Tag: daughter in laws

  • ಸೊಸೆ ಕತ್ತು ಸೀಳಿದ ಮಾವ- 8ರ ಕಂದಮ್ಮ ಅನಾಥ

    ಸೊಸೆ ಕತ್ತು ಸೀಳಿದ ಮಾವ- 8ರ ಕಂದಮ್ಮ ಅನಾಥ

    ಲಕ್ನೋ: ಮಗ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರವಾಗಿ ಮನನೊಂದಿದ್ದ ಮಾವ ಸೊಸೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.

    ಪಿಂಕಿ, ಅಮಿತ್ ಬನ್ಸಾಲ್ ಮೃತರು. ರಾಮ್ ಕಿಶನ್ ಆರೋಪಿಯಾಗಿದ್ದಾನೆ. ಈತನ ಮಗ ನೇಣು ಬಿಗಿದುಕೊಂಡು ಆತ್ಮಹ್ಯೆ ಮಾಡಿಕೊಂಡಿದ್ದಾನೆ. ಮಗನನ್ನು ಕಳೆದುಕೊಂಡಿದ್ದ ಕೋಪವನ್ನು ಸೊಸೆಯ ಮೇಲೆ ತಿರಿಸಿಕೊಳ್ಳಲು ಆಕೆಯನ್ನು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಗಾನಗಂಧರ್ವ ಭಾಗವತ ಪದ್ಯಾಣ ಗಣಪತಿ ಭಟ್ ಇನ್ನಿಲ್ಲ

    ಮೀರತ್ನಲ್ಲಿರುವ ತನ್ನ ಕಚೇರಿಯಲ್ಲಿ ರಾಮ್ ಕಿಶನ್ ಮಗ ಆತ್ಮಹತ್ಯೆಗೆ ಶರಣಾಗಿದ್ದನು. ಮಗ ಅಮಿತ್ ಬನ್ಸಾಲ್ ಒಳಾಂಗಣ ವಿನ್ಯಾಸಕಾರನಾಗಿ( Interior Designer) ಕೆಲಸ ಮಾಡುತ್ತಿದ್ದ. ತನ್ನ ಮಗನ ಸಾವಿನಿಂದ ಕೋಪಗೊಂಡ ರಾಮ್ ಕಿಶನ್ ತನ್ನ ಸೊಸೆಯನ್ನು ಕಟ್ಟರ್ ನಿಂದ ಹೊಡೆದು ಬನ್ಸಾಲ್ ಕಚೇರಿಯಲ್ಲಿ ಗಂಭೀರವಾಗಿ ಗಾಯಗೊಳಿಸಿದ್ದನು. ಇಡೀ ಘಟನೆಯು ಕಚೇರಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?

    ಘಟನೆ ನಡೆದ ದಿನ ಪಿಂಕಿ ತನ್ನ ಪತಿ ಅಮಿತ್ ಬನ್ಸಾಲ್‍ಗೆ ಕರೆ ಮಾಡಿದರೂ ಆತ ಕರೆ ಸ್ವೀಕರಿಸಿರಲಿಲ್ಲ. ನಂತರ ಆತನ ಕಚೇರಿಗೆ ಹೋದಾಗ ಅಮಿತ್ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದ್ದನು. ಈ ವೇಳೆ ಪಿಂಕಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಗ ಮಾವ ಕೂಡ ಕಚೇರಿಗೆ ಬಂದಿದ್ದಾನೆ. ಮಗನ ಸಾವನ್ನು ಕಂಡು ಕೆಂಡಾಮಂಡಲನಾಗಿದ್ದಾನೆ. ರಾಮ್ ಕಿಶನ್ ಕೋಪದಿಂದ ಪಿಂಕಿಯನ್ನು ಥಳಿಸಿ, ಕಟ್ಟರ್ ನಿಂದ ಅವಳ ಮೇಲೆ ಹಲ್ಲೆ ಮಾಡಿದನು. ಆಗ ಸ್ಥಳಕ್ಕೆ ನೌಚಂಡಿ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಗಾಯಗೊಂಡಿದ್ದ ಪಿಂಕಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪಿಂಕಿ ಸಾವನ್ನಪಿದ್ದಾಳೆ.

    ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ರಾಮ್ ಕಿಶನ್‍ನನ್ನು ಮೀರತ್ ಪೊಲೀಸರು ಬಂಧಿಸಿದ್ದಾರೆ. ಪಿಂಕಿ ಗಾಜಿಯಾಬಾದ್ ಮೂಲದವಳಾಗಿದ್ದು, ಮೃತ ದಂಪತಿಗೆ 8 ತಿಂಗಳ ಮಗಳಿದ್ದಾಳೆ.