Tag: daughte

  • ಭಾರತದ ಆಯುರ್ವೇದ ಚಿಕಿತ್ಸೆಯನ್ನು ಆಫ್ರಿಕಾದಲ್ಲಿ ಆರಂಭಿಸಿಲು ಕೀನ್ಯಾ ಮಾಜಿ ಪ್ರಧಾನಿ ಮನವಿ

    ಭಾರತದ ಆಯುರ್ವೇದ ಚಿಕಿತ್ಸೆಯನ್ನು ಆಫ್ರಿಕಾದಲ್ಲಿ ಆರಂಭಿಸಿಲು ಕೀನ್ಯಾ ಮಾಜಿ ಪ್ರಧಾನಿ ಮನವಿ

    ನೈರೋಬಿ: ಭಾರತದ ಆಯುರ್ವೇದ ಚಿಕಿತ್ಸೆಗೆ ಕೀನ್ಯಾ ಮಾಜಿ ಪ್ರಧಾನಿ ರೈಲಾ ಒಡಿಂಗಾ ಮಾರು ಹೋಗಿದ್ದಾರೆ. ಇವರ ಪುತ್ರಿಗೆ ಕೇರಳದಲ್ಲಿ ನೀಡಿರುವ ಕಣ್ಣಿನ ಚಿಕಿತ್ಸೆಯಿಂದ ದೃಷ್ಟಿ ಬಂದಿದೆ. ಹೀಗಾಗಿ ಇವರು ಒಂದು ಉತ್ತಮ ನಿರ್ಧಾರವನ್ನು ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ಅವರು, ಆಯುರ್ವೇದ ಶಕ್ತಿಯಿಂದ ನನ್ನ ಮಗಳು ಮರಳಿ ದೃಷ್ಟಿ ಪಡೆದಿದ್ದಾಳೆ. ಈ ಅಮೂಲ್ಯ ಚಿಕಿತ್ಸೆಯನ್ನು ಆಫ್ರಿಕಾದಲ್ಲಿ ಆರಂಭಿಸಬೇಕು. ಇಲ್ಲಿನ ಔಷಧಿ ಸಸ್ಯಗಳನ್ನು ಬೆಳೆಯಲು ಪೂರಕ ವಾತಾವರಣವಿದೆ. ಈ ಮೂಲಕ ವಿಶ್ವದ ಆರೋಗ್ಯ ಸಮಸ್ಯೆಗೆ ಭಾರತದ ಆಯುರ್ವೇದ ಚಿಕಿತ್ಸೆ ಮೂಲಕ ಶಾಶ್ವತ ಪರಿಹಾರ ನೀಡಬೇಕು ಎಂದು ರೈಲಾ ಒಡಿಂಗಾ, ಮೋದಿ ಭೇಟಿಯಲ್ಲಿ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್‍ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ

    2017ರಲ್ಲಿ ಟ್ಯೂಮರ್ ಆರೋಗ್ಯ ಸಮಸ್ಯೆಗೆ ತುತ್ತಾದ ರೋಸಮೇರೆ ಕಣ್ಣಿನ ದೃಷ್ಟಿ ಕಳೆದೆಕೊಂಡರು. ಬಳಿಕ ಆಫ್ರಿಕಾ, ಜರ್ಮನಿ, ಇಸ್ರೇಲ್, ಚೀನಾ ಸೇರಿದಂತೆ ಕೆಲ ದೇಶಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಶ್ರೀಧಾರೀಯಂ ಆಯುರ್ವೇದ ಕಣ್ಣಿ ಆಸ್ಪತ್ರೆ ಕುರಿತು ಮಾಹಿತಿ ಪಡೆದು ನೇರವಾಗಿ ಕೇರಳಕ್ಕೆ ಆಗಮಿಸಿ ಚಿಕಿತ್ಸೆ ಪಡೆದಿದ್ದಾರೆ. ಪರಿಣಾಮ ರೋಸಮೇರಿ ಇದೀಗ ಬಹುತೇಕ ಕಣ್ಣಿನ ದೃಷ್ಟಿ ಪಡೆದಿದ್ದಾರೆ. ಓದಲು ಸಾಧ್ಯವಾಗುತ್ತಿದೆ ಎಂದು ರೈಲಾ ಒಡಿಂಗಾ ಹೇಳಿದ್ದಾರೆ.   

