Tag: daughter. techie

  • ತಾಯಿಯನ್ನೇ ಕೊಂದ ಮಗಳ ಪ್ರಕರಣ- ಟೆಕ್ಕಿ ಅಮೃತ ಆತ್ಮಹತ್ಯೆಗೆ ಯತ್ನ

    ತಾಯಿಯನ್ನೇ ಕೊಂದ ಮಗಳ ಪ್ರಕರಣ- ಟೆಕ್ಕಿ ಅಮೃತ ಆತ್ಮಹತ್ಯೆಗೆ ಯತ್ನ

    ಬೆಂಗಳೂರು: ನಗರದ ಕೆಆರ್ ಪುರದಲ್ಲಿ ನಡೆದಿದ್ದ ತಾಯಿಯನ್ನೇ ಬರ್ಬರವಾಗಿ ಕೊಂದು ಎಸ್ಕೇಪ್ ಆಗಿದ್ದ ಮಗಳ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.

    ತಾಯಿಯನ್ನು ಕೊಂದು ಪ್ರಿಯಕರನೊಂದಿಗೆ ಅಂಡಮಾನ್ ನಲ್ಲಿ ಸಿಕ್ಕಿಬಿದ್ದ ಟೆಕ್ಕಿ ಅಮೃತ ಈಗ ತಾನೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅಂಡಮಾನ್ ನಲ್ಲಿ ಪೊಲೀಸರು ಬಂಧನಕ್ಕೆ ಹೋದ ವೇಳೆಯೂ ಅಮೃತ ಗೊಡೆಗೆ ತಲೆ ಚಚ್ಚಿಕೊಂಡು ಸಾಯಲು ಯತ್ನಸಿದ್ದಳು. ಈ ವೇಳೆ ತಕ್ಷಣ ಪೊಲೀಸರು ಅಮೃತಳಾನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆ ತಂದಿದ್ದರು. ಇದನ್ನೂ ಓದಿ: “ಗಂಟಲಿಗೆ ಬಟ್ಟಿ ತುರುಕಿ ಕೊಂದೆ”- ಹೆತ್ತವಳನ್ನು ಕೊಂದ ಕಥೆ ಬಿಚ್ಚಿಟ್ಟ ಟೆಕ್ಕಿ ಅಮೃತಾ

    ಪ್ರಿಯಕರನೊಂದಿಗೆ ಠಾಣೆಗೆ ಬಂದ ಟೆಕ್ಕಿ ಅಮೃತಳಾನ್ನು ಕೆಆರ್ ಪುರ ಪೊಲೀಸರು ಸ್ಥಳ ಮಹಜರು ಮಾಡುವುದಕ್ಕೆ ಕೊಲೆ ಮಾಡಿದ್ದ ಅಕ್ಷಯನಗರಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಅಕ್ಕಪಕ್ಕದ ವಾಸಿಗಳು ಅಮ್ಮನನ್ನೇ ಕೊಲೆ ಮಾಡಿದ ಮಗಳು ಅಮೃತಗೆ ಮನಸೋ ಇಚ್ಛೆ ಬೈಗುಳಗಳ ಸುರಿಮಳೆ ಸುರಿಸಿದ್ದರು. ಇದರಿಂದ ತೀವ್ರ ನೊಂದ ಟೆಕ್ಕಿ ಅಮೃತ ಠಾಣೆಯಲ್ಲೇ ಮತ್ತೆ ಗೊಡೆಗೆ ತಲೆ ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ.

    ತನಿಖೆ ನಡೆಸುತ್ತಿರುವ ಕೆಆರ್ ಪುರ ಪೊಲೀಸರು ಅಮೃತ ಪ್ರಿಯಕರ ಶ್ರೀಧರ್ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಟೆಕ್ಕಿ ಅಮೃತ ತಾಯಿಯನ್ನು ಕೊಲೆ ಮಾಡಿ ತಮ್ಮನನ್ನು ಕೊಲೆ ಮಾಡಲು ಯತ್ನಿಸಿದ್ದು ಯಾಕೆ ಎನ್ನುವುದು ಇನ್ನು ಅನುಮಾನಗಳಿದ್ದು ಆ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಸದ್ಯ 14 ದಿನ ನ್ಯಾಯಾಂಗ ಬಂಧನದಲ್ಲಿರುವ ಅಮೃತಗೆ ಜೈಲಿನಲ್ಲಿಯೇ ಕೌನ್ಸಲಿಂಗ್ ಮಾಡಲಾಗುತ್ತಿದೆ.