Tag: Daughter’s Day

  • ಮಗಳ ದಿನ- ಕ್ಯೂಟ್ ಫೋಟೋದೊಂದಿಗೆ ಭಾವನಾತ್ಮಕ ಸಾಲು ಬರೆದು ಶುಭಕೋರಿದ ಯಶ್

    ಮಗಳ ದಿನ- ಕ್ಯೂಟ್ ಫೋಟೋದೊಂದಿಗೆ ಭಾವನಾತ್ಮಕ ಸಾಲು ಬರೆದು ಶುಭಕೋರಿದ ಯಶ್

    ಬೆಂಗಳೂರು: ಮಗಳ ದಿನದ ಅಂಗವಾಗಿ ಹಲವರು ತಮ್ಮ ಮುದ್ದಿನ ಮಗಳಿಗೆ ವಿವಿಧ ರೀತಿಯಲ್ಲಿ ಶುಭ ಕೋರುವ ಮೂಲಕ ಆಚರಿಸುತ್ತಿದ್ದಾರೆ. ಅದೇ ರೀತಿ ಇದೀಗ ನಟ ಯಶ್ ಸಹ ಮಗಳೊಂದಿಗೆ ಕಾಲ ಕಳೆಯುತ್ತಿರುವ ಕ್ಯೂಟ್ ಫೋಟೋ ಹಂಚಿಕೊಂಡು, ಭಾವನಾತ್ಮಕ ಸಾಲು ಬರೆದು ಶುಭ ಕೋರಿದ್ದಾರೆ.

     

    View this post on Instagram

     

    A post shared by Yash (@thenameisyash)

    ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, ಐರಾಳ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಯಾವಾಗಲೂ ನಿನ್ನ ಮಾತನ್ನು ಕೇಳುತ್ತ ಇರಬಲ್ಲೆ. ನೀನು ನಮ್ಮ ಆಶೀರ್ವಾದ ಮಗಳೆ. ಪ್ರಪಂಚದ ಅದ್ಭುತ ಹೆಣ್ಣುಮಕ್ಕಳಿಗೆ ಹ್ಯಾಪಿ ಡಾಟರ್ಸ್ ಡೇ. ನೀನು ಜೀವನವನ್ನು ವಿಶೇಷವಾಗಿಸಿರುವೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಾಕ್ಸ್ ಆಫೀಸ್‍ನಲ್ಲಿ ಬಿಗ್ ಫೈಟ್ – ಒಂದೇ ದಿನ ಸ್ಯಾಂಡಲ್‍ವುಡ್‍ನ 2 ಸಿನಿಮಾ ರಿಲೀಸ್

    ಫೋಟೋದಲ್ಲಿ ಐರಾ ಹಾಗೂ ಯಶ್ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುತ್ತಿದ್ದಾರೆ. ಈ ವಿಶೇಷ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಯಶ್ ಮಗಳಿಗೆ ಶುಭ ಕೋರಿದ್ದಾರೆ. ಯಶ್ ಆಗಾಗ ತಮ್ಮ ಮಕ್ಕಳ ಬಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಗಣೇಶ ಹಬ್ಬದ ಸಂದರ್ಭದ ಫೋಟೋಗಳನ್ನು ಹಂಚಿಕೊಂಡಿದ್ದರು. ಇದಕ್ಕೂ ಮೊದಲು ಯಥರ್ವ್ ಹಾಗೂ ಐರಾ ಕುಣಿದು ಕುಪ್ಪಳಿಸುತ್ತಿದ್ದ ಫೊಟೋಗಳನ್ನು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ:  ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಉಪಾಧ್ಯಕ್ಷರಾದ ಕನ್ನಡತಿ

    ಹೀಗೆ ಯಶ್ ಸಿನಿಮಾ ಕೆಲಸದ ಜೊತೆಗೆ ಕುಟುಂಬಕ್ಕೂ ಸಮಯ ನೀಡುತ್ತಾರೆ. ಮಕ್ಕಳು ಹಾಗೂ ಕುಟುಂಬದವರೊಂದಿಗೆ ಎಂಜಾಯ್ ಮಾಡುತ್ತಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಶೂಟಿಂಗ್‍ಗೆ ಬ್ರೇಕ್ ಬಿದ್ದಿದ್ದರಿಂದ ಸಂಪೂರ್ಣ ಸಮಯವನ್ನು ಮಕ್ಕಳೊಂದಿಗೆ ಕಳೆದಿದ್ದಾರೆ.

    ಕೆಜಿಎಫ್-2 ಬಿಡುಗಡೆ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಈಗಾಗಲೇ ಡೇಟ್ ಕೂಡ ಅನೌನ್ಸ್ ಆಗಿದ್ದು, ಏಪ್ರಿಲ್ 14, 2022ಕ್ಕೆ ಕೆಜಿಎಫ್-2 ವಿಶ್ವಾದ್ಯಂತ ತೆರೆಗೆ ಅಪ್ಪಳಿಸಲಿದೆ. ಈ ಕ್ಷಣಕ್ಕಾಗಿ ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ.

  • ಹೆಣ್ಮಕ್ಕಳು ನಮಗೆ ಉತ್ತಮ ಸ್ನೇಹಿತರು – ಐರಾಗೆ ರಾಧಿಕಾ ವಿಶ್

    ಹೆಣ್ಮಕ್ಕಳು ನಮಗೆ ಉತ್ತಮ ಸ್ನೇಹಿತರು – ಐರಾಗೆ ರಾಧಿಕಾ ವಿಶ್

    ಬೆಂಗಳೂರು: ನಟಿ ರಾಧಿಕಾ ಪಂಡಿತ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ತಮ್ಮ ಮಕ್ಕಳ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ನಟಿ ರಾಧಿಕಾ ತಮ್ಮ ಮಗಳೊಂದಿಗಿನ ಮುದ್ದಾದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಐರಾ ಮತ್ತು ತಮ್ಮ ಸಹೋದರನ ಮಗಳಿಗೆ ಶುಭಾಶಯ ಕೋರಿದ್ದಾರೆ.