    ರೋಸಮೆರಿ ಒಡಿಂಗಾ 2019ರಿಂದ ಶ್ರೀಧಾರೀಯಂ ಆಯುರ್ವೇದಾ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2019ರಲ್ಲಿ ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದ ರೋಸಮೇರಿ, ಸತತ ಚಿಕಿತ್ಸೆಯಿಂದ ಮರಳಿ ದೃಷ್ಟಿ ಪಡೆದಿದ್ದಾರೆ. ನನಗೆ ಓದಲು ಸಾಧ್ಯವಾಗುತ್ತಿದೆ. ಫೋನ್ ರಿಸೀವ್ ಮಾಡಲು ಸಾಧ್ಯವಾಗುತ್ತಿದೆ. ಇದಕ್ಕಿಂತ ಸಂತಸ ಇನ್ನೇನು ಬೇಕು. ನಾನು ಕೇರಳದ ಶ್ರೀಧಾರೀಯಂ ಆಯುರ್ವೇದ ಕಣ್ಣಿ ಆಸ್ಪತ್ರೆಗೆ ಆಭಾರಿಯಾಗಿದ್ದೇನೆ ಎಂದು ರೋಸಮೇರಿ ಹೇಳಿದ್ದಾರೆ.

  • ಮಗಳು ಮೊಬೈಲ್ ನೋಡುತ್ತಾಳೆಂದು ಅತ್ಯಾಚಾರ ಮಾಡಿದ ತಂದೆ

    ಮಗಳು ಮೊಬೈಲ್ ನೋಡುತ್ತಾಳೆಂದು ಅತ್ಯಾಚಾರ ಮಾಡಿದ ತಂದೆ

    ಹೈದರಾಬಾದ್: ನನ್ನ ಮಗಳು ಮೊಬೈಲ್ ನೋಡುತ್ತಾ ಹೆಚ್ಚು ಸಮಯವನ್ನು ಕಳೆಯುತ್ತಾಳೆ ಎಂದು ತಂದೆ ಅತ್ಯಾಚಾರ ಮಾಡಿರುವ ಪ್ರಕರಣ ವಿಶಾಖಪಟ್ಟಣಂನ ವೈಜಾಗ್‍ನಲ್ಲಿ ನಡೆದಿದೆ.

    42 ವರ್ಷದ ವ್ಯಕ್ತಿ ಬಂಧಿತ ಆರೋಪಿಯಾಗಿದ್ದಾನೆ. 15 ವರ್ಷದ ಬಾಲಕಿ ತಂದೆಯ ಕೃತ್ಯಕ್ಕೆ ಬಲಿಯಾದ ಸಂತ್ರಸ್ತೆಯಾಗಿದ್ದಾಳೆ. ತಂದೆ ಹಲವು ಬಾರಿ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವಿಚಾರವನ್ನು ಬಾಲಕಿ ಶಿಕ್ಷಕಿ ಬಳಿ ಹೇಳಿಕೊಂಡಿದ್ದಾಳೆ. ಆಗ ಶಿಕ್ಷಕಿ ಆತನನ್ನು ಕರೆದು ವಿಚಾರಿಸಿದ್ದಾಗ ಆರೋಪಿ ಕ್ಷಮೆ ಕೇಳಿದ್ದಾನೆ. ಶಿಕ್ಷಕಿ, ಬಾಲಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆಗ ಪೊಲೀಸರು ಆತನನ್ನು ಬಂಧಿಸಿದ್ದರು.

    2 ವರ್ಷಗಳ ಹಿಂದೆ ಆರೋಪಿ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದನು. ಈತನ ಪತ್ನ ಕಿಡ್ನಿಯನ್ನು ದಾನ ಮಾಡಿದ್ದಾಳೆ. ಸುಮಾರು 5 ತಿಂಗಳ ನಂತರ ಆಕೆಯ ಅನಾರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಆಕೆ ತವರು ಮನೆಗೆ ಹೋಗಿದ್ದಳು. ಈ ವೇಳೆ ಮಗಳು ತಂದೆಯ ಜೊತೆಗೆ ವಾಸವಾಗಿದ್ದಳು. ಆಗ ಆರೋಪಿ ಮಗಳ ಮೇಳೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಆರೋಗ್ಯ ಸೂಚ್ಯಂಕದಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ಅಗತ್ಯ ಕ್ರಮ: ಡಾ.ಕೆ.ಸುಧಾಕರ್

    ನನ್ನ ಮಗಳು ಮೊಬೈಲ್ ನೋಡುತ್ತಾ ಹೆಚ್ಚು ಸಮಯ ಕಳೆಯುತ್ತಾಳೆ. ನಾನು ಅತ್ಯಾಚಾರ ಮಾಡಿದ್ದೇನೆ. ಕೆಲವು ತಿಂಗಳುಗಳಿಂದ ಹಲವು ಬಾರಿ ಅತ್ಯಾಚಾರ ಮಾಡಿದ್ದೇನೆ ಎಂದು ಆರೋಪಿ ತಂದೆ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