಾಗ ಸುಮ್ಮನಿದ್ರಿ. ಹಿಂದೂ ವಿರೋಧಿ ನಡೆ ನಿಲ್ಲದಿದ್ದರೆ ಸುನಾಮಿ ರೀತಿ ಬರ್ತಿವಿ ಎಂದು ಹಿಂದೂ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

    ರಾಮಮಂದಿರ ನಿರ್ಮಾಣದ ವಿಚಾರವಾಗಿ ದಾವಣಗೆರೆಯಲ್ಲಿ 1990ರಲ್ಲಿ ಅಡ್ವಾಣಿ ನೇತೃತ್ವದ ರಾಮಜ್ಯೋತಿ ರಥಯಾತ್ರೆ ನಡೆದಿತ್ತು. ಈ ವೇಳೆ ಕೋಮು ಗಲಭೆ ನಡೆದಿತ್ತು. ಆಗ ಫೈರಿಂಗ್‌ಗೆ 8 ಹೋರಾಟಗಾರರು ಮೃತಪಟ್ಟಿದ್ದರು. ಇದನ್ನೂ ಓದಿ: ‘ಐ ಲವ್ ಮಹಮ್ಮದೀಯ’ ಎಂಬ ಫ್ಲೆಕ್ಸ್ ಹಾಕಿದ್ದಕ್ಕೆ ಗಲಾಟೆ – ಮನೆಗಳನ್ನು ಟಾರ್ಗೆಟ್‌ ಮಾಡಿ ಕಲ್ಲು ತೂರಾಟ

  • ದಾವಣಗೆರೆ | `ಐ ಲವ್ ಮಹಮ್ಮದ್’ ಬ್ಯಾನರ್ ಗಲಾಟೆಯಾಗಿದ್ದ ಜಾಗದಲ್ಲೇ ರಾಮನ ಫ್ಲೆಕ್ಸ್ ಹರಿದು ವಿಕೃತಿ

    ದಾವಣಗೆರೆ | `ಐ ಲವ್ ಮಹಮ್ಮದ್’ ಬ್ಯಾನರ್ ಗಲಾಟೆಯಾಗಿದ್ದ ಜಾಗದಲ್ಲೇ ರಾಮನ ಫ್ಲೆಕ್ಸ್ ಹರಿದು ವಿಕೃತಿ

    ದಾವಣಗೆರೆ: ನಗರದ (Davangere) ಬೇತೂರು ರಸ್ತೆಯ ವೆಂಕಟೇಶ್ವರ ಸರ್ಕಲ್‍ನಲ್ಲಿ ಅಳವಡಿಸಿದ್ದ ರಾಮ, ಆಂಜನೇಯ ಹಾಗೂ ದುರ್ಗಾ ದೇವಿಯ ಫ್ಲೆಕ್ಸ್‌ಗಳನ್ನು (Flex) ಕಿಡಿಗೇಡಿಗಳು ಹರಿದು ಹಾಕಿದ್ದಾರೆ.

    ಸಾರ್ವಜನಿಕ ದಸರಾ ಮಹೋತ್ಸವದ ಶೋಭಾಯಾತ್ರೆ ಹಿನ್ನಲೆ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಈ ಫ್ಲೆಕ್ಸ್‌ಳಿಗೆ ಬ್ಲೇಡ್‍ನಿಂದ ಕತ್ತರಿಸಿ ಕಿಡಿಗೇಡಿಗಳು ವಿಕೃತಿ ಮರೆದಿದ್ದಾರೆ. ಈ ಹಿಂದೆ ಇದೇ ಜಾಗದಲ್ಲಿ `ಐ ಲವ್ ಮಹಮ್ಮದ್’ ಬ್ಯಾನರ್ (I Love Mohammed Flex) ವಿಚಾರಕ್ಕೆ ಗಲಾಟೆಯಾಗಿತ್ತು. ಇದನ್ನೂ ಓದಿ: ದಾವಣಗೆರೆಯಲ್ಲಿ ವಿಜಯದಶಮಿ ಶೋಭಾಯಾತ್ರೆ – 50,000 ಮಂದಿ ಭಾಗಿ, ಕಣ್ಮನ ಸೆಳೆಯುತ್ತಿರುವ ಟ್ಯಾಬ್ಲೋಗಳು

    ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಈ ಸಂಬಂಧ ಅಜಾದ್ ನಗರ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಕಿಡಿಗೇಡಿಗಳನ್ನು ಬಂಧಿಸಲು ಆ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದಾವಣಗೆರೆ | ದೇವಸ್ಥಾನದ ಮುಂದೆ ತಲ್ವಾರ್‌ ಹಿಡಿದು ಓಡಾಡಿದ ಅನ್ಯಕೋಮಿನ ಯುವಕ – ವೀಡಿಯೋ ವೈರಲ್

  • ದಾವಣಗೆರೆಯಲ್ಲಿ ವಿಜಯದಶಮಿ ಶೋಭಾಯಾತ್ರೆ – 50,000 ಮಂದಿ ಭಾಗಿ, ಕಣ್ಮನ ಸೆಳೆಯುತ್ತಿರುವ ಟ್ಯಾಬ್ಲೋಗಳು

    ದಾವಣಗೆರೆಯಲ್ಲಿ ವಿಜಯದಶಮಿ ಶೋಭಾಯಾತ್ರೆ – 50,000 ಮಂದಿ ಭಾಗಿ, ಕಣ್ಮನ ಸೆಳೆಯುತ್ತಿರುವ ಟ್ಯಾಬ್ಲೋಗಳು

    – ಸಚಿವರ ಮಿಲ್‌ ಬಳಿ `ಚೋರರಿಗೊಂದು ಕಾಲ, ಶೂರರಿಗೊಂದು ಕಾಲʼ ಹಾಡಿಗೆ ಭರ್ಜರಿ ಸ್ಟೆಪ್ಸ್‌!

    ದಾವಣಗೆರೆ: ನಗರದಲ್ಲಿ ವಿಶ್ವ ಹಿಂದೂ ಪರಿಷತ್, ಸಾರ್ವಜನಿಕ ವಿಜಯದಶಮಿ ಸಮಿತಿ ವತಿಯಿಂದ ಅದ್ದೂರಿಯಾಗಿ ವಿಜಯದಶಮಿ ಶೋಭಾಯಾತ್ರೆ ನಡೆಯುತ್ತಿದೆ.

     

    ಶೋಭಾಯಾತ್ರೆಯ ದಾರಿಯುದ್ದಕ್ಕೂ ಸುಂದರವಾದ ಟ್ಯಾಬ್ಲೋಗಳನ್ನು ನಿರ್ಮಿಸಲಾಗಿದೆ. ಆಂಜನೇಯ, ಶಿವಾಜಿ, ವೆಂಕಟೇಶ್ವರ ಸರ್ಕಲ್ ನಲ್ಲಿ ಶ್ರೀ ಕೃಷ್ಣ, ಬೃಹತ್ ಆಂಜನೇಯನ ಟ್ಯಾಬ್ಲೋ ಮಾಡಲಾಗಿದೆ. ಅಲ್ಲದೇ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಭಾರತ ಮಾತೆ, ಭುವನೇಶ್ವರಿ ದೇವಿ, ಅಕ್ಕಮಹಾದೇವಿ, ಅಂಬೇಡ್ಕರ್, ಬಸವಣ್ಣ ಸೇರಿದಂತೆ ದೇಶಭಕ್ತರು ಹಾಗೂ ಸಮಾಜ ಸುಧಾರಕರ ಟ್ಯಾಬ್ಲೋಗಳನ್ನು ನಿರ್ಮಿಸಲಾಗಿದೆ. ಇದನ್ನೂ ಓದಿ: ವಿಶ್ವಕರ್ಮ ಮಂಡಳಿ ಮಾಡಿ ಸರ್ಕಾರ ಮರೆತಂತಿದೆ: ಶಂಕರಾತ್ಮಾನಂದ ಸರಸ್ವತಿ ಶ್ರೀ ಕಿಡಿ

    1500ಕ್ಕೂ ಹೆಚ್ಚು ಪೊಲೀಸರು, ಡಿಆರ್ ಹಾಗೂ ಕೆಎಸ್‍ಆರ್‌ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ವಿನ ಭದ್ರತೆ ಕೈಗೊಳ್ಳಲಾಗಿದೆ. ವಿವಾದಾತ್ಮಕ ಘೋಷಣೆ, ಪೋಸ್ಟರ್ ಪ್ರದರ್ಶನ ಮಾಡಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಮೆರವಣಿಗೆ ಸಾಗುವ ಮಾರ್ಗದಲ್ಲಿರುವ ಮಸೀದಿಗಳಿಗೆ ಭದ್ರತೆ ನೀಡಲಾಗಿದ್ದು, ಸಿಸಿ ಕ್ಯಾಮೆರಾ, ಡ್ರೋನ್ ಮೂಲಕ ಹದ್ದಿನ ಕಣ್ಣಿಡಲಾಗಿದೆ.

    ಶೋಭಾಯಾತ್ರೆಯಲ್ಲಿ ಡೊಳ್ಳು ಬಾರಿಸುವ ಮೂಲಕ ಮಾಜಿ ಸಚಿವ ರೇಣುಕಾಚಾರ್ಯ ಗಮನ ಸೆಳೆದಿದ್ದಾರೆ. ಅವರಿಗೆ ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ. ಡಿಜೆಗೆ ಅನುಮತಿ ಕೊಡಿಸುವಲ್ಲಿ ಹಾಗೂ ಕಾರ್ಲ್ ಮಾರ್ಕ್ಸ್‌ ನಗರದಲ್ಲಿ ನಡೆದ ಬ್ಯಾನರ್ ವಿಚಾರವಾಗಿ ಮೌನವಾಗಿದ್ದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಒಡೆತನದ ಮಿಲ್ ಎದುರು `ಚೋರರಿಗೊಂದು ಕಾಲ, ಶೂರರಿಗೊಂದು ಕಾಲ’ ಹಾಡು ಹಾಕಿ ಯುವಕರು, ಬಿಜೆಪಿ ನಾಯಕರು ಡ್ಯಾನ್ಸ್ ಮಾಡಿದ್ದಾರೆ. ಇದನ್ನೂ ಓದಿ: ದಾವಣಗೆರೆ | ದೇವಸ್ಥಾನದ ಮುಂದೆ ತಲ್ವಾರ್‌ ಹಿಡಿದು ಓಡಾಡಿದ ಅನ್ಯಕೋಮಿನ ಯುವಕ – ವೀಡಿಯೋ ವೈರಲ್

  • ದಾವಣಗೆರೆ | ಪತ್ನಿಯ ಅಕ್ರಮ ಸಂಬಂಧಕ್ಕೆ ರೋಸಿ 20 ಬಾರಿ ಇರಿದು ಕೊಂದ ಪತಿ

    ದಾವಣಗೆರೆ | ಪತ್ನಿಯ ಅಕ್ರಮ ಸಂಬಂಧಕ್ಕೆ ರೋಸಿ 20 ಬಾರಿ ಇರಿದು ಕೊಂದ ಪತಿ

    – ಬೆಡ್‍ರೂಮ್‍ಲ್ಲಿ ಸಿಸಿ ಕ್ಯಾಮೆರಾ ಇಟ್ಟು ಸಾಕ್ಷಿ ಕಲೆ ಹಾಕಿದ್ದ ಹಂತಕ
    – ಡಿವೋರ್ಸ್ ಬಳಿಕ ಮಕ್ಕಳು ಅವಳ ಪಾಲಾಗ್ತಾರೆ ಅಂತ ಹತ್ಯೆ

    ದಾವಣಗೆರೆ: ಪತ್ನಿಯ (Wife) ಅನೈತಿಕ ಸಂಬಂಧಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಪತ್ನಿಯನ್ನು ಹತ್ಯೆಗೈದ ಘಟನೆ ದಾವಣಗೆರೆಯ (Davanagere) ಕಾಡಜ್ಜಿ ಗ್ರಾಮದಲ್ಲಿ ನಡೆದಿದೆ.

    ಕೊಲೆಗೈದ ಆರೋಪಿಯನ್ನು ಕಲೀಂವುಲ್ಲಾ ಎಂದು ಗುರುತಿಸಲಾಗಿದೆ. ಈತನಿಗೆ ಕಳೆದ ಐದು ವರ್ಷದ ಹಿಂದೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಮದುವೆಯಾಗಿ ಇಬ್ಬರು ಮಕ್ಕಳು ಇದ್ದರೂ ಪತ್ನಿ ಬೇರೋಬ್ಬ ಪುರುಷನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳಂತೆ. ಈ ವಿಚಾರ ಪತಿಗೆ ಗೊತ್ತಾಗಿ ಹಿರಿಯರಿಗೆ ಹೇಳಿ ರಾಜಿ ಪಂಚಾಯಿತಿ ನಡೆಸಿದ್ದ. ಆದರೆ ಹಿರಿಯರು ಯಾರು ನಂಬಿರಲಿಲ್ಲ. ಇದನ್ನೂ ಓದಿ: ಗಾಜಿಯಾಬಾದ್‌ ಎನ್‌ಕೌಂಟರ್‌ – ಕಳ್ಳನ ಕಾಲುಮುರಿದು ಬಂಧಿಸಿದ ಮಹಿಳಾ ಪೊಲೀಸರ ತಂಡ

    ಇದೇ ಕಾರಣಕ್ಕೆ ರಹಸ್ಯವಾಗಿ ಬೆಡ್‍ರೂಮ್‍ನಲ್ಲಿ ಸಿಸಿ ಕ್ಯಾಮೆರಾ ಇರಿಸಿದ್ದ. ಬಳಿಕ ಬೇರೊಬ್ಬನೊಂದಿಗೆ ಪತ್ನಿ ಇದ್ದ ಖಾಸಗಿ ವೀಡಿಯೋವನ್ನು ಇಟ್ಟುಕೊಂಡು ಡಿವೋರ್ಸ್‍ಗೆ ಅರ್ಜಿ ಹಾಕಿದ್ದ. ಮಕ್ಕಳು ತನ್ನ ಬಳಿಯೇ ಇರಬೇಕು ಎಂದು ಮನವಿ ಮಾಡಿದ್ದ. ಹಿರಿಯರು ಒಂದು ಮಗು ಅವನ ಬಳಿ ಹಾಗೂ ಇನ್ನೊಂದು ಮಗು ಮಹಿಳೆಯ ಜೊತೆ ಇರಲಿ ಎಂದು ಹೇಳಿದ್ದರು. ಅದರಂತೆ ಬಾಲನ್ಯಾಯ ಮಂಡಳಿಗೆ ಮಕ್ಕಳನ್ನು ಕೌನ್ಸಿಲಿಂಗ್‍ಗೆ ಕರೆದಿದ್ದರು. ಇನ್ನೇನೂ ಕೌನ್ಸಿಲಿಂಗ್‍ಗೆ ಹೋಗಬೇಕು ಎನ್ನುವಷ್ಟರಲ್ಲಿ ಕಲೀಂವುಲ್ಲಾ ಪತ್ನಿಗೆ 20 ಬಾರಿ ಚಾಕು ಇರಿದಿದ್ದಾನೆ.

    ಬಿಡಿಸಲು ಬಂದ ಪತ್ನಿಯ ತಾಯಿಗೂ ಕೂಡ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಇಬ್ಬರನ್ನು ಬಡಾವಣೆ ಪೊಲೀಸರು ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು. ಚಿಕಿತ್ಸೆ ಫಲಿಸದೆ ಪತ್ನಿ ಸಾವಿಗೀಡಾಗಿದ್ದಾಳೆ. ಅತ್ತೆಗೆ ಚಿಕಿತ್ಸೆ ಮುಂದುವರಿದಿದೆ.

    ಕಲೀಂವುಲ್ಲಾ ಅತ್ತೆ ಪ್ರತಿಕ್ರಿಯಿಸಿ, ತನ್ನ ಮಗಳ ಮೇಲೆ ಆರೋಪಿ ಸುಖಾಸುಮ್ಮನೆ ಅನುಮಾನ ಪಡುತ್ತಿದ್ದ. ಅವನ ಸ್ನೇಹಿತನನ್ನು ಬಿಟ್ಟು ಪತ್ನಿಯ ಮೇಲೆ ಅತ್ಯಾಚಾರ ಮಾಡಿಸಿ, ವೀಡಿಯೋ ಮಾಡಿಕೊಂಡು ಹೆದರಿಸುತ್ತಿದ್ದ ಎಂದು ಮಗಳನ್ನು ಸಮರ್ಥಿಸಿಕೊಂಡಿದ್ದಾಳೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ವೇಷದಲ್ಲಿ ಬಂದು ಶ್ರೀಗಂಧಕ್ಕೆ ಕೊಡಲಿ – 33 ತುಂಡುಗಳು ವಶ, ಆರೋಪಿ ಅರೆಸ್ಟ್

  • ದಾವಣಗೆರೆ | ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ – ಮೂವರು ಅಂತರರಾಜ್ಯ ಕಳ್ಳರು ಅರೆಸ್ಟ್

    ದಾವಣಗೆರೆ | ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ – ಮೂವರು ಅಂತರರಾಜ್ಯ ಕಳ್ಳರು ಅರೆಸ್ಟ್

    ದಾವಣಗೆರೆ: ಮನೆ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ (Jewellery) ಹಾಗೂ ನಗದು ದೋಚಿದ್ದ ಮೂವರು ಕುಖ್ಯಾತ ಅಂತರರಾಜ್ಯ ಕಳ್ಳರನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ರಾಜಸ್ಥಾನ (Rajasthan) ಮೂಲದ ಶ್ಯಾಮ್ ಸಿಂಗ್ (28) ಕವರ್ ಪಾಲ್(24) ಪ್ರತಾಪ್ ಸಿಂಗ್ (33) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು 15.37 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.

    ಆರೋಪಿಗಳು ಆ.30ರಂದು‌ ವಿದ್ಯಾನಗರ ನಿವಾಸಿ ರಂಗನಾಥ ಎಂಬವರ ಮನೆಯ ಇಂಟರ್ ಲಾಕ್ ಒಡೆದು ನುಗ್ಗಿ ಚಿನ್ನಾಭರಣ, ಬೆಳ್ಳಿ ಆಭರಣ ದೋಚಿ ಪರಾರಿಯಾಗಿದ್ದರು. ರಂಗನಾಥ ಅವರು ಸೆ.1 ರಂದು ಬೆಂಗಳೂರಿಂದ ಮನೆಗೆ ವಾಪಸ್ ಆದ ವೇಳೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು. ಇದನ್ನೂ ಓದಿ: ಕೆಂಪು ಕೋಟೆಯಲ್ಲಿ 1.5 ಕೋಟಿ ಮೌಲ್ಯದ ಕಲಶ ಕದ್ದ ಕಳ್ಳ ಅರೆಸ್ಟ್

    ಆರೋಪಿಗಳ ಪತ್ತೆಗೆ ವಿದ್ಯಾನಗರ ಠಾಣೆ ಸಿಪಿಐ ಶಿಲ್ಪಾ ವೈ.ಎಸ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಗುಜರಾತ್‍ನ ಸೂರತ್ ಸಿಟಿ ಸಾರೋಲಿ ಪೊಲೀಸ್ ಠಾಣೆಯ ಪೊಲೀಸರ ಸಹಕಾರದಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 12.97 ಲಕ್ಷ ರೂ. ಮೌಲ್ಯದ 162.150 ಗ್ರಾಂ ತೂಕದ ಬಂಗಾರದ ಆಭರಣಗಳು, 1.08 ಲಕ್ಷ ಮೌಲ್ಯದ 1350 ಗ್ರಾಂ ತೂಕದ ಬೆಳ್ಳಿ ವಸ್ತುಗಳು, 95 ನಗದು, 34 ಸಾವಿರ ರೂ. ಬೆಲೆಯ 6 ಮೊಬೈಲ್, 3 ಸಾವಿರ ಬೆಲೆಯ ಎರಡು ವಾಚ್‍ಗಳನ್ನು ಜಪ್ತಿ ಮಾಡಲಾಗಿದೆ.

    ಆರೋಪಿಗಳ ವಿರುದ್ಧ ದಾವಣಗೆರೆ ಜಿಲ್ಲೆಯ ಹರಿಹರ ನಗರ ಠಾಣೆ, ಹಳಿಯಾಳ ಠಾಣೆ, ಧಾರವಾಡ, ತುಮಕೂರು ಬಡಾವಣೆ, ತಿಪಟೂರು, ಮದ್ಯಪ್ರದೇಶದ ಭೂಪಾಲ್ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ವೇಳೆ ಗೊತ್ತಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾರ್ ಡ್ರೈವರ್‌ನ ಭೀಕರ ಕೊಲೆ – ಸ್ನೇಹಿತರಿಂದಲೇ ಹತ್ಯೆ ಶಂಕೆ

  • ದಾವಣಗೆರೆ | ಕತ್ತು ಕೊಯ್ದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ – ಪತಿ ವಶಕ್ಕೆ

    ದಾವಣಗೆರೆ | ಕತ್ತು ಕೊಯ್ದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ – ಪತಿ ವಶಕ್ಕೆ

    ದಾವಣಗೆರೆ: ಜಗಳೂರು (Jagaluru) ತಾಲೂಕಿನ ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದೆ.

    ಕೊಲೆಯಾದ ಮಹಿಳೆಯನ್ನು ಜ್ಯೋತಿ (35) ಎಂದು ಗುರುತಿಸಲಾಗಿದೆ. ಭಾನುವಾರ (ಆ.31) ರಾತ್ರಿ ಕೊಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಶವ ಪತ್ತೆಯಾಗಿದ್ದರಿಂದ ಆಕೆಯ ಪತಿಯೇ (Husband) ಕೊಲೆ ಮಾಡಿರುವ ಸಂಶಯ ವ್ಯಕ್ತವಾಗಿದೆ. ಇದನ್ನೂ ಓದಿ: ಭದ್ರಾವತಿಯಲ್ಲಿ ಮನೆಗಳ್ಳತನ – ಬೆಂಗಳೂರಿನ ಮಹಿಳೆ ಸೇರಿ ಇಬ್ಬರು ಅರೆಸ್ಟ್

    ಜಗಳೂರು ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಮಹಿಳೆಯ ಪತಿ ಬಾಲರಾಜ್‍ನನ್ನು ವಶಕ್ಕೆ ಪಡೆದು ಜಗಳೂರು ಪೊಲೀಸರು ವಿಚಾರಣೆ ನಡಸುತ್ತಿದ್ದಾರೆ.

    ಸ್ಥಳಕ್ಕೆ ಶ್ವಾನದಳ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಪೆಟ್ರೋಲ್ ಸುರಿದು 26ರ ಲಿವ್ ಇನ್ ಗೆಳತಿಯ ಹತ್ಯೆಗೈದ 52ರ ವ್ಯಕ್ತಿ

  • ಒಂದೇ ರಾತ್ರಿಯಲ್ಲಿ 20 ಎಕರೆ ಬೆಳೆ ನಾಶ – ʻಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷʼ ಅನ್ನೋ ಹಾಗಾಯ್ತು ಪುಂಡಾನೆಗಳ ಕಾಟ!

    ಒಂದೇ ರಾತ್ರಿಯಲ್ಲಿ 20 ಎಕರೆ ಬೆಳೆ ನಾಶ – ʻಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷʼ ಅನ್ನೋ ಹಾಗಾಯ್ತು ಪುಂಡಾನೆಗಳ ಕಾಟ!

    • ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು

    ದಾವಣಗೆರೆ: ಚನ್ನಗಿರಿಯ (Channagiri) ಗಂಡುಗನಹಂಕಲು ಗ್ರಾಮದಲ್ಲಿ ಕಾಡಾನೆಗಳ (Wild Elephants ) ದಾಳಿಗೆ 20 ಎಕರೆ ಜಮೀನಿನಲ್ಲಿ ಬೆಳೆ ನಾಶವಾಗಿದೆ. ಆನೆ ದಾಳಿಗೆ ರೈತರು ಕಷ್ಟಪಟ್ಟು ಬೆಳೆದ ತೆಂಗು, ಬಾಳೆ, ಮೆಕ್ಕೆಜೋಳ ನೆಲಸಮವಾಗಿದೆ.

    ಗ್ರಾಮದ ಹತ್ತಕ್ಕೂ ಅಧಿಕ ರೈತರಿಗೆ (Farmers) ಸೇರಿದ ಬೆಳೆ ನಾಶವಾಗಿದೆ. ಹತ್ತಾರು ವರ್ಷಗಳಿಂದ ಪ್ರತಿವರ್ಷ ಆನೆ ದಾಳಿಯಿಂದ ಬೆಳೆ ನಾಶವಾಗುತ್ತಿದೆ. ಪ್ರತಿಸಲ ಅಧಿಕಾರಿಗಳಿಗೆ ಮನವಿ ಕೊಟ್ಟರೂ, ಆನೆ ದಾಳಿ ತಡೆಯುತ್ತಿಲ್ಲ ಎಂದು ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಹಾಸನ | ನಾಯಿ ಬೊಗಳಿದ್ದಕ್ಕೆ ಕಾರನ್ನೇ ಎತ್ತಿ ಎಸೆದ ಒಂಟಿ ಸಲಗ!

    ಸಾವಿರಾರು ರೂಪಾಯಿ ಸಾಲ ಮಾಡಿ ಬೆಳೆ ಬೆಳೆದಿದ್ದೇವೆ. ವರ್ಷ ಪೂರ್ತಿ ಕಷ್ಟಪಟ್ಟು ದುಡಿದಿದ್ದೇವೆ. ಈಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಮಡಕೆ ಮಾಡಲು ವರುಷವೇ ಬೇಕು, ಮಡಕೆ ಒಡೆದು ಹಾಕಲು ದೊಣ್ಣೆಗೆ ನಿಮಿಷ ಸಾಕು. ನಮ್ಮ ಪರಿಸ್ಥಿತಿ ಹಾಗೇ ಆಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

    ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಆನೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ಆನೆ ದಾಳಿಗೆ ವೃದ್ಧ ಬಲಿ – 4 ದಿನಗಳ ಅಂತರದಲ್ಲಿ ಇಬ್ಬರು ಸಾವು

  • ಕೌಟುಂಬಿಕ ಕಲಹಕ್ಕೆ ಬೇಸತ್ತು ಪಿಎಸ್‍ಐ ಆತ್ಮಹತ್ಯೆ – ಡೆತ್‍ನೋಟ್‍ನಲ್ಲಿ ಲಾಡ್ಜ್ ಮಾಲೀಕರ ಕ್ಷಮೆಯಾಚನೆ

    ಕೌಟುಂಬಿಕ ಕಲಹಕ್ಕೆ ಬೇಸತ್ತು ಪಿಎಸ್‍ಐ ಆತ್ಮಹತ್ಯೆ – ಡೆತ್‍ನೋಟ್‍ನಲ್ಲಿ ಲಾಡ್ಜ್ ಮಾಲೀಕರ ಕ್ಷಮೆಯಾಚನೆ

    ತುಮಕೂರು: ನಗರದ (Tumakuru) ಲಾಡ್ಜ್ ಒಂದರಲ್ಲಿ ದಾವಣಗೆರೆ (Davanagere) ಪಿಎಸ್‍ಐ (PSI) ನಾಗರಾಜಪ್ಪ ನೇಣಿಗೆ ಶರಣಾಗಿದ್ದಾರೆ. ಅವರು ಬರೆದಿಟ್ಟಿದ್ದ ಡೆತ್‍ನೋಟ್ ಲಾಡ್ಜ್‌ನ ರೂಮ್‌ನಲ್ಲಿ ಪತ್ತೆಯಾಗಿದೆ.

    2 ಪುಟ ಇರುವ ಡೆತ್‌ನೋಟ್‌ನಲ್ಲಿ, `ನನ್ನ ಸಾವಿಗೆ ನಾನೇ ಕಾರಣ’. ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ. ಅಲ್ಲದೇ ಹೋಟೆಲ್ ಮಾಲೀಕರಿಗೂ ಡೆತ್‍ನೋಟ್‍ನಲ್ಲಿ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ತುಮಕೂರು | ಹೋಟೆಲ್‌ನಲ್ಲಿ ದಾವಣಗೆರೆ ಪಿಎಸ್‍ಐ ನೇಣಿಗೆ ಶರಣು

    ಜು.1ರಂದು ಬೆಳಿಗ್ಗೆ 7 ಗಂಟೆಗೆ ನಗರದದಲ್ಲಿರುವ ದ್ವಾರಕಾ ಹೋಟೆಲ್‍ನ 4ನೇ ಮಹಡಿಯಲ್ಲಿ ರೂಮ್ ಬಾಡಿಗೆ ಪಡೆದಿದ್ದರು. ರೂಮ್‍ಗೆ ತೆರಳಿದ್ದಾಗಿನಿಂದ ಅವರು ಹೊರಗೆ ಬಂದಿರಲಿಲ್ಲ. ಲಾಡ್ಜ್ ಸಿಬ್ಬಂದಿ ಕರೆ ಮಾಡಿದ್ರೂ ಅವರು ಕರೆ ಸ್ವೀಕರಿಸಿರಲಿಲ್ಲ. ಲಾಡ್ಜ್‌ನಲ್ಲಿ ದುರ್ವಾಸನೆ ಬಂದಾಗ, ಸಿಬ್ಬಂದಿ ಮಾಲೀಕರಿಗೆ ಮಾಹಿತಿ ನೀಡಿದ್ದರು.

    ಬಾಗಿಲು ತೆರೆದು ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕಳೆದ 4 ದಿನಗಳ ಹಿಂದೆ ನೇಣಿಗೆ ಶರಣಾಗಿದ್ದು, ಮೃತದೇಹ ಕೊಳೆತು ಹುಳಗಳಾಗಿದ್ದವು ಎಂದು ತಿಳಿದು ಬಂದಿದೆ.

    ಸ್ಥಳಕ್ಕೆ ತುಮಕೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಮೊಹರಂ ಆಚರಣೆ ವೇಳೆ ದುರಂತ – ಬೆಂಕಿಗೆ ಬಿದ್ದು ವ್ಯಕ್ತಿಗೆ ಗಂಭೀರ ಗಾಯ