Tag: Davanagere Police

  • ದಾವಣಗೆರೆ | ಸ್ಕೂಟರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ – ಆರ್‌ಟಿಓ ಅಧೀಕ್ಷಕ ಸಾವು

    ದಾವಣಗೆರೆ | ಸ್ಕೂಟರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ – ಆರ್‌ಟಿಓ ಅಧೀಕ್ಷಕ ಸಾವು

    ದಾವಣಗೆರೆ: ಸ್ಕೂಟರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಆರ್‌ಟಿಓ ಅಧೀಕ್ಷಕ ಸ್ಥಳದಲ್ಲೇ ಮೃತಪಟ್ಟ ಘಟನೆ ದಾವಣಗೆರೆ (Davanagere) ನಗರದ ರಿಂಗ್ ರೋಡ್‌ನ ನವೋದಯ ಶಾಲೆ ಎದುರು ನಡೆದಿದೆ.

    ಆರ್‌ಟಿಓ ಕಚೇರಿಯ ಅಧೀಕ್ಷಕರಾಗಿದ್ದ ತಿಪ್ಪೇಸ್ವಾಮಿ (43) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಹೆಂಡತಿಗಾಗಿ ಕಳ್ಳ ಪೊಲೀಸ್ ಆದ, ಕಾನ್‌ಸ್ಟೇಬಲ್ ಸಸ್ಪೆಂಡ್‌ ಆದ!

    ನಗರದ ರಿಂಗ್ ರೋಡ್ ಬಳಿ ತಿಪ್ಪೇಸ್ವಾಮಿ ಅವರು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ತಿಪ್ಪೇಸ್ವಾಮಿ ಅವರು ರಸ್ತೆಗೆ ಬಿದ್ದಿದ್ದರು. ಅವರು ಹೆಲ್ಮೆಟ್ ಧರಿಸಿದ್ದರೂ ಬಸ್‌ನ ಟೈಯರ್ ಅವರ ತಲೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: Dharmasthala‌ Case | ಅಸ್ಥಿ ರಹಸ್ಯ ಭೇದಿಸಲು ಹೊರಟ ಎಸ್‌ಐಟಿ – 13ರ ಬದಲು 15ನೇ ಪಾಯಿಂಟ್‌ನಲ್ಲಿ ಶೋಧ

    ಮೂಲತ: ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿ ಶಿವಣಿ ನಿವಾಸಿಯಾಗಿದ್ದ ತಿಪ್ಪೇಸ್ವಾಮಿ ಅವರು ದಾವಣಗೆರೆಯಲ್ಲಿ ಆರ್‌ಟಿಓ ಕಚೇರಿಯ ಅಧೀಕ್ಷಕರಾಗಿದ್ದರು.

    ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಜಿಎಂ ಗಂಗಾಧರಸ್ವಾಮಿ, ನಗರ ಡಿವೈಎಸ್ಪಿ ಶರಣಬಸವೇಶ್ವರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ವಾಹನ ತಪಾಸಣೆ ವೇಳೆ ಲಾರಿ ಹರಿದು ಪೊಲೀಸ್ ಕಾನ್ಸ್‌ಟೇಬಲ್‌ ಸಾವು

    ವಾಹನ ತಪಾಸಣೆ ವೇಳೆ ಲಾರಿ ಹರಿದು ಪೊಲೀಸ್ ಕಾನ್ಸ್‌ಟೇಬಲ್‌ ಸಾವು

    ದಾವಣಗೆರೆ: ವಾಹನ ತಪಾಸಣೆ ವೇಳೆ ಪೊಲೀಸ್ ಕಾನ್ಸ್‌ಟೇಬಲ್‌(Police Constable) ಮೇಲೆ ಲಾರಿ ಹರಿದು ಸಾವನ್ನಪ್ಪಿರುವ ಘಟನೆ ದಾವಣಗೆರೆಯ(Davanagere) ಹೆಬ್ಬಾಳು ಟೋಲ್ ಗೇಟ್ ಬಳಿ ನಡೆದಿದೆ.

