Tag: daughter marriage

  • ಆರತಕ್ಷತೆಯಲ್ಲಿ ಭಾಗಿಯಾಗಿ ಡಿಕೆಶಿ ಮಗಳು, ಅಳಿಯನಿಗೆ ಶುಭ ಹಾರೈಸಿದ ರಾಹುಲ್, ಪ್ರಿಯಾಂಕಾ

    ಆರತಕ್ಷತೆಯಲ್ಲಿ ಭಾಗಿಯಾಗಿ ಡಿಕೆಶಿ ಮಗಳು, ಅಳಿಯನಿಗೆ ಶುಭ ಹಾರೈಸಿದ ರಾಹುಲ್, ಪ್ರಿಯಾಂಕಾ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಗಳ ಆರತಕ್ಷತೆ ಕಾರ್ಯಕ್ರಮ ಇಂದು ದೇವನಹಳ್ಳಿಯ ರೆಸಾರ್ಟಿನಲ್ಲಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಆಗಮಿಸಿ ವಧು-ವರರರಿಗೆ ಶುಭ ಹಾರೈಸಿದ್ದಾರೆ.

    ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ರಾಹುಲ್ ಹಾಗೂ ಪ್ರಿಯಾಂಕಾ ಕಾರ್ಯಕ್ರಮ ನಡೆಯುತ್ತಿರುವ ರೆಸಾರ್ಟಿಗೆ ತೆರಳಿದ್ದಾರೆ. ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ರೆಸಾರ್ಟ್ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

    ಕಾರ್ಯಕ್ರಮದ ಹಿನ್ನೆಲೆಯಲ್ಲಿ ರೆಸಾರ್ಟಿನಲ್ಲಿ ಕೆಲಸ ಮಾಡುತ್ತಿರುವ ಸುಮಾರು 70 ಮಂದಿ ಸಿಬ್ಬಂದಿಗೆ ಸೋಮವಾರದಿಂದಲೇ ರಜೆ ನೀಡಲಾಗಿದೆ. ಯಾಕಂದರೆ ಕಾರ್ಯಕ್ರಮದ ಯಾವುದೇ ವೀಡಿಯೋ, ಫೋಟೋ ಹಾಗೂ ಮಾಹಿತಿ ಸೋರಿಕೆಯಾಗದಿರಲಿ ಎಂಬ ನಿಟ್ಟಿನಲ್ಲಿ ರಜೆ ಘೋಷಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲ ವಾಜುಭಾಯ್ ವಾಲಾ, ಕಟ್ಟಾ ಸುಬ್ರಮಣ್ಯ ನಾಯ್ಡು, ಶಿವರಾಂ ಹೆಬ್ಬಾರ್, ಚೆಲುವರಾಯಸ್ವಾಮಿ ಅಶೋಕ್, ಬೈರತಿ ಬಸವರಾಜ್, ಲಕ್ಷ್ಮಣ್ ಸವದಿ, ಎಸ್.ಆರ್.ವಿಶ್ವನಾಥ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶೋಭಾ ಕರಂದ್ಲಾಜೆ, ಸದಾನಂದ ಗೌಡ, ಕೃಷ್ಣೇ ಬೈರೇಗೌಡ, ಹ್ಯಾರಿಸ್, ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ,ಆರ್ ಶಂಕರ್, ಶಾಸಕ ಕುಮಟಳ್ಳಿ, ಮಲ್ಲಿಕಾರ್ಜುನ ಖರ್ಗೆ, ಈಶ್ವರ್ ಖಂಡ್ರೆ ಸೇರಿದಂತೆ ಹಲವು ಗಣ್ಯರು ಆಗಮಿಸಿ ವಧು-ವರರಿಗೆ ಶುಭ ಕೋರಿದ್ದಾರೆ.

    ಡಿಕೆಶಿ ಮಗಳ ಮದುವೆ ಫೆಬ್ರವರಿ 14 ರಂದು ವೈಟ್ ಫೀಲ್ಡ್ ನ ಖಾಸಗಿ ಹೋಟೆಲ್‍ನಲ್ಲಿ ನಡೆದಿತ್ತು. ಮದುವೆ ಕಾರ್ಯಕ್ರಮಕ್ಕೆ ಸಂಬಂಧಿಕರಿಗೆ ಮತ್ತು ಆತ್ಮೀಯ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

  • ಕೊರೊನ ಭೀತಿ – ತೋಟದಲ್ಲಿ ಶಾಸಕರ ಮಗಳ ಸರಳ ಮದುವೆ

    ಕೊರೊನ ಭೀತಿ – ತೋಟದಲ್ಲಿ ಶಾಸಕರ ಮಗಳ ಸರಳ ಮದುವೆ

    – ಸರ್ಕಾರದ ಆದೇಶ ಸ್ವಾಗತಿಸಿದ ಕೈ ನಾಯಕ

    ಚಿಕ್ಕಮಗಳೂರು: ದಿನದಿಂದ ದಿನಕ್ಕೆ ವ್ಯಾಪಿಸುತ್ತಿರುವ ಕೊರೊನ ವೈರಸ್ ಹಾಗೂ ಸರ್ಕಾರದ ಆದೇಶದ ಹಿನ್ನೆಲೆ ಜಿಲ್ಲೆಯ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಕೂಡ ತಮ್ಮ ಮಗಳ ಮದುವೆಯನ್ನು ಸರಳವಾಗಿ ಆಚರಿಸಲು ಮುಂದಾಗಿದ್ದಾರೆ.

    ಇದೇ 19ರಂದು ನಗರದ ಒಕ್ಕಲಿಗ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆ ಮಾಡಲು ನಿರ್ಧರಿಸಿದ್ದರು. ಈಗಾಗಲೇ 12 ಸಾವಿರಕ್ಕೂ ಅಧಿಕ ಲಗ್ನಪತ್ರಿಕೆಗಳನ್ನು ಸಹ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಹಂಚಿದ್ದಾರೆ. ಆದರೆ ಈಗ ಕೊರೊನಾ ವೈರಸ್ ಭೀತಿ ಹಾಗೂ ಸರ್ಕಾರದ ಆದೇಶದ ಹಿನ್ನೆಲೆ ಸರಳ ಮದುವೆಗೆ ಎರಡು ಕುಟುಂಬದವರು ಮುಂದಾಗಿದ್ದಾರೆ.

    ನಗರದಲ್ಲಿ ಮಾತನಾಡಿದ ಶಾಸಕ ರಾಜೇಗೌಡ, ತಮ್ಮ ಮಗಳು ಹಾಗೂ ಕಾಫಿ ಬೆಳೆಗಾರ ಅತ್ತಿಕಟ್ಟೆ ಜಗನ್ನಾಥ್‍ರವರ ಮಗನೊಂದಿಗೆ ನಿಶ್ಚಯವಾಗಿದ್ದ ಮದುವೆಯನ್ನ ಸರಳವಾಗಿ ಬಂಧುಗಳ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ತಮ್ಮ ಸ್ವಗೃಹ ಬಾಸಾಪುರದ ಕಾಫಿ ತೋಟದಲ್ಲಿ ನಡೆಯಲಿದೆ. ನಿಗದಿಯಾಗಿದ್ದ ದಿನದಂದೇ ನಡೆಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು. ರಾಜೇಗೌಡ ಮಗಳು ಡಾ.ಸಂಜನಾ ಮತ್ತು ಅತ್ತಿಕಟ್ಟೆ ಜಗನ್ನಾಥ್ ಪುತ್ರ ವಚನ್‍ಲಕ್ಷ್ಮಣ್ ರವರ ವಿವಾಹ ಮಹೋತ್ಸವ ಇದೇ ಮಾರ್ಚ್ 19ಕ್ಕೆ ನಿಗದಿಯಾಗಿತ್ತು.

    ಮದುವೆ ಅಂಗವಾಗಿ ಮಾ. 16ರಂದು ನಡೆಯಬೇಕಾಗಿದ್ದ ದೇವತಾಕಾರ್ಯವನ್ನು ಮಾ 18ರ ಬುಧವಾರ ಹಾಗೂ ವಿವಾಹ ಮಹೋತ್ಸವನ್ನು ಮಾ 19ರ ಗುರುವಾರ ಬಾಸಾಪುರ ಎಸ್ಟೇಟಿನಲ್ಲಿ ಸರಳವಾಗಿ ಬಂಧುಗಳೊಂದಿಗೆ ನಡೆಸಲು ತೀರ್ಮಾನಿಸಿದ್ದಾರೆ. ಮಾ 21ರ ಶನಿವಾರ ಚಿಕ್ಕಮಗಳೂರು ಕ್ಲಬ್‍ನಲ್ಲಿ ಏರ್ಪಡಿಸಿದ್ದ ಆರತಕ್ಷತೆ ಕಾರ್ಯಕ್ರಮವನ್ನು ಕೊರೊನಾ ವೈರಸ್ ಕಾರಣದಿಂದ ಮುಂದೂಡಿದ್ದಾರೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ, ಈ ವಿವಾಹವನ್ನು ಸರಳವಾಗಿ ನಡೆಸಲು ನಿಶ್ಚಯಿಸಿದ್ದಾರೆ. ದೊಡ್ಡವರ ಈ ತೀರ್ಮಾನವನ್ನ ವಧುವರರಾದ ಸಂಜನಾ ಹಾಗೂ ವಚನ್‍ಲಕ್ಷ್ಮಣ್ ಕೂಡ ಸ್ವಾಗತಿಸಿದ್ದಾರೆ.

  • ಮಗಳ ಕನ್ಯಾದಾನದ ಮುನ್ನ ಮದ್ವೆಯಾದ ತಂದೆ-ತಾಯಿ

    ಮಗಳ ಕನ್ಯಾದಾನದ ಮುನ್ನ ಮದ್ವೆಯಾದ ತಂದೆ-ತಾಯಿ

    ಭೋಪಾಲ್: ಸಂಪ್ರದಾಯದ ಪ್ರಕಾರ ಕನ್ಯಾದಾನ ಮಾಡುವುದು ಪುಣ್ಯದ ಕೆಲಸ ಎನ್ನಲಾಗುತ್ತದೆ. ಹೀಗಾಗಿ ಮಧ್ಯ ಪ್ರದೇಶದಲ್ಲಿ ಮಗಳ ಮದುವೆ ಮಾಡಿಸುವ ಹಿಂದಿನ ದಿನ ತಂದೆ-ತಾಯಿ ಮದುವೆಯಾಗಿ, ಮಾರನೆ ದಿನ ಮಗಳಿಗೆ ಕನ್ಯಾದಾನ ಮಾಡಿರುವ ಅಪರೂಪದ ಘಟನೆ ನಡೆದಿದೆ.

    ಇದೇನಪ್ಪ ಮಗಳ ಮದುವೆ ಮಾಡುವ ಹಿಂದಿನ ದಿನ ತಂದೆ-ತಾಯಿ ಮದುವೆನಾ? ಇದು ಯಾವ ಪದ್ಧತಿ ಎಂದು ಅಚ್ಚರಿ ಅನಿಸಬಹುದು. ಆದರೆ ವಾಸ್ತವವಾಗಿ ಇದು ಪದ್ಧತಿ ಅಥವಾ ಸಂಪ್ರದಾಯವಲ್ಲ, ಬದಲಿಗೆ 25 ವರ್ಷಗಳಿಂದ ಲಿವ್ ಇನ್ ರಿಲೇಷನ್ ಶಿಪ್‍ನಲ್ಲಿದ್ದ ಜೋಡಿ ಮಗಳ ಕನ್ಯಾದಾನ ಮಾಡಲು ಮದುವೆಯಾಗಿದ್ದಾರೆ.ಇದನ್ನೂ ಓದಿ:ತಾಯಿಯ ಪುನರ್ ವಿವಾಹದ ಬಗ್ಗೆ ಮಗನ ಭಾವನಾತ್ಮಕ ಪೋಸ್ಟ್ – ನೆಟ್ಟಿಗರಿಂದ ಶ್ಲಾಘನೆ

    ಹೌದು. ಮಧ್ಯಪ್ರದೇಶದ ಅಶೋಕ್ ನಗರ ನಿವಾಸಿ 55 ವರ್ಷದ ಪರಿಮಲ್ ಸಿಂಗ್ ಅವರು ಲಿವ್ ಇನ್ ನಲ್ಲಿದ್ದ 50 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ. ಲಿವ್ ಇನ್ ರಿಲೇಷನ್ ಶಿಪ್‍ನಲ್ಲಿದ್ದ ಪರಿಮಲ್ ಜೋಡಿಗೆ ನಾಲ್ಕು ಮಕ್ಕಳಿದ್ದಾರೆ. ಇಷ್ಟು ವರ್ಷ ಲಿವ್ ಇನ್‍ನಲ್ಲಿದ್ದ ಜೋಡಿ ತಮ್ಮ ಮೊದಲ ಮಗಳ ಮದುವೆ ಮಾಡಿಸಲು ಮುಂದಾದಾಗ ತಂದೆ- ತಾಯಿ ಮದುವೆ ಆಗದೆ ಕನ್ಯಾದಾನ ಮಾಡಲು ಸಾಧ್ಯವಿಲ್ಲ ಎಂದು ಪಂಡಿತರು ಹೇಳಿದ್ದಾರೆ. ಹೀಗಾಗಿ ತಮ್ಮ ಮಗಳ ಕನ್ಯಾದಾನ ಬೇರೆಯವರ ಕೈಯಿಂದ ಆಗಬಾರದು ಎಂದು ಪರಿಮಲ್ ಜೋಡಿ ಮಗಳ ಮದುವೆ ಮಾಡುವ ಹಿಂದಿನ ದಿನ ತಾವೂ ಅಧಿಕೃತವಾಗಿ ಮದುವೆಯಾಗಿದ್ದಾರೆ. ಬಳಿಕ ಮಾರನೆ ದಿನ ಮಗಳ ಕನ್ಯಾದಾನ ಮಾಡಿದ್ದಾರೆ.

    ಮಕ್ಕಳೇ ಮುಂದೆ ನಿಂತು ತಂದೆ-ತಾಯಿ ಮದುವೆ ಮಾಡಿಸಿದ್ದು ಈ ಮದುವೆಯ ವಿಶೇಷವಾಗಿತ್ತು. ದಿಬ್ಬಣದಲ್ಲಿ ಮಕ್ಕಳು ಖುಷಿಯಿಂದ ಪಾಲ್ಗೊಂಡು ತಂದೆ-ತಾಯಿ ಮದುವೆಯನ್ನು ಮಾಡಿಸಿ, ಮರುದಿನ ಸಹೋದರಿಯ ಮದುವೆ ಸರಳವಾಗಿ, ಸಂಭ್ರಮದಿಂದ ಮಾಡಿಸಿದ್ದಾರೆ.