    ಭಾನುವಾರ ಮಗಳ ದಿನಾಚರಣೆ ಇತ್ತು. ಹೀಗಾಗಿ ಅನೇಕ ನಟ-ನಟಿಯರು ತಮ್ಮ ಮಗಳಿಗೆ ಶುಭಾಶಯವನ್ನು ತಿಳಿಸಿದ್ದಾರೆ. ಅದೇ ರೀತಿ ನಟಿ ರಾಧಿಕಾ ಪಂಡಿತ್ ಕೂಡ ತಮ್ಮ ಮಗಳು ಐರಾ ಮತ್ತು ಸಹೋದರನ ಮಗಳಿಗೆ ಸೋಶಿಯಲ್ ಮೀಡಿಯಾದ ಮೂಲಕ ವಿಶ್ ಮಾಡಿದ್ದಾರೆ.

    “ಹೆಣ್ಣು ಮಕ್ಕಳು ನಮಗೆ ಯಾವಾಗಲೂ ಅತ್ಯುತ್ತಮ ಸ್ನೇಹಿತರು. ನಿನ್ನೆ ಮಗಳ ದಿನ ಎಂದು ನಾನು ನಂಬಿದ್ದೇನೆ. ಹೀಗಾಗಿ ಎಲ್ಲಾ  ಹೆಣ್ಣು ಮಕ್ಕಳಿಗೆ ಮಗಳ ದಿನಾಚರಣೆಯ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ. ಮಗಳು ಐರಾ ಜೊತೆ ಬೀಚ್ ಚೇರ್ ಮೇಲೆ ಮಲಗಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ರಾಧಿಕಾ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಜೊತೆಗೆ ಸಹೋದರನ ಮಗಳ ಫೋಟೋ ಅಪ್ಲೋಡ್ ಮಾಡಿದ್ದಾರೆ. ಅಲ್ಲದೇ ಎರಡನೇ ಫೋಟೋದಲ್ಲಿರುವ ಮಗು ಯಾರು ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಆ ಫೋಟೋದಲ್ಲಿರುವುದು ರಿಯಾ. ಈಕೆ ನನ್ನ ಸಹೋದರ ಗೌರಂಗ್‍ನ ಪ್ರೀತಿಯ ಮಗಳು ಎಂದು ತಿಳಿಸಿದ್ದಾರೆ. ಸಹೋದರನ ಮಗಳು ರಾಧಿಕಾಗೂ ಮಗಳಾಗುತ್ತಾಳೆ. ಹೀಗಾಗಿ ಸೋದರನ ಮಗಳು ರಿಯಾಗೂ ಶುಭಾಶಯವನ್ನು ತಿಳಿಸಿದ್ದಾರೆ.

    ಇತ್ತೀಚೆಗೆ ರಾಧಿಕಾ ತಮ್ಮ ಮಕ್ಕಳ ವಿಡಿಯೋವೊಂದನ್ನು ಶೇರ್ ಮಾಡಿದ್ದರು. ಮೊದಲಿಗೆ ಯಥರ್ವ್ ಅಪ್ಪ ಯಶ್ ಮತ್ತು ಅಮ್ಮ ರಾಧಿಕಾ ಫೋಟೋ ಮುಂದೆ ಕುಳಿತಿದ್ದು, ಇಬ್ಬರನ್ನು ಗುರುತಿಸುವ ಪ್ರಯತ್ನ ಮಾಡುತ್ತಿದ್ದನು. ಈ ಮಧ್ಯೆ ಸಹೋದರಿ ಐರಾ ಬಂದು ತನ್ನ ಮುದ್ದು ತಮ್ಮನಿಗೆ ರಾಧಿಕಾ ಫೋಟೋ ತೋರಿಸಿ ಇದು ಅಮ್ಮ ಎಂದು ಹೇಳಿಕೊಟ್ಟಿದ್ದಳು. ಈ ವಿಡಿಯೋವನ್ನು ರಾಧಿಕಾ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು.

    https://www.instagram.com/p/CFq6idSACzM/?igshid=1ddhpjglzitso

    ಅಲ್ಲದೇ “ವಿದ್ಯಾರ್ಥಿ ಟೀಚರ್ ಆದಾಗ, ನನ್ನ ಕೆಲಸ ಮುಗಿದಿದೆ” ಎಂದು ಬರೆದುಕೊಂಡಿದ್ದರು. ಅಂದರೆ ಈ ಹಿಂದೆ ರಾಧಿಕಾ ತಮ್ಮ ಮಗಳು ಐರಾಗೆ ಯಶ್ ಮತ್ತು ತಮ್ಮ ಜೋಡಿ ಫೋಟೋವನ್ನು ತೋರಿಸಿ ಅಪ್ಪ, ಅಮ್ಮನ ಗುರುತಿಸುವಂತೆ ಹೇಳಿಕೊಟ್ಟಿದ್ದರು. ಆಗ ಐರಾ ವಿದ್ಯಾರ್ಥಿನಿಯಾಗಿದ್ದಳು. ಈಗ ತನ್ನ ಸಹೋದರ ಯಥರ್ವ್ ನಿಗೆ ಟೀಚರ್ ಆಗಿ ಅಪ್ಪ-ಅಮ್ಮ ಫೋಟೋ ತೋರಿಸಿ ಅಮ್ಮ ಹೇಳಿದ ರೀತಿಯೇ ಹೇಳಿಕೊಟ್ಟಿದ್ದರು.