    ರಾಮಪ್ಪ ಪೂಜಾರ್(27) ಮೃತ ಡಿಎಆರ್ ಕಾನ್ಸ್‌ಟೇಬಲ್‌. ಹೆಬ್ಬಾಳು ಟೋಲ್ ಗೇಟ್(Hebbalu Toll Gate) ಬಳಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆಗೆ ಲಾರಿಯನ್ನು ತಪಾಸಣೆ ಮಾಡಲು ಹೋದ ರಾಮಪ್ಪ ಪೂಜಾರ್ ಮೇಲೆ ಚಾಲಕ ಲಾರಿ ಹರಿಸಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: Tumakuru | ಗಣಿ ಬಾಧಿತ ಪ್ರದೇಶಕ್ಕೆ 1,200 ಕೋಟಿ ರೂ. ಹಂಚಿಕೆ: ಪರಮೇಶ್ವರ್

    ಗಂಭೀರ ಗಾಯಗೊಂಡಿದ್ದ ಕಾನ್ಸ್‌ಟೇಬಲ್‌ ರಾಮಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಳಿಕ ರಾಮಪ್ಪ ಅವರ ಮೃತದೇಹವನ್ನು ಎಸ್‌ಎಸ್ ಆಸ್ಪತ್ರೆಯ ಶವಗಾರಕ್ಕೆ ರವಾನಿಲಾಯಿತು. ಇದನ್ನೂ ಓದಿ: ಟ್ರಂಪ್‌ಗೆ ಕತಾರ್‌ನಿಂದ 3,400 ಕೋಟಿ ಮೌಲ್ಯದ ಐಷಾರಾಮಿ ವಿಮಾನ ಗಿಫ್ಟ್ – ವಿಶೇಷತೆ ಏನು?

    ವಿಷಯ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಶರಣಬಸವೇಶ್ವರ ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಧಾವಿಸಿದರು. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿಯ ಜೊತೆಗಿದ್ದ ಪ್ರಿಯಕರನ ಬರ್ಬರ ಹತ್ಯೆ – ಒಂದೇ ಗಂಟೆಯಲ್ಲಿ ಪತ್ತೆ ಹಚ್ಚಿದ ತಾರಾ!

    ಪತ್ನಿಯ ಜೊತೆಗಿದ್ದ ಪ್ರಿಯಕರನ ಬರ್ಬರ ಹತ್ಯೆ – ಒಂದೇ ಗಂಟೆಯಲ್ಲಿ ಪತ್ತೆ ಹಚ್ಚಿದ ತಾರಾ!

    ದಾವಣಗೆರೆ: ಪತ್ನಿಯ ಪ್ರಿಯಕರನನ್ನು ಕೊಲೆಗೈದ ವ್ಯಕ್ತಿಯನ್ನು ಕೊಲೆಯಾದ ಒಂದೇ ಗಂಟೆಯಲ್ಲಿ ದಾವಣಗೆರೆ ಪೊಲೀಸ್ ಇಲಾಖೆಯ ಕ್ರೈಂ ಡಾಗ್ (Crime Dog) ತಾರಾ ಪತ್ತೆ ಹಚ್ಚಿರುವ ಘಟನೆ ಹೊನ್ನೂರು (Honnur) ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.

    ಚಿತ್ರದುರ್ಗ (Chitradurga) ಜಿಲ್ಲೆಯ ಹೆಗಡೆಹಾಳ್ ಗ್ರಾಮದ ಶಿವಕುಮಾರ್(28) ಕೊಲೆಯಾದ ಯುವಕ. ಹೊನ್ನೂರು ಗೊಲ್ಲರಹಟ್ಟಿಯ ಜಯ್ಯಪ್ಪ ಕೊಲೆ ಮಾಡಿದ ಆರೋಪಿ. ಇದನ್ನೂ ಓದಿ: ಅಣ್ಣಮ್ಮ ದೇವಿಗೆ ಹರಕೆ ಸಲ್ಲಿಸಿದ ದರ್ಶನ್ ಪತ್ನಿ

    ಶಿವಕುಮಾರ್, ಜಯ್ಯಪ್ಪನ ಪತ್ನಿ ಪರಿಮಳಲನ್ನು ಪ್ರೀತಿಸುತ್ತಿದ್ದ. ಮದುವೆಯಾದ ನಂತರವೂ ಕೂಡ ಪರಿಮಳ ಹಾಗೂ ಶಿವಕುಮಾರ್ ಸಂಬಂಧ ಹೊಂದಿದ್ದರು. ಶಿವಕುಮಾರ್, ಪರಿಮಳಳನ್ನು ಭೇಟಿಯಾಗಲು ಹೊನ್ನೂರು ಗೊಲ್ಲರಹಟ್ಟಿ ಬಳಿ ಇರುವ ಜಮೀನಿಗೆ ಬಂದಿದ್ದ. ಇಬ್ಬರು ಜೊತೆಗಿದ್ದಿದ್ದು ಕಂಡು ಕೋಪಗೊಂಡ ಜಯ್ಯಪ್ಪ, ಶಿವಕುಮಾರ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ. ಇದನ್ನೂ ಓದಿ: ಮುಸ್ಲಿಂ ಯುವತಿ, ಹಿಂದೂ ಯುವಕನ ಮೇಲೆ ನೈತಿಕ ಪೊಲೀಸ್‌ಗಿರಿ ಪ್ರಕರಣ – ಅಪ್ರಾಪ್ತ ಸೇರಿ ಐವರ ಬಂಧನ

    ಕೂಡಲೇ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು (Davanagere Police) ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಕ್ರೈಂ ಡಾಗ್ ತಾರಾ ಆರೋಪಿಯ ಜಾಡು ಹಿಡಿದು ಹೊರಟಿತ್ತು. ಕೊಲೆ ಆರೋಪಿ ಮನೆ ಮುಂದೆ ನಿಂತ ಕ್ರೈಂ ಡಾಗ್ ತಾರಾ, ಕೊಲೆಯಾದ ಒಂದು ಗಂಟೆಯಲ್ಲೇ ಆರೋಪಿಯನ್ನು ಪತ್ತೆ ಮಾಡಿದೆ. ಇದನ್ನೂ ಓದಿ: It Is My Territory – ಉಗ್ರಂ ಶೈಲಿಯಲ್ಲಿ ವೃತ್ತ ಬರೆದು ರಾಹುಲ್‌ ಸಂಭ್ರಮ

    ಈ ವಿಚಾರವಾಗಿ ಕೂಡಲೇ ಪತ್ನಿಯನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಭೇದಿಸಿದ ಕ್ರೈಂ ಡಾಗ್ ತಾರಾ ಹಾಗೂ ಗ್ರಾಮಾಂತರ ಠಾಣೆ ಪೊಲೀಸರ ಕಾರ್ಯಕ್ಕೆ ಎಸ್ ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • Davanagere Violence | ಕಲ್ಲು ತೂರಾಟ – ಗಣೇಶ ಸಮಿತಿ 8 ಜನ ಸೇರಿ 18 ಮಂದಿಗೆ ನ್ಯಾಯಾಂಗ ಬಂಧನ

    Davanagere Violence | ಕಲ್ಲು ತೂರಾಟ – ಗಣೇಶ ಸಮಿತಿ 8 ಜನ ಸೇರಿ 18 ಮಂದಿಗೆ ನ್ಯಾಯಾಂಗ ಬಂಧನ

    ದಾವಣಗೆರೆ: ಜಿಲ್ಲೆಯ ಬೇತೂರು ರಸ್ತೆಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ (Davanagere Stone Pelting Case) ಸಂಬಂಧಿಸಿದಂತೆ 18 ಜನರಿಗೆ ನ್ಯಾಯಾಧೀಶರಾದ ಪ್ರಶಾಂತ್‌ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ ಸಮಿತಿಯ 8 ಜನ ಸೇರಿ ಎರಡು ಕೋಮಿನ ಒಟ್ಟು 18 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ ಬಿಗಿ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ದಾವಣಗೆರೆಯ ಎಂಸಿಸಿ ʻಎʼ ಬ್ಲಾಕ್‌ನಲ್ಲಿರುವ ನ್ಯಾಯಾಧೀಶರಾದ ಪ್ರಶಾಂತ್ ಅವರ ನಿವಾಸದಲ್ಲಿ ಆರೋಪಿಗಳನ್ನು ಹಾಜರುಪಡಿಸಿದ್ದರು. ಆರೋಪಿಗಳ ವಿಚಾರಣೆ ಬಳಿಕ 18 ಜನರಿಗೆ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನ (Judicial Custody) ವಿಧಿಸಿದರು.

    ಏನಿದು ಗಲಭೆ ಪ್ರಕರಣ?
    ದಾವಣಗೆರೆಯ ಮುದ್ದ ಬೋವಿ ಕಾಲೋನಿ ಹಾಗೂ ವೆಂಕಬೋವಿ ಕಾಲೋನಿಯ ಗಣೇಶ ಮೆರವಣಿಗೆ (Ganesh Procession) ನಡೆಯುವಾಗ ಕಲ್ಲು ತೂರಾಟ (Stone Pelting) ನಡೆದಿತ್ತು. ಘಟನೆಯಲ್ಲಿ ಪೊಲೀಸರೂ ಗಾಯಗೊಂಡಿದ್ದರು. ಕೂಡಲೇ ಮುಸ್ಲಿಂ ಮುಖಂಡರು ಪರಿಸ್ಥಿತಿಯನ್ನು ನಿಯಂತ್ರಣಗೊಳಿಸಿದ್ದರು. ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸಾಗಿದ ಮೂರು ಕಡೆಗಳಲ್ಲಿ ಕಲ್ಲು ತೂರಾಟ ನಡೆಸಲಾಗಿತ್ತು. ಕೂಡಲೇ ಪೊಲೀಸರು ಇಡೀ ನಗರದಲ್ಲಿ ಸಂಚಾರ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು. ಶುಕ್ರವಾರ ಬೆಳಗ್ಗಿನ ವೇಳೆಗೆ ಘಟನೆಗೆ ಕಾರಣರಾದವರನ್ನ ಬಂಧಿಸಿದ್ದರು.

    ಕಲ್ಲು ತೂರಾಟಕ್ಕೆ ಕಾರಣ ಏನು?
    ಕಳೆದ ಎರಡು ದಿನಗಳ ಹಿಂದೆ ಹಿಂದೂ ಮುಖಂಡರು ನಾಗಮಂಗಲ ಕಲ್ಲುತೂರಾಟ ಪ್ರಕರಣ ಹಾಗೂ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್‌ ಧ್ವಜ ಪ್ರದರ್ಶನ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ ಸಂಚಾಲಕ ಸತೀಶ್ ಪೂಜಾರ್ ವಿವಾದಾತ್ಮಕ ಹೇಳಿಕೆ‌ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಮುಸ್ಲಿಂ ಮುಖಂಡನೊಬ್ಬ ತಾಕತ್ ಇದ್ದರೆ ಬೇತೂರು ರಸ್ತೆಗೆ ಬಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಗುರುವಾರ ಗಣೇಶ ಮೆರವಣಿಗೆಯಲ್ಲಿ ಸತೀಶ್ ಪೂಜಾರಿ ಭಾಗವಹಿಸಿದ್ದರು. ಮೆರವಣಿಗೆ ಸಾಗುವ ಅರಳಿಮರ ಸರ್ಕಲ್ ಬಳಿ ಭಾರೀ ಸಂಖ್ಯೆಯಲ್ಲಿ ಮುಸ್ಲಿಮರು ಸೇರಿದ್ದರು. ಗಣೇಶನ ಮೆರವಣಿಗೆ ಹೋಗುತ್ತಿದ್ದಾಗ ಇಸ್ಲಾಂ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.

    ಈ ವೇಳೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಮುಸ್ಲಿಂ ಮುಖಂಡರೇ ಜನಸಂದಣಿಯನ್ನು ನಿಯಂತ್ರಣ ಮಾಡಿದ್ದಾರೆ. ನಂತರ ಕೆ ಅರ್ ರಸ್ತೆ ಹಂಸಭಾವಿ ಸರ್ಕಲ್ ನಲ್ಲಿ ಕಲ್ಲು ತೂರಾಟ ನಡೆದಿದೆ.

  • ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ – ಪತಿ, ಮಕ್ಕಳ ವಿರುದ್ಧ ಕೊಲೆ ಆರೋಪ

    ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ – ಪತಿ, ಮಕ್ಕಳ ವಿರುದ್ಧ ಕೊಲೆ ಆರೋಪ

    ದಾವಣಗೆರೆ: ನಗರದ (Davanagere) ವಿವೇಕಾನಂದ ಬಡಾವಣೆಯ ಮನೆಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆಯ (Women) ಶವ ಪತ್ತೆಯಾಗಿದ್ದು, ತಂದೆಯೊಂದಿಗೆ ಸೇರಿ ಕೈ ತುತ್ತು ತಿಂದ ಮಕ್ಕಳೇ ಮಹಿಳೆಯನ್ನು ಕೊಲೆಗೈದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಮೃತ ಮಹಿಳೆಯನ್ನು ಸುಮಲತಾ ಎಂದು ಗುರುತಿಸಲಾಗಿದೆ. ಶಿವಮೂರ್ತಿ 12 ವರ್ಷಗಳ ಹಿಂದೆ ಮೊದಲನೇ ಪತ್ನಿ ಸಾವನ್ನಪ್ಪಿದ ಬಳಿಕ ಸುಮಲತಾಳನ್ನು ಮದುವೆಯಾಗಿದ್ದ. ಆಕೆಗೆ ಮಕ್ಕಳಿರಲಿಲ್ಲ, ಪತಿಯ ಮೊದಲ ಹೆಂಡತಿಯ ಮೂರು ಮಕ್ಕಳನ್ನ ಪಾಲನೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಳು. ಇದೀಗ ಪತಿ ಹಾಗೂ ಮಕ್ಕಳ ವಿರುದ್ಧ ಸುಮಲತಾ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ.

    ಸುಮಾಲತಾ ತನ್ನ ಮಕ್ಕಳಂತೆ ಮೂವರನ್ನೂ ನೋಡಿಕೊಂಡಿದ್ದಳು. ಆದರೆ ಮಕ್ಕಳು ದೊಡ್ಡವರಾದ ಮೇಲೆ ಜಗಳ ಶುರುವಾಗಿದೆ. ಓರ್ವ ಸುಮಲತಾ ಜೊತೆ ಆರು ತಿಂಗಳು ಮಾತು ನಿಲ್ಲಿಸಿದ್ದ. ಅಲ್ಲದೇ ಮಕ್ಕಳು ದೊಡ್ಡವರಾದ ಬಳಿಕ ಶಿವಮೂರ್ತಿ ಪತ್ನಿಗೆ ಕಿರುಕುಳ ನೀಡಲು ಶುರು ಮಾಡಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

  • ಮಗನ ಸಾವಿನ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ: ಆದಿಲ್ ತಂದೆ ಸ್ಪಷ್ಟನೆ

    ಮಗನ ಸಾವಿನ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ: ಆದಿಲ್ ತಂದೆ ಸ್ಪಷ್ಟನೆ

    ದಾವಣಗೆರೆ: ಆದಿಲ್ ಸಾವಿನ ಬಗ್ಗೆ ನಮಗೆ ಯಾವುದೇ ರೀತಿಯ ಅನುಮಾನ ಇಲ್ಲ ಎಂದು ಮೃತ ಆದಿಲ್ ತಂದೆ ಕಲೀಂವುಲ್ಲಾ ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆದಿಲ್‌ಗೆ ಯಾವುದೇ ರೀತಿಯ ಮೂರ್ಛೆ ರೋಗ ಇರಲಿಲ್ಲ. ಆತ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ. ಆತ ಯಾವುದೇ ಮಟ್ಕಾ ಆಡ್ತಾ ಇರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಚನ್ನಗಿರಿಯಲ್ಲಿ ಲಾಕಪ್ ಡೆತ್ ಆರೋಪ- ಕುಟುಂಬಸ್ಥರಿಂದ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ

    ಮಗ ಸಾವನ್ನಪ್ಪಿದ್ದಕ್ಕೆ ನ್ಯಾಯ ಕೇಳಲು ಬಂದಿದ್ದೆವು. ಈ ವೇಳೆ ಯಾರು ಬಂದು ಕಲ್ಲು ಹೊಡೆದಿದ್ದಾರೋ ನನಗೆ ಗೊತ್ತಿಲ್ಲ. ನಾನು ನನ್ನ ಮಗನನ್ನ ಕಳೆದುಕೊಂಡಿದ್ದೇನೆ. ಈ ವಯಸ್ಸಲ್ಲಿ ನನಗೆ ದುಡಿಯೋಕೆ ಆಗುತ್ತಾ? ಸರ್ಕಾರ ನಮಗೆ ಪರಿಹಾರ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಏನಿದು ಪ್ರಕರಣ?: ಮಟ್ಕಾ ಆಡಿಸುತ್ತಿದ್ದ ಆದಿಲ್ ಎಂಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದ್ದಕ್ಕಿದ್ದಂತೆ ಆರೋಪಿಗೆ ಬಿಪಿ ಲೋ ಆದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆರೋಪಿ ಆದಿಲ್ ಮೃತಪಟ್ಟಿದ್ದಾನೆ. ಪೊಲೀಸರ ಕಸ್ಟಡಿಯಲ್ಲಿ ಇರುವಾಗಲೇ ಆದಿಲ್ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಕುಟುಂಬಸ್ಥರು ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದರು.

    ಬಳಿಕ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಕುಟುಂಬಸ್ಥರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಅಲ್ಲದೇ ಪೊಲೀಸ್ ಜೀಪನ್ನು ಧ್ವಂಸಗೊಳಿಸಿ, ಪಲ್ಟಿ ಮಾಡಿ ಆಕ್ರೋಶ ಹೊರಹಾಕಿದ್ದರು. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಕೂಡಾ ಗಾಯಗೊಂಡಿದ್ದರು.

    ಎಸ್ಪಿ ಉಮಾ ಪ್ರಶಾಂತ್ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ಪೊಲೀಸರು ಆದಿಲ್ ಎಂಬ ವ್ಯಕ್ತಿಯನ್ನು ಕರೆತಂದಿದ್ದರು. ಬಳಿಕ ಆತ ಕುಸಿದು ಬಿದ್ದ ಹಿನ್ನೆಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆಸ್ಪತ್ರೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿ ನಮ್ಮ ಪೊಲೀಸ್ ಠಾಣೆಯಲ್ಲಿ 6 ರಿಂದ 7 ನಿಮಿಷ ಕೂಡ ಇರಲಿಲ್ಲ ಎಂದಿದ್ದರು. ಇದನ್ನೂ ಓದಿ: ಚನ್ನಗಿರಿ ಪ್ರಕರಣ ಲಾಕಪ್ ಡೆತ್ ಅಲ್ಲ, ಆತನಿಗೆ ಮೂರ್ಛೆ ರೋಗ ಇತ್ತು: ಸಿದ್ದರಾಮಯ್ಯ

  • ʻಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿʼ – ಪ್ರಚೋದನಕಾರಿ ಹೇಳಿಕೆ ನೀಡಿದ್ದ ಈಶ್ವರಪ್ಪ ವಿರುದ್ಧ ಕೇಸ್‌

    ʻಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿʼ – ಪ್ರಚೋದನಕಾರಿ ಹೇಳಿಕೆ ನೀಡಿದ್ದ ಈಶ್ವರಪ್ಪ ವಿರುದ್ಧ ಕೇಸ್‌

    ದಾವಣಗೆರೆ: ಸಂಸದ ಡಿಕೆ ಸುರೇಶ್ ಹಾಗೂ ವಿನಯ್ ಕುಲಕರ್ಣಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಅವರ ವಿರುದ್ಧ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದಾವಣಗೆರೆಯಲ್ಲಿ (Davanagere) ನಡೆದ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಕೆ.ಎಸ್ ಈಶ್ವರಪ್ಪ, ಕಾಂಗ್ರೆಸ್ ನಾಯಕರನ್ನ (Congress Leaders) ಟೀಕಿಸುವ ಭರದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಪಾಕ್‌ ಚುನಾವಣೆ; ಪಿಎಂಎಲ್‌-ಎನ್‌ ಅತಿ ದೊಡ್ಡ ಪಕ್ಷ?- ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾದ ಮಾಜಿ ಪ್ರಧಾನಿ

    ಈಶ್ವರಪ್ಪ ಅವರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಮುಖಂಡ ಹನುಮಂತ ಅವರು `ಪ್ರಾಣ ಬೆದರಿಕೆ ಹಾಗೂ ಪ್ರಚೋದನಕಾರಿ’ ಹೇಳಿಕೆ ಅಡಿಯಲ್ಲಿ ದೂರು ದಾಖಲಿಸಿದ್ದರು. ಕೈ ಮುಖಂಡನ ದೂರು ಆಧರಿಸಿ ಪೊಲೀಸರು ಐಪಿಸಿ ಸೆಕ್ಷನ್ 505 (1) (C), 505 (2), ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಲ್ಲು ಅರ್ಜುನ್, ಫಹಾದ್ ಕಾಂಬಿನೇಷನ್ ಹೇಗಿರಲಿದೆ? ಸುಳಿವು ಬಿಟ್ಟು ಕೊಟ್ಟ ಸುಕುಮಾರ್

    ಈಶ್ವರಪ್ಪ ಹೇಳಿದ್ದೇನು?
    ದಾವಣಗೆರೆಯಲ್ಲಿ ಗುರುವಾರ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕೆ.ಎಸ್‌ ಈಶ್ವರಪ್ಪ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಯಾವ ದೇಶದ ಅಧ್ಯಕ್ಷರಾಗಿದ್ದಾರೆ ಎಂದು ಸ್ಪಷ್ಟವಾಗಿ ಹೇಳಲಿ. ಅವರ ಪಕ್ಷದ ಡಿ.ಕೆ ಸುರೇಶ್, ವಿನಯ್ ಕುಲಕರ್ಣಿ ದೇಶ ಇಬ್ಭಾಗ ಮಾಡಬೇಕು ಅಂತ ಹೇಳುತ್ತಿದ್ದಾರೆ. ತಮ್ಮ ಪಕ್ಷದ ಸಂಸದರೇ ಹೇಳಿದಂತೆ ನೀವು ಉತ್ತರ ಭಾರತದ ಅಧ್ಯಕ್ಷರಾ? ಅಥವಾ ದಕ್ಷಿಣ ಭಾರತದ ಅಧ್ಯಕ್ಷರಾ? ಕಾಂಗ್ರೆಸ್‌ನಲ್ಲಿರುವ ವಿನಯ್ ಕುಲಕರ್ಣಿ, ಡಿಕೆ ಸುರೇಶ್ ಇಬ್ಬರೂ ದೇಶದ್ರೋಹಿಗಳು. ತಾಕತ್ತಿದ್ದರೆ, ದೇಶದ್ರೋಹದ ಹೇಳಿಕೆ ನೀಡಿದ ಈ ಇಬ್ಬರನ್ನೂ ಪಕ್ಷದಿಂದ ಕಿತ್ತು ಬಿಸಾಕಿ ಎಂದು ಒತ್ತಾಯಿಸಿದರಲ್ಲದೇ, ಈ ರೀತಿ ದೇಶದ್ರೋಹ ಹೇಳಿಕೆ ನೀಡುವ, ದೇಶ ದ್ರೋಹ ಕೆಲಸ ಮಾಡುವರನ್ನ ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ ಎಂದು ಒತ್ತಾಯಿಸಿದ್ದರು.

  • ದೇಶದಲ್ಲೇ ಪ್ರಥಮ – ಬೆಣ್ಣೆನಗರಿಯನ್ನು ಕಾಪಾಡಲು ಬಂದಿವೆ ಬ್ಲಾಕ್ ಕಮಾಂಡೋಗಳು

    ದೇಶದಲ್ಲೇ ಪ್ರಥಮ – ಬೆಣ್ಣೆನಗರಿಯನ್ನು ಕಾಪಾಡಲು ಬಂದಿವೆ ಬ್ಲಾಕ್ ಕಮಾಂಡೋಗಳು

    ದಾವಣಗೆರೆ: ದೇಶದಲ್ಲೇ ಮೊದಲ ಬಾರಿಗೆ ಎಂಬಂತೆ ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆ ಜಿಲ್ಲಾ ಪೊಲೀಸ್‍ಗೆ ಕಮಾಂಡರ್ ಗಳನ್ನು ಪರಿಚಯಿಸಲಾಗಿದ್ದು, ವಿಶೇಷ ತಂತ್ರಜ್ಞಾನ ಹೊಂದಿದ ವಾಹನಗಳನ್ನು ಖರೀದಿಸಲಾಗಿದೆ.

    ನಗರದಲ್ಲಿ ಆಗಾಗ ಸಣ್ಣ ಪುಟ್ಟ ಕ್ರೈಂಗಳು ಸಂಭವಿಸುತ್ತಲೇ ಇರುತ್ತವೆ. ಜನಸಂಖ್ಯೆ ದೊಡ್ಡದಾಗುತ್ತಿದ್ದಂತೆ ಕ್ರೈಂ ಪ್ರಕರಣಗಳು ಸಹ ಬೆಳೆಯುತ್ತಿವೆ. ಹೀಗಾಗಿ ಅಪರಾಧ ಪ್ರಕರಣಗಳ ಪತ್ತೆಗೆ ಪೊಲೀಸರು ಈಗ ಹೈಟೆಕ್ ತಂತ್ರಜ್ಞಾನ ಬಳಕೆ ಮೊರೆ ಹೋಗಿದ್ದಾರೆ. ಇದರ ಭಾಗವಾಗಿ ಮೂರು ಕಮಾಂಡೊ ವೆಹಿಕಲ್‍ಗಳು ಜಿಲ್ಲಾ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿವೆ.

    ಇಡೀ ದೇಶದಲ್ಲೇ ಮೊದಲ ಬಾರಿಗೆ ಎಂಬಂತೆ ಕಮಾಂಡೋ ವಾಹನಗಳನ್ನು ದಾವಣಗೆರೆ ಪೊಲೀಸರಿಗೆ ಸ್ಮಾರ್ಟ್ ಸಿಟಿ ಯೋಜನೆ ಯಡಿ ನೀಡಲಾಗಿದೆ. ಸ್ಮಾರ್ಟ್‍ಸಿಟಿಗೆ ಆಯ್ಕೆಯಾಗಿರುವ ಯಾವ ಜಿಲ್ಲೆಯಲ್ಲಿಯೂ ಈ ಕಮಾಂಡೋ ವಾಹನ ನೀಡಿಲ್ಲ. ಆದರೆ ಸ್ಮಾರ್ಟ್ ಸಿಟಿ ಯೋಜನೆ ಎಂಡಿ ರವೀಂದ್ರ ಮಲ್ಲಾಪುರ ಅವರು ಸಿಸಿ ಪೂರ್ವವಲಯದ ಐಜಿಪಿ ಎಸ್.ರವಿ ಅವರಿಗೆ ಹಸ್ತಾಂತರಿಸಿದ್ದಾರೆ. ಅಲ್ಲದೇ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾರ್ಪಾಡು ಆಗಬೇಕಿದ್ದು, ಅವುಗಳ ಪೂರೈಕೆಗೆ ಐಜಿಪಿ ಸ್ಮಾರ್ಟ್‍ಸಿಟಿ ಎಂಡಿಗೆ ಮನವಿ ಮಾಡಿದ್ದಾರೆ.

    ಹೊಸ ತಂತ್ರಜ್ಞಾನವನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ. ಅಲ್ಲದೆ ದೊಡ್ಡ ಸಭೆ, ಸಮಾರಂಭ, ಪ್ರತಿಭಟನೆ ಸೇರಿದಂತೆ ಹೆಚ್ಚು ಜನ ಸೇರುವ ಸಮಾರಂಭಗಳ ಮೇಲೆ ಹದ್ದಿನ ಕಣ್ಣಿಡಲು ಈ ವಾಹನ ಸಹಕಾರಿಯಾಗಲಿದೆ.

    ವಿಶೇಷತೆ ಏನು?
    ಈ ಕಮಾಂಡೋ ವಾಹನದಲ್ಲಿ ಐದು ಮಂದಿ ಕೂರಬಹುದು. 2500 ಸಿಸಿ ಸಾಮರ್ಥ್ಯದ ಎಂಜಿನ್‍ವುಳ್ಳ ಈ ವೆಹಿಕಲ್ ಗುಡ್ಡಗಾಡು ಪ್ರದೇಶದಲ್ಲಿ ಕೂಡ ಸಾಗುತ್ತದೆ. ಇದರಲ್ಲಿ ಡ್ರೋನ್ ಕ್ಯಾಮೆರಾ ವ್ಯವಸ್ಥೆ ಸಹ ಇದ್ದು, ಕ್ಯೂಆರ್ ಕೋಡ್ ಸಹ ಅಳವಡಿಸಲಾಗಿದೆ. ಈ ಕ್ಯೂಆರ್ ಕೋಡ್‍ನಿಂದಾಗಿ ಡ್ರೋನ್ ಎಲ್ಲೇ ಹೋದರೂ ವೆಹಿಕಲ್ ಇರುವ ಜಾಗಕ್ಕೆ ಮತ್ತೆ ಬರುತ್ತದೆ. ಅಲ್ಲದೆ ಗನ್ ಟೈ ಪ್ಯಾಡ್, ಡಬಲ್ ಬ್ಯಾಟರಿ ಬಾಕ್ಸ್, ಸಿಗ್ನಲ್ ಜಾಮರ್, ಗನ್ ಇಡಲು ಆಮೋ ಬಾಕ್ಸ್, ಸರ್ವಲೆನ್ಸ್ ಕ್ಯಾಮೆರಾ, ಫೈರ್ ಪೂಫ್, ಬೆಂಕಿ ನಿಯಂತ್ರಣ ಸಾಧನ, ಗಲಭೆಯಲ್ಲಿ ವಾಹನಕ್ಕೆ ಕಲ್ಲು ಬೀಳದಂತೆ ತಡೆಯಲು ಮೆಸ್, ಫೋಕಸ್ ಲೈಟ್ ಸೇರಿದಂತೆ ಇನ್ನಿತರ ವಿಶೇಷತೆಗಳನ್ನು ಅಳವಡಿಸಲಾಗಿದೆ. ಇನ್ನೂ ವಿಶೇಷವೆಂದರೆ ಆಟೋಮೋಟಿವ್ ವೆಹಿಕಲ್ ಲೊಕೇಷನ್ ಸಿಸ್ಟಂ ಸಹ ಇದೆ. ಇದರಿಂದ ಪೊಲೀಸರು ಪ್ರತಿ ಬಾರಿ ಕಂಟ್ರೋಲ್ ರೂಮ್ ಸಂಪರ್ಕಿಸಬೇಕಿಲ್ಲ. ಘಟನಾ ಸ್ಥಳಕ್ಕೆ ಬೇಗ ತಲುಪಬಲ್ಲದು. ಅಲ್ಲದೆ ಘಟನಾ ಸ್ಥಳದ ಚಿತ್ರಣವನ್ನು ಎಸ್‍ಪಿ ಕಚೇರಿಯಲ್ಲಿ ಕುಳಿತುಕೊಂಡೇ ವೀಕ್ಷಿಸಬಹುದಾಗಿದೆ.

    ದೇಶದಲ್ಲಿಯೇ ಈ ವ್ಯವಸ್ಥೆ ಅಳವಡಿಸಿಕೊಳ್ಳಲಿರುವ ಪ್ರಥಮ ನಗರ ದಾವಣಗೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈಗಾಗಲೇ ಖಾಲಿ ಕಮಾಂಡೊ ವಾಹನಗಳು ಬಂದಿವೆ. ವಾಹನಕ್ಕೆ ಬೇಕಾದ ಸಾಮಗ್ರಿ ಅಳವಡಿಸಲು ಸ್ಟಾರ್ಟ್‍ಸಿಟಿ ತಂಡ ಮುಂದಾಗಿದೆ. ಇದಕ್ಕೆ ಆರ್ ಟಿಓ ಅನುಮತಿ ಬೇಕಿದ್ದು, ಇದಾದ ಬಳಿಕ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.