Tag: daughter Shanelle

  • ಪುತ್ರಿಯ ನಿಶ್ಚಿತಾರ್ಥದ ಫೋಟೋ ಶೇರ್ ಮಾಡಿದ ಸ್ಮೃತಿ ಇರಾನಿ

    ಪುತ್ರಿಯ ನಿಶ್ಚಿತಾರ್ಥದ ಫೋಟೋ ಶೇರ್ ಮಾಡಿದ ಸ್ಮೃತಿ ಇರಾನಿ

    ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಶಾನೆಲ್ ನಿಶ್ವಿತಾರ್ಥ ಅರ್ಜುನ್ ಭಲ್ಲಾ ಅವರೊಂದಿಗೆ ನಡೆದಿದ್ದು, ಈ ಫೋಟೋವನ್ನು ಸ್ಮೃತಿ ಇರಾನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಭಾವಿ ಅಳಿಯನೊಂದಿಗೆ ಮಗಳ ಕ್ಯೂಟ್ ಫೋಟೋವನ್ನು ಸ್ಮೃತಿ ಇರಾನಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಅರ್ಜುನ್ ಶಾಲೆನ್‍ಗೆ ಪ್ರಪೋಸ್ ಮಾಡಿ ಉಂಗುರ ತೊಡಿಸಿರುವುದನ್ನು ಕಾಣಬಹುದಾಗಿದೆ. ಮತ್ತೊಂದು ಫೋಟೋದಲ್ಲಿ ಶಾನೆಲ್ ಹಾಗೂ ಅರ್ಜುನ್ ಸಂತಸದಿಂದ ಕ್ಲೋಸ್ ಆಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ: ಹಿಂದಿನ ಸರ್ಕಾರ ಹಣವನ್ನು ಕಬ್ರಿಸ್ತಾನ್‍ಗಳಿಗಾಗಿ ವ್ಯರ್ಥ ಮಾಡಿದೆ: ಯೋಗಿ ಆದಿತ್ಯನಾಥ್

    ಈ ಕ್ಯೂಟ್ ಫೋಟೋಗಳ ಜೊತೆಗೆ ಕ್ಯಾಪ್ಷನ್‍ನಲ್ಲಿ, ಅರ್ಜುನ್ ಭಲ್ಲಾ ನಮ್ಮ ಹೃದಯ ಗೆದ್ದ ವ್ಯಕ್ತಿ. ನಮ್ಮ ಕ್ರೇಜಿ ಕುಟುಂಬಕ್ಕೆ ನಿಮಗೆ ಸ್ವಾಗತ. ಇನ್ನು ಮುಂದೆ ನಿಮ್ಮ ಮಾವ ಮತ್ತು ನಮ್ಮೆಲ್ಲರ ಹುಚ್ಚುತನವನ್ನು ಸಹಿಸಿಕೊಳ್ಳಬೇಕಾಗುತ್ತದೆ. ನಿಮಗೆ ದೇವರು ಒಳ್ಳೆಯದು ಮಾಡಲಿ ಎಂದು ಹಾಸ್ಯಮಯವಾಗಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Smriti Irani (@smritiiraniofficial)

    ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನಟಿ ಮೌನಿ ರಾಯ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಕಾಮೆಂಟ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಜ.3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ: ಮೋದಿ