Tag: Davanagre

  • ನಮ್ಮ ನಡಿಗೆ ಧರ್ಮಸ್ಥಳದ ಕಡೆಗೆ – ದಾವಣಗೆರೆಯಿಂದ ಯಾತ್ರೆ ಹೊರಟ ನೂರಾರು ಭಕ್ತರು

    ನಮ್ಮ ನಡಿಗೆ ಧರ್ಮಸ್ಥಳದ ಕಡೆಗೆ – ದಾವಣಗೆರೆಯಿಂದ ಯಾತ್ರೆ ಹೊರಟ ನೂರಾರು ಭಕ್ತರು

    ದಾವಣಗೆರೆ: ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala) ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ವಿರೋಧಿಸಿ ದಾವಣಗೆರೆಯಲ್ಲಿ ನೂರಾರು ಭಕ್ತರು ಧರ್ಮಸ್ಥಳಕ್ಕೆ ಯಾತ್ರೆ ಹೊರಟಿದ್ದಾರೆ.

    `ದಾವಣಗೆರೆ (Davanagre) ಜನರ ನಡಿಗೆ ಧರ್ಮಸ್ಥಳದ ಕಡೆಗೆ’ ಎಂಬ ಘೋಷದೊಂದಿಗೆ ಭಕ್ತರು ಯಾತ್ರೆ ಹೊರಟಿದ್ದಾರೆ. ಜಿಲ್ಲೆಯ ವಿವಿಧೆಡೆಯಿಂದ 50 ಕಾರು, 2 ಬಸ್‍ನಲ್ಲಿ ಭಕ್ತರು ಹೊರಟಿದ್ದಾರೆ. ಉಜಿರೆಯಲ್ಲಿ ಎಲ್ಲರೂ ಸೇರಿ, ಅಲ್ಲಿಂದ ಮೆರವಣಿಗೆ ನಡೆಸಲಿದ್ದಾರೆ. ಬಳಿಕ ವಿರೇಂದ್ರ ಹೆಗ್ಗಡೆಯವರನ್ನು ಭಕ್ತರು ಭೇಟಿ ಮಾಡಲಿದ್ದಾರೆ. ಇದನ್ನೂ ಓದಿ: ಮೈಸೂರು| ಕಾಂಗ್ರೆಸ್‌ ಶಾಸಕನಿಂದ ಧರ್ಮಸ್ಥಳ ಯಾತ್ರೆ

    ಬಳಿಕ ನಿಮ್ಮ ಜೊತೆ ನಾವಿದ್ದೇವೆ ಎಂದು ಹೆಗ್ಗಡೆಯವರಿಗೆ ಭಕ್ತರು ವಾಗ್ದಾನ ನೀಡಲಿದ್ದಾರೆ. ನಗರದ ಜಯದೇವ ವೃತ್ತದಿಂದ ಯಾತ್ರೆಗೆ ಚಾಲನೆ ಸಿಕ್ಕಿದೆ. ಇದನ್ನೂ ಓದಿ: ಗಂಗೆ, ತುಂಗೆಯ ಜೊತೆ ಧರ್ಮಸ್ಥಳ ಯಾತ್ರೆ ಹೊರಟ ಈಶ್ವರಪ್ಪ

  • ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ – 26 ಮಂದಿ ವಶಕ್ಕೆ, 25 ಲಕ್ಷ ಜಪ್ತಿ

    ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ – 26 ಮಂದಿ ವಶಕ್ಕೆ, 25 ಲಕ್ಷ ಜಪ್ತಿ

    ದಾವಣಗೆರೆ: ನಗರದ (Davanagre) ಡೆಂಟಲ್ ಕಾಲೇಜ್ ರಸ್ತೆಯ ಹೋಟೆಲ್ ಒಂದರಲ್ಲಿ ನಡೆಸುತ್ತಿದ್ದ ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ 26 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

    ಹೋಟೆಲ್‍ನಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಅಂದರ್ ಬಾಹರ್ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅಲ್ಲೇ ಜೂಜಾಡುತ್ತಿದ್ದ 26 ಮಂದಿಯನ್ನು ವಶಕ್ಕೆ ಪಡೆದಿದ್ದು, ಅಡ್ಡೆಯಲ್ಲಿದ್ದ 24,86,500 ರೂ. ಹಣವನ್ನು ಜಪ್ತಿ ಮಾಡಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಎಸ್‍ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ದಾಳಿ ನಡೆದಿದೆ. ಆರೋಪಿಗಳ ಮಾಹಿತಿಯನ್ನು ಪೊಲೀಸರು ಗೌಪ್ಯವಾಗಿಟ್ಟಿದ್ದಾರೆ.

    ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಹತ್ಯೆ – 24 ಗಂಟೆಯಲ್ಲೇ ಆರೋಪಿಗಳು ಅಂದರ್

    ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಹತ್ಯೆ – 24 ಗಂಟೆಯಲ್ಲೇ ಆರೋಪಿಗಳು ಅಂದರ್

    ದಾವಣಗೆರೆ: ಇನ್ಶೂರೆನ್ಸ್ (Insurance) ಹಣಕ್ಕಾಗಿ (Money) ಸಂಬಂಧಿಯನ್ನೇ ಹತ್ಯೆಗೈದಿದ್ದ ನಾಲ್ವರು ಆರೋಪಿಗಳನ್ನು ಪ್ರಕರಣ ನಡೆದ 24 ಗಂಟೆಗಳಲ್ಲೇ ದಾವಣಗೆರೆಯ (Davanagre) ಅಜಾದ್ ನಗರ ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಬಂಬೂಬಜಾರ್‌ನ ಗಣೇಶ್‌ (24), ಹರಳಯ್ಯ ನಗರದ ಅನಿಲ್ (18) ಹಳೆ ಚಿಕ್ಕನಹಳ್ಳಿಯ ಶಿವಕುಮಾರ್ (25) ಮತ್ತು ಭಾರತ್ ಕಾಲೋನಿಯ ಮಾರುತಿ (24) ಎಂದು ಗುರುತಿಸಲಾಗಿದೆ. ಆರೋಪಿಗಳು ದಾವಣಗೆರೆ ಜಿಲ್ಲೆಯ ಇಮಾಂ ನಗರದ ಹಣ್ಣಿನ ವ್ಯಾಪಾರಿ ದುಗ್ಗೇಶಿ ಎಂಬಾತನನ್ನು ಕೊಲೆಗೈದಿದ್ದರು.

    ಕೊಲೆಯಾದ ದುಗ್ಗೇಶಿ ಹಾಗೂ ಆರೋಪಿ ಗಣೇಶ್ ಇಬ್ಬರೂ ಸಂಬಂಧಿಕರು. ದುಗ್ಗೇಶಿಯ ಮೇಲೆ ಗಣೇಶ್ ಫೆಬ್ರವರಿಯಲ್ಲಿ 40 ಲಕ್ಷ ರೂ. ಇನ್ಶೂರೆನ್ಸ್ ಮಾಡಿಸಿದ್ದ. ಇನ್ನೂ ಜನವರಿ ತಿಂಗಳಲ್ಲಿ ಪ್ರೀಮಿಯಂ ಹಣ ಕಟ್ಟಬೇಕಾಗಿದ್ದರಿಂದ ಮೊದಲೇ ಕೊಲೆಗೆ ಸಂಚು ನಡೆಸಿದ್ದ ಗಣೇಶ್, ದುಗ್ಗೇಶಿ ಹಾಗೂ ಆತನ ತಾಯಿಯ ಸಹಿ ಇರುವ ಚೆಕ್ ಮತ್ತು ಬಾಂಡ್‌ಗಳನ್ನು ಆತನ ಬಳಿಯೇ ಇಟ್ಟುಕೊಂಡಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.

    ಆರೋಪಿಗಳು ಮಂಗಳವಾರ ದುಗ್ಗೇಶಿಯನ್ನು ಬಸಾಪುರಕ್ಕೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಬಳಿಕ ಅನಾರೋಗ್ಯದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಕತೆ ಕಟ್ಟಿದ್ದರು. ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ, ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